Udyoga Parva: Chapter 115

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೫

ದಿವೋದಾಸನು ಹರ್ಯಶ್ವನಂತೆಯೇ ಗಾಲವನೊಂದಿಗೆ ಒಪ್ಪಂದ ಮಾಡಿಕೊಂಡು ಮಾಧವಿಯಲ್ಲಿ ಪ್ರತರ್ದನನೆಂಬ ಮಗನನ್ನು ಪಡೆದುದು (೧-೧೫). ಗಾಲವನು ಅವನಿಂದ ಕುದುರೆಗಳನ್ನೂ ಮಾಧವಿಯನ್ನೂ ಸ್ವೀಕರಿಸಿದುದು (೧೬-೧೮).

05115001 ಗಾಲವ ಉವಾಚ|

05115001a ಮಹಾವೀರ್ಯೋ ಮಹೀಪಾಲಃ ಕಾಶೀನಾಮೀಶ್ವರಃ ಪ್ರಭುಃ|

05115001c ದಿವೋದಾಸ ಇತಿ ಖ್ಯಾತೋ ಭೈಮಸೇನಿರ್ನರಾಧಿಪಃ||

ಗಾಲವನು ಹೇಳಿದನು: “ಇವನು ಮಹಾವೀರ, ಮಹೀಪಾಲ, ಕಾಶಿಯ ಒಡೆಯ, ಪ್ರಭು, ದಿವೋದಾಸ ಎಂದು ಪ್ರಖ್ಯಾತನಾಗಿರುವವನು. ನರಾಧಿಪ ಭೀಮಸೇನನ ಮಗ.

05115002a ತತ್ರ ಗಚ್ಚಾವಹೇ ಭದ್ರೇ ಶನೈರಾಗಚ್ಚ ಮಾ ಶುಚಃ|

05115002c ಧಾರ್ಮಿಕಃ ಸಂಯಮೇ ಯುಕ್ತಃ ಸತ್ಯಶ್ಚೈವ ಜನೇಶ್ವರಃ||

ಭದ್ರೇ! ಅವನಲ್ಲಿಗೆ ಹೋಗುತ್ತಿದ್ದೇವೆ. ನಿಧಾನವಾಗಿ ಬಾ. ಶೋಕಿಸ ಬೇಡ! ಆ ಜನೇಶ್ವರನು ಧಾರ್ಮಿಕ, ಸಂಯಮಿ ಮತ್ತು ಸತ್ಯವಂತ.””

05115003 ನಾರದ ಉವಾಚ|

05115003a ತಮುಪಾಗಮ್ಯ ಸ ಮುನಿರ್ನ್ಯಾಯತಸ್ತೇನ ಸತ್ಕೃತಃ|

05115003c ಗಾಲವಃ ಪ್ರಸವಸ್ಯಾರ್ಥೇ ತಂ ನೃಪಂ ಪ್ರತ್ಯಚೋದಯತ್||

ನಾರದನು ಹೇಳಿದನು: “ಅವನಲ್ಲಿಗೆ ಹೋಗಿ ಮುನಿಯು ಅವನಿಂದ ಯಾಥಾನ್ಯಾಯವಾಗಿ ಸತ್ಕೃತನಾದನು. ಅನಂತರ ಗಾಲವನು ನೃಪನಿಗೆ ಮಕ್ಕಳನ್ನು ಪಡೆಯಲು ಪ್ರಚೋದಿಸಿದನು.

05115004 ದಿವೋದಾಸ ಉವಾಚ|

05115004a ಶ್ರುತಮೇತನ್ಮಯಾ ಪೂರ್ವಂ ಕಿಮುಕ್ತ್ವಾ ವಿಸ್ತರಂ ದ್ವಿಜ|

05115004c ಕಾಂಕ್ಷಿತೋ ಹಿ ಮಯೈಷೋಽರ್ಥಃ ಶ್ರುತ್ವೈತದ್ದ್ವಿಜಸತ್ತಮ||

ದಿವೋದಾಸನು ಹೇಳಿದನು: “ದ್ವಿಜ! ಈ ಹಿಂದೆಯೇ ನಾನು ಇದರ ಕುರಿತು ಕೇಳಿದ್ದೇನೆ. ಏಕೆ ವಿಸ್ತಾರವಾಗಿ ಹೇಳುತ್ತಿರುವೆ? ದ್ವಿಜಸತ್ತಮ! ಏಕೆಂದರೆ ಇದರ ಕುರಿತು ಕೇಳಿದಾಗಲಿಂದ ಇದನ್ನು ಮಾಡಬೇಕೆಂದು ನನಗೆ ಆಸೆಯಾಗಿದೆ.

05115005a ಏತಚ್ಚ ಮೇ ಬಹುಮತಂ ಯದುತ್ಸೃಜ್ಯ ನರಾಧಿಪಾನ್|

05115005c ಮಾಮೇವಮುಪಯಾತೋಽಸಿ ಭಾವಿ ಚೈತದಸಂಶಯಂ||

ಇತರ ನರಾಧಿಪರನ್ನು ಬಿಟ್ಟು ನೀನು ನನ್ನಲ್ಲಿಗೆ ಬಂದಿರುವೆ ಎನ್ನುವುದೂ ನನಗೆ ಹೆಚ್ಚಿನ ಗೌರವದ ವಿಷಯವಾಗಿದೆ. ನಿನ್ನ ಉದ್ದೇಶವನ್ನೂ ಪೂರೈಸುವಲ್ಲಿ ನಾನು ಉಪಯೋಗಕ್ಕೆ ಬರುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

05115006a ಸ ಏವ ವಿಭವೋಽಸ್ಮಾಕಮಶ್ವಾನಾಮಪಿ ಗಾಲವ|

05115006c ಅಹಮಪ್ಯೇಕಮೇವಾಸ್ಯಾಂ ಜನಯಿಷ್ಯಾಮಿ ಪಾರ್ಥಿವಂ||

ಗಾಲವ! ಹರ್ಯಶ್ವನಲ್ಲಿರುವಷ್ಟೇ ಸಂಪತ್ತು ನನ್ನಲ್ಲಿದೆ. ನಾನೂ ಕೂಡ ಇವಳಲ್ಲಿ ಒಬ್ಬನೇ ರಾಜನನ್ನು ಹುಟ್ಟಿಸುತ್ತೇನೆ.””

05115007 ನಾರದ ಉವಾಚ|

05115007a ತಥೇತ್ಯುಕ್ತ್ವಾ ದ್ವಿಜಶ್ರೇಷ್ಠಃ ಪ್ರಾದಾತ್ಕನ್ಯಾಂ ಮಹೀಪತೇಃ|

05115007c ವಿಧಿಪೂರ್ವಂ ಚ ತಾಂ ರಾಜಾ ಕನ್ಯಾಂ ಪ್ರತಿಗೃಹೀತವಾನ್||

ನಾರದನು ಹೇಳಿದನು: “ಹಾಗೆಯೇ ಆಗಲೆಂದು ದ್ವಿಜಶ್ರೇಷ್ಠನು ಮಹೀಪತಿಗೆ ಹೇಳಲು ರಾಜನು ಆ ಕನ್ಯೆಯನ್ನು ವಿಧಿಪೂರ್ವಕವಾಗಿ ಸ್ವೀಕರಿಸಿದನು.

05115008a ರೇಮೇ ಸ ತಸ್ಯಾಂ ರಾಜರ್ಷಿಃ ಪ್ರಭಾವತ್ಯಾಂ ಯಥಾ ರವಿಃ|

05115008c ಸ್ವಾಹಾಯಾಂ ಚ ಯಥಾ ವಹ್ನಿರ್ಯಥಾ ಶಚ್ಯಾಂ ಸ ವಾಸವಃ||

05115009a ಯಥಾ ಚಂದ್ರಶ್ಚ ರೋಹಿಣ್ಯಾಂ ಯಥಾ ಧೂಮೋರ್ಣಯಾ ಯಮಃ|

05115009c ವರುಣಶ್ಚ ಯಥಾ ಗೌರ್ಯಾಂ ಯಥಾ ಚರ್ದ್ಧ್ಯಾಂ ಧನೇಶ್ವರಃ||

05115010a ಯಥಾ ನಾರಾಯಣೋ ಲಕ್ಷ್ಮ್ಯಾಂ ಜಾಹ್ನವ್ಯಾಂ ಚ ಯಥೋದಧಿಃ|

05115010c ಯಥಾ ರುದ್ರಶ್ಚ ರುದ್ರಾಣ್ಯಾಂ ಯಥಾ ವೇದ್ಯಾಂ ಪಿತಾಮಹಃ||

05115011a ಅದೃಶ್ಯಂತ್ಯಾಂ ಚ ವಾಸಿಷ್ಠೋ ವಸಿಷ್ಠಶ್ಚಾಕ್ಷಮಾಲಯಾ|

05115011c ಚ್ಯವನಶ್ಚ ಸುಕನ್ಯಾಯಾಂ ಪುಲಸ್ತ್ಯಃ ಸಂಧ್ಯಯಾ ಯಥಾ||

05115012a ಅಗಸ್ತ್ಯಶ್ಚಾಪಿ ವೈದರ್ಭ್ಯಾಂ ಸಾವಿತ್ರ್ಯಾಂ ಸತ್ಯವಾನ್ಯಥಾ|

05115012c ಯಥಾ ಭೃಗುಃ ಪುಲೋಮಾಯಾಮದಿತ್ಯಾಂ ಕಶ್ಯಪೋ ಯಥಾ||

05115013a ರೇಣುಕಾಯಾಂ ಯಥಾರ್ಚೀಕೋ ಹೈಮವತ್ಯಾಂ ಚ ಕೌಶಿಕಃ|

05115013c ಬೃಹಸ್ಪತಿಶ್ಚ ತಾರಾಯಾಂ ಶುಕ್ರಶ್ಚ ಶತಪರ್ವಯಾ||

05115014a ಯಥಾ ಭೂಮ್ಯಾಂ ಭೂಮಿಪತಿರುರ್ವಶ್ಯಾಂ ಚ ಪುರೂರವಾಃ|

05115014c ಋಚೀಕಃ ಸತ್ಯವತ್ಯಾಂ ಚ ಸರಸ್ವತ್ಯಾಂ ಯಥಾ ಮನುಃ||

ಪ್ರಭಾವತಿಯಲ್ಲಿ ರವಿಯಂತೆ, ಸ್ವಾಹಾಳಲ್ಲಿ ಅಗ್ನಿಯಂತೆ, ಶಚಿಯಲ್ಲಿ ವಾಸವನಂತೆ, ರೋಹಿಣಿಯಲ್ಲಿ ಚಂದ್ರನಂತೆ, ಧೂಮೋರ್ಣಳಲ್ಲಿ ಯಮನಂತೆ, ಗೌರಿಯಲ್ಲಿ ವರುಣನಂತೆ, ಚರ್ಧ್ಮಳಲ್ಲಿ ಧನೇಶ್ವರನಂತೆ, ಲಕ್ಷ್ಮಿಯಲ್ಲಿ ನಾರಾಯಣನಂತೆ, ಜಾಹ್ನವಿಯಲ್ಲಿ ಸಾಗರದಂತೆ, ರುದ್ರಾಣಿಯಲ್ಲಿ ರುದ್ರನಂತೆ, ವೇದಗಳಲ್ಲಿ ಪಿತಾಮಹನಂತೆ, ಅದೃಶ್ಯಂತಳಲ್ಲಿ ಶಕ್ತಿಯಂತೆ, ಅಕ್ಷಮಾಲೆಯಲ್ಲಿ ವಸಿಷ್ಠನಂತೆ, ಸುಕನ್ಯೆಯಲ್ಲಿ ಚ್ಯವನನಂತೆ, ಸಂಧ್ಯೆಯಲ್ಲಿ ಪುಲಸ್ತ್ಯನಂತೆ, ವೈದರ್ಭಿಯಲ್ಲಿ ಅಗಸ್ತ್ಯನಂತೆ, ಸಾವಿತ್ರಿಯಲ್ಲಿ ಸತ್ಯವಾನನಂತೆ, ಪುಲೋಮೆಯಲ್ಲಿ ಭೃಗುವಂತೆ, ಅದಿತಿಯಲ್ಲಿ ಕಶ್ಯಪನಂತೆ, ರೇಣುಕೆಯಲ್ಲಿ ಆರ್ಚೀಕನಂತೆ, ಹೇಮವತಿಯಲ್ಲಿ ಕೌಶಿಕನಂತೆ, ತಾರೆಯಲ್ಲಿ ಬೃಹಸ್ಪತಿಯಂತೆ, ಶತಪರ್ವೆಯಲ್ಲಿ ಶುಕ್ರನಂತೆ, ಭೂಮಿಯೊಂದಿಗೆ ಭೂಮಿಪತಿಯಂತೆ, ಊರ್ವಶಿಯಲ್ಲಿ ಪುರೂರವನಂತೆ, ಸತ್ಯವತಿಯಲ್ಲಿ ಋಚೀಕನಂತೆ, ಮತ್ತು ಸರಸ್ವತಿಯಲ್ಲಿ ಮನುವಿನಂತೆ ಆ ರಾಜರ್ಷಿಯು ಅವಳೊಂದಿಗೆ ರಮಿಸಿದನು.

05115015a ತಥಾ ತು ರಮಮಾಣಸ್ಯ ದಿವೋದಾಸಸ್ಯ ಭೂಪತೇಃ|

05115015c ಮಾಧವೀ ಜನಯಾಮಾಸ ಪುತ್ರಮೇಕಂ ಪ್ರತರ್ದನಂ||

ಹೀಗೆ ರಮಿಸುತ್ತಿರುವ ಭೂಪತಿ ದಿವೋದಾಸನು ಮಾಧವಿಯಲ್ಲಿ ಪ್ರತರ್ದನನೆನ್ನುವ ಓರ್ವ ಪುತ್ರನನ್ನು ಹುಟ್ಟಿಸಿದನು.

05115016a ಅಥಾಜಗಾಮ ಭಗವಾನ್ದಿವೋದಾಸಂ ಸ ಗಾಲವಃ|

05115016c ಸಮಯೇ ಸಮನುಪ್ರಾಪ್ತೇ ವಚನಂ ಚೇದಮಬ್ರವೀತ್||

ಆಗ ಸಮಯವು ಬಂದಾಗ ಭಗವಾನ್ ಗಾಲವನು ದಿವೋದಾಸನಲ್ಲಿಗೆ ಹೋಗಿ ಈ ಮಾತನ್ನಾಡಿದನು:

05115017a ನಿರ್ಯಾತಯತು ಮೇ ಕನ್ಯಾಂ ಭವಾಂಸ್ತಿಷ್ಠಂತು ವಾಜಿನಃ|

05115017c ಯಾವದನ್ಯತ್ರ ಗಚ್ಚಾಮಿ ಶುಲ್ಕಾರ್ಥಂ ಪೃಥಿವೀಪತೇ||

“ಪೃಥಿವೀಪತೇ! ಕನ್ಯೆಯನ್ನು ನನಗೆ ಹಿಂದಿರುಗಿಸು. ಕುದುರೆಗಳು ನಿನ್ನಲ್ಲಿಯೇ ಇರಲಿ. ಶುಲ್ಕಾರ್ಥಕ್ಕೆ ಇತರರಲ್ಲಿ ಹೋಗುತ್ತೇನೆ.”

05115018a ದಿವೋದಾಸೋಽಥ ಧರ್ಮಾತ್ಮಾ ಸಮಯೇ ಗಾಲವಸ್ಯ ತಾಂ|

05115018c ಕನ್ಯಾಂ ನಿರ್ಯಾತಯಾಮಾಸ ಸ್ಥಿತಃ ಸತ್ಯೇ ಮಹೀಪತಿಃ||

ಆಗ ಧರ್ಮಾತ್ಮ ಮಹೀಪತಿ ದಿವೋದಾಸನು ಆ ಸಮಯದಲ್ಲಿ ಆ ಕನ್ಯೆಯನ್ನು ಗಾಲವನಿಗೆ ಹಿಂದಿರುಗಿಸಿ ಸತ್ಯಸ್ಥಿತನಾದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಪಂಚದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹದಿನೈದನೆಯ ಅಧ್ಯಾಯವು.

Related image

Comments are closed.