Aranyaka Parva: Chapter 260

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೦

ರಾವಣನ ಸಂಹಾರಕ್ಕೆ ವಿಷ್ಣು ಮತ್ತು ಇತರ ದೇವತೆಗಳ ಅವತಾರ

ದೇವತೆಗಳು, ಸಿದ್ಧರು, ಮಹರ್ಷಿಗಳು ಬ್ರಹ್ಮನ ಶರಣು ಹೋಗಲು ವಿಷ್ಣುವು ಅವತರಿಸಿ ರಾವಣನನ್ನು ವಧಿಸುವ ಕಾರ್ಯವನ್ನು ಮಾಡುವನೆಂದೂ, ದೇವತೆಗಳೂ ಕೂಡ ಅವತರಿಸಿ ಅವನಿಗೆ ಸಹಾಯ ಮಾಡಬೇಕೆಂದು ಹೇಳುವುದು (೧-೭). ದೇವ-ಗಂಧರ್ವರ ಅಂಶಾವತರಣ (೮-೧೫).

03260001 ಮಾರ್ಕಂಡೇಯ ಉವಾಚ|

03260001a ತತೋ ಬ್ರಹ್ಮರ್ಷಯಃ ಸಿದ್ಧಾ ದೇವರಾಜರ್ಷಯಸ್ತಥಾ|

03260001c ಹವ್ಯವಾಹಂ ಪುರಸ್ಕೃತ್ಯ ಬ್ರಹ್ಮಾಣಂ ಶರಣಂ ಗತಾಃ||

ಮಾರ್ಕಂಡೇಯನು ಹೇಳಿದನು: “ಆಗ ಬ್ರಹ್ಮರ್ಷಿಗಳು, ಸಿದ್ಧರು ಮತ್ತು ದೇವ ರಾಜರ್ಷಿಗಳು ಹವ್ಯವಾಹನನನ್ನು ಮುಂದಿಟ್ಟುಕೊಂಡು ಬ್ರಹ್ಮನ ಶರಣು ಹೋದರು.

03260002 ಅಗ್ನಿರುವಾಚ|

03260002a ಯಃ ಸ ವಿಶ್ರವಸಃ ಪುತ್ರೋ ದಶಗ್ರೀವೋ ಮಹಾಬಲಃ|

03260002c ಅವಧ್ಯೋ ವರದಾನೇನ ಕೃತೋ ಭಗವತಾ ಪುರಾ||

ಅಗ್ನಿಯು ಹೇಳಿದನು: “ವಿಶ್ರವಸನ ಮಗ ಮಹಾಬಲಶಾಲೀ ದಶಗ್ರೀವನನ್ನು ನೀನು ಹಿಂದೆ ವರದಾನದಿಂದ ಅವಧ್ಯನನ್ನಾಗಿ ಮಾಡಿದ್ದೀಯೆ.

03260003a ಸ ಬಾಧತೇ ಪ್ರಜಾಃ ಸರ್ವಾ ವಿಪ್ರಕಾರೈರ್ಮಹಾಬಲಃ|

03260003c ತತೋ ನಸ್ತ್ರಾತು ಭಗವನ್ನಾನ್ಯಸ್ತ್ರಾತಾ ಹಿ ವಿದ್ಯತೇ||

ಈಗ ಆ ಮಹಾಬಲನು ಸರ್ವ ಪ್ರಜೆಗಳನ್ನೂ ದ್ವೇಷಕಾರ್ಯಗಳಿಂದ ಬಾಧಿಸುತ್ತಿದ್ದಾನೆ. ಭಗವನ್! ಅವನಿಂದ ನಮ್ಮನ್ನು ರಕ್ಷಿಸು! ಬೇರೆ ಯಾವ ರಕ್ಷಕನನ್ನೂ ನಾವು ತಿಳಿಯೆವು!”

03260004 ಬ್ರಹ್ಮೋವಾಚ|

03260004a ನ ಸ ದೇವಾಸುರೈಃ ಶಕ್ಯೋ ಯುದ್ಧೇ ಜೇತುಂ ವಿಭಾವಸೋ|

03260004c ವಿಹಿತಂ ತತ್ರ ಯತ್ಕಾರ್ಯಮಭಿತಸ್ತಸ್ಯ ನಿಗ್ರಹೇ||

ಬ್ರಹ್ಮನು ಹೇಳಿದನು: “ವಿಭಾವಸೋ! ಯುದ್ಧದಲ್ಲಿ ಅವನನ್ನು ಗೆಲ್ಲಲು ದೇವಾಸುರರಿಗೂ ಸಾಧ್ಯವಿಲ್ಲ. ಆದರೂ ಇವನ ನಿಗ್ರಹಕ್ಕೆಂದು ಕಾರ್ಯವು ವಿಹಿತವಾಗಿದೆ.

03260005a ತದರ್ಥಮವತೀರ್ಣೋಽಸೌ ಮನ್ನಿಯೋಗಾಚ್ಚತುರ್ಭುಜಃ|

03260005c ವಿಷ್ಣುಃ ಪ್ರಹರತಾಂ ಶ್ರೇಷ್ಠಃ ಸ ಕರ್ಮೈತತ್ಕರಿಷ್ಯತಿ||

ಅದಕ್ಕಾಗಿಯೇ ನನ್ನ ನಿಯೋಗದಂತೆ ಅವತಾರವನ್ನು ತಳೆದಿರುವ ಪ್ರಹರಿಗಳಲ್ಲಿ ಶ್ರೇಷ್ಠ ಚತುರ್ಭುಜ ವಿಷ್ಣುವು ಇದೇ ಕಾರ್ಯವನ್ನು ಮಾಡುತ್ತಾನೆ.””

03260006 ಮಾರ್ಕಂಡೇಯ ಉವಾಚ|

03260006a ಪಿತಾಮಹಸ್ತತಸ್ತೇಷಾಂ ಸನ್ನಿಧೌ ವಾಕ್ಯಮಬ್ರವೀತ್|

03260006c ಸರ್ವೈರ್ದೇವಗಣೈಃ ಸಾರ್ಧಂ ಸಂಭವಧ್ವಂ ಮಹೀತಲೇ||

ಮಾರ್ಕಂಡೇಯನು ಹೇಳಿದನು: “ಅವರ ಸನ್ನಿಧಿಯಲ್ಲಿ ಪಿತಾಮಹನು ಈ ವಾಕ್ಯವನ್ನು ಹೇಳಿದನು: “ಸರ್ವದೇವಗಣಗಳೊಂದಿಗೆ ಮಹೀತಲದಲ್ಲಿ ಅವತರಿಸಿ.

03260007a ವಿಷ್ಣೋಃ ಸಹಾಯಾನೃಕ್ಷೀಷು ವಾನರೀಷು ಚ ಸರ್ವಶಃ|

03260007c ಜನಯಧ್ವಂ ಸುತಾನ್ವೀರಾನ್ಕಾಮರೂಪಬಲಾನ್ವಿತಾನ್||

ವಿಷ್ಣುವಿನ ಸಹಾಯಕ್ಕಾಗಿ ಕರಡಿಗಳಲ್ಲಿ ಮತ್ತು ವಾನರರಲ್ಲಿ ಎಲ್ಲರೂ ವೀರರೂ, ಕಾಮರೂಪಿಗಳೂ ಮತ್ತು ಬಲಾನ್ವಿತರೂ ಆದ ಮಕ್ಕಳನ್ನು ಹುಟ್ಟಿಸಿರಿ.”

03260008a ತತೋ ಭಾಗಾನುಭಾಗೇನ ದೇವಗಂಧರ್ವದಾನವಾಃ|

03260008c ಅವತರ್ತುಂ ಮಹೀಂ ಸರ್ವೇ ರಂಜಯಾಮಾಸುರಂಜಸಾ||

ಆಗ ದೇವ, ಗಂಧರ್ವ, ದಾನವರು ಎಲ್ಲರೂ ಸಂತೋಷದಿಂದ ಭಾಗ ಭಾಗವಾಗಿ ಭೂಮಿಯಲ್ಲಿ ಅವತರಿಸಿದರು.

03260009a ತೇಷಾಂ ಸಮಕ್ಷಂ ಗಂಧರ್ವೀಂ ದುಂದುಭೀಂ ನಾಮ ನಾಮತಃ|

03260009c ಶಶಾಸ ವರದೋ ದೇವೋ ದೇವಕಾರ್ಯಾರ್ಥಸಿದ್ಧಯೇ||

ಅವರ ಎದುರಿನಲ್ಲಿಯೇ ವರದ ದೇವನು ದೇವಕಾರ್ಯಸಿದ್ಧಿಗಾಗಿ ದುಂದುಭೀ ಎಂಬ ಹೆಸರಿನ ಗಂಧರ್ವಿಗೆ ಆದೇಶವನ್ನಿತ್ತನು.

03260010a ಪಿತಾಮಹವಚಃ ಶ್ರುತ್ವಾ ಗಂಧರ್ವೀ ದುಂದುಭೀ ತತಃ|

03260010c ಮಂಥರಾ ಮಾನುಷೇ ಲೋಕೇ ಕುಬ್ಜಾ ಸಮಭವತ್ತದಾ||

ಪಿತಾಮಹನ ವಚನವನ್ನು ಕೇಳಿ ಗಂಧರ್ವಿ ದುಂದುಭಿಯು ಮನುಷ್ಯಲೋಕದಲ್ಲಿ ಮಂಥರಾ ಎಂಬ ಕುಬ್ಜೆಯಾಗಿ ಜನಿಸಿದಳು.

03260011a ಶಕ್ರಪ್ರಭೃತಯಶ್ಚೈವ ಸರ್ವೇ ತೇ ಸುರಸತ್ತಮಾಃ|

03260011c ವಾನರರ್ಕ್ಷವರಸ್ತ್ರೀಷು ಜನಯಾಮಾಸುರಾತ್ಮಜಾನ್||

ಶಕ್ರನೇ ಮೊದಲಾದ ಎಲ್ಲ ಸುರಸತ್ತಮರೂ ವಾನರ ಮತ್ತು ಕರಡಿಗಳ ಶ್ರೇಷ್ಠ ಸ್ತ್ರೀಯರಲ್ಲಿ ತಮ್ಮಿಂದಲೇ ಮಕ್ಕಳನ್ನು ಹುಟ್ಟಿಸಿದರು.

03260011e ತೇಽನ್ವವರ್ತನ್ಪಿತೄನ್ಸರ್ವೇ ಯಶಸಾ ಚ ಬಲೇನ ಚ||

03260012a ಭೇತ್ತಾರೋ ಗಿರಿಶೃಂಗಾಣಾಂ ಶಾಲತಾಲಶಿಲಾಯುಧಾಃ|

ಅವರೆಲ್ಲರೂ ಯಶಸ್ಸು ಮತ್ತು ಬಲದಲ್ಲಿ ತಮ್ಮ ತಂದೆಯರನ್ನು ಅನುಸರಿಸಿದರು ಮತ್ತು ಗಿರಿಶೃಂಗಗಳಲ್ಲಿ ಶಾಲ, ತಾಲ ಮತ್ತು ಶಿಲಾಯುಧಗಳನ್ನು ಹಿಡಿದು ವಾಸಿಸಿದರು.

03260012c ವಜ್ರಸಂಹನನಾಃ ಸರ್ವೇ ಸರ್ವೇ ಚೌಘಬಲಾಸ್ತಥಾ||

03260013a ಕಾಮವೀರ್ಯಧರಾಶ್ಚೈವ ಸರ್ವೇ ಯುದ್ಧವಿಶಾರದಾಃ|

ವಜ್ರದಂತೆ ಕಠಿನರಾಗಿದ್ದ ಅವರೆಲ್ಲರೂ ಪ್ರವಾಹದಲ್ಲಿದ್ದ ನದಿಯಂತೆ ಬಲಶಾಲಿಗಳಾಗಿದ್ದರು, ಎಲ್ಲರೂ ಬಯಸಿದಷ್ಟು ವೀರ್ಯವಂತರಾಗಿದ್ದರು ಮತ್ತು ಎಲ್ಲರೂ ಯುದ್ಧ ವಿಶಾರದರಾಗಿದ್ದರು.

03260013c ನಾಗಾಯುತಸಮಪ್ರಾಣಾ ವಾಯುವೇಗಸಮಾ ಜವೇ||

03260013e ಯತ್ರೇಚ್ಚಕನಿವಾಸಾಶ್ಚ ಕೇ ಚಿದತ್ರ ವನೌಕಸಃ||

ಶಕ್ತಿಯಲ್ಲಿ ಆನೆಗಳ ಹಿಂಡಿಗೆ ಸಮನಾಗಿದ್ದರು ಮತ್ತು ವೇಗದಲ್ಲಿ ವಾಯುವೇಗಕ್ಕೆ ಸಮನಾಗಿದ್ದರು. ಕೆಲವರು ತಮಗೆ ಇಷ್ಟವಾದಲ್ಲಿ ವಾಸಿಸಿದರು ಮತ್ತೆ ಕೆಲವರು ವನಗಳಲ್ಲಿ ವಾಸಿಸಿದರು.

03260014a ಏವಂ ವಿಧಾಯ ತತ್ಸರ್ವಂ ಭಗವಾಽಲ್ಲೋಕಭಾವನಃ|

03260014c ಮಂಥರಾಂ ಬೋಧಯಾಮಾಸ ಯದ್ಯತ್ಕಾರ್ಯಂ ಯಥಾ ಯಥಾ||

ಈ ರೀತಿ ಅವೆಲ್ಲವೂ ನಡೆಯುವಂತೆ ಮಾಡಿ ಭಗವಾನ್ ಲೋಕಭಾವನನು ಯಾವ ಯಾವ ಕಾರ್ಯವನ್ನು ಹೇಗೆ ಹೇಗೆ ಮಾಡಬೇಕೆಂದು ಮಂಥರೆಗೆ ಬೋಧಿಸಿದನು.

03260015a ಸಾ ತದ್ವಚನಮಾಜ್ಞಾಯ ತಥಾ ಚಕ್ರೇ ಮನೋಜವಾ|

03260015c ಇತಶ್ಚೇತಶ್ಚ ಗಚ್ಚಂತೀ ವೈರಸಂಧುಕ್ಷಣೇ ರತಾ||

ಅವಳು ಆ ಮಾತನ್ನು ಅರ್ಥಮಾಡಿಕೊಂಡು ಮನೋವೇಗದಲ್ಲಿ ಇಲ್ಲಿಂದ ಅಲ್ಲಿಗೆ ಹೋಗಿ ಹಾಗೆಯೇ ವೈರತ್ವವನ್ನು ಹುಟ್ಟಿಸಲು ತೊಡಗಿದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ವಾನರಾದ್ಯುತ್ಪತ್ತೌ ಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ವಾನರಾದಿಗಳ ಉತ್ಪತ್ತಿಯಲ್ಲಿ ಇನ್ನೂರಾಅರವತ್ತನೆಯ ಅಧ್ಯಾಯವು.

Related image

Comments are closed.