Udyoga Parva: Chapter 119

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೯

ಸ್ವರ್ಗದಿಂದ ಭೂಮಿಗೆ ಬೀಳುತ್ತಿದ್ದ ಯಯಾತಿಯು ವನದಲ್ಲಿ ಮಾಧವಿಯ ಮಕ್ಕಳಾದ ಪ್ರತರ್ದನ, ವಸುಮನ, ಶಿಬಿ ಮತ್ತು ಅಷ್ಟಕರು ಯಜ್ಞಮಾಡುತ್ತಿದ್ದಲ್ಲಿ ಬಿದ್ದುದು (೧-೧೪). ಅಲ್ಲಿಗೆ ಬಂದ ಮಾಧವಿ ಮತ್ತು ಗಾಲವರ ತಪಃ ಪ್ರಭಾವದಿಂದ ಮತ್ತು ತನ್ನ ನಾಲ್ವರು ಮೊಮ್ಮಕ್ಕಳ ಪುಣ್ಯದಿಂದ ಯಯಾತಿಯು ಸ್ವರ್ಗವನ್ನು ಪುನಃ ಸೇರಿದುದು (೧೫-೨೮).

Image result for garuda and galava"05119001 ನಾರದ ಉವಾಚ|

05119001a ಅಥ ಪ್ರಚಲಿತಃ ಸ್ಥಾನಾದಾಸನಾಚ್ಚ ಪರಿಚ್ಯುತಃ|

05119001c ಕಂಪಿತೇನೈವ ಮನಸಾ ಧರ್ಷಿತಃ ಶೋಕವಹ್ನಿನಾ||

05119002a ಮ್ಲಾನಸ್ರಗ್ಭ್ರಷ್ಟವಿಜ್ಞಾನಃ ಪ್ರಭ್ರಷ್ಟಮುಕುಟಾಂಗದಃ|

05119002c ವಿಘೂರ್ಣನ್ಸ್ರಸ್ತಸರ್ವಾಂಗಃ ಪ್ರಭ್ರಷ್ಟಾಭರಣಾಂಬರಃ||

05119003a ಅದೃಶ್ಯಮಾನಸ್ತಾನ್ಪಶ್ಯನ್ನಪಶ್ಯಂಶ್ಚ ಪುನಃ ಪುನಃ|

05119003c ಶೂನ್ಯಃ ಶೂನ್ಯೇನ ಮನಸಾ ಪ್ರಪತಿಷ್ಯನ್ಮಹೀತಲಂ||

ನಾರದನು ಹೇಳಿದನು: “ಆಗ ಸ್ಥಾನದಿಂದ ಪ್ರಚಲಿತನಾಗಿ, ಆಸನದಿಂದ ಪರಿಚ್ಯುತನಾಗಿ, ಮನಸ್ಸು ಕಂಪಿಸುತ್ತಿರಲು, ಶೋಕವಹ್ನಿಯಲ್ಲಿ ಬೆಂದು, ಮಾಲೆಯು ಮಸುಕಾಗಿ, ವಿಶೇಷ ಜ್ಞಾನವನ್ನು ಕಳೆದುಕೊಂಡು, ಕಿರೀಟ-ಅಂಗದಗಳನ್ನು ಕಳಚಿಕೊಂಡು, ತಲೆತಿರುಗಿದಂತಾಗಿ, ಕೈಕಾಲುಗಳು ಜೋತುಬಿದ್ದು, ಆಭರಣ-ವಸ್ತ್ರಗಳನ್ನು ಕಳೆದುಕೊಂಡು, ಅದೃಶ್ಯನಾಗಿ, ಇತರರನ್ನು ನೋಡಿಯೂ ನೋಡದಂತೆ, ಶೂನ್ಯಮನಸ್ಸಿನಿಂದ ಶೂನ್ಯನಾಗಿ ಮಹೀತಲಕ್ಕೆ ಬೀಳುತ್ತಿದ್ದನು.

05119004a ಕಿಂ ಮಯಾ ಮನಸಾ ಧ್ಯಾತಮಶುಭಂ ಧರ್ಮದೂಷಣಂ|

05119004c ಯೇನಾಹಂ ಚಲಿತಃ ಸ್ಥಾನಾದಿತಿ ರಾಜಾ ವ್ಯಚಿಂತಯತ್||

“ನನ್ನನ್ನು ಸ್ಥಾನದಿಂದ ಚಲಿಸಬಲ್ಲಂತಹ, ಅಶುಭವೂ ಧರ್ಮದೂಷಣವೂ ಆದ ಯಾವುದನ್ನು ನಾನು ಮನಸ್ಸಿನಲ್ಲಿ ಧ್ಯಾನಿಸಿದೆ?” ಎಂದು ರಾಜನು ಚಿಂತಿಸಿದನು.

05119005a ತೇ ತು ತತ್ರೈವ ರಾಜಾನಃ ಸಿದ್ಧಾಶ್ಚಾಪ್ಸರಸಸ್ತಥಾ|

05119005c ಅಪಶ್ಯಂತ ನಿರಾಲಂಬಂ ಯಯಾತಿಂ ತಂ ಪರಿಚ್ಯುತಂ||

ಆದರೆ ಅಲ್ಲಿದ್ದ ರಾಜರು, ಸಿದ್ಧರು ಮತ್ತು ಅಪ್ಸರೆಯರು ನಿರಾಲಂಬನಾಗಿ ಪರಿಚ್ಯುತನಾಗಿದ್ದ ಯಯಾತಿಯನ್ನು ನೋಡಲೇ ಇಲ್ಲ.

05119006a ಅಥೈತ್ಯ ಪುರುಷಃ ಕಶ್ಚಿತ್ಕ್ಷೀಣಪುಣ್ಯನಿಪಾತಕಃ|

05119006c ಯಯಾತಿಮಬ್ರವೀದ್ರಾಜನ್ದೇವರಾಜಸ್ಯ ಶಾಸನಾತ್||

ರಾಜನ್! ಅಷ್ಟರಲ್ಲಿಯೇ ಕ್ಷೀಣ ಪುಣ್ಯರನ್ನು ಕೆಳಗುರುಳಿಸುವ ಯಾರೋ ಪುರುಷನೋರ್ವನು ದೇವರಾಜನ ಶಾಸನದಂತೆ ಯಯಾತಿಗೆ ಹೇಳಿದನು:

05119007a ಅತೀವ ಮದಮತ್ತಸ್ತ್ವಂ ನ ಕಂ ಚಿನ್ನಾವಮನ್ಯಸೇ|

05119007c ಮಾನೇನ ಭ್ರಷ್ಟಃ ಸ್ವರ್ಗಸ್ತೇ ನಾರ್ಹಸ್ತ್ವಂ ಪಾರ್ಥಿವಾತ್ಮಜ|

05119007e ನ ಚ ಪ್ರಜ್ಞಾಯಸೇ ಗಚ್ಚ ಪತಸ್ವೇತಿ ತಮಬ್ರವೀತ್||

“ಅತೀವ ಮದಮತ್ತನಾಗಿ ನೀನು ಬೇರೆ ಎಲ್ಲರನ್ನೂ ಅವಮಾನಿಸುತ್ತಿರುವೆ. ಮಾನದಿಂದಾಗಿ ನೀನು ಸ್ವರ್ಗಭ್ರಷ್ಟನಾಗಿದ್ದೀಯೆ. ಪಾರ್ಥಿವಾತ್ಮಜ! ನೀನು ಅನರ್ಹನಾಗಿರುವೆ. ಈಗ ನೀನು ಅಪರಿಚಿತ. ಹೋಗು. ಬೀಳು!” ಎಂದು ಹೇಳಿದನು.

05119008a ಪತೇಯಂ ಸತ್ಸ್ವಿತಿ ವಚಸ್ತ್ರಿರುಕ್ತ್ವಾ ನಹುಷಾತ್ಮಜಃ|

05119008c ಪತಿಷ್ಯಂಶ್ಚಿಂತಯಾಮಾಸ ಗತಿಂ ಗತಿಮತಾಂ ವರಃ||

“ಒಳ್ಳೆಯವರ ಮಧ್ಯೆ ಬೀಳುವಂತಾಗಲಿ!” ಎಂದು ಹೇಳಿ ಗತಿವಂತರಲ್ಲಿ ಶ್ರೇಷ್ಠ ನಹುಷಾತ್ಮಜನು ಹೋಗುವ ದಾರಿಯ ಕುರಿತು ಚಿಂತಿಸಿದನು.

05119009a ಏತಸ್ಮಿನ್ನೇವ ಕಾಲೇ ತು ನೈಮಿಷೇ ಪಾರ್ಥಿವರ್ಷಭಾನ್|

05119009c ಚತುರೋಽಪಶ್ಯತ ನೃಪಸ್ತೇಷಾಂ ಮಧ್ಯೇ ಪಪಾತ ಸಃ|

ಇದೇ ಕಾಲದಲ್ಲಿ ನೈಮಿಷದಲ್ಲಿದ್ದ ನಾಲ್ವರು ಪಾರ್ಥಿವರ್ಷಭರನ್ನು ನೋಡಿ ಅವನು ಆ ನೃಪರ ಮಧ್ಯದಲ್ಲಿಯೇ ಬಿದ್ದನು.

05119010a ಪ್ರತರ್ದನೋ ವಸುಮನಾಃ ಶಿಬಿರೌಶೀನರೋಽಷ್ಟಕಃ|

05119010c ವಾಜಪೇಯೇನ ಯಜ್ಞೇನ ತರ್ಪಯಂತಿ ಸುರೇಶ್ವರಂ||

ಪ್ರತರ್ದನ, ವಸುಮನ, ಔಶೀನರ ಶಿಬಿ ಮತ್ತು ಅಷ್ಟಕರು ವಾಜಪೇಯ ಯಜ್ಞದಿಂದ ಸುರೇಶ್ವರನನ್ನು ತೃಪ್ತಿಪಡಿಸುತ್ತಿದ್ದರು.

05119011a ತೇಷಾಮಧ್ವರಜಂ ಧೂಮಂ ಸ್ವರ್ಗದ್ವಾರಮುಪಸ್ಥಿತಂ|

05119011c ಯಯಾತಿರುಪಜಿಘ್ರನ್ವೈ ನಿಪಪಾತ ಮಹೀಂ ಪ್ರತಿ||

ಅವರ ಅಧ್ವರದಲ್ಲಿ ಹುಟ್ಟಿದ ಧೂಮವು ಸ್ವರ್ಗದ್ವಾರವನ್ನು ತಲುಪಿತ್ತು. ಅದನ್ನು ಆಘ್ರಾಣಿಸಿ ಯಯಾತಿಯು ಭೂಮಿಯ ಮೇಲೆ ಬಿದ್ದನು.

05119012a ಭೂಮೌ ಸ್ವರ್ಗೇ ಚ ಸಂಬದ್ಧಾಂ ನದೀಂ ಧೂಮಮಯೀಂ ನೃಪಃ|

05119012c ಸ ಗಂಗಾಮಿವ ಗಚ್ಚಂತೀಮಾಲಂಬ್ಯ ಜಗತೀಪತಿಃ||

05119013a ಶ್ರೀಮತ್ಸ್ವವಭೃಥಾಗ್ರ್ಯೇಷು ಚತುರ್ಷು ಪ್ರತಿಬಂಧುಷು|

05119013c ಮಧ್ಯೇ ನಿಪತಿತೋ ರಾಜಾ ಲೋಕಪಾಲೋಪಮೇಷು ಚ||

ಭೂಮಿಯನ್ನು ಸ್ವರ್ಗಕ್ಕೆ ಜೋಡಿಸುವ ಗಂಗಾನದಿಯಂತಿದ್ದ ಆ ಧೂಮದಲ್ಲಿಯೇ ತೇಲಿಕೊಂಡು ಜಗತೀಪತಿ ರಾಜನು ಲೋಕಪಾಲಕರಂತಿದ್ದ ಆ ನಾಲ್ವರು ಶ್ರೀಮಂತ, ಅವಭೃಥರಲ್ಲಿ ಅಗ್ರ ಬಂಧುಗಳ ಮಧ್ಯೆ ಬಿದ್ದನು.

05119014a ಚತುರ್ಷು ಹುತಕಲ್ಪೇಷು ರಾಜಸಿಂಹಮಹಾಗ್ನಿಷು|

05119014c ಪಪಾತ ಮಧ್ಯೇ ರಾಜರ್ಷಿರ್ಯಯಾತಿಃ ಪುಣ್ಯಸಂಕ್ಷಯೇ||

ಆ ಪುಣ್ಯ ಸಂಕ್ಷಯದಲ್ಲಿ ಮಹಾಗ್ನಿಗಳಲ್ಲಿ ಆಹುತಿಗಳಂತಿದ್ದ ರಾಜಸಿಂಹರ ಮಧ್ಯೆ ರಾಜರ್ಷಿ ಯಯಾತಿಯು ಬಿದ್ದನು.

05119015a ತಮಾಹುಃ ಪಾರ್ಥಿವಾಃ ಸರ್ವೇ ಪ್ರತಿಮಾನಮಿವ ಶ್ರಿಯಃ|

05119015c ಕೋ ಭವಾನ್ಕಸ್ಯ ವಾ ಬಂಧುರ್ದೇಶಸ್ಯ ನಗರಸ್ಯ ವಾ||

ಶ್ರೀಯಂತೆ ಸುಂದರರಾಗಿದ್ದ ಆ ಪಾರ್ಥಿವರೆಲ್ಲರೂ ಅವನನ್ನು ಕೇಳಿದರು: “ನೀನು ಯಾರು? ಯಾರ ಬಂಧು? ಯಾವ ದೇಶ ಅಥವಾ ನಗರದವನು?

05119016a ಯಕ್ಷೋ ವಾಪ್ಯಥ ವಾ ದೇವೋ ಗಂಧರ್ವೋ ರಾಕ್ಷಸೋಽಪಿ ವಾ|

05119016c ನ ಹಿ ಮಾನುಷರೂಪೋಽಸಿ ಕೋ ವಾರ್ಥಃ ಕಾಂಕ್ಷಿತಸ್ತ್ವಯಾ||

ಯಕ್ಷನೋ ಅಥವಾ ದೇವನೋ, ಗಂಧರ್ವನೋ ಅಥವಾ ರಾಕ್ಷಸನೋ? ಏಕೆಂದರೆ ನೀನು ಮನುಷ್ಯರೂಪದವನಲ್ಲ! ನಿನ್ನ ಉದ್ದೇಶ ಬಯಕೆಗಳು ಏನು?”

05119017 ಯಯಾತಿರುವಾಚ|

05119017a ಯಯಾತಿರಸ್ಮಿ ರಾಜರ್ಷಿಃ ಕ್ಷೀಣಪುಣ್ಯಶ್ಚ್ಯುತೋ ದಿವಃ|

05119017c ಪತೇಯಂ ಸತ್ಸ್ವಿತಿ ಧ್ಯಾಯನ್ಭವತ್ಸು ಪತಿತಸ್ತತಃ||

ಯಯಾತಿಯು ಹೇಳಿದನು: “ನಾನು ರಾಜರ್ಷಿ ಯಯಾತಿ. ಪುಣ್ಯವು ಕಡಿಮೆಯಾಗಿ ದಿವದಿಂದ ಚ್ಯುತನಾಗಿದ್ದೇನೆ. ಒಳ್ಳೆಯವರ ಮಧ್ಯೆ ಬೀಳಲಿ ಎಂದು ಆಲೋಚಿಸುತ್ತಾ ನಿಮ್ಮ ಮಧ್ಯೆ ಬಿದ್ದಿದ್ದೇನೆ!”

05119018 ರಾಜಾನ ಊಚುಃ|

05119018a ಸತ್ಯಮೇತದ್ಭವತು ತೇ ಕಾಂಕ್ಷಿತಂ ಪುರುಷರ್ಷಭ|

05119018c ಸರ್ವೇಷಾಂ ನಃ ಕ್ರತುಫಲಂ ಧರ್ಮಶ್ಚ ಪ್ರತಿಗೃಹ್ಯಯತಾಂ||

ರಾಜರು ಹೇಳಿದರು: “ಪುರುಷರ್ಷಭ! ನಿನ್ನನ್ನು ಬಯಕೆಯು ಸತ್ಯವಾಗಲಿ. ನಮ್ಮೆಲ್ಲರ ಕ್ರತು ಮತ್ತು ಧರ್ಮಫಲಗಳನ್ನು ಸ್ವೀಕರಿಸು.”

05119019 ಯಯಾತಿರುವಾಚ|

05119019a ನಾಹಂ ಪ್ರತಿಗ್ರಹಧನೋ ಬ್ರಾಹ್ಮಣಃ ಕ್ಷತ್ರಿಯೋ ಹ್ಯಹಂ|

05119019c ನ ಚ ಮೇ ಪ್ರವಣಾ ಬುದ್ಧಿಃ ಪರಪುಣ್ಯವಿನಾಶನೇ||

ಯಯಾತಿಯು ಹೇಳಿದನು: “ನಾನು ಧನವನ್ನು ದಾನವಾಗಿ ಸ್ವೀಕರಿಸಬಲ್ಲ ಬ್ರಾಹ್ಮಣನಲ್ಲ. ಏಕೆಂದರೆ ನಾನು ಕ್ಷತ್ರಿಯ. ಇತರರ ಪುಣ್ಯವನ್ನು ನಾಶಗೊಳಿಸುವಲ್ಲಿ ನನ್ನ ಬುದ್ಧಿಯು ಇಷ್ಟಪಡುವುದಿಲ್ಲ.””

05119020 ನಾರದ ಉವಾಚ|

05119020a ಏತಸ್ಮಿನ್ನೇವ ಕಾಲೇ ತು ಮೃಗಚರ್ಯಾಕ್ರಮಾಗತಾಂ|

05119020c ಮಾಧವೀಂ ಪ್ರೇಕ್ಷ್ಯ ರಾಜಾನಸ್ತೇಽಭಿವಾದ್ಯೇದಮಬ್ರುವನ್||

ನಾರದನು ಹೇಳಿದನು: “ಅದೇ ಸಮಯದಲ್ಲಿ ಜಿಂಕೆಯ ನಡತೆ-ಕ್ರಮಗಳನ್ನು ಅನುಸರಿಸುತ್ತಿರುವ ಮಾಧವಿಯನ್ನು ನೋಡಿ ರಾಜರು ಅವಳನ್ನು ಅಭಿವಂದಿಸಿ ಹೇಳಿದರು:

05119021a ಕಿಮಾಗಮನಕೃತ್ಯಂ ತೇ ಕಿಂ ಕುರ್ವಃ ಶಾಸನಂ ತವ|

05119021c ಆಜ್ಞಾಪ್ಯಾ ಹಿ ವಯಂ ಸರ್ವೇ ತವ ಪುತ್ರಾಸ್ತಪೋಧನೇ||

“ನೀನು ಇಲ್ಲಿಗೆ ಬರಲು ಕಾರಣವೇನು? ಏನು ಕೆಲಸವಿದೆ? ನಿನ್ನ ಶಾಸನದಂತೆ ಮಾಡುತ್ತೇವೆ. ಆಜ್ಞಾಪಿಸು. ತಪೋಧನೆ! ನಾವೆಲ್ಲರೂ ನಿನ್ನ ಪುತ್ರರು.”

05119022a ತೇಷಾಂ ತದ್ಭಾಷಿತಂ ಶ್ರುತ್ವಾ ಮಾಧವೀ ಪರಯಾ ಮುದಾ|

05119022c ಪಿತರಂ ಸಮುಪಾಗಚ್ಚದ್ಯಯಾತಿಂ ಸಾ ವವಂದ ಚ||

ಅವರ ಆ ಮಾತನ್ನು ಕೇಳಿ ಪರಮ ಮುದಿತಳಾಗಿ ಮಾಧವಿಯು ತಂದೆ ಯಯಾತಿಯ ಬಳಿ ಸಾರಿ ಅವನಿಗೆ ವಂದಿಸಿದಳು.

05119023a ದೃಷ್ಟ್ವಾ ಮೂರ್ಧ್ನಾ ನತಾನ್ಪುತ್ರಾಂಸ್ತಾಪಸೀ ವಾಕ್ಯಮಬ್ರವೀತ್|

05119023c ದೌಹಿತ್ರಾಸ್ತವ ರಾಜೇಂದ್ರ ಮಮ ಪುತ್ರಾ ನ ತೇ ಪರಾಃ|

05119023e ಇಮೇ ತ್ವಾಂ ತಾರಯಿಷ್ಯಂತಿ ದಿಷ್ಟಮೇತತ್ ಪುರಾತನಂ||

ತಲೆತಗ್ಗಿಸಿ ನಿಂತಿದ್ದ ಮಕ್ಕಳನ್ನು ನೋಡಿ ಆ ತಾಪಸಿಯು ಹೇಳಿದಳು: “ರಾಜೇಂದ್ರ! ನನ್ನ ಈ ಮಕ್ಕಳು ನಿನ್ನ ಮಗಳ ಮಕ್ಕಳು. ನಿನಗೆ ಪರರಲ್ಲ. ಇವರೇ ನಿನ್ನನ್ನು ಉದ್ಧರಿಸುತ್ತಾರೆ ಎಂಬುದು ಬಹಳ ಹಿಂದೆಯೇ ಕಾಣಲಾಗಿತ್ತು.

05119024a ಅಹಂ ತೇ ದುಹಿತಾ ರಾಜನ್ಮಾಧವೀ ಮೃಗಚಾರಿಣೀ|

05119024c ಮಯಾಪ್ಯುಪಚಿತೋ ಧರ್ಮಸ್ತತೋಽರ್ಧಂ ಪ್ರತಿಗೃಹ್ಯತಾಂ||

ರಾಜನ್! ನಾನು ನಿನ್ನ ಮಗಳು ಮೃಗಚಾರಿಣೀ ಮಾಧವೀ. ನಾನೂ ಕೂಡ ಧರ್ಮವನ್ನು ಸಂಚಯಿಸಿದ್ದೇನೆ. ಅದರ ಅರ್ಧವನ್ನು ಸ್ವೀಕರಿಸಬೇಕು.

05119025a ಯಸ್ಮಾದ್ರಾಜನ್ನರಾಃ ಸರ್ವೇ ಅಪತ್ಯಫಲಭಾಗಿನಃ|

05119025c ತಸ್ಮಾದಿಚ್ಚಂತಿ ದೌಹಿತ್ರಾನ್ಯಥಾ ತ್ವಂ ವಸುಧಾಧಿಪ||

ರಾಜನ್! ಹೇಗೆ ನರರು ಎಲ್ಲರೂ ಮಕ್ಕಳ ಫಲಗಳಿಗೆ ಭಾಗಿಗಳಾಗುತ್ತಾರೋ ಹಾಗೆ ವಸುಧಾಧಿಪ! ನಿನ್ನಂತೆ ಮಗಳ ಮಕ್ಕಳನ್ನೂ ಬಯಸುತ್ತಾರೆ.”

05119026a ತತಸ್ತೇ ಪಾರ್ಥಿವಾಃ ಸರ್ವೇ ಶಿರಸಾ ಜನನೀಂ ತದಾ|

05119026c ಅಭಿವಾದ್ಯ ನಮಸ್ಕೃತ್ಯ ಮಾತಾಮಹಮಥಾಬ್ರುವನ್||

ಆಗ ಆ ಎಲ್ಲ ಪಾರ್ಥಿವರೂ ಶಿರಬಾಗಿ ಜನನಿಗೆ ಅಭಿವಂದಿಸಿದರು. ಮಾತಾಮಹನಿಗೆ ನಮಸ್ಕರಿಸಿ ಹೇಳಿದರು.

05119027a ಉಚ್ಚೈರನುಪಮೈಃ ಸ್ನಿಗ್ಧೈಃ ಸ್ವರೈರಾಪೂರ್ಯ ಮೇದಿನೀಂ|

05119027c ಮಾತಾಮಹಂ ನೃಪತಯಸ್ತಾರಯಂತೋ ದಿವಶ್ಚ್ಯುತಂ||

ಅವರ ಉಚ್ಚವಾದ, ಅನುಪಮ, ಸ್ನಿಗ್ಧ ಸ್ವರಗಳಿಂದ ಮೇದಿನಿಯನ್ನು ತುಂಬಿಸಿ ಆ ನೃಪತಿಗಳು ದಿವದಿಂದ ಚ್ಯುತನಾಗಿದ್ದ ಮಾತಾಮಹನನ್ನು ಉದ್ಧರಿಸಿದರು.

05119028a ಅಥ ತಸ್ಮಾದುಪಗತೋ ಗಾಲವೋಽಪ್ಯಾಹ ಪಾರ್ಥಿವಂ|

05119028c ತಪಸೋ ಮೇಽಷ್ಟಭಾಗೇನ ಸ್ವರ್ಗಮಾರೋಹತಾಂ ಭವಾನ್||

ಆಗ ಗಾಲವನೂ ಅಲ್ಲಿಗೆ ಬಂದು ಪಾರ್ಥಿವನಿಗೆ “ನನ್ನ ತಪಸ್ಸಿನ ಎಂಟನೇ ಒಂದು ಭಾಗದಿಂದ ನೀನು ಸ್ವರ್ಗವನ್ನೇರು!” ಎಂದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಸ್ವರ್ಗಭ್ರಂಶೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಸ್ವರ್ಗಭ್ರಂಶದಲ್ಲಿ ನೂರಾಹತ್ತೊಂಭತ್ತನೆಯ ಅಧ್ಯಾಯವು.

Image result for flowers against white background

Comments are closed.