Aranyaka Parva: Chapter 254

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೪

ದ್ರೌಪದಿಯು ಜಯದ್ರಥನಿಗೆ ತನ್ನ ಪತಿಯರಾದ ಐವರು ಪಾಂಡವರ ಪರಿಚಯವನ್ನು ಹೇಳಿ ತೋರಿಸುವುದು (೧-೨೧).

03254001 ವೈಶಂಪಾಯನ ಉವಾಚ|

03254001a ತತೋ ಘೋರತರಃ ಶಬ್ದೋ ವನೇ ಸಮಭವತ್ತದಾ|

03254001c ಭೀಮಸೇನಾರ್ಜುನೌ ದೃಷ್ಟ್ವಾ ಕ್ಷತ್ರಿಯಾಣಾಮಮರ್ಷಿಣಾಂ||

ವೈಶಂಪಾಯನನು ಹೇಳಿದನು: “ಭೀಮಸೇನ ಅರ್ಜುನರನ್ನು ನೋಡಿ ಕ್ಷತ್ರಿಯರು ಸಹಿಸಲಾಗದ ಘೋರತರ ಶಬ್ಧವು ವನವನ್ನು ತುಂಬಿತು.

03254002a ತೇಷಾಂ ಧ್ವಜಾಗ್ರಾಣ್ಯಭಿವೀಕ್ಷ್ಯ ರಾಜಾ|

        ಸ್ವಯಂ ದುರಾತ್ಮಾ ಕುರುಪುಂಗವಾನಾಂ|

03254002c ಜಯದ್ರಥೋ ಯಾಜ್ಞಸೇನೀಮುವಾಚ|

        ರಥೇ ಸ್ಥಿತಾಂ ಭಾನುಮತೀಂ ಹತೌಜಾಃ||

ಆ ಕುರುಪುಂಗವರ ಧ್ವಜಗಳ ತುದಿಯನ್ನು ಕಂಡ ದುರಾತ್ಮ ರಾಜಾ ಜಯದ್ರಥನು ತನ್ನ ರಥದಲ್ಲಿ ಹತಾಶಳಾಗಿ ನಿಂತಿದ್ದ ಭಾನುಮತಿ ಯಾಜ್ಞಸೇನಿಗೆ ಹೇಳಿದನು:

03254003a ಆಯಾಂತೀಮೇ ಪಂಚ ರಥಾ ಮಹಾಂತೋ|

        ಮನ್ಯೇ ಚ ಕೃಷ್ಣೇ ಪತಯಸ್ತವೈತೇ|

03254003c ಸಾ ಜಾನತೀ ಖ್ಯಾಪಯ ನಃ ಸುಕೇಶಿ|

        ಪರಂ ಪರಂ ಪಾಂಡವಾನಾಂ ರಥಸ್ಥಂ||

“ಕೃಷ್ಣೇ! ಈ ಐದು ಮಹಾರಥಗಳಲ್ಲಿ ಬರುತ್ತಿರುವವರು ನಿನ್ನ ಪತಿಗಳೇ ಇರಬೇಕೆಂದು ತಿಳಿಯುತ್ತೇನೆ. ಸುಕೇಶೀ! ಅವರನ್ನು ನೀನು ಚೆನ್ನಾಗಿ ತಿಳಿದಿರುತ್ತೀಯೆ. ರಥದಲ್ಲಿರುವ ಪಾಂಡವರು ಯಾರು ಯಾರೆಂದು ಹೇಳು.”

03254004 ದ್ರೌಪದ್ಯುವಾಚ|

03254004a ಕಿಂ ತೇ ಜ್ಞಾತೈರ್ಮೂಢ ಮಹಾಧನುರ್ಧರೈರ್|

        ಅನಾಯುಷ್ಯಂ ಕರ್ಮ ಕೃತ್ವಾತಿಘೋರಂ|

03254004c ಏತೇ ವೀರಾಃ ಪತಯೋ ಮೇ ಸಮೇತಾ|

        ನ ವಃ ಶೇಷಃ ಕಶ್ಚಿದಿಹಾಸ್ತಿ ಯುದ್ಧೇ||

ದ್ರೌಪದಿಯು ಹೇಳಿದಳು: “ಮೂಢ! ಈ ಹೊಲಸು ಮತ್ತು ಅತಿಘೋರ ಕರ್ಮವನ್ನು ಮಾಡಿ ಈಗ ಮಹಾಧನ್ವಿಗಳನ್ನು ತಿಳಿಯುವುದರಿಂದ ನಿನಗೇನಾಗುತ್ತದೆ? ಇಲ್ಲಿಗೆ ಬಂದಿರುವ ನನ್ನ ಪತಿಗಳು ಒಟ್ಟಾಗಿ ಯುದ್ಧದಲ್ಲಿ ನಿಮ್ಮನ್ನು ಯಾರನ್ನೂ ಉಳಿಸುವುದಿಲ್ಲ!

03254005a ಆಖ್ಯಾತವ್ಯಂ ತ್ವೇವ ಸರ್ವಂ ಮುಮೂರ್ಷೋರ್|

        ಮಯಾ ತುಭ್ಯಂ ಪೃಷ್ಟಯಾ ಧರ್ಮ ಏಷಃ|

03254005c ನ ಮೇ ವ್ಯಥಾ ವಿದ್ಯತೇ ತ್ವದ್ಭಯಂ ವಾ|

        ಸಂಪಶ್ಯಂತ್ಯಾಃ ಸಾನುಜಂ ಧರ್ಮರಾಜಂ||

ಆದರೆ ಸಾಯಬೇಕಾದ ನಿನಗೆ ಎಲ್ಲವನ್ನೂ ಹೇಳಬೇಕು. ನನ್ನನ್ನು ಕೇಳಿದ ನಿನಗೆ ಹೇಳುವುದು ಧರ್ಮ! ಅನುಜರೊಂದಿಗೆ ಧರ್ಮರಾಜನನ್ನು ನೋಡುತ್ತಿರುವ ನನಗೆ ನಿನ್ನಿಂದ ವ್ಯಥೆಯೂ ಭಯವೂ ಆಗುತ್ತಿಲ್ಲ.

03254006a ಯಸ್ಯ ಧ್ವಜಾಗ್ರೇ ನದತೋ ಮೃದಂಗೌ|

        ನಂದೋಪನಂದೌ ಮಧುರೌ ಯುಕ್ತರೂಪೌ|

03254006c ಏತಂ ಸ್ವಧರ್ಮಾರ್ಥವಿನಿಶ್ಚಯಜ್ಞಂ|

        ಸದಾ ಜನಾಃ ಕೃತ್ಯವಂತೋಽನುಯಾಂತಿ||

ಯಾರ ಧ್ವಜಾಗ್ರದಲ್ಲಿ ನೋಡಬೇಕಾದ ನಂದ ಮತ್ತು ಉಪನಂದ ಮೃದಂಗಗಳು ಮೊಳಗುತ್ತಿವೆಯೋ, ಆ ಸ್ವಧರ್ಮಾರ್ಥನಿಶ್ಚಯಜ್ಞನನ್ನು ಸದಾ ಕೃತ್ಯವಂತ ಜನರು ಅನುಸರಿಸುತ್ತಾರೆ.

03254007a ಯ ಏಷ ಜಾಂಬೂನದಶುದ್ಧಗೌರಃ|

        ಪ್ರಚಂಡಘೋಣಸ್ತನುರಾಯತಾಕ್ಷಃ|

03254007c ಏತಂ ಕುರುಶ್ರೇಷ್ಠತಮಂ ವದಂತಿ|

        ಯುಧಿಷ್ಠಿರಂ ಧರ್ಮಸುತಂ ಪತಿಂ ಮೇ||

ಶುದ್ಧ ಬಂಗಾರದ ಬಣ್ಣದ, ಉದ್ದವಾದ ತೆಳು ಮೂಗಿನ, ಅಗಲ ಕಣ್ಣಿನ ಆ ನನ್ನ ಪತಿಯನ್ನು ಕುರುಶ್ರೇಷ್ಠತಮನೆಂದೂ, ಧರ್ಮಸುತ ಯುಧಿಷ್ಠಿರನೆಂದು ಹೇಳುತ್ತಾರೆ.

03254008a ಅಪ್ಯೇಷ ಶತ್ರೋಃ ಶರಣಾಗತಸ್ಯ|

        ದದ್ಯಾತ್ಪ್ರಾಣಾನ್ಧರ್ಮಚಾರೀ ನೃವೀರಃ|

03254008c ಪರೈಹ್ಯೇನಂ ಮೂಢ ಜವೇನ ಭೂತಯೇ|

        ತ್ವಮಾತ್ಮನಃ ಪ್ರಾಂಜಲಿರ್ನ್ಯಸ್ತಶಸ್ತ್ರಃ||

ಶರಣಾಗತನಾದ ಶತ್ರುವಿಗೂ ಕೂಡ ಆ ಧರ್ಮಚಾರಿ ನನ್ನ ವೀರನು ಪ್ರಾಣವನ್ನು ಕೊಡುತ್ತಾನೆ. ಮೂಢ! ಅವನಿದ್ದಲ್ಲಿಗೆ ಬೇಗ ಓಡು. ನಿನ್ನ ಒಳ್ಳೆಯದಕ್ಕಾಗಿಯೇ ಶಸ್ತ್ರಗಳನ್ನು ತೊರೆದು, ಕೈ ಮುಗಿದು ಬೇಗ ಓಡು!

03254009a ಅಥಾಪ್ಯೇನಂ ಪಶ್ಯಸಿ ಯಂ ರಥಸ್ಥಂ|

        ಮಹಾಭುಜಂ ಶಾಲಮಿವ ಪ್ರವೃದ್ಧಂ|

03254009c ಸಂದಷ್ಟೋಷ್ಠಂ ಭ್ರುಕುಟೀಸಂಹತಭ್ರುವಂ|

        ವೃಕೋದರೋ ನಾಮ ಪತಿರ್ಮಮೈಷಃ||

ಈಗ ಇನ್ನೊಂದು ರಥದಲ್ಲಿರುವ ಇನ್ನೊಬ್ಬ ಶಾಲದಂತೆ ಬೆಳೆದಿರುವ ಮಹಾಭುಜದವನನ್ನು ನೋಡುತ್ತಿರುವೆಯಲ್ಲಾ! ಅವನ ತುಟಿಗಳು ಬಿಗಿದಿವೆ. ಹುಬ್ಬುಗಳು ಗಂಟಿಕ್ಕಿವೆ. ಅವನೇ ವೃಕೋದರನೆಂಬ ಹೆಸರಿನ ನನ್ನ ಪತಿ.

03254010a ಆಜಾನೇಯಾ ಬಲಿನಃ ಸಾಧು ದಾಂತಾ|

        ಮಹಾಬಲಾಃ ಶೂರಮುದಾವಹಂತಿ|

03254010c ಏತಸ್ಯ ಕರ್ಮಾಣ್ಯತಿಮಾನುಷಾಣಿ|

        ಭೀಮೇತಿ ಶಬ್ದೋಽಸ್ಯ ಗತಃ ಪೃಥಿವ್ಯಾಂ||

ಬಲಶಾಲಿಗಳಾದ, ಪಳಗಿದ, ಉತ್ತಮ ಥಳಿಯ, ಮಹಾಬಲಶಾಲಿ ಕುದುರೆಗಳು ಅವನನ್ನು ಒಯ್ಯುತ್ತಿವೆ. ಇವನ ಕೃತ್ಯಗಳು ಅಮಾನುಷವಾದವುಗಳು. ಇವನ ಕೂಗು ಈ ಭೂಮಿಯಲ್ಲಿ ಭೀಮ ಎಂದೇ ಆಗಿ ಹೋಗಿದೆ!

03254011a ನಾಸ್ಯಾಪರಾದ್ಧಾಃ ಶೇಷಮಿಹಾಪ್ನುವಂತಿ|

        ನಾಪ್ಯಸ್ಯ ವೈರಂ ವಿಸ್ಮರತೇ ಕದಾ ಚಿತ್|

03254011c ವೈರಸ್ಯಾಂತಂ ಸಂವಿಧಾಯೋಪಯಾತಿ|

        ಪಶ್ಚಾಚ್ಚಾಂತಿಂ ನ ಚ ಗಚ್ಚತ್ಯತೀವ||

ಅಪರಾಧಿಗಳ್ಯಾರೂ ಇವನಿಂದ ಉಳಿದುಕೊಳ್ಳುವುದಿಲ್ಲ. ಇವನು ವೈರಿಯನ್ನು ಎಂದೂ ಮರೆಯಲಾರ! ವೈರತ್ವಕ್ಕೆ ಅಂತ್ಯವನ್ನು ನೀಡಿದನಂತರವೂ ತಕ್ಷಣವೇ ಇವನು ತಣ್ಣಗಾಗುವವನಲ್ಲ.

03254012a ಮೃದುರ್ವದಾನ್ಯೋ ಧೃತಿಮಾನ್ಯಶಸ್ವೀ|

        ಜಿತೇಂದ್ರಿಯೋ ವೃದ್ಧಸೇವೀ ನೃವೀರಃ|

03254012c ಭ್ರಾತಾ ಚ ಶಿಷ್ಯಶ್ಚ ಯುಧಿಷ್ಠಿರಸ್ಯ|

        ಧನಂಜಯೋ ನಾಮ ಪತಿರ್ಮಮೈಷಃ||

ಮೃದು, ಉದಾರಿ, ಧೃತಿವಂತ, ಯಶಸ್ವಿ, ಜಿತೇಂದ್ರಿಯ, ವೃದ್ಧಸೇವಿ, ನರವೀರ, ಯುಧಿಷ್ಠಿರನ ತಮ್ಮನ್ನೂ ಶಿಷ್ಯನೂ ಆದ ಧನಂಜಯನೆಂಬ ಇವನು ನನ್ನ ಪತಿ.

03254013a ಯೋ ವೈ ನ ಕಾಮಾನ್ನ ಭಯಾನ್ನ ಲೋಭಾತ್|

        ತ್ಯಜೇದ್ಧರ್ಮಂ ನ ನೃಶಂಸಂ ಚ ಕುರ್ಯಾತ್|

03254013c ಸ ಏಷ ವೈಶ್ವಾನರತುಲ್ಯತೇಜಾಃ|

        ಕುಂತೀಸುತಃ ಶತ್ರುಸಹಃ ಪ್ರಮಾಥೀ||

ಕಾಮವಾಗಲೀ, ಭಯವಾಗಲೀ, ಲೋಭವಾಗಲೀ ಇವನನ್ನು ಧರ್ಮವನ್ನು ತ್ಯಜಿಸುವವನನ್ನಾಗಲೀ, ಕ್ರೂರಕರ್ಮಗಳನ್ನು ಮಾಡುವವನನ್ನಾಗಲೀ ಮಾಡಲಾರವು. ತೇಜಸ್ಸಿನಲ್ಲಿ ವೈಶ್ವಾನರನ ಸಮಾನನಾದ ಈ ಕುಂತೀಸುತನು ಶತ್ರುಗಳನ್ನು ಚೆನ್ನಾಗಿ ಕಡೆಯುತ್ತಾನೆ.

03254014a ಯಃ ಸರ್ವಧರ್ಮಾರ್ಥವಿನಿಶ್ಚಯಜ್ಞೋ|

        ಭಯಾರ್ತಾನಾಂ ಭಯಹರ್ತಾ ಮನೀಷೀ|

03254014c ಯಸ್ಯೋತ್ತಮಂ ರೂಪಮಾಹುಃ ಪೃಥಿವ್ಯಾಂ|

        ಯಂ ಪಾಂಡವಾಃ ಪರಿರಕ್ಷಂತಿ ಸರ್ವೇ||

03254015a ಪ್ರಾಣೈರ್ಗರೀಯಾಂಸಮನುವ್ರತಂ ವೈ|

        ಸ ಏಷ ವೀರೋ ನಕುಲಃ ಪತಿರ್ಮೇ|

ಸರ್ವಧರ್ಮಾರ್ಥವಿನಿಶ್ಚಯಗಳನ್ನು ತಿಳಿದಿರುವ, ಭಯಾರ್ತರ ಭಯವನ್ನು ಅಪಹರಿಸುವ ಮನೀಷೀ, ಭೂಮಿಯಲ್ಲಿ ಉತ್ತಮರೂಪಿಯೆಂದು ಕರೆಯಲ್ಪಡುವ, ಎಲ್ಲ ಪಾಂಡವರಿಂದಲೂ ಪರಿರಕ್ಷಿತನಾದ, ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿರುವ, ಹಾಗೆಯೇ ನಡೆದುಕೊಳ್ಳುವ, ಆ ವೀರನೇ ನನ್ನ ಪತಿ ನಕುಲ.

03254015c ಯಃ ಖಡ್ಗಯೋಧೀ ಲಘುಚಿತ್ರಹಸ್ತೋ|

        ಮಹಾಂಶ್ಚ ಧೀಮಾನ್ಸಹದೇವೋಽದ್ವಿತೀಯಃ||

ಲಘುವಾದ ಚಳಕದ ಕೈಯುಳ್ಳ ಖಡ್ಗಯೋಧೀ ಮಹಾಧೀಮಂತ, ಅದ್ವಿತೀಯನು ಸಹದೇವನು.

03254016a ಯಸ್ಯಾದ್ಯ ಕರ್ಮ ದ್ರಕ್ಷ್ಯಸೇ ಮೂಢಸತ್ತ್ವ|

        ಶತಕ್ರತೋರ್ವಾ ದೈತ್ಯಸೇನಾಸು ಸಂಖ್ಯೇ|

03254016c ಶೂರಃ ಕೃತಾಸ್ತ್ರೋ ಮತಿಮಾನ್ಮನೀಷೀ|

        ಪ್ರಿಯಂಕರೋ ಧರ್ಮಸುತಸ್ಯ ರಾಜ್ಞಃ||

ಮೂಢ! ಯುದ್ಧದಲ್ಲಿ ದೈತ್ಯಸೇನೆಯೊಡನೆ ಹೋರಾಡುವ ಶತಕ್ರತುವಿನಂತಿರುವ ಅವನ ಕೈಚಳಕವನ್ನು ಇಂದು ನೀನು ನೋಡುವೆ. ಈ ಶೂರ, ಕೃತಾಸ್ತ್ರ, ಮತಿವಂತ ಮನೀಷಿಯು ರಾಜ ಧರ್ಮಸುತನ ಪ್ರಿಯಂಕರ.

03254017a ಯ ಏಷ ಚಂದ್ರಾರ್ಕಸಮಾನತೇಜಾ|

        ಜಘನ್ಯಜಃ ಪಾಂಡವಾನಾಂ ಪ್ರಿಯಶ್ಚ|

03254017c ಬುದ್ಧ್ಯಾ ಸಮೋ ಯಸ್ಯ ನರೋ ನ ವಿದ್ಯತೇ|

        ವಕ್ತಾ ತಥಾ ಸತ್ಸು ವಿನಿಶ್ಚಯಜ್ಞಃ||

ಇವನು ತೇಜಸ್ಸಿನಲ್ಲಿ ಸೂರ್ಯಚಂದ್ರರ ಸಮಾನನು. ಪಾಂಡವರ ಅತಿಕಿರಿಯ ಮತ್ತು ಪ್ರಿಯನಾದವನು. ಬುದ್ಧಿಯಲ್ಲಿ ಇವನ ಸಮನಾದ ನರನು ಗೊತ್ತಿಲ್ಲ. ಸತ್ಸಂಗದಲ್ಲಿ ವಿನಿಶ್ಚಯಗಳನ್ನು ತಿಳಿದವನಂತೆ ಮಾತನಾಡುತ್ತಾನೆ.

03254018a ಸ ಏಷ ಶೂರೋ ನಿತ್ಯಮಮರ್ಷಣಶ್ಚ|

        ಧೀಮಾನ್ಪ್ರಾಜ್ಞಃ ಸಹದೇವಃ ಪತಿರ್ಮೇ|

03254018c ತ್ಯಜೇತ್ಪ್ರಾಣಾನ್ಪ್ರವಿಶೇದ್ಧವ್ಯವಾಹಂ|

        ನ ತ್ವೇವೈಷ ವ್ಯಾಹರೇದ್ಧರ್ಮಬಾಃಯಂ||

03254018e ಸದಾ ಮನಸ್ವೀ ಕ್ಷತ್ರಧರ್ಮೇ ನಿವಿಷ್ಟಃ|

        ಕುಂತ್ಯಾಃ ಪ್ರಾಣೈರಿಷ್ಟತಮೋ ನೃವೀರಃ||

ಈ ಶೂರನು ನಿತ್ಯವೂ ಅಮರ್ಷಣ. ನನ್ನ ಪತಿ ಸಹದೇವನು ಧೀಮಂತ ಮತ್ತು ಪ್ರಾಜ್ಞ. ಅವನು ತನ್ನ ಪ್ರಾಣವನ್ನು ಅಗ್ನಿಯನ್ನು ಪ್ರವೇಶಿಸಿಯಾದರೂ ತ್ಯಜಿಸಿಯಾನು, ಆದರೆ ಧರ್ಮಕ್ಕೆ ಹೊರತಾಗಿ ನಡೆದುಕೊಳ್ಳುವುದಿಲ್ಲ. ಸದಾ ಕ್ಷತ್ರಧರ್ಮದಲ್ಲಿ ಮನಸ್ಸಿಟ್ಟು ನಡೆದುಕೊಳ್ಳುವ ಈ ನರವೀರನನ್ನು ಕುಂತಿಯು ತನ್ನ ಪ್ರಾಣಕ್ಕಿಂತಲೂ ಅಧಿಕವಾಗಿ ಕಾಣುತ್ತಾಳೆ.

03254019a ವಿಶೀರ್ಯಂತೀಂ ನಾವಮಿವಾರ್ಣವಾಂತೇ|

        ರತ್ನಾಭಿಪೂರ್ಣಾಂ ಮಕರಸ್ಯ ಪೃಷ್ಠೇ|

03254019c ಸೇನಾಂ ತವೇಮಾಂ ಹತಸರ್ವಯೋಧಾಂ|

        ವಿಕ್ಷೋಭಿತಾಂ ದ್ರಕ್ಷ್ಯಸಿ ಪಾಂಡುಪುತ್ರೈಃ||

ಸಾಗರದ ಕೊನೆಯಲ್ಲಿ ಮಕರದ ಬೆನ್ನಿಗೆ ಸಿಲುಕಿ ಒಡೆದುಹೋಗುವ ರತ್ನಗಳಿಂದ ತುಂಬಿದ ನಾವೆಯಂತೆ ನಿನ್ನ ಈ ಸೇನೆಯ ಎಲ್ಲ ಯೋಧರೂ ಪಾಂಡುಪುತ್ರರಿಂದ ಹತರಾಗಿ ನಾಶವಾಗುವುದನ್ನು ನೀನು ನೋಡುವೆ!

03254020a ಇತ್ಯೇತೇ ವೈ ಕಥಿತಾಃ ಪಾಂಡುಪುತ್ರಾ|

        ಯಾಂಸ್ತ್ವಂ ಮೋಹಾದವಮನ್ಯ ಪ್ರವೃತ್ತಃ|

03254020c ಯದ್ಯೇತೈಸ್ತ್ವಂ ಮುಚ್ಯಸೇಽರಿಷ್ಟದೇಹಃ|

        ಪುನರ್ಜನ್ಮ ಪ್ರಾಪ್ಸ್ಯಸೇ ಜೀವ ಏವ||

ಹೀಗೆ ನಾನು ನಿನಗೆ, ಯಾರನ್ನು ನೀನು ಮೋಹದಿಂದ ಅಪಮಾನಿಸಲು ತೊಡಗಿದ್ದೀಯೋ ಆ ಪಾಂಡುಪುತ್ರರ ಕುರಿತು ಹೇಳಿದ್ದಾಯಿತು. ಏನೂ ತಾಗದೇ ನಿನ್ನ ದೇಹವನ್ನು ಇವರಿಂದ ಉಳಿಸಿಕೊಂಡಿದ್ದೇ ಆದರೆ ನೀನು ಬದುಕಿದ್ದೂ ಪುನಃಜೀವವನ್ನು ಪಡೆದಂತೆ!””

03254021 ವೈಶಂಪಾಯನ ಉವಾಚ|

03254021a ತತಃ ಪಾರ್ಥಾಃ ಪಂಚ ಪಂಚೇಂದ್ರಕಲ್ಪಾಸ್|

        ತ್ಯಕ್ತ್ವಾ ತ್ರಸ್ತಾನ್ಪ್ರಾಂಜಲೀಂಸ್ತಾನ್ಪದಾತೀನ್|

03254021c ರಥಾನೀಕಂ ಶರವರ್ಷಾಂಧಕಾರಂ|

        ಚಕ್ರುಃ ಕ್ರುದ್ಧಾಃ ಸರ್ವತಃ ಸನ್ನಿಗೃಹ್ಯ||

ವೈಶಂಪಾಯನನು ಹೇಳಿದನು: “ಆಗ ಪಂಚ ಇಂದ್ರರಂತೆ ತೋರುತ್ತಿದ್ದ ಪಂಚ ಪಾರ್ಥರು ಕೈಮುಗಿದು ನಡುಗುತ್ತಿದ್ದ ಪದಾತಿಗಳನ್ನು ಬಿಟ್ಟು ಕೃದ್ಧರಾಗಿ ರಥಾನೀಕರ ಮೇಲೆ ಶರಗಳ ಮಳೆಯನ್ನು ಸುರಿಸಿ ಎಲ್ಲೆಡೆಯೂ ಅಂಧಕಾರವಾಗುವಂತೆ ಮಾಡಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ದ್ರೌಪದೀವಾಕ್ಯೇ ಚತುಷ್ಪಂಚಾಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ದ್ರೌಪದೀವಾಕ್ಯದಲ್ಲಿ ಇನ್ನೂರಾಐವತ್ನಾಲ್ಕನೆಯ ಅಧ್ಯಾಯವು.

Related image

Comments are closed.