Udyoga Parva: Chapter 82

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೮೨

ಕೃಷ್ಣನು ಪ್ರಯಾಣಿಸುವಾಗ ತೋರಿದ ನಿಮಿತ್ತಗಳು (೧-೧೨). ಅವನು ವೃಕಸ್ಥಲದಲ್ಲಿ ರಾತ್ರಿಯನ್ನು ಕಳೆದುದು (೧೩-೨೯).

05082001 ವೈಶಂಪಾಯನ ಉವಾಚ|

05082001a ಪ್ರಯಾಂತಂ ದೇವಕೀಪುತ್ರಂ ಪರವೀರರುಜೋ ದಶ|

05082001c ಮಹಾರಥಾ ಮಹಾಬಾಹುಮನ್ವಯುಃ ಶಸ್ತ್ರಪಾಣಯಃ||

05082002a ಪದಾತೀನಾಂ ಸಹಸ್ರಂ ಚ ಸಾದಿನಾಂ ಚ ಪರಂತಪ|

05082002c ಭೋಜ್ಯಂ ಚ ವಿಪುಲಂ ರಾಜನ್ಪ್ರೇಷ್ಯಾಶ್ಚ ಶತಶೋಽಪರೇ||

ವೈಶಂಪಾಯನನು ಹೇಳಿದನು: “ಪರಂತಪ! ರಾಜನ್! ಪ್ರಯಾಣಿಸುತ್ತಿದ್ದ ದೇವಕೀಪುತ್ರನನ್ನು ಹತ್ತು ಪರವೀರಹ ಮಹಾರಥಿ ಮಹಾಬಾಹುಗಳು ಶಸ್ತ್ರಗಳನ್ನು ಹಿಡಿದು, ಸಹಸ್ರ ಪದಾತಿಗಳು ಮತ್ತು ವಾಹಕರು, ಇನ್ನೂ ನೂರಾರು ಸೇವಕರು ವಿಪುಲ ಭೋಜ್ಯವಸ್ತುಗಳನ್ನು ತೆಗೆದುಕೊಂಡು ಅನುಸರಿಸಿದರು.”

05082003 ಜನಮೇಜಯ ಉವಾಚ|

05082003a ಕಥಂ ಪ್ರಯಾತೋ ದಾಶಾರ್ಹೋ ಮಹಾತ್ಮಾ ಮಧುಸೂದನಃ|

05082003c ಕಾನಿ ವಾ ವ್ರಜತಸ್ತಸ್ಯ ನಿಮಿತ್ತಾನಿ ಮಹೌಜಸಃ||

ಜನಮೇಜಯನು ಹೇಳಿದನು: “ದಾಶಾರ್ಹ, ಮಹಾತ್ಮ ಮಧುಸೂದನನು ಹೇಗೆ ಪ್ರಯಾಣಿಸಿದನು? ಮಹೌಜಸನು ಹೊರಟಾಗ ಬೇರೆ ಯಾವ ನಿಮಿತ್ತಗಳು ಕಾಣಿಸಿಕೊಂಡವು?”

05082004 ವೈಶಂಪಾಯನ ಉವಾಚ|

05082004a ತಸ್ಯ ಪ್ರಯಾಣೇ ಯಾನ್ಯಾಸನ್ನದ್ಭುತಾನಿ ಮಹಾತ್ಮನಃ|

05082004c ತಾನಿ ಮೇ ಶೃಣು ದಿವ್ಯಾನಿ ದೈವಾನ್ಯೌತ್ಪಾತಿಕಾನಿ ಚ||

ವೈಶಂಪಾಯನನು ಹೇಳಿದನು: “ಆ ಮಹಾತ್ಮನು ಪ್ರಯಾಣಿಸುವಾಗ ನಡೆದ ಅದ್ಭುತ, ದಿವ್ಯ, ದೈವವನ್ನು ಸೂಚಿಸುವ ಉತ್ಪಾತಗಳ ಕುರಿತು ನನ್ನಿಂದ ಕೇಳು!

05082005a ಅನಭ್ರೇಽಶನಿನಿರ್ಘೋಷಃ ಸವಿದ್ಯುತ್ಸಮಜಾಯತ|

05082005c ಅನ್ವಗೇವ ಚ ಪರ್ಜನ್ಯಃ ಪ್ರಾವರ್ಷದ್ವಿಘನೇ ಭೃಶಂ||

ಮೋಡವಿಲ್ಲದ ಆಕಾಶದಲ್ಲಿ ಗುಡುಗು ಸಿಡಿಲುಗಳು ಹುಟ್ಟಿದವು. ಮೋಡವಿಲ್ಲದೇ ಪರ್ಜನ್ಯನು ಅವನ ಹಿಂದೆ ಭಾರೀ ಮಳೆಯನ್ನು ಸುರಿಸಿದನು.

05082006a ಪ್ರತ್ಯಗೂಹುರ್ಮಹಾನದ್ಯಃ ಪ್ರಾಂಙ್ಮುಖಾಃ ಸಿಂಧುಸತ್ತಮಾಃ|

05082006c ವಿಪರೀತಾ ದಿಶಃ ಸರ್ವಾ ನ ಪ್ರಾಜ್ಞಾಯತ ಕಿಂ ಚನ||

ಪೂರ್ವಾಭಿಮುಖವಾಗಿ ಹರಿಯುತ್ತಿದ್ದ ಮಹಾನದಿಗಳು, ಸಿಂಧು ಸತ್ತಮಗಳು ತಮ್ಮ ದಿಕ್ಕನ್ನು ಬದಲಾಯಿಸಿ ಹರಿಯತೊಡಗಿದವು. ಎಲ್ಲ ದಿಕ್ಕುಗಳೂ ವಿಪರೀತವಾಗಿ, ಯಾವಕಡೆ ಯಾವ ದಿಕ್ಕು ಎನ್ನುವುದೇ ತಿಳಿಯದಂತಾಯಿತು.

05082007a ಪ್ರಾಜ್ವಲನ್ನಗ್ನಯೋ ರಾಜನ್ಪೃಥಿವೀ ಸಮಕಂಪತ|

05082007c ಉದಪಾನಾಶ್ಚ ಕುಂಭಾಶ್ಚ ಪ್ರಾಸಿಂಚಂ ಶತಶೋ ಜಲಂ||

ರಾಜನ್! ಅಗ್ನಿಯು ಉರಿದನು, ಭೂಮಿಯು ಕಂಪಿಸಿತು, ನೂರಾರು ಬಾವಿ ಕೊಡಗಳಿಂದ ನೀರು ಉಕ್ಕಿ ಹರಿಯಿತು.

05082008a ತಮಃಸಂವೃತಮಪ್ಯಾಸೀತ್ಸರ್ವಂ ಜಗದಿದಂ ತದಾ|

05082008c ನ ದಿಶೋ ನಾದಿಶೋ ರಾಜನ್ಪ್ರಜ್ಞಾಯಂತೇ ಸ್ಮ ರೇಣುನಾ||

ರಾಜನ್! ಆಗ ಈ ಜಗತ್ತನ್ನೆಲ್ಲವನ್ನೂ ಕತ್ತಲೆಯು ಆವರಿಸಿತು. ಧೂಳಿನಿಂದಾಗಿ ದಿಕ್ಕುಗಳ್ಯಾವುದು ಎಂದು ತಿಳಿಯದಂತಾಯಿತು.

05082009a ಪ್ರಾದುರಾಸೀನ್ಮಹಾಂ ಶಬ್ದಃ ಖೇ ಶರೀರಂ ನ ದೃಶ್ಯತೇ|

05082009c ಸರ್ವೇಷು ರಾಜನ್ದೇಶೇಷು ತದದ್ಭುತಮಿವಾಭವತ್||

ಆಕಾಶದಲ್ಲಿ ಮಹಾ ಶಬ್ಧವು ಕೇಳಿಬಂದಿತು, ಆದರೆ ಶರೀರವು ಎಲ್ಲಿಯೂ ಕಾಣಿಸಲಿಲ್ಲ. ರಾಜನ್! ಎಲ್ಲ ದೇಶಗಳಲ್ಲಿ ಆ ಅದ್ಭುತವು ನಡೆಯಿತು.

05082010a ಪ್ರಾಮಥ್ನಾದ್ಧಾಸ್ತಿನಪುರಂ ವಾತೋ ದಕ್ಷಿಣಪಶ್ಚಿಮಃ|

05082010c ಆರುಜನ್ಗಣಶೋ ವೃಕ್ಷಾನ್ಪರುಷೋ ಭೀಮನಿಸ್ವನಃ||

ಜೋರಾಗಿ ಭಯಂಕರ ಶಬ್ಧಮಾಡುತ್ತಿದ್ದ ಭಿರುಗಾಳಿಯು ದಕ್ಷಿಣ- ಪಶ್ಚಿಮದ ಕಡೆಯಿಂದ ಹಸ್ತಿನಾಪುರದ ಮೇಲೆ, ಹಲವಾರು ವೃಕ್ಷವನ್ನು ಕೆಡವುತ್ತಾ, ಬೀಸಿತು.

05082011a ಯತ್ರ ಯತ್ರ ತು ವಾರ್ಷ್ಣೇಯೋ ವರ್ತತೇ ಪಥಿ ಭಾರತ|

05082011c ತತ್ರ ತತ್ರ ಸುಖೋ ವಾಯುಃ ಸರ್ವಂ ಚಾಸೀತ್ಪ್ರದಕ್ಷಿಣಂ||

ಭಾರತ! ಎಲ್ಲೆಲ್ಲಿ ವಾರ್ಷ್ಣೇಯನು ಹೋದನೋ ಅಲ್ಲಲ್ಲಿ ಸುಖವಾದ ಗಾಳಿಯು ಬೀಸಿತು, ಎಲ್ಲವು ಸರಿಯಾಗಿದ್ದಿತು.

05082012a ವವರ್ಷ ಪುಷ್ಪವರ್ಷಂ ಚ ಕಮಲಾನಿ ಚ ಭೂರಿಶಃ|

05082012c ಸಮಶ್ಚ ಪಂಥಾ ನಿರ್ದುಃಖೋ ವ್ಯಪೇತಕುಶಕಂಟಕಃ||

ಪುಷ್ಪವೃಷ್ಟಿಯಾಯಿತು. ಬಹಳಷ್ಟು ಕಮಲಗಳಿದ್ದವು. ದಾರಿಯು ತಾನಾಗಿಯೇ ಕಲ್ಲು ಮುಳ್ಳುಗಳಿಲ್ಲದೇ ಏರುತಗ್ಗುಗಳಿಲ್ಲದೇ ಸಮನಾಗುತ್ತಿತ್ತು.

05082013a ಸ ಗಚ್ಚನ್ಬ್ರಾಹ್ಮಣೈ ರಾಜಂಸ್ತತ್ರ ತತ್ರ ಮಹಾಭುಜಃ|

05082013c ಅರ್ಚ್ಯತೇ ಮಧುಪರ್ಕೈಶ್ಚ ಸುಮನೋಭಿರ್ವಸುಪ್ರದಃ||

ರಾಜನ್! ಆ ಮಹಾಭುಜನು ಹೋದಲ್ಲೆಲ್ಲ ಬ್ರಾಹ್ಮಣರು ಅವನನ್ನು ಸುಮನಸ್ಸಿನಿಂದ ಮಧುಪರ್ಕವನ್ನಿತ್ತು ಅರ್ಚಿಸಿದರು ಮತ್ತು ಅವನು ಅವರಿಗೆ ಸಂಪತ್ತನ್ನು ಕರುಣಿಸಿದನು.

05082014a ತಂ ಕಿರಂತಿ ಮಹಾತ್ಮಾನಂ ವನ್ಯೈಃ ಪುಷ್ಪೈಃ ಸುಗಂಧಿಭಿಃ|

05082014c ಸ್ತ್ರಿಯಃ ಪಥಿ ಸಮಾಗಮ್ಯ ಸರ್ವಭೂತಹಿತೇ ರತಂ||

ಆ ಸರ್ವಭೂತಹಿತರತ ಮಹಾತ್ಮನ ಮೇಲೆ ದಾರಿಯಲ್ಲಿ ಸ್ತ್ರೀಯರು ಗುಂಪುಗೂಡಿ ಸುಗಂಧಿತ ವನ ಪುಷ್ಪಗಳನ್ನು ಸುರಿಸಿದರು.

05082015a ಸ ಶಾಲಿಭವನಂ ರಮ್ಯಂ ಸರ್ವಸಸ್ಯಸಮಾಚಿತಂ|

05082015c ಸುಖಂ ಪರಮಧರ್ಮಿಷ್ಠಮತ್ಯಗಾದ್ಭರತರ್ಷಭ||

05082016a ಪಶ್ಯನ್ಬಹುಪಶೂನ್ಗ್ರಾಮಾನ್ರಮ್ಯಾನ್ ಹೃದಯತೋಷಣಾನ್|

05082016c ಪುರಾಣಿ ಚ ವ್ಯತಿಕ್ರಾಮನ್ರಾಷ್ಟ್ರಾಣಿ ವಿವಿಧಾನಿ ಚ||

ಭರತರ್ಷಭ! ಅವನು ರಮ್ಯವಾದ, ಸರ್ವಸಸ್ಯಗಳಿಂದ ತುಂಬಿದ ಸುಖದಿಂದಿರುವ, ಪರಮ ಧರ್ಮಿಷ್ಠವಾದ ಶಾಲಿಭವನಕ್ಕೆ ಬಂದನು. ಅವನು ಬಹಳಷ್ಟು ಪ್ರಾಣಿಗಳನ್ನೂ, ಗ್ರಾಮಗಳನ್ನೂ, ರಮ್ಯವಾದ ಹೃದಯವನ್ನು ಸಂತೋಷಗೊಳಿಸುವ ಪುರಗಳನ್ನು ವಿವಿಧರಾಷ್ಟ್ರಗಳನ್ನು ದಾಟಿದನು.

05082017a ನಿತ್ಯಹೃಷ್ಟಾಃ ಸುಮನಸೋ ಭಾರತೈರಭಿರಕ್ಷಿತಾಃ|

05082017c ನೋದ್ವಿಗ್ನಾಃ ಪರಚಕ್ರಾಣಾಮನಯಾನಾಮಕೋವಿದಾಃ||

05082018a ಉಪಪ್ಲವ್ಯಾದಥಾಯಾಂತಂ ಜನಾಃ ಪುರನಿವಾಸಿನಃ|

05082018c ಪಥ್ಯತಿಷ್ಠಂತ ಸಹಿತಾ ವಿಷ್ವಕ್ಸೇನದಿದೃಕ್ಷಯಾ||

05082019a ತೇ ತು ಸರ್ವೇ ಸುನಾಮಾನಮಗ್ನಿಮಿದ್ಧಮಿವ ಪ್ರಭುಂ|

05082019c ಅರ್ಚಯಾಮಾಸುರರ್ಚ್ಯಂ ತಂ ದೇಶಾತಿಥಿಮುಪಸ್ಥಿತಂ||

ನಿತ್ಯವೂ ಸಂತೋಷದಲ್ಲಿದ್ದ, ಸುಮನಸ್ಕರಾಗಿದ್ದ, ಭಾರತರಿಂದ ರಕ್ಷಿತರಾಗಿದ್ದ, ಶತ್ರುಗಳ ಭಯದಿಂದ ಉದ್ವಿಗ್ನರಾಗಿರದ, ಅನಾಮಯರಾದ, ಸುಶಿಕ್ಷಿತರಾದ, ಪುರನಿವಾಸಿ ಜನರು ಉಪಪ್ಲವದಿಂದ ಬರುತ್ತಿದ್ದ ವಿಶ್ವಕ್ಸೇನನನ್ನು ನೋಡಲು ದಾರಿಯಲ್ಲಿ ಗುಂಪಾಗಿ ಸೇರಿ ನಿಂತಿದ್ದರು. ಅವರೆಲ್ಲರೂ ತಮ್ಮ ದೇಶಕ್ಕೆ ಅತಿಥಿಯಾಗಿ ಬಂದಿದ್ದ, ಪೂಜೆಗೆ ಅರ್ಹನಾದ ಅಗ್ನಿಯಂತೆ ಬೆಳಗುತ್ತಿದ್ದ ಪ್ರಭುವನ್ನು ಅರ್ಚಿಸಿದರು.

05082020a ವೃಕಸ್ಥಲಂ ಸಮಾಸಾದ್ಯ ಕೇಶವಃ ಪರವೀರಹಾ|

05082020c ಪ್ರಕೀರ್ಣರಶ್ಮಾವಾದಿತ್ಯೇ ವಿಮಲೇ ಲೋಹಿತಾಯತಿ||

ಸ್ವಚ್ಛವಾದ ಸೂರ್ಯನು ಕೆಂಪು ಕಿರಣಗಳನ್ನು ಪಸರಿಸುವ ಸಮಯಕ್ಕೆ ಪರವೀರಹ ಕೇಶವನು ವೃಕಸ್ಥಲವನ್ನು ಸೇರಿದನು.

05082021a ಅವತೀರ್ಯ ರಥಾತ್ತೂರ್ಣಂ ಕೃತ್ವಾ ಶೌಚಂ ಯಥಾವಿಧಿ|

05082021c ರಥಮೋಚನಮಾದಿಶ್ಯ ಸಂಧ್ಯಾಮುಪವಿವೇಶ ಹ||

ರಥದಿಂದ ಇಳಿದು, ಯಥಾವಿಧಿಯಾಗಿ ಶೌಚವನ್ನು ಮಾಡಿ, ರಥವನ್ನು ಕಳಚಲು ಆದೇಶವನ್ನಿತ್ತು ಸಂಧ್ಯಾವಂದನೆಯಲ್ಲಿ ತೊಡಗಿದನು.

05082022a ದಾರುಕೋಽಪಿ ಹಯಾನ್ಮುಕ್ತ್ವಾ ಪರಿಚರ್ಯ ಚ ಶಾಸ್ತ್ರತಃ|

05082022c ಮುಮೋಚ ಸರ್ವಂ ವರ್ಮಾಣಿ ಮುಕ್ತ್ವಾ ಚೈನಾನವಾಸೃಜತ್||

ದಾರುಕನಾದರೋ ಕುದುರೆಗಳನ್ನು ಬಿಚ್ಚಿ ಶಾಸ್ತ್ರೋಕ್ತವಾಗಿ ಪರಿಚರ್ಯವನ್ನು ಮಾಡಿ, ಅವರ ಕವಚಗಳೆಲ್ಲವನ್ನೂ ತೆಗೆದು ವಿಶ್ರಾಂತಿಗೆಂದು ಬಿಟ್ಟನು.

05082023a ಅಭ್ಯತೀತ್ಯ ತು ತತ್ಸರ್ವಮುವಾಚ ಮಧುಸೂದನಃ|

05082023c ಯುಧಿಷ್ಠಿರಸ್ಯ ಕಾರ್ಯಾರ್ಥಮಿಹ ವತ್ಸ್ಯಾಮಹೇ ಕ್ಷಪಾಂ||

ಅವೆಲ್ಲವನ್ನು ಮುಗಿಸಿದ ನಂತರ ಅವನಿಗೆ ಮಧುಸೂದನನು ಹೇಳಿದನು: “ಯುಧಿಷ್ಠಿರನ ಕಾರ್ಯಕ್ಕೆ ಹೊರಟಿರುವ ನಾವು ಈ ರಾತ್ರಿಯನ್ನು ಇಲ್ಲಿಯೇ ಕಳೆಯೋಣ!”

05082024a ತಸ್ಯ ತನ್ಮತಮಾಜ್ಞಾಯ ಚಕ್ರುರಾವಸಥಂ ನರಾಃ|

05082024c ಕ್ಷಣೇನ ಚಾನ್ನಪಾನಾನಿ ಗುಣವಂತಿ ಸಮಾರ್ಜಯನ್||

ಅವನ ಅಭಿಪ್ರಾಯವನ್ನು ತಿಳಿದ ಜನರು ಬೇಗನೆ ಚೆನ್ನಾದ ಅನ್ನ ಪಾನೀಯಗಳನ್ನು ಸಿದ್ಧಪಡಿಸಿದರು.

05082025a ತಸ್ಮಿನ್ಗ್ರಾಮೇ ಪ್ರಧಾನಾಸ್ತು ಯ ಆಸನ್ಬ್ರಾಹ್ಮಣಾ ನೃಪ|

05082025c ಆರ್ಯಾಃ ಕುಲೀನಾ ಹ್ರೀಮಂತೋ ಬ್ರಾಹ್ಮೀಂ ವೃತ್ತಿಮನುಷ್ಠಿತಾಃ||

05082026a ತೇಽಭಿಗಮ್ಯ ಮಹಾತ್ಮಾನಂ ಹೃಷೀಕೇಶಮರಿಂದಮಂ|

05082026c ಪೂಜಾಂ ಚಕ್ರುರ್ಯಥಾನ್ಯಾಯಮಾಶೀರ್ಮಂಗಲಸಮ್ಯುತಾಂ||

ಆ ಗ್ರಾಮದಲ್ಲಿದ್ದ ಆರ್ಯ, ಕುಲೀನ, ವಿನಯಶೀಲ, ಬ್ರಾಹ್ಮಣವೃತ್ತಿಯನ್ನು ಅನುಸರಿಸುತ್ತಿದ್ದ ಪ್ರಧಾನ ಬ್ರಾಹ್ಮಣರು ಬಂದು ಮಹಾತ್ಮ, ಅರಿಂದಮ, ಕೇಶವನನ್ನು ಯಥಾನ್ಯಾಯವಾಗಿ ಪೂಜಿಸಿ ಅಶೀರ್ವಚನ, ಮಂಗಳಗಳನ್ನು ನೀಡಿದರು.

05082027a ತೇ ಪೂಜಯಿತ್ವಾ ದಾಶಾರ್ಹಂ ಸರ್ವಲೋಕೇಷು ಪೂಜಿತಂ|

05082027c ನ್ಯವೇದಯಂತ ವೇಶ್ಮಾನಿ ರತ್ನವಂತಿ ಮಹಾತ್ಮನೇ||

ಸರ್ವಲೋಕದಲ್ಲಿ ಪೂಜಿತನಾದ ದಾಶಾರ್ಹನನ್ನು ಪೂಜಿಸಿ ಆ ಮಹಾತ್ಮನಿಗೆ ತಮ್ಮ ರತ್ನವಂತೀ ಮನೆಗಳನ್ನು ಉಳಿಯಲು ಒಪ್ಪಿಸಿದರು.

05082028a ತಾನ್ಪ್ರಭುಃ ಕೃತಮಿತ್ಯುಕ್ತ್ವಾ ಸತ್ಕೃತ್ಯ ಚ ಯಥಾರ್ಹತಃ|

05082028c ಅಭ್ಯೇತ್ಯ ತೇಷಾಂ ವೇಶ್ಮಾನಿ ಪುನರಾಯಾತ್ಸಹೈವ ತೈಃ||

ಆಯಿತೆಂದು ಅವರಿಗೆ ಹೇಳಿ ಪ್ರಭುವು ಅವರನ್ನು ಯಥಾರ್ಹವಾಗಿ ಸತ್ಕರಿಸಿ ಅವರ ಮನೆಗಳಿಗೆ ಹೋಗಿ ಅವರೊಂದಿಗೆ ಹಿಂದಿರುಗಿದನು.

05082029a ಸುಮೃಷ್ಟಂ ಭೋಜಯಿತ್ವಾ ಚ ಬ್ರಾಹ್ಮಣಾಂಸ್ತತ್ರ ಕೇಶವಃ|

05082029c ಭುಕ್ತ್ವಾ ಚ ಸಹ ತೈಃ ಸರ್ವೈರವಸತ್ತಾಂ ಕ್ಷಪಾಂ ಸುಖಂ||

ಅಲ್ಲಿ ಬ್ರಾಹ್ಮಣರಿಗೆ ಸಮೃಷ್ಟ ಭೋಜನವನ್ನಿತ್ತು, ಅವರೊಂದಿಗೆ ತಾನೂ ಉಂಡು, ರಾತ್ರಿಯನ್ನು ಸುಖವಾಗಿ ಕಳೆದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣಪ್ರಯಾಣೇ ದ್ವಶೀತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣಪ್ರಯಾಣ ಎನ್ನುವ ಎಂಭತ್ತೆರಡನೆಯ ಅಧ್ಯಾಯವು.

Related image

Comments are closed.