Udyoga Parva: Chapter 100

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೦

ನಾರದನು ಗೋವುಗಳ ಮಾತೆ ಸುರಭಿಯು ವಾಸಿಸುವ ರಸಾತಲವನ್ನು ಮಾತಲಿಗೆ ತೋರಿಸಿದುದು (೧-೧೫).

05100001 ನಾರದ ಉವಾಚ|

05100001a ಇದಂ ರಸಾತಲಂ ನಾಮ ಸಪ್ತಮಂ ಪೃಥಿವೀತಲಂ|

05100001c ಯತ್ರಾಸ್ತೇ ಸುರಭಿರ್ಮಾತಾ ಗವಾಮಮೃತಸಂಭವಾ||

ನಾರದನು ಹೇಳಿದನು: “ಇದು ಪೃಥಿವಿಯ ಕೆಳಗಿರುವ ರಸಾತಲವೆಂಬ ಹೆಸರಿನ ಏಳನೆಯ ಲೋಕ. ಇಲ್ಲಿ ಅಮೃತಸಂಭವೆ ಗೋವುಗಳ ಮಾತೆ ಸುರಭಿಯು ವಾಸಿಸುತ್ತಾಳೆ.

05100002a ಕ್ಷರಂತೀ ಸತತಂ ಕ್ಷೀರಂ ಪೃಥಿವೀಸಾರಸಂಭವಂ|

05100002c ಷಣ್ಣಾಂ ರಸಾನಾಂ ಸಾರೇಣ ರಸಮೇಕಮನುತ್ತಮಂ||

ಇವಳು ಸತತವೂ ಭೂಮಿಯಲ್ಲಿ ಸಾರಸಂಭವವೆನಿಸಿದ, ಆರು ರಸಗಳಲ್ಲಿ ಒಂದೇ ಅನುತ್ತಮ ರಸಸಾರವಾದ ಹಾಲನ್ನು ಸುರಿಸುತ್ತಾಳೆ.

05100003a ಅಮೃತೇನಾಭಿತೃಪ್ತಸ್ಯ ಸಾರಮುದ್ಗಿರತಃ ಪುರಾ|

05100003c ಪಿತಾಮಹಸ್ಯ ವದನಾದುದತಿಷ್ಠದನಿಂದಿತಾ||

ಈ ಅನಿಂದಿತೆಯು ಹಿಂದೆ ಅಮೃತದಿಂದ ಸಂತೃಪ್ತನಾಗಿ ಸಾರವನ್ನು ಕಕ್ಕಿದ ಪಿತಾಮಹನ ಬಾಯಿಯಿಂದ ಹೊರಬಿದ್ದಳು.

05100004a ಯಸ್ಯಾಃ ಕ್ಷೀರಸ್ಯ ಧಾರಾಯಾ ನಿಪತಂತ್ಯಾ ಮಹೀತಲೇ|

05100004c ಹ್ರದಃ ಕೃತಃ ಕ್ಷೀರನಿಧಿಃ ಪವಿತ್ರಂ ಪರಮುತ್ತಮಂ||

ಅವಳ ಹಾಲಿನ ಧಾರೆಯು ಭೂಮಿಯ ಮೇಲೆ ಬೀಳಲು ಪವಿತ್ರವೂ, ಪರಮ ಉತ್ತಮವೂ ಆದ ಕ್ಷೀರನಿಧಿ ಸರೋವರವು ಮಾಡಲ್ಪಟ್ಟಿತು.

05100005a ಪುಷ್ಪಿತಸ್ಯೇವ ಫೇನಸ್ಯ ಪರ್ಯಂತಮನುವೇಷ್ಟಿತಂ|

05100005c ಪಿಬಂತೋ ನಿವಸಂತ್ಯತ್ರ ಫೇನಪಾ ಮುನಿಸತ್ತಮಾಃ||

ಅದರ ದಡವು ಸುತ್ತಲೂ ಹಾಲಿನ ನೊರೆಯಿಂದ ಕೂಡಿದೆ. ಅಲ್ಲಿ ವಾಸಿಸುವ ಮುನಿಸತ್ತಮರು ಆ ಹಾಲಿನ ನೊರೆಯನ್ನು ಕುಡಿಯುತ್ತಾರೆ.

05100006a ಫೇನಪಾ ನಾಮ ನಾಮ್ನಾ ತೇ ಫೇನಾಹಾರಾಶ್ಚ ಮಾತಲೇ|

05100006c ಉಗ್ರೇ ತಪಸಿ ವರ್ತಂತೇ ಯೇಷಾಂ ಬಿಭ್ಯತಿ ದೇವತಾಃ||

ಮಾತಲೀ! ಅವರನ್ನು ಫೇನಪಾ ಎಂಬ ಹೆಸರಿನಿಂದ ಕರೆಯುತ್ತಾರೆ. ಏಕೆಂದರೆ ಅವರು ಈ ಹಾಲಿನ ನೊರೆಯನ್ನು ಕುಡಿದು ಮಾತ್ರ ಜೀವಿಸುತ್ತಾರೆ. ಉಗ್ರ ತಪಸ್ಸಿನಲ್ಲಿ ತೊಡಗಿರುವ ಇವರಿಗೆ ದೇವತೆಗಳೂ ಭಯಪಡುತ್ತಾರೆ.

05100007a ಅಸ್ಯಾಶ್ಚತಸ್ರೋ ಧೇನ್ವೋಽನ್ಯಾ ದಿಕ್ಷು ಸರ್ವಾಸು ಮಾತಲೇ|

05100007c ನಿವಸಂತಿ ದಿಶಾಪಾಲ್ಯೋ ಧಾರಯಂತ್ಯೋ ದಿಶಃ ಸ್ಮೃತಾಃ||

ಮಾತಲೀ! ಅವಳಿಗೆ ಎಲ್ಲ ದಿಕ್ಕುಗಳಲ್ಲಿಯೂ ವಾಸಿಸುವ, ದಿಶಾಪಾಲರು ಇದ್ದಾರೆ. ಅವರು ದಿಕ್ಕುಗಳನ್ನು ಧರಿಸುತ್ತಾರೆ ಎಂದು ಕೇಳಿದ್ದೇವೆ.

05100008a ಪೂರ್ವಾಂ ದಿಶಂ ಧಾರಯತೇ ಸುರೂಪಾ ನಾಮ ಸೌರಭೀ|

05100008c ದಕ್ಷಿಣಾಂ ಹಂಸಕಾ ನಾಮ ಧಾರಯತ್ಯಪರಾಂ ದಿಶಂ||

ಸುರೂಪ ಎಂಬ ಹೆಸರಿನ ಸೌರಭಿಯು ಪೂರ್ವದಿಕ್ಕನ್ನು ಬೆಂಬಲಿಸುತ್ತಾಳೆ, ಹಂಸಕ ಎಂಬ ಹೆಸರಿನವಳು ಇನ್ನೊಂದು ದಿಕ್ಕು ದಕ್ಷಿಣವನ್ನು ಬೆಂಬಲಿಸುತ್ತಾಳೆ.

05100009a ಪಶ್ಚಿಮಾ ವಾರುಣೀ ದಿಕ್ಚ ಧಾರ್ಯತೇ ವೈ ಸುಭದ್ರಯಾ|

05100009c ಮಹಾನುಭಾವಯಾ ನಿತ್ಯಂ ಮಾತಲೇ ವಿಶ್ವರೂಪಯಾ||

ಮಾತಲೇ! ಮಹಾನುಭಾವೆ ವಿಶ್ವರೂಪಿ ಸುಭದ್ರೆಯು ವರುಣನ ಪಶ್ಚಿಮ ದಿಕ್ಕನ್ನು ಬೆಂಬಲಿಸುತ್ತಾಳೆ.

05100010a ಸರ್ವಕಾಮದುಘಾ ನಾಮ ಧೇನುರ್ಧಾರಯತೇ ದಿಶಂ|

05100010c ಉತ್ತರಾಂ ಮಾತಲೇ ಧರ್ಮ್ಯಾಂ ತಥೈಲವಿಲಸಂಜ್ಞೈತಾಂ||

ಮಾತಲೇ! ಸರ್ವಕಾಮದುಘಾ ಎಂಬ ಹೆಸರಿನ ಧೇನುವು ಧರ್ಮಯುಕ್ತವಾದ. ಸಂಪತ್ತಿನ ಒಡೆಯ ಕುಬೇರನದೆಂದು ಸೂಚಿತಗೊಂಡ ಉತ್ತರ ದಿಕ್ಕನ್ನು ಬೆಂಬಲಿಸುತ್ತಾಳೆ.

05100011a ಆಸಾಂ ತು ಪಯಸಾ ಮಿಶ್ರಂ ಪಯೋ ನಿರ್ಮಥ್ಯ ಸಾಗರೇ|

05100011c ಮಂಥಾನಂ ಮಂದರಂ ಕೃತ್ವಾ ದೇವೈರಸುರಸಂಹಿತೈಃ||

ಇವರ ಹಾಲಿನಿಂದ ಮಿಶ್ರಿತವಾದ ಕ್ಷೀರಸಾಗರವನ್ನು ಅಸುರರೊಂದಿಗೆ ಕೂಡಿ ದೇವತೆಗಳು ಮಂದರವನ್ನು ಕಡಗೋಲನ್ನಾಗಿ ಮಾಡಿ ಕಡೆದರು.

05100012a ಉದ್ಧೃತಾ ವಾರುಣೀ ಲಕ್ಷ್ಮೀರಮೃತಂ ಚಾಪಿ ಮಾತಲೇ|

05100012c ಉಚ್ಚೈಃಶ್ರವಾಶ್ಚಾಶ್ವರಾಜೋ ಮಣಿರತ್ನಂ ಚ ಕೌಸ್ತುಭಂ||

ಮಾತಲೇ! ಅದರಿಂದ ವಾರುಣೀ ಲಕ್ಷ್ಮೀ, ಅಮೃತ, ಅಶ್ವರಾಜ ಉಚ್ಛೈಃಶ್ರವಸ್, ಮತ್ತು ಮಣಿರತ್ನ ಕೌಸ್ತುಭಗಳು ಹುಟ್ಟಿದವು.

05100013a ಸುಧಾಹಾರೇಷು ಚ ಸುಧಾಂ ಸ್ವಧಾಭೋಜಿಷು ಚ ಸ್ವಧಾಂ|

05100013c ಅಮೃತಂ ಚಾಮೃತಾಶೇಷು ಸುರಭಿಃ ಕ್ಷರತೇ ಪಯಃ||

ಸುರಭಿಯು ಸುರಿಸುವ ಹಾಲು ಸುಧೆಯನ್ನು ಕುಡಿಯುವವರಿಗೆ ಸುಧೆಯಾಗುತ್ತದೆ, ಸ್ವಧಾವನ್ನು ಕುಡಿಯುವವರಿಗೆ ಸ್ವಧಾ ಆಗುತ್ತದೆ, ಅಮೃತವನ್ನು ಕುಡಿಯುವವರಿಗೆ ಅಮೃತವಾಗುತ್ತದೆ.

05100014a ಅತ್ರ ಗಾಥಾ ಪುರಾ ಗೀತಾ ರಸಾತಲನಿವಾಸಿಭಿಃ|

05100014c ಪೌರಾಣೀ ಶ್ರೂಯತೇ ಲೋಕೇ ಗೀಯತೇ ಯಾ ಮನೀಷಿಭಿಃ||

ರಸಾತಲವಾಸಿಗಳ ಕುರಿತಾದ ಒಂದು ಪುರಾತನ ಗೀತೆಯೊಂದಿದೆ. ಅದನ್ನು ಮನುಷ್ಯರ ಲೋಕದಲ್ಲಿಯೇ ಕೇಳಿಬರುತ್ತದೆ.

05100015a ನ ನಾಗಲೋಕೇ ನ ಸ್ವರ್ಗೇ ನ ವಿಮಾನೇ ತ್ರಿವಿಷ್ಟಪೇ|

05100015c ಪರಿವಾಸಃ ಸುಖಸ್ತಾದೃಗ್ರಸಾತಲತಲೇ ಯಥಾ||

ರಸಾತಲದಲ್ಲಿ ವಾಸಿಸುವವರಿಗೆ ಇರುವಷ್ಟು ಸುಖವು ನಾಗಲೋಕದಲ್ಲಿಲ್ಲ, ಸ್ವರ್ಗದಲ್ಲಿಲ್ಲ, ವಿಮಾನದಲ್ಲಿಲ್ಲ ಮತ್ತು ತ್ರಿವಿಷ್ಟಪದಲ್ಲಿಲ್ಲ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರನೆಯ ಅಧ್ಯಾಯವು.

Related image

Comments are closed.