Udyoga Parva: Chapter 113

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೩

ಯಯಾತಿಯು ತನ್ನ ಸಂಪತ್ತು ಕ್ಷೀಣವಾಗಿರುವುದರಿಂದ ಧನವನ್ನು ದಾನಕೊಡಲಿಕ್ಕಾಗುವುದಿಲ್ಲವೆಂದೂ, ಆದರೆ ದೇಹಿ ಎಂದವರಿಗೆ ನಾಸ್ತಿ ಹೇಳಬಾರದೆಂದು ತನ್ನ ಮಗಳನ್ನು ಕೊಡುತ್ತೇನೆಂದೂ, ಕನ್ಯೆ ಮಾಧವಿಯನ್ನು ಗಾಲವನಿಗಿತ್ತುದುದು (೧-೧೪). ಗರುಡನು ಹಿಂದಿರುಗಲು ಗಾಲವನು ಮಾಧವಿಯೊಡನೆ ಅಯೋಧ್ಯೆಯ ಹರ್ಯಶ್ವನ ಬಳಿಬಂದು, “ಶುಲ್ಕವನ್ನಿತ್ತು ಇವಳನ್ನು ಪತ್ನಿಯನ್ನಾಗಿ ಸ್ವೀಕರಿಸು” ಎಂದುದು (೧೫-೨೧).

05113001 ನಾರದ ಉವಾಚ|

05113001a ಏವಮುಕ್ತಃ ಸುಪರ್ಣೇನ ತಥ್ಯಂ ವಚನಮುತ್ತಮಂ|

05113001c ವಿಮೃಶ್ಯಾವಹಿತೋ ರಾಜಾ ನಿಶ್ಚಿತ್ಯ ಚ ಪುನಃ ಪುನಃ||

ನಾರದನು ಹೇಳಿದನು: “ಸುಪರ್ಣನು ಆ ತಥ್ಯವೂ ಉತ್ತಮವೂ ಆದ ಮಾತುಗಳನ್ನಾಡಲು ರಾಜನು ಪುನಃ ಪುನಃ ವಿಮರ್ಷೆ ಮಾಡಿ, ನಿಶ್ಚಯಿಸಿ ಹೇಳಿದನು.

05113002a ಯಷ್ಟಾ ಕ್ರತುಸಹಸ್ರಾಣಾಂ ದಾತಾ ದಾನಪತಿಃ ಪ್ರಭುಃ|

05113002c ಯಯಾತಿರ್ವತ್ಸಕಾಶೀಶ ಇದಂ ವಚನಮಬ್ರವೀತ್||

ನೂರಾರು ಕ್ರತುಗಳನ್ನು ಮಾಡಿದ, ದಾನಿ, ದಾನಪತಿ, ಪ್ರಭು, ವತ್ಸ-ಕಾಶಿಗಳ ಅಧಿಪತಿ, ಯಯಾತಿಯು ಈ ಮಾತುಗಳನ್ನಾಡಿದನು.

05113003a ದೃಷ್ಟ್ವಾ ಪ್ರಿಯಸಖಂ ತಾರ್ಕ್ಷ್ಯಂ ಗಾಲವಂ ಚ ದ್ವಿಜರ್ಷಭಂ|

05113003c ನಿದರ್ಶನಂ ಚ ತಪಸೋ ಭಿಕ್ಷಾಂ ಶ್ಲಾಘ್ಯಾಂ ಚ ಕೀರ್ತಿತಾಂ||

ಪ್ರಿಯಸಖ ತಾರ್ಕ್ಷನನ್ನೂ ದ್ವಿಜರ್ಷಭ ಗಾಲವನನ್ನೂ ನೋಡಿ, ತಪಸ್ಸಿನ ನಿದರ್ಶನವನ್ನೂ ಭಿಕ್ಷೆಯು ತನಗೆ ಶ್ಲಾಘನೀಯವಾದುದು ಮತ್ತು ಕೀರ್ತಿಯನ್ನು ತರುವಂತಹುದು ಎಂದು ಯೋಚಿಸಿದನು.

05113004a ಅತೀತ್ಯ ಚ ನೃಪಾನನ್ಯಾನಾದಿತ್ಯಕುಲಸಂಭವಾನ್|

05113004c ಮತ್ಸಕಾಶಮನುಪ್ರಾಪ್ತಾವೇತೌ ಬುದ್ಧಿಮವೇಕ್ಷ್ಯ ಚ||

“ಇವರಿಬ್ಬರೂ ಅನ್ಯ ಆದಿತ್ಯಕುಲಸಂಭವರನ್ನು ಬಿಟ್ಟು ನನ್ನ ಬಳಿಗೆ ಬಂದಿದ್ದಾರೆ!” ಎಂದು ಮನಸ್ಸಿನಲ್ಲಿಯೇ ಯೋಚಿಸಿದನು.

05113005a ಅದ್ಯ ಮೇ ಸಫಲಂ ಜನ್ಮ ತಾರಿತಂ ಚಾದ್ಯ ಮೇ ಕುಲಂ|

05113005c ಅದ್ಯಾಯಂ ತಾರಿತೋ ದೇಶೋ ಮಮ ತಾರ್ಕ್ಷ್ಯ ತ್ವಯಾನಘ||

“ತಾರ್ಕ್ಷ್ಯ! ಅನಘ! ಇಂದು ನನ್ನ ಜನ್ಮವು ಸಫಲವಾಯಿತು. ಇಂದು ನನ್ನ ಕುಲವು ರಕ್ಷಿಸಲ್ಪಟ್ಟಿತು. ನಿನ್ನಿಂದ ನನ್ನ ಈ ದೇಶವು ಉಳಿದುಕೊಂಡಿತು.

05113006a ವಕ್ತುಮಿಚ್ಚಾಮಿ ತು ಸಖೇ ಯಥಾ ಜಾನಾಸಿ ಮಾಂ ಪುರಾ|

05113006c ನ ತಥಾ ವಿತ್ತವಾನಸ್ಮಿ ಕ್ಷೀಣಂ ವಿತ್ತಂ ಹಿ ಮೇ ಸಖೇ||

ಸಖಾ! ಹಿಂದೆ ನೀನು ನನ್ನನ್ನು ಹೇಗೆ ಅರಿತುಕೊಂಡಿದ್ದೆಯೋ ಹಾಗೆ ನಾನು ಇಂದು ಇಲ್ಲ. ಸಖಾ! ನನ್ನ ಸಂಪತ್ತು ಕ್ಷೀಣಿಸಿದೆ.

05113007a ನ ಚ ಶಕ್ತೋಽಸ್ಮಿ ತೇ ಕರ್ತುಂ ಮೋಘಮಾಗಮನಂ ಖಗ|

05113007c ನ ಚಾಶಾಮಸ್ಯ ವಿಪ್ರರ್ಷೇರ್ವಿತಥಾಂ ಕರ್ತುಮುತ್ಸಹೇ||

ಖಗ! ಆದರೂ ನಿಮ್ಮ ಆಗಮನವು ನಿಷ್ಪಲವನ್ನಾಗಿ ಮಾಡಲು ಶಕ್ತನಿಲ್ಲ. ಈ ವಿಪ್ರರ್ಷಿಯ ಆಶಯವನ್ನೂ ಕುಂಠಿಸಲು ಉತ್ಸುಕನಾಗಿಲ್ಲ.

05113008a ತತ್ತು ದಾಸ್ಯಾಮಿ ಯತ್ಕಾರ್ಯಮಿದಂ ಸಂಪಾದಯಿಷ್ಯತಿ|

05113008c ಅಭಿಗಮ್ಯ ಹತಾಶೋ ಹಿ ನಿವೃತ್ತೋ ದಹತೇ ಕುಲಂ||

ಆದರೂ ನಾನು ಈ ಕಾರ್ಯವನ್ನು ಸಂಪಾದಿಸಬಲ್ಲದುದನ್ನು ಕೊಡುತ್ತೇನೆ. ಏಕೆಂದರೆ ಬಂದೂ ಹತಾಶರಾಗಿ ಹಿಂದಿರುಗುವವರು ಕುಲವನ್ನು ಸುಡುತ್ತಾರೆ.

05113009a ನಾತಃ ಪರಂ ವೈನತೇಯ ಕಿಂ ಚಿತ್ಪಾಪಿಷ್ಠಮುಚ್ಯತೇ|

05113009c ಯಥಾಶಾನಾಶನಂ ಲೋಕೇ ದೇಹಿ ನಾಸ್ತೀತಿ ವಾ ವಚಃ||

ವೈನತೇಯ! ನನ್ನಲ್ಲಿ ಏನೂ ಇಲ್ಲ ಎಂದು ಹೇಳುವುದು ಮತ್ತು ದೇಹಿ ಎಂದವನಿಗೆ ನಾಸ್ತಿ ಎನ್ನುವುದು ಲೋಕದಲ್ಲಿ ಪರಮ ಪಾಪಿಷ್ಠವಾದುದು ಎಂದು ಹೇಳುತ್ತಾರೆ.

05113010a ಹತಾಶೋ ಹ್ಯಕೃತಾರ್ಥಃ ಸನ್ ಹತಃ ಸಂಭಾವಿತೋ ನರ|

05113010c ಹಿನಸ್ತಿ ತಸ್ಯ ಪುತ್ರಾಂಶ್ಚ ಪೌತ್ರಾಂಶ್ಚಾಕುರ್ವತೋಽರ್ಥಿನಾಂ||

ಹತಾಶೆಗೆ, ಅಯಶಸ್ವಿಗೆ ಕಾರಣನಾದ, ಸಂಭವವನ್ನು ಕೊಂದ ನರನ ಪುತ್ರ ಪೌತ್ರರನ್ನು ಯಾಚಿಸಿಬಂದವನು ಸಂಹರಿಸುತ್ತಾನೆ.

05113011a ತಸ್ಮಾಚ್ಚತುರ್ಣಾಂ ವಂಶಾನಾಂ ಸ್ಥಾಪಯಿತ್ರೀ ಸುತಾ ಮಮ|

05113011c ಇಯಂ ಸುರಸುತಪ್ರಖ್ಯಾ ಸರ್ವಧರ್ಮೋಪಚಾಯಿನೀ||

05113012a ಸದಾ ದೇವಮನುಷ್ಯಾಣಾಮಸುರಾಣಾಂ ಚ ಗಾಲವ|

05113012c ಕಾಂಕ್ಷಿತಾ ರೂಪತೋ ಬಾಲಾ ಸುತಾ ಮೇ ಪ್ರತಿಗೃಹ್ಯತಾಂ||

ಗಾಲವ! ಆದುದರಿಂದ ನಾಲ್ಕು ವಂಶಗಳನ್ನು ಸ್ಥಾಪಿಸುವ ಈ ನನ್ನ ಮಗಳನ್ನು, ಸುರಸುತೆಯಂತೆ ಪ್ರಖರಳಾಗಿರುವ, ಸರ್ವಧರ್ಮೋಪಚಾರಿಣಿ, ಸದಾ ದೇವ-ಮನುಷ್ಯ-ಅಸುರರು ಬಯಸುವ, ರೂಪವತಿ, ನನ್ನ ಈ ಬಾಲಕಿ ಮಗಳನ್ನು ಸ್ವೀಕರಿಸಬೇಕು.

05113013a ಅಸ್ಯಾಃ ಶುಲ್ಕಂ ಪ್ರದಾಸ್ಯಂತಿ ನೃಪಾ ರಾಜ್ಯಮಪಿ ಧ್ರುವಂ|

05113013c ಕಿಂ ಪುನಃ ಶ್ಯಾಮಕರ್ಣಾನಾಂ ಹಯಾನಾಂ ದ್ವೇ ಚತುಹ್ಶತೇ||

ಇವಳಿಗೆ ಶುಲ್ಕವಾಗಿ ನೃಪರು ರಾಜ್ಯವನ್ನೇ ನೀಡುವುದು ನಿಶ್ಚಿತ. ಇನ್ನು ಎಂಟುನೂರು ಕಪ್ಪುಕಿವಿಗಳ ಕುದುರೆಗಳೇನು?

05113014a ಸ ಭವಾನ್ಪ್ರತಿಗೃಹ್ಣಾತು ಮಮೇಮಾಂ ಮಾಧವೀಂ ಸುತಾಂ|

05113014c ಅಹಂ ದೌಹಿತ್ರವಾನ್ಸ್ಯಾಂ ವೈ ವರ ಏಷ ಮಮ ಪ್ರಭೋ||

ನನ್ನ ಸುತೆ ಮಾಧವಿಯನ್ನು ನೀವು ಸ್ವೀಕರಿಸಬೇಕು. ಪ್ರಭೋ! ಇವಳಿಂದ ನನಗೆ ಮೊಮ್ಮಗನೋರ್ವನಾಗಲಿ ಎಂದು ಕೇಳಿಕೊಳ್ಳುತ್ತೇನೆ.”

05113015a ಪ್ರತಿಗೃಹ್ಯ ಚ ತಾಂ ಕನ್ಯಾಂ ಗಾಲವಃ ಸಹ ಪಕ್ಷಿಣಾ|

05113015c ಪುನರ್ದ್ರಕ್ಷ್ಯಾವ ಇತ್ಯುಕ್ತ್ವಾ ಪ್ರತಸ್ಥೇ ಸಹ ಕನ್ಯಯಾ||

ಪಕ್ಷಿಯೊಡನೆ ಗಾಲವನು ಆ ಕನ್ಯೆಯನ್ನು ಸ್ವೀಕರಿಸಿ “ಮತ್ತೆ ಕಾಣುತ್ತೇವೆ” ಎಂದು ಹೇಳಿ ಕನ್ಯೆಯೊಡನೆ ಹೊರಟರು.

05113016a ಉಪಲಬ್ಧಮಿದಂ ದ್ವಾರಮಶ್ವಾನಾಮಿತಿ ಚಾಂಡಜಃ|

05113016c ಉಕ್ತ್ವಾ ಗಾಲವಮಾಪೃಚ್ಚ್ಯ ಜಗಾಮ ಭವನಂ ಸ್ವಕಂ||

“ಅಶ್ವಗಳಿಗೆ ದ್ವಾರವಾದ ಇವಳು ಸಿಕ್ಕಿದಳು!” ಎಂದು ಗಾಲವನಿಗೆ ಹೇಳಿ ಅಂಡಜನು ತನ್ನ ಮನೆಗೆ ತೆರಳಿದನು.

05113017a ಗತೇ ಪತಗರಾಜೇ ತು ಗಾಲವಃ ಸಹ ಕನ್ಯಯಾ|

05113017c ಚಿಂತಯಾನಃ ಕ್ಷಮಂ ದಾನೇ ರಾಜ್ಞಾಂ ವೈ ಶುಲ್ಕತೋಽಗಮತ್||

ಪತಗರಾಜನು ಹೊರಟುಹೋಗಲು ಕನ್ಯೆಯೊಡನೆ ಗಾಲವನು ಇವಳಿಗೆ ಶುಲ್ಕವನ್ನು ಕೊಡಬಲ್ಲ ಯಾವ ರಾಜನಿಗೆ ಇವಳನ್ನು ಮಾರಲಿ ಎಂದು ಚಿಂತಿಸಿದನು.

05113018a ಸೋಽಗಚ್ಚನ್ಮನಸೇಕ್ಷ್ವಾಕುಂ ಹರ್ಯಶ್ವಂ ರಾಜಸತ್ತಮಂ|

05113018c ಅಯೋಧ್ಯಾಯಾಂ ಮಹಾವೀರ್ಯಂ ಚತುರಂಗಬಲಾನ್ವಿತಂ||

05113019a ಕೋಶಧಾನ್ಯಬಲೋಪೇತಂ ಪ್ರಿಯಪೌರಂ ದ್ವಿಜಪ್ರಿಯಂ|

05113019c ಪ್ರಜಾಭಿಕಾಮಂ ಶಾಮ್ಯಂತಂ ಕುರ್ವಾಣಂ ತಪ ಉತ್ತಮಂ||

ಅವನ ಮನಸ್ಸು ಇಕ್ಷ್ವಾಕು ರಾಜಸತ್ತಮ ಹರ್ಯಶ್ವನ ಕಡೆ ಹರಿಯಿತು. ಆ ಅಯೋಧ್ಯೆಯ ಮಹಾವೀರ್ಯ, ಚತುರಂಗಬಲಾನ್ವಿತ, ಕೋಶಧಾನ್ಯಬಲೋಪೇತ, ಪುರರ ಪ್ರಿಯ, ದ್ವಿಜರ ಪ್ರಿಯನು ಮಕ್ಕಳನ್ನು ಬಯಸಿ ಶಾಂತಿಯಿಂದ ಉತ್ತಮ ತಪಸ್ಸನ್ನು ನಡೆಸುತ್ತಿದ್ದನು.

05113020a ತಮುಪಾಗಮ್ಯ ವಿಪ್ರಃ ಸ ಹರ್ಯಶ್ವಂ ಗಾಲವೋಽಬ್ರವೀತ್|

05113020c ಕನ್ಯೇಯಂ ಮಮ ರಾಜೇಂದ್ರ ಪ್ರಸವೈಃ ಕುಲವರ್ಧಿನೀ||

ಆ ಹರ್ಯಶ್ವನ ಬಳಿಹೋಗಿ ವಿಪ್ರ ಗಾಲವನು ಹೇಳಿದನು: “ರಾಜೇಂದ್ರ! ನನ್ನ ಈ ಕನ್ಯೆಯು ಪ್ರಸವಿಸಿ ಕುಲವನ್ನು ವೃದ್ಧಿಸುತ್ತಾಳೆ.

05113021a ಇಯಂ ಶುಲ್ಕೇನ ಭಾರ್ಯಾರ್ಥೇ ಹರ್ಯಶ್ವ ಪ್ರತಿಗೃಹ್ಯತಾಂ|

05113021c ಶುಲ್ಕಂ ತೇ ಕೀರ್ತಯಿಷ್ಯಾಮಿ ತಚ್ಚ್ರುತ್ವಾ ಸಂಪ್ರಧಾರ್ಯತಾಂ||

ಹರ್ಯಶ್ವ! ಶುಲ್ಕವನ್ನಿತ್ತು ಇವಳನ್ನು ಪತ್ನಿಯನ್ನಾಗಿ ಸ್ವೀಕರಿಸು. ನಿನಗೆ ಶುಲ್ಕವೇನೆಂದು ಹೇಳುತ್ತೇನೆ. ಅದನ್ನು ಕೇಳಿ ನಿನಗೆ ಏನು ಮಾಡಬೇಕೆಂದು ನಿರ್ಧರಿಸು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ತ್ರಯೋದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿಮೂರನೆಯ ಅಧ್ಯಾಯವು.

Related image

Comments are closed.