ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
Contents
Toggle೨೬೬
ಸೀತಾನ್ವೇಷಣೆ
ಚಾತುರ್ಮಾಸವು ಮುಗಿದರೂ ಸುಗ್ರೀವನು ಸೀತೆಯನ್ನು ಹುಡುಕುವೆನೆಂಬ ತನ್ನ ಪ್ರತಿಜ್ಞೆಯಂತೆ ನಡೆದುಕೊಳ್ಳಲಿಲ್ಲವೆಂದು ಕೋಪಗೊಂಡ ರಾಮನು ಲಕ್ಷ್ಮಣನನ್ನು ಅವನಲ್ಲಿಗೆ ಕಳುಹಿಸಿದ್ದುದು (೧-೧೧). ಸೀತೆಯನ್ನು ಹುಡುಕಲು ಎಲ್ಲ ದಿಕ್ಕುಗಳಿಗೂ ವಾನರರನ್ನು ಕಳುಹಿಸಿಯಾಗಿದೆಯೆಂದು ಹೇಳಿದುದು; ದಕ್ಷಿಣದಿಕ್ಕಿಗೆ ಹೋದವರನ್ನು ಬಿಟ್ಟು ಬೇರೆ ಎಲ್ಲರೂ ಬಂದು ಸೀತೆಯು ಕಾಣದ ವರದಿ ನೀಡಿದುದು (೧೨-೨೪). ಸೀತೆಯನ್ನು ನೋಡಿದೆನೆಂದು ಹನುಮಂತನು ರಾಮನಿಗೆ ಹೇಳುವುದು (೨೫-೩೬). ಹನುಮಂತನು ತಾನು ಸೀತೆಯನ್ನು ಹೇಗೆ ಕಂಡನೆಂದು ಸಂಪೂರ್ಣವಾಗಿ ರಾಮನಿಗೆ ವರದಿ ಮಾಡಿದುದು; ರಾಮನು ಅವನನ್ನು ಸತ್ಕರಿಸಿದುದು (೩೭-೬೮).
03266001a ರಾಘವಸ್ತು ಸಸೌಮಿತ್ರಿಃ ಸುಗ್ರೀವೇಣಾಭಿಪಾಲಿತಃ|
03266001c ವಸನ್ ಮಾಲ್ಯವತಃ ಪೃಷ್ಠೇ ದದರ್ಶ ವಿಮಲಂ ನಭಃ||
ಮಾರ್ಕಂಡೇಯನು ಹೇಳಿದನು: “ಸುಗ್ರೀವನ ರಕ್ಷಣೆಯಲ್ಲಿ ಸೌಮಿತ್ರಿಯೊಡನೆ ಮಾಲ್ಯವತ ಶಿಖರದಲ್ಲಿ ಚಾತುರ್ಮಾಸಗಳನ್ನು ಕಳೆದ ರಾಘವನು ಮೋಡವಿಲ್ಲದ ಆಗಸವನ್ನು ನೋಡಿದನು.
03266002a ಸ ದೃಷ್ಟ್ವಾ ವಿಮಲೇ ವ್ಯೋಮ್ನಿ ನಿರ್ಮಲಂ ಶಶಲಕ್ಷಣಂ|
03266002c ಗ್ರಹನಕ್ಷತ್ರತಾರಾಭಿರನುಯಾತಮಮಿತ್ರಹಾ||
ಆ ಅಮಿತ್ರಹನು ವಿಮಲ ವ್ಯೋಮಿಯಲ್ಲಿ ಗ್ರಹ, ನಕ್ಷತ್ರ ತಾರೆಗಳಿಂದ ಹಿಂಬಾಲಿಸಿಕೊಂಡು ಹೋಗುತ್ತಿದ್ದ ನಿರ್ಮಲ ಶಶಿಯನ್ನು ಕಂಡನು.
03266003a ಕುಮುದೋತ್ಪಲಪದ್ಮಾನಾಂ ಗಂಧಮಾದಾಯ ವಾಯುನಾ|
03266003c ಮಹೀಧರಸ್ಥಃ ಶೀತೇನ ಸಹಸಾ ಪ್ರತಿಬೋಧಿತಃ||
ಗಾಳಿಯ ಹೊತ್ತು ತಂದ ಅರಳಿದ ಕುಮುದ ಮತ್ತು ಕವಲಗಳ ಸುವಾಸನೆಯನ್ನು ಮೂಸಿದನು ಮತ್ತು ಆ ಪರ್ವತಮೇಲಿದ್ದ ಅವನು ತಕ್ಷಣವೇ ಪ್ರಚೋದಿತನಾದನು.
03266004a ಪ್ರಭಾತೇ ಲಕ್ಷ್ಮಣಂ ವೀರಮಭ್ಯಭಾಷತ ದುರ್ಮನಾಃ|
03266004c ಸೀತಾಂ ಸಂಸ್ಮೃತ್ಯ ಧರ್ಮಾತ್ಮಾ ರುದ್ಧಾಂ ರಾಕ್ಷಸವೇಶ್ಮನಿ||
ಬೆಳಿಗ್ಗೆ ಧರ್ಮಾತ್ಮನು ರಾಕ್ಷಸನ ಮನೆಯಲ್ಲಿ ಸೀತೆಯು ಬಂಧಿಯಾಗಿರುವುದನ್ನು ನೆನಪಿಸಿಕೊಂಡು ಮನಸ್ಸು ಕೆಟ್ಟುಹೋಗಿ ವೀರ ಲಕ್ಷ್ಮಣನಿಗೆ ಹೇಳಿದನು:
03266005a ಗಚ್ಚ ಲಕ್ಷ್ಮಣ ಜಾನೀಹಿ ಕಿಷ್ಕಿಂಧಾಯಾಂ ಕಪೀಶ್ವರಂ|
03266005c ಪ್ರಮತ್ತಂ ಗ್ರಾಮ್ಯಧರ್ಮೇಷು ಕೃತಘ್ನಂ ಸ್ವಾರ್ಥಪಂಡಿತಂ||
“ಹೋಗು ಲಕ್ಷ್ಮಣ! ಕಿಷ್ಕಿಂಧೆಯಲ್ಲಿ ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾಗಿರುವ, ಕೃತಘ್ನ, ಸ್ವಾರ್ಥದ ಕುರಿತೇ ಯೋಚಿಸುತ್ತಿರುವ ಕಪೀಶ್ವರನನ್ನು ತಿಳಿದುಬಾ!
03266006a ಯೋಽಸೌ ಕುಲಾಧಮೋ ಮೂಢೋ ಮಯಾ ರಾಜ್ಯೇಽಭಿಷೇಚಿತಃ|
03266006c ಸರ್ವವಾನರಗೋಪುಚ್ಚಾ ಯಮೃಕ್ಷಾಶ್ಚ ಭಜಂತಿ ವೈ||
03266007a ಯದರ್ಥಂ ನಿಹತೋ ವಾಲೀ ಮಯಾ ರಘುಕುಲೋದ್ವಹ|
03266007c ತ್ವಯಾ ಸಹ ಮಹಾಬಾಹೋ ಕಿಷ್ಕಿಂಧೋಪವನೇ ತದಾ||
ಯಾರನ್ನು ನಾನು ಸರ್ವವಾನರರ ಮತ್ತು ಕರಡಿಗಳ ರಾಜನನ್ನಾಗಿ ಅಭಿಷೇಕಿಸಿದೆನೋ ಮತ್ತು ರಘುಕುಲೋದ್ಧಹ! ಮಹಾಬಾಹೋ! ಯಾರಿಗೋಸ್ಕರ ನಾನು ಅಂದು ಕಿಷ್ಕಿಂಧೆಯ ಉಪವನದಲ್ಲಿ ನಿನ್ನ ಜೊತೆಗೂಡಿ ವಾಲಿಯನ್ನು ಸಂಹರಿಸಿದೆನೋ ಅವನು ಕುಲಾಧಮ ಮತ್ತು ಮೂಢ.
03266008a ಕೃತಘ್ನಂ ತಮಹಂ ಮನ್ಯೇ ವಾನರಾಪಸದಂ ಭುವಿ|
03266008c ಯೋ ಮಾಮೇವಂಗತೋ ಮೂಢೋ ನ ಜಾನೀತೇಽದ್ಯ ಲಕ್ಷ್ಮಣ||
ಲಕ್ಷ್ಮಣ! ಆ ಕೃತಘ್ನನನ್ನು ನಾನು ಭುವಿಯಲ್ಲಿಯೇ ಅತೀ ಕೆಟ್ಟ ವಾನರನೆಂದು ತಿಳಿಯುತ್ತೇನೆ. ಯಾಕೆಂದರೆ ಆ ಮೂಢನು ನನ್ನ ಪರಿಸ್ಥಿತಿಯ ಕುರಿತು ಯೋಚಿಸುತ್ತಲೇ ಇಲ್ಲ.
03266009a ಅಸೌ ಮನ್ಯೇ ನ ಜಾನೀತೇ ಸಮಯಪ್ರತಿಪಾದನಂ|
03266009c ಕೃತೋಪಕಾರಂ ಮಾಂ ನೂನಮವಮನ್ಯಾಲ್ಪಯಾ ಧಿಯಾ||
ಅವನಿಗೆ ಒಪ್ಪಂದವನ್ನು ಮನ್ನಿಸಿ ನಡೆದುಕೊಳ್ಳುವುದು ಗೊತ್ತಿಲ್ಲವೆಂದು ನನಗನ್ನಿಸುತ್ತದೆ. ಮತ್ತು ಅವನ ಅಲ್ಪ ಬುದ್ಧಿಯಲ್ಲಿ ಉಪಕಾರಮಾಡಿದ ನನ್ನನ್ನು ಕೀಳಾಗಿ ಪರಿಗಣಿಸುತ್ತಿದ್ದಾನೆ.
03266010a ಯದಿ ತಾವದನುದ್ಯುಕ್ತಃ ಶೇತೇ ಕಾಮಸುಖಾತ್ಮಕಃ|
03266010c ನೇತವ್ಯೋ ವಾಲಿಮಾರ್ಗೇಣ ಸರ್ವಭೂತಗತಿಂ ತ್ವಯಾ||
ಅವನು ಅಲ್ಲಿ ಕಾಮಸುಖದಲ್ಲಿ ತನ್ನನ್ನು ತೊಡಗಿಸಿಕೊಂಡು ಸೋಮಾರಿಯಾಗಿ ಮಲಗಿದ್ದಾನಾದರೆ ಅವನನ್ನು ನೀನು ಎಲ್ಲರೂ ಹೋಗುವ ವಾಲಿಯ ಮಾರ್ಗಕ್ಕೆ ಅಟ್ಟಬೇಕು.
03266011a ಅಥಾಪಿ ಘಟತೇಽಸ್ಮಾಕಮರ್ಥೇ ವಾನರಪುಂಗವಃ|
03266011c ತಮಾದಾಯೈಹಿ ಕಾಕುತ್ಸ್ಥ ತ್ವರಾವಾನ್ಭವ ಮಾ ಚಿರಂ||
ಕಾಕುತ್ಸ್ಥ! ಈಗಲಾದರೂ ಆ ವಾನರಪುಂಗವನು ನಮ್ಮ ಕಾರ್ಯದಲ್ಲಿ ನಿರತನಾಗಿದ್ದಾನಾದರೆ ಅವನನ್ನು ಇಲ್ಲಿಗೆ ಕರೆದು ತಾ. ತ್ವರೆಮಾಡು. ತಡಮಾಡಬೇಡ.”
03266012a ಇತ್ಯುಕ್ತೋ ಲಕ್ಷ್ಮಣೋ ಭ್ರಾತ್ರಾ ಗುರುವಾಕ್ಯಹಿತೇ ರತಃ|
03266012c ಪ್ರತಸ್ಥೇ ರುಚಿರಂ ಗೃಹ್ಯ ಸಮಾರ್ಗಣಗುಣಂ ಧನುಃ|
03266012e ಕಿಷ್ಕಿಂಧಾದ್ವಾರಮಾಸಾದ್ಯ ಪ್ರವಿವೇಶಾನಿವಾರಿತಃ||
ಅಣ್ಣನು ಹೀಗೆ ಹೇಳಲು ಹಿರಿಯರ ವಾಕ್ಯಹಿತರತ ಲಕ್ಷ್ಮಣನು ಸುಂದರ ಗುಣಯುಕ್ತ ಮಾರ್ಗಣದಿಂದ ಕೂಡಿದ ಧನುಸ್ಸನ್ನು ಹಿಡಿದು ಕಿಷ್ಕಿಂಧೆಯ ದ್ವಾರವನ್ನು ತಲುಪಿ ಯಾರಿಂದಲೂ ತಡೆಯಲ್ಪಡದೇ ಪ್ರವೇಶಿಸಿದನು.
03266013a ಸಕ್ರೋಧ ಇತಿ ತಂ ಮತ್ವಾ ರಾಜಾ ಪ್ರತ್ಯುದ್ಯಯೌ ಹರಿಃ|
03266013c ತಂ ಸದಾರೋ ವಿನೀತಾತ್ಮಾ ಸುಗ್ರೀವಃ ಪ್ಲವಗಾಧಿಪಃ|
03266013e ಪೂಜಯಾ ಪ್ರತಿಜಗ್ರಾಹ ಪ್ರೀಯಮಾಣಸ್ತದರ್ಹಯಾ||
ಅವನು ಕುಪಿತನಾಗಿದ್ದಾನೆ ಎಂದು ಪರಿಗಣಿಸಿದ ಕಪಿರಾಜನು ಅವನನ್ನು ಭೇಟಿಯಾಗಲು ಹೊರಬಂದನು. ಕಪಿಗಳ ರಾಜ ಸುಗ್ರೀವನು ತನ್ನ ಸತಿಯೊಡನೆ ವಿನೀತನಾಗಿ ಬಂದು ಪೂಜಿಸಿ ಪ್ರೀತಿಯಿಂದ ಅವನನ್ನು ಬರಮಾಡಿಕೊಂಡನು.
03266014a ತಮಬ್ರವೀದ್ರಾಮವಚಃ ಸೌಮಿತ್ರಿರಕುತೋಭಯಃ|
03266014c ಸ ತತ್ಸರ್ವಮಶೇಷೇಣ ಶ್ರುತ್ವಾ ಪ್ರಹ್ವಃ ಕೃತಾಂಜಲಿಃ||
ಆಗ ಸೌಮಿತ್ರಿಯು ಸ್ವಲ್ಪವೂ ಭಯಪಡದೇ ಬಗ್ಗಿ, ಅಂಜಲೀ ಬದ್ಧನಾಗಿ ರಾಮನ ಮಾತುಗಳನ್ನು ಸಂಪೂರ್ಣವಾಗಿ ಅವನಿಗೆ ಹೇಳಿದನು.
03266015a ಸಭೃತ್ಯದಾರೋ ರಾಜೇಂದ್ರ ಸುಗ್ರೀವೋ ವಾನರಾಧಿಪಃ|
03266015c ಇದಮಾಹ ವಚಃ ಪ್ರೀತೋ ಲಕ್ಷ್ಮಣಂ ನರಕುಂಜರಂ||
ರಾಜೇಂದ್ರ! ಸೇವಕರು ಮತ್ತು ಸತಿಯೊಡನೆ ವಾನರಾಧಿಪ ಸುಗ್ರೀವನು ನರಕುಂಜರ ಲಕ್ಷ್ಮಣನಿಗೆ ಪ್ರೀತಿಯ ಈ ಮಾತುಗಳನ್ನು ಹೇಳಿದನು.
03266016a ನಾಸ್ಮಿ ಲಕ್ಷ್ಮಣ ದುರ್ಮೇಧಾ ನ ಕೃತಘ್ನೋ ನ ನಿರ್ಘೃಣಃ|
03266016c ಶ್ರೂಯತಾಂ ಯಃ ಪ್ರಯತ್ನೋ ಮೇ ಸೀತಾಪರ್ಯೇಷಣೇ ಕೃತಃ||
“ಲಕ್ಷ್ಮಣ! ನಾನು ಕೆಟ್ಟಬುದ್ದಿಯವನೂ ಅಲ್ಲ, ಕೃತಘ್ನನೂ ಅಲ್ಲ ಮತ್ತು ನಿಷ್ಕರುಣಿಯೂ ಅಲ್ಲ. ಸೀತೆಯನ್ನು ಹುಡುಕಲು ಏನೇನು ಪ್ರಯತ್ನಗಳನ್ನು ನಾನು ಮಾಡಿದ್ದೇನೆ ಎನ್ನುವುದನ್ನು ಕೇಳಬೇಕು.
03266017a ದಿಶಃ ಪ್ರಸ್ಥಾಪಿತಾಃ ಸರ್ವೇ ವಿನೀತಾ ಹರಯೋ ಮಯಾ|
03266017c ಸರ್ವೇಷಾಂ ಚ ಕೃತಃ ಕಾಲೋ ಮಾಸೇನಾಗಮನಂ ಪುನಃ||
ಪರಿಣಿತ ಕಪಿಗಳನ್ನು ನಾನು ಎಲ್ಲ ದಿಕ್ಕುಗಳಲ್ಲಿಯೂ ಕಳುಹಿಸಿದ್ದೇನೆ. ಒಂದು ತಿಂಗಳೊಳಗೆ ನಿರ್ಧಿಷ್ಟ ದಿವಸದಂದು ಎಲ್ಲರೂ ಮರಳಿ ಬರುವವರಿದ್ದಾರೆ.
03266018a ಯೈರಿಯಂ ಸವನಾ ಸಾದ್ರಿಃ ಸಪುರಾ ಸಾಗರಾಂಬರಾ|
03266018c ವಿಚೇತವ್ಯಾ ಮಹೀ ವೀರ ಸಗ್ರಾಮನಗರಾಕರಾ||
ಅವರೆಲ್ಲರೂ ಈ ಸಾಗರಾಂಬರೆ ಭೂಮಿಯನ್ನು, ಕಾಡುಗಳನ್ನು, ಪರ್ವತಗಳನ್ನು, ನಗರಗಳನ್ನು, ಗ್ರಾಮಗಳನ್ನು, ಪಟ್ಟಣಗಳನ್ನು ಮತ್ತು ಗಣಿಗಳನ್ನು ಸೇರಿ ಎಲ್ಲೆಡೆಯೂ ಹುಡುಕುತ್ತಾರೆ.
03266019a ಸ ಮಾಸಃ ಪಂಚರಾತ್ರೇಣ ಪೂರ್ಣೋ ಭವಿತುಮರ್ಹತಿ|
03266019c ತತಃ ಶ್ರೋಷ್ಯಸಿ ರಾಮೇಣ ಸಹಿತಃ ಸುಮಹತ್ಪ್ರಿಯಂ||
ಇನ್ನು ಐದು ರಾತ್ರಿಗಳಲ್ಲಿ ತಿಂಗಳು ಪೂರ್ಣವಾಗುತ್ತದೆ. ಆಗ ರಾಮನೊಡನೆ ನಾನು ಮಾಡಿದ ಪ್ರಿಯ ಕಾರ್ಯದ ಕುರಿತು ಕೇಳುತ್ತೀಯೆ.”
03266020a ಇತ್ಯುಕ್ತೋ ಲಕ್ಷ್ಮಣಸ್ತೇನ ವಾನರೇಂದ್ರೇಣ ಧೀಮತಾ|
03266020c ತ್ಯಕ್ತ್ವಾ ರೋಷಮದೀನಾತ್ಮಾ ಸುಗ್ರೀವಂ ಪ್ರತ್ಯಪೂಜಯತ್||
ಆ ಧೀಮಂತ ವಾನರೇಂದ್ರನು ಹೀಗೆ ಹೇಳಲು ಲಕ್ಷ್ಮಣನು ರೋಷವನ್ನು ಬಿಟ್ಟು ಸುಗ್ರೀವನನ್ನು ಪ್ರತಿಪೂಜಿಸಿದನು.
03266021a ಸ ರಾಮಂ ಸಹಸುಗ್ರೀವೋ ಮಾಲ್ಯವತ್ಪೃಷ್ಠಮಾಸ್ಥಿತಂ|
03266021c ಅಭಿಗಮ್ಯೋದಯಂ ತಸ್ಯ ಕಾರ್ಯಸ್ಯ ಪ್ರತ್ಯವೇದಯತ್||
ಸುಗ್ರೀವನನ್ನು ಜೊತೆಯಲ್ಲಿ ಕರೆದುಕೊಂಡು ಮಾಲ್ಯಪರ್ವತದ ಮೇಲಿದ್ದ ರಾಮನಲ್ಲಿಗೆ ಹೋಗಿ ಅವನ ಕಾರ್ಯದ ಕುರಿತು ವರದಿಮಾಡಿದನು.
03266022a ಇತ್ಯೇವಂ ವಾನರೇಂದ್ರಾಸ್ತೇ ಸಮಾಜಗ್ಮುಃ ಸಹಸ್ರಶಃ|
03266022c ದಿಶಸ್ತಿಸ್ರೋ ವಿಚಿತ್ಯಾಥ ನ ತು ಯೇ ದಕ್ಷಿಣಾಂ ಗತಾಃ||
ಮಾತುಕೊಟ್ಟಂತೆ ಮೂರು ದಿಕ್ಕುಗಳಿಂದ ಸಹಸ್ರಾರು ವಾನರೇಂದ್ರರು ಬಂದು ಸೇರಿದರು. ಆದರೆ ದಕ್ಷಿಣಕ್ಕೆ ಹೋದವರು ಬರಲಿಲ್ಲ.
03266023a ಆಚಖ್ಯುಸ್ತೇ ತು ರಾಮಾಯ ಮಹೀಂ ಸಾಗರಮೇಖಲಾಂ|
03266023c ವಿಚಿತಾಂ ನ ತು ವೈದೇಹ್ಯಾ ದರ್ಶನಂ ರಾವಣಸ್ಯ ವಾ||
ಅವರು ರಾಮನಿಗೆ ಸಾಗರಮೇಖಲೆ ಮಹಿಯನ್ನು ಹುಡುಕಿದರೂ ವೈದೇಹಿಯ ಅಥವಾ ರಾವಣನ ದರ್ಶನವಾಗಲಿಲ್ಲವೆಂದು ಹೇಳಿದರು.
03266024a ಗತಾಸ್ತು ದಕ್ಷಿಣಾಮಾಶಾಂ ಯೇ ವೈ ವಾನರಪುಂಗವಾಃ|
03266024c ಆಶಾವಾಂಸ್ತೇಷು ಕಾಕುತ್ಸ್ಥಃ ಪ್ರಾಣಾನಾರ್ತೋಽಪ್ಯಧಾರಯತ್||
ದಕ್ಷಿಣಕ್ಕೆ ಹೋಗಿದ್ದ ವಾನರಪುಂಗವರ ಮೇಲೆ ಆಸೆಯನ್ನಿಟ್ಟು ಕಾಕುತ್ಸ್ಥನು ತನ್ನ ಆರ್ತ ಪ್ರಾಣವನ್ನು ಸಹಿಸಿಕೊಂಡಿದ್ದನು.
03266025a ದ್ವಿಮಾಸೋಪರಮೇ ಕಾಲೇ ವ್ಯತೀತೇ ಪ್ಲವಗಾಸ್ತತಃ|
03266025c ಸುಗ್ರೀವಮಭಿಗಮ್ಯೇದಂ ತ್ವರಿತಾ ವಾಕ್ಯಮಬ್ರುವನ್||
ಎರಡು ತಿಂಗಳುಗಳು ಕಳೆಯಲು ಕೆಲವು ಕಪಿಗಳು ತ್ವರೆಯಿಂದ ಸುಗ್ರೀವನ ಬಳಿಬಂದು ಈ ಮಾತುಗಳನ್ನಾಡಿದರು.
03266026a ರಕ್ಷಿತಂ ವಾಲಿನಾ ಯತ್ತತ್ಸ್ಫೀತಂ ಮಧುವನಂ ಮಹತ್|
03266026c ತ್ವಯಾ ಚ ಪ್ಲವಗಶ್ರೇಷ್ಠ ತದ್ಭುಂಕ್ತೇ ಪವನಾತ್ಮಜಃ||
03266027a ವಾಲಿಪುತ್ರೋಽಮ್ಗದಶ್ಚೈವ ಯೇ ಚಾನ್ಯೇ ಪ್ಲವಗರ್ಷಭಾಃ|
03266027c ವಿಚೇತುಂ ದಕ್ಷಿಣಾಮಾಶಾಂ ರಾಜನ್ಪ್ರಸ್ಥಾಪಿತಾಸ್ತ್ವಯಾ||
“ಕಪಿಶ್ರೇಷ್ಠ! ರಾಜನ್! ಯತ್ನಪಟ್ಟು ವಾಲಿ ಮತ್ತು ಈಗ ನೀನು ರಕ್ಷಿಸುತ್ತಿರುವ ಮಹಾ ಮಧುವನವನ್ನು ನಿನ್ನಿಂದ ದಕ್ಷಿಣ ದಿಕ್ಕಿಗೆ ಕಳುಹಿಸಲ್ಪಟ್ಟ ಪವನಾತ್ಮಜ, ವಾಲಿಪುತ್ರ ಅಂಗದ ಮತ್ತು ಇತರ ಕಪಿವೀರರು ಆನಂದಿಸುತ್ತಿದ್ದಾರೆ.”
03266028a ತೇಷಾಂ ತಂ ಪ್ರಣಯಂ ಶ್ರುತ್ವಾ ಮೇನೇ ಸ ಕೃತಕೃತ್ಯತಾಂ|
03266028c ಕೃತಾರ್ಥಾನಾಂ ಹಿ ಭೃತ್ಯಾನಾಮೇತದ್ಭವತಿ ಚೇಷ್ಟಿತಂ||
ಅವರ ಈ ಆಟವನ್ನು ಕೇಳಿ ಅವರು ಯಶಸ್ವಿಗಳಾಗಿದ್ದಾರೆಂದು ಅವನು ತಿಳಿದನು. ಕೃತಾರ್ಥರಾದ ಸೇವಕರೇ ಈ ರೀತಿಯ ಚೇಷ್ಟೆಗಳನ್ನು ಮಾಡುತ್ತಾರೆ.
03266029a ಸ ತದ್ರಾಮಾಯ ಮೇಧಾವೀ ಶಶಂಸ ಪ್ಲವಗರ್ಷಭಃ|
03266029c ರಾಮಶ್ಚಾಪ್ಯನುಮಾನೇನ ಮೇನೇ ದೃಷ್ಟಾಂ ತು ಮೈಥಿಲೀಂ||
ಆ ಮೇಧಾವೀ ಪ್ಲವಗರ್ಷಭನು ಅದನ್ನು ಹೇಳಲು ರಾಮನೂ ಕೂಡ ಅವರು ಮೈಥಿಲಿಯನ್ನು ಕಂಡಿದ್ದಾರೆ ಎಂದು ಅನುಮಾನಿಸಿದನು.
03266030a ಹನೂಮತ್ಪ್ರಮುಖಾಶ್ಚಾಪಿ ವಿಶ್ರಾಂತಾಸ್ತೇ ಪ್ಲವಂಗಮಾಃ|
03266030c ಅಭಿಜಗುರ್ಹರೀಂದ್ರಂ ತಂ ರಾಮಲಕ್ಷ್ಮಣಸನ್ನಿಧೌ||
03266031a ಗತಿಂ ಚ ಮುಖವರ್ಣಂ ಚ ದೃಷ್ಟ್ವಾ ರಾಮೋ ಹನೂಮತಃ|
03266031c ಅಗಮತ್ಪ್ರತ್ಯಯಂ ಭೂಯೋ ದೃಷ್ಟಾ ಸೀತೇತಿ ಭಾರತ||
ಹನೂಮಂತ ಮತ್ತು ಇತರ ಕಪಿಪ್ರಮುಖರು ವಿಶ್ರಾಂತಿಯನ್ನು ಪಡೆದು ರಾಮ-ಲಕ್ಷ್ಮಣರ ಸನ್ನಿಧಿಯಲ್ಲಿದ್ದ ಕಪೀಂದ್ರನ ಬಳಿ ಬಂದರು. ಭಾರತ! ಹನೂಮಂತನ ನಡಿಗೆ ಮತ್ತು ಮುಖವರ್ಣವನ್ನು ನೋಡಿ ರಾಮನು ಇವನು ಸೀತೆಯನ್ನು ನೋಡಿಯೇ ಬರುತ್ತಿದ್ದಾನೆ ಎಂದು ತಿಳಿದನು.
03266032a ಹನೂಮತ್ಪ್ರಮುಖಾಸ್ತೇ ತು ವಾನರಾಃ ಪೂರ್ಣಮಾನಸಾಃ|
03266032c ಪ್ರಣೇಮುರ್ವಿಧಿವದ್ರಾಮಂ ಸುಗ್ರೀವಂ ಲಕ್ಷ್ಮಣಂ ತಥಾ||
ಹನೂಮಂತನ ನಾಯಕತ್ವದಲ್ಲಿ ಆ ವಾನರರು ಮನತುಂಬಿದವರಾಗಿ ರಾಮ, ಸುಗ್ರೀವ, ಮತ್ತು ಲಕ್ಷ್ಮಣರಿಗೆ ವಿಧಿವತ್ತಾಗಿ ನಮಸ್ಕರಿಸಿದರು.
03266033a ತಾನುವಾಚಾಗತಾನ್ರಾಮಃ ಪ್ರಗೃಹ್ಯ ಸಶರಂ ಧನುಃ|
03266033c ಅಪಿ ಮಾಂ ಜೀವಯಿಷ್ಯಧ್ವಮಪಿ ವಃ ಕೃತಕೃತ್ಯತಾ||
ಶರಗಳೊಂದಿಗೆ ಧನುಸ್ಸನ್ನು ಎತ್ತಿಹಿಡಿದು ರಾಮನು ಹೊಸತಾಗಿ ಬಂದಿದ್ದ ಅವರಿಗೆ ಕೇಳಿದನು: “ನನ್ನ ಜೀವವನ್ನು ಮರಳಿ ತಂದಿದ್ದೀರಾ? ನೀವು ಕೃತಕೃತ್ಯರಾಗಿದ್ದೀರಾ?
03266034a ಅಪಿ ರಾಜ್ಯಮಯೋಧ್ಯಾಯಾಂ ಕಾರಯಿಷ್ಯಾಮ್ಯಹಂ ಪುನಃ|
03266034c ನಿಹತ್ಯ ಸಮರೇ ಶತ್ರೂನಾಹೃತ್ಯ ಜನಕಾತ್ಮಜಾಂ||
ಈಗ ನಾನು ಸಮರದಲ್ಲಿ ಶತ್ರುಗಳನ್ನು ಸಂಹರಿಸಿ ಜನಕಾತ್ಮಜೆಯನ್ನು ಪುನಃ ಪಡೆದುಕೊಂಡು ಅಯೋಧ್ಯಾ ರಾಜ್ಯವನ್ನು ಆಳಬಲ್ಲೆನೇ?
03266035a ಅಮೋಕ್ಷಯಿತ್ವಾ ವೈದೇಹೀಮಹತ್ವಾ ಚ ರಿಪೂನ್ರಣೇ|
03266035c ಹೃತದಾರೋಽವಧೂತಶ್ಚ ನಾಹಂ ಜೀವಿತುಮುತ್ಸಹೇ||
ರಣದಲ್ಲಿ ರಿಪುಗಳನ್ನು ಸಂಹರಿಸಿ ವೈದೇಹಿಯನ್ನು ಬಿಡಿಸಿಕೊಳ್ಳದೇ, ಪತ್ನಿಯನ್ನು ಕಳೆದುಕೊಂಡ ಮತ್ತು ಹೊರಗಟ್ಟಲ್ಪಟ್ಟ ನಾನು ಜೀವಿಸಲಾರೆ!”
03266036a ಇತ್ಯುಕ್ತವಚನಂ ರಾಮಂ ಪ್ರತ್ಯುವಾಚಾನಿಲಾತ್ಮಜಃ|
03266036c ಪ್ರಿಯಮಾಖ್ಯಾಮಿ ತೇ ರಾಮ ದೃಷ್ಟಾ ಸಾ ಜಾನಕೀ ಮಯಾ||
ರಾಮನ ಈ ಮಾತುಗಳಿಗೆ ಉತ್ತರವಾಗಿ ಅನಿಲಾತ್ಮಜನು ಹೇಳಿದನು: “ರಾಮ! ನಿನಗೆ ಪ್ರಿಯವಾದುದನ್ನು ಹೇಳುತ್ತೇನೆ. ನಾನು ಜಾನಕಿಯನ್ನು ನೋಡಿದೆ!
03266037a ವಿಚಿತ್ಯ ದಕ್ಷಿಣಾಮಾಶಾಂ ಸಪರ್ವತವನಾಕರಾಂ|
03266037c ಶ್ರಾಂತಾಃ ಕಾಲೇ ವ್ಯತೀತೇ ಸ್ಮ ದೃಷ್ಟವಂತೋ ಮಹಾಗುಹಾಂ||
ಪರ್ವತ, ಕಾನನ ಮತ್ತು ಗಣಿಗಳ ಸಹಿತ ದಕ್ಷಿಣದಲ್ಲೆಲ್ಲಾ ಹುಡುಕಾಡಿ ತುಂಬಾ ಆಯಾಸಗೊಂಡೆವು. ಹೀಗೆ ಸಮಯವು ಕಳೆಯಲು ಒಂದು ಮಹಾಗುಹೆಯನ್ನು ಕಂಡೆವು.
03266038a ಪ್ರವಿಶಾಮೋ ವಯಂ ತಾಂ ತು ಬಹುಯೋಜನಮಾಯತಾಂ|
03266038c ಅಂಧಕಾರಾಂ ಸುವಿಪಿನಾಂ ಗಹನಾಂ ಕೀಟಸೇವಿತಾಂ||
ಬಹುಯೋಜನ ವಿಸ್ತೀರ್ಣವಾಗಿದ್ದ, ಕತ್ತಲೆಕವಿದಿದ್ದ, ದಟ್ಟವೂ ಗಹನವೂ, ಕೀಟಗಳಿಂದ ತುಂಬಿದ್ದ ಅದನ್ನು ನಾವು ಪ್ರವೇಶಿಸಿದೆವು.
03266039a ಗತ್ವಾ ಸುಮಹದಧ್ವಾನಮಾದಿತ್ಯಸ್ಯ ಪ್ರಭಾಂ ತತಃ|
03266039c ದೃಷ್ಟವಂತಃ ಸ್ಮ ತತ್ರೈವ ಭವನಂ ದಿವ್ಯಮಂತರಾ||
ತುಂಬಾ ದೂರದವರೆಗೆ ಹೋದನಂತರ ಸೂರ್ಯನ ಕಿರಣಗಳನ್ನು ಮತ್ತು ಅಲ್ಲಿಯೇ ಹತ್ತಿರದಲ್ಲಿ ದಿವ್ಯ ಭವನವೊಂದನ್ನು ಕಂಡೆವು.
03266040a ಮಯಸ್ಯ ಕಿಲ ದೈತ್ಯಸ್ಯ ತದಾಸೀದ್ವೇಶ್ಮ ರಾಘವ|
03266040c ತತ್ರ ಪ್ರಭಾವತೀ ನಾಮ ತಪೋಽತಪ್ಯತ ತಾಪಸೀ||
ರಾಘವ! ಅದು ದೈತ್ಯ ಮಯನ ಮನೆಯಾಗಿತ್ತು. ಅಲ್ಲಿ ಪ್ರಭಾವತೀ ಎಂಬ ಹೆಸರಿನ ತಾಪಸಿಯು ತಪಸ್ಸನ್ನು ತಪಿಸುತ್ತಿದ್ದಳು.
03266041a ತಯಾ ದತ್ತಾನಿ ಭೋಜ್ಯಾನಿ ಪಾನಾನಿ ವಿವಿಧಾನಿ ಚ|
03266041c ಭುಕ್ತ್ವಾ ಲಬ್ಧಬಲಾಃ ಸಂತಸ್ತಯೋಕ್ತೇನ ಪಥಾ ತತಃ||
03266042a ನಿರ್ಯಾಯ ತಸ್ಮಾದುದ್ದೇಶಾತ್ಪಶ್ಯಾಮೋ ಲವಣಾಂಭಸಃ|
03266042c ಸಮೀಪೇ ಸಃಯಮಲಯೌ ದರ್ದುರಂ ಚ ಮಹಾಗಿರಿಂ||
ಅವಳು ನೀಡಿದ ವಿವಿಧ ಭೋಜನ ಪಾನೀಯಗಳನ್ನು ಸೇವಿಸಿ, ಶಕ್ತಿಯನ್ನು ಪಡೆದುಕೊಂಡು, ಆ ಪ್ರದೇಶದಿಂದ ಅವಳು ಸೂಚಿಸಿದ ದಾರಿಯಲ್ಲಿಯೇ ಹೊರಟು ದುರ್ಧರವಾದ ಸಹ್ಯ ಮತ್ತು ಮಲಯ ಮಹಾಗಿರಿಗಳ ಸಮೀಪದಲ್ಲಿ ಲವಣಾಂಭಸವನ್ನು ಕಂಡೆವು.
03266043a ತತೋ ಮಲಯಮಾರುಹ್ಯ ಪಶ್ಯಂತೋ ವರುಣಾಲಯಂ|
03266043c ವಿಷಣ್ಣಾ ವ್ಯಥಿತಾಃ ಖಿನ್ನಾ ನಿರಾಶಾ ಜೀವಿತೇ ಭೃಶಂ||
03266044a ಅನೇಕಶತವಿಸ್ತೀರ್ಣಂ ಯೋಜನಾನಾಂ ಮಹೋದಧಿಂ|
03266044c ತಿಮಿನಕ್ರಝಷಾವಾಸಂ ಚಿಂತಯಂತಃ ಸುದುಃಖಿತಾಃ||
ಆಗ ಮಲಯವನ್ನು ಏರಿ, ವರುಣಾಲಯವನ್ನು ನೋಡುತ್ತಾ ವಿಷಣ್ಣರೂ ವ್ಯಥಿತರೂ, ಖಿನ್ನರೂ, ಮತ್ತು ಜೀವನದಲ್ಲಿ ತುಂಬಾ ನಿರಾಶೆಯುಳ್ಳವರೂ ಆದೆವು. ಅನೇಕ ಶತಯೋಜನ ವಿಸ್ತೀರ್ಣವಾಗಿದ್ದ, ತಿಮಿಂಗಿಲು, ಮೊಸಳೆ ಮತ್ತು ಮಹಾಮೀನುಗಳಿದ್ದ ಆ ಮಹಾಸಾಗರವನ್ನು ನೋಡಿ ಚಿಂತಿಸುತ್ತಾ ಬಹಳ ದುಃಖಿತರಾದೆವು.
03266045a ತತ್ರಾನಶನಸಂಕಲ್ಪಂ ಕೃತ್ವಾಸೀನಾ ವಯಂ ತದಾ|
03266045c ತತಃ ಕಥಾಂತೇ ಗೃಧ್ರಸ್ಯ ಜಟಾಯೋರಭವತ್ಕಥಾ||
ಅಲ್ಲಿ ನಾವು ಮರಣಪರ್ಯಂತ ಉಪವಾಸವಾಗಿರಲು ಸಂಕಲ್ಪಿಸಿಕೊಂಡಿರಲು, ಹಾಗೆಯೇ ಮಾತನಾಡಿಕೊಂಡಿರುವಾಗ ಹದ್ದು ಜಟಾಯುವಿನ ವಿಷಯವು ಬಂದಿತು.
03266046a ತತಃ ಪರ್ವತಶೃಂಗಾಭಂ ಘೋರರೂಪಂ ಭಯಾವಹಂ|
03266046c ಪಕ್ಷಿಣಂ ದೃಷ್ಟವಂತಃ ಸ್ಮ ವೈನತೇಯಮಿವಾಪರಂ||
ಆಗ ನಾವು ಪರ್ವತಶಿಖರದಷ್ಟು ದೊಡ್ಡದಾಗಿದ್ದ, ಘೋರರೂಪಿ, ಭಯವನ್ನುಂಟುಮಾಡುವ ಇನ್ನೊಬ್ಬ ವೈನತೇಯನೋ ಅಂತಿರುವ ಪಕ್ಷಿಯನ್ನು ಕಂಡೆವು.
03266047a ಸೋಽಸ್ಮಾನತರ್ಕಯದ್ಭೋಕ್ತುಮಥಾಭ್ಯೇತ್ಯ ವಚೋಽಬ್ರವೀತ್|
03266047c ಭೋಃ ಕ ಏಷ ಮಮ ಭ್ರಾತುರ್ಜಟಾಯೋಃ ಕುರುತೇ ಕಥಾಂ||
ನಮ್ಮನ್ನು ಭಕ್ಷಿಸಲು ಯೋಚಿಸುತ್ತಿದ್ದ ಅವನು ಹತ್ತಿರ ಬಂದು ಹೇಳಿದನು: “ಭೋ! ನನ್ನ ಸಹೋದರ ಜಟಾಯುವಿನ ಕುರಿತು ಮಾತನಾಡುತ್ತಿರುವವರು ಯಾರು?
03266048a ಸಂಪಾತಿರ್ನಾಮ ತಸ್ಯಾಹಂ ಜ್ಯೇಷ್ಠೋ ಭ್ರಾತಾ ಖಗಾಧಿಪಃ|
03266048c ಅನ್ಯೋನ್ಯಸ್ಪರ್ಧಯಾರೂಢಾವಾವಾಮಾದಿತ್ಯಸಂಸದಂ||
ಅವನ ಹಿರಿಯ ಅಣ್ಣ ಸಂಪಾತಿಯೆಂಬ ಹೆಸರಿನ ಖಗಾಧಿಪನು ನಾನು. ಅನ್ಯೋನ್ಯರೊಡನೆ ಸರ್ಧೆಯಲ್ಲಿ ನಾವು ಆದಿತ್ಯನ ಸಂಸತ್ತಿನ ವರೆಗೆ ಹಾರಿ ಹೋಗಿದ್ದೆವು.
03266049a ತತೋ ದಗ್ಧಾವಿಮೌ ಪಕ್ಷೌ ನ ದಗ್ಧೌ ತು ಜಟಾಯುಷಃ|
03266049c ತದಾ ಮೇ ಚಿರದೃಷ್ಟಃ ಸ ಭ್ರಾತಾ ಗೃಧ್ರಪತಿಃ ಪ್ರಿಯಃ|
03266049e ನಿರ್ದಗ್ಧಪಕ್ಷಃ ಪತಿತೋ ಹ್ಯಹಮಸ್ಮಿನ್ಮಹಾಗಿರೌ||
ಆಗ ನನ್ನ ಈ ರೆಕ್ಕೆಗಳು ಸುಟ್ಟುಹೋಗಿದ್ದವು. ಆದರೆ ಜಟಾಯುವಿನವು ಸುಡಲಿಲ್ಲ. ಆಗ ಬಹಳ ಸಮಯದಿಂದ ನನಗೆ ಕಾಣದಿದ್ದ ನನ್ನ ಪ್ರಿಯ ತಮ್ಮನು ಹದ್ದುಗಳ ರಾಜನಾದನು. ರೆಕ್ಕೆಗಳು ಸುಟ್ಟುಹೋದ ನಾನು ಈ ಮಹಾಗಿರಿಯ ಮೇಲೆ ಬಿದ್ದೆ.”
03266050a ತಸ್ಯೈವಂ ವದತೋಽಸ್ಮಾಭಿರ್ಹತೋ ಭ್ರಾತಾ ನಿವೇದಿತಃ|
03266050c ವ್ಯಸನಂ ಭವತಶ್ಚೇದಂ ಸಂಕ್ಷೇಪಾದ್ವೈ ನಿವೇದಿತಂ||
ಅವನು ಹೀಗೆ ಹೇಳಲು ನಾವು ಅವನ ತಮ್ಮನು ಹತನಾದುದನ್ನು ಹೇಳಿದೆವು. ನಿನ್ನ ವ್ಯಸನದ ಕುರಿತೂ ಸಂಕ್ಷೇಪವಾಗಿ ಅವನಿಗೆ ಹೇಳಿದೆವು.
03266051a ಸ ಸಂಪಾತಿಸ್ತದಾ ರಾಜಂ ಶ್ರುತ್ವಾ ಸುಮಹದಪ್ರಿಯಂ|
03266051c ವಿಷಣ್ಣಚೇತಾಃ ಪಪ್ರಚ್ಚ ಪುನರಸ್ಮಾನರಿಂದಮ||
ಅರಿಂದಮ! ರಾಜನ್! ತುಂಬಾ ಅಪ್ರಿಯವಾದುದನ್ನು ಕೇಳಿ ಸಂಪಾತಿಯು ವಿಷಣ್ಣಚೇತಸನಾಗಿ ಪುನಃ ಕೇಳಿದನು:
03266052a ಕಃ ಸ ರಾಮಃ ಕಥಂ ಸೀತಾ ಜಟಾಯುಶ್ಚ ಕಥಂ ಹತಃ|
03266052c ಇಚ್ಚಾಮಿ ಸರ್ವಮೇವೈತಚ್ಚ್ರೋತುಂ ಪ್ಲವಗಸತ್ತಮಾಃ||
“ಈ ರಾಮನಾರು? ಸೀತೆಯು ಹೇಗೆ ಅಪಹರಿಸಲ್ಪಟ್ಟಳು? ಜಟಾಯುವು ಹೇಗೆ ಹತನಾದನು? ಕಪಿಸತ್ತಮರೇ! ಇವೆಲ್ಲವನ್ನೂ ಕೇಳ ಬಯಸುತ್ತೇನೆ.”
03266053a ತಸ್ಯಾಹಂ ಸರ್ವಮೇವೈತಂ ಭವತೋ ವ್ಯಸನಾಗಮಂ|
03266053c ಪ್ರಾಯೋಪವೇಶನೇ ಚೈವ ಹೇತುಂ ವಿಸ್ತರತೋಽಬ್ರುವಂ||
ಅವನಿಗೆ ನಾನು ನಿನಗೆ ಬಂದೊದಗಿದ ವ್ಯಸನಗಳೆಲ್ಲವನ್ನೂ, ಮತ್ತು ನಾವು ಪ್ರಾಯೋಪವೇಶ ಕೈಗೊಂಡಿರುವುದಕ್ಕೆ ಕಾರಣಗಳನ್ನು ವಿಸ್ತಾರವಾಗಿ ಹೇಳಿದೆನು.
03266054a ಸೋಽಸ್ಮಾನುತ್ಥಾಪಯಾಮಾಸ ವಾಕ್ಯೇನಾನೇನ ಪಕ್ಷಿರಾಟ್|
03266054c ರಾವಣೋ ವಿದಿತೋ ಮಹ್ಯಂ ಲಂಕಾ ಚಾಸ್ಯ ಮಹಾಪುರೀ||
ಆಗ ಆ ಪಕ್ಷಿರಾಜನು ಈ ಮಾತುಗಳಿಂದ ನಾವು ಮೇಲಕ್ಕೇಳುವಂತೆ ಮಾಡಿದನು: “ನನಗೆ ರಾವಣ ಮತ್ತು ಅವನ ಮಹಾಪುರಿ ಲಂಕೆಯೂ ಗೊತ್ತು.
03266055a ದೃಷ್ಟಾ ಪಾರೇ ಸಮುದ್ರಸ್ಯ ತ್ರಿಕೂಟಗಿರಿಕಂದರೇ|
03266055c ಭವಿತ್ರೀ ತತ್ರ ವೈದೇಹೀ ನ ಮೇಽಸ್ತ್ಯತ್ರ ವಿಚಾರಣಾ||
ಸಮುದ್ರದ ಆಚೆಯ ದಡದಲ್ಲಿ ತ್ರಿಕೂಟಗಿರಿಯ ಕಂದರದಲ್ಲಿ ನೋಡಿದ್ದೇನೆ. ಅಲ್ಲಿ ವೈದೇಹಿಯು ಇರುತ್ತಾಳೆ ಎನ್ನುವುದರಲ್ಲಿ ನನಗೆ ವಿಚಾರಮಾಡುವುದೇನೂ ಇಲ್ಲ.”
03266056a ಇತಿ ತಸ್ಯ ವಚಃ ಶ್ರುತ್ವಾ ವಯಮುತ್ಥಾಯ ಸತ್ವರಾಃ|
03266056c ಸಾಗರಪ್ಲವನೇ ಮಂತ್ರಂ ಮಂತ್ರಯಾಮಃ ಪರಂತಪ||
ಪರಂತಪ! ಅವನ ಈ ಮಾತನ್ನು ಕೇಳಿ ನಾವು ಶೀಘ್ರವೇ ಮೇಲೆದ್ದು ಸಾಗರವನ್ನು ಹಾರುವುದರ ಉಪಾಯದ ಕುರಿತು ಮಂತ್ರಾಲೋಚಿಸಿದೆವು.
03266057a ನಾಧ್ಯವಸ್ಯದ್ಯದಾ ಕಶ್ಚಿತ್ಸಾಗರಸ್ಯ ವಿಲಂಘನೇ|
03266057c ತತಃ ಪಿತರಮಾವಿಶ್ಯ ಪುಪ್ಲುವೇಽಹಂ ಮಹಾರ್ಣವಂ|
03266057e ಶತಯೋಜನವಿಸ್ತೀರ್ಣಂ ನಿಹತ್ಯ ಜಲರಾಕ್ಷಸೀಂ||
ಸಾಗರವನ್ನು ಲಂಘಿಸಲು ಯಾರೂ ಸಿದ್ಧರಾಗಲಿಲ್ಲ. ಆಗ ನಾನೇ ನನ್ನ ತಂದೆಯನ್ನು ಪ್ರವೇಶಿಸಿ, ಜಲರಾಕ್ಷಸಿಯನ್ನು ಸಂಹರಿಸಿ, ಶತಯೋಜನ ವಿಸ್ತೀರ್ಣದ ಆ ಮಹಾಸಾಗರವನ್ನು ಹಾರಿ ದಾಟಿದೆನು.
03266058a ತತ್ರ ಸೀತಾ ಮಯಾ ದೃಷ್ಟಾ ರಾವಣಾಂತಃಪುರೇ ಸತೀ|
03266058c ಉಪವಾಸತಪಃಶೀಲಾ ಭರ್ತೃದರ್ಶನಲಾಲಸಾ|
03266058e ಜಟಿಲಾ ಮಲದಿಗ್ಧಾಂಗೀ ಕೃಶಾ ದೀನಾ ತಪಸ್ವಿನೀ||
ಅಲ್ಲಿ ರಾವಣನ ಅಂತಃಪುರದಲ್ಲಿ ಪತಿಯ ದರ್ಶನಕ್ಕೆ ಕಾತರಿಸಿದ್ದ, ಉಪವಾಸ ಮತ್ತು ತಪಸ್ಸುಗಳನ್ನು ಮಾಡುತ್ತಿದ್ದ, ಕೂದಲನ್ನು ಗಂಟು ಹಾಕಿ, ಕೃಶಳಾಗಿದ್ದ, ಮಲಿನಳಾಗಿದ್ದ, ದೀನಳಾಗಿದ್ದ, ತಪಸ್ವಿನೀ ಸತೀ ಸೀತೆಯನ್ನು ನಾನು ಕಂಡೆ.
03266059a ನಿಮಿತ್ತೈಸ್ತಾಮಹಂ ಸೀತಾಮುಪಲಭ್ಯ ಪೃಥಗ್ವಿಧೈಃ|
03266059c ಉಪಸೃತ್ಯಾಬ್ರುವಂ ಚಾರ್ಯಾಮಭಿಗಮ್ಯ ರಹೋಗತಾಂ||
ಈ ಬೇರೆ ಬೇರೆ ಲಕ್ಷಣಗಳಿಂದ ಸೀತೆಯನ್ನು ಗುರುತಿಸಿದ ನಾನು, ಅವಳ ಬಳಿ ಗುಪ್ತವಾಗಿ ಹೋಗಿ ಈ ಮಾತುಗಳನ್ನಾಡಿದೆನು:
03266060a ಸೀತೇ ರಾಮಸ್ಯ ದೂತೋಽಹಂ ವಾನರೋ ಮಾರುತಾತ್ಮಜಃ|
03266060c ತ್ವದ್ದರ್ಶನಮಭಿಪ್ರೇಪ್ಸುರಿಹ ಪ್ರಾಪ್ತೋ ವಿಹಾಯಸಾ||
“ಸೀತೇ! ರಾಮನ ದೂತನು ನಾನು. ಮಾರುತಾತ್ಮಜ ವಾನರ. ನಿನ್ನ ದರ್ಶನವನ್ನು ಬಯಸಿ ಆಕಾಶದಿಂದ ಹಾರಿ ಇಲ್ಲಿಗೆ ಬಂದಿದ್ದೇನೆ.
03266061a ರಾಜಪುತ್ರೌ ಕುಶಲಿನೌ ಭ್ರಾತರೌ ರಾಮಲಕ್ಷ್ಮಣೌ|
03266061c ಸರ್ವಶಾಖಾಮೃಗೇಂದ್ರೇಣ ಸುಗ್ರೀವೇಣಾಭಿಪಾಲಿತೌ||
ಕಪಿಗಳ ರಾಜ ಸುಗ್ರೀವನಿಂದ ಪರಿಪಾಲಿತರಾಗಿ ಇಬ್ಬರು ರಾಜಪುತ್ರ ಸಹೋದರ ರಾಮ-ಲಕ್ಷ್ಮಣರು ಕುಶಲರಾಗಿದ್ದಾರೆ.
03266062a ಕುಶಲಂ ತ್ವಾಬ್ರವೀದ್ರಾಮಃ ಸೀತೇ ಸೌಮಿತ್ರಿಣಾ ಸಹ|
03266062c ಸಖಿಭಾವಾಚ್ಚ ಸುಗ್ರೀವಃ ಕುಶಲಂ ತ್ವಾನುಪೃಚ್ಚತಿ||
ಸೀತೇ! ರಾಮ ಮತ್ತು ಜೊತೆಗೆ ಸೌಮಿತ್ರಿಯು ನಿನ್ನ ಕುಶಲದ ಕುರಿತು ಕೇಳಿದ್ದಾರೆ. ಸ್ನೇಹಭಾವದಿಂದ ಸುಗ್ರೀವನೂ ಕೂಡ ನಿನ್ನ ಕುಶಲವನ್ನು ಕೇಳಿದ್ದಾನೆ.
03266063a ಕ್ಷಿಪ್ರಮೇಷ್ಯತಿ ತೇ ಭರ್ತಾ ಸರ್ವಶಾಖಾಮೃಗೈಃ ಸಹ|
03266063c ಪ್ರತ್ಯಯಂ ಕುರು ಮೇ ದೇವಿ ವಾನರೋಽಸ್ಮಿ ನ ರಾಕ್ಷಸಃ||
ಎಲ್ಲ ಕಪಿಗಳೊಂದಿಗೆ ನಿನ್ನ ಪತಿಯು ಶೀಘ್ರದಲ್ಲಿಯೇ ಬರುತ್ತಾನೆ. ದೇವಿ! ನನ್ನ ಮೇಲೆ ನಂಬಿಕೆಯನ್ನಿಡು. ನಾನು ವಾನರ. ರಾಕ್ಷಸನಲ್ಲ.”
03266064a ಮುಹೂರ್ತಮಿವ ಚ ಧ್ಯಾತ್ವಾ ಸೀತಾ ಮಾಂ ಪ್ರತ್ಯುವಾಚ ಹ|
03266064c ಅವೈಮಿ ತ್ವಾಂ ಹನೂಮಂತಮವಿಂಧ್ಯವಚನಾದಹಂ||
ಮುಹೂರ್ತಕಾಲ ಯೋಚಿಸಿ ಸೀತೆಯು ನನಗೆ ಉತ್ತರಿಸಿದಳು: “ಅವಿಂಧ್ಯನ ವಚನದಿಂದ ನೀನು ಹನೂಮಂತನನ್ನು ನಾನು ತಿಳಿದಿದ್ದೇನೆ.
03266065a ಅವಿಂಧ್ಯೋ ಹಿ ಮಹಾಬಾಹೋ ರಾಕ್ಷಸೋ ವೃದ್ಧಸಮ್ಮತಃ|
03266065c ಕಥಿತಸ್ತೇನ ಸುಗ್ರೀವಸ್ತ್ವದ್ವಿಧೈಃ ಸಚಿವೈರ್ವೃತಃ||
ಮಹಾಬಾಹು ವೃದ್ಧಸಮ್ಮತ ರಾಕ್ಷಸ ಅವಿಂಧ್ಯನೇ ಸುಗ್ರೀವನು ನಿನ್ನಂಥಹ ಸಚಿವರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ಹೇಳಿದನು.
03266066a ಗಮ್ಯತಾಮಿತಿ ಚೋಕ್ತ್ವಾ ಮಾಂ ಸೀತಾ ಪ್ರಾದಾದಿಮಂ ಮಣಿಂ|
03266066c ಧಾರಿತಾ ಯೇನ ವೈದೇಹೀ ಕಾಲಮೇತಮನಿಂದಿತಾ||
ಈಗ ಹೋಗು” ಎಂದು ಹೇಳಿ ಸೀತೆಯು ನನಗೆ ಈ ಮಣಿಯನ್ನು ಕೊಟ್ಟಳು. ಇದನ್ನು ಆ ಅನಿಂದಿತೆ ವೈದೇಹಿಯು ಇಲ್ಲಿಯವರೆಗೂ ಧರಿಸಿಕೊಂಡಿದ್ದಳು.
03266067a ಪ್ರತ್ಯಯಾರ್ಥಂ ಕಥಾಂ ಚೇಮಾಂ ಕಥಯಾಮಾಸ ಜಾನಕೀ|
03266067c ಕ್ಷಿಪ್ತಾಮಿಷೀಕಾಂ ಕಾಕಸ್ಯ ಚಿತ್ರಕೂಟೇ ಮಹಾಗಿರೌ|
03266067e ಭವತಾ ಪುರುಷವ್ಯಾಘ್ರ ಪ್ರತ್ಯಭಿಜ್ಞಾನಕಾರಣಾತ್||
ಇವೆಲ್ಲವುಗಳನ್ನು ನೀನು ನಂಬಬೇಕೆಂದು ಜಾನಕಿಯು ಮಹಾಗಿರಿ ಚಿತ್ರಕೂಟದಲ್ಲಿ ಹುಲ್ಲನ್ನು ಕಾಗೆಯ ಮೇಲೆ ನೀನು ಪ್ರಯೋಗಿಸಿದುದರ ಕಥೆಯನ್ನು ಹೇಳಿದಳು. ಪುರುಷವ್ಯಾಘ್ರ! ಇದರಿಂದ ನೀನು ಗುರುತಿಸಬಹುದು.
03266068a ಶ್ರಾವಯಿತ್ವಾ ತದಾತ್ಮಾನಂ ತತೋ ದಗ್ಧ್ವಾ ಚ ತಾಂ ಪುರೀಂ|.
03266068c ಸಂಪ್ರಾಪ್ತ ಇತಿ ತಂ ರಾಮಃ ಪ್ರಿಯವಾದಿನಮರ್ಚಯತ್||
ಅದನ್ನು ಕೇಳಿ, ನಂತರ ಆ ಪುರಿಯನ್ನು ಸುಟ್ಟು ಇಲ್ಲಿಗೆ ಬಂದೆ.” ಪ್ರಿಯವಾರ್ತೆಯನ್ನು ತಂದ ಅವನನ್ನು ರಾಮನು ಸತ್ಕರಿಸಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಹನುಮಪ್ರತ್ಯಾಗಮನೇ ಷಟ್‌ಷಷ್ಟ್ಯಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಹನುಮಪ್ರತ್ಯಾಗಮನದಲ್ಲಿ ಇನ್ನೂರಾಅರವತ್ತಾರನೆಯ ಅಧ್ಯಾಯವು.

Kannada translation of Draupadiharana Parva, by Chapter:
- ಜಯದ್ರಥಾಗಮನ
- ಕೋಟಿಕಾಸ್ಯಪ್ರಶ್ನಃ
- ದ್ರೌಪದೀವಾಕ್ಯ
- ಜಯದ್ರಥದ್ರೌಪದೀಸಂವಾದ
- ದ್ರೌಪದೀಹರಣ
- ಪಾರ್ಥಾಗಮನ
- ದ್ರೌಪದೀವಾಕ್ಯ
- ಜಯದ್ರಥಪಲಾಯನ
- ಜಯದ್ರಥವಿಮೋಕ್ಷಣ
- ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
- ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
- ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
- ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
- ರಾಮೋಪಾಖ್ಯಾನ-ರಾಮವನಾಭಿಗಮನ
- ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
- ರಾಮೋಪಾಖ್ಯಾನ-ಕಬಂಧಹನನ
- ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
- ರಾಮೋಪಾಖ್ಯಾನ-ಸೀತಾರಾವಣಸಂವಾದಃ
- ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
- ರಾಮೋಪಾಖ್ಯಾನ-ಸೇತುಬಂಧನ
- ರಾಮೋಪಾಖ್ಯಾನ-ಲಂಕಾಪ್ರವೇಶ
- ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
- ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
- ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
- ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
- ರಾಮೋಪಾಖ್ಯಾನ-ಇಂದ್ರಜಿದ್ವಧಃ
- ರಾಮೋಪಾಖ್ಯಾನ-ರಾವಣವಧಃ
- ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
- ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭
