Udyoga Parva: Chapter 91

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೧

ಆಗ ಕೃಷ್ಣನು ವಿದುರನಿಗೆ “ಬಾಂಧವರಲ್ಲಿ ಮಿಥ್ಯ ಭೇದಗಳುಂಟಾದಾಗ ಯಾವ ಮಿತ್ರನು ಅದನ್ನು ಹೆಚ್ಚಿಸದೇ ಸರ್ವಯತ್ನದಿಂದ ಮಧ್ಯಸ್ತಿಕೆ ಮಾಡುತ್ತಾನೋ ಅವನೇ ನಿಜವಾದ ಮಿತ್ರ ಎಂದು ತಿಳಿದವರು ಹೇಳುತ್ತಾರೆ” ಎಂದೂ “ಪಾಂಡವರ ಒಳಿತಿಗೆ ಕಡಿಮೆಮಾಡದೇ ಕುರುಗಳಲ್ಲಿ ಶಾಂತಿಯನ್ನು ತಂದೆನೆಂದಾದರೆ ನನಗೆ ಕುರುಗಳನ್ನು ಮೃತ್ಯುಪಾಶದಿಂದ ಬಿಡುಗಡೆಮಾಡಿದ ಮಹಾ ಅರ್ಥವೂ, ಸಚ್ಚಾರಿತ್ರ್ಯವೂ, ಪುಣ್ಯವೂ ನನ್ನದಾಗುತ್ತದೆ” ಎಂದು ಯೋಚಿಸಿ ಬಂದಿದ್ದೇನೆ ಎನ್ನುವುದು (೧-೨೨).

05091001 ಭಗವಾನುವಾಚ|

05091001a ಯಥಾ ಬ್ರೂಯಾನ್ಮಹಾಪ್ರಾಜ್ಞೋ ಯಥಾ ಬ್ರೂಯಾದ್ವಿಚಕ್ಷಣಃ|

05091001c ಯಥಾ ವಾಚ್ಯಸ್ತ್ವದ್ವಿಧೇನ ಸುಹೃದಾ ಮದ್ವಿಧಃ ಸುಹೃತ್||

ಭಗವಂತನು ಹೇಳಿದನು: “ಮಹಾಪ್ರಾಜ್ಞನು ಹೇಳುವಂತಿದೆ. ದೂರದೃಷ್ಟಿಯಿರುವವನು ಹೇಳಿದಂತಿದೆ. ನಿನ್ನಂಥಹ ಸುಹೃದಯನು ನನ್ನಂಥಹ ಸುಹೃದಯನಿಗೆ ಹೇಳಬೇಕಾದುದೇ ಇದು.

05091002a ಧರ್ಮಾರ್ಥಯುಕ್ತಂ ತಥ್ಯಂ ಚ ಯಥಾ ತ್ವಯ್ಯುಪಪದ್ಯತೇ|

05091002c ತಥಾ ವಚನಮುಕ್ತೋಽಸ್ಮಿ ತ್ವಯೈತತ್ಪಿತೃಮಾತೃವತ್||

ಧರ್ಮಾರ್ಥಯುಕ್ತವಾಗಿದೆ. ನಿನಗೆ ತಕ್ಕುದಾಗಿದೆ. ತಂದೆತಾಯಿಗಳು ಆಡುವಂತ ಮಾತುಗಳನ್ನು ಆಡಿದ್ದೀಯೆ.

05091003a ಸತ್ಯಂ ಪ್ರಾಪ್ತಂ ಚ ಯುಕ್ತಂ ಚಾಪ್ಯೇವಮೇವ ಯಥಾತ್ಥ ಮಾಂ|

05091003c ಶೃಣುಷ್ವಾಗಮನೇ ಹೇತುಂ ವಿದುರಾವಹಿತೋ ಭವ||

ನೀನು ನನಗೆ ಹೇಳಿದ್ದುದು ಸತ್ಯವಾದುದು. ಈಗ ನಡೆಯುತ್ತಿರುವುದು. ಯುಕ್ತವಾದುದು ಮತ್ತು ನನ್ನ ಒಳಿತಿಗಾಗಿಯೇ ಇರುವುದು. ಆದರೂ ವಿದುರ! ನಾನು ಇಲ್ಲಿಗೆ ಬಂದಿರುವುದರ ಕಾರಣವನ್ನು ಗಮನವಿಟ್ಟು ಕೇಳು.

05091004a ದೌರಾತ್ಮ್ಯಂ ಧಾರ್ತರಾಷ್ಟ್ರಸ್ಯ ಕ್ಷತ್ರಿಯಾಣಾಂ ಚ ವೈರಿತಾಂ|

05091004c ಸರ್ವಮೇತದಹಂ ಜಾನನ್ ಕ್ಷತ್ತಃ ಪ್ರಾಪ್ತೋಽದ್ಯ ಕೌರವಾನ್||

ಕ್ಷತ್ತ! ಧಾರ್ತರಾಷ್ಟ್ರನ ದೌರಾತ್ಮ, ಕ್ಷತ್ರಿಯರ ವೈರತ್ವ ಇವೆಲ್ಲವನ್ನೂ ತಿಳಿದೇ ನಾನು ಇಂದು ಕೌರವರಲ್ಲಿಗೆ ಬಂದಿದ್ದೇನೆ.

05091005a ಪರ್ಯಸ್ತಾಂ ಪೃಥಿವೀಂ ಸರ್ವಾಂ ಸಾಶ್ವಾಂ ಸರಥಕುಂಜರಾಂ|

05091005c ಯೋ ಮೋಚಯೇನ್ಮೃತ್ಯುಪಾಶಾತ್ಪ್ರಾಪ್ನುಯಾದ್ಧರ್ಮಮುತ್ತಮಂ||

ಯಾರು ವಿನಾಶವಾಗುವ ಈ ಪೃಥ್ವಿಯನ್ನು, ಕುದುರೆ, ರಥ, ಆನೆಗಳು ಮತ್ತು ಇವರೆಲ್ಲರೊಂದಿಗೆ ಮೃತ್ಯುಪಾಶದಿಂದ ಬಿಡುಗಡೆ ಮಾಡುತ್ತಾನೋ ಅವನು ಉತ್ತಮ ಧರ್ಮವನ್ನು ಹೊಂದುತ್ತಾನೆ.

05091006a ಧರ್ಮಕಾರ್ಯಂ ಯತಂ ಶಕ್ತ್ಯಾ ನ ಚೇಚ್ಚಕ್ನೋತಿ ಮಾನವಃ|

05091006c ಪ್ರಾಪ್ತೋ ಭವತಿ ತತ್ಪುಣ್ಯಮತ್ರ ಮೇ ನಾಸ್ತಿ ಸಂಶಯಃ||

ಧರ್ಮಕಾರ್ಯದ ಯಥಾ ಶಕ್ತಿ ಪ್ರಯತ್ನಮಾಡುವ ಮಾನವನಿಗೆ, ಕೊನೆಯಲ್ಲಿ ಅದು ಸಾಧ್ಯವಾಗದೇ ಹೋದರೂ ಅದರ ಪುಣ್ಯವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

05091007a ಮನಸಾ ಚಿಂತಯನ್ಪಾಪಂ ಕರ್ಮಣಾ ನಾಭಿರೋಚಯನ್|

05091007c ನ ಪ್ರಾಪ್ನೋತಿ ಫಲಂ ತಸ್ಯ ಏವಂ ಧರ್ಮವಿದೋ ವಿದುಃ||

ಮನಸ್ಸಿನಲ್ಲಿ ಪಾಪಕರ್ಮಗಳನ್ನು ಯೋಚಿಸಿ ಅವುಗಳನ್ನು ಮಾಡದೇ ಇದ್ದರೆ ಅದರ ಫಲವು ಅವನಿಗೆ ತಗಲುವುದಿಲ್ಲ ಎಂದು ಧರ್ಮವಿದರು ತಿಳಿದಿದ್ದಾರೆ.

05091008a ಸೋಽಹಂ ಯತಿಷ್ಯೇ ಪ್ರಶಮಂ ಕ್ಷತ್ತಃ ಕರ್ತುಮಮಾಯಯಾ|

05091008c ಕುರೂಣಾಂ ಸೃಂಜಯಾನಾಂ ಚ ಸಂಗ್ರಾಮೇ ವಿನಶಿಷ್ಯತಾಂ||

ಕ್ಷತ್ತ! ಸಂಗ್ರಾಮದಲ್ಲಿ ವಿನಾಶಹೊಂದುವ ಕುರು ಮತ್ತು ಸೃಂಜಯರ ನಡುವೆ ಶಾಂತಿಯನ್ನು ತರಲು ಪ್ರಯತ್ನಿಸುತ್ತಿದ್ದೇನೆ.

05091009a ಸೇಯಮಾಪನ್ಮಹಾಘೋರಾ ಕುರುಷ್ವೇವ ಸಮುತ್ಥಿತಾ|

05091009c ಕರ್ಣದುರ್ಯೋಧನಕೃತಾ ಸರ್ವೇ ಹ್ಯೇತೇ ತದನ್ವಯಾಃ||

ಬಂದೊದಗಿರುವ ಈ ಮಹಾಘೋರ ಆಪತ್ತು ಕುರುಗಳಿಂದಲೇ ಹುಟ್ಟಿದೆ. ಇದು ಕರ್ಣ-ದುರ್ಯೋಧನರು ಮಾಡಿದ್ದುದು. ಉಳಿದವರೆಲ್ಲರೂ ಅವರನ್ನು ಅನುಸರಿಸುತ್ತಿದ್ದಾರೆ ಅಷ್ಟೆ.

05091010a ವ್ಯಸನೈಃ ಕ್ಲಿಶ್ಯಮಾನಂ ಹಿ ಯೋ ಮಿತ್ರಂ ನಾಭಿಪದ್ಯತೇ|

05091010c ಅನುನೀಯ ಯಥಾಶಕ್ತಿ ತಂ ನೃಶಂಸಂ ವಿದುರ್ಬುಧಾಃ||

ವ್ಯಸನಗಳಿಗೆ ಸಿಲುಕಿದ ಮಿತ್ರನನ್ನು ಉಳಿಸಲು ಪ್ರಯತ್ನಿಸದ ಮಿತ್ರನನ್ನು ತಿಳಿದವರು ಕಟುಕನೆಂದು ಕರೆಯುತ್ತಾರೆ.

05091011a ಆ ಕೇಶಗ್ರಹಣಾನ್ಮಿತ್ರಮಕಾರ್ಯಾತ್ಸಮ್ನಿವರ್ತಯನ್|

05091011c ಅವಾಚ್ಯಃ ಕಸ್ಯ ಚಿದ್ಭವತಿ ಕೃತಯತ್ನೋ ಯಥಾಬಲಂ||

ಕೆಟ್ಟ ಕಾರ್ಯವನ್ನು ಮಾಡಲು ಹೊರಟಿರುವ ಮಿತ್ರನನ್ನು ಬಲವನ್ನುಪಯೋಗಿಸಿ, ಬೈಯುವುದರಿಂದಾಗಲೀ, ತಲೆಕೂದಲನ್ನು ಹಿಡಿದು ಎಳೆದಾಗಲೀ, ಏನಾದರೂ ಮಾಡಿ ತಡೆಯಬೇಕು.

05091012a ತತ್ಸಮರ್ಥಂ ಶುಭಂ ವಾಕ್ಯಂ ಧರ್ಮಾರ್ಥಸಹಿತಂ ಹಿತಂ|

05091012c ಧಾರ್ತರಾಷ್ಟ್ರಃ ಸಹಾಮಾತ್ಯೋ ಗ್ರಹೀತುಂ ವಿದುರಾರ್ಹತಿ||

ವಿದುರ! ಸಮರ್ಥವಾದ, ಧರ್ಮಾರ್ಥಸಹಿತವಾದ, ಹಿತವಾದ ಶುಭ ಮಾತುಗಳು ಅಮಾತ್ಯರೊಂದಿಗೆ ಧಾರ್ತರಾಷ್ಟ್ರನು ಸ್ವೀಕರಿಸಲು ಅರ್ಹವಾದವುಗಳು.

05091013a ಹಿತಂ ಹಿ ಧಾರ್ತರಾಷ್ಟ್ರಾಣಾಂ ಪಾಂಡವಾನಾಂ ತಥೈವ ಚ|

05091013c ಪೃಥಿವ್ಯಾಂ ಕ್ಷತ್ರಿಯಾಣಾಂ ಚ ಯತಿಷ್ಯೇಽಹಮಮಾಯಯಾ||

ಧಾರ್ತರಾಷ್ಟ್ರರ, ಪಾಂಡವರ ಹಾಗೂ ಭೂಮಿಯ ಕ್ಷತ್ರಿಯರ ಹಿತಕ್ಕಾಗಿ ಪ್ರಯತ್ನಿಸಲೇ ನಾನು ಇಲ್ಲಿಗೆ ಬಂದಿದ್ದೇನೆ.

05091014a ಹಿತೇ ಪ್ರಯತಮಾನಂ ಮಾಂ ಶಂಕೇದ್ದುರ್ಯೋಧನೋ ಯದಿ|

05091014c ಹೃದಯಸ್ಯ ಚ ಮೇ ಪ್ರೀತಿರಾನೃಣ್ಯಂ ಚ ಭವಿಷ್ಯತಿ||

ಹಿತಕ್ಕಾಗಿ ಪ್ರಯತ್ನಿಸುತ್ತಿರುವ ನನ್ನನ್ನು ದುರ್ಯೋಧನನು ಶಂಕಿಸಿದರೆ, ನಾನು ಅನೃಣನಾಗಿದ್ದೇನೆ ಎಂಬ ಸಂತೋಷವು ನನ್ನ ಹೃದಯಕ್ಕಾಗುತ್ತದೆ.

05091015a ಜ್ಞಾತೀನಾಂ ಹಿ ಮಿಥೋ ಭೇದೇ ಯನ್ಮಿತ್ರಂ ನಾಭಿಪದ್ಯತೇ|

05091015c ಸರ್ವಯತ್ನೇನ ಮಧ್ಯಸ್ಥಂ ನ ತನ್ಮಿತ್ರಂ ವಿದುರ್ಬುಧಾಃ||

ಬಾಂಧವರಲ್ಲಿ ಮಿಥ್ಯ ಭೇದಗಳುಂಟಾದಾಗ ಯಾವ ಮಿತ್ರನು ಅದನ್ನು ಹೆಚ್ಚಿಸದೇ ಸರ್ವಯತ್ನದಿಂದ ಮಧ್ಯಸ್ತಿಕೆ ಮಾಡುತ್ತಾನೋ ಅವನೇ ನಿಜವಾದ ಮಿತ್ರ ಎಂದು ತಿಳಿದವರು ಹೇಳುತ್ತಾರೆ.

05091016a ನ ಮಾಂ ಬ್ರೂಯುರಧರ್ಮಜ್ಞಾ ಮೂಢಾ ಅಸುಹೃದಸ್ತಥಾ|

05091016c ಶಕ್ತೋ ನಾವಾರಯತ್ಕೃಷ್ಣಃ ಸಂರಬ್ಧಾನ್ಕುರುಪಾಂಡವಾನ್||

ಶಕ್ತನಾಗಿದ್ದರೂ ಕೃಷ್ಣನು ದುಡುಕುತ್ತಿರುವ ಕುರು-ಪಾಂಡವರನ್ನು ತಡೆಯಲಿಲ್ಲವಲ್ಲ ಎಂದು ಅಧರ್ಮಜ್ಞರು, ಮೂಢರು, ಅಸುಹೃದಯರು ಮುಂದೆ ಹೇಳಬಾರದಲ್ಲ!

05091017a ಉಭಯೋಃ ಸಾಧಯನ್ನರ್ಥಮಹಮಾಗತ ಇತ್ಯುತ|

05091017c ತತ್ರ ಯತ್ನಮಹಂ ಕೃತ್ವಾ ಗಚ್ಚೇಯಂ ನೃಷ್ವವಾಚ್ಯತಾಂ||

ಇದರಿಂದಲೇ ಇಬ್ಬರ ನಡುವೆ ಅರ್ಥವನ್ನು ಸಾಧಿಸಲೋಸುಗ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಪ್ರಯತ್ನವನ್ನು ಮಾಡಿ ಹೋಗುತ್ತೇನೆ. ಇನ್ನೊಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳಬಾರದಲ್ಲ!

05091018a ಮಮ ಧರ್ಮಾರ್ಥಯುಕ್ತಂ ಹಿ ಶ್ರುತ್ವಾ ವಾಕ್ಯಮನಾಮಯಂ|

05091018c ನ ಚೇದಾದಾಸ್ಯತೇ ಬಾಲೋ ದಿಷ್ಟಸ್ಯ ವಶಮೇಷ್ಯತಿ||

ಧರ್ಮಾರ್ಥಯುಕ್ತವಾದ, ಅನಾಮಯವಾದ ನನ್ನ ಮಾತುಗಳನ್ನು ಕೇಳಿ ಆ ಬಾಲಕನು ನಡೆದುಕೊಳ್ಳದೇ ಇದ್ದರೆ ಅವನು ದೈವದ ವಶವಾಗುತ್ತಾನೆ.

05091019a ಅಹಾಪಯನ್ಪಾಂಡವಾರ್ಥಂ ಯಥಾವಚ್

         ಚಮಂ ಕುರೂಣಾಂ ಯದಿ ಚಾಚರೇಯಂ|

05091019c ಪುಣ್ಯಂ ಚ ಮೇ ಸ್ಯಾಚ್ಚರಿತಂ ಮಹಾರ್ಥಂ

         ಮುಚ್ಯೇರಂಶ್ಚ ಕುರವೋ ಮೃತ್ಯುಪಾಶಾತ್||

ಪಾಂಡವರ ಒಳಿತಿಗೆ ಕಡಿಮೆಮಾಡದೇ ಕುರುಗಳಲ್ಲಿ ಶಾಂತಿಯನ್ನು ತಂದೆನೆಂದಾದರೆ ಕುರುಗಳನ್ನು ಮೃತ್ಯುಪಾಶದಿಂದ ಬಿಡುಗಡೆಮಾಡಿದ ಮಹಾ ಅರ್ಥವೂ, ಸಚ್ಚಾರಿತ್ರ್ಯವೂ, ಪುಣ್ಯವೂ ನನ್ನದಾಗುತ್ತದೆ.

05091020a ಅಪಿ ವಾಚಂ ಭಾಷಮಾಣಸ್ಯ ಕಾವ್ಯಾಂ

         ಧರ್ಮಾರಾಮಾಮರ್ಥವತೀಮಹಿಂಸ್ರಾಂ|

05091020c ಅವೇಕ್ಷೇರನ್ಧಾರ್ತರಾಷ್ಟ್ರಾಃ ಸಮರ್ಥಾಂ

         ಮಾಂ ಚ ಪ್ರಾಪ್ತಂ ಕುರವಃ ಪೂಜಯೇಯುಃ||

ನಾನು ಹೇಳುವ ಕಾವ್ಯ, ಧರ್ಮ, ಅರ್ಥವತ್ತಾದ, ಅಹಿಂಸೆಯ ಮಾತುಗಳನ್ನು ಧಾರ್ತರಾಷ್ಟ್ರರು ಕೇಳಿ ಆಲೋಚಿಸಲು ಸಮರ್ಥರಾದರೆ, ಕುರುಗಳೂ ಕೂಡ ನನ್ನನ್ನು ಪೂಜಿಸುತ್ತಾರೆ.

05091021a ನ ಚಾಪಿ ಮಮ ಪರ್ಯಾಪ್ತಾಃ ಸಹಿತಾಃ ಸರ್ವಪಾರ್ಥಿವಾಃ|

05091021c ಕ್ರುದ್ಧಸ್ಯ ಪ್ರಮುಖೇ ಸ್ಥಾತುಂ ಸಿಂಹಸ್ಯೇವೇತರೇ ಮೃಗಾಃ||

ಬದಲಾಗಿ ಅವರು ನನ್ನ ಮೇಲೆ ಆಕ್ರಮಣ ಮಾಡಿದರೆ ಅಲ್ಲಿ ಸೇರಿದ ಪಾರ್ಥಿವರೆಲ್ಲರೂ ಕುಪಿತ ಸಿಂಹದ ಎದಿರು ನಿಲ್ಲಲಾರದ ಮೃಗಗಳಂತೆ ಆಗುತ್ತಾರೆ!””

05091022 ವೈಶಂಪಾಯನ ಉವಾಚ|

05091022a ಇತ್ಯೇವಮುಕ್ತ್ವಾ ವಚನಂ ವೃಷ್ಣೀನಾಮೃಷಭಸ್ತದಾ|

05091022c ಶಯನೇ ಸುಖಸಂಸ್ಪರ್ಶೇ ಶಿಶ್ಯೇ ಯದುಸುಖಾವಹಃ||

ವೈಶಂಪಾಯನನು ಹೇಳಿದನು: “ವೃಷ್ಣಿಗಳ ವೃಷಭನು ಹೀಗೆ ಹೇಳಿ ಹಾಸಿಗೆಯ ಸುಖಸಂಸ್ಪರ್ಷದಲ್ಲಿ ಸುಖವಾದ ನಿದ್ದೆಯನ್ನು ಮಾಡಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣವಾಕ್ಯೇ ಏಕನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣವಾಕ್ಯ ಎನ್ನುವ ತೊಂಭತ್ತೊಂದನೆಯ ಅಧ್ಯಾಯವು.

Related image

Comments are closed.