Udyoga Parva: Chapter 94

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೪

ದಂಭೋಧ್ಭವ

ಕೃಷ್ಣನ ಮಾತನ್ನು ಕೇಳಿ ಅದಕ್ಕೆ ಉತ್ತರವಾಗಿ ಏನು ಮಾತನಾಡಲಿಕ್ಕೂ ಆಗದೇ ಸಭೆಯಲ್ಲಿ ಎಲ್ಲರೂ ಸುಮ್ಮನಾಗಿರಲು ಪರಶುರಾಮನು ದಂಭೋದ್ಭವನ ಕಥೆಯನ್ನು ಪ್ರಾರಂಭಿಸಿದುದು (೧-೩). ತನಗಿಂತಲೂ ವಿಶೇಷನಾದ ಅಥವಾ ಸರಿಸಮನಾದವರು ಯಾರಾದರೂ ಇದ್ದಾರೆಯೇ ಎಂದು ಪುನಃ ಪುನಃ ಕೇಳುತ್ತಿದ್ದ ರಾಜಾ ದಂಭೋದ್ಭವನಿಗೆ ಕೋಪಗೊಂಡ ಬ್ರಾಹ್ಮಣರು ಋಷಿ ನರ-ನಾರಾಯಣರ ಕುರಿತು ಹೇಳುವುದು (೪-೧೫). ದಂಭೋದ್ಭವನು ಮಹಾಸೇನೆಯೊಂದಿಗೆ ನರ-ನಾರಾಯಣರ ಆಶ್ರಮಕ್ಕೆ ಹೋಗಿ ಅವರನ್ನು ಯುದ್ಧಕ್ಕೆ ಆಹ್ವಾನಿಸಿದುದು (೧೬-೨೨). ಆಗ ನರನು ಮುಷ್ಟಿ ಹುಲ್ಲುಕಡ್ಡಿಗಳಿಂದ ದಂಭೋದ್ಭವನನ್ನು ಪರಾಜಿತಗೊಳಿಸಿದುದು (೨೩-೩೫). ಅರ್ಜುನನೇ ಆ ನರನೆಂದೂ, ಕೃಷ್ಣನೇ ನಾರಾಯಣನೆಂದೂ ಯುದ್ಧದ ಕುರಿತು ಯೋಚಿಸದೇ ಪಾಂಡವರೊಂದಿಗೆ ಶಾಂತಿಯಿಂದಿರು ಎಂದು ಪರಶುರಾಮನು ಧೃತರಾಷ್ಟ್ರನಿಗೆ ಹೇಳುವುದು (೩೬-೪೫).

05094001 ವೈಶಂಪಾಯನ ಉವಾಚ|

05094001a ತಸ್ಮಿನ್ನಭಿಹಿತೇ ವಾಕ್ಯೇ ಕೇಶವೇನ ಮಹಾತ್ಮನಾ|

05094001c ಸ್ತಿಮಿತಾ ಹೃಷ್ಟರೋಮಾಣ ಆಸನ್ಸರ್ವೇ ಸಭಾಸದಃ||

ವೈಶಂಪಾಯನನು ಹೇಳಿದನು: “ಮಹಾತ್ಮ ಕೇಶವನು ಹೀಗೆ ಹೇಳಲು ಸಭಾಸದರೆಲ್ಲರೂ, ರೋಮಗಳು ನಿಮಿರೆದ್ದು, ಗರಬಡಿದವರಂತೆ ಕುಳಿತಿದ್ದರು.

05094002a ಕಃ ಸ್ವಿದುತ್ತರಮೇತಸ್ಮಾದ್ವಕ್ತುಮುತ್ಸಹತೇ ಪುಮಾನ್|

05094002c ಇತಿ ಸರ್ವೇ ಮನೋಭಿಸ್ತೇ ಚಿಂತಯಂತಿ ಸ್ಮ ಪಾರ್ಥಿವಾಃ||

“ಅದಕ್ಕೆ ಯಾವ ಪುರುಷನು ಉತ್ತರಿಸಬಲ್ಲ?” ಎಂದು ಎಲ್ಲ ಪಾರ್ಥಿವರೂ ಮನಸ್ಸಿನಲ್ಲಿಯೇ ಯೋಚಿಸಿದರು.

05094003a ತಥಾ ತೇಷು ಚ ಸರ್ವೇಷು ತೂಷ್ಣೀಂಭೂತೇಷು ರಾಜಸು|

05094003c ಜಾಮದಗ್ನ್ಯ ಇದಂ ವಾಕ್ಯಮಬ್ರವೀತ್ಕುರುಸಂಸದಿ||

ಕುರುಸಂಸದಿಯಲ್ಲಿ ಎಲ್ಲ ರಾಜರೂ ಸುಮ್ಮನಾಗಿರಲು ಜಾಮದಗ್ನ್ಯನು ಈ ಮಾತುಗಳನ್ನಾಡಿದನು:

05094004a ಇಮಾಮೇಕೋಪಮಾಂ ರಾಜಂ ಶೃಣು ಸತ್ಯಾಮಶಂಕಿತಃ|

05094004c ತಾಂ ಶ್ರುತ್ವಾ ಶ್ರೇಯ ಆದತ್ಸ್ವ ಯದಿ ಸಾಧ್ವಿತಿ ಮನ್ಯಸೇ||

“ರಾಜನ್! ಈ ಒಂದು ಉಪಮೆಯನ್ನು ಕೇಳು. ಇದು ಸತ್ಯವಾದುದು. ಅನುಮಾನಪಡುವಂಥದ್ದಲ್ಲ. ಅದನ್ನು ಕೇಳಿ, ನಿನಗಿಷ್ಟವಾದರೆ, ನಿನಗೆ ಶ್ರೇಯಸ್ಸು ಎನಿಸಿದುದನ್ನು ನಿನ್ನದಾಗಿಸಿಕೋ.

05094005a ರಾಜಾ ದಂಭೋದ್ಭವೋ ನಾಮ ಸಾರ್ವಭೌಮಃ ಪುರಾಭವತ್|

05094005c ಅಖಿಲಾಂ ಬುಭುಜೇ ಸರ್ವಾಂ ಪೃಥಿವೀಮಿತಿ ನಃ ಶ್ರುತಂ||

ಹಿಂದೆ ದಂಭೋದ್ಭವನೆಂಬ ಹೆಸರಿನ ಸಾರ್ವಭೌಮನಿದ್ದನು. ಅವನು ಅಖಿಲ ಪೃಥ್ವಿಯಲ್ಲಿಯ ಎಲ್ಲವನ್ನೂ ಭೋಗಿಸುತ್ತಿದ್ದನು ಎಂದು ಕೇಳಿದ್ದೇವೆ.

05094006a ಸ ಸ್ಮ ನಿತ್ಯಂ ನಿಶಾಪಾಯೇ ಪ್ರಾತರುತ್ಥಾಯ ವೀರ್ಯವಾನ್|

05094006c ಬ್ರಾಹ್ಮಣಾನ್ ಕ್ಷತ್ರಿಯಾಂಶ್ಚೈವ ಪೃಚ್ಚನ್ನಾಸ್ತೇ ಮಹಾರಥಃ||

ಆ ಮಹಾರಥಿ ವೀರ್ಯವಂತನು ನಿತ್ಯವೂ ರಾತ್ರಿಕಳೆದು ಪ್ರಾತಃಕಾಲದಲ್ಲೆದ್ದು ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಕೇಳುತ್ತಿದ್ದನು:

05094007a ಅಸ್ತಿ ಕಶ್ಚಿದ್ವಿಶಿಷ್ಟೋ ವಾ ಮದ್ವಿಧೋ ವಾ ಭವೇದ್ಯುಧಿ|

05094007c ಶೂದ್ರೋ ವೈಶ್ಯಃ ಕ್ಷತ್ರಿಯೋ ವಾ ಬ್ರಾಹ್ಮಣೋ ವಾಪಿ ಶಸ್ತ್ರಭೃತ್||

“ಶೂದ್ರನಾಗಲೀ, ವೈಶ್ಯನಾಗಲೀ, ಕ್ಷತ್ರಿಯನಾಗಲೀ ಅಥವಾ ಬ್ರಾಹ್ಮಣನಾಗಲೀ ಯುದ್ಧದಲ್ಲಿ ನನಗಿಂಥಲೂ ವಿಶೇಷನಾದ ಅಥವಾ ಸರಿಸಮನಾದ ಯಾರಾದರೂ ಇದ್ದಾರೆಯೇ?”

05094008a ಇತಿ ಬ್ರುವನ್ನನ್ವಚರತ್ಸ ರಾಜಾ ಪೃಥಿವೀಮಿಮಾಂ|

05094008c ದರ್ಪೇಣ ಮಹತಾ ಮತ್ತಃ ಕಂ ಚಿದನ್ಯಮಚಿಂತಯನ್||

ಹೀಗೆ ಹೇಳುತ್ತಾ ಆ ರಾಜನು ಈ ಭೂಮಿಯಿಡೀ ತಿರುಗುತ್ತಿದ್ದನು. ಮಹಾ ದರ್ಪದಿಂದ ಮತ್ತನಾದ ಅವನು ಬೇರೆ ಯಾರ ಕುರಿತೂ ಯೋಚಿಸುತ್ತಿರಲಿಲ್ಲ.

05094009a ತಂ ಸ್ಮ ವೈದ್ಯಾ ಅಕೃಪಣಾ ಬ್ರಾಹ್ಮಣಾಃ ಸರ್ವತೋಽಭಯಾಃ|

05094009c ಪ್ರತ್ಯಷೇಧಂತ ರಾಜಾನಂ ಶ್ಲಾಘಮಾನಂ ಪುನಃ ಪುನಃ||

05094010a ಪ್ರತಿಷಿಧ್ಯಮಾನೋಽಪ್ಯಸಕೃತ್ಪೃಚ್ಚತ್ಯೇವ ಸ ವೈ ದ್ವಿಜಾನ್|

05094010c ಅಭಿಮಾನೀ ಶ್ರಿಯಾ ಮತ್ತಸ್ತಮೂಚುರ್ಬ್ರಾಹ್ಮಣಾಸ್ತದಾ||

ಆಗ ಏನಕ್ಕೂ ಹೆದರದಿದ್ದ, ಯಾರ ಕೃಪೆಯಡಿಯೂ ಇರದಿದ್ದ ವೇದವಿದ ಬ್ರಾಹ್ಮಣರು ಪುನಃ ಪುನಃ ಸೊಕ್ಕಿನಿಂದ ತನ್ನನ್ನೇ ಹೊಗಳಿಕೊಳ್ಳುತ್ತಿದ್ದ ರಾಜನನ್ನು ತಡೆಯಲು ಪ್ರಯತ್ನಿಸಿದರು. ನಿಯಂತ್ರಿಸಿಕೊಳ್ಳಲು ಹೇಳಿದರೂ, ಅಭಿಮಾನಿಯಾದ, ಶ್ರೀಯಿಂದ ಮದಿಸಿದ ಅವನು ದ್ವಿಜರನ್ನು ಮತ್ತೆ ಮತ್ತೆ ಕೇಳಲು ಬ್ರಾಹ್ಮಣರು ಹೇಳಿದರು.

05094011a ತಪಸ್ವಿನೋ ಮಹಾತ್ಮಾನೋ ವೇದವ್ರತಸಮನ್ವಿತಾಃ|

05094011c ಉದೀರ್ಯಮಾಣಂ ರಾಜಾನಂ ಕ್ರೋಧದೀಪ್ತಾ ದ್ವಿಜಾತಯಃ||

ಆ ತಪಸ್ವಿ, ಮಹಾತ್ಮ, ವೇದವ್ರತಸಮನ್ವಿತ ದ್ವಿಜಗಣವು ಕ್ರೋಧದೀಪ್ತರಾಗಿ ಹಂಬಲಿಸುತ್ತಿದ್ದ ರಾಜನಿಗೆ ಹೇಳಿತು:

05094012a ಅನೇಕಜನನಂ ಸಖ್ಯಂ ಯಯೋಃ ಪುರುಷಸಿಂಹಯೋಃ|

05094012c ತಯೋಸ್ತ್ವಂ ನ ಸಮೋ ರಾಜನ್ಭವಿತಾಸಿ ಕದಾ ಚನ||

“ರಾಜನ್! ನೀನು ಎಂದೂ ಅನೇಕ ಜನ್ಮಗಳಲ್ಲಿ ಸಖರಾಗಿದ್ದು ಯುದ್ಧಮಾಡಿದ ಆ ಇಬ್ಬರು ಪುರುಷಸಿಂಹರಿಗೆ ಸಮನಾಗಲಾರೆ!”

05094013a ಏವಮುಕ್ತಃ ಸ ರಾಜಾ ತು ಪುನಃ ಪಪ್ರಚ್ಚ ತಾನ್ದ್ವಿಜಾನ್|

05094013c ಕ್ವ ತೌ ವೀರೌ ಕ್ವಜನ್ಮಾನೌ ಕಿಂಕರ್ಮಾಣೌ ಚ ಕೌ ಚ ತೌ||

ಇದನ್ನು ಕೇಳಿದ ರಾಜನು ಆ ದ್ವಿಜರಿಗೆ ಪುನಃ ಕೇಳಿದನು: “ಆ ವೀರರಿಬ್ಬರು ಎಲ್ಲಿದ್ದಾರೆ? ಅವರು ಎಲ್ಲಿ ಜನಿಸಿದ್ದಾರೆ? ಅವರು ಏನು ಮಾಡುತ್ತಿದ್ದಾರೆ? ಅವರು ಯಾರು?”

05094014 ಬ್ರಾಹ್ಮಣಾ ಊಚುಃ|

05094014a ನರೋ ನಾರಾಯಣಶ್ಚೈವ ತಾಪಸಾವಿತಿ ನಃ ಶ್ರುತಂ|

05094014c ಆಯಾತೌ ಮಾನುಷೇ ಲೋಕೇ ತಾಭ್ಯಾಂ ಯುಧ್ಯಸ್ವ ಪಾರ್ಥಿವ||

ಬ್ರಾಹ್ಮಣರು ಹೇಳಿದರು: “ಪಾರ್ಥಿವ! ನರ-ನಾರಾಯಣರೆಂಬ ತಾಪಸರು ಮನುಷ್ಯಲೋಕಕ್ಕೆ ಬಂದಿದ್ದಾರೆಂದು ಕೇಳಿದ್ದೇವೆ. ಅವರಿಬ್ಬರೊಂದಿಗೆ ಯುದ್ಧಮಾಡು!

05094015a ಶ್ರೂಯತೇ ತೌ ಮಹಾತ್ಮಾನೌ ನರನಾರಾಯಣಾವುಭೌ|

05094015c ತಪೋ ಘೋರಮನಿರ್ದೇಶ್ಯಂ ತಪ್ಯೇತೇ ಗಂಧಮಾದನೇ||

ಆ ಮಹಾತ್ಮ ನರ-ನಾರಯಣರು ಗಂಧಮಾದನದಲ್ಲಿ ವಿವರಿಸಲಸಾಧ್ಯ ಘೋರ ತಪಸ್ಸನ್ನು ತಪಿಸುತ್ತಿದ್ದಾರೆ ಎಂದು ಕೇಳಿದ್ದೇವೆ.””

05094016 ರಾಮ ಉವಾಚ|

05094016a ಸ ರಾಜಾ ಮಹತೀಂ ಸೇನಾಂ ಯೋಜಯಿತ್ವಾ ಷಡಂಗಿನೀಂ|

05094016c ಅಮೃಷ್ಯಮಾಣಃ ಸಂಪ್ರಾಯಾದ್ಯತ್ರ ತಾವಪರಾಜಿತೌ||

ರಾಮನು ಹೇಳಿದನು: “ಆ ರಾಜನು ಅತಿದೊಡ್ಡ ಷಡಂಗ ಸೇನೆಯನ್ನು ಒಟ್ಟುಗೂಡಿಸಿಕೊಂಡು ಅವಸರದಲ್ಲಿ ಆ ಇಬ್ಬರು ಅಪರಾಜಿತರಿರುವಲ್ಲಿಗೆ ಪ್ರಯಾಣಿಸಿದನು.

05094017a ಸ ಗತ್ವಾ ವಿಷಮಂ ಘೋರಂ ಪರ್ವತಂ ಗಂಧಮಾದನಂ|

05094017c ಮೃಗಯಾಣೋಽನ್ವಗಚ್ಚತ್ತೌ ತಾಪಸಾವಪರಾಜಿತೌ||

ಅವನು ಆ ವಿಷಮ, ಘೋರ ಗಂಧಮಾದನ ಪರ್ವತಕ್ಕೆ ಹೋಗಿ, ಆ ಅಪರಾಜಿತ ತಾಪಸರನ್ನು ಬೇಟೆಯಾಡುತ್ತಾ ಮುಂದುವರೆದನು.

05094018a ತೌ ದೃಷ್ಟ್ವಾ ಕ್ಷುತ್ಪಿಪಾಸಾಭ್ಯಾಂ ಕೃಶೌ ಧಮನಿಸಂತತೌ|

05094018c ಶೀತವಾತಾತಪೈಶ್ಚೈವ ಕರ್ಶಿತೌ ಪುರುಷೋತ್ತಮೌ|

05094018e ಅಭಿಗಮ್ಯೋಪಸಂಗೃಹ್ಯ ಪರ್ಯಪೃಚ್ಚದನಾಮಯಂ||

ಹಸಿವು-ಬಾಯಾರಿಕೆಗಳಿಂದ ಬಳಲಿ ಕೃಶರಾಗಿದ್ದ, ಮೂಳೆ-ನರಗಳು ಕಾಣಿಸಿಕೊಳ್ಳುತ್ತಿದ್ದ, ಛಳಿ-ಗಾಳಿ-ಬಿಸಿಲುಗಳಿಗೆ ಸಿಕ್ಕಿ ಒರಟಾಗಿದ್ದ ಆ ಪುರುಷೋತ್ತಮರಿಬ್ಬರನ್ನು ನೋಡಿ, ಬಳಿಸಾರಿ, ಕಾಲುಗಳನ್ನು ಹಿಡಿದು, ಕುಶಲವನ್ನು ಕೇಳಿದನು.

05094019a ತಮರ್ಚಿತ್ವಾ ಮೂಲಫಲೈರಾಸನೇನೋದಕೇನ ಚ|

05094019c ನ್ಯಮಂತ್ರಯೇತಾಂ ರಾಜಾನಂ ಕಿಂ ಕಾರ್ಯಂ ಕ್ರಿಯತಾಮಿತಿ||

ಅವರು ರಾಜನಿಗೆ ಗೆಡ್ಡೆ, ಹಣ್ಣು, ಆಸನ, ನೀರನ್ನಿತ್ತು ಸ್ವಾಗತಿಸಿ “ಯಾವ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದರು.

05094020 ದಂಭೋದ್ಭವ ಉವಾಚ|

05094020a ಬಾಹುಭ್ಯಾಂ ಮೇ ಜಿತಾ ಭೂಮಿರ್ನಿಹತಾಃ ಸರ್ವಶತ್ರವಃ|

05094020c ಭವದ್ಭ್ಯಾಂ ಯುದ್ಧಮಾಕಾಂಕ್ಷನ್ನುಪಯಾತೋಽಸ್ಮಿ ಪರ್ವತಂ|

05094020e ಆತಿಥ್ಯಂ ದೀಯತಾಮೇತತ್ಕಾಂಕ್ಷಿತಂ ಮೇ ಚಿರಂ ಪ್ರತಿ||

ದಂಭೋದ್ಭವನು ಹೇಳಿದನು: “ಈ ಬಾಹುಗಳೆರಡರಿಂದ ನಾನು ಭೂಮಿಯಲ್ಲಿರುವ ಸರ್ವ ಶತ್ರುಗಳನ್ನು ಗೆದ್ದಿದ್ದೇನೆ. ನಿಮ್ಮಿಬ್ಬರೊಡನೆ ಯುದ್ಧವನ್ನು ಅಪೇಕ್ಷಿಸಿ ಈ ಪರ್ವತಕ್ಕೆ ಬಂದಿದ್ದೇನೆ. ಬಹುಕಾಲದಿಂದ ಬಯಸುತ್ತಿರುವ ಇದನ್ನೇ ಆತಿಥ್ಯವಾಗಿ ನೀಡಬೇಕು.”

05094021 ನರನಾರಾಯಣಾವೂಚತುಃ|

05094021a ಅಪೇತಕ್ರೋಧಲೋಭೋಽಯಮಾಶ್ರಮೋ ರಾಜಸತ್ತಮ|

05094021c ನ ಹ್ಯಸ್ಮಿನ್ನಾಶ್ರಮೇ ಯುದ್ಧಂ ಕುತಃ ಶಸ್ತ್ರಂ ಕುತೋಽನೃಜುಃ|

05094021e ಅನ್ಯತ್ರ ಯುದ್ಧಮಾಕಾಂಕ್ಷ್ವ ಬಹವಃ ಕ್ಷತ್ರಿಯಾಃ ಕ್ಷಿತೌ||

ನರ-ನಾರಾಯಣರು ಹೇಳಿದರು: “ರಾಜಸತ್ತಮ! ಕ್ರೋಧ-ಲೋಭಗಳು ಈ ಅಶ್ರಮದಲ್ಲಿ ಸರಿಯಲ್ಲ. ಈ ಆಶ್ರಮದಲ್ಲಿ ಎಲ್ಲಿಯ ಯುದ್ಧ? ಎಲ್ಲಿಯ ಶಸ್ತ್ರ? ಎಲ್ಲಿ ಸಿಟ್ಟು? ಬೇರೆ ಎಲ್ಲಿಯಾದರೂ ಹೋಗಿ ಯುದ್ಧವನ್ನು ಕೇಳು. ಭೂಮಿಯಲ್ಲಿ ಬಹಳಷ್ಟು ಕ್ಷತ್ರಿಯರಿದ್ದಾರೆ!””

05094022 ರಾಮ ಉವಾಚ|

05094022a ಉಚ್ಯಮಾನಸ್ತಥಾಪಿ ಸ್ಮ ಭೂಯ ಏವಾಭ್ಯಭಾಷತ|

05094022c ಪುನಃ ಪುನಃ ಕ್ಷಮ್ಯಮಾಣಃ ಸಾಂತ್ವ್ಯಮಾನಶ್ಚ ಭಾರತ|

05094022e ದಂಭೋದ್ಭವೋ ಯುದ್ಧಮಿಚ್ಚನ್ನಾಹ್ವಯತ್ಯೇವ ತಾಪಸೌ||

ರಾಮನು ಹೇಳಿದನು: “ಅವರು ಹೇಳಿದರೂ ಅವನು ಒತ್ತಾಯಿಸಿದನು. ಭಾರತ! ಅವನು ಪುನಃ ಪುನಃ ಕ್ಷಮೆಯನ್ನು ಕೇಳಿದರೂ, ಸಂತವಿಸಿದರೂ ಯುದ್ಧವನ್ನು ಬಯಸಿದ ದಂಭೋದ್ಭವನು ಆ ತಾಪಸರಿಬ್ಬರನ್ನೂ ಹೋರಾಟಕ್ಕೆ ಕರೆದನು.

05094023a ತತೋ ನರಸ್ತ್ವಿಷೀಕಾಣಾಂ ಮುಷ್ಟಿಮಾದಾಯ ಕೌರವ|

05094023c ಅಬ್ರವೀದೇಹಿ ಯುಧ್ಯಸ್ವ ಯುದ್ಧಕಾಮುಕ ಕ್ಷತ್ರಿಯ||

05094024a ಸರ್ವಶಸ್ತ್ರಾಣಿ ಚಾದತ್ಸ್ವ ಯೋಜಯಸ್ವ ಚ ವಾಹಿನೀಂ|

05094024c ಅಹಂ ಹಿ ತೇ ವಿನೇಷ್ಯಾಮಿ ಯುದ್ಧಶ್ರದ್ಧಾಮಿತಃ ಪರಂ||

ಕೌರವ! ಆಗ ನರನು ಒಂದು ಮುಷ್ಟಿ ಹುಲ್ಲನ್ನು ಹಿಡಿದು ಹೇಳಿದನು: “ಯುದ್ಧಕಾಮುಕ ಕ್ಷತ್ರಿಯ! ಇದೋ ಯುದ್ಧಮಾಡು! ಸರ್ವಶಸ್ತ್ರಗಳನ್ನೂ ಪ್ರಯೋಗಿಸು! ಸೇನೆಯನ್ನು ಒಂದುಗೂಡಿಸು! ಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ಶಾಶ್ವತವಾಗಿ ತೆಗೆದುಹಾಕುತ್ತೇನೆ!”

05094025 ದಂಭೋದ್ಭವ ಉವಾಚ|

05094025a ಯದ್ಯೇತದಸ್ತ್ರಮಸ್ಮಾಸು ಯುಕ್ತಂ ತಾಪಸ ಮನ್ಯಸೇ|

05094025c ಏತೇನಾಪಿ ತ್ವಯಾ ಯೋತ್ಸ್ಯೇ ಯುದ್ಧಾರ್ಥೀ ಹ್ಯಹಮಾಗತಃ||

ದಂಭೋದ್ಭವನು ಹೇಳಿದನು: “ತಾಪಸ! ನಮಗೆ ಇದೇ ಸರಿಯಾದ ಅಸ್ತ್ರ ಎಂದು ತಿಳಿದರೆ ಅದನ್ನೇ ನೀನು ಬಳಸಿ ಯುದ್ಧಾರ್ಥಿಯಾಗಿ ಇಲ್ಲಿಗೆ ಬಂದಿರುವ ನಮ್ಮೊಂದಿಗೆ ಯುದ್ಧಮಾಡು!””

05094026 ರಾಮ ಉವಾಚ|

05094026a ಇತ್ಯುಕ್ತ್ವಾ ಶರವರ್ಷೇಣ ಸರ್ವತಃ ಸಮವಾಕಿರತ್|

05094026c ದಂಭೋದ್ಭವಸ್ತಾಪಸಂ ತಂ ಜಿಘಾಂಸುಃ ಸಹಸೈನಿಕಃ||

ರಾಮನು ಹೇಳಿದನು: “ಹೀಗೆ ಹೇಳಿ ದಂಭೋದ್ಭವನು ಸೈನಿಕರೊಡಗೂಡಿ ಆ ತಾಪಸನನ್ನು ಕೊಲ್ಲಲು ಬಯಸಿ ಎಲ್ಲ ಕಡೆಗಳಿಂದ ಬಾಣಗಳ ಮಳೆಸುರಿಸಿ ಆಕ್ರಮಣಿಸಿದನು.

05094027a ತಸ್ಯ ತಾನಸ್ಯತೋ ಘೋರಾನಿಷೂನ್ಪರತನುಚ್ಚಿದಃ|

05094027c ಕದರ್ಥೀಕೃತ್ಯ ಸ ಮುನಿರಿಷೀಕಾಭಿರಪಾನುದತ್||

ಶತ್ರುಗಳ ಶರೀರವನ್ನು ಕತ್ತರಿಸಬಲ್ಲ ಆ ಘೋರ ಬಾಣಗಳನ್ನು ಆ ಮುನಿಯು ತನ್ನ ಹುಲ್ಲುಕಡ್ಡಿಗಳಿಂದ ತಡೆದು ನಿಷ್ಪ್ರಯೋಜಕಗಳನ್ನಾಗಿ ಮಾಡಿದನು.

05094028a ತತೋಽಸ್ಮೈ ಪ್ರಾಸೃಜದ್ಘೋರಮೈಷೀಕಮಪರಾಜಿತಃ|

05094028c ಅಸ್ತ್ರಮಪ್ರತಿಸಂಧೇಯಂ ತದದ್ಭುತಮಿವಾಭವತ್||

ಆಗ ಆ ಅಪರಾಜಿತನು ಎದುರಿಸಲಸಾಧ್ಯವಾದ ಆ ಘೋರ ಹುಲ್ಲುಗಳನ್ನು ಅವನ ಮೇಲೆ ಪ್ರಯೋಗಿಸಲು ಅದ್ಭುತವು ನಡೆಯಿತು.

05094029a ತೇಷಾಮಕ್ಷೀಣಿ ಕರ್ಣಾಂಶ್ಚ ನಸ್ತಕಾಂಶ್ಚೈವ ಮಾಯಯಾ|

05094029c ನಿಮಿತ್ತವೇಧೀ ಸ ಮುನಿರಿಷೀಕಾಭಿಃ ಸಮರ್ಪಯತ್||

ಆ ಮುನಿಯು ಮಾಯೆಯಿಂದ ಆ ಹುಲ್ಲುಕಡ್ಡಿಗಳು ಅವರ ಕಣ್ಣು, ಕಿವಿ, ಮೂಗುಗಳನ್ನು ಹೊಡೆಯುವಂತೆ ಮಾಡಿದನು.

05094030a ಸ ದೃಷ್ಟ್ವಾ ಶ್ವೇತಮಾಕಾಶಮಿಷೀಕಾಭಿಃ ಸಮಾಚಿತಂ|

05094030c ಪಾದಯೋರ್ನ್ಯಪತದ್ರಾಜಾ ಸ್ವಸ್ತಿ ಮೇಽಸ್ತ್ವಿತಿ ಚಾಬ್ರವೀತ್||

ಆ ಹುಲ್ಲುಕಡ್ಡಿಗಳು ತುಂಬಿ ಬಿಳಿಯಾದ ಆಕಾಶವನ್ನು ನೋಡಿದ ರಾಜನು ನರನ ಪಾದಗಳ ಮೇಲೆ ಬಿದ್ದು “ನನ್ನನ್ನು ಆಶೀರ್ವದಿಸು!” ಎಂದು ಕೇಳಿದನು.

05094031a ತಮಬ್ರವೀನ್ನರೋ ರಾಜಂ ಶರಣ್ಯಃ ಶರಣೈಷಿಣಾಂ|

05094031c ಬ್ರಹ್ಮಣ್ಯೋ ಭವ ಧರ್ಮಾತ್ಮಾ ಮಾ ಚ ಸ್ಮೈವಂ ಪುನಃ ಕೃಥಾಃ||

ಶರಣರಿಗೆ ಶರಣ್ಯನಾದ ನರನು ರಾಜನಿಗೆ ಹೇಳಿದನು: “ಬ್ರಹ್ಮಣ್ಯ ಮತ್ತು ಧರ್ಮಾತ್ಮನಾಗಿರು! ಹೀಗೆ ಪುನಃ ಮಾಡಬೇಡ!

05094032a ಮಾ ಚ ದರ್ಪಸಮಾವಿಷ್ಟಃ ಕ್ಷೇಪ್ಸೀಃ ಕಾಂಶ್ಚಿತ್ಕದಾ ಚನ|

05094032c ಅಲ್ಪೀಯಾಂಸಂ ವಿಶಿಷ್ಟಂ ವಾ ತತ್ತೇ ರಾಜನ್ಪರಂ ಹಿತಂ||

ರಾಜನ್! ದರ್ಪಸಮಾವಿಷ್ಟನಾಗಿ ಇನ್ನು ಎಂದೂ, ಬೇರೆ ಯಾರನ್ನೂ ನಿನಗಿಂಥ ಅಲ್ಪರಾಗಿರಲಿ ಅಥವಾ ವಿಶಿಷ್ಟರಾಗಿರಲಿ ಕಾಡಿಸಬೇಡ! ಅದೇ ನಿನಗೆ ಪರಮ ಹಿತವಾಗಿರುವುದು.

05094033a ಕೃತಪ್ರಜ್ಞೋ ವೀತಲೋಭೋ ನಿರಹಂಕಾರ ಆತ್ಮವಾನ್|

05094033c ದಾಂತಃ ಕ್ಷಾಂತೋ ಮೃದುಃ ಕ್ಷೇಮಃ ಪ್ರಜಾಃ ಪಾಲಯ ಪಾರ್ಥಿವ||

ಪಾರ್ಥಿವ! ಕೃತಪ್ರಜ್ಞನಾಗಿ, ಲೋಭವನ್ನು ತೊರೆದು, ನಿರಂಕಾರನಾಗಿ, ಆತ್ಮವಂತನಾಗಿ, ದಾಂತ, ಕ್ಷಾಂತ, ಮೃದುವಾಗಿದ್ದುಕೊಂಡು, ಪ್ರಜೆಗಳ ಕ್ಷೇಮವನ್ನು ಪಾಲಿಸು!

05094034a ಅನುಜ್ಞಾತಃ ಸ್ವಸ್ತಿ ಗಚ್ಚ ಮೈವಂ ಭೂಯಃ ಸಮಾಚರೇಃ|

05094034c ಕುಶಲಂ ಬ್ರಾಹ್ಮಣಾನ್ಪೃಚ್ಚೇರಾವಯೋರ್ವಚನಾದ್ಭೃಶಂ||

ಅಪ್ಪಣೆ ಕೊಟ್ಟಿದ್ದೇನೆ. ಹೋಗು! ಮಂಗಳವಾಗಲಿ! ಇನ್ನು ಸರಿಯಾಗಿ ನಡೆದುಕೋ. ಬ್ರಾಹ್ಮಣರ ಕುಶಲವನ್ನು ಕೇಳು. ಕ್ರೂರ ಮಾತಿನಿಂದ ಅವರನ್ನು ಅಪಮಾನಿಸಬೇಡ!”

05094035a ತತೋ ರಾಜಾ ತಯೋಃ ಪಾದಾವಭಿವಾದ್ಯ ಮಹಾತ್ಮನೋಃ|

05094035c ಪ್ರತ್ಯಾಜಗಾಮ ಸ್ವಪುರಂ ಧರ್ಮಂ ಚೈವಾಚಿನೋದ್ಭೃಶಂ||

ಆಗ ರಾಜನು ಆ ಮಹಾತ್ಮರ ಪಾದಗಳಿಗೆ ವಂದಿಸಿ, ತನ್ನ ಪುರಕ್ಕೆ ತೆರಳಿ, ತುಂಬಾ ಧರ್ಮವನ್ನು ಸಂಗ್ರಹಿಸಿದನು.

05094036a ಸುಮಹಚ್ಚಾಪಿ ತತ್ಕರ್ಮ ಯನ್ನರೇಣ ಕೃತಂ ಪುರಾ|

05094036c ತತೋ ಗುಣೈಃ ಸುಬಹುಭಿಃ ಶ್ರೇಷ್ಠೋ ನಾರಾಯಣೋಽಭವತ್||

ಹಿಂದೆ ನರನು ಎಸಗಿದ ಆ ಕರ್ಮವು ಮಹತ್ತರವಾದುದು. ನಾರಾಯಣನು ಅದಕ್ಕಿಂತಲೂ ಅಧಿಕ ಗುಣಗಳಿಂದ ಶ್ರೇಷ್ಠನಾಗಿದ್ದನು.

05094037a ತಸ್ಮಾದ್ಯಾವದ್ಧನುಃಶ್ರೇಷ್ಠೇ ಗಾಂಡೀವೇಽಸ್ತ್ರಂ ನ ಯುಜ್ಯತೇ|

05094037c ತಾವತ್ತ್ವಂ ಮಾನಮುತ್ಸೃಜ್ಯ ಗಚ್ಚ ರಾಜನ್ಧನಂಜಯಂ||

ರಾಜನ್! ಆದುದರಿಂದ ಆ ಧನುಶ್ರೇಷ್ಠ ಗಾಂಡೀವಕ್ಕೆ ಅಸ್ತ್ರವನ್ನು ಹೂಡುವುದರ ಮೊದಲೇ, ನೀನು ನಿನ್ನ ಅಭಿಮಾನವನ್ನು ತೊರೆದು ಧನಂಜಯನಲ್ಲಿ ಹೋಗು!

05094038a ಕಾಕುದೀಕಂ ಶುಕಂ ನಾಕಮಕ್ಷಿಸಂತರ್ಜನಂ ತಥಾ|

05094038c ಸಂತಾನಂ ನರ್ತನಂ ಘೋರಮಾಸ್ಯಮೋದಕಮಷ್ಟಮಂ||

ಅವನಲ್ಲಿ ಕಾಕುದೀಕ, ಶುಕ, ನಾಕ, ಅಕ್ಷಿಸಂತರ್ಜನ, ಸಂತಾನ, ನರ್ತನ, ಘೋರ ಮತ್ತು ಎಂಟನೆಯದಾಗಿ ಉದಕಗಳಿವೆ.

05094039a ಏತೈರ್ವಿದ್ಧಾಃ ಸರ್ವ ಏವ ಮರಣಂ ಯಾಂತಿ ಮಾನವಾಃ|

05094039c ಉನ್ಮತ್ತಾಶ್ಚ ವಿಚೇಷ್ಟಂತೇ ನಷ್ಟಸಂಜ್ಞಾ ವಿಚೇತಸಃ||

05094040a ಸ್ವಪಂತೇ ಚ ಪ್ಲವಂತೇ ಚ ಚರ್ದಯಂತಿ ಚ ಮಾನವಾಃ|

05094040c ಮೂತ್ರಯಂತೇ ಚ ಸತತಂ ರುದಂತಿ ಚ ಹಸಂತಿ ಚ||

ಇವುಗಳಿಂದ ಹೊಡೆಯಲ್ಪಟ್ಟ ಎಲ್ಲ ಮಾನವರೂ ಮರಣವನ್ನು ಹೊಂದುತ್ತಾರೆ - ಉನ್ಮತ್ತರಾಗಿ ನಡೆದುಕೊಳ್ಳುತ್ತಾರೆ, ಸಂಜ್ಞೆಗಳನ್ನು ಕಳೆದುಕೊಂಡು ಮೂರ್ಛೆಗೊಳ್ಳುತ್ತಾರೆ, ನಿದ್ದೆ ಹೋಗುತ್ತಾರೆ, ಕುಪ್ಪಳಿಸುತ್ತಾರೆ, ಮಾನವರು ವಾಂತಿಮಾಡುತ್ತಾರೆ, ಮೂತ್ರಮಾಡುತ್ತಾರೆ, ಸತತವಾಗಿ ಅಳುತ್ತಾರೆ ಮತ್ತು ನಗುತ್ತಾರೆ.

05094041a ಅಸಂಖ್ಯೇಯಾ ಗುಣಾಃ ಪಾರ್ಥೇ ತದ್ವಿಶಿಷ್ಟೋ ಜನಾರ್ದನಃ|

05094041c ತ್ವಮೇವ ಭೂಯೋ ಜಾನಾಸಿ ಕುಂತೀಪುತ್ರಂ ಧನಂಜಯಂ||

ಪಾರ್ಥನ ಗುಣಗಳು ಅಸಂಖ್ಯವಾದವುಗಳು. ಜನಾರ್ದನನು ಅವನಿಗಿಂಥ ವಿಶಿಷ್ಟನಾದವನು. ನೀನೇ ಅವನನ್ನು ಕುಂತೀಪುತ್ರ ಧನಂಜಯನೆಂದು ಚೆನ್ನಾಗಿ ತಿಳಿದುಕೊಂಡಿರುವೆ.

05094042a ನರನಾರಾಯಣೌ ಯೌ ತೌ ತಾವೇವಾರ್ಜುನಕೇಶವೌ|

05094042c ವಿಜಾನೀಹಿ ಮಹಾರಾಜ ಪ್ರವೀರೌ ಪುರುಷರ್ಷಭೌ||

ಮಹಾರಾಜ! ಈ ಪ್ರವೀರ, ಪುರುಷರ್ಷಭ ಅರ್ಜುನ-ಕೇಶವರೇ ಆ ನರ-ನಾರಾಯಣರೆಂದು ತಿಳಿದುಕೋ.

05094043a ಯದ್ಯೇತದೇವಂ ಜಾನಾಸಿ ನ ಚ ಮಾಮತಿಶಂಕಸೇ|

05094043c ಆರ್ಯಾಂ ಮತಿಂ ಸಮಾಸ್ಥಾಯ ಶಾಮ್ಯ ಭಾರತ ಪಾಂಡವೈಃ||

ಭಾರತ! ಇದನ್ನು ನೀನು ತಿಳಿದುಕೊಂಡಿದ್ದರೆ, ನನ್ನನ್ನು ಶಂಕಿಸದೇ ಇದ್ದರೆ, ಉತ್ತಮ ಮನಸ್ಸು ಮಾಡಿ ಪಾಂಡವರೊಂದಿಗೆ ಶಾಂತಿಯನ್ನು ಪಾಲಿಸು.

05094044a ಅಥ ಚೇನ್ಮನ್ಯಸೇ ಶ್ರೇಯೋ ನ ಮೇ ಭೇದೋ ಭವೇದಿತಿ|

05094044c ಪ್ರಶಾಮ್ಯ ಭರತಶ್ರೇಷ್ಠ ಮಾ ಚ ಯುದ್ಧೇ ಮನಃ ಕೃಥಾಃ||

ಭರತಶ್ರೇಷ್ಠ! ಭೇದವಿಲ್ಲದಿರುವುದೇ ಶ್ರೇಯಸ್ಸೆಂದು ನೀನು ಯೋಚಿಸಿ, ಶಾಂತನಾಗು! ಯುದ್ಧದ ಕುರಿತು ಮನಸ್ಸು ಮಾಡಬೇಡ!

05094045a ಭವತಾಂ ಚ ಕುರುಶ್ರೇಷ್ಠ ಕುಲಂ ಬಹುಮತಂ ಭುವಿ|

05094045c ತತ್ತಥೈವಾಸ್ತು ಭದ್ರಂ ತೇ ಸ್ವಾರ್ಥಮೇವಾನುಚಿಂತಯ||

ಕುರುಶ್ರೇಷ್ಠ! ನಿನ್ನ ಕುಲವು ಭೂಮಿಯಲ್ಲಿಯೇ ಬಹುಮತವುಳ್ಳದ್ದು. ಅದು ಹಾಗೆಯೇ ಉಳಿದುಕೊಳ್ಳಬೇಕು. ನಿನಗೆ ಆಶೀರ್ವಾದವಿದೆ. ನಿನಗೆ ಒಳ್ಳೆಯದಾಗುವಂತೆ ಅಲೋಚಿಸು!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ದಂಭೋದ್ಭವೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ದಂಭೋದ್ಭವೋಪಾಖ್ಯಾನದಲ್ಲಿ ತೊಂಭತ್ನಾಲ್ಕನೆಯ ಅಧ್ಯಾಯವು.

Related image

Kannada translation of Bhagavadyana Parva, by Chapter:

  1. ಯುಧಿಷ್ಠಿರಕೃತಕೃಷ್ಣಪ್ರೇರಣಃ
  2. ಕೃಷ್ಣವಾಕ್ಯಃ
  3. ಭೀಮವಾಕ್ಯಃ
  4. ಭೀಮೋತ್ತೇಜಕಶ್ರೀಕೃಷ್ಣವಾಕ್ಯಃ
  5. ಭೀಮವಾಕ್ಯಃ
  6. ಕೃಷ್ಣವಾಕ್ಯಃ
  7. ಅರ್ಜುನವಾಕ್ಯಃ
  8. ಶ್ರೀಕೃಷ್ಣವಾಕ್ಯಃ
  9. ನಕುಲವಾಕ್ಯಃ
  10. ಸಹದೇವಸಾತ್ಯಕಿವಾಕ್ಯಃ
  11. ದ್ರೌಪದೀಕೃಷ್ಣಸಂವಾದಃ
  12. ಶ್ರೀಕೃಷ್ಣಪ್ರಸ್ತಾನಃ
  13. ಶ್ರೀಕೃಷ್ಣಪ್ರಯಾಣಃ
  14. ಮಾರ್ಗೇಸಭಾನಿರ್ಮಾಣಃ
  15. ಧೃತರಾಷ್ಟ್ರವಾಕ್ಯಃ
  16. ವಿದುರವಾಕ್ಯಃ
  17. ದುರ್ಯೋಧನವಾಕ್ಯಃ
  18. ಧೃತರಾಷ್ಟ್ರಗೃಹಪ್ರವೇಶಪೂರ್ವಕಂ ಶ್ರೀಕೃಷ್ಣಸ್ಯ ವಿದುರಗೃಹಪ್ರವೇಶಃ
  19. ಕೃಷ್ಣಕುಂತೀಸಂವಾದಃ
  20. ಶ್ರೀಕೃಷ್ಣದುರ್ಯೋಧನಸಂವಾದಃ
  21. ಶ್ರೀಕೃಷ್ಣವಿದುರಸಂವಾದಃ
  22. ಶ್ರೀಕೃಷ್ಣವಾಕ್ಯಃ
  23. ಶ್ರೀಕೃಷ್ಣಸಭಾಪ್ರವೇಶಃ
  24. ಕೃಷ್ಣವಾಕ್ಯಃ
  25. ದಂಭೋದ್ಭವೋಪಾಖ್ಯಾನ
  26. ಮಾತಲಿವರಾನ್ವೇಷಣಃ
  27. ಮಾತಲಿವರಾನ್ವೇಷಣಃ
  28. ಮಾತಲಿವರಾನ್ವೇಷಣಃ
  29. ಮಾತಲಿವರಾನ್ವೇಷಣಃ
  30. ಮಾತಲಿವರಾನ್ವೇಷಣಃ
  31. ಮಾತಲಿವರಾನ್ವೇಷಣಃ
  32. ಮಾತಲಿವರಾನ್ವೇಷಣಃ
  33. ಮಾತಲಿವರಾನ್ವೇಷಣಃ
  34. ಮಾತಲಿವರಾನ್ವೇಷಣಃ
  35. ಗಾಲವಚರಿತಃ
  36. ಭಗವದ್ಯಾನ ಪರ್ವ: ಗಾಲವಚರಿತಃ
  37. ಭಗವದ್ಯಾನ ಪರ್ವ: ಗಾಲವಚರಿತಃ
  38. ಭಗವದ್ಯಾನ ಪರ್ವ: ಗಾಲವಚರಿತಃ
  39. ಭಗವದ್ಯಾನ ಪರ್ವ: ಗಾಲವಚರಿತಃ
  40. ಭಗವದ್ಯಾನ ಪರ್ವ: ಗಾಲವಚರಿತಃ
  41. ಭಗವದ್ಯಾನ ಪರ್ವ: ಗಾಲವಚರಿತಃ
  42. ಭಗವದ್ಯಾನ ಪರ್ವ: ಗಾಲವಚರಿತಃ
  43. ಭಗವದ್ಯಾನ ಪರ್ವ: ಗಾಲವಚರಿತಃ
  44. ಭಗವದ್ಯಾನ ಪರ್ವ: ಗಾಲವಚರಿತಃ
  45. ಭಗವದ್ಯಾನ ಪರ್ವ: ಗಾಲವಚರಿತಃ
  46. ಭಗವದ್ಯಾನ ಪರ್ವ: ಗಾಲವಚರಿತಃ
  47. ಭಗವದ್ಯಾನ ಪರ್ವ: ಗಾಲವಚರಿತಃ
  48. ಭಗವದ್ಯಾನ ಪರ್ವ: ಗಾಲವಚರಿತಃ
  49. ಭಗವದ್ಯಾನ ಪರ್ವ: ಗಾಲವಚರಿತಃ-ಯಯಾತಿಮೋಹಃ
  50. ಭಗವದ್ಯಾನ ಪರ್ವ: ಗಾಲವಚರಿತಃ-ಯಯಾತಿಸ್ವರ್ಗಭ್ರಂಶಃ
  51. ಭಗವದ್ಯಾನ ಪರ್ವ: ಗಾಲವಚರಿತಃ-ಯಯಾತಿಸ್ವರ್ಗಾರೋಹಣಃ
  52. ಭಗವದ್ಯಾನ ಪರ್ವ: ಗಾಲವಚರಿತಃ
  53. ಭಗವದ್ಯಾನ ಪರ್ವ: ಭಗವದ್ವಾಕ್ಯಃ
  54. ಭಗವದ್ಯಾನ ಪರ್ವ: ಭೀಷ್ಮಾದಿವಾಕ್ಯಃ
  55. ಭಗವದ್ಯಾನ ಪರ್ವ: ಭೀಷ್ಮದ್ರೋಣವಾಕ್ಯಃ
  56. ಭಗವದ್ಯಾನ ಪರ್ವ: ದುರ್ಯೋಧನವಾಕ್ಯಃ
  57. ಭಗವದ್ಯಾನ ಪರ್ವ: ಕೃಷ್ಣವಾಕ್ಯಃ
  58. ಭಗವದ್ಯಾನ ಪರ್ವ: ಗಾಂಧಾರೀವಾಕ್ಯಃ
  59. ಭಗವದ್ಯಾನ ಪರ್ವ: ವಿದುರವಾಕ್ಯಃ
  60. ಭಗವದ್ಯಾನ ಪರ್ವ: ವಿಶ್ವರೂಪದರ್ಶನಃ
  61. ಭಗವದ್ಯಾನ ಪರ್ವ: ಕುಂತೀವಾಕ್ಯಃ
  62. ಭಗವದ್ಯಾನ ಪರ್ವ: ವಿದುಲಾಪುತ್ರಾನುಶಾಸನಃ
  63. ಭಗವದ್ಯಾನ ಪರ್ವ: ವಿದುಲಾಪುತ್ರಾನುಶಾಸನಃ
  64. ಭಗವದ್ಯಾನ ಪರ್ವ: ವಿದುಲಾಪುತ್ರಾನುಶಾಸನಃ
  65. ಭಗವದ್ಯಾನ ಪರ್ವ: ವಿದುಲಾಪುತ್ರಾನುಶಾಸನಸಮಾಪ್ತಿಃ
  66. ಭಗವದ್ಯಾನ ಪರ್ವ: ಕುಂತೀವಾಕ್ಯಃ
  67. ಭಗವದ್ಯಾನ ಪರ್ವ: ಭೀಷ್ಮದ್ರೋಣವಾಕ್ಯಃ
  68. ಭಗವದ್ಯಾನ ಪರ್ವ: ಭೀಷ್ಮದ್ರೋಣವಾಕ್ಯಃ

Comments are closed.