Udyoga Parva: Chapter 72

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೭೨

ಕೃಷ್ಣ ರಾಯಭಾರಕ್ಕೆ ಭೀಮಸೇನನ ಸಂದೇಶ

ಆಗ ಭೀಮನು ಕೌರವರಲ್ಲಿ ಯುದ್ಧದ ಭಯವನ್ನು ಹುಟ್ಟಿಸಬೇಡವೆಂದೂ, ದುರ್ಯೋಧನನಲ್ಲಿ ಕಟುವಾಗಿ ಮಾತನಾಡಬೇಡವೆಂದೂ, “ಭರತರನ್ನು ನಾಶಗೊಳಿಸುವ ಬದಲಾಗಿ ನಾವು ಎಲ್ಲರೂ ದುರ್ಯೋಧನನಿಗೆ ಶಿರಬಾಗಿಸಿ ವಿನಯದಿಂದ ನಡೆದುಕೊಳ್ಳುತ್ತೇವೆ” ಎಂದೂ ಕೃಷ್ಣನಿಗೆ ಹೇಳುವುದು (೧-೨೩).

05072001 ಭೀಮಸೇನ ಉವಾಚ|

05072001a ಯಥಾ ಯಥೈವ ಶಾಂತಿಃ ಸ್ಯಾತ್ಕುರೂಣಾಂ ಮಧುಸೂದನ|

05072001c ತಥಾ ತಥೈವ ಭಾಷೇಥಾ ಮಾ ಸ್ಮ ಯುದ್ಧೇನ ಭೀಷಯೇಃ||

ಭೀಮಸೇನನು ಹೇಳಿದನು: “ಮಧುಸೂದನ! ಕುರುಗಳಿಗೆ ಶಾಂತಿಯಾಗುವ ರೀತಿಯಲ್ಲಿಯೇ ಮಾತನಾಡು. ಯುದ್ಧದ ಭೀತಿಯನ್ನು ಅವರಲ್ಲಿ ಹುಟ್ಟಿಸಬೇಡ!

05072002a ಅಮರ್ಷೀ ನಿತ್ಯಸಂರಬ್ಧಃ ಶ್ರೇಯೋದ್ವೇಷೀ ಮಹಾಮನಾಃ|

05072002c ನೋಗ್ರಂ ದುರ್ಯೋಧನೋ ವಾಚ್ಯಃ ಸಾಮ್ನೈವೈನಂ ಸಮಾಚರೇಃ||

ಅಮರ್ಷಿ, ನಿತ್ಯವೂ ಕೋಪದಲ್ಲಿರುವ, ಇನ್ನೊಬ್ಬರ ಶ್ರೇಯಸ್ಸನ್ನು ದ್ವೇಷಿಸುವ ದುರ್ಯೋಧನನೊಡನೆ ಕಟುವಾಗಿ ಮಾತನಾಡಬೇಡ. ಸೌಮ್ಯವಾಗಿಯೇ ವ್ಯವಹರಿಸು.

05072003a ಪ್ರಕೃತ್ಯಾ ಪಾಪಸತ್ತ್ವಶ್ಚ ತುಲ್ಯಚೇತಾಶ್ಚ ದಸ್ಯುಭಿಃ|

05072003c ಐಶ್ವರ್ಯಮದಮತ್ತಶ್ಚ ಕೃತವೈರಶ್ಚ ಪಾಂಡವೈಃ||

05072004a ಅದೀರ್ಘದರ್ಶೀ ನಿಷ್ಠೂರೀ ಕ್ಷೇಪ್ತಾ ಕ್ರೂರಪರಾಕ್ರಮಃ|

05072004c ದೀರ್ಘಮನ್ಯುರನೇಯಶ್ಚ ಪಾಪಾತ್ಮಾ ನಿಕೃತಿಪ್ರಿಯಃ||

05072005a ಮ್ರಿಯೇತಾಪಿ ನ ಭಜ್ಯೇತ ನೈವ ಜಃಯಾತ್ಸ್ವಕಂ ಮತಂ|

05072005c ತಾದೃಶೇನ ಶಮಂ ಕೃಷ್ಣ ಮನ್ಯೇ ಪರಮದುಷ್ಕರಂ||

ಸ್ವಭಾವದಲ್ಲಿಯೇ ಪಾಪಿಷ್ಟನಾಗಿರುವ, ಮನಸ್ಸಿನಲ್ಲಿ ದಸ್ಯುಗಳಿಗೆ ಸಮನಾದ, ಮುಂದಿನ ಆಲೋಚನೆಯೇ ಇಲ್ಲದ, ನಿಷ್ಠೂರೀ, ಮೋಸಗಾರ, ಕ್ರೂರ ಪರಾಕ್ರಮಿ, ತುಂಬಾ ಸಮಯದವರೆಗೆ ಕೋಪವನ್ನಿಟ್ಟುಕೊಳ್ಳುವ, ಪಾಪಾತ್ಮ, ತನ್ನ ಸಂಪತ್ತನ್ನು ಹಂಚಿಕೊಳ್ಳುವ ಮೊದಲು ಸಾಯುತ್ತೇನೆ ಎನ್ನುವ ದುರ್ಯೋಧನನು ತನಗೆ ಸೇರಿದ್ದು ಎಂದು ತಿಳಿದುದನ್ನು ನಮಗೆ ಕೊಡಲಾರ. ಕೃಷ್ಣ! ಅಂಥವನೊಡನೆ ಶಾಂತಿಯನ್ನು ಕೇಳುವುದು ಪರಮದುಷ್ಕರವೆಂದು ನನಗನ್ನಿಸುತ್ತದೆ.

05072006a ಸುಹೃದಾಮಪ್ಯವಾಚೀನಸ್ತ್ಯಕ್ತಧರ್ಮಃ ಪ್ರಿಯಾನೃತಃ|

05072006c ಪ್ರತಿಹಂತ್ಯೇವ ಸುಹೃದಾಂ ವಾಚಶ್ಚೈವ ಮನಾಂಸಿ ಚ||

ಅವನು ತನ್ನ ಮಿತ್ರರನ್ನೂ ಕೀಳಾಗಿ ಕಾಣುತ್ತಾನೆ, ಧರ್ಮವನ್ನು ತೊರೆದಿದ್ದಾನೆ, ಸುಳ್ಳನ್ನು ಪ್ರೀತಿಸುತ್ತಾನೆ, ಮತ್ತು ಸುಹೃದಯರ ಮಾತುಗಳನ್ನೂ ಯೋಚನೆಗಳನ್ನೂ ಸ್ವೀಕರಿಸುವುದಿಲ್ಲ.

05072007a ಸ ಮನ್ಯುವಶಮಾಪನ್ನಃ ಸ್ವಭಾವಂ ದುಷ್ಟಮಾಸ್ಥಿತಃ|

05072007c ಸ್ವಭಾವಾತ್ಪಾಪಮನ್ವೇತಿ ತೃಣೈಸ್ತುನ್ನ ಇವೋರಗಃ||

ಅವನು ಸಿಟ್ಟಿನ ವಶಕ್ಕೆ ಸಿಲುಕಿ ದುಷ್ಟಸ್ವಭಾವವನ್ನು ತಳೆದಿದ್ದಾನೆ. ಹುಲ್ಲು ಕಡ್ಡಿಗಳ ಮೇಲೆ ತೆವಳುವ ಹಾವಿನಂತೆ ಸ್ವಭಾವತಃ ಪಾಪದಿಂದಲೇ ನಡೆಯುತ್ತಾನೆ.

05072008a ದುರ್ಯೋಧನೋ ಹಿ ಯತ್ಸೇನಃ ಸರ್ವಥಾ ವಿದಿತಸ್ತವ|

05072008c ಯಚ್ಚೀಲೋ ಯತ್ಸ್ವಭಾವಶ್ಚ ಯದ್ಬಲೋ ಯತ್ಪರಾಕ್ರಮಃ||

ದುರ್ಯೋಧನನ ಸೇನೆಯು ಎಂಥಹುದು, ಅವನ ಶೀಲವು ಎಂಥಹುದು, ಸ್ವಭಾವವು ಎಂಥಹುದು, ಬಲವು ಎಂಥಹುದು ಮತ್ತು ಪರಾಕ್ರಮವು ಎಂಥಹುದು ಎಂದು ಎಲ್ಲವೂ ನಿನಗೆ ತಿಳಿದೇ ಇದೆ.

05072009a ಪುರಾ ಪ್ರಸನ್ನಾಃ ಕುರವಃ ಸಹಪುತ್ರಾಸ್ತಥಾ ವಯಂ|

05072009c ಇಂದ್ರಜ್ಯೇಷ್ಠಾ ಇವಾಭೂಮ ಮೋದಮಾನಾಃ ಸಬಾಂಧವಾಃ||

ಹಿಂದೆ ಕುರುಗಳು ಪುತ್ರರೊಂದಿಗೆ ಮತ್ತು ನಮ್ಮೊಂದಿಗೆ ಇಂದ್ರನ ಹಿರಿಯರಂತೆ ಬಂಧುಗಳೊಂದಿಗೆ ಮುದದಿಂದ ಇರುತ್ತಿದ್ದೆವು.

05072010a ದುರ್ಯೋಧನಸ್ಯ ಕ್ರೋಧೇನ ಭಾರತಾ ಮಧುಸೂದನ|

05072010c ಧಕ್ಷ್ಯಂತೇ ಶಿಶಿರಾಪಾಯೇ ವನಾನೀವ ಹುತಾಶನೈಃ||

ಈಗ ದುರ್ಯೋಧನನ ಕ್ರೋಧದಿಂದಾಗಿ ಛಳಿಗಾಲದ ಕೊನೆಯಲ್ಲಿ ಬೆಂಕಿ ಹತ್ತಿ ಉರಿಯುವ ಕಾಡಿನಂತೆ ಭಾರತರು ಆಗಿದ್ದಾರೆ ಮಧುಸೂದನ!

05072011a ಅಷ್ಟಾದಶೇಮೇ ರಾಜಾನಃ ಪ್ರಖ್ಯಾತಾ ಮಧುಸೂದನ|

05072011c ಯೇ ಸಮುಚ್ಚಿಚ್ಚಿದುರ್ಜ್ಞಾತೀನ್ಸುಹೃದಶ್ಚ ಸಬಾಂಧವಾನ್||

ಮಧುಸೂದನ! ತಮ್ಮ ಕುಲದವರನ್ನು, ಸುಹೃದಯರನ್ನು ಮತ್ತು ಬಾಂಧವರನ್ನು ನಾಶಗೊಳಿಸಿದ ಹದಿನೆಂಟು ರಾಜರು ಪ್ರಖ್ಯಾತರು.

05072012a ಅಸುರಾಣಾಂ ಸಮೃದ್ಧಾನಾಂ ಜ್ವಲತಾಮಿವ ತೇಜಸಾ|

05072012c ಪರ್ಯಾಯಕಾಲೇ ಧರ್ಮಸ್ಯ ಪ್ರಾಪ್ತೇ ಬಲಿರಜಾಯತ||

ಧರ್ಮದ ಪರ್ಯಾಯಕಾಲವು ಬಂದಾಗ ಸಮೃದ್ಧರಾಗಿದ್ದ ಅಸುರರಲ್ಲಿ ತೇಜಸ್ಸಿನಲ್ಲಿ ಅಗ್ನಿಯಂತಿರುವ ಬಲಿಯು ಜನಿಸಿದನು.

05072013a ಹೈಹಯಾನಾಮುದಾವರ್ತೋ ನೀಪಾನಾಂ ಜನಮೇಜಯ|

05072013c ಬಹುಲಸ್ತಾಲಜಂಘಾನಾಂ ಕೃಮೀಣಾಮುದ್ಧತೋ ವಸುಃ||

05072014a ಅಜಬಿಂದುಃ ಸುವೀರಾಣಾಂ ಸುರಾಷ್ಟ್ರಾಣಾಂ ಕುಶರ್ದ್ಧಿಕಃ|

05072014c ಅರ್ಕಜಶ್ಚ ಬಲೀಹಾನಾಂ ಚೀನಾನಾಂ ಧೌತಮೂಲಕಃ||

05072015a ಹಯಗ್ರೀವೋ ವಿದೇಹಾನಾಂ ವರಪ್ರಶ್ಚ ಮಹೌಜಸಾಂ|

05072015c ಬಾಹುಃ ಸುಂದರವೇಗಾನಾಂ ದೀಪ್ತಾಕ್ಷಾಣಾಂ ಪುರೂರವಾಃ||

05072016a ಸಹಜಶ್ಚೇದಿಮತ್ಸ್ಯಾನಾಂ ಪ್ರಚೇತಾನಾಂ ಬೃಹದ್ಬಲಃ|

05072016c ಧಾರಣಶ್ಚೇಂದ್ರವತ್ಸಾನಾಂ ಮುಕುಟಾನಾಂ ವಿಗಾಹನಃ||

05072017a ಶಮಶ್ಚ ನಂದಿವೇಗಾನಾಮಿತ್ಯೇತೇ ಕುಲಪಾಂಸನಾಃ|

05072017c ಯುಗಾಂತೇ ಕೃಷ್ಣ ಸಂಭೂತಾಃ ಕುಲೇಷು ಪುರುಷಾಧಮಾಃ||

ಹೈಹಯರಲ್ಲಿ ಉದಾವರ್ತ, ನೀಪರಲ್ಲಿ ಜನಮೇಜಯ, ತಾಲಜಂಘರಲ್ಲಿ ಬಹುಲ, ಕೃಮಿಗಳಲ್ಲಿ ಉದ್ಧತ ವಸು, ಸುವೀರರಲ್ಲಿ ಅಜಬಿಂದು, ಸುರಾಷ್ಟ್ರರಲ್ಲಿ ಕುಶರ್ಧಿಕ, ಬಲೀಹರಲ್ಲಿ ಅರ್ಕಜ, ಚೀಣರಲ್ಲಿ ಧೌತಮೂಲಕ, ವಿದೇಹರಲ್ಲಿ ಹಯಗ್ರೀವ, ಮಹೌಜಸರಲ್ಲಿ ವರಪ್ರ, ಸುಂದರವೇಗರಲ್ಲಿ ಬಾಹು, ದೀಪ್ತಾಕ್ಷಣರಲ್ಲಿ ಪುರೂರವರು, ಚೇದಿ-ಮತ್ಸ್ಯರಲ್ಲಿ ಸಹಜ, ಪ್ರಚೇತರಲ್ಲಿ ಬೃಹದ್ಬಲ, ಇಂದ್ರವತ್ಸರಲ್ಲಿ ಧಾರಣ, ಮುಕುಟರಲ್ಲಿ ವಿಗಾಹನ, ನಂದಿವೇಗರಲ್ಲಿ ಶಮ ಈ ಕುಲಪಾಂಸಕರು ಯುಗಾಂತದಲ್ಲಿ ಕುಲಗಳಲ್ಲಿ ಪುರುಷಾಧಮರಾಗಿ ಜನಿಸಿದರು ಕೃಷ್ಣ!

05072018a ಅಪ್ಯಯಂ ನಃ ಕುರೂಣಾಂ ಸ್ಯಾದ್ಯುಗಾಂತೇ ಕಾಲಸಂಭೃತಃ|

05072018c ದುರ್ಯೋಧನಃ ಕುಲಾಂಗಾರೋ ಜಘನ್ಯಃ ಪಾಪಪೂರುಷಃ||

ಈ ಯುಗಾಂತ್ಯದಲ್ಲಿ ಕಾಲಸಂಭೃತನಾಗಿ ಕುರುಗಳ ಕುಲದ ಕೆಂಡವಾಗಿ ಪಾಪಪೂರುಷ ದುರ್ಯೋಧನನು ಹುಟ್ಟಿಕೊಂಡಿದ್ದಾನೆ.

05072019a ತಸ್ಮಾನ್ಮೃದು ಶನೈರೇನಂ ಬ್ರೂಯಾ ಧರ್ಮಾರ್ಥಸಂಹಿತಂ|

05072019c ಕಾಮಾನುಬಂಧಬಹುಲಂ ನೋಗ್ರಮುಗ್ರಪರಾಕ್ರಮಂ||

ಆದುದರಿಂದ ಅವನೊಂದಿಗೆ ಮೃದುವಾಗಿ, ನಿಧಾನವಾಗಿ ಧರ್ಮಾರ್ಥಗಳನ್ನು ಸೇರಿಸಿ, ಅವನ ಇಚ್ಛೆಗೆ ಕೂಡಿಬರುವಂತೆ ಮಾತನಾಡು. ಉಗ್ರವಾಗಿ ಪರಾಕ್ರಮದಿಂದ ಬೇಡ.

05072020a ಅಪಿ ದುರ್ಯೋಧನಂ ಕೃಷ್ಣ ಸರ್ವೇ ವಯಮಧಶ್ಚರಾಃ|

05072020c ನೀಚೈರ್ಭೂತ್ವಾನುಯಾಸ್ಯಾಮೋ ಮಾ ಸ್ಮ ನೋ ಭರತಾ ನಶನ್||

ಕೃಷ್ಣ! ಭರತರನ್ನು ನಾಶಗೊಳಿಸುವ ಬದಲಾಗಿ ನಾವು ಎಲ್ಲರೂ ದುರ್ಯೋಧನನಿಗೆ ಶಿರಬಾಗಿಸಿ ವಿನಯದಿಂದ ನಡೆದುಕೊಳ್ಳುತ್ತೇವೆ.

05072021a ಅಪ್ಯುದಾಸೀನವೃತ್ತಿಃ ಸ್ಯಾದ್ಯಥಾ ನಃ ಕುರುಭಿಃ ಸಹ|

05072021c ವಾಸುದೇವ ತಥಾ ಕಾರ್ಯಂ ನ ಕುರೂನನಯಃ ಸ್ಪೃಶೇತ್||

ವಾಸುದೇವ! ಕುರುಗಳೊಂದಿಗೆ ಅವನು ನಮ್ಮ ವಿಷಯದಲ್ಲಿ ಉದಾಸೀನನಾಗುವಂತೆ ಏನನ್ನಾದರೂ ಮಾಡು. ಕುರುಗಳನ್ನು ವಿನಾಶವು ಮುಟ್ಟದಿರಲಿ.

05072022a ವಾಚ್ಯಃ ಪಿತಾಮಹೋ ವೃದ್ಧೋ ಯೇ ಚ ಕೃಷ್ಣ ಸಭಾಸದಃ|

05072022c ಭ್ರಾತೄಣಾಮಸ್ತು ಸೌಭ್ರಾತ್ರಂ ಧಾರ್ತರಾಷ್ಟ್ರಃ ಪ್ರಶಾಮ್ಯತಾಂ||

ಕೃಷ್ಣ! ಭ್ರಾತೃಗಳಲ್ಲಿ ಉತ್ತಮ ಭ್ರಾತೃತ್ವವಿರುವಂತೆ ಧಾರ್ತರಾಷ್ಟ್ರರು ಪ್ರಶಾಂತರಾಗುವಂತೆ ವೃದ್ಧ ಪಿತಾಮಹನಲ್ಲಿ ಮತ್ತು ಸಭಾಸದರಲ್ಲಿ ಮಾತನಾಡು.

05072023a ಅಹಮೇತದ್ಬ್ರವೀಮ್ಯೇವಂ ರಾಜಾ ಚೈವ ಪ್ರಶಂಸತಿ|

05072023c ಅರ್ಜುನೋ ನೈವ ಯುದ್ಧಾರ್ಥೀ ಭೂಯಸೀ ಹಿ ದಯಾರ್ಜುನೇ||

ಇದು ನಾನು ಹೇಳುವಂಥಹುದು. ರಾಜನೂ ಇದಕ್ಕೆ ಒಪ್ಪಿಗೆಯನ್ನಿತ್ತಿದ್ದಾನೆ. ಅರ್ಜುನನಲ್ಲಿ ದಯೆಯಿದೆ. ಅರ್ಜುನನಂತೂ ಯುದ್ಧವನ್ನು ಬಯಸುವುದಿಲ್ಲ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಮವಾಕ್ಯೇ ದ್ವಿಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಮವಾಕ್ಯ ಎನ್ನುವ ಎಪ್ಪತ್ತೆರಡನೆಯ ಅಧ್ಯಾಯವು.

Image result for flowers against white background

Comments are closed.