Aranyaka Parva: Chapter 269

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೯

ಯುದ್ಧವರ್ಣನೆ (೧-೧೪)

03269001 ಮಾರ್ಕಂಡೇಯ ಉವಾಚ|

03269001a ತತೋ ನಿವಿಶಮಾನಾಂಸ್ತಾನ್ಸೈನಿಕಾನ್ರಾವಣಾನುಗಾಃ|

03269001c ಅಭಿಜಗ್ಮುರ್ಗಣಾನೇಕೇ ಪಿಶಾಚಕ್ಷುದ್ರರಕ್ಷಸಾಂ||

03269002a ಪರ್ವಣಃ ಪೂತನೋ ಜಂಭಃ ಖರಃ ಕ್ರೋಧವಶೋ ಹರಿಃ|

03269002c ಪ್ರರುಜಶ್ಚಾರುಜಶ್ಚೈವ ಪ್ರಘಸಶ್ಚೈವಮಾದಯಃ||

ಮಾರ್ಕಂಡೇಯನು ಹೇಳಿದನು: “ಆಗ ಸೈನಿಕರು ಅಲ್ಲಿ ಬೀಡುಬಿಟ್ಟಿರಲು, ಅವರನ್ನು ರಾವಣನ ಕೆಲವು ಪಿಶಾಚ ಮತ್ತು ರಾಕ್ಷಸ ಅನುಚರರು - ಪರ್ವಣ, ಪೂತನ, ಜಂಭ, ಖರ, ಕ್ರೋಧವಶ, ಹರಿ, ಪ್ರರುಜ, ಅರುಜ, ಪ್ರಘಾಸ ಮತ್ತಿತರರು - ಆಕ್ರಮಣಮಾಡಿದರು.

03269003a ತತೋಽಭಿಪತತಾಂ ತೇಷಾಮದೃಶ್ಯಾನಾಂ ದುರಾತ್ಮನಾಂ|

03269003c ಅಂತರ್ಧಾನವಧಂ ತಜ್ಞಶ್ಚಕಾರ ಸ ವಿಭೀಷಣಃ||

03269004a ತೇ ದೃಶ್ಯಮಾನಾ ಹರಿಭಿರ್ಬಲಿಭಿರ್ದೂರಪಾತಿಭಿಃ|

03269004c ನಿಹತಾಃ ಸರ್ವಶೋ ರಾಜನ್ಮಹೀಂ ಜಗ್ಮುರ್ಗತಾಸವಃ||

ಆ ದುರಾತ್ಮರು ಅದೃಶ್ಯರಾಗಿ ಆಕ್ರಮಣ ಮಾಡಿದರು. ಆದರೆ ವಿಭೀಷಣನು ಅವರ ಅಂತರ್ಧಾನತ್ವವನ್ನು ಕೊನೆಗಾಳಿಸಿದನು. ರಾಜನ್! ಅವರು ಕಾಣುವಂತಾದಾಗ ಬಲಶಾಲಿಗಳು ದೂರಹಾರಬಲ್ಲವರೂ ಆದ ಕಪಿಗಳು ಅವರೆಲ್ಲರನ್ನೂ ಕೊಂದರು ಮತ್ತು ಅವರು ಸತ್ತು ನೆಲದಮೇಲೆ ಬಿದ್ದರು.

03269005a ಅಮೃಷ್ಯಮಾಣಃ ಸಬಲೋ ರಾವಣೋ ನಿರ್ಯಯಾವಥ|

03269005c ವ್ಯೂಹ್ಯ ಚೌಶನಸಂ ವ್ಯೂಹಂ ಹರೀನ್ಸರ್ವಾನಹಾರಯತ್||

ಇದನ್ನು ಸಹಿಸಲಾರದೇ ರಾವಣನು, ಎಲ್ಲಕಪಿಗಳನ್ನೂ ಸಂಹರಿಸುವ ಉದ್ದೇಶದಿಂದ ಉಶಾನಸನ ವ್ಯೂಹವನ್ನು ರಚಿಸಿ ತನ್ನ ಬಲದೊಂದಿಗೆ ಹೊರಬಂದನು.

03269006a ರಾಘವಸ್ತ್ವಭಿನಿರ್ಯಾಯ ವ್ಯೂಢಾನೀಕಂ ದಶಾನನಂ|

03269006c ಬಾರ್ಹಸ್ಪತ್ಯಂ ವಿಧಿಂ ಕೃತ್ವಾ ಪ್ರತ್ಯವ್ಯೂಹನ್ನಿಶಾಚರಂ||

ರಾಘವನಾದರೂ ಬೃಹಸ್ಪತಿಯ ವ್ಯೂಹರಚನೆಯನ್ನು ಮಾಡಿ ನಿಶಾಚರ ದಶಾನನನ ಸೇನೆಯನ್ನು ಎದುರಿಸಿ ಮುಂದೆಬಂದನು.

03269007a ಸಮೇತ್ಯ ಯುಯುಧೇ ತತ್ರ ತತೋ ರಾಮೇಣ ರಾವಣಃ|

03269007c ಯುಯುಧೇ ಲಕ್ಷ್ಮಣಶ್ಚೈವ ತಥೈವೇಂದ್ರಜಿತಾ ಸಹ||

03269008a ವಿರೂಪಾಕ್ಷೇಣ ಸುಗ್ರೀವಸ್ತಾರೇಣ ಚ ನಿಖರ್ವಟಃ|

03269008c ತುಂಡೇನ ಚ ನಲಸ್ತತ್ರ ಪಟುಶಃ ಪನಸೇನ ಚ||

ಅಲ್ಲಿ ರಾಮ-ರಾವಣರು ಯುದ್ಧದಲ್ಲಿ ಸೆಣಸಾಡಿದರು. ಹಾಗೆಯೇ ಲಕ್ಷ್ಮಣನು ಇಂದ್ರಜಿತುವಿನೊಂದಿಗೆ, ಸುಗ್ರೀವನು ವಿರೂಪಾಕ್ಷನೊಂದಿಗೆ, ನಿಖರವ್ರತನು ತಾರನೊಂದಿಗೆ, ನಲನು ತುಂಡನೊಂದಿಗೆ, ಮತ್ತು ಪಟುಷನು ಪನಸನೊಂದಿಗೆ ಯುದ್ಧ ಮಾಡಿದರು.

03269009a ವಿಷಹ್ಯಂ ಯಂ ಹಿ ಯೋ ಮೇನೇ ಸ ಸ ತೇನ ಸಮೇಯಿವಾನ್|

03269009c ಯುಯುಧೇ ಯುದ್ಧವೇಲಾಯಾಂ ಸ್ವಬಾಹುಬಲಮಾಶ್ರಿತಃ||

ಯಾರನ್ನು ಯುದ್ಧದಲ್ಲಿ ಸರಿಸಾಟಿಯೆಂದು ಪರಿಗಣಿಸಿದರೋ ಅವರೊಂದಿಗೆ ಯುದ್ಧದ ವೇಳೆಗಳಲ್ಲಿ ಸ್ವಬಾಹುಬಲವನ್ನು ಆಶ್ರಯಿಸಿ ಯುದ್ಧಮಾಡಿದರು.

03269010a ಸ ಸಂಪ್ರಹಾರೋ ವವೃಧೇ ಭೀರೂಣಾಂ ಭಯವರ್ಧನಃ|

03269010c ಲೋಮಸಂಹರ್ಷಣೋ ಘೋರಃ ಪುರಾ ದೇವಾಸುರೇ ಯಥಾ||

ಆ ಹೊಡೆದಾಟವು ಹೇಡಿಗಳ ಭಯವನ್ನು ಹೆಚ್ಚುಮಾಡಿತು. ಮೈನವಿರೇಳಿಸುವ ಆ ಘೋರ ಯುದ್ಧವು ಹಿಂದೆ ನಡೆದ ದೇವಾಸುರರ ಯುದ್ಧದಂತಿತ್ತು.

03269011a ರಾವಣೋ ರಾಮಮಾನರ್ಚಚ್ಚಕ್ತಿಶೂಲಾಸಿವೃಷ್ಟಿಭಿಃ|

03269011c ನಿಶಿತೈರಾಯಸೈಸ್ತೀಕ್ಷ್ಣೈ ರಾವಣಂ ಚಾಪಿ ರಾಘವಃ||

ರಾವಣನು ರಾಮನ ಮೇಲೆ ಶಕ್ತಿ, ಶೂಲ ಮತ್ತು ಖಡ್ಗಗಳ ಮಳೆಯನ್ನು ಸುರಿಸಲು, ರಾಘವನೂ ಕೂಡ ರಾವಣನನ್ನು ಹರಿತ ತೀಕ್ಷ್ಣ ಉಕ್ಕಿನ ಶರಗಳಿಂದ ಆಕ್ರಮಣಮಾಡಿದನು.

03269012a ತಥೈವೇಂದ್ರಜಿತಂ ಯತ್ತಂ ಲಕ್ಷ್ಮಣೋ ಮರ್ಮಭೇದಿಭಿಃ|

03269012c ಇಂದ್ರಜಿಚ್ಚಾಪಿ ಸೌಮಿತ್ರಿಂ ಬಿಭೇದ ಬಹುಭಿಃ ಶರೈಃ||

ಹಾಗೆಯೇ ಲಕ್ಷ್ಮಣನು ಜಾಗರೂಕನಾಗಿದ್ದ ಇಂದ್ರಜಿತುವನ್ನು ಮರ್ಮಭೇದಿ ಶರಗಳಿಂದ ಘಾತಿಗೊಳಿಸಲು ಇಂದ್ರಜಿತುವೂ ಕೂಡ ಸೌಮಿತ್ರಿಯನ್ನು ಬಹುಶರಗಳಿಂದ ಭೇದಿಸಿದನು.

03269013a ವಿಭೀಷಣಃ ಪ್ರಹಸ್ತಂ ಚ ಪ್ರಹಸ್ತಶ್ಚ ವಿಭೀಷಣಂ|

03269013c ಖಗಪತ್ರೈಃ ಶರೈಸ್ತೀಕ್ಷ್ಣೈರಭ್ಯವರ್ಷದ್ಗತವ್ಯಥಃ||

ವಿಭೀಷಣನು ಪ್ರಹಸ್ತನ ಮೇಲೆ ಮತ್ತು ಪ್ರಹಸ್ತನು ವಿಭೀಷಣನ ಮೇಲೆ ಏನೂ ಚಿಂತಿಸದೇ ಪಕ್ಷಿಗಳ ರೆಕ್ಕೆಗಳುಳ್ಳ, ತೀಕ್ಷ್ಣಬಾಣಗಳನ್ನು ಹೊಡೆದರು.

03269014a ತೇಷಾಂ ಬಲವತಾಮಾಸೀನ್ಮಹಾಸ್ತ್ರಾಣಾಂ ಸಮಾಗಮಃ|

03269014c ವಿವ್ಯಥುಃ ಸಕಲಾ ಯೇನ ತ್ರಯೋ ಲೋಕಾಶ್ಚರಾಚರಾಃ||

ಅಲ್ಲಿ ಬಲವತ್ತಾದ ಮಹಾಸ್ತ್ರಗಳ ಸಮಾಗಮವಾಗುತ್ತಿತ್ತು. ಇದರಿಂದ ಮೂರು ಲೋಕಗಳ ಸಕಲ ಚರಾಚರರೂ ವ್ಯಾಕುಲರಾದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾಮರಾವಣದ್ವಂದ್ವಯುದ್ಧೇ ಏಕೋನಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾಮರಾವಣದ್ವಂದ್ವಯುದ್ಧದಲ್ಲಿ ಇನ್ನೂರಾಅರವತ್ತೊಂಭತ್ತನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.