Aranyaka Parva: Chapter 257

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೭

ರಾಮೋಪಾಖ್ಯಾನ

ರಾಮೋಪಾಖ್ಯಾನದ ಪ್ರಸ್ತಾವನೆ

ದ್ರೌಪದಿಯ ಅಪಹರಣದ ಪ್ರಕರಣದಿಂದ ದುಃಖಿತನಾದ ಯುಧಿಷ್ಠಿರನು ತನಗಿಂತಲೂ ಹೆಚ್ಚು ದುರಾದೃಷ್ಟವಂತರು ಇನ್ನು ಯಾರಾದರೂ ಇದ್ದಾರೆಯೇ ಅಥವಾ ಹಿಂದೆ ಇದ್ದರೇ ಎಂದು ಮುನಿ ಮಾರ್ಕಂಡೇಯನಲ್ಲಿ ಪ್ರಶ್ನಿಸುವುದು (೧-೧೦).

03257001 ಜನಮೇಜಯ ಉವಾಚ|

03257001a ಏವಂ ಹೃತಾಯಾಂ ಕೃಷ್ಣಾಯಾಂ ಪ್ರಾಪ್ಯ ಕ್ಲೇಶಮನುತ್ತಮಂ|

03257001c ಅತ ಊರ್ಧ್ವಂ ನರವ್ಯಾಘ್ರಾಃ ಕಿಮಕುರ್ವತ ಪಾಂಡವಾಃ||

ಜನಮೇಜಯನು ಹೇಳಿದನು: “ಕೃಷ್ಣೆಯ ಅಪಹರಣದಿಂದ ತುಂಬಾ ಕಷ್ಟವನ್ನು ಅನುಭವಿಸಿದ ನಂತರ ನರವ್ಯಾಘ್ರ ಪಾಂಡವರು ಏನು ಮಾಡಿದರು?”

03257002 ವೈಶಂಪಾಯನ ಉವಾಚ|

03257002a ಏವಂ ಕೃಷ್ಣಾಂ ಮೋಕ್ಷಯಿತ್ವಾ ವಿನಿರ್ಜಿತ್ಯ ಜಯದ್ರಥಂ|

03257002c ಆಸಾಂ ಚಕ್ರೇ ಮುನಿಗಣೈರ್ಧರ್ಮರಾಜೋ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಈ ರೀತಿ ಜಯದ್ರಥನನ್ನು ಸೋಲಿಸಿ ಕೃಷ್ಣೆಯನ್ನು ಬಿಡುಗಡೆಗೊಳಿಸಿದ ಧರ್ಮರಾಜ ಯುಧಿಷ್ಠಿರನು ಮುನಿಗಳ ಮಧ್ಯದಲ್ಲಿ ಕುಳಿತುಕೊಂಡಿದ್ದನು.

03257003a ತೇಷಾಂ ಮಧ್ಯೇ ಮಹರ್ಷೀಣಾಂ ಶೃಣ್ವತಾಮನುಶೋಚತಾಂ|

03257003c ಮಾರ್ಕಂಡೇಯಮಿದಂ ವಾಕ್ಯಮಬ್ರವೀತ್ಪಾಂಡುನಂದನಃ||

ಅದರ ಕುರಿತು ಕೇಳಿ ದುಃಖಿತರಾದ ಆ ಮಹರ್ಷಿಗಳ ಮಧ್ಯದಲ್ಲಿದ್ದ ಮಾರ್ಕಂಡೇಯನಿಗೆ ಪಾಂಡುನಂದನನು ಈ ಮಾತುಗಳನ್ನಾಡಿದನು:

03257004a ಮನ್ಯೇ ಕಾಲಶ್ಚ ಬಲವಾನ್ದೈವಂ ಚ ವಿಧಿನಿರ್ಮಿತಂ|

03257004c ಭವಿತವ್ಯಂ ಚ ಭೂತಾನಾಂ ಯಸ್ಯ ನಾಸ್ತಿ ವ್ಯತಿಕ್ರಮಃ||

“ಬಲವಾನ್ ಕಾಲ ಮತ್ತು ಆಗಬೇಕಾಗಿದ್ದ ವಿಧಿನಿರ್ಮಿತ ದೈವವನ್ನು ಇರುವ ಯಾರೂ ಅತಿಕ್ರಮಿಸಲು ಆಗುವುದಿಲ್ಲ ಎನ್ನುವುದನ್ನು ಮನ್ನಿಸೋಣ.

03257005a ಕಥಂ ಹಿ ಪತ್ನೀಮಸ್ಮಾಕಂ ಧರ್ಮಜ್ಞಾಂ ಧರ್ಮಚಾರಿಣೀಂ|

03257005c ಸಂಸ್ಪೃಶೇದೀದೃಶೋ ಭಾವಃ ಶುಚಿಂ ಸ್ತೈನ್ಯಮಿವಾನೃತಂ||

ಧರ್ಮಜ್ಞೆ ಮತ್ತು ಧರ್ಮಚಾರಿಣಿ ನಮ್ಮ ಪತ್ನಿಗೆ ಹೇಗೆ ತಾನೆ ಈ ರೀತಿ ನಡೆಯುತ್ತದೆ ಮತ್ತು ಶುಚಿಯಾದವನಿಗೆ ಸುಳ್ಳಿನ ಅಪವಾದವು ಹೇಗೆ ಬರುತ್ತದೆ?

03257006a ನ ಹಿ ಪಾಪಂ ಕೃತಂ ಕಿಂ ಚಿತ್ಕರ್ಮ ವಾ ನಿಂದಿತಂ ಕ್ವ ಚಿತ್|

03257006c ದ್ರೌಪದ್ಯಾ ಬ್ರಾಹ್ಮಣೇಷ್ವೇವ ಧರ್ಮಃ ಸುಚರಿತೋ ಮಹಾನ್||

ದ್ರೌಪದಿಯು ಯಾವುದೇ ಪಾಪಕರ್ಮವನ್ನೂ ಮಾಡಲಿಲ್ಲ ಮತ್ತು ಯಾರನ್ನೂ ನಿಂದಿಸಲಿಲ್ಲ. ಮತ್ತು ಬ್ರಾಹ್ಮಣರೊಡನೆಯೂ ಮಹಾಧರ್ಮವನ್ನು ಆಚರಿಸಿಕೊಂಡಿದ್ದಾಳೆ.

03257007a ತಾಂ ಜಹಾರ ಬಲಾದ್ರಾಜಾ ಮೂಢಬುದ್ಧಿರ್ಜಯದ್ರಥಃ|

03257007c ತಸ್ಯಾಃ ಸಂಹರಣಾತ್ಪ್ರಾಪ್ತಃ ಶಿರಸಃ ಕೇಶವಾಪನಂ||

03257007e ಪರಾಜಯಂ ಚ ಸಂಗ್ರಾಮೇ ಸಸಹಾಯಃ ಸಮಾಪ್ತವಾನ್||

ಮೂಢಬುದ್ಧಿಯ ರಾಜಾ ಜಯದ್ರಥನು ಬಲಾತ್ಕಾರದಿಂದ ಅವಳನ್ನು ಅಪಹರಿಸಿದ. ಅವಳನ್ನು ಅಪಹರಿಸಿಹೋದುದರಿಂದ ತಲೆಯ ಕೂದಲನ್ನು ಬೋಳಿಸಿಕೊಂಡ. ಅವನ ಅನುಯಾಯಿಗಳೊಂದಿಗೆ ಸಂಗ್ರಾಮದಲ್ಲಿ ಪರಾಜಯವನ್ನು ಹೊಂದಿದ.

03257008a ಪ್ರತ್ಯಾಹೃತಾ ತಥಾಸ್ಮಾಭಿರ್ಹತ್ವಾ ತತ್ಸೈಂಧವಂ ಬಲಂ|

03257008c ತದ್ದಾರಹರಣಂ ಪ್ರಾಪ್ತಮಸ್ಮಾಭಿರವಿತರ್ಕಿತಂ||

ಆ ಸೈಂಧವನ ಸೇನೆಯನ್ನು ಸಂಹರಿಸಿ ಅವಳನ್ನು ಹಿಂದೆ ಕರೆದುಕೊಂಡು ಬರುತ್ತಿದ್ದೆವು. ಆದರೆ ಅವನು ನಮ್ಮ ಪತ್ನಿಯನ್ನು ವಿಚಾರಮಾಡದೇ ಅಪಹರಿಸಿದ.

03257009a ದುಃಖಶ್ಚಾಯಂ ವನೇ ವಾಸೋ ಮೃಗಯಾಯಾಂ ಚ ಜೀವಿಕಾ|

03257009c ಹಿಂಸಾ ಚ ಮೃಗಜಾತೀನಾಂ ವನೌಕೋಭಿರ್ವನೌಕಸಾಂ|

03257009e ಜ್ಞಾತಿಭಿರ್ವಿಪ್ರವಾಸಶ್ಚ ಮಿಥ್ಯಾ ವ್ಯವಸಿತೈರಯಂ||

ಮೃಗಗಳನ್ನು ಅವಲಂಬಿಸಿ ಜೀವಿಸುವ ಈ ವನವಾಸವು ದುಃಖತರವಾದುದು. ವನದಲ್ಲಿ ವಾಸಿಸುವವರು ವನದಲ್ಲಿರುವ ಮೃಗಜಾತಿಗಳನ್ನು ಬೇಟೆಯಾಡಿ ಹಿಂಸಿಸಬೇಕಾಗುತ್ತದೆ. ಮತ್ತು ಈ ವನವಾಸವನ್ನು ಮೋಸದಿಂದ ನಡೆದುಕೊಳ್ಳುವ ನಮ್ಮ ಬಾಂಧವರೇ ನಮಗೆ ಕೊಟ್ಟಿದ್ದಾರೆ.

03257010a ಅಸ್ತಿ ನೂನಂ ಮಯಾ ಕಶ್ಚಿದಲ್ಪಭಾಗ್ಯತರೋ ನರ|

03257010c ಭವತಾ ದೃಷ್ಟಪೂರ್ವೋ ವಾ ಶ್ರುತಪೂರ್ವೋಽಪಿ ವಾ ಭವೇತ್||

ನನಗಿಂತಲೂ ದುರಾದೃಷ್ಟವಂತರು ಇನ್ನು ಯಾರಾದರೂ ಇದ್ದಾರೆಯೇ ಅಥವಾ ಹಿಂದೆ ಯಾರಾದರೂ ಇದ್ದರೇ? ಅಂಥವರನ್ನು ನೀನು ಇದಕ್ಕೂ ಹಿಂದೆ ನೋಡಿದ್ದೆಯಾ ಅಥವಾ ಕೇಳಿದ್ದೆಯಾ?”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಯುಧಿಷ್ಠಿರಪ್ರಶ್ನೇ ಸಪ್ತಪಂಚಾಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಯುಧಿಷ್ಠಿರಪ್ರಶ್ನದಲ್ಲಿ ಇನ್ನೂರಾಐವತ್ತೇಳನೆಯ ಅಧ್ಯಾಯವು.

Related image

Comments are closed.