Aranyaka Parva: Chapter 249

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೪೯

ಕೋಟಿಕಾಶ್ಯನು ದ್ರೌಪದಿಯ ಬಳಿಸಾರಿ ತನ್ನ ಪರಿಚಯವನ್ನು ಹೇಳಿಕೊಂಡು ಅವಳ್ಯಾರೆಂದು ಕೇಳಿದುದು (೧-೧೩).

03249001 ಕೋಟಿಕಾಶ್ಯ ಉವಾಚ|

03249001a ಕಾ ತ್ವಂ ಕದಂಬಸ್ಯ ವಿನಮ್ಯ ಶಾಖಾಂ|

        ಏಕಾಶ್ರಮೇ ತಿಷ್ಠಸಿ ಶೋಭಮಾನಾ|

03249001c ದೇದೀಪ್ಯಮಾನಾಗ್ನಿಶಿಖೇವ ನಕ್ತಂ|

        ದೋಧೂಯಮಾನಾ ಪವನೇನ ಸುಭ್ರೂಃ||

ಕೋಟಿಕಾಶ್ಯನು ಹೇಳಿದನು: “ಕದಂಬಶಾಖೆಯನ್ನು ಬಗ್ಗಿಸುತ್ತಿರುವ ನೀನು ಯಾರು? ಒಬ್ಬಳೇ ಆಶ್ರಮದಲ್ಲಿ ಶೋಭಮಾನಳಾಗಿ ನಿಂತಿರುವೆ? ಸುಭ್ರು! ರಾತ್ರಿಯಲ್ಲಿ ಅಗ್ನಿಶಿಖೆಯಂತೆ ಉರಿದು ಗಾಳಿಯ ಸಹಾಯದಿಂದ ಅರಣ್ಯವನ್ನೇ ಸುಡುವಂತಿರುವೆ.

03249002a ಅತೀವ ರೂಪೇಣ ಸಮನ್ವಿತಾ ತ್ವಂ|

        ನ ಚಾಪ್ಯರಣ್ಯೇಷು ಬಿಭೇಷಿ ಕಿಂ ನು|

03249002c ದೇವೀ ನು ಯಕ್ಷೀ ಯದಿ ದಾನವೀ ವಾ|

        ವರಾಪ್ಸರಾ ದೈತ್ಯವರಾಂಗನಾ ವಾ||

ನೀನು ಅತೀವ ರೂಪಸಮನ್ವಿತೆಯಾಗಿರುವೆ. ಈ ಅರಣ್ಯದಲ್ಲಿ ಏಕೆ ನಿನಗೆ ಭಯವೆಂಬುದಿಲ್ಲ? ನೀನು ದೇವಿಯೋ, ಯಕ್ಷಿಯೋ, ದಾನವಿಯೋ, ಅಪ್ಸರೆಯೋ ಅಥವಾ ದೈತ್ಯವರಾಂಗನೆಯೋ?

03249003a ವಪುಷ್ಮತೀ ವೋರಗರಾಜಕನ್ಯಾ|

        ವನೇಚರೀ ವಾ ಕ್ಷಣದಾಚರಸ್ತ್ರೀ|

03249003c ಯದ್ಯೇವ ರಾಜ್ಞೋ ವರುಣಸ್ಯ ಪತ್ನೀ|

        ಯಮಸ್ಯ ಸೋಮಸ್ಯ ಧನೇಶ್ವರಸ್ಯ||

ಅಥವಾ ನೀನು ಸುಂದರ ಉರಗರಾಜಕನ್ಯೆಯೋ? ಅಥವಾ ರಾತ್ರಿಹೊತ್ತು ವನವನ್ನು ಸಂಚರಿಸುವ ಕ್ಷಣದೆಯೋ? ಅಥವಾ ರಾಜ ವರುಣನ, ಯಮನ, ಸೋಮನ ಅಥವಾ ಧನೇಶ್ವರನ ಪತ್ನಿಯಾಗಿರಬಹುದೋ?

03249004a ಧಾತುರ್ವಿಧಾತುಃ ಸವಿತುರ್ವಿಭೋರ್ವಾ|

        ಶಕ್ರಸ್ಯ ವಾ ತ್ವಂ ಸದನಾತ್ಪ್ರಪನ್ನಾ|

03249004c ನ ಹ್ಯೇವ ನಃ ಪೃಚ್ಚಸಿ ಯೇ ವಯಂ ಸ್ಮ|

        ನ ಚಾಪಿ ಜಾನೀಮ ತವೇಹ ನಾಥಂ||

ಧಾತ, ವಿಧಾತ, ಸವಿತು ಅಥವಾ ವಿಭು ಶಕ್ರನ ಅರಮನೆಯಿಂದ ಬಂದಿರುವವಳೋ? ನಾವು ಯಾರಾಗಿರಬಹುದೆಂದು ನೀನು ಕೇಳುತ್ತಿಲ್ಲ. ನಿನ್ನ ನಾಥರು ಯಾರೆಂದೂ ನಮಗೆ ತಿಳಿದಿಲ್ಲ.

03249005a ವಯಂ ಹಿ ಮಾನಂ ತವ ವರ್ಧಯಂತಃ|

        ಪೃಚ್ಚಾಮ ಭದ್ರೇ ಪ್ರಭವಂ ಪ್ರಭುಂ ಚ|

03249005c ಆಚಕ್ಷ್ವ ಬಂಧೂಂಶ್ಚ ಪತಿಂ ಕುಲಂ ಚ|

        ತತ್ತ್ವೇನ ಯಚ್ಚೇಹ ಕರೋಷಿ ಕಾರ್ಯಂ||

ನಿನ್ನ ಮಾನವನ್ನು ಹೆಚ್ಚಿಸಲು ನಾವು ಕೇಳುತ್ತಿದ್ದೇವೆ. ಭದ್ರೇ! ನಿನ್ನ ಹುಟ್ಟು, ಪ್ರಭು, ಬಂಧುಗಳು, ಪತಿ, ಕುಲಗಳನ್ನು ಹೇಳು. ಮತ್ತು ಇಲ್ಲಿ ನಿನ್ನ ಕೆಲಸವೇನೆಂಬುದನ್ನೂ ಹೇಳು.

03249006a ಅಹಂ ತು ರಾಜ್ಞಃ ಸುರಥಸ್ಯ ಪುತ್ರೋ|

        ಯಂ ಕೋಟಿಕಾಶ್ಯೇತಿ ವಿದುರ್ಮನುಷ್ಯಾಃ|

03249006c ಅಸೌ ತು ಯಸ್ತಿಷ್ಠತಿ ಕಾಂಚನಾಂಗೇ|

        ರಥೇ ಹುತೋಽಗ್ನಿಶ್ಚಯನೇ ಯಥೈವ|

03249006e ತ್ರಿಗರ್ತರಾಜಃ ಕಮಲಾಯತಾಕ್ಷಿ|

        ಕ್ಷೇಮಂಕರೋ ನಾಮ ಸ ಏಷ ವೀರಃ||

ನಾನು ರಾಜ ಸುರಥನ ಪುತ್ರ. ಜನರು ನನ್ನನ್ನು ಕೋಟಿಕಾಶ್ಯನೆಂದು ತಿಳಿದಿದ್ದಾರೆ. ಕಮಲಾಯತಾಕ್ಷೀ! ಕುಂಡಕ್ಕೆ ಆಹುತಿಯನ್ನು ಹಾಕಿದಾಗ ಉರಿಯುತ್ತಿರುವ ಅಗ್ನಿಯಂತೆ ಅಲ್ಲಿ ಕಾಂಚನ ರಥದಲ್ಲಿ ಇರುವ ಅವನು ತ್ರಿಗರ್ತರಾಜ ಕ್ಷೇಮಂಕರ ಎಂಬ ಹೆಸರಿನ ವೀರ.

03249007a ಅಸ್ಮಾತ್ಪರಸ್ತ್ವೇಷ ಮಹಾಧನುಷ್ಮಾನ್|

        ಪುತ್ರಃ ಕುಣಿಂದಾಧಿಪತೇರ್ವರಿಷ್ಠಃ|

03249007c ನಿರೀಕ್ಷತೇ ತ್ವಾಂ ವಿಪುಲಾಯತಾಂಸಃ|

        ಸುವಿಸ್ಮಿತಃ ಪರ್ವತವಾಸನಿತ್ಯಃ||

ಅವನ ಹಿಂದೆ ಮಹಾಧನುಸ್ಸನ್ನು ಹಿಡಿದಿರುವವನು ಕುಣಿಂದಾಧಿಪತಿಯ ಹಿರಿಯ ಮಗನು. ನಿನ್ನನ್ನು ಅರಳಿದ ಕಣ್ಣುಗಳಿಂದ ದಿಟ್ಟಿಸಿ ನೋಡುತ್ತಿರುವ ಆ ಸುವಿಸ್ಮಿತನು ನಿತ್ಯವೂ ಪರ್ವತವಾಸಿಯು.

03249008a ಅಸೌ ತು ಯಃ ಪುಷ್ಕರಿಣೀಸಮೀಪೇ|

        ಶ್ಯಾಮೋ ಯುವಾ ತಿಷ್ಠತಿ ದರ್ಶನೀಯಃ|

03249008c ಇಕ್ಷ್ವಾಕುರಾಜ್ಞಃ ಸುಬಲಸ್ಯ ಪುತ್ರಃ|

        ಸ ಏಷ ಹಂತಾ ದ್ವಿಷತಾಂ ಸುಗಾತ್ರಿ||

ಸುಂದರ ದೇಹದವಳೇ! ಅಲ್ಲಿ ತಾವರೆಯ ಕೊಳದ ಸಮೀಪದಲ್ಲಿ ನಿಂತಿರುವ ಕಪ್ಪುಬಣ್ಣದ ಸುಂದರ ಯುವಕನು ಇಕ್ಷ್ವಾಕುರಾಜ ಸುಬಲನ ಪುತ್ರ. ಇವನು ಅರಿಗಳ ಹಂತಕ.

03249009a ಯಸ್ಯಾನುಯಾತ್ರಂ ಧ್ವಜಿನಃ ಪ್ರಯಾಂತಿ|

        ಸೌವೀರಕಾ ದ್ವಾದಶ ರಾಜಪುತ್ರಾಃ|

03249009c ಶೋಣಾಶ್ವಯುಕ್ತೇಷು ರಥೇಷು ಸರ್ವೇ|

        ಮಖೇಷು ದೀಪ್ತಾ ಇವ ಹವ್ಯವಾಹಾಃ||

03249010a ಅಂಗಾರಕಃ ಕುಂಜರಗುಪ್ತಕಶ್ಚ|

        ಶತ್ರುಂಜಯಃ ಸಂಜಯಸುಪ್ರವೃದ್ಧೌ|

03249010c ಪ್ರಭಂಕರೋಽಥ ಭ್ರಮರೋ ರವಿಶ್ಚ|

        ಶೂರಃ ಪ್ರತಾಪಃ ಕುಹರಶ್ಚ ನಾಮ||

ಅಲ್ಲಿ ರಕ್ತದ ಬಣ್ಣದ ರಥಗಳಲ್ಲಿ ಕುಳಿತು ಮಖದಲ್ಲಿ ಪ್ರಜ್ವಲಿಸುವ ಅಗ್ನಿಗಳಂತೆ ಧ್ವಜಗಳನ್ನು ಹಾರಿಸುತ್ತಾ ಹೋಗುತ್ತಿರುವವರು ಹನ್ನೆರಡು ಸೌವೀರಕ ರಾಜಪುತ್ರರು. ಅವರ ಹೆಸರುಗಳು - ಅಂಗಾರಕ, ಕುಂಜರ, ಗುಪ್ತಕ, ಶತ್ರುಂಜಯ, ಸಂಜಯ, ಸುಪ್ರವೃದ್ಧ, ಪ್ರಭಂಕರ, ರವಿ, ಬ್ರಮರ, ಶೂರ, ಪ್ರತಾಮ ಮತ್ತು ಕುಹರ.

03249011a ಯಂ ಷಟ್ಸಹಸ್ರಾ ರಥಿನೋಽನುಯಾಂತಿ|

        ನಾಗಾ ಹಯಾಶ್ಚೈವ ಪದಾತಿನಶ್ಚ|

03249011c ಜಯದ್ರಥೋ ನಾಮ ಯದಿ ಶ್ರುತಸ್ತೇ|

        ಸೌವೀರರಾಜಃ ಸುಭಗೇ ಸ ಏಷಃ||

ಸುಭಗೇ! ಆನೆಗಳು, ಕುದುರೆಗಳು ಮತ್ತು ಪದಾತಿಗಳೊಂದಿಗೆ ಆರು ಸಾವಿರ ರಥಿಗಳಿಂದ ಹಿಂಬಾಲಿಸಲ್ಪಟ್ಟು ಬರುತ್ತಿರುವವನೇ ಜಯದ್ರಥ ಎಂಬ ಹೆಸರಿನ, ನೀನು ಕೇಳಿರಬಲ್ಲವನಾದ, ಸೌವೀರರಾಜ.

03249012a ತಸ್ಯಾಪರೇ ಭ್ರಾತರೋಽದೀನಸತ್ತ್ವಾ|

        ಬಲಾಹಕಾನೀಕವಿದಾರಣಾಧ್ಯಾಃ|

03249012c ಸೌವೀರವೀರಾಃ ಪ್ರವರಾ ಯುವಾನೋ|

        ರಾಜಾನಮೇತೇ ಬಲಿನೋಽನುಯಾಂತಿ||

ಅವನ ಹಿಂದೆ ಅವನ ತಮ್ಮಂದಿರು ಅದೀನಸತ್ವರಾದ ಸೌವೀರವೀರರು ಯುವ ಪ್ರವರರು ಈ ರಾಜನ ದಂಡನ್ನು ಬಲದಿಂದ ಕಾಯುತ್ತಿದ್ದಾರೆ.

03249013a ಏತೈಃ ಸಹಾಯೈರುಪಯಾತಿ ರಾಜಾ|

        ಮರುದ್ಗಣೈರಿಂದ್ರ ಇವಾಭಿಗುಪ್ತಃ|

03249013c ಅಜಾನತಾಂ ಖ್ಯಾಪಯ ನಃ ಸುಕೇಶಿ|

        ಕಸ್ಯಾಸಿ ಭಾರ್ಯಾ ದುಹಿತಾ ಚ ಕಸ್ಯ||

ಮರುತರೆಂಬ ರಕ್ಷಕರೊಂದಿಗೆ ಇಂದ್ರನು ಹೇಗೋ ಹಾಗೆ ಇವರೊಂದಿಗೆ ರಾಜನು ಪ್ರಯಾಣಿಸುತ್ತಿದ್ದಾನೆ. ಸುಕೇಶೀ! ಈಗ ನೀನು ಯಾರ ಭಾರ್ಯೆ ಮತ್ತು ಯಾರ ಮಗಳು ಎನ್ನುವುದನ್ನು ನಮಗೆ ತಿಳಿಸಿಕೊಡು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಕೋಟಿಕಾಸ್ಯಪ್ರಶ್ನೇ ಏಕೋನಪಂಚದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಕೋಟಿಕಾಸ್ಯಪ್ರಶ್ನದಲ್ಲಿ ಇನ್ನೂರಾನಲ್ವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.