Udyoga Parva: Chapter 78

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೮

ಕೃಷ್ಣ ರಾಯಭಾರಕ್ಕೆ ನಕುಲನ ಸಂದೇಶ

ಬರುವ ಆಪತ್ತನ್ನೆಲ್ಲವನ್ನೂ ನೀನು ತಡೆಯಬಲ್ಲೆ ಎಂದು ನಕುಲನು ಕೃಷ್ಣನಿಗೆ ಹೇಳಿದುದು (೧-೧೮).

05078001 ನಕುಲ ಉವಾಚ|

05078001a ಉಕ್ತಂ ಬಹುವಿಧಂ ವಾಕ್ಯಂ ಧರ್ಮರಾಜೇನ ಮಾಧವ|

05078001c ಧರ್ಮಜ್ಞೇನ ವದಾನ್ಯೇನ ಧರ್ಮಯುಕ್ತಂ ಚ ತತ್ತ್ವತಃ||

ನಕುಲನು ಹೇಳಿದನು: “ಮಾಧವ! ಧರ್ಮರಾಜನು ಬಹುವಿಧದಲ್ಲಿ ಮಾತುಗಳನ್ನಾಡಿದ್ದಾನೆ. ಧರ್ಮಜ್ಞನ ಈ ಮಾತುಗಳು ಧರ್ಮಯುಕ್ತವಾಗಿಯೂ ತತ್ತ್ವಯುಕ್ತವಾಗಿಯೂ ಇವೆ.

05078002a ಮತಮಾಜ್ಞಾಯ ರಾಜ್ಞಾಶ್ಚ ಭೀಮಸೇನೇನ ಮಾಧವ|

05078002c ಸಂಶಮೋ ಬಾಹುವೀರ್ಯಂ ಚ ಖ್ಯಾಪಿತಂ ಮಾಧವಾತ್ಮನಃ||

ಮಾಧವ! ರಾಜನ ಮತವನ್ನು ತಿಳಿದ ಭೀಮಸೇನನು ಶಮ ಮತ್ತು ಬಾಹುವೀರ್ಯ ಎರಡರ ಕುರಿತೂ ಮಾತನಾಡಿದ್ದಾನೆ.

05078003a ತಥೈವ ಫಲ್ಗುನೇನಾಪಿ ಯದುಕ್ತಂ ತತ್ತ್ವಯಾ ಶ್ರುತಂ|

05078003c ಆತ್ಮನಶ್ಚ ಮತಂ ವೀರ ಕಥಿತಂ ಭವತಾಸಕೃತ್||

ಹಾಗೆಯೇ ಫಲ್ಗುನನು ಏನು ಹೇಳಬೇಕೆಂದಿದ್ದನೋ ಅದನ್ನೂ ಕೂಡ ನೀನು ಕೇಳಿದ್ದೀಯೆ. ವೀರ! ನಿನ್ನ ಸ್ವಂತ ಮತವನ್ನು ಕೂಡ ನೀನು ಪುನಃ ಪುನಃ ಹೇಳಿದ್ದೀಯೆ.

05078004a ಸರ್ವಮೇತದತಿಕ್ರಮ್ಯ ಶ್ರುತ್ವಾ ಪರಮತಂ ಭವಾನ್|

05078004c ಯತ್ಪ್ರಾಪ್ತಕಾಲಂ ಮನ್ಯೇಥಾಸ್ತತ್ಕುರ್ಯಾಃ ಪುರುಷೋತ್ತಮ||

ಪುರುಷೋತ್ತಮ! ಈಗ ನೀನು ಕೇಳಿದ ಎಲ್ಲವನ್ನೂ ಬದಿಗೊತ್ತಿ, ಬಂದೊದಗಿರುವ ಈ ಸಮಯದಲ್ಲಿ ಏನನ್ನು ಮಾಡಬೇಕೆಂದು ನಿನಗನ್ನಿಸುತ್ತದೆಯೋ ಅದನ್ನು ಮಾಡು.

05078005a ತಸ್ಮಿಂಸ್ತಸ್ಮಿನ್ನಿಮಿತ್ತೇ ಹಿ ಮತಂ ಭವತಿ ಕೇಶವ|

05078005c ಪ್ರಾಪ್ತಕಾಲಂ ಮನುಷ್ಯೇಣ ಸ್ವಯಂ ಕಾರ್ಯಮರಿಂದಮ||

ಕೇಶವ! ಅರಿಂದಮ! ಪ್ರತಿಯೊಂದಕ್ಕೂ ಅಭಿಪ್ರಾಯಗಳು ಇರುತ್ತವೆ. ಆದರೆ ಬಂದಿರುವ ಕಾಲವನ್ನು ನೋಡಿ ಮನುಷ್ಯನು ಸ್ವತಃ ಕಾರ್ಯವನ್ನು ನಿರ್ಧರಿಸಬೇಕು.

05078006a ಅನ್ಯಥಾ ಚಿಂತಿತೋ ಹ್ಯರ್ಥಃ ಪುನರ್ಭವತಿ ಸೋಽನ್ಯಥಾ|

05078006c ಅನಿತ್ಯಮತಯೋ ಲೋಕೇ ನರಾಃ ಪುರುಷಸತ್ತಮ||

ಪುರುಷಸತ್ತಮ! ವಿಷಯವನ್ನು ಒಂದು ರೀತಿಯಲ್ಲಿ ಯೋಚಿಸಿದರೆ ಅದು ಬೇರೆಯೇ ರೀತಿಯಲ್ಲಿ ನಡೆಯಬಹುದು. ಈ ಲೋಕದಲ್ಲಿ ಜನರ ಅಭಿಪ್ರಾಯಗಳು ಬದಲಾಗುತ್ತಿರುತ್ತವೆ.

05078007a ಅನ್ಯಥಾ ಬುದ್ಧಯೋ ಹ್ಯಾಸನ್ನಸ್ಮಾಸು ವನವಾಸಿಷು|

05078007c ಅದೃಶ್ಯೇಷ್ವನ್ಯಥಾ ಕೃಷ್ಣ ದೃಶ್ಯೇಷು ಪುನರನ್ಯಥಾ||

ಕೃಷ್ಣ! ನಾವು ವನವಾಸದಲ್ಲಿರುವಾಗ ನಮ್ಮಲ್ಲಿ ಒಂದು ರೀತಿಯ ಯೋಚನೆಯಿತ್ತು, ಅಜ್ಞಾತವಾಸದಲ್ಲಿರುವಾಗ ಬೇರೆ ಯೋಚನೆಯಿತ್ತು, ಮತ್ತು ಈಗ ಪುನಃ ಎಲ್ಲರಿಗೂ ಕಾಣಿಸುವಂತಿರುವಾಗ ಬೇರೆಯೇ ಯೋಚನೆಯಿದೆ.

05078008a ಅಸ್ಮಾಕಮಪಿ ವಾರ್ಷ್ಣೇಯ ವನೇ ವಿಚರತಾಂ ತದಾ|

05078008c ನ ತಥಾ ಪ್ರಣಯೋ ರಾಜ್ಯೇ ಯಥಾ ಸಂಪ್ರತಿ ವರ್ತತೇ||

ವಾರ್ಷ್ಣೇಯ! ಅಂದು ವನದಲ್ಲಿ ಅಲೆಯುತ್ತಿರುವಾಗ ನಮಗೆ ರಾಜ್ಯದ ಕುರಿತು, ಈಗ ಇರುವಷ್ಟು ಆಸೆಯಿರಲಿಲ್ಲ.

05078009a ನಿವೃತ್ತವನವಾಸಾನ್ನಃ ಶ್ರುತ್ವಾ ವೀರ ಸಮಾಗತಾಃ|

05078009c ಅಕ್ಷೌಹಿಣ್ಯೋ ಹಿ ಸಪ್ತೇಮಾಸ್ತ್ವತ್ಪ್ರಸಾದಾಜ್ಜನಾರ್ದನ||

ವೀರ! ಜನಾರ್ದನ! ವನವಾಸದಿಂದ ಹಿಂದಿರುಗಿದ್ದಾರೆ ಎಂದು ಕೇಳಿದ ನಿನ್ನ ಪ್ರಸಾದದಿಂದಲೇ ಈ ಏಳು ಅಕ್ಷೌಹಿಣಿಗಳು ಬಂದು ಸೇರಿವೆ.

05078010a ಇಮಾನ್ ಹಿ ಪುರುಷವ್ಯಾಘ್ರಾನಚಿಂತ್ಯಬಲಪೌರುಷಾನ್|

05078010c ಆತ್ತಶಸ್ತ್ರಾನ್ ರಣೇ ದೃಷ್ಟ್ವಾ ನ ವ್ಯಥೇದಿಹ ಕಃ ಪುಮಾನ್||

ಯೋಚಿಸಲೂ ಅಸಾಧ್ಯವಾದ ಬಲಪೌರುಷಗಳುಳ್ಳ, ಶಸ್ತ್ರಗಳನ್ನು ಹಿಡಿಯುವ ಈ ಪುರುಷವ್ಯಾಘ್ರರನ್ನು ಕಂಡು ರಣದಲ್ಲಿ ಯಾವ ಪುರುಷನು ವ್ಯಥೆಗೊಳ್ಳುವುದಿಲ್ಲ?

05078011a ಸ ಭವಾನ್ಕುರುಮಧ್ಯೇ ತಂ ಸಾಂತ್ವಪೂರ್ವಂ ಭಯಾನ್ವಿತಂ|

05078011c ಬ್ರೂಯಾದ್ವಾಕ್ಯಂ ಯಥಾ ಮಂದೋ ನ ವ್ಯಥೇತ ಸುಯೋಧನಃ||

ಕುರುಮಧ್ಯದಲ್ಲಿ ನೀನು ಮಂದಬುದ್ಧಿ ಸುಯೋಧನನು ವ್ಯಥಿತನಾಗದಂತೆ ಸಾಂತ್ವಪೂರ್ವಕನಾಗಿ ಭಯಾನ್ವಿತನಾಗಿ ಮಾತನಾಡಬೇಕು.

05078012a ಯುಧಿಷ್ಠಿರಂ ಭೀಮಸೇನಂ ಬೀಭತ್ಸುಂ ಚಾಪರಾಜಿತಂ|

05078012c ಸಹದೇವಂ ಚ ಮಾಂ ಚೈವ ತ್ವಾಂ ಚ ರಾಮಂ ಚ ಕೇಶವ||

05078013a ಸಾತ್ಯಕಿಂ ಚ ಮಹಾವೀರ್ಯಂ ವಿರಾಟಂ ಚ ಸಹಾತ್ಮಜಂ|

05078013c ದ್ರುಪದಂ ಚ ಸಹಾಮಾತ್ಯಂ ಧೃಷ್ಟದ್ಯುಮ್ನಂ ಚ ಪಾರ್ಷತಂ||

05078014a ಕಾಶಿರಾಜಂ ಚ ವಿಕ್ರಾಂತಂ ಧೃಷ್ಟಕೇತುಂ ಚ ಚೇದಿಪಂ|

05078014c ಮಾಂಸಶೋಣಿತಭೃನ್ಮರ್ತ್ಯಃ ಪ್ರತಿಯುಧ್ಯೇತ ಕೋ ಯುಧಿ||

ಕೇಶವ! ರಕ್ತಮಾಂಸಗಳಿಂದ ಕೂಡಿದ ಯಾವ ಮನುಷ್ಯನು ತಾನೇ ಯುದ್ಧದಲ್ಲಿ ಇವರ ಯದುರಾಳಿಯಾಗಿ ಹೋರಾಡುತ್ತಾನೆ? - ಯುಧಿಷ್ಠಿರ, ಭೀಮಸೇನ, ಅಪರಾಜಿತ ಬೀಭತ್ಸು, ಸಹದೇವ, ನಾನು, ನೀನು, ರಾಮ, ಸಾತ್ಯಕಿ, ಮಕ್ಕಳೊಂದಿಗೆ ಮಹಾವೀರ್ಯ ವಿರಾಟ, ಅಮಾತ್ಯ-ದೃಷ್ಟದ್ಯುಮ್ನನೊಂದಿಗೆ ಪಾರ್ಷತ ದ್ರುಪದ, ವಿಕ್ರಾಂತ ಕಾಶಿರಾಜ ಮತ್ತು ಚೇದಿಪತಿ ಧೃಷ್ಟಕೇತು.

05078015a ಸ ಭವಾನ್ಗಮನಾದೇವ ಸಾಧಯಿಷ್ಯತ್ಯಸಂಶಯಂ|

05078015c ಇಷ್ಟಮರ್ಥಂ ಮಹಾಬಾಹೋ ಧರ್ಮರಾಜಸ್ಯ ಕೇವಲಂ||

ಮಹಾಬಾಹೋ! ಕೇವಲ ಹೋಗುವುದರಿಂದಲೇ ನೀನು ಧರ್ಮರಾಜನ ಇಷ್ಟವನ್ನು ಒಳಿತನ್ನು ಸಾಧಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.

05078016a ವಿದುರಶ್ಚೈವ ಭೀಷ್ಮಶ್ಚ ದ್ರೋಣಶ್ಚ ಸಹಬಾಹ್ಲಿಕಃ|

05078016c ಶ್ರೇಯಃ ಸಮರ್ಥಾ ವಿಜ್ಞಾತುಮುಚ್ಯಮಾನಂ ತ್ವಯಾನಘ||

ಅನಘ! ನೀನು ಹೇಳಹೊರಟಿರುವುದು ಶ್ರೇಯಸ್ಕರವಾದುದು ಎನ್ನುವುದನ್ನು ವಿದುರ, ಭೀಷ್ಮ, ದ್ರೋಣ ಮತ್ತು ಬಾಹ್ಲೀಕರು ಅರ್ಥಮಾಡಿಕೊಳ್ಳಲು ಸಮರ್ಥರು.

05078017a ತೇ ಚೈನಮನುನೇಷ್ಯಂತಿ ಧೃತರಾಷ್ಟ್ರಂ ಜನಾಧಿಪಂ|

05078017c ತಂ ಚ ಪಾಪಸಮಾಚಾರಂ ಸಹಾಮಾತ್ಯಂ ಸುಯೋಧನಂ||

ಅವರೇ ಜನಾಧಿಪ ಧೃತರಾಷ್ಟ್ರನನ್ನು, ಅಮಾತ್ಯರೂ ಕೂಡಿ ಪಾಪಿ ಸುಯೋಧನನನ್ನು ದಾರಿಗೆ ತರುತ್ತಾರೆ.

05078018a ಶ್ರೋತಾ ಚಾರ್ಥಸ್ಯ ವಿದುರಸ್ತ್ವಂ ಚ ವಕ್ತಾ ಜನಾರ್ದನ|

05078018c ಕಮಿವಾರ್ಥಂ ವಿವರ್ತಂತಂ ಸ್ಥಾಪಯೇತಾಂ ನ ವರ್ತ್ಮನಿ||

ಜನಾರ್ದನ! ಉರುಳಿಕೊಂಡು ಬರುತ್ತಿರುವ ಏನನ್ನು ತಾನೇ ಅರ್ಥವತ್ತಾಗಿ ಹೇಳುವ ನೀನು ಮತ್ತು ಕೇಳಿ ಅರ್ಥೈಸಿಕೊಳ್ಳುವ ವಿದುರ ಇಬ್ಬರಿಗೂ ತಡೆದು ನಿಲ್ಲಿಸಲಿಕ್ಕಾಗುವುದಿಲ್ಲ?”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ನಕುಲವಾಕ್ಯೇ ಅಷ್ಟಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ನಕುಲವಾಕ್ಯ ಎನ್ನುವ ಎಪ್ಪತ್ತೆಂಟನೆಯ ಅಧ್ಯಾಯವು.

Related image

Comments are closed.