Udyoga Parva: Chapter 124

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೪

ಭೀಷ್ಮ-ದ್ರೋಣರು ಪುನಃ ಅವಿಧೇಯ ದುರ್ಯೋಧನನಿಗೆ ವೈಷಮ್ಯವನ್ನು ಮುಗಿಸೆಂದು ಹೇಳಿದುದು (೧-೧೮).

05124001 ವೈಶಂಪಾಯನ ಉವಾಚ|

05124001a ಧೃತರಾಷ್ಟ್ರವಚಃ ಶ್ರುತ್ವಾ ಭೀಷ್ಮದ್ರೋಣೌ ಸಮರ್ಥ್ಯ ತೌ|

05124001c ದುರ್ಯೋಧನಮಿದಂ ವಾಕ್ಯಮೂಚತುಃ ಶಾಸನಾತಿಗಂ||

ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಮಾತನ್ನು ಕೇಳಿ ಸಮರ್ಥರಾದ ಭೀಷ್ಮ-ದ್ರೋಣರು ಅವಿಧೇಯ ದುರ್ಯೋಧನನಿಗೆ ಈ ಮಾತನ್ನು ಆಡಿದರು:

05124002a ಯಾವತ್ಕೃಷ್ಣಾವಸಮ್ನದ್ಧೌ ಯಾವತ್ತಿಷ್ಠತಿ ಗಾಂಡಿವಂ|

05124002c ಯಾವದ್ಧೌಮ್ಯೋ ನ ಸೇನಾಗ್ನೌ ಜುಹೋತೀಹ ದ್ವಿಷದ್ಬಲಂ||

05124003a ಯಾವನ್ನ ಪ್ರೇಕ್ಷತೇ ಕ್ರುದ್ಧಃ ಸೇನಾಂ ತವ ಯುಧಿಷ್ಠಿರಃ|

05124003c ಹ್ರೀನಿಷೇಧೋ ಮಹೇಷ್ವಾಸಸ್ತಾವಚ್ಚಾಮ್ಯತು ವೈಶಸಂ||

“ಇನ್ನೂ ಕೃಷ್ಣರಿಬ್ಬರು ಸನ್ನದ್ಧರಾಗಿಲ್ಲ. ಇನ್ನೂ ಗಾಂಡೀವವನ್ನು ಎತ್ತಿ ಹಿಡಿದಿಲ್ಲ. ಶತ್ರುಗಳ ಬಲನಾಶನಕ್ಕೆ ಧೌಮ್ಯನು ಇನ್ನೂ ಅಗ್ನಿಯಲ್ಲಿ ಆಹುತಿಗಳನ್ನು ಹಾಕಿಲ್ಲ. ವಿನಯತೆಯನ್ನು ಆಭರಣವನ್ನಾಗಿಸಿಕೊಂಡಿರುವ ಮಹೇಷ್ವಾಸ ಯುಧಿಷ್ಠಿರನು ಇನ್ನೂ ಕೃದ್ಧನಾಗಿ ನಿನ್ನ ಸೇನೆಯನ್ನು ನೋಡುತ್ತಿಲ್ಲ. ಆದುದರಿಂದ ವೈಶಮ್ಯವು ಈಗಲೇ ಮುಗಿಯಲಿ.

05124004a ಯಾವನ್ನ ದೃಷ್ಯತೇ ಪಾರ್ಥಃ ಸ್ವೇಷ್ವನೀಕೇಷ್ವವಸ್ಥಿತಃ|

05124004c ಭೀಮಸೇನೋ ಮಹೇಷ್ವಾಸಸ್ತಾವಚ್ಚಾಮ್ಯತು ವೈಶಸಂ||

ಇದೂವರೆಗೆ ಪಾರ್ಥ ಮಹೇಷ್ವಾಸ ಭೀಮಸೇನನು ತನ್ನ ಸೇನೆಯ ಕೇಂದ್ರಸ್ಥಾನದಲ್ಲಿ ನಿಂತಿಲ್ಲ. ಆದುದರಿಂದ ವೈಶಮ್ಯವು ಈಗಲೇ ಮುಗಿಯಲಿ.

05124005a ಯಾವನ್ನ ಚರತೇ ಮಾರ್ಗಾನ್ಪೃತನಾಮಭಿಹರ್ಷಯನ್|

05124005c ಯಾವನ್ನ ಶಾತಯತ್ಯಾಜೌ ಶಿರಾಂಸಿ ಗಜಯೋಧಿನಾಂ||

05124006a ಗದಯಾ ವೀರಘಾತಿನ್ಯಾ ಫಲಾನೀವ ವನಸ್ಪತೇಃ|

05124006c ಕಾಲೇನ ಪರಿಪಕ್ವಾನಿ ತಾವಚ್ಚಾಮ್ಯತು ವೈಶಸಂ||

ಇನ್ನೂ ಅವನು ಮಾರ್ಗದಲ್ಲಿ ಸಂಚರಿಸುತ್ತಾ ತನ್ನ ಸೇನೆಯನ್ನು ಹರ್ಷಗೊಳಿಸುತ್ತಿಲ್ಲ. ಇನ್ನೂ ಅವನು ಆನೆಯ ಮೇಲೆ ಕುಳಿತ ಯೋದ್ಧರ ತಲೆಯನ್ನು ವೀರಘಾತಿ ಗದೆಯಿಂದ ಪರಿಪಕ್ವವಾದ ವನಸ್ಪತಿಯ ಫಲಗಳನ್ನು ಕಾಲಬಂದಾಗ ಕತ್ತರಿಸುವಂತೆ ಮಾಡುತ್ತಿಲ್ಲ. ಆದುದರಿಂದ ಈಗಲೇ ಈ ವೈಷಮ್ಯವು ಮುಗಿಯಲಿ.

05124007a ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

05124007c ವಿರಾಟಶ್ಚ ಶಿಖಂಡೀ ಚ ಶೈಶುಪಾಲಿಶ್ಚ ದಂಶಿತಾಃ||

05124008a ಯಾವನ್ನ ಪ್ರವಿಶಂತ್ಯೇತೇ ನಕ್ರಾ ಇವ ಮಹಾರ್ಣವಂ|

05124008c ಕೃತಾಸ್ತ್ರಾಃ ಕ್ಷಿಪ್ರಮಸ್ಯಂತಸ್ತಾವಚ್ಚಾಮ್ಯತು ವೈಶಸಂ||

ನಕುಲ-ಸಹದೇವರು, ಪಾರ್ಷತ ಧೃಷ್ಟದ್ಯುಮ್ನ, ವಿರಾಟ, ಶಿಖಂಡಿ, ಕೋಪಗೊಂಡಿರುವ ಶಿಶುಪಾಲನ ಮಗ ಮೊದಲಾದ ಕೃತಾಸ್ತ್ರರು, ಕ್ಷಿಪ್ರವಾಗಿ ಬಾಣಪ್ರಯೋಗಿಸುವವರು, ಮೊಸಳೆಗಳು ಸಾಗರದ ಮೇಲೆ ಹೇಗೋ ಹಾಗೆ ಆಕ್ರಮಣವನ್ನು ಮಾಡುವುದರ ಮೊದಲೇ ಈ ವೈಶಮ್ಯವು ಕೊನೆಗೊಳ್ಳಲಿ.

05124009a ಯಾವನ್ನ ಸುಕುಮಾರೇಷು ಶರೀರೇಷು ಮಹೀಕ್ಷಿತಾಂ|

05124009c ಗಾರ್ಧ್ರಪತ್ರಾಃ ಪತಂತ್ಯುಗ್ರಾಸ್ತಾವಚ್ಚಾಮ್ಯತು ವೈಶಸಂ||

ಹದ್ದಿನ ಗರಿಯ ಬಾಣಗಳು ಮಹೀಕ್ಷಿತರ ಸುಕುಮಾರ ಶರೀರಗಳಿಗೆ ಹೊಗುವ ಮೊದಲು ಈ ವೈರವು ಕೊನೆಗೊಳ್ಳಲಿ.

05124010a ಚಂದನಾಗರುದಿಗ್ಧೇಷು ಹಾರನಿಷ್ಕಧರೇಷು ಚ|

05124010c ನೋರಃಸ್ಸು ಯಾವದ್ಯೋಧಾನಾಂ ಮಹೇಷ್ವಾಸೈರ್ಮಹೇಷವಃ||

05124011a ಕೃತಾಸ್ತ್ರೈಃ ಕ್ಷಿಪ್ರಮಸ್ಯದ್ಭಿರ್ದೂರಪಾತಿಭಿರಾಯಸಾಃ|

05124011c ಅಭಿಲಕ್ಷ್ಯೈರ್ನಿಪಾತ್ಯಂತೇ ತಾವಚ್ಚಾಮ್ಯತು ವೈಶಸಂ||

ಚಂದನ ಅಗರುಗಳನ್ನು ಬಳಿದುಕೊಂಡ, ಹಾರ ಮತ್ತು ಚಿನ್ನದ ಕವಚಗಳನ್ನು ಧರಿಸಿರುವ ನಮ್ಮ ಯೋದ್ಧರ ಎದೆಗಳನ್ನು ಮಹೇಷ್ವಾಸ, ಕೃತಾಸ್ತ್ರರಾದವರು ಕ್ಷಿಪ್ರವಾಗಿ ಬಹುದೂರದಿಂದ ಪ್ರಯೋಗಿಸಿದ ಉಕ್ಕಿನ ಬಾಣಗಳು ತಾಗಿ ಬೀಳುವುದಕ್ಕಿಂತ ಮೊದಲೇ ಈ ವೈಶಮ್ಯವು ಮುಗಿಯಲಿ.

05124012a ಅಭಿವಾದಯಮಾನಂ ತ್ವಾಂ ಶಿರಸಾ ರಾಜಕುಂಜರಃ|

05124012c ಪಾಣಿಭ್ಯಾಂ ಪ್ರತಿಗೃಹ್ಣಾತು ಧರ್ಮರಾಜೋ ಯುಧಿಷ್ಠಿರಃ||

ಶಿರದಿಂದ ಅಭಿವಾದಿಸುವ ನಿನ್ನನ್ನು ಆ ರಾಜಕುಂಜರ ಧರ್ಮರಾಜ ಯುಧಿಷ್ಠಿರನು ತನ್ನ ಎರಡೂ ಕೈಗಳಿಂದ ಮೇಲೆತ್ತಿ ಸ್ವೀಕರಿಸಲಿ.

05124013a ಧ್ವಜಾಂಕುಶಪತಾಕಾಂಕಂ ದಕ್ಷಿಣಂ ತೇ ಸುದಕ್ಷಿಣಃ|

05124013c ಸ್ಕಂಧೇ ನಿಕ್ಷಿಪತಾಂ ಬಾಹುಂ ಶಾಂತಯೇ ಭರತರ್ಷಭ||

ಭರತರ್ಷಭ! ಶಾಂತಿಯ ಗುರುತಾಗಿ ಅವನು ತನ್ನ ಸುದಕ್ಷಿಣ, ಧ್ವಜ-ಅಂಕುಶ-ಪತಾಕೆಗಳ ಗುರುತಿರುವ ಬಲಗೈಯನ್ನು ನಿನ್ನ ಬಾಹುಗಳ ಮೇಲಿರಿಸಲಿ.

05124014a ರತ್ನೌಷಧಿಸಮೇತೇನ ರತ್ನಾಂಗುಲಿತಲೇನ ಚ|

05124014c ಉಪವಿಷ್ಟಸ್ಯ ಪೃಷ್ಠಂ ತೇ ಪಾಣಿನಾ ಪರಿಮಾರ್ಜತು||

ನೀನು ಕುಳಿತಿರುವಾಗ ಅವನು ರತ್ನೌಷಧಿಗಳಿಂದ ಕೂಡಿದ ರತ್ನಾಂಗುಲಿತ ಕೈಗಳಿಂದ ನಿನ್ನ ಬೆನ್ನನ್ನು ತಟ್ಟಲಿ.

05124015a ಶಾಲಸ್ಕಂಧೋ ಮಹಾಬಾಹುಸ್ತ್ವಾಂ ಸ್ವಜಾನೋ ವೃಕೋದರಃ|

05124015c ಸಾಮ್ನಾಭಿವದತಾಂ ಚಾಪಿ ಶಾಂತಯೇ ಭರತರ್ಷಭ||

ಭರತರ್ಷಭ! ಆ ಶಾಲಸ್ಕಂಧ, ಮಹಾಬಾಹು ವೃಕೋದರನು ಶಾಂತಿಯಿಂದ ನಿನ್ನನ್ನು ಅಪ್ಪಿಕೊಂಡು ಸಾಮದಿಂದ ಅಭಿನಂದಿಸಲಿ.

05124016a ಅರ್ಜುನೇನ ಯಮಾಭ್ಯಾಂ ಚ ತ್ರಿಭಿಸ್ತೈರಭಿವಾದಿತಃ|

05124016c ಮೂರ್ಧ್ನಿ ತಾನ್ಸಮುಪಾಘ್ರಾಯ ಪ್ರೇಮ್ಣಾಭಿವದ ಪಾರ್ಥಿವ||

ಪಾರ್ಥಿವ! ಅರ್ಜುನ ಮತ್ತು ಯಮಳರು ಈ ಮೂವರೂ ನಿನಗೆ ವಂದಿಸಲು ನೀನು ಅವರ ನೆತ್ತಿಯನ್ನು ಆಘ್ರಾಣಿಸಿ ಪ್ರೇಮದಿಂದ ಅಭಿನಂದಿಸು.

05124017a ದೃಷ್ಟ್ವಾ ತ್ವಾಂ ಪಾಂಡವೈರ್ವೀರೈರ್ಭ್ರಾತೃಭಿಃ ಸಹ ಸಂಗತಂ|

05124017c ಯಾವದಾನಂದಜಾಶ್ರೂಣಿ ಪ್ರಮುಂಚಂತು ನರಾಧಿಪಾಃ||

ನೀನು ವೀರ ಸಹೋದರ ಪಾಂಡವರೊಂದಿಗೆ ಸೇರಿಕೊಂಡಿದ್ದುದನ್ನು ನೋಡಿ ನರಾಧಿಪರು ಆನಂದ ಬಾಷ್ಪಗಳನ್ನು ಸುರಿಸಲಿ.

05124018a ಘುಷ್ಯತಾಂ ರಾಜಧಾನೀಷು ಸರ್ವಸಂಪನ್ಮಹೀಕ್ಷಿತಾಂ|

05124018c ಪೃಥಿವೀ ಭ್ರಾತೃಭಾವೇನ ಭುಜ್ಯತಾಂ ವಿಜ್ವರೋ ಭವ||

ರಾಜಧಾನಿಗಳಲ್ಲಿ ಘೋಷಿಸಲ್ಪಡಲಿ. ಮಹೀಕ್ಷಿತರು ಸರ್ವಸಂಪನ್ನರಾಗಿ ಆನಂದಿಸಲಿ. ಭ್ರಾತೃಭಾವದಿಂದ ಪೃಥ್ವಿಯನ್ನು ಭೋಗಿಸಲಿ. ವಿಜ್ವರನಾಗು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮದ್ರೋಣವಾಕ್ಯೇ ಚತುರ್ವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನೂರಾಇಪ್ಪತ್ನಾಲ್ಕನೆಯ ಅಧ್ಯಾಯವು.

Image result for indian motifs

Comments are closed.