Udyoga Parva: Chapter 137

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೭

ದುರ್ಯೋಧನನು ಬೇಸರಗೊಂಡಿದ್ದುದನ್ನು ಕಂಡು ಭೀಷ್ಮ-ದ್ರೋಣರು ಪುನಃ ಅವನಿಗೆ ಪಾಂಡವರೊಡನೆ ಹೋರಾಡಿ ಗೆಲ್ಲುವುದು ಕಷ್ಟವೆಂದೂ ಶಾಂತಿ ಮಾಡಿಕೊಳ್ಳೆಂದೂ ಹೇಳಿದುದು (೧-೨೨).

05137001 ವೈಶಂಪಾಯನ ಉವಾಚ|

05137001a ಏವಮುಕ್ತಸ್ತು ವಿಮನಾಸ್ತಿರ್ಯಗ್ದೃಷ್ಟಿರಧೋಮುಖಃ|

05137001c ಸಂಹತ್ಯ ಚ ಭ್ರುವೋರ್ಮಧ್ಯಂ ನ ಕಿಂ ಚಿದ್ವ್ಯಾಜಹಾರ ಹ||

ವೈಶಂಪಾಯನನು ಹೇಳಿದನು: “ಅವರು ಹೀಗೆ ಹೇಳಲು ದುರ್ಯೋಧನನು ವಿಮನಸ್ಕನಾಗಿ, ದೃಷ್ಟಿಯನ್ನು ಕೆಳಗೆಮಾಡಿ, ಹುಬ್ಬುಗಳ ನಡುವೆ ಗಂಟುಮಾಡಿಕೊಂಡು ಚಿಂತಾಮಗ್ನನಾದನು. ಏನನ್ನೂ ಮಾತನಾಡಲಿಲ್ಲ.

05137002a ತಂ ವೈ ವಿಮನಸಂ ದೃಷ್ಟ್ವಾ ಸಂಪ್ರೇಕ್ಷ್ಯಾನ್ಯೋನ್ಯಮಂತಿಕಾತ್|

05137002c ಪುನರೇವೋತ್ತರಂ ವಾಕ್ಯಮುಕ್ತವಂತೌ ನರರ್ಷಭೌ||

ಅವನು ಬೇಸರಗೊಂಡಿದ್ದುದನ್ನು ಕಂಡು ಆ ಇಬ್ಬರು ನರರ್ಷಭರೂ ಪರಸ್ಪರರನ್ನು ನೋಡಿ ಪುನಃ ಅವನಿಗೆ ಉತ್ತರಿಸಿ ಹೇಳಿದರು.

05137003 ಭೀಷ್ಮ ಉವಾಚ|

05137003a ಶುಶ್ರೂಷುಮನಸೂಯಂ ಚ ಬ್ರಹ್ಮಣ್ಯಂ ಸತ್ಯಸಂಗರಂ|

05137003c ಪ್ರತಿಯೋತ್ಸ್ಯಾಮಹೇ ಪಾರ್ಥಮತೋ ದುಃಖತರಂ ನು ಕಿಂ||

ಭೀಷ್ಮನು ಹೇಳಿದನು: “ಶುಶ್ರೂಷೆ ಮಾಡುವ, ಅನಸೂಯ, ಬ್ರಹ್ಮಣ್ಯ, ಸತ್ಯಸಂಗರ ಪಾರ್ಥನೊಂದಿಗೆ ನಾವು ಹೋರಾಡಬೇಕು ಎಂದರೆ ಅದಕ್ಕಿಂತ ಹೆಚ್ಚಿನ ದುಃಖವು ಯಾವುದಿದೆ?”

05137004 ದ್ರೋಣ ಉವಾಚ|

05137004a ಅಶ್ವತ್ಥಾಮ್ನಿ ಯಥಾ ಪುತ್ರೇ ಭೂಯೋ ಮಮ ಧನಂಜಯೇ|

05137004c ಬಹುಮಾನಃ ಪರೋ ರಾಜನ್ಸಮ್ನತಿಶ್ಚ ಕಪಿಧ್ವಜೇ||

ದ್ರೋಣನು ಹೇಳಿದನು: “ನನ್ನ ಮಗ ಅಶ್ವತ್ಥಾಮನ ಮೇಲಿರುವುದಕ್ಕಿಂತ ಹೆಚ್ಚು ಪ್ರೀತಿಯು ನನಗೆ ಧನಂಜಯನ ಮೇಲಿದೆ. ರಾಜನ್! ಕಪಿಧ್ವಜನ ಮೇಲೆ ನನಗೆ ಗೌರವವೂ ಇದೆ.

05137005a ತಂ ಚೇತ್ಪುತ್ರಾತ್ಪ್ರಿಯತರಂ ಪ್ರತಿಯೋತ್ಸ್ಯೇ ಧನಂಜಯಂ|

05137005c ಕ್ಷತ್ರಧರ್ಮಮನುಷ್ಠಾಯ ಧಿಗಸ್ತು ಕ್ಷತ್ರಜೀವಿಕಾಂ||

ಕ್ಷತ್ರಧರ್ಮವನ್ನು ಅನುಸರಿಸಿರುವ ನಾನು ಮಗನಿಗಿಂತ ಪ್ರಿಯಕರನಾಗಿರುವ ಧನಂಜಯನನ್ನು ವಿರೋಧಿಸಿ ಹೋರಾಡಬೇಕಲ್ಲ! ಕ್ಷತ್ರಿಯನಾಗಿ ಜೀವಿಸುವುದಕ್ಕೆ ಧಿಕ್ಕಾರ!

05137006a ಯಸ್ಯ ಲೋಕೇ ಸಮೋ ನಾಸ್ತಿ ಕಶ್ಚಿದನ್ಯೋ ಧನುರ್ಧರಃ|

05137006c ಮತ್ಪ್ರಸಾದಾತ್ಸ ಬೀಭತ್ಸುಃ ಶ್ರೇಯಾನನ್ಯೈರ್ಧನುರ್ಧರೈಃ||

ಲೋಕದಲ್ಲಿ ಯಾರ ಸಮನಾದ ಅನ್ಯ ಧನುರ್ಧರನಿಲ್ಲವೋ ಆ ಬೀಭತ್ಸುವು ನನ್ನ ಕೃಪೆಯಿಂದ ಅನ್ಯ ಧನುರ್ಧರರಿಗಿಂತ ಯಶಸ್ವಿಯಾಗಿದ್ದಾನೆ.

05137007a ಮಿತ್ರಧ್ರುಗ್ದುಷ್ಟಭಾವಶ್ಚ ನಾಸ್ತಿಕೋಽಥಾನೃಜುಃ ಶಠಃ|

05137007c ನ ಸತ್ಸು ಲಭತೇ ಪೂಜಾಂ ಯಜ್ಞೇ ಮೂರ್ಖ ಇವಾಗತಃ||

ಮಿತ್ರದ್ರೋಹಿ, ದುಷ್ಟಭಾವನೆಯುಳ್ಳವನು, ನಾಸ್ತಿಕ, ಪ್ರಾಮಾಣಿಕನಾಗಿಲ್ಲದಿರುವವನು ಮತ್ತು ಶಠನು ಯಜ್ಞಕ್ಕೆ ಬಂದಿರುವ ಮೂರ್ಖನಂತೆ ಸಂತರಲ್ಲಿ ಗೌರವವನ್ನು ಪಡೆಯುವುದಿಲ್ಲ.

05137008a ವಾರ್ಯಮಾಣೋಽಪಿ ಪಾಪೇಭ್ಯಃ ಪಾಪಾತ್ಮಾ ಪಾಪಮಿಚ್ಚತಿ|

05137008c ಚೋದ್ಯಮಾನೋಽಪಿ ಪಾಪೇನ ಶುಭಾತ್ಮಾ ಶುಭಮಿಚ್ಚತಿ||

ತಡೆಯಲ್ಪಟ್ಟರೂ ಪಾಪಾತ್ಮ ಪಾಪಿಗಳು ಪಾಪವನ್ನು ಮಾಡಲು ಇಚ್ಛಿಸುತ್ತಾರೆ. ಪಾಪದಿಂದ ಪ್ರಚೋದಿಸಲ್ಪಟ್ಟರೂ ಶುಭಾತ್ಮರು ಶುಭವನ್ನೇ ಮಾಡಲು ಬಯಸುತ್ತಾರೆ.

05137009a ಮಿಥ್ಯೋಪಚರಿತಾ ಹ್ಯೇತೇ ವರ್ತಮಾನಾ ಹ್ಯನು ಪ್ರಿಯೇ|

05137009c ಅಹಿತತ್ವಾಯ ಕಲ್ಪಂತೇ ದೋಷಾ ಭರತಸತ್ತಮ||

ಭರತಸತ್ತಮ! ಮೋಸಕ್ಕೊಳಗಾದರೂ ಅವರು ಪ್ರಿಯವಾಗಿ ನಡೆದುಕೊಳ್ಳುತ್ತಾರೆ. ಆದರೆ ನಿನ್ನ ಅಹಿತತ್ವವು ನಿನಗೇ ದೋಷವನ್ನು ತರುತ್ತದೆ.

05137010a ತ್ವಮುಕ್ತಃ ಕುರುವೃದ್ಧೇನ ಮಯಾ ಚ ವಿದುರೇಣ ಚ|

05137010c ವಾಸುದೇವೇನ ಚ ತಥಾ ಶ್ರೇಯೋ ನೈವಾಭಿಪದ್ಯಸೇ||

ಕುರುವೃದ್ಧರು, ನಾನು, ಮತ್ತು ವಿದುರರು, ಹಾಗೆಯೇ ವಾಸುದೇವನೂ ನಿನಗೆ ಹೇಳಿದ್ದಾರೆ. ಆದರೂ ನಿನಗೆ ಶ್ರೇಯಸ್ಸಾದುದು ಕಾಣುತ್ತಿಲ್ಲ.

05137011a ಅಸ್ತಿ ಮೇ ಬಲಮಿತ್ಯೇವ ಸಹಸಾ ತ್ವಂ ತಿತೀರ್ಷಸಿ|

05137011c ಸಗ್ರಾಹನಕ್ರಮಕರಂ ಗಂಗಾವೇಗಮಿವೋಷ್ಣಗೇ||

ನನ್ನಲ್ಲಿ ಬಲವಿದೆ ಎಂದು ಮೊಸಳೆ, ತಿಮಿಂಗಿಲಗಳಿಂದ ತುಂಬಿದ ಮಳೆಗಾಲದ ಗಂಗೆಯನ್ನು ಕೂಡಲೇ ದಾಟಿಬಿಡುತ್ತೇನೆ ಎನ್ನುವವನ ಹಾಗಿದ್ದೀಯೆ.

05137012a ವಾಸ ಏವ ಯಥಾ ಹಿ ತ್ವಂ ಪ್ರಾವೃಣ್ವಾನೋಽದ್ಯ ಮನ್ಯಸೇ|

05137012c ಸ್ರಜಂ ತ್ಯಕ್ತಾಮಿವ ಪ್ರಾಪ್ಯ ಲೋಭಾದ್ಯೌಧಿಷ್ಠಿರೀಂ ಶ್ರಿಯಂ||

ಇಂದು ನೀನು ಯುಧಿಷ್ಠಿರನ ಸಂಪತ್ತನ್ನು ಪಡೆದಿದ್ದೇನೆ ಎಂದು ತಿಳಿದುಕೊಂಡಿದ್ದೀಯೆ. ಆದರೆ ನೀನು ಲೋಭದಿಂದ ಕೇವಲ ಅವನು ಬಿಸುಡಿದ ಮಾಲೆಯನ್ನು ಹಿಡಿದು ಕೊಂಡು ಅವನ ಸಂಪತ್ತು ಎಂದು ಭ್ರಮಿಸಿಕೊಂಡಿದ್ದೀಯೆ.

05137013a ದ್ರೌಪದೀಸಹಿತಂ ಪಾರ್ಥಂ ಸಾಯುಧೈರ್ಭ್ರಾತೃಭಿರ್ವೃತಂ|

05137013c ವನಸ್ಥಮಪಿ ರಾಜ್ಯಸ್ಥಃ ಪಾಂಡವಂ ಕೋಽತಿಜೀವತಿ||

ರಾಜ್ಯವನ್ನು ಪಡೆದಿದ್ದರೂ ವನಸ್ಥನಾಗಿದ್ದ, ದ್ರೌಪದೀಸಹಿತನಾದ, ಆಯುಧ-ಭ್ರಾತೃಗಳಿಂದ ಆವೃತನಾಗಿರುವ ಪಾಂಡವನನ್ನು ಯಾರು ಅತಿಜೀವಿಸುತ್ತಾರೆ?

05137014a ನಿದೇಶೇ ಯಸ್ಯ ರಾಜಾನಃ ಸರ್ವೇ ತಿಷ್ಠಂತಿ ಕಿಂಕರಾಃ|

05137014c ತಮೈಲವಿಲಮಾಸಾದ್ಯ ಧರ್ಮರಾಜೋ ವ್ಯರಾಜತ||

ಯಾರ ನಿರ್ದೇಶನದಂತೆ ಎಲ್ಲ ರಾಜರೂ ಕಿಂಕರರಾಗಿ ನಿಲ್ಲುತ್ತಾರೋ ಆ ಐಲವಿಲನನ್ನು ಸೇರಿ ಧರ್ಮರಾಜನು ವಿರಾಜಿಸುತ್ತಿದ್ದಾನೆ.

05137015a ಕುಬೇರಸದನಂ ಪ್ರಾಪ್ಯ ತತೋ ರತ್ನಾನ್ಯವಾಪ್ಯ ಚ|

05137015c ಸ್ಫೀತಮಾಕ್ರಮ್ಯ ತೇ ರಾಷ್ಟ್ರಂ ರಾಜ್ಯಮಿಚ್ಚಂತಿ ಪಾಂಡವಾಃ||

ಕುಬೇರಸದನವನ್ನು ಸೇರಿ ಅಲ್ಲಿಂದ ರತ್ನಗಳನ್ನು ಪಡೆದು ಪಾಂಡವರು ಸಮೃದ್ಧವಾಗಿರುವ ನಿನ್ನ ರಾಷ್ಟ್ರವನ್ನು ಆಕ್ರಮಣ ಮಾಡಿ ರಾಜ್ಯವಾಳಲು ಬಯಸುತ್ತಾರೆ.

05137016a ದತ್ತಂ ಹುತಮಧೀತಂ ಚ ಬ್ರಾಹ್ಮಣಾಸ್ತರ್ಪಿತಾ ಧನೈಃ|

05137016c ಆವಯೋರ್ಗತಮಾಯುಶ್ಚ ಕೃತಕೃತ್ಯೌ ಚ ವಿದ್ಧಿ ನೌ||

ನಾವು ದಾನಮಾಡಿದ್ದೇವೆ. ಆಹುತಿಗಳನ್ನು ನೀಡಿದ್ದೇವೆ. ಬ್ರಾಹ್ಮಣರನ್ನು ಧನದಿಂದ ತೃಪ್ತಿಗೊಳಿಸಿದ್ದೇವೆ. ನಮ್ಮ ಆಯುಸ್ಸನ್ನು ಬದುಕಿದ್ದೇವೆ. ಇಬ್ಬರೂ ಕೃತಕೃತ್ಯರಾಗಿದ್ದೇವೆಂದು ತಿಳಿ.

05137017a ತ್ವಂ ತು ಹಿತ್ವಾ ಸುಖಂ ರಾಜ್ಯಂ ಮಿತ್ರಾಣಿ ಚ ಧನಾನಿ ಚ|

05137017c ವಿಗ್ರಹಂ ಪಾಂಡವೈಃ ಕೃತ್ವಾ ಮಹದ್ವ್ಯಸನಮಾಪ್ಸ್ಯಸಿ||

ಆದರೆ ನೀನು ಸುಖ, ರಾಜ್ಯ, ಮಿತ್ರರು ಮತ್ತು ಐಶ್ವರ್ಯಗಳನ್ನು ಕಡೆಗಣಿಸಿ ಪಾಂಡವರೊಂದಿಗೆ ಕಲಹ ಮಾಡಿ ಮಹಾ ವ್ಯಸನವನ್ನು ಹೊಂದುತ್ತೀಯೆ.

05137018a ದ್ರೌಪದೀ ಯಸ್ಯ ಚಾಶಾಸ್ತೇ ವಿಜಯಂ ಸತ್ಯವಾದಿನೀ|

05137018c ತಪೋಘೋರವ್ರತಾ ದೇವೀ ನ ತ್ವಂ ಜೇಷ್ಯಸಿ ಪಾಂಡವಂ||

ಆ ಸತ್ಯವಾದಿನೀ ದೇವಿ ಘೋರತಪಸ್ವಿ ಮತ್ತು ವ್ರತನಿರತಳಾದ ದ್ರೌಪದಿಯು ಯಾರ ವಿಜಯವನ್ನು ಆಶಿಸುವಳೋ ಆ ಪಾಂಡವರನ್ನು ನೀನು ಜಯಿಸಲಾರೆ.

05137019a ಮಂತ್ರೀ ಜನಾರ್ದನೋ ಯಸ್ಯ ಭ್ರಾತಾ ಯಸ್ಯ ಧನಂಜಯಃ|

05137019c ಸರ್ವಶಸ್ತ್ರಭೃತಾಂ ಶ್ರೇಷ್ಠಂ ಕಥಂ ಜೇಷ್ಯಸಿ ಪಾಂಡವಂ||

ಯಾರ ಮಂತ್ರಿಯು ಜನಾರ್ದನನೋ, ಯಾರ ತಮ್ಮನು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಧನಂಜಯನೋ ಆ ಪಾಂಡವನನ್ನು ನೀನು ಹೇಗೆ ಜಯಿಸಬಲ್ಲೆ?

05137020a ಸಹಾಯಾ ಬ್ರಾಹ್ಮಣಾ ಯಸ್ಯ ಧೃತಿಮಂತೋ ಜಿತೇಂದ್ರಿಯಾಃ|

05137020c ತಮುಗ್ರತಪಸಂ ವೀರಂ ಕಥಂ ಜೇಷ್ಯಸಿ ಪಾಂಡವಂ||

ಧೃತಿಮಂತರಾದ, ಜಿತೇಂದ್ರಿಯರಾದ, ಉಗ್ರತಾಪಸಿ ಬ್ರಾಹ್ಮಣರು ಯಾರಿಗೆ ಸಹಾಯ ಮಾಡುತ್ತಿದ್ದಾರೋ ಅಂತಹ ವೀರ ಪಾಂಡವನನ್ನು ನೀನು ಹೇಗೆ ಜಯಿಸಬಲ್ಲೆ?

05137021a ಪುನರುಕ್ತಂ ಚ ವಕ್ಷ್ಯಾಮಿ ಯತ್ಕಾರ್ಯಂ ಭೂತಿಮಿಚ್ಚತಾ|

05137021c ಸುಹೃದಾ ಮಜ್ಜಮಾನೇಷು ಸುಹೃತ್ಸು ವ್ಯಸನಾರ್ಣವೇ||

ವ್ಯಸನವೆಂಬ ಮಹಾಸಾಗರದಲ್ಲಿ ಮುಳುಗಿಹೋಗುತ್ತಿರುವ ಸ್ನೇಹಿತನಿಗೆ ಸ್ನೇಹಿತನು ಉಳಿಸಲು ಬಯಸುವವನು ಮಾಡುವವನಂತೆ ಪುನಃ ಹೇಳುತ್ತಿದ್ದೇನೆ.

05137022a ಅಲಂ ಯುದ್ಧೇನ ತೈರ್ವೀರೈಃ ಶಾಮ್ಯ ತ್ವಂ ಕುರುವೃದ್ಧಯೇ|

05137022c ಮಾ ಗಮಃ ಸಸುತಾಮಾತ್ಯಃ ಸಬಲಶ್ಚ ಪರಾಭವಂ||

ಈ ಯುದ್ಧಮಾಡುವುದನ್ನು ನಿಲ್ಲಿಸು. ಕುರುವೃದ್ಧಿಗಾಗಿ ಆ ವೀರರೊಂದಿಗೆ ಶಾಂತಿಯನ್ನು ಮಾಡಿಕೋ. ನಿನ್ನ ಮಕ್ಕಳು, ಅಮಾತ್ಯರು, ಮತ್ತು ಸೇನೆಯೊಂದಿಗೆ ಪರಾಭವದ ಕಡೆ ಮುಂದುವರೆಯಬೇಡ!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮದ್ರೋಣವಾಕ್ಯೇ ಸಪ್ತತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನೂರಾಮೂವತ್ತೇಳನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೪/೧೦೦, ಅಧ್ಯಾಯಗಳು-೮೦೦/೧೯೯೫, ಶ್ಲೋಕಗಳು-೨೬೦೪೫/೭೩೭೮೪

Image result for indian motifs"

Comments are closed.