Udyoga Parva: Chapter 110

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೦

ಎಲ್ಲಿಗೆ ಹೋಗಲು ಬಯಸುವೆಯೆಂದು ಗರುಡನು ಗಾಲವನಿಗೆ ಕೇಳಲು, ಅವನು ಪೂರ್ವದಿಕ್ಕಿಗೆ ಕೊಂಡೊಯ್ಯಿ ಎಂದು ಹೇಳುವುದು (೧-೪). ಗರುಡನನ್ನೇರಿ ಹೋಗುತ್ತಿರುವಾಗ ಅವನ ವೇಗಕ್ಕೆ ಭಯಪಟ್ಟ ಗಾಲವನು ತಾನು ಕೊಡಬೇಕಾಗಿದ್ದ ಗುರುದಕ್ಷಿಣೆಯ ಕುರಿತೂ, ತಾನು ಯೋಚಿಸುತ್ತಿದ್ದ ಆತ್ಮಹತ್ಯೆಯ ಕುರಿತೂ ಹೇಳಲು ಗರುಡನು ಕುದುರೆಗಳನ್ನು ಪಡೆಯುವ ಮೊದಲು ಋಷಭ ಪರ್ವತದ ಮೇಲೆ ಇಳಿದು ವಿಶ್ರಮಿಸೋಣ ಎಂದುದು (೫-೨೨).

05110001 ಗಾಲವ ಉವಾಚ|

05110001a ಗರುತ್ಮನ್ಭುಜಗೇಂದ್ರಾರೇ ಸುಪರ್ಣ ವಿನತಾತ್ಮಜ|

05110001c ನಯ ಮಾಂ ತಾರ್ಕ್ಷ್ಯ ಪೂರ್ವೇಣ ಯತ್ರ ಧರ್ಮಸ್ಯ ಚಕ್ಷುಷೀ||

ಗಾಲವನು ಹೇಳಿದನು: “ಗುರುತ್ಮನ್! ಭುಜಗೇಂದ್ರಾರೇ! ಸುಪರ್ಣ! ವಿನತಾತ್ಮಜ! ತಾರ್ಕ್ಷ್ಯ! ಎಲ್ಲಿ ಧರ್ಮನ ಎರಡು ಕಣ್ಣುಗಳು ಮೊದಲು ತೆರೆದವೋ ಆ ಪೂರ್ವಕ್ಕೆ ನನ್ನನ್ನು ಕರೆದುಕೊಂಡು ಹೋಗು!

05110002a ಪೂರ್ವಮೇತಾಂ ದಿಶಂ ಗಚ್ಚ ಯಾ ಪೂರ್ವಂ ಪರಿಕೀರ್ತಿತಾ|

05110002c ದೈವತಾನಾಂ ಹಿ ಸಾಂನ್ನಿಧ್ಯಮತ್ರ ಕೀರ್ತಿತವಾನಸಿ||

ನೀನು ಮೊದಲು ವರ್ಣಿಸಿದ ಪೂರ್ವದಿಕ್ಕಿಗೆ ಹೋಗು. ಅಲ್ಲಿ ದೈವತರ ಸಾನ್ನಿಧ್ಯವಿದೆಯೆಂದು ನೀನು ಹೇಳಿದ್ದೀಯೆ.

05110003a ಅತ್ರ ಸತ್ಯಂ ಚ ಧರ್ಮಶ್ಚ ತ್ವಯಾ ಸಮ್ಯಕ್ಪ್ರಕೀರ್ತಿತಃ|

05110003c ಇಚ್ಚೇಯಂ ತು ಸಮಾಗಂತುಂ ಸಮಸ್ತೈರ್ದೈವತೈರಹಂ|

05110003e ಭೂಯಶ್ಚ ತಾನ್ಸುರಾನ್ದ್ರಷ್ಟುಮಿಚ್ಚೇಯಮರುಣಾನುಜ||

ಅಲ್ಲಿ ಸತ್ಯ-ಧರ್ಮಗಳು ನೆಲಸಿವೆಯೆಂದು ನೀನು ಹೇಳಿದ್ದೀಯೆ. ನಾನು ಸಮಸ್ತ ದೇವತೆಗಳನ್ನೂ ಭೇಟಿಯಾಗಲು ಬಯಸುತ್ತೇನೆ. ಅರುಣಾನುಜ! ಆ ಸುರರನ್ನೂ ನೋಡಲು ಬಯಸುತ್ತೇನೆ.””

05110004 ನಾರದ ಉವಾಚ|

05110004a ತಮಾಹ ವಿನತಾಸೂನುರಾರೋಹಸ್ವೇತಿ ವೈ ದ್ವಿಜಂ|

05110004c ಆರುರೋಹಾಥ ಸ ಮುನಿರ್ಗರುಡಂ ಗಾಲವಸ್ತದಾ||

ನಾರದನು ಹೇಳಿದನು: “ವಿನತಾಸೂನುವು “ಏರು” ಎಂದು ದ್ವಿಜನಿಗೆ ಹೇಳಿದನು. ಆಗ ಮುನಿ ಗಾಲವನು ಗರುಡನನ್ನೇರಿದನು.

05110005 ಗಾಲವ ಉವಾಚ|

05110005a ಕ್ರಮಮಾಣಸ್ಯ ತೇ ರೂಪಂ ದೃಶ್ಯತೇ ಪನ್ನಗಾಶನ|

05110005c ಭಾಸ್ಕರಸ್ಯೇವ ಪೂರ್ವಾಹ್ಣೇ ಸಹಸ್ರಾಂಶೋರ್ವಿವಸ್ವತಃ||

ಗಾಲವನು ಹೇಳಿದನು: “ಪನ್ನಗಾಶನ! ಹೋಗುತ್ತಿರುವ ನಿನ್ನ ರೂಪವು ಪೂರ್ವಾಹ್ಣದ ಸಹಸ್ರಾಂಶ, ವಿವಸ್ವತ ಭಾಸ್ಕರನಂತೆ ಕಾಣುತ್ತದೆ.

05110006a ಪಕ್ಷವಾತಪ್ರಣುನ್ನಾನಾಂ ವೃಕ್ಷಾಣಾಮನುಗಾಮಿನಾಂ|

05110006c ಪ್ರಸ್ಥಿತಾನಾಮಿವ ಸಮಂ ಪಶ್ಯಾಮೀಹ ಗತಿಂ ಖಗ||

ಖಗ! ನೀನು ಎಷ್ಟು ವೇಗದಿಂದ ಹೋಗುತ್ತಿದ್ದೀಯೆಂದರೆ ನಿನ್ನ ರೆಕ್ಕೆಗಳ ರಭಸಕ್ಕೆ ಸಿಕ್ಕಿ ಉರುಳಿದ ಮರಗಳು ನಿನ್ನನ್ನೇ ಅನುಸರಿಸಿ ಬರುತ್ತಿರುವುದನ್ನು ನೋಡುತ್ತಿದ್ದೇನೆ.

05110007a ಸಸಾಗರವನಾಮುರ್ವೀಂ ಸಶೈಲವನಕಾನನಾಂ|

05110007c ಆಕರ್ಷನ್ನಿವ ಚಾಭಾಸಿ ಪಕ್ಷವಾತೇನ ಖೇಚರ||

ಖೇಚರ! ನಿನ್ನ ರೆಕ್ಕೆಗಳ ವೇಗದೊಂದಿಗೆ ಈ ಸಾಗರ, ವನ, ಶೈಲ, ಕಾನನಗಳೊಂದಿಗೆ ಇಡೀ ಭೂಮಿಯನ್ನೇ ಎಳೆದುಕೊಂಡು ಹೋಗುತ್ತಿರುವೆಯೋ ಎಂದು ಅನ್ನಿಸುತ್ತಿದೆ.

05110008a ಸಮೀನನಾಗನಕ್ರಂ ಚ ಖಮಿವಾರೋಪ್ಯತೇ ಜಲಂ|

05110008c ವಾಯುನಾ ಚೈವ ಮಹತಾ ಪಕ್ಷವಾತೇನ ಚಾನಿಶಂ||

ನಿನ್ನ ರೆಕ್ಕೆಗಳ ಹೊಡೆತದಿಂದ ಉಂಟಾದ ಭಿರುಗಾಳಿಯು ಮೀನು, ನಾಗ ಮತ್ತು ಮೊಸಳೆಗಳೊಂದಿಗೆ ಸಾಗರವು ಮೇಲುಬ್ಬುತ್ತಿದೆ.

05110009a ತುಲ್ಯರೂಪಾನನಾನ್ಮತ್ಸ್ಯಾಂಸ್ತಿಮಿಮತ್ಸ್ಯಾಂಸ್ತಿಮಿಂಗಿಲಾನ್|

05110009c ನಾಗಾಂಶ್ಚ ನರವಕ್ತ್ರಾಂಶ್ಚ ಪಶ್ಯಾಮ್ಯುನ್ಮಥಿತಾನಿವ||

ಒಂದೇ ರೀತಿಯ ರೂಪವುಳ್ಳ, ಮತ್ಸ್ಯಗಳೂ, ತಿಮಿಂಗಿಲಗಳೂ, ಸರ್ಪಗಳೂ, ಮನುಷ್ಯರ ರೂಪವುಳ್ಳವುಗಳೂ ನಿನ್ನ ರಭಸಕ್ಕೆ ಸಿಲುಕಿ ನಾಶವಾಗುತ್ತಿರುವುದನ್ನು ನೋಡುತ್ತಿದ್ದೇನೆ.

05110010a ಮಹಾರ್ಣವಸ್ಯ ಚ ರವೈಃ ಶ್ರೋತ್ರೇ ಮೇ ಬಧಿರೀಕೃತೇ|

05110010c ನ ಶೃಣೋಮಿ ನ ಪಶ್ಯಾಮಿ ನಾತ್ಮನೋ ವೇದ್ಮಿ ಕಾರಣಂ||

ಕೇಳಿಬರುತ್ತಿರುವ ಸಾಗರದ ಭೋರ್ಗರೆತವು ನನ್ನನ್ನು ಕಿವುಡುಮಾಡುತ್ತಿದೆ. ಕೇಳಲಿಕ್ಕಾಗುತ್ತಿಲ್ಲ. ನೋಡಲಿಕ್ಕಾಗುತ್ತಿಲ್ಲ. ಕಾರಣವು ನನಗೆ ತಿಳಿಯುತ್ತಿಲ್ಲ.

05110011a ಶನೈಃ ಸಾಧು ಭವಾನ್ಯಾತು ಬ್ರಹ್ಮಹತ್ಯಾಮನುಸ್ಮರನ್|

05110011c ನ ದೃಶ್ಯತೇ ರವಿಸ್ತಾತ ನ ದಿಶೋ ನ ಚ ಖಂ ಖಗ||

ಬ್ರಹ್ಮಹತ್ಯೆಯನ್ನು ಸ್ಮರಿಸಿಕೊಂಡು ನೀನು ನಿಧಾನವಾಗಿ ಹೋಗುವುದು ಒಳ್ಳೆಯದು. ಅಯ್ಯಾ ಖಗ! ಸೂರ್ಯ, ದಿಕ್ಕು, ಆಕಾಶವು ಕಾಣುತ್ತಿಲ್ಲ.

05110012a ತಮ ಏವ ತು ಪಶ್ಯಾಮಿ ಶರೀರಂ ತೇ ನ ಲಕ್ಷಯೇ|

05110012c ಮಣೀವ ಜಾತ್ಯೌ ಪಶ್ಯಾಮಿ ಚಕ್ಷುಷೀ ತೇಽಹಮಂಡಜ||

ಕತ್ತಲೆಯೇ ಕಾಣುತ್ತಿದೆ. ನಿನ್ನ ಶರೀರವೂ ಕಾಣುತ್ತಿಲ್ಲ. ಅಂಡಜ! ಮಣಿಗಳಂತೆ ತೋರುವ ನಿನ್ನ ಎರಡು ಕಣ್ಣುಗಳು ಮಾತ್ರ ಕಾಣುತ್ತಿವೆ.

05110013a ಶರೀರೇ ತು ನ ಪಶ್ಯಾಮಿ ತವ ಚೈವಾತ್ಮನಶ್ಚ ಹ|

05110013c ಪದೇ ಪದೇ ತು ಪಶ್ಯಾಮಿ ಸಲಿಲಾದಗ್ನಿಮುತ್ಥಿತಂ||

ನನ್ನ ಅಥವಾ ನಿನ್ನ ಶರೀರಗಳನ್ನು ನಾನು ಕಾಣುತ್ತಿಲ್ಲ. ಪದೇ ಪದೇ ನಿನ್ನ ಸಲಿಲದಿಂದ ಎದ್ದು ಬರುವ ಬೆಂಕಿಯ ಕಿಡಿಗಳನ್ನು ಕಾಣುತ್ತಿದ್ದೇನೆ.

05110014a ಸ ಮೇ ನಿರ್ವಾಪ್ಯ ಸಹಸಾ ಚಕ್ಷುಷೀ ಶಾಮ್ಯತೇ ಪುನಃ|

05110014c ತನ್ನಿವರ್ತ ಮಹಾನ್ಕಾಲೋ ಗಚ್ಚತೋ ವಿನತಾತ್ಮಜ||

ವಿನತಾತ್ಮಜ! ತಕ್ಷಣವೇ ನಿನ್ನ ಈ ಕಣ್ಣುಗಳ ಬೆಳಕನ್ನು ಕಡಿಮೆಮಾಡು. ನಿನ್ನ ಹೋಗುವ ಈ ವೇಗವನ್ನು ಕಡಿಮೆಮಾಡು!

05110015a ನ ಮೇ ಪ್ರಯೋಜನಂ ಕಿಂ ಚಿದ್ಗಮನೇ ಪನ್ನಗಾಶನ|

05110015c ಸಮ್ನಿವರ್ತ ಮಹಾವೇಗ ನ ವೇಗಂ ವಿಷಹಾಮಿ ತೇ||

ಪನ್ನಗಾಶನ! ನಿನ್ನೊಡನೆ ಹೋಗುವುದರ ಪ್ರಯೋಜನವಾದರೂ ಏನು? ನಿನ್ನ ಈ ಮಹಾವೇಗವನ್ನು ಕಡಿಮೆಮಾಡು. ನಿನ್ನ ವೇಗವನ್ನು ಸಹಿಸಲಾರೆ.

05110016a ಗುರವೇ ಸಂಶ್ರುತಾನೀಹ ಶತಾನ್ಯಷ್ಟೌ ಹಿ ವಾಜಿನಾಂ|

05110016c ಏಕತಃಶ್ಯಾಮಕರ್ಣಾನಾಂ ಶುಭ್ರಾಣಾಂ ಚಂದ್ರವರ್ಚಸಾಂ||

ನನ್ನ ಗುರುವಿಗೆ ಚಂದ್ರನ ಮುಖದಂತೆ ಬಿಳಿಯಾಗಿರುವ ಆದರೆ ಒಂದೇ ಕಿವಿಯು ಕಪ್ಪಾಗಿರುವ ಎಂಟುನೂರು ಕುದುರೆಗಳನ್ನು ತಂದು ಕೊಡುತ್ತೇನೆಂದು ಭರವಸೆಯನ್ನಿತ್ತಿದ್ದೇನೆ.

05110017a ತೇಷಾಂ ಚೈವಾಪವರ್ಗಾಯ ಮಾರ್ಗಂ ಪಶ್ಯಾಮಿ ನಾಂಡಜ|

05110017c ತತೋಽಯಂ ಜೀವಿತತ್ಯಾಗೇ ದೃಷ್ಟೋ ಮಾರ್ಗೋ ಮಯಾತ್ಮನಃ||

ಅಂಡಜ! ಅವುಗಳನ್ನು ಒಂದುಗೂಡಿಸುವ ಮಾರ್ಗವನ್ನು ಕಾಣುತ್ತಿಲ್ಲ. ಆದುದರಿಂದಲೇ ನಾನು ಜೀವವನ್ನು ತ್ಯಜಿಸುವ ಮಾರ್ಗವನ್ನು ಕಂಡುಕೊಂಡಿದ್ದೇನೆ.

05110018a ನೈವ ಮೇಽಸ್ತಿ ಧನಂ ಕಿಂ ಚಿನ್ನ ಧನೇನಾನ್ವಿತಃ ಸುಹೃತ್|

05110018c ನ ಚಾರ್ಥೇನಾಪಿ ಮಹತಾ ಶಕ್ಯಮೇತದ್ವ್ಯಪೋಹಿತುಂ||

ನನ್ನಲ್ಲಿ ಧನವಿಲ್ಲ. ಧನಿಕನಾದ ಸ್ನೇಹಿತನೂ ಇಲ್ಲ. ಎಷ್ಟೇ ಧನವಿದ್ದರೂ ನನಗೆ ಬೇಕಾದುದನ್ನು ಕೊಡಲಿಕ್ಕಾಗುವುದಿಲ್ಲ.””

05110019 ನಾರದ ಉವಾಚ|

05110019a ಏವಂ ಬಹು ಚ ದೀನಂ ಚ ಬ್ರುವಾಣಂ ಗಾಲವಂ ತದಾ|

05110019c ಪ್ರತ್ಯುವಾಚ ವ್ರಜನ್ನೇವ ಪ್ರಹಸನ್ವಿನತಾತ್ಮಜಃ||

ನಾರದನು ಹೇಳಿದನು: “ಈ ರೀತಿ ದೀನನಾಗಿ ಬಹುವಿಧದಲ್ಲಿ ಹೇಳುತ್ತಿರುವ ಗಾಲವನಿಗೆ ವಿನತಾತ್ಮಜನು ತನ್ನ ವೇಗವನ್ನು ಕಡಿಮೆಗೊಳಿಸದೇ ನಗುತ್ತಾ ಉತ್ತರಿಸಿದನು.

05110020a ನಾತಿಪ್ರಜ್ಞೋಽಸಿ ವಿಪ್ರರ್ಷೇ ಯೋಽಆತ್ಮಾನಂ ತ್ಯಕ್ತುಮಿಚ್ಚಸಿ|

05110020c ನ ಚಾಪಿ ಕೃತ್ರಿಮಃ ಕಾಲಃ ಕಾಲೋ ಹಿ ಪರಮೇಶ್ವರಃ||

“ವಿಪ್ರರ್ಷೇ! ಜೀವವನ್ನು ತೊರೆಯಲು ಬಯಸುವ ನಿನಗೆ ತಿಳುವಳಿಕೆಯಿಲ್ಲ. ಮೃತ್ಯುವು ಕೃತ್ರಿಮವಾದುದಲ್ಲ. ಕಾಲನೇ ಪರಮೇಶ್ವರ.

05110021a ಕಿಮಹಂ ಪೂರ್ವಮೇವೇಹ ಭವತಾ ನಾಭಿಚೋದಿತಃ|

05110021c ಉಪಾಯೋಽತ್ರ ಮಹಾನಸ್ತಿ ಯೇನೈತದುಪಪದ್ಯತೇ||

ಮೊದಲೇ ನನಗೆ ಏಕೆ ನಿನ್ನ ಉದ್ದೇಶವನ್ನು ಹೇಳಲಿಲ್ಲ? ಇವೆಲ್ಲವುಗಳನ್ನೂ ಪಡೆಯುವುದಕ್ಕೆ ಒಂದು ಮಹಾ ಉಪಾಯವಿದೆ.

05110022a ತದೇಷ ಋಷಭೋ ನಾಮ ಪರ್ವತಃ ಸಾಗರೋರಸಿ|

05110022c ಅತ್ರ ವಿಶ್ರಮ್ಯ ಭುಕ್ತ್ವಾ ಚ ನಿವರ್ತಿಷ್ಯಾವ ಗಾಲವ||

ಗಾಲವ! ಇಲ್ಲಿ ಸಾಗರದ ಬಳಿ ಋಷಭ ಎಂಬ ಹೆಸರಿನ ಪರ್ವತವಿದೆ. ಇಲ್ಲಿ ತಿಂದು ವಿಶ್ರಮಿಸಿ ನಂತರ ಹಿಂದಿರುಗುತ್ತೇನೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹತ್ತನೆಯ ಅಧ್ಯಾಯವು.

Related image

Comments are closed.