Udyoga Parva: Chapter 121

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೧

ಸ್ವರ್ಗವನ್ನು ಸೇರಿದ ಯಯಾತಿಯು ಪಿತಾಮಹನಲ್ಲಿ ಪ್ರಶ್ನಿಸಲು ಅಭಿಮಾನವೇ ಅವನು ಸಂಗ್ರಹಿಸಿದ್ದ ಮಹಾ ಪುಣ್ಯಗಳನ್ನು ನಾಶಪಡಿಸಿತು ಎಂದು ತಿಳಿದುಕೊಳ್ಳುವುದು (೧-೧೭). ಹೀಗೆ ಗಾಲವನ ಹಠದ ಮತ್ತು ಯಯಾತಿಯ ಅಭಿಮಾನದ ದುಷ್ಪರಿಣಾಮಗಳನ್ನು ಉದಾಹರಿಸಿ ನಾರದನು ದುರ್ಯೋಧನನಿಗೆ ಉಪದೇಶಿಸಿದುದು (೧೮-೨೨).

05121001 ನಾರದ ಉವಾಚ|

05121001a ಸದ್ಭಿರಾರೋಪಿತಃ ಸ್ವರ್ಗಂ ಪಾರ್ಥಿವೈರ್ಭೂರಿದಕ್ಷಿಣೈಃ|

05121001c ಅಭ್ಯನುಜ್ಞಾಯ ದೌಹಿತ್ರಾನ್ಯಯಾತಿರ್ದಿವಮಾಸ್ಥಿತಃ||

ನಾರದನು ಹೇಳಿದನು: “ಆ ಭೂರಿದಕ್ಷಿಣ ಒಳ್ಳೆಯ ಪಾರ್ಥಿವರಿಂದ ಸ್ವರ್ಗಕ್ಕೆ ಏರಿಸಲ್ಪಟ್ಟ ಯಯಾತಿಯು ಮಗಳ ಮಕ್ಕಳನ್ನು ಬೀಳ್ಕೊಂಡು ಸ್ವರ್ಗವನ್ನು ಸೇರಿದನು.

05121002a ಅಭಿವೃಷ್ಟಶ್ಚ ವರ್ಷೇಣ ನಾನಾಪುಷ್ಪಸುಗಂಧಿನಾ|

05121002c ಪರಿಷ್ವಕ್ತಶ್ಚ ಪುಣ್ಯೇನ ವಾಯುನಾ ಪುಣ್ಯಗಂಧಿನಾ||

05121003a ಅಚಲಂ ಸ್ಥಾನಮಾರುಹ್ಯ ದೌಹಿತ್ರಫಲನಿರ್ಜಿತಂ|

05121003c ಕರ್ಮಭಿಃ ಸ್ವೈರುಪಚಿತೋ ಜಜ್ವಾಲ ಪರಯಾ ಶ್ರಿಯಾ||

ನಾನಾ ಸುಗಂಧಿತ ಪುಷ್ಪಗಳ ಮಳೆಯಲ್ಲಿ ಮಿಂದು, ಪುಣ್ಯಸುಗಂಧಯುಕ್ತ ಪುಣ್ಯಗಾಳಿಗೆ ಸಿಲುಕಿ, ಮಗಳ ಮಕ್ಕಳ ಫಲವನ್ನು ಪಡೆದು ಅಚಲ ಸ್ಥಾನವನ್ನೇರಿ, ತನ್ನದೇ ಉಪಚಿತ ಕರ್ಮಗಳಿಂದ ಪರಮ ಶ್ರೀಯನ್ನು ಪಡೆದು ಪ್ರಜ್ವಲಿಸಿದನು.

05121004a ಉಪಗೀತೋಪನೃತ್ತಶ್ಚ ಗಂಧರ್ವಾಪ್ಸರಸಾಂ ಗಣೈಃ|

05121004c ಪ್ರೀತ್ಯಾ ಪ್ರತಿಗೃಹೀತಶ್ಚ ಸ್ವರ್ಗೇ ದುಂದುಭಿನಿಸ್ವನೈಃ||

ಗಂಧರ್ವಾಪ್ಸರ ಗಣಗಳ ಉಪಗೀತ ಉಪನೃತ್ಯಗಳಿಂದ, ದುಂದುಭಿ ನಿಸ್ವನಗಳಿಂದ ಅವನು ಸ್ವರ್ಗದಲ್ಲಿ ಪ್ರೀತಿಯಿಂದ ಸ್ವಾಗತಿಸಲ್ಪಟ್ಟನು.

05121005a ಅಭಿಷ್ಟುತಶ್ಚ ವಿವಿಧೈರ್ದೇವರಾಜರ್ಷಿಚಾರಣೈಃ|

05121005c ಅರ್ಚಿತಶ್ಚೋತ್ತಮಾರ್ಘೇಣ ದೈವತೈರಭಿನಂದಿತಃ||

05121006a ಪ್ರಾಪ್ತಃ ಸ್ವರ್ಗಫಲಂ ಚೈವ ತಮುವಾಚ ಪಿತಾಮಹಃ|

05121006c ನಿರ್ವೃತಂ ಶಾಂತಮನಸಂ ವಚೋಭಿಸ್ತರ್ಪಯನ್ನಿವ||

ವಿವಿಧ ದೇವ-ರಾಜರ್ಷಿ ಚಾರಣರ ಅರ್ಚನೆಗಳಿಂದ ಸಂತೋಷಗೊಂಡು, ದೇವತೆಗಳಿಂದ ಅಭಿನಂದಿತನಾಗಿ, ಅವನು ಸ್ವರ್ಗಫಲವನ್ನು ಹೊಂದಿದನು. ಆಗ ಪಿತಾಮಹನು ಶಾಂತಮನಸ್ಕನಾಗಿ ಹಿಂದಿರುಗಿದ ಅವನನ್ನು ತೃಪ್ತಿಗೊಳಿಸಲೋ ಎನ್ನುವಂತೆ ಹೇಳಿದನು:

05121007a ಚತುಷ್ಪಾದಸ್ತ್ವಯಾ ಧರ್ಮಶ್ಚಿತೋ ಲೋಕ್ಯೇನ ಕರ್ಮಣಾ|

05121007c ಅಕ್ಷಯಸ್ತವ ಲೋಕೋಽಯಂ ಕೀರ್ತಿಶ್ಚೈವಾಕ್ಷಯಾ ದಿವಿ|

05121007e ಪುನಸ್ತವಾದ್ಯ ರಾಜರ್ಷೇ ಸುಕೃತೇನೇಹ ಕರ್ಮಣಾ||

“ಲೋಕದಲ್ಲಿ ಕರ್ಮಗಳ ಮೂಲಕ ನಾಲ್ಕು ಭಾಗ ಧರ್ಮಗಳನ್ನು ಸಂಚಯಿಸಿದ್ದೀಯೆ. ಈ ಲೋಕವು ನಿನಗೆ ಅಕ್ಷಯವಾಗುತ್ತದೆ. ರಾಜರ್ಷೇ! ನಿನ್ನ ಸುಕೃತ ಕರ್ಮಗಳಿಂದ ಪುನಃ ದಿವಿಯಲ್ಲಿ ನಿನ್ನ ಕೀರ್ತಿಯೂ ಅಕ್ಷಯವಾಗುತ್ತದೆ.

05121008a ಆವೃತಂ ತಮಸಾ ಚೇತಃ ಸರ್ವೇಷಾಂ ಸ್ವರ್ಗವಾಸಿನಾಂ|

05121008c ಯೇನ ತ್ವಾಂ ನಾಭಿಜಾನಂತಿ ತತೋಽಜ್ಞಾತ್ವಾಸಿ ಪಾತಿತಃ||

ಸ್ವರ್ಗವಾಸಿಗಳೆಲ್ಲರ ಚೇತನಗಳೂ ತಮಸ್ಸಿನಿಂದ ಆವೃತವಾಗಿದ್ದವು. ಆದುದರಿಂದ ಅವರು ನಿನ್ನನ್ನು ಗುರುತಿಸಲಾರದಾದರು. ಗುರುತಿಗೆ ಸಿಗದೇ ನೀನು ಕೆಳಗೆ ಬಿದ್ದೆ.

05121009a ಪ್ರೀತ್ಯೈವ ಚಾಸಿ ದೌಹಿತ್ರೈಸ್ತಾರಿತಸ್ತ್ವಮಿಹಾಗತಃ|

05121009c ಸ್ಥಾನಂ ಚ ಪ್ರತಿಪನ್ನೋಽಸಿ ಕರ್ಮಣಾ ಸ್ವೇನ ನಿರ್ಜಿತಂ|

05121009e ಅಚಲಂ ಶಾಶ್ವತಂ ಪುಣ್ಯಮುತ್ತಮಂ ಧ್ರುವಮವ್ಯಯಂ||

ನಿನ್ನ ಮಗಳ ಮಕ್ಕಳು ಪ್ರೀತಿಯಿಂದ ನಿನ್ನನ್ನು ಉದ್ಧರಿಸಿದುದರಿಂದ ನೀನು ಇಲ್ಲಿಗೆ ಬಂದಿರುವೆ. ಮತ್ತು ನಿನ್ನ ಕರ್ಮಗಳಿಂದ ಗಳಿಸಿದ ಈ ಅಚಲವೂ, ಶಾಶ್ವತವೂ, ಪುಣ್ಯವೂ, ಉತ್ತಮವೂ, ನಿಶ್ಚಿತವೂ, ಅವ್ಯಯವೂ ಆಗಿರುವ ಸ್ಥಾನವನ್ನು ಗಳಿಸಿರುವೆ.”

05121010 ಯಯಾತಿರುವಾಚ|

05121010a ಭಗವನ್ಸಂಶಯೋ ಮೇಽಸ್ತಿ ಕಶ್ಚಿತ್ತಂ ಚೇತ್ತುಮರ್ಹಸಿ|

05121010c ನ ಹ್ಯನ್ಯಮಹಮರ್ಹಾಮಿ ಪ್ರಷ್ಟುಂ ಲೋಕಪಿತಾಮಹ||

ಯಯಾತಿಯು ಹೇಳಿದನು: “ಭಗವನ್! ಲೋಕಪಿತಾಮಹ! ನನಗೊಂದು ಸಂಶಯವಿದೆ. ಅದನ್ನು ಹೋಗಲಾಡಿಸಬೇಕು. ಏಕೆಂದರೆ ಬೇರೆ ಯಾರಲ್ಲಿಯೂ ಇದನ್ನು ಕೇಳಲಾರೆ.

05121011a ಬಹುವರ್ಷಸಹಸ್ರಾಂತಂ ಪ್ರಜಾಪಾಲನವರ್ಧಿತಂ|

05121011c ಅನೇಕಕ್ರತುದಾನೌಘೈರರ್ಜಿತಂ ಮೇ ಮಹತ್ಫಲಂ||

ಬಹಳ ಸಹಸ್ರಾರು ವರ್ಷಗಳ ಕಾಲ ಪ್ರಜಾಪಾಲನೆಯಿಂದ ಬೆಳೆದ, ಅನೇಕ ಕ್ರತು-ದಾನಾದಿಗಳಿಂದ ನಾನು ಮಹಾ ಫಲವನ್ನು ಗಳಿಸಿದ್ದೆನು.

05121012a ಕಥಂ ತದಲ್ಪಕಾಲೇನ ಕ್ಷೀಣಂ ಯೇನಾಸ್ಮಿ ಪಾತಿತಃ|

05121012c ಭಗವನ್ವೇತ್ಥ ಲೋಕಾಂಶ್ಚ ಶಾಶ್ವತಾನ್ಮಮ ನಿರ್ಜಿತಾನ್||

ಆದರೆ, ಅದು ಸ್ವಲ್ಪವೇ ಸಮಯದಲ್ಲಿ ಕ್ಷೀಣವಾಗಿ ನಾನು ಹೇಗೆ ಬಿದ್ದೆ? ಭಗವನ್! ನಾನು ಗಳಿಸಿದ ಶಾಶ್ವತ ಲೋಕಗಳು ನಿನಗೆ ತಿಳಿದೇ ಇವೆ.”

05121013 ಪಿತಾಮಹ ಉವಾಚ|

05121013a ಬಹುವರ್ಷಸಹಸ್ರಾಂತಂ ಪ್ರಜಾಪಾಲನವರ್ಧಿತಂ|

05121013c ಅನೇಕಕ್ರತುದಾನೌಘೈರ್ಯತ್ತ್ವಯೋಪಾರ್ಜಿತಂ ಫಲಂ||

ಪಿತಾಮಹನು ಹೇಳಿದನು: “ಬಹಳ ಸಹಸ್ರಾರು ವರ್ಷಗಳ ಕಾಲ ಪ್ರಜಾಪಾಲನೆಯಿಂದ ಬೆಳೆದ, ಅನೇಕ ಕ್ರತು-ದಾನಾದಿಗಳಿಂದ ನೀನು ಮಹಾ ಫಲಗಳನ್ನು ಗಳಿಸಿದ್ದೆ.

05121014a ತದನೇನೈವ ದೋಷೇಣ ಕ್ಷೀಣಂ ಯೇನಾಸಿ ಪಾತಿತಃ|

05121014c ಅಭಿಮಾನೇನ ರಾಜೇಂದ್ರ ಧಿಕ್ಕೃತಃ ಸ್ವರ್ಗವಾಸಿಭಿಃ||

ಆದರೆ ಅವನ್ನು ಒಂದೇ ಒಂದು ದೋಷದಿಂದ ಅವುಗಳನ್ನು ಕಳೆದುಕೊಂಡು ಇಲ್ಲಿಂದ ಕೆಳಗುರುಳಿದೆ. ರಾಜೇಂದ್ರ! ಅಭಿಮಾನದಿಂದ ನೀನು ಸ್ವರ್ಗವಾಸಿಗಳಿಂದ ಧಿಕ್ಕರಿಸಲ್ಪಟ್ಟೆ.

05121015a ನಾಯಂ ಮಾನೇನ ರಾಜರ್ಷೇ ನ ಬಲೇನ ನ ಹಿಂಸಯಾ|

05121015c ನ ಶಾಠ್ಯೇನ ನ ಮಾಯಾಭಿರ್ಲೋಕೋ ಭವತಿ ಶಾಶ್ವತಃ||

ರಾಜರ್ಷೇ! ಈ ಲೋಕವು ಮಾನದಿಂದ, ಬಲದಿಂದ, ಹಿಂಸೆಯಿಂದ, ಮೋಸದಿಂದ ಮತ್ತು ಮಾಯೆಯಿಂದ ಶಾಶ್ವತವಾಗುವುದಿಲ್ಲ.

05121016a ನಾವಮಾನ್ಯಾಸ್ತ್ವಯಾ ರಾಜನ್ನವರೋತ್ಕೃಷ್ಟಮಧ್ಯಮಾಃ|

05121016c ನ ಹಿ ಮಾನಪ್ರದಗ್ಧಾನಾಂ ಕಶ್ಚಿದಸ್ತಿ ಸಮಃ ಕ್ವ ಚಿತ್||

ರಾಜನ್! ನೀನು ಮೇಲಿರುವವರನ್ನಾಗಲೀ, ಕೆಳಗಿರುವವರನ್ನಾಗಲೀ, ಮುಧ್ಯಮರನ್ನಾಗಲೀ ಅವಮಾನಿಸಕೂಡದು. ಅಭಿಮಾನದ ಕಿಚ್ಚಿಗೆ ಸಿಲುಕಿದವರಿಗೆ ಎಂದೂ ಯಾರೂ ಸಮರೆನಿಸುವುದಿಲ್ಲ.

05121017a ಪತನಾರೋಹಣಮಿದಂ ಕಥಯಿಷ್ಯಂತಿ ಯೇ ನರಾಃ|

05121017c ವಿಷಮಾಣ್ಯಪಿ ತೇ ಪ್ರಾಪ್ತಾಸ್ತರಿಷ್ಯಂತಿ ನ ಸಂಶಯಃ||

ನಿನ್ನ ಈ ಪತನ ಮತ್ತು ಆರೋಹಣವನ್ನು ಯಾವ ನರರು ಹೇಳುತ್ತಾರೋ ಅವರು ಎಲ್ಲ ಕಷ್ಟಗಳನ್ನು ದಾಟುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ!””

05121018 ನಾರದ ಉವಾಚ|

05121018a ಏಷ ದೋಷೋಽಭಿಮಾನೇನ ಪುರಾ ಪ್ರಾಪ್ತೋ ಯಯಾತಿನಾ|

05121018c ನಿರ್ಬಂಧತಶ್ಚಾತಿಮಾತ್ರಂ ಗಾಲವೇನ ಮಹೀಪತೇ||

ನಾರದನು ಹೇಳಿದನು: “ಮಹೀಪತೇ! ಈ ರೀತಿ ಅಭಿಮಾನದಿಂದ ಹಿಂದೆ ಯಯಾತಿ ಮತ್ತು ಗಾಲವರು ಅತಿ ನಿರ್ಬಂಧಕ್ಕಾಗಿ ದೋಷಗಳನ್ನು ಹೊಂದಿದರು.

05121019a ಶ್ರೋತವ್ಯಂ ಹಿತಕಾಮಾನಾಂ ಸುಹೃದಾಂ ಭೂತಿಮಿಚ್ಚತಾಂ|

05121019c ನ ಕರ್ತವ್ಯೋ ಹಿ ನಿರ್ಬಂಧೋ ನಿರ್ಬಂಧೋ ಹಿ ಕ್ಷಯೋದಯಃ||

ತಮ್ಮ ಏಳಿಗೆಯನ್ನು ಬಯಸುವವರು ಸುಹೃದಯರ ಹಿತಕಾಮನೆಗಳನ್ನು ಕೇಳಬೇಕು. ಹಠವನ್ನು ಮಾಡಬಾರದು. ಏಕೆಂದರೆ ಹಠವು ಕ್ಷಯವನ್ನು ತರುತ್ತದೆ.

05121020a ತಸ್ಮಾತ್ತ್ವಮಪಿ ಗಾಂಧಾರೇ ಮಾನಂ ಕ್ರೋಧಂ ಚ ವರ್ಜಯ|

05121020c ಸಂಧತ್ಸ್ವ ಪಾಂಡವೈರ್ವೀರ ಸಂರಂಭಂ ತ್ಯಜ ಪಾರ್ಥಿವ||

ಆದುದರಿಂದ ಗಾಂಧಾರೇ! ನೀನೂ ಕೂಡ ಮಾನಕ್ರೋಧಗಳನ್ನು ತೊರೆದು ವೀರ ಪಾಂಡವರೊಂದಿಗೆ ಸಂಧಿ ಮಾಡಿಕೋ! ಪಾರ್ಥಿವ! ಈ ರಂಪಾಟವನ್ನು ತ್ಯಜಿಸು.

05121021a ದದಾತಿ ಯತ್ಪಾರ್ಥಿವ ಯತ್ಕರೋತಿ

         ಯದ್ವಾ ತಪಸ್ತಪ್ಯತಿ ಯಜ್ಜುಹೋತಿ|

05121021c ನ ತಸ್ಯ ನಾಶೋಽಸ್ತಿ ನ ಚಾಪಕರ್ಷೋ

         ನಾನ್ಯಸ್ತದಶ್ನಾತಿ ಸ ಏವ ಕರ್ತಾ||

ಪಾರ್ಥಿವ! ಏನನ್ನು ಕೊಡುತ್ತೀವೋ, ಏನನ್ನು ಮಾಡುತ್ತೇವೋ, ಏನು ತಪಸ್ಸನ್ನು ತಪಿಸುತ್ತೇವೋ, ಏನು ಯಜ್ಞಗಳನ್ನು ಮಾಡುತ್ತೇವೋ ಅವುಗಳು ನಾಶವಾಗುವುದಿಲ್ಲ. ಬೇರೆ ಯಾರೂ ತೆಗೆದುಕೊಳ್ಳುವುದಿಲ್ಲ. ಮಾಡುವವನಲ್ಲದೇ ಬೇರೆ ಯಾರಿಗೂ ಅವು ತಲುಪುವುದಿಲ್ಲ.

05121022a ಇದಂ ಮಹಾಖ್ಯಾನಮನುತ್ತಮಂ ಮತಂ

         ಬಹುಶ್ರುತಾನಾಂ ಗತರೋಷರಾಗಿಣಾಂ|

05121022c ಸಮೀಕ್ಷ್ಯ ಲೋಕೇ ಬಹುಧಾ ಪ್ರಧಾವಿತಾ

         ತ್ರಿವರ್ಗದೃಷ್ಟಿಃ ಪೃಥಿವೀಮುಪಾಶ್ನುತೇ||

ಈ ಉತ್ತಮ ಮಹಾಖ್ಯಾನವನ್ನು ಬಹುಶ್ರುತರು ರೋಷರಾಗಗಳನ್ನು ಕಳೆದುಕೊಂಡವರು ಲೋಕಕ್ಕೆ ಬಹುರೀತಿಗಳಲ್ಲಿ ಮೂರೂವರ್ಗದ ದೃಷ್ಟಿಗಳಿಂದ ತೋರಿಸಿ ಕೊಟ್ಟರೆ ಅವರು ಭೂಮಿಯನ್ನು ಪಡೆಯುತ್ತಾರೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಏಕವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಇಪ್ಪತ್ತೊಂದನೆಯ ಅಧ್ಯಾಯವು.

Image result for flowers against white background"

Comments are closed.