Udyoga Parva: Chapter 118

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೮

ಯಯಾತಿಯು ಸ್ವಯಂವರಕ್ಕೆಂದು ಮಗಳನ್ನು ತಪೋವನವೊಂದಕ್ಕೆ ಕರೆತರಲು ಮಾಧವಿಯು ವನವನ್ನೇ ವರನನ್ನಾಗಿ ವರಿಸಿ ವನಗಳಲ್ಲಿ ಹರಿಣಗಳೊಡನೆ ಜಿಂಕೆಯಂತೆಯೇ ಸಂಚರಿಸಿಕೊಂಡು, ವಿಪುಲ ಧರ್ಮ ಮತ್ತು ಬ್ರಹ್ಮಚರ್ಯದಿಂದ ಮೃಗಚಾರಿಣಿಯ ಜೀವನವನ್ನು ನಡೆಸಿದುದು (೧-೧೧). ಬಹುಸಹಸ್ರವರ್ಷಗಳ ನಂತರ ಸ್ವರ್ಗವನ್ನು ಸೇರಿದ್ದ ಯಯಾತಿಯು ಎಲ್ಲ ನರರನ್ನೂ, ದೇವತೆಗಳನ್ನೂ, ಋಷಿಗಣಗಳನ್ನೂ ಅಪಮಾನಿಸಿದುದರ ಪರಿಣಾಮದಿಂದ ಓಜಸ್ಸಿಲ್ಲದವನಾದುದು (೧೨-೨೨).

05118001 ನಾರದ ಉವಾಚ|

05118001a ಸ ತು ರಾಜಾ ಪುನಸ್ತಸ್ಯಾಃ ಕರ್ತುಕಾಮಃ ಸ್ವಯಂವರಂ|

05118001c ಉಪಗಮ್ಯಾಶ್ರಮಪದಂ ಗಂಗಾಯಮುನಸಂಗಮೇ||

05118002a ಗೃಹೀತಮಾಲ್ಯದಾಮಾಂ ತಾಂ ರಥಮಾರೋಪ್ಯ ಮಾಧವೀಂ|

05118002c ಪೂರುರ್ಯದುಶ್ಚ ಭಗಿನೀಮಾಶ್ರಮೇ ಪರ್ಯಧಾವತಾಂ||

ನಾರದನು ಹೇಳಿದನು: “ಅನಂತರ ರಾಜನು ಪುನಃ ಅವಳ ಸ್ವಯಂವರವನ್ನು ಮಾಡಲು ಬಯಸಿ ಮಾಧವಿಯನ್ನು ಮಾಲೆ-ಗೆಜ್ಜೆಗಳಿಂದ ಅಲಂಕರಿಸಿ, ರಥದಲ್ಲಿ ಕುಳ್ಳಿರಿಸಿಕೊಂಡು, ಗಂಗಾ-ಯಮುನಾ ಸಂಗಮದಲ್ಲಿ ಒಂದು ಆಶ್ರಮಪದವನ್ನು ತಲುಪಿದನು. ಪುರು-ಯದುಗಳೀರ್ವರೂ ಆಶ್ರಮಕ್ಕೆ ತಂಗಿಯನ್ನು ಹಿಂಬಾಲಿಸಿದರು.

05118003a ನಾಗಯಕ್ಷಮನುಷ್ಯಾಣಾಂ ಪತತ್ರಿಮೃಗಪಕ್ಷಿಣಾಂ|

05118003c ಶೈಲದ್ರುಮವನೌಕಾನಾಮಾಸೀತ್ತತ್ರ ಸಮಾಗಮಃ||

ಅಲ್ಲಿ ನಾಗ, ಯಕ್ಷ, ಮನುಷ್ಯ, ಪಕ್ಷಿ, ಜಿಂಕೆಗಳು, ಶೈಲ, ದ್ರುಮ, ವನೌಕಸರ ಸಮಾಗಮವಾಗಿತ್ತು.

05118004a ನಾನಾಪುರುಷದೇಶಾನಾಮೀಶ್ವರೈಶ್ಚ ಸಮಾಕುಲಂ|

05118004c ಋಷಿಭಿರ್ಬ್ರಹ್ಮಕಲ್ಪೈಶ್ಚ ಸಮಂತಾದಾವೃತಂ ವನಂ||

ಆ ವನವು ನಾನಾ ಪುರುಷರ ಮತ್ತು ದೇಶಗಳ ರಾಜರುಗಳಿಂದ ತುಂಬಿಹೋಗಿತ್ತು. ಬ್ರಹ್ಮಕಲ್ಪ ಋಷಿಗಳೂ ಅಲ್ಲಿ ಸೇರಿದ್ದರು.

05118005a ನಿರ್ದಿಶ್ಯಮಾನೇಷು ತು ಸಾ ವರೇಷು ವರವರ್ಣಿನೀ|

05118005c ವರಾನುತ್ಕ್ರಮ್ಯ ಸರ್ವಾಂಸ್ತಾನ್ವನಂ ವೃತವತೀ ವರಂ||

ಆ ಎಲ್ಲ ವರರನ್ನೂ ಪರಿಚಯಿಸಿದ ನಂತರ ಆ ವರವರ್ಣಿನಿಯು ವರರೆಲ್ಲರನ್ನೂ ದಾಟಿ ವನವನ್ನು ವರನನ್ನಾಗಿ ವರಿಸಿದಳು.

05118006a ಅವತೀರ್ಯ ರಥಾತ್ಕನ್ಯಾ ನಮಸ್ಕೃತ್ವಾ ಚ ಬಂಧುಷು|

05118006c ಉಪಗಮ್ಯ ವನಂ ಪುಣ್ಯಂ ತಪಸ್ತೇಪೇ ಯಯಾತಿಜಾ||

ಯಯಾತಿಯ ಮಗಳು ಕನ್ಯೆಯು ರಥದಿಂದಿಳಿದು, ಬಂಧುಗಳಿಗೆ ನಮಸ್ಕರಿಸಿ ಪುಣ್ಯ ವನಕ್ಕೆ ತೆರಳಿ ತಪಸ್ಸನ್ನು ತಪಿಸಿದಳು.

05118007a ಉಪವಾಸೈಶ್ಚ ವಿವಿಧೈರ್ದೀಕ್ಷಾಭಿರ್ನಿಯಮೈಸ್ತಥಾ|

05118007c ಆತ್ಮನೋ ಲಘುತಾಂ ಕೃತ್ವಾ ಬಭೂವ ಮೃಗಚಾರಿಣೀ||

ಉಪವಾಸ, ವಿವಿಧ ದೀಕ್ಷಾನಿಯಮಗಳಿಂದ ತನ್ನನ್ನು ಹಗುರವಾಗಿಸಿಕೊಂಡು ಅವಳು ಮೃಗಚಾರಿಣಿಯಾದಳು.

05118008a ವೈಡೂರ್ಯಾಂಕುರಕಲ್ಪಾನಿ ಮೃದೂನಿ ಹರಿತಾನಿ ಚ|

05118008c ಚರಂತೀ ಶಷ್ಪಮುಖ್ಯಾನಿ ತಿಕ್ತಾನಿ ಮಧುರಾಣಿ ಚ||

05118009a ಸ್ರವಂತೀನಾಂ ಚ ಪುಣ್ಯಾನಾಂ ಸುರಸಾನಿ ಶುಚೀನಿ ಚ|

05118009c ಪಿಬಂತೀ ವಾರಿಮುಖ್ಯಾನಿ ಶೀತಾನಿ ವಿಮಲಾನಿ ಚ||

05118010a ವನೇಷು ಮೃಗರಾಜೇಷು ಸಿಂಹವಿಪ್ರೋಷಿತೇಷು ಚ|

05118010c ದಾವಾಗ್ನಿವಿಪ್ರಮುಕ್ತೇಷು ಶೂನ್ಯೇಷು ಗಹನೇಷು ಚ||

05118011a ಚರಂತೀ ಹರಿಣೈಃ ಸಾರ್ಧಂ ಮೃಗೀವ ವನಚಾರಿಣೀ|

05118011c ಚಚಾರ ವಿಪುಲಂ ಧರ್ಮಂ ಬ್ರಹ್ಮಚರ್ಯೇಣ ಸಂವೃತಾ||

ವೈಡೂರ್ಯದಂತಿರುವ ಮೃದುವಾದ ಹಸಿರು, ಚಪ್ಪೆ-ಸಿಹಿಯಾಗಿರುವ ಚಿಗುರುಗಳನ್ನು ಮೇಯುತ್ತಾ; ಹರಿಯುತ್ತಿರುವ ಪುಣ್ಯ, ರುಚಿಕರ, ಶುದ್ಧ ಶೀತ ವಿಮಲ ನದಿಗಳ ನೀರನ್ನು ಕುಡಿಯುತ್ತಾ; ಜಿಂಕೆಯೇ ರಾಜನಾಗಿರುವ, ಸಿಂಹವು ಇಲ್ಲದಿರುವ, ದಾವಾಗ್ನಿಗಳಿಂದ ಮುಕ್ತವಾದ, ಶೂನ್ಯ ಗಹನ ವನಗಳಲ್ಲಿ ಹರಿಣಗಳೊಡನೆ ಜಿಂಕೆಯಂತೆಯೇ ವನದಲ್ಲಿ ಸಂಚರಿಸಿಕೊಂಡು, ವಿಪುಲ ಧರ್ಮ ಮತ್ತು ಬ್ರಹ್ಮಚರ್ಯದಿಂದ ಸಂವೃತಳಾಗಿ ನಡೆದುಕೊಂಡಳು.

05118012a ಯಯಾತಿರಪಿ ಪೂರ್ವೇಷಾಂ ರಾಜ್ಞಾಂ ವೃತ್ತಮನುಷ್ಠಿತಃ|

05118012c ಬಹುವರ್ಷಸಹಸ್ರಾಯುರಯುಜತ್ಕಾಲಧರ್ಮಣಾ||

ಯಯಾತಿಯೂ ಕೂಡ ಹಿಂದಿನ ರಾಜರಂತೆ ನಡೆದುಕೊಂಡು ಬಹಳ ಸಾವಿರ ವರ್ಷಗಳ ನಂತರ ಕಾಲಧರ್ಮಕ್ಕೊಳಗಾದನು.

05118013a ಪೂರುರ್ಯದುಶ್ಚ ದ್ವೌ ವಂಶೌ ವರ್ಧಮಾನೌ ನರೋತ್ತಮೌ|

05118013c ತಾಭ್ಯಾಂ ಪ್ರತಿಷ್ಠಿತೋ ಲೋಕೇ ಪರಲೋಕೇ ಚ ನಾಹುಷಃ||

ನರೋತ್ತಮರಾದ ಪುರು ಮತ್ತು ಯದು ಇಬ್ಬರೂ ಎರಡು ವಂಶಗಳನ್ನು ಬೆಳೆಯಿಸಿ ಈ ಲೋಕ ಮತ್ತು ಪರಲೋಕ ಎರಡರಲ್ಲಿಯೂ ನಾಹುಷನ ಹೆಸರನ್ನು ಪ್ರತಿಷ್ಠಾಪಿಸಿದರು.

05118014a ಮಹೀಯತೇ ನರಪತಿರ್ಯಯಾತಿಃ ಸ್ವರ್ಗಮಾಸ್ಥಿತಃ|

05118014c ಮಹರ್ಷಿಕಲ್ಪೋ ನೃಪತಿಃ ಸ್ವರ್ಗಾಗ್ರ್ಯಫಲಭುಗ್ವಿಭುಃ||

ನರಪತಿ ಯಯಾತಿ ನೃಪತಿ ವಿಭುವು ಸ್ವರ್ಗವನ್ನು ಸೇರಿ ಮಹರ್ಷಿಗಳಂತೆ ಸ್ವರ್ಗದ ಅಗ್ರ ಫಲಗಳನ್ನು ಭೋಗಿಸಿ ಮೆರೆದನು.

05118015a ಬಹುವರ್ಷಸಹಸ್ರಾಖ್ಯೇ ಕಾಲೇ ಬಹುಗುಣೇ ಗತೇ|

05118015c ರಾಜರ್ಷಿಷು ನಿಷಣ್ಣೇಷು ಮಹೀಯಃಸು ಮಹರ್ಷಿಷು||

05118016a ಅವಮೇನೇ ನರಾನ್ಸರ್ವಾನ್ದೇವಾನೃಷಿಗಣಾಂಸ್ತಥಾ|

05118016c ಯಯಾತಿರ್ಮೂಢವಿಜ್ಞಾನೋ ವಿಸ್ಮಯಾವಿಷ್ಟಚೇತನಃ||

ಬಹುವರ್ಷಸಹಸ್ರಗಳು ಬಹುಗುಣಗಳಲ್ಲಿ ಕಳೆಯಲು, ರಾಜರ್ಷಿಗಳು ಮತ್ತು ಮಹರ್ಷಿಗಳೊಂದಿಗೆ ಕುಳಿತುಕೊಂಡಿರುವಾಗ, ಯಯಾತಿಯು ಬುದ್ಧಿಮೂಢನಾಗಿ, ವಿಸ್ಮಯದಿಂದ ಆವೇಶಗೊಂಡು, ಎಲ್ಲ ನರರನ್ನೂ, ದೇವತೆಗಳನ್ನೂ, ಋಷಿಗಣಗಳನ್ನೂ ಅಪಮಾನಿಸಿದನು.

05118017a ತತಸ್ತಂ ಬುಬುಧೇ ದೇವಃ ಶಕ್ರೋ ಬಲನಿಷೂದನಃ|

05118017c ತೇ ಚ ರಾಜರ್ಷಯಃ ಸರ್ವೇ ಧಿಗ್ಧಿಗಿತ್ಯೇವಮಬ್ರುವನ್||

ಅವನನ್ನು ಬಲನಿಷೂದನ ದೇವ ಶಕ್ರನು ಅರ್ಥಮಾಡಿಕೊಂಡನು. ಅವನೂ ಮತ್ತು ರಾಜರ್ಷಿಗಳೆಲ್ಲರೂ “ಧಿಕ್ಕಾರ! ಧಿಕ್ಕಾರ!” ಎಂದು ಹೇಳಿದರು.

05118018a ವಿಚಾರಶ್ಚ ಸಮುತ್ಪನ್ನೋ ನಿರೀಕ್ಷ್ಯ ನಹುಷಾತ್ಮಜಂ|

05118018c ಕೋ ನ್ವಯಂ ಕಸ್ಯ ವಾ ರಾಜ್ಞಾಃ ಕಥಂ ವಾ ಸ್ವರ್ಗಮಾಗತಃ||

ನಹುಷಾತ್ಮಜನನ್ನು ನೋಡಿ ಅವರಲ್ಲಿ ಸಂಶಯವುಂಟಾಯಿತು: “ಇವನು ಯಾರು? ಯಾರ ರಾಜ? ಹೇಗೆ ಸ್ವರ್ಗಕ್ಕೆ ಆಗಮಿಸಿದನು?

05118019a ಕರ್ಮಣಾ ಕೇನ ಸಿದ್ಧೋಽಯಂ ಕ್ವ ವಾನೇನ ತಪಶ್ಚಿತಂ|

05118019c ಕಥಂ ವಾ ಜ್ಞಾಯತೇ ಸ್ವರ್ಗೇ ಕೇನ ವಾ ಜ್ಞಾಯತೇಽಪ್ಯುತ||

ಯಾವ ಕರ್ಮಗಳಿಂದ ಇವನು ಸಿದ್ಧನಾದನು? ಎಲ್ಲಿಂದ ತಪೋಬಲವನ್ನು ಪಡೆದನು? ಸ್ವರ್ಗದಲ್ಲಿ ಇವನು ಹೇಗೆ ಪರಿಚಿತನಾಗಿದ್ದಾನೆ? ಯಾರು ಇವನನ್ನು ಬಲ್ಲರು?”

05118020a ಏವಂ ವಿಚಾರಯಂತಸ್ತೇ ರಾಜಾನಃ ಸ್ವರ್ಗವಾಸಿನಃ|

05118020c ದೃಷ್ಟ್ವಾ ಪಪ್ರಚ್ಚುರನ್ಯೋನ್ಯಂ ಯಯಾತಿಂ ನೃಪತಿಂ ಪ್ರತಿ||

ಹೀಗೆ ಸ್ವರ್ಗವಾಸಿ ರಾಜರು ನೃಪತಿ ಯಯಾತಿಯ ಕಡೆ ನೋಡಿ ಅನ್ಯೋನ್ಯರನ್ನು ಕೇಳಿ ವಿಚಾರಿಸಿದರು.

05118021a ವಿಮಾನಪಾಲಾಃ ಶತಶಃ ಸ್ವರ್ಗದ್ವಾರಾಭಿರಕ್ಷಿಣಃ|

05118021c ಪೃಷ್ಟಾ ಆಸನಪಾಲಾಶ್ಚ ನ ಜಾನೀಮೇತ್ಯಥಾಬ್ರುವನ್||

ನೂರಾರು ವಿಮಾನಪಾಲಕರು, ಸ್ವರ್ಗದ್ವಾರ ರಕ್ಷಕರು, ಮತ್ತು ಆಸನಪಾಲಕರು “ಇವನು ನಮಗೆ ಗೊತ್ತಿಲ್ಲ!” ಎಂದು ಹೇಳಿದರು.

05118022a ಸರ್ವೇ ತೇ ಹ್ಯಾವೃತಜ್ಞಾನಾ ನಾಭ್ಯಜಾನಂತ ತಂ ನೃಪಂ|

05118022c ಸ ಮುಹೂರ್ತಾದಥ ನೃಪೋ ಹತೌಜಾ ಅಭವತ್ತದಾ||

ಅವರೆಲ್ಲರ ಜ್ಞಾನವು ಮಸುಕಾಗಿತ್ತು ಮತ್ತು ಯಾರೂ ಆ ನೃಪನನ್ನು ಗುರುತಿಸಲಿಲ್ಲ. ಮುಹೂರ್ತ ಮಾತ್ರದಲ್ಲಿ ಆ ನೃಪನು ಓಜಸ್ಸಿಲ್ಲದವನಾಗಿಬಿಟ್ಟಿದ್ದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಮೋಹೇ ಅಷ್ಟಾದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಮೋಹದಲ್ಲಿ ನೂರಾಹದಿನೆಂಟನೆಯ ಅಧ್ಯಾಯವು.

Image result for indian motifs"

Comments are closed.