Udyoga Parva: Chapter 109

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೯

ಗರುಡನು ಗಾಲವನಿಗೆ ಉತ್ತರ ದಿಕ್ಕನ್ನು ವರ್ಣಿಸಿದುದು (೧-೨೧).

05109001 ಸುಪರ್ಣ ಉವಾಚ|

05109001a ಯಸ್ಮಾದುತ್ತಾರ್ಯತೇ ಪಾಪಾದ್ಯಸ್ಮಾನ್ನಿಃಶ್ರೇಯಸೋಽಶ್ನುತೇ|

05109001c ತಸ್ಮಾದುತ್ತಾರಣಫಲಾದುತ್ತರೇತ್ಯುಚ್ಯತೇ ಬುಧೈಃ||

ಸುಪರ್ಣನು ಹೇಳಿದನು: “ಪಾಪ ಮತ್ತು ನಿಃಶ್ರೇಯಸ್ಸಿನಿಂದ ಪಾರುಮಾಡುವಂಥಹ ಉತ್ತಾರಣ ಫಲವನ್ನು ಹೊಂದಿರುವುದರಿಂದ ತಿಳಿದವರು ಈ ದಿಕ್ಕನ್ನು ಉತ್ತರ ಎಂದು ಕರೆಯುತ್ತಾರೆ.

05109002a ಉತ್ತರಸ್ಯ ಹಿರಣ್ಯಸ್ಯ ಪರಿವಾಪಸ್ಯ ಗಾಲವ|

05109002c ಮಾರ್ಗಃ ಪಶ್ಚಿಮಪೂರ್ವಾಭ್ಯಾಂ ದಿಗ್ಭ್ಯಾಂ ವೈ ಮಧ್ಯಮಃ ಸ್ಮೃತಃ||

ಗಾಲವ! ಹಿರಣ್ಯವನ್ನುಳ್ಳ ಉತ್ತರದ ಮಾರ್ಗವು ಪಶ್ಚಿಮ-ಪೂರ್ವ ದಿಕ್ಕುಗಳ ವರೆಗೂ ಪಸರಿಸಿರುವುದರಿಂದ ಇದನ್ನು ಮಧ್ಯಮ ಎಂದೂ ಕರೆಯುತ್ತಾರೆ.

05109003a ಅಸ್ಯಾಂ ದಿಶಿ ವರಿಷ್ಠಾಯಾಮುತ್ತರಾಯಾಂ ದ್ವಿಜರ್ಷಭ|

05109003c ನಾಸೌಮ್ಯೋ ನಾವಿಧೇಯಾತ್ಮಾ ನಾಧರ್ಮ್ಯೋ ವಸತೇ ಜನಃ||

ದ್ವಿಜರ್ಷಭ! ವರಿಷ್ಠವಾಗಿರುವ ಈ ಉತ್ತರ ದಿಕ್ಕಿನಲ್ಲಿ ಸೌಮ್ಯನಾಗಿಲ್ಲದಿರುವ, ವಿಧೇಯಾತ್ಮನಾಗಿಲ್ಲದ, ಅಧರ್ಮ ಜನರು ವಾಸಿಸುವುದಿಲ್ಲ.

05109004a ಅತ್ರ ನಾರಾಯಣಃ ಕೃಷ್ಣೋ ಜಿಷ್ಣುಶ್ಚೈವ ನರೋತ್ತಮಃ|

05109004c ಬದರ್ಯಾಮಾಶ್ರಮಪದೇ ತಥಾ ಬ್ರಹ್ಮಾ ಚ ಶಾಶ್ವತಃ||

ಅಲ್ಲಿ ಕೃಷ್ಣ ನಾರಾಯಣ ಮತ್ತು ನರೋತ್ತಮ ಜಿಷ್ಣು, ಮತ್ತು ಬ್ರಹ್ಮರು ಬದರಿಕಾಶ್ರಮಪದದಲ್ಲಿ ಶಾಶ್ವತರಾಗಿ ನೆಲಸಿದ್ದಾರೆ.

05109005a ಅತ್ರ ವೈ ಹಿಮವತ್ಪೃಷ್ಠೇ ನಿತ್ಯಮಾಸ್ತೇ ಮಹೇಶ್ವರಃ|

05109005c ಅತ್ರ ರಾಜ್ಯೇನ ವಿಪ್ರಾಣಾಂ ಚಂದ್ರಮಾಶ್ಚಾಭ್ಯಷಿಚ್ಯತ||

ಅಲ್ಲಿ ಹಿಮವತ್ಪರ್ವತದ ಮೇಲೆ ಮಹೇಶ್ವರನು ನಿತ್ಯವೂ ನೆಲಸಿದ್ದಾನೆ. ಅಲ್ಲಿ ಚಂದ್ರಮನನ್ನು ವಿಪ್ರರ ರಾಜ್ಯಕ್ಕೆ ಅಭಿಷೇಕಿಸಲಾಯಿತು.

05109006a ಅತ್ರ ಗಂಗಾಂ ಮಹಾದೇವಃ ಪತಂತೀಂ ಗಗನಾಚ್ಚ್ಯುತಾಂ|

05109006c ಪ್ರತಿಗೃಹ್ಯ ದದೌ ಲೋಕೇ ಮಾನುಷೇ ಬ್ರಹ್ಮವಿತ್ತಮ||

ಬ್ರಹ್ಮವಿತ್ತಮ! ಅಲ್ಲಿ ಮಹಾದೇವನು ಗಗನದಿಂದ ಕಳಚಿ ಬೀಳುತ್ತಿದ್ದ ಗಂಗೆಯನ್ನು ಹಿಡಿದು ಮಾನುಷ ಲೋಕಕ್ಕೆ ಕೊಟ್ಟನು.

05109007a ಅತ್ರ ದೇವ್ಯಾ ತಪಸ್ತಪ್ತಂ ಮಹೇಶ್ವರಪರೀಪ್ಸಯಾ|

05109007c ಅತ್ರ ಕಾಮಶ್ಚ ರೋಷಶ್ಚ ಶೈಲಶ್ಚೋಮಾ ಚ ಸಂಬಭುಃ||

ಅಲ್ಲಿ ಮಹೇಶ್ವರನನ್ನು ಬಯಸಿ ದೇವಿಯು ತಪಸ್ಸನ್ನು ತಪಿಸಿದಳು. ಅಲ್ಲಿ ಕಾಮ, ರೋಷ, ಶೈಲ ಮತ್ತು ಉಮ ಒಟ್ಟಿಗೇ ಬೆಳಗಿದರು.

05109008a ಅತ್ರ ರಾಕ್ಷಸಯಕ್ಷಾಣಾಂ ಗಂಧರ್ವಾಣಾಂ ಚ ಗಾಲವ|

05109008c ಆಧಿಪತ್ಯೇನ ಕೈಲಾಸೇ ಧನದೋಽಪ್ಯಭಿಷೇಚಿತಃ||

ಗಾಲವ! ಅಲ್ಲಿ ಕೈಲಾಸದಲ್ಲಿ ರಾಕ್ಷಸ, ಯಕ್ಷ, ಗಂಧರ್ವರ ಅಧಿಪತ್ಯದಿಂದ ಧನದನು ಅಭಿಷಿಕ್ತನಾದನು.

05109009a ಅತ್ರ ಚೈತ್ರರಥಂ ರಮ್ಯಮತ್ರ ವೈಖಾನಸಾಶ್ರಮಃ|

05109009c ಅತ್ರ ಮಂದಾಕಿನೀ ಚೈವ ಮಂದರಶ್ಚ ದ್ವಿಜರ್ಷಭ||

ದ್ವಿಜರ್ಷಭ! ಅಲ್ಲಿ ರಮ್ಯ ಚೈತ್ರರಥವಿದೆ. ಅಲ್ಲಿ ವೈಖಾನಸಾಶ್ರಮವಿದೆ. ಅಲ್ಲಿ ಮಂದಾಕಿನಿಯೂ ಮಂದರವೂ ಇವೆ.

05109010a ಅತ್ರ ಸೌಗಂಧಿಕವನಂ ನೈರೃತೈರಭಿರಕ್ಷ್ಯತೇ|

05109010c ಶಾಡ್ವಲಂ ಕದಲೀಸ್ಕಂಧಮತ್ರ ಸಂತಾನಕಾ ನಗಾಃ||

ಅಲ್ಲಿ ನೈರೃತರಿಂದ ರಕ್ಷಿತವಾದ ಸೌಗಂಧಿಕ ವನವಿದೆ. ಅಲ್ಲಿ ಹುಲ್ಲುಗಾವಲಿದೆ, ಬಾಳೆಯ ವನವಿದೆ ಮತ್ತು ಸಂತಾನಕ ಪರ್ವತಗಳಿವೆ.

05109011a ಅತ್ರ ಸಂಯಮನಿತ್ಯಾನಾಂ ಸಿದ್ಧಾನಾಂ ಸ್ವೈರಚಾರಿಣಾಂ|

05109011c ವಿಮಾನಾನ್ಯನುರೂಪಾಣಿ ಕಾಮಭೋಗ್ಯಾನಿ ಗಾಲವ||

ಗಾಲವ! ಅಲ್ಲಿ ಸಂಯಮಿಗಳಾದ, ಸ್ವಚ್ಛಂದರಾದ ಸಿದ್ಧರ ವಿಮಾನಗಳೂ, ಅನುರೂಪವಾದ ಕಾಮ ಭೋಗಗಳೂ ಇವೆ.

05109012a ಅತ್ರ ತೇ ಋಷಯಃ ಸಪ್ತ ದೇವೀ ಚಾರುಂಧತೀ ತಥಾ|

05109012c ಅತ್ರ ತಿಷ್ಠತಿ ವೈ ಸ್ವಾತಿರತ್ರಾಸ್ಯಾ ಉದಯಃ ಸ್ಮೃತಃ||

ಅಲ್ಲಿ ಸಪ್ತ ಋಷಿಗಳೂ ಮತ್ತು ದೇವೀ ಅರುಂಧತಿಯೂ ಕಾಣುತ್ತಾರೆ. ಅಲ್ಲಿ ಸ್ವಾತಿಯು ಉದಯಿಸಿ ಕಾಣಿಸಿಕೊಳ್ಳುತ್ತಾಳೆ.

05109013a ಅತ್ರ ಯಜ್ಞಾಂ ಸಮಾರುಹ್ಯ ಧ್ರುವಂ ಸ್ಥಾತಾ ಪಿತಾಮಹಃ|

05109013c ಜ್ಯೋತೀಂಷಿ ಚಂದ್ರಸೂರ್ಯೌ ಚ ಪರಿವರ್ತಂತಿ ನಿತ್ಯಶಃ||

ಅಲ್ಲಿ ಪಿತಾಮಹನು ಯಜ್ಞವನ್ನೇರಿರುತ್ತಾನೆ. ಅಲ್ಲಿ ಚಂದ್ರ, ಸೂರ್ಯ ಮತ್ತು ನಕ್ಷತ್ರಗಳು ನಿತ್ಯವೂ ತಿರುಗುತ್ತಿರುತ್ತವೆ.

05109014a ಅತ್ರ ಗಾಯಂತಿಕಾದ್ವಾರಂ ರಕ್ಷಂತಿ ದ್ವಿಜಸತ್ತಮಾಃ|

05109014c ಧಾಮಾ ನಾಮ ಮಹಾತ್ಮಾನೋ ಮುನಯಃ ಸತ್ಯವಾದಿನಃ||

ಅಲ್ಲಿ ಧಾಮ ಎಂಬ ಹೆಸರಿನ ಮಹಾತ್ಮ, ಸತ್ಯವಾದಿ, ದ್ವಿಜಸತ್ತಮ ಮುನಿಗಳು ಗಂಗಾದ್ವಾರವನ್ನು ರಕ್ಷಿಸುತ್ತಾರೆ.

05109015a ನ ತೇಷಾಂ ಜ್ಞಾಯತೇ ಸೂತಿರ್ನಾಕೃತಿರ್ನ ತಪಶ್ಚಿತಂ|

05109015c ಪರಿವರ್ತಸಹಸ್ರಾಣಿ ಕಾಮಭೋಗ್ಯಾನಿ ಗಾಲವ||

ಗಾಲವ! ಅವರ ಹುಟ್ಟು, ಕರ್ಮಗಳು, ಮತ್ತು ತಪಶ್ಚರ್ಯಗಳು, ಅವರು ಬಳಸುವ ಸಹಸ್ರಾರು ಪಾತ್ರೆಗಳು ಮತ್ತು ಕಾಮಭೋಗಗಳು ಯಾರಿಗೂ ತಿಳಿದಿಲ್ಲ.

05109016a ಯಥಾ ಯಥಾ ಪ್ರವಿಶತಿ ತಸ್ಮಾತ್ಪರತರಂ ನರಃ|

05109016c ತಥಾ ತಥಾ ದ್ವಿಜಶ್ರೇಷ್ಠ ಪ್ರವಿಲೀಯತಿ ಗಾಲವ||

ದ್ವಿಜಶ್ರೇಷ್ಠ! ಗಾಲವ! ಅವರು ಹಾಕಿದ ಗಡಿಯನ್ನು ದಾಟಿ ಯಾವ ನರನು ಹೋಗುತ್ತಾನೋ ಅವನು ನಾಶಹೊಂದುವುದು ಸತ್ಯ.

05109017a ನ ತತ್ಕೇನ ಚಿದನ್ಯೇನ ಗತಪೂರ್ವಂ ದ್ವಿಜರ್ಷಭ|

05109017c ಋತೇ ನಾರಾಯಣಂ ದೇವಂ ನರಂ ವಾ ಜಿಷ್ಣುಮವ್ಯಯಂ||

ದ್ವಿಜರ್ಷಭ! ಅವರು ಕಾಯುವ ಗಡಿಯನ್ನು ಇದೂವರೆಗೆ ಯಾರೂ - ದೇವ ನಾರಾಯಣ ಅಥವಾ ಅವ್ಯಯ ನರ ಜಿಷ್ಣುವನ್ನು ಬಿಟ್ಟು ಹೋಗಿಲ್ಲ.

05109018a ಅತ್ರ ಕೈಲಾಸಮಿತ್ಯುಕ್ತಂ ಸ್ಥಾನಮೈಲವಿಲಸ್ಯ ತತ್|

05109018c ಅತ್ರ ವಿದ್ಯುತ್ಪ್ರಭಾ ನಾಮ ಜಜ್ಞೈರೇಽಪ್ಸರಸೋ ದಶ||

ಅಲ್ಲಿ ಐಲವಿಲ (ಕುಬೇರ) ನ ಸ್ಥಾನವಾದ ಕೈಲಾಸವೆನ್ನುವುದಿದೆ. ಅಲ್ಲಿಯೇ ವಿದ್ಯುತ್ಪ್ರಭಾ ಎಂಬ ಹೆಸರಿನ ಹತ್ತು ಅಪ್ಸರೆಯರು ಜನಿಸಿದರು.

05109019a ಅತ್ರ ವಿಷ್ಣುಪದಂ ನಾಮ ಕ್ರಮತಾ ವಿಷ್ಣುನಾ ಕೃತಂ|

05109019c ತ್ರಿಲೋಕವಿಕ್ರಮೇ ಬ್ರಹ್ಮನ್ನುತ್ತರಾಂ ದಿಶಮಾಶ್ರಿತಂ||

ಬ್ರಹ್ಮನ್! ಅಲ್ಲಿ ತ್ರಿಲೋಕ ವಿಕ್ರಮದಲ್ಲಿ ವಿಷ್ಣುವು ಉತ್ತರ ದಿಕ್ಕನ್ನು ತುಳಿದ ವಿಷ್ಣುಪದ ಎಂಬ ಹೆಸರಿನ ಸ್ಥಳವಿದೆ.

05109020a ಅತ್ರ ರಾಜ್ಞಾ ಮರುತ್ತೇನ ಯಜ್ಞೇನೇಷ್ಟಂ ದ್ವಿಜೋತ್ತಮ|

05109020c ಉಶೀರಬೀಜೇ ವಿಪ್ರರ್ಷೇ ಯತ್ರ ಜಾಂಬೂನದಂ ಸರಃ||

ದ್ವಿಜೋತ್ತಮ! ವಿಪ್ರರ್ಷೇ! ಅಲ್ಲಿ ಕಾಂಚನ ಸರೋವರದ ಉಶೀರಬೀಜದಲ್ಲಿ ರಾಜಾ ಮರುತ್ತನು[1] ಯಜ್ಞ-ಇಷ್ಟಿಯನ್ನು ನಡೆಸಿದನು.

05109021a ಜೀಮೂತಸ್ಯಾತ್ರ ವಿಪ್ರರ್ಷೇರುಪತಸ್ಥೇ ಮಹಾತ್ಮನಃ|

05109021c ಸಾಕ್ಷಾದ್ಧೈಮವತಃ ಪುಣ್ಯೋ ವಿಮಲಃ ಕಮಲಾಕರಃ||

ಅಲ್ಲಿ ಮಹಾತ್ಮ ವಿಪ್ರರ್ಷಿ ಜೀಮೂತನಿಗೆ ಪುಣ್ಯ, ವಿಮಲ, ಕಮಲಾಕರ, ಪುಣ್ಯ ಹಿಮವತನು ಸಾಕ್ಷಾತ್ಕರಿಸಿದನು.

05109022a ಬ್ರಾಹ್ಮಣೇಷು ಚ ಯತ್ಕೃತ್ಸ್ನಂ ಸ್ವಂತಂ ಕೃತ್ವಾ ಧನಂ ಮಹತ್|

05109022c ವವ್ರೇ ವನಂ ಮಹರ್ಷಿಃ ಸ ಜೈಮೂತಂ ತದ್ವನಂ ತತಃ||

ಆಗ ಜೀಮೂತನು ಆ ಮಹಾ ಧನವನ್ನು ಸಂಪೂರ್ಣವಾಗಿ ಬ್ರಾಹ್ಮಣರಿಗಿತ್ತನು. ಅನಂತರ ಮಹರ್ಷಿಯು ಆ ವನವನ್ನು ಜೈಮೂತವನವೆಂದು ಕರೆಯುವಂತೆ ಕೇಳಿಕೊಂಡನು.

05109023a ಅತ್ರ ನಿತ್ಯಂ ದಿಶಾಪಾಲಾಃ ಸಾಯಂ ಪ್ರಾತರ್ದ್ವಿಜರ್ಷಭ|

05109023c ಕಸ್ಯ ಕಾರ್ಯಂ ಕಿಮಿತಿ ವೈ ಪರಿಕ್ರೋಶಂತಿ ಗಾಲವ||

ಗಾಲವ! ದ್ವಿಜರ್ಷಭ! ಅಲ್ಲಿ ನಿತ್ಯವೂ ಬೆಳಿಗ್ಗೆ ಮತ್ತು ಸಾಯಂಕಾಲ ದಿಕ್ಪಾಲಕರು “ಯಾರ ಕೆಲಸವು ಏನು?” ಎಂದು ಚರ್ಚಿಸುತ್ತಾರೆ.

05109024a ಏವಮೇಷಾ ದ್ವಿಜಶ್ರೇಷ್ಠ ಗುಣೈರನ್ಯೈರ್ದಿಗುತ್ತರಾ|

05109024c ಉತ್ತರೇತಿ ಪರಿಖ್ಯಾತಾ ಸರ್ವಕರ್ಮಸು ಚೋತ್ತರಾ||

ದ್ವಿಜಶ್ರೇಷ್ಠ! ಉತ್ತರವು ಇವುಗಳಿಂದ ಮತ್ತು ಇನ್ನೂ ಇತರ ಗುಣಗಳಿಂದ ಕೂಡಿದೆ. ಎಲ್ಲ ದಿಕ್ಕುಗಳಲ್ಲಿ ಇದು ಶ್ರೇಷ್ಠವಾಗಿರುವುದರಿಂದ ಇದಕ್ಕೆ ಉತ್ತರವೆಂಬ ಹೆಸರಿದೆ.

05109025a ಏತಾ ವಿಸ್ತರಶಸ್ತಾತ ತವ ಸಂಕೀರ್ತಿತಾ ದಿಶಃ|

05109025c ಚತಸ್ರಃ ಕ್ರಮಯೋಗೇನ ಕಾಮಾಶಾಂ ಗಂತುಮಿಚ್ಚಸಿ||

ಅಯ್ಯಾ! ಈ ರೀತಿ ನಾನು ನಿನಗೆ ನಾಲ್ಕೂ ದಿಕ್ಕುಗಳನ್ನು ಕ್ರಮಬದ್ಧವಾಗಿ ವಿಸ್ತಾರವಾಗಿ ವರ್ಣಿಸಿದ್ದೇನೆ. ಎಲ್ಲಿ ಹೋಗಲು ಬಯಸುತ್ತೀಯೆ?

05109026a ಉದ್ಯತೋಽಹಂ ದ್ವಿಜಶ್ರೇಷ್ಠ ತವ ದರ್ಶಯಿತುಂ ದಿಶಃ|

05109026c ಪೃಥಿವೀಂ ಚಾಖಿಲಾಂ ಬ್ರಹ್ಮಂಸ್ತಸ್ಮಾದಾರೋಹ ಮಾಂ ದ್ವಿಜ||

ದ್ವಿಜಶ್ರೇಷ್ಠ! ದ್ವಿಜ! ದಿಕ್ಕುಗಳನ್ನು, ಅಖಿಲ ಪೃಥ್ವಿಯನ್ನೂ ನಿನಗೆ ತೋರಿಸಲು ನಾನು ಉತ್ಸುಕನಾಗಿದ್ದೇನೆ. ಬ್ರಹ್ಮನ್! ನನ್ನನ್ನು ಏರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ನವಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಒಂಭತ್ತನೆಯ ಅಧ್ಯಾಯವು.

Related image

[1] ರಾಜಾ ಮರುತ್ತನ ಕಥೆಯನ್ನು ಮುಂದೆ ಅಶ್ವಮೇಧ ಪರ್ವದ ಅಧ್ಯಾಯ ೪ರಲ್ಲಿ ವ್ಯಾಸನು ಯುಧಿಷ್ಠಿರನಿಗೆ ಹೇಳುತ್ತಾನೆ.

Comments are closed.