Udyoga Parva: Chapter 120

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೦

ಯಯಾತಿಯು ಗುರುತಿಸಲ್ಪಟ್ಟಕೂಡಲೇ ವಿಗತಜ್ವರನಾಗಿ ತನ್ನ ಮೊಮ್ಮಕ್ಕಳ ಪುಣ್ಯದಿಂದ ಸ್ವರ್ಗವನ್ನು ಪುನಃ ಸೇರಿದುದು (೧-೧೮).

05120001 ನಾರದ ಉವಾಚ|

05120001a ಪ್ರತ್ಯಭಿಜ್ಞಾತಮಾತ್ರೋಽಥ ಸದ್ಭಿಸ್ತೈರ್ನರಪುಂಗವಃ|

05120001c ಯಯಾತಿರ್ದಿವ್ಯಸಂಸ್ಥಾನೋ ಬಭೂವ ವಿಗತಜ್ವರಃ||

ನಾರದನು ಹೇಳಿದನು: “ನರಪುಂಗವ ಯಯಾತಿಯು ಆ ದಿವ್ಯಸಂಸ್ಥಾನದಲ್ಲಿ ಗುರುತಿಸಲ್ಪಟ್ಟ ಕೂಡಲೇ ಅವನು ವಿಗತಜ್ವರನಾದನು.

05120002a ದಿವ್ಯಮಾಲ್ಯಾಂಬರಧರೋ ದಿವ್ಯಾಭರಣಭೂಷಿತಃ|

05120002c ದಿವ್ಯಗಂಧಗುಣೋಪೇತೋ ನ ಪೃಥ್ವೀಮಸ್ಪೃಶತ್ಪದಾ||

ದಿವ್ಯಮಾಲಾಂಬರಧರನಾಗಿ ದಿವ್ಯಾಭರಣಭೂಷಿತನಾಗಿ ದಿವ್ಯಗಂಧಗುಣೋಪೇತನಾಗಿ ಅವನ ಕಾಲುಗಳು ಭೂಮಿಯನ್ನು ಮುಟ್ಟಲಿಲ್ಲ.

05120003a ತತೋ ವಸುಮನಾಃ ಪೂರ್ವಮುಚ್ಚೈರುಚ್ಚಾರಯನ್ವಚಃ|

05120003c ಖ್ಯಾತೋ ದಾನಪತಿರ್ಲೋಕೇ ವ್ಯಾಜಹಾರ ನೃಪಂ ತದಾ||

ಆಗ ಮೊಟ್ಟಮೊದಲು ಲೋಕದಲ್ಲಿ ದಾನಪತಿಯೆಂದು ಖ್ಯಾತನಾದ ವಸುಮನನು ಉಚ್ಚವಾಗಿ ಉಚ್ಚರಿಸಿ ನೃಪನಿಗೆ ಹೇಳಿದನು:

05120004a ಪ್ರಾಪ್ತವಾನಸ್ಮಿ ಯಲ್ಲೋಕೇ ಸರ್ವವರ್ಣೇಷ್ವಗರ್ಹಯಾ|

05120004c ತದಪ್ಯಥ ಚ ದಾಸ್ಯಾಮಿ ತೇನ ಸಂಯುಜ್ಯತಾಂ ಭವಾನ್||

“ಸರ್ವವರ್ಣದವರೊಡನೆ ಅಗರ್ಹದಿಂದ ನಡೆದುಕೊಂಡಿದುದರಿಂದ ಈ ಲೋಕದಲ್ಲಿ ಏನನ್ನು ಸಂಪಾದಿಸಿದ್ದೇನೋ ಅದನ್ನು ನಿನಗೆ ಕೊಟ್ಟು ಸಂಯೋಜಿಸುತ್ತಿದ್ದೇನೆ.

05120005a ಯತ್ಫಲಂ ದಾನಶೀಲಸ್ಯ ಕ್ಷಮಾಶೀಲಸ್ಯ ಯತ್ಫಲಂ|

05120005c ಯಚ್ಚ ಮೇ ಫಲಮಾಧಾನೇ ತೇನ ಸಂಯುಜ್ಯತಾಂ ಭವಾನ್||

ದಾನಶೀಲನಾದುದರಿಂದ ಮತ್ತು ಕ್ಷಮಾಶೀಲನಾದುದರಿಂದ ಏನು ಫಲಗಳನ್ನು ಪಡೆದಿದ್ದೇನೋ ಅವುಗಳನ್ನು ನಿನಗೆ ಕೊಟ್ಟು ಸಂಯೋಜಿಸುತಿದ್ದೇನೆ.”

05120006a ತತಃ ಪ್ರತರ್ದನೋಽಪ್ಯಾಹ ವಾಕ್ಯಂ ಕ್ಷತ್ರಿಯಪುಂಗವಃ|

05120006c ಯಥಾ ಧರ್ಮರತಿರ್ನಿತ್ಯಂ ನಿತ್ಯಂ ಯುದ್ಧಪರಾಯಣಃ||

05120007a ಪ್ರಾಪ್ತವಾನಸ್ಮಿ ಯಲ್ಲೋಕೇ ಕ್ಷತ್ರಧರ್ಮೋದ್ಭವಂ ಯಶಃ|

05120007c ವೀರಶಬ್ದಫಲಂ ಚೈವ ತೇನ ಸಂಯುಜ್ಯತಾಂ ಭವಾನ್||

ಆಗ ಕ್ಷತ್ರಿಯ ಪುಂಗವ ಪ್ರತರ್ದನನು ಹೇಳಿದನು: “ನಿತ್ಯವೂ ಧರ್ಮರತನಾಗಿರುವುದರಿಂದ, ನಿತ್ಯವೂ ಯುದ್ಧಪರಾಯಣನಾಗಿರುವುದರಿಂದ ಈ ಲೋಕದಲ್ಲಿ ಕ್ಷತ್ರಧರ್ಮದಿಂದ ಪಡೆದ ಯಶಸ್ಸು ಮತ್ತು ವೀರಶಬ್ಧಗಳ ಫಲವನ್ನು ಕೊಟ್ಟು ನಿನ್ನನ್ನು ಸಂಯೋಜಿಸುತ್ತಿದ್ದೇನೆ.”

05120008a ಶಿಬಿರೌಶೀನರೋ ಧೀಮಾನುವಾಚ ಮಧುರಾಂ ಗಿರಂ|

05120008c ಯಥಾ ಬಾಲೇಷು ನಾರೀಷು ವೈಹಾರ್ಯೇಷು ತಥೈವ ಚ||

05120009a ಸಂಗರೇಷು ನಿಪಾತೇಷು ತಥಾಪದ್ವ್ಯಸನೇಷು ಚ|

05120009c ಅನೃತಂ ನೋಕ್ತಪೂರ್ವಂ ಮೇ ತೇನ ಸತ್ಯೇನ ಖಂ ವ್ರಜ||

ಧೀಮಂತ ಶಿಬಿ ಔಶೀನರನು ಮಧುರ ಸ್ವರದಲ್ಲಿ ಹೇಳಿದನು: “ಈ ಹಿಂದೆ ಬಾಲಕರಲ್ಲಿಯಾಗಲೀ, ನಾರಿಯರಲ್ಲಿಯಾಗಲೀ, ವ್ಯವಹಾರದಲ್ಲಿಯಾಗಲೀ, ಯುದ್ಧಗಳಲ್ಲಿಯಾಗಲೀ, ಉತ್ಪಾತಗಳಲ್ಲಿಯಾಗಲೀ, ತುರ್ತುಪರಿಸ್ಥಿತಿಗಳಲ್ಲಿಯಾಗಲೀ ಸುಳ್ಳನ್ನು ಹೇಳದೇ ಇದ್ದ ನನ್ನ ಆ ಸತ್ಯದಿಂದ ನೀನು ಆಕಾಶವನ್ನೇರು!

05120010a ಯಥಾ ಪ್ರಾಣಾಂಶ್ಚ ರಾಜ್ಯಂ ಚ ರಾಜನ್ಕರ್ಮ ಸುಖಾನಿ ಚ|

05120010c ತ್ಯಜೇಯಂ ನ ಪುನಃ ಸತ್ಯಂ ತೇನ ಸತ್ಯೇನ ಖಂ ವ್ರಜ||

ರಾಜನ್! ನಾನು ಪ್ರಾಣವನ್ನು, ರಾಜ್ಯವನ್ನು, ಕರ್ಮ-ಸುಖಗಳನ್ನು ತ್ಯಜಿಸಿಯೇನು. ಆದರೆ ಸತ್ಯವನ್ನು  ಬಿಡಲಾರೆ ಎನ್ನುವ ಸತ್ಯದಿಂದ ನೀನು ಆಕಾಶವನ್ನೇರು.

05120011a ಯಥಾ ಸತ್ಯೇನ ಮೇ ಧರ್ಮೋ ಯಥಾ ಸತ್ಯೇನ ಪಾವಕಃ|

05120011c ಪ್ರೀತಃ ಶಕ್ರಶ್ಚ ಸತ್ಯೇನ ತೇನ ಸತ್ಯೇನ ಖಂ ವ್ರಜ||

ನಾನು ಸತ್ಯದಿಂದ ಧರ್ಮನನ್ನು, ಸತ್ಯದಿಂದ ಪಾವಕನನ್ನು, ಸತ್ಯದಿಂದ ಶಕ್ರನನ್ನು ಪ್ರೀತಿಸಿದ್ದರೆ ಆ ಸತ್ಯದಿಂದ ನೀನು ಆಕಾಶವನ್ನೇರು!”

05120012a ಅಷ್ಟಕಸ್ತ್ವಥ ರಾಜರ್ಷಿಃ ಕೌಶಿಕೋ ಮಾಧವೀಸುತಃ|

05120012c ಅನೇಕಶತಯಜ್ವಾನಂ ವಚನಂ ಪ್ರಾಹ ಧರ್ಮವಿತ್||

ಆಗ ರಾಜರ್ಷಿ, ಕೌಶಿಕ, ಮಾಧವೀಸುತ, ಅನೇಕ ನೂರಾರು ಯಜ್ಞಗಳನ್ನು ನಡೆಸಿದ್ದ ಧರ್ಮವಿದು ಅಷ್ಟಕನು ಈ ಮಾತನ್ನು ಹೇಳಿದನು:

05120013a ಶತಶಃ ಪುಂಡರೀಕಾ ಮೇ ಗೋಸವಾಶ್ಚ ಚಿತಾಃ ಪ್ರಭೋ|

05120013c ಕ್ರತವೋ ವಾಜಪೇಯಾಶ್ಚ ತೇಷಾಂ ಫಲಮವಾಪ್ನುಹಿ||

“ಪ್ರಭೋ! ನಾನು ನೂರಾರು ಪಂಡರೀಕ, ಗೋಸವ ಮತ್ತು ವಾಜಪೇಯ ಯಜ್ಞಗಳನ್ನು ಮಾಡಿದ್ದೇನೆ. ಅವುಗಳ ಫಲವನ್ನು ಹೊಂದು.

05120014a ನ ಮೇ ರತ್ನಾನಿ ನ ಧನಂ ನ ತಥಾನ್ಯೇ ಪರಿಚ್ಚದಾಃ|

05120014c ಕ್ರತುಷ್ವನುಪಯುಕ್ತಾನಿ ತೇನ ಸತ್ಯೇನ ಖಂ ವ್ರಜ||

ಕ್ರತುಗಳಲ್ಲಿ ಬಳಸದೇ ಇದ್ದ ರತ್ನಗಳಾಗಲೀ, ಧನವಾಗಲೀ, ಪರಿಚ್ಚದವಾಗಲೀ ನನ್ನಲ್ಲಿ ಇಲ್ಲ ಎನ್ನುವ ಈ ಸತ್ಯದಿಂದ ಆಕಾಶವನ್ನೇರು!”

05120015a ಯಥಾ ಯಥಾ ಹಿ ಜಲ್ಪಂತಿ ದೌಹಿತ್ರಾಸ್ತಂ ನರಾಧಿಪಂ|

05120015c ತಥಾ ತಥಾ ವಸುಮತೀಂ ತ್ಯಕ್ತ್ವಾ ರಾಜಾ ದಿವಂ ಯಯೌ||

ಹೇಗೆ ಮಗಳ ಮಕ್ಕಳು ಹೀಗೆ ಆ ನರಾಧಿಪನಿಗೆ ಮಾತನಾಡುತ್ತಿದ್ದರೋ ಹಾಗೆ ರಾಜನು ವಸುಮತಿಯನ್ನು ಬಿಟ್ಟು ದಿವಕ್ಕೆ ತೆರಳಿದನು.

05120016a ಏವಂ ಸರ್ವೇ ಸಮಸ್ತಾಸ್ತೇ ರಾಜಾನಃ ಸುಕೃತೈಸ್ತದಾ|

05120016c ಯಯಾತಿಂ ಸ್ವರ್ಗತೋ ಭ್ರಷ್ಟಂ ತಾರಯಾಮಾಸುರಂಜಸಾ||

ಈ ರೀತಿ ಸ್ವರ್ಗದಿಂದ ಭ್ರಷ್ಟನಾದ ಯಯಾತಿಯನ್ನು ಆ ಎಲ್ಲ ರಾಜರು ತಮ್ಮ ಸುಕೃತ ತೇಜಸ್ಸುಗಳಿಂದ ಉದ್ಧರಿಸಿದರು.

05120017a ದೌಹಿತ್ರಾಃ ಸ್ವೇನ ಧರ್ಮೇಣ ಯಜ್ಞಾದಾನಕೃತೇನ ವೈ|

05120017c ಚತುರ್ಷು ರಾಜವಂಶೇಷು ಸಂಭೂತಾಃ ಕುಲವರ್ಧನಾಃ|

05120017e ಮಾತಾಮಹಂ ಮಹಾಪ್ರಾಜ್ಞಾಂ ದಿವಮಾರೋಪಯಂತಿ ತೇ||

ನಾಲ್ಕು ರಾಜವಂಶಗಳಲ್ಲಿ ಹುಟ್ಟಿದ ಕುಲವರ್ಧನ ಆ ಮಗಳ ಮಕ್ಕಳು ತಮ್ಮದೇ ಧರ್ಮದಿಂದ, ಯಜ್ಞ ದಾನಗಳನ್ನು ಮಾಡಿದುದರ ಮೂಲಕ ಮಹಾಪ್ರಾಜ್ಞ ಮಾತಾಮಹನನ್ನು ದಿವಕ್ಕೆ ಏರಿಸಿದರು.

05120018 ರಾಜಾನ ಊಚುಃ|

05120018a ರಾಜಧರ್ಮಗುಣೋಪೇತಾಃ ಸರ್ವಧರ್ಮಗುಣಾನ್ವಿತಾಃ|

05120018c ದೌಹಿತ್ರಾಸ್ತೇ ವಯಂ ರಾಜನ್ದಿವಮಾರೋಹ ಪಾರ್ಥಿವಃ||

ರಾಜರು ಹೇಳಿದರು: “ರಾಜನ್! ಪಾರ್ಥಿವ! ರಾಜಧರ್ಮಗುಣೋಪೇತರಾದ, ಸರ್ವಧರ್ಮ ಗುಣಾನ್ವಿತರಾದ ನಿನ್ನ ಮಗಳ ಮಕ್ಕಳಾದ ನಮ್ಮಿಂದ ದಿವವವನ್ನೇರು!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಸ್ವರ್ಗಾರೋಹಣೇ ವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಸ್ವರ್ಗಾರೋಹಣೆಯಲ್ಲಿ ನೂರಾಇಪ್ಪತ್ತನೆಯ ಅಧ್ಯಾಯವು.

Image result for indian motifs

Comments are closed.