Udyoga Parva: Chapter 97

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೭

ನಾರದನು ಮಾತಲಿಗೆ ನಾಗಲೋಕದ ನಾಭಿಸ್ಥಳವಾದ ದೈತ್ಯರ ಪಾತಾಲಪುರವನ್ನು ತೋರಿಸಿದುದು (೧-೨೦).

05097001 ನಾರದ ಉವಾಚ|

05097001a ಏತತ್ತು ನಾಗಲೋಕಸ್ಯ ನಾಭಿಸ್ಥಾನೇ ಸ್ಥಿತಂ ಪುರಂ|

05097001c ಪಾತಾಲಮಿತಿ ವಿಖ್ಯಾತಂ ದೈತ್ಯದಾನವಸೇವಿತಂ||

ನಾರದನು ಹೇಳಿದನು: “ಇಲ್ಲಿ, ನಾಗಲೋಕದ ನಾಭಿಸ್ಥಳದಲ್ಲಿ ಪಾತಾಲವೆಂದು ವಿಖ್ಯಾತ ದೈತ್ಯ-ದಾನವ ಸೇವಿತ ಪುರವಿದೆ.

05097002a ಇದಮದ್ಭಿಃ ಸಮಂ ಪ್ರಾಪ್ತಾ ಯೇ ಕೇ ಚಿದ್ಧ್ರುವಜಂಗಮಾಃ|

05097002c ಪ್ರವಿಶಂತೋ ಮಹಾನಾದಂ ನದಂತಿ ಭಯಪೀಡಿತಾಃ||

ನೀರಿನ ಪ್ರವಾಹದಿಂದ ಎಳೆದು ತರಲ್ಪಟ್ಟ ಭೂಮಿಯ ಜೀವಿಗಳು ಭಯಪೀಡಿತರಾಗಿ ಜೋರಾಗಿ ಚೀರುತ್ತಾ ಇದನ್ನು ಪ್ರವೇಶಿಸುತ್ತವೆ.

05097003a ಅತ್ರಾಸುರೋಽಗ್ನಿಃ ಸತತಂ ದೀಪ್ಯತೇ ವಾರಿಭೋಜನಃ|

05097003c ವ್ಯಾಪಾರೇಣ ಧೃತಾತ್ಮಾನಂ ನಿಬದ್ಧಂ ಸಮಬುಧ್ಯತ||

ನೀರನ್ನೇ ಉಣ್ಣುವ ಅಸುರೋಗ್ನಿಯು ಸತತವೂ ಇಲ್ಲಿ ಉರಿಯುತ್ತಿರುತ್ತದೆ. ಧೃತಾತ್ಮರ ವ್ಯಾಪಾರದಿಂದ ನಿಬದ್ಧವಾಗಿ ಚಲಿಸದೇ ನಿಂತಿದೆ.

05097004a ಅತ್ರಾಮೃತಂ ಸುರೈಃ ಪೀತ್ವಾ ನಿಹಿತಂ ನಿಹತಾರಿಭಿಃ|

05097004c ಅತಃ ಸೋಮಸ್ಯ ಹಾನಿಶ್ಚ ವೃದ್ಧಿಶ್ಚೈವ ಪ್ರದೃಶ್ಯತೇ||

ಇಲ್ಲಿಯೇ ಸುರರು ಶತ್ರುಗಳನ್ನು ಸಂಹರಿಸಿ ಅಮೃತವನ್ನು ಕುಡಿದು, ಉಳಿದುದನ್ನು ಇಟ್ಟರು. ಇಲ್ಲಿಯೇ ಚಂದ್ರನ ಹಾನಿ-ವೃದ್ಧಿಗಳು ತೋರುತ್ತವೆ.

05097005a ಅತ್ರ ದಿವ್ಯಂ ಹಯಶಿರಃ ಕಾಲೇ ಪರ್ವಣಿ ಪರ್ವಣಿ|

05097005c ಉತ್ತಿಷ್ಠತಿ ಸುವರ್ಣಾಭಂ ವಾರ್ಭಿರಾಪೂರಯಂ ಜಗತ್||

ಅಲ್ಲಿಯೇ ದಿವ್ಯ ಹಯಶಿರನು ಪರ್ವ ಪರ್ವಗಳ ಕಾಲಗಳಲ್ಲಿ ಮೇಲೆದ್ದು ಜಗತ್ತನ್ನು ಸುವರ್ಣ ಪ್ರಕಾಶದಿಂದ ಮತ್ತು ವೇದಘೋಷದಿಂದ ತುಂಬಿಸುತ್ತಾನೆ.

05097006a ಯಸ್ಮಾದತ್ರ ಸಮಗ್ರಾಸ್ತಾಃ ಪತಂತಿ ಜಲಮೂರ್ತಯಃ|

05097006c ತಸ್ಮಾತ್ಪಾತಾಲಮಿತ್ಯೇತತ್ಖ್ಯಾಯತೇ ಪುರಮುತ್ತಮಂ||

ಎಲ್ಲ ಜಲಮೂರ್ತಯಗಳು ಇಲ್ಲಿ ನೀರನ್ನು ಸುರಿಸುವುದರಿಂದ ಈ ಉತ್ತಮ ಪುರವನ್ನು ಪಾತಾಲವೆಂದು ಕರೆಯುತ್ತಾರೆ.

05097007a ಐರಾವತೋಽಸ್ಮಾತ್ಸಲಿಲಂ ಗೃಹೀತ್ವಾ ಜಗತೋ ಹಿತಃ|

05097007c ಮೇಘೇಷ್ವಾಮುಂಚತೇ ಶೀತಂ ಯನ್ಮಹೇಂದ್ರಃ ಪ್ರವರ್ಷತಿ||

ಇಲ್ಲಿಂದಲೇ ಜಗತ್ತಿನ ಹಿತಕ್ಕಾಗಿ ಐರಾವತವು ನೀರನ್ನು ಹಿಡಿದು ಮೇಘಗಳ ಮೇಲೆ ಚೆಲ್ಲುತ್ತದೆ. ಅದನ್ನೇ ಮಹೇಂದ್ರನು ಶೀತಲ ಮಳೆಯಾಗಿ ಸುರಿಸುತ್ತಾನೆ.

05097008a ಅತ್ರ ನಾನಾವಿಧಾಕಾರಾಸ್ತಿಮಯೋ ನೈಕರೂಪಿಣಃ|

05097008c ಅಪ್ಸು ಸೋಮಪ್ರಭಾಂ ಪೀತ್ವಾ ವಸಂತಿ ಜಲಚಾರಿಣಃ||

ಅಲ್ಲಿ ನಾನಾ ವಿಧದ, ಆಕಾರದ, ತಿಮಿ ಮೊದಲಾದ ಜಲಚಾರಿಣಿಗಳು ಸೋಮಪ್ರಭೆಯನ್ನು ಕುಡಿದು ನೀರಿನಲ್ಲಿ ವಾಸಿಸುತ್ತವೆ.

05097009a ಅತ್ರ ಸೂರ್ಯಾಂಶುಭಿರ್ಭಿನ್ನಾಃ ಪಾತಾಲತಲಮಾಶ್ರಿತಾಃ|

05097009c ಮೃತಾ ದಿವಸತಃ ಸೂತ ಪುನರ್ಜೀವಂತಿ ತೇ ನಿಶಿ||

ಸೂತ! ಅಲ್ಲಿ ಪಾತಾಲತಲದಲ್ಲಿ ವಾಸಿಸುವವು ಸೂರ್ಯನ ಕಿರಣಗಳಿಂದ ಸೀಳಿ ಹಗಲಿನಲ್ಲಿ ಸಾಯುತ್ತವೆ ಮತ್ತು ಅವು ರಾತ್ರಿಯಲ್ಲಿ ಪುನಃ ಜೀವಿಸುತ್ತವೆ.

05097010a ಉದಯೇ ನಿತ್ಯಶಶ್ಚಾತ್ರ ಚಂದ್ರಮಾ ರಶ್ಮಿಭಿರ್ವೃತಃ|

05097010c ಅಮೃತಂ ಸ್ಪೃಶ್ಯ ಸಂಸ್ಪರ್ಶಾತ್ಸಂಜೀವಯತಿ ದೇಹಿನಃ||

ನಿತ್ಯವೂ ರಾತ್ರಿಯಲ್ಲಿ ಉದಯಿಸುವ ಚಂದ್ರನು ತನ್ನ ರಶ್ಮಿಗಳಿಂದ ಅಮೃತವನ್ನು ಮುಟ್ಟಿ ದೇಹಿಗಳನ್ನು ಮುಟ್ಟಿ ಅವುಗಳನ್ನು ಜೀವಂತಗೊಳಿಸುತ್ತಾನೆ.

05097011a ಅತ್ರ ತೇಽಧರ್ಮನಿರತಾ ಬದ್ಧಾಃ ಕಾಲೇನ ಪೀಡಿತಾಃ|

05097011c ದೈತೇಯಾ ನಿವಸಂತಿ ಸ್ಮ ವಾಸವೇನ ಹೃತಶ್ರಿಯಃ||

ಅಲ್ಲಿ ಅಧರ್ಮನಿರತ ದೈತ್ಯರು ಕಾಲನಿಂದ ಕಟ್ಟಲ್ಪಟ್ಟು ಪೀಡಿತರಾಗಿ, ವಾಸವನಿಂದ ಶ್ರೀಯನ್ನು ಕಳೆದುಕೊಂಡು ವಾಸಿಸುತ್ತಿದ್ದಾರೆ.

05097012a ಅತ್ರ ಭೂತಪತಿರ್ನಾಮ ಸರ್ವಭೂತಮಹೇಶ್ವರಃ|

05097012c ಭೂತಯೇ ಸರ್ವಭೂತಾನಾಮಚರತ್ತಪ ಉತ್ತಮಂ||

ಅಲ್ಲಿ ಸರ್ವಭೂತಮಹೇಶ್ವರ ಭೂತಪತಿಯು ಸರ್ವಭೂತಗಳಿಗಾಗಿ ಉತ್ತಮ ತಪಸ್ಸನ್ನು ತಪಿಸಿದ್ದನು.

05097013a ಅತ್ರ ಗೋವ್ರತಿನೋ ವಿಪ್ರಾಃ ಸ್ವಾಧ್ಯಾಯಾಮ್ನಾಯಕರ್ಶಿತಾಃ|

05097013c ತ್ಯಕ್ತಪ್ರಾಣಾ ಜಿತಸ್ವರ್ಗಾ ನಿವಸಂತಿ ಮಹರ್ಷಯಃ||

ಅಲ್ಲಿ ಸ್ವಾಧ್ಯಾಯದಿಂದ ಬಡಕಲಾಗಿ ಪ್ರಾಣಗಳನ್ನು ತೊರೆದು ಸ್ವರ್ಗಗಳನ್ನು ಗೆದ್ದ ಗೋವ್ರತಿ ವಿಪ್ರ ಮಹರ್ಷಿಗಳು ವಾಸಿಸುತ್ತಾರೆ.

05097014a ಯತ್ರತತ್ರಶಯೋ ನಿತ್ಯಂ ಯೇನಕೇನಚಿದಾಶಿತಃ|

05097014c ಯೇನಕೇನಚಿದಾಚ್ಚನ್ನಃ ಸ ಗೋವ್ರತ ಇಹೋಚ್ಯತೇ||

ಎಲ್ಲಿರುವನೋ ಅಲ್ಲಿಯೇ ನಿತ್ಯವೂ ಮಲಗುವ, ಇತರರು ನೀಡಿದುದನ್ನು ತಿನ್ನುವ, ಇತರರು ನೀಡಿದುದನ್ನು ಉಟ್ಟುಕೊಳ್ಳುವವನನ್ನು ಗೋವ್ರತ ಎಂದು ಹೇಳುತ್ತಾರೆ.

05097015a ಐರಾವತೋ ನಾಗರಾಜೋ ವಾಮನಃ ಕುಮುದೋಽಂಜನಃ|

05097015c ಪ್ರಸೂತಾಃ ಸುಪ್ರತೀಕಸ್ಯ ವಂಶೇ ವಾರಣಸತ್ತಮಾಃ||

ಸುಪ್ರತೀಕನ ವಂಶದಲ್ಲಿ ವಾರಣಸತ್ತಮರಾದ ನಾಗರಾಜ ಐರಾವತ, ವಾಮನ, ಕುಮುದ, ಮತ್ತು ಅಂಜನರು ಜನಿಸಿದರು.

05097016a ಪಶ್ಯ ಯದ್ಯತ್ರ ತೇ ಕಶ್ಚಿದ್ರೋಚತೇ ಗುಣತೋ ವರಃ|

05097016c ವರಯಿಷ್ಯಾವ ತಂ ಗತ್ವಾ ಯತ್ನಮಾಸ್ಥಾಯ ಮಾತಲೇ||

ಮಾತಲೀ! ಇಲ್ಲಿ ಯಾರಾದರೂ ನಿನಗಿಷ್ಟನಾದ ಗುಣವಂತ ವರನಿದ್ದಾನೆಯೋ ನೋಡು. ಅವನಲ್ಲಿಗೆ ಹೋಗಿ ನಿನ್ನ ಮಗಳನ್ನು ವರಿಸುವಂತೆ ಪ್ರಯತ್ನಿಸೋಣ.

05097017a ಅಂಡಮೇತಜ್ಜಲೇ ನ್ಯಸ್ತಂ ದೀಪ್ಯಮಾನಮಿವ ಶ್ರಿಯಾ|

05097017c ಆ ಪ್ರಜಾನಾಂ ನಿಸರ್ಗಾದ್ವೈ ನೋದ್ಭಿದ್ಯತಿ ನ ಸರ್ಪತಿ||

ಈ ನೀರಿನಲ್ಲಿ ಶ್ರೀಯಿಂದ ಬೆಳಗುತ್ತಿರುವ ಅಂಡವನ್ನು ನೋಡು! ಸೃಷ್ಟಿಯ ಸಮಯದಿಂದ ಇದು ಇಲ್ಲಿದೆ. ಒಡೆಯುವುದೂ ಇಲ್ಲ, ಚಲಿಸುವುದೂ ಇಲ್ಲ.

05097018a ನಾಸ್ಯ ಜಾತಿಂ ನಿಸರ್ಗಂ ವಾ ಕಥ್ಯಮಾನಂ ಶೃಣೋಮಿ ವೈ|

05097018c ಪಿತರಂ ಮಾತರಂ ವಾಪಿ ನಾಸ್ಯ ಜಾನಾತಿ ಕಶ್ಚನ||

ಇದರ ಹುಟ್ಟಿನ ಅಥವಾ ಸ್ವಭಾವದ ಕುರಿತು ಮಾತನಾಡಿದ್ದುದನ್ನು ನಾನು ಕೇಳಲಿಲ್ಲ. ಇದರ ತಂದೆ-ತಾಯಿಯರನ್ನು ಕೂಡ ಯಾರೂ ಅರಿಯರು.

05097019a ಅತಃ ಕಿಲ ಮಹಾನಗ್ನಿರಂತಕಾಲೇ ಸಮುತ್ಥಿತಃ|

05097019c ಧಕ್ಷ್ಯತೇ ಮಾತಲೇ ಸರ್ವಂ ತ್ರೈಲೋಕ್ಯಂ ಸಚರಾಚರಂ||

ಮಾತಲೀ! ಅಂತಕಾಲವು ಬಂದಾಗ ಇದರಿಂದ ಮಹಾನ್ ಅಗ್ನಿಯು ಹೊರಹೊಮ್ಮಿ, ಮೂರು ಲೋಕಗಳಲ್ಲಿರುವ ಸರ್ವ ಸಚರಾಚರಗಳನ್ನೂ ಸುಡುತ್ತದೆ ಎಂದು ಕೇಳಿದ್ದೇವೆ.””

05097020 ಕಣ್ವ ಉವಾಚ|

05097020a ಮಾತಲಿಸ್ತ್ವಬ್ರವೀಚ್ಚ್ರುತ್ವಾ ನಾರದಸ್ಯಾಥ ಭಾಷಿತಂ|

05097020c ನ ಮೇಽತ್ರ ರೋಚತೇ ಕಶ್ಚಿದನ್ಯತೋ ವ್ರಜ ಮಾಚಿರಂ||

ಕಣ್ವನು ಹೇಳಿದನು: “ನಾರದನ ಮಾತುಗಳನ್ನು ಕೇಳಿದ ಮಾತಲಿಯು “ಇಲ್ಲಿ ನನಗೆ ಯಾರೂ ಇಷ್ಟವಾಗಲಿಲ್ಲ. ಬೇರೆ ಎಲ್ಲಿಯಾದರೂ ಬೇಗನೇ ಹೋಗೋಣ!” ಎಂದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಸಪ್ತನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೇಳನೆಯ ಅಧ್ಯಾಯವು.

Related image

Comments are closed.