Aranyaka Parva: Chapter 271

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೧

ಕುಂಭಕರ್ಣನ ವಧೆ

ಲಕ್ಷ್ಮಣನು ಬ್ರಹ್ಮಾಸ್ತ್ರದಿಂದ ಕುಂಭಕರ್ಣನನ್ನು ವಧಿಸಿದುದು (೧-೧೮). ದೂಷಣನ ತಮ್ಮಂದಿರಾದ ವಜ್ರವೇಗ-ಪಮಥಿಯರನ್ನು ಹನುಮಂತ-ನಳರು ವಧಿಸಿದುದು (೧೯-೨೭).

03271001 ಮಾರ್ಕಂಡೇಯ ಉವಾಚ|

03271001a ತತೋ ವಿನಿರ್ಯಾಯ ಪುರಾತ್ಕುಂಭಕರ್ಣಃ ಸಹಾನುಗಃ|

03271001c ಅಪಶ್ಯತ್ಕಪಿಸೈನ್ಯಂ ತಜ್ಜಿತಕಾಶ್ಯಗ್ರತಃ ಸ್ಥಿತಂ||

ಮಾರ್ಕಂಡೇಯನು ಹೇಳಿದನು: “ಆಗ ಅನುಯಾಯಿಗಳೊಂದಿಗೆ ಪುರದಿಂದ ಹೊರಟ ಕುಂಭಕರ್ಣನು ವಿಜಯದಿಂದ ಸೊಕ್ಕು ನಿಂತಿದ್ದ ಕಪಿಸೇನೆಯನ್ನು ಕಂಡನು.

03271002a ತಮಭ್ಯೇತ್ಯಾಶು ಹರಯಃ ಪರಿವಾರ್ಯ ಸಮಂತತಃ|

03271002c ಅಭ್ಯಘ್ನಂಶ್ಚ ಮಹಾಕಾಯೈರ್ಬಹುಭಿರ್ಜಗತೀರುಹೈಃ||

03271002e ಕರಜೈರತುದಂಶ್ಚಾನ್ಯೇ ವಿಹಾಯ ಭಯಮುತ್ತಮಂ||

ಕಪಿಗಳು ಅವನೆಡೆಗೆ ಓಡಿ ಬಂದು, ಎಲ್ಲಕಡೆಯಿಂದಲೂ ಸುತ್ತುವರೆದು, ಆ ಮಹಾಕಾಯನನ್ನು ಹಲವಾರು ದೊಡ್ಡ ಮರಗಳಿಂದ ಹೊಡೆದರು ಮತ್ತು ಉತ್ತಮ ಭಯವನ್ನು ತೊರೆದು  ಕೈಬೆರಳಿನ ಉಗುರುಗಳಿಂದ ಕೆರೆದು ಗಾಯಗೊಳಿಸಿದರು.

03271003a ಬಹುಧಾ ಯುಧ್ಯಮಾನಾಸ್ತೇ ಯುದ್ಧಮಾರ್ಗೈಃ ಪ್ಲವಂಗಮಾಃ|

03271003c ನಾನಾಪ್ರಹರಣೈರ್ಭೀಮಂ ರಾಕ್ಷಸೇಂದ್ರಮತಾಡಯನ್||

ಯುದ್ಧಮಾರ್ಗದಲ್ಲಿ ಬಹುರೀತಿಯಲ್ಲಿ ಯುದ್ಧಮಾಡುತ್ತಿದ್ದ ವಾನರರು ಆ ಭಯಂಕರ ರಾಕ್ಷಸನನ್ನು ನಾನಾ ಆಯುಧಗಳಿಂದ ಹೊಡೆದರು.

03271004a ಸ ತಾಡ್ಯಮಾನಃ ಪ್ರಹಸನ್ಭಕ್ಷಯಾಮಾಸ ವಾನರಾನ್|

03271004c ಪನಸಂ ಚ ಗವಾಕ್ಷಂ ಚ ವಜ್ರಬಾಹುಂ ಚ ವಾನರಂ||

ಹೀಗೆ ಹೊಡೆಯುತ್ತಿರಲು ಅವನು ಜೋರಾಗಿ ನಗುತ್ತಾ ಪನಸ, ಗವಾಕ್ಷ, ವಜ್ರಬಾಹುವೇ ಮೊದಲಾದ ವಾನರರನ್ನು ಭಕ್ಷಿಸತೊಡಗಿದನು.

03271005a ತದ್ದೃಷ್ಟ್ವಾ ವ್ಯಥನಂ ಕರ್ಮ ಕುಂಭಕರ್ಣಸ್ಯ ರಕ್ಷಸಃ|

03271005c ಉದಕ್ರೋಶನ್ಪರಿತ್ರಸ್ತಾಸ್ತಾರಪ್ರಭೃತಯಸ್ತದಾ||

ರಾಕ್ಷಸ ಕುಂಭಕರ್ಣನ ಆ ದುಃಖಕರ ಕೃತ್ಯವನ್ನು ನೋಡಿ ತಾರನೇ ಮೊದಲಾದವರು ಕಷ್ಟದಲ್ಲಿ ಕಿರುಚಿಕೊಂಡರು.

03271006a ತಂ ತಾರಮುಚ್ಚೈಃ ಕ್ರೋಶಂತಮನ್ಯಾಂಶ್ಚ ಹರಿಯೂಥಪಾನ್|

03271006c ಅಭಿದುದ್ರಾವ ಸುಗ್ರೀವಃ ಕುಂಭಕರ್ಣಮಪೇತಭೀಃ||

ಜೋರಾಗಿ ಕಿರುಚಿಕೊಳ್ಳುತ್ತಿರುವ ತಾರ ಮತ್ತು ಇತರ ಕಪಿಗುಂಪುಗಳ ಬಳಿ ಕುಂಭಕರ್ಣನ ಎದುರಿಗೆ ಸುಗ್ರೀವನು ಭಯವಿಲ್ಲದೇ ಓಡಿ ಬಂದನು.

03271007a ತತೋಽಭಿಪತ್ಯ ವೇಗೇನ ಕುಂಭಕರ್ಣಂ ಮಹಾಮನಾಃ|

03271007c ಶಾಲೇನ ಜಘ್ನಿವಾನ್ಮೂರ್ಧ್ನಿ ಬಲೇನ ಕಪಿಕುಂಜರಃ||

ಆ ಮಹಾಮನಸ್ವಿ ಕಪಿಕುಂಜರನು ವೇಗದಿಂದ ಶಾಲವೃಕ್ಷವನ್ನು ಕುಂಭಕರ್ಣನ ತಲೆಗೆ ಬಲವತ್ತಾಗಿ ಬಡಿದನು.

03271008a ಸ ಮಹಾತ್ಮಾ ಮಹಾವೇಗಃ ಕುಂಭಕರ್ಣಸ್ಯ ಮೂರ್ಧನಿ|

03271008c ಬಿಭೇದ ಶಾಲಂ ಸುಗ್ರೀವೋ ನ ಚೈವಾವ್ಯಥಯತ್ಕಪಿಃ||

ಆ ಮಹಾತ್ಮ ಮಹಾವೇಗ ಸುಗ್ರೀವನು ಕುಂಭಕರ್ಣನ ನೆತ್ತಿಯಮೇಲೆ ಹೊಡೆದ ಶಾಲವೃಕ್ಷವು ಪುಡಿಪುಡಿಯಾಯಿತೇ ವಿನಃ ಅವನನ್ನು ಹಂದಾಡಿಸಲೂ ಆಗಲಿಲ್ಲ.

03271009a ತತೋ ವಿನದ್ಯ ಪ್ರಹಸಂ ಶಾಲಸ್ಪರ್ಶವಿಬೋಧಿತಃ|

03271009c ದೋರ್ಭ್ಯಾಮಾದಾಯ ಸುಗ್ರೀವಂ ಕುಂಭಕರ್ಣೋಽಹರದ್ಬಲಾತ್||

ಶಾಲವು ತಾಗಿದುದರಿಂದ ಸಂಪೂರ್ಣವಾಗಿ ಎಚ್ಚೆತ್ತ ಕುಂಭಕರ್ಣನು ಸುಗ್ರೀವನ ತೋಳುಗಳನ್ನು ಬಿಡಿದು ಬಲವಾಗಿ ಎಳೆದನು.

03271010a ಹ್ರಿಯಮಾಣಂ ತು ಸುಗ್ರೀವಂ ಕುಂಭಕರ್ಣೇನ ರಕ್ಷಸಾ|

03271010c ಅವೇಕ್ಷ್ಯಾಭ್ಯದ್ರವದ್ವೀರಃ ಸೌಮಿತ್ರಿರ್ಮಿತ್ರನಂದನಃ||

ರಾಕ್ಷಸ ಕುಂಭಕರ್ಣನಿಂದ ಎತ್ತಿಕೊಂಡು ಹೋಗಲ್ಪಟ್ಟ ಸುಗ್ರೀವನನ್ನು ನೋಡಿ ಮಿತ್ರನಂದನ, ವೀರ ಸೌಮಿತ್ರಿಯು ಅವನಲ್ಲಿಗೆ ಧಾವಿಸಿ ಬಂದನು.

03271011a ಸೋಽಭಿಪತ್ಯ ಮಹಾವೇಗಂ ರುಕ್ಮಪುಂಖಂ ಮಹಾಶರಂ|

03271011c ಪ್ರಾಹಿಣೋತ್ಕುಂಭಕರ್ಣಾಯ ಲಕ್ಷ್ಮಣಃ ಪರವೀರಹಾ||

ಪರವೀರಹ ಲಕ್ಷ್ಮಣನು ಉದ್ದವಾದ ಮಹಾವೇಗದ ಬಂಗಾರದ ರೆಕ್ಕೆಗಳನ್ನುಳ್ಳ ಮಹಾಶರವನ್ನು ಕುಂಭಕರ್ಣನ ಮೇಲೆ ಪ್ರಯೋಗಿಸಿದನು.

03271012a ಸ ತಸ್ಯ ದೇಹಾವರಣಂ ಭಿತ್ತ್ವಾ ದೇಹಂ ಚ ಸಾಯಕಃ|

03271012c ಜಗಾಮ ದಾರಯನ್ಭೂಮಿಂ ರುಧಿರೇಣ ಸಮುಕ್ಷಿತಃ||

ಅದು ಅವನ ದೇಹಾವರಣವನ್ನು ಬಿರಿದು, ದೇಹವನ್ನು ಹೊಕ್ಕು, ರಕ್ತದಿಂದ ತೋಯ್ದು ಹಿಂದಿನಿಂದ ಬಂದು ನೆಲವನ್ನು ಹೊಕ್ಕಿತು.

03271013a ತಥಾ ಸ ಭಿನ್ನಹೃದಯಃ ಸಮುತ್ಸೃಜ್ಯ ಕಪೀಶ್ವರಂ|

03271013c ಕುಂಭಕರ್ಣೋ ಮಹೇಷ್ವಾಸಃ ಪ್ರಗೃಹೀತಶಿಲಾಯುಧಃ|

03271013e ಅಭಿದುದ್ರಾವ ಸೌಮಿತ್ರಿಮುದ್ಯಮ್ಯ ಮಹತೀಂ ಶಿಲಾಂ||

ಅವನ ಹೃದಯವು ಸೀಳಿಹೋಗಲು ಮಹೇಷ್ವಾಸ ಕುಂಭಕರ್ಣನು ಕಪೀಶ್ವರನನ್ನು ಬಿಸುಟು, ಶಿಲಾಯುಧವನ್ನು ಹಿಡಿದು ಆ ಮಹಾಶಿಲವನ್ನು ಎತ್ತಿ ಸೌಮಿತ್ರಿಯ ಮೇಲೆ ಎರಗಿದನು.

03271014a ತಸ್ಯಾಭಿದ್ರವತಸ್ತೂರ್ಣಂ ಕ್ಷುರಾಭ್ಯಾಮುಚ್ಚ್ರಿತೌ ಕರೌ|

03271014c ಚಿಚ್ಚೇದ ನಿಶಿತಾಗ್ರಾಭ್ಯಾಂ ಸ ಬಭೂವ ಚತುರ್ಭುಜಃ||

ತನ್ನ ಕಡೆ ಧಾವಿಸಿ ಬರುತ್ತಿದ್ದ ಅವನ ಎತ್ತಿದ ತೋಳುಗಳನ್ನು ಎರಡು ಕೋಡುಗಳಿರುವ ಹರಿತ ಬಾಣಗಳಿಂದ ಕತ್ತರಿಸಿದನು. ಆಗ ಅವನು ಚತುರ್ಭುಜನಾದನು.

03271015a ತಾನಪ್ಯಸ್ಯ ಭುಜಾನ್ಸರ್ವಾನ್ಪ್ರಗೃಹೀತಶಿಲಾಯುಧಾನ್|

03271015c ಕ್ಷುರೈಶ್ಚಿಚ್ಚೇದ ಲಘ್ವಸ್ತ್ರಂ ಸೌಮಿತ್ರಿಃ ಪ್ರತಿದರ್ಶಯನ್||

ಆಗ ಶಿಲಾಯುಧಗಳನ್ನು ಹಿಡಿದಿರುವ ಎಲ್ಲ ಭುಜಗಳನ್ನೂ ಹರಿತ ಬಾಣಗಳಿಂದ ಕತ್ತರಿಸಿ ಸೌಮಿತ್ರಿಯು ತನ್ನ ಅಸ್ತ್ರ ಲಘುತ್ವವನ್ನು ಪ್ರದರ್ಶಿಸಿದನು.

03271016a ಸ ಬಭೂವಾತಿಕಾಯಶ್ಚ ಬಹುಪಾದಶಿರೋಭುಜಃ|

03271016c ತಂ ಬ್ರಹ್ಮಾಸ್ತ್ರೇಣ ಸೌಮಿತ್ರಿರ್ದದಾಹಾದ್ರಿಚಯೋಪಮಂ||

ಆಗ ಅವನು ಬಹುಪಾದಶಿರೋಭುಜಗಳ ಅತಿಕಾಯನಾಗಿ ಬೆಳೆಯಲು, ಪರ್ವತಗಳ ರಾಶಿಯಂತಿದ್ದ ಅವನನ್ನು ಸೌಮಿತ್ರಿಯು ಬ್ರಹ್ಮಾಸ್ತ್ರದಿಂದ ಸುಟ್ಟುಹಾಕಿದನು.

03271017a ಸ ಪಪಾತ ಮಹಾವೀರ್ಯೋ ದಿವ್ಯಾಸ್ತ್ರಾಭಿಹತೋ ರಣೇ|

03271017c ಮಹಾಶನಿವಿನಿರ್ದಗ್ಧಃ ಪಾದಪೋಽಂಕುರವಾನಿವ||

ದಿವ್ಯಾಸ್ತ್ರದಿಂದ ಹೊಡೆಯಲ್ಪಟ್ಟ ಆ ಮಹಾವೀರನು ರಣದಲ್ಲಿ ಚಿಗುರಿದ ಮರವು ಮಹಾಮಿಂಚಿನ ಹೊಡೆತಕ್ಕೆ ಸಿಕ್ಕಿ ಸುಟ್ಟು ಬೀಳುವಂತೆ ಬಿದ್ದನು.

03271018a ತಂ ದೃಷ್ಟ್ವಾ ವೃತ್ರಸಂಕಾಶಂ ಕುಂಭಕರ್ಣಂ ತರಸ್ವಿನಂ|

03271018c ಗತಾಸುಂ ಪತಿತಂ ಭೂಮೌ ರಾಕ್ಷಸಾಃ ಪ್ರಾದ್ರವನ್ಭಯಾತ್||

ಆ ವೃತ್ರಸಂಕಾಶ ತರಸ್ವಿ ಕುಂಭಕರ್ಣನು ನೆಲದ ಮೇಲೆ ಬಿದ್ದು ಅಸುನೀಗಿದುದನ್ನು ಕಂಡು ರಾಕ್ಷಸರು ಹೆದರಿ ಓಡಿ ಹೋದರು.

03271019a ತಥಾ ತಾನ್ದ್ರವತೋ ಯೋಧಾನ್ದೃಷ್ಟ್ವಾ ತೌ ದೂಷಣಾನುಜೌ|

03271019c ಅವಸ್ಥಾಪ್ಯಾಥ ಸೌಮಿತ್ರಿಂ ಸಂಕ್ರುದ್ಧಾವಭ್ಯಧಾವತಾಂ||

ಹಾಗೆ ಓಡಿ ಹೋಗುತ್ತಿರುವ ಯೋಧರನ್ನು ನೋಡಿ ದೂಷಣನ ತಮ್ಮಂದಿರೀರ್ವರು ಸಂಕೃದ್ಧರಾಗಿ ಓಡಿಬಂದು ಸೌಮಿತ್ರಿಯನ್ನು ಎದುರಿಸಿದರು.

03271020a ತಾವಾದ್ರವಂತೌ ಸಂಕ್ರುದ್ಧೌ ವಜ್ರವೇಗಪ್ರಮಾಥಿನೌ|

03271020c ಪ್ರತಿಜಗ್ರಾಹ ಸೌಮಿತ್ರಿರ್ವಿನದ್ಯೋಭೌ ಪತತ್ರಿಭಿಃ||

ಸೌಮಿತ್ರಿಯು ಸಂಕೃದ್ಧರಾಗಿದ್ದ ವಜ್ರವೇಗ ಮತ್ತು ಪ್ರಮಥಿಯರೀರ್ವರನ್ನೂ ರೆಕ್ಕೆಗಳುಳ್ಳ ಬಾಣಗಳಿಂದ ಬರಮಾಡಿಕೊಂಡನು.

03271021a ತತಃ ಸುತುಮುಲಂ ಯುದ್ಧಮಭವಲ್ಲೋಮಹರ್ಷಣ|

03271021c ದೂಷಣಾನುಜಯೋಃ ಪಾರ್ಥ ಲಕ್ಷ್ಮಣಸ್ಯ ಚ ಧೀಮತಃ||

ಪಾರ್ಥ! ಆಗ ದೂಷಣನ ತಮ್ಮಂದಿರ ಮತ್ತು ದೀಮತ ಲಕ್ಷ್ಮಣನ ನಡುವೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

03271022a ಮಹತಾ ಶರವರ್ಷೇಣ ರಾಕ್ಷಸೌ ಸೋಽಭ್ಯವರ್ಷತ|

03271022c ತೌ ಚಾಪಿ ವೀರೌ ಸಂಕ್ರುದ್ಧಾವುಭೌ ತೌ ಸಮವರ್ಷತಾಂ||

ಅವನು ರಾಕ್ಷಸರ ಮೇಲೆ ಮಹಾಶರಗಳ ಮಳೆಯನ್ನು ಸುರಿಸಿದನು. ಸಂಕೃದ್ದರಾದ ಆ ವೀರರಿಬ್ಬರೂ ಕೂಡ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು.

03271023a ಮುಹೂರ್ತಮೇವಮಭವದ್ವಜ್ರವೇಗಪ್ರಮಾಥಿನೋಃ|

03271023c ಸೌಮಿತ್ರೇಶ್ಚ ಮಹಾಬಾಹೋಃ ಸಂಪ್ರಹಾರಃ ಸುದಾರುಣಃ||

ವಜ್ರವೇಗ-ಪ್ರಮಥಿಯರ ಮತ್ತು ಸಂಪ್ರಹಾರ ಮಹಾಬಾಹು ಸೌಮಿತ್ರಿಯ ನಡುವಿನ ಈ ದಾರುಣ ಯುದ್ಧವು ಸ್ವಲ್ಪ ಕಾಲ ನಡೆಯಿತು.

03271024a ಅಥಾದ್ರಿಶೃಂಗಮಾದಾಯ ಹನೂಮಾನ್ಮಾರುತಾತ್ಮಜಃ|

03271024c ಅಭಿದ್ರುತ್ಯಾದದೇ ಪ್ರಾಣಾನ್ವಜ್ರವೇಗಸ್ಯ ರಕ್ಷಸಃ||

ಆಗ ಮಾರುತಾತ್ಮಜ ಹನೂಮಂತನು ಗಿರಿಯ ಶಿಖರವನ್ನು ಹಿಡಿದು, ಅಕ್ರಮಣ ಮಾಡಿ ರಾಕ್ಷಸ ವಜ್ರವೇಗನ ಪ್ರಾಣವನ್ನು ತೆಗೆದುಕೊಂಡನು.

03271025a ನೀಲಶ್ಚ ಮಹತಾ ಗ್ರಾವ್ಣಾ ದೂಷಣಾವರಜಂ ಹರಿಃ|

03271025c ಪ್ರಮಾಥಿನಮಭಿದ್ರುತ್ಯ ಪ್ರಮಮಾಥ ಮಹಾಬಲಃ||

ಮಹಾಬಲಿ ಕಪಿ ನೀಲನು ದೊಡ್ಡ ಬಂಡೆಯೊಂದಿಗೆ ದೂಷಣನ ತಮ್ಮ ಪ್ರಮಾಥಿಯನ್ನು ಆಕ್ರಮಣ ಮಾಡಿ ಜಜ್ಜಿದನು.

03271026a ತತಃ ಪ್ರಾವರ್ತತ ಪುನಃ ಸಂಗ್ರಾಮಃ ಕಟುಕೋದಯಃ|

03271026c ರಾಮರಾವಣಸೈನ್ಯಾನಾಮನ್ಯೋನ್ಯಮಭಿಧಾವತಾಂ||

ಆಗ ರಾಮ-ರಾವಣರ ಸೇನೆಗಳ ನಡುವೆ ಅನ್ಯೋನ್ಯರನ್ನು ಕೊಲ್ಲುವ ಕಟುಕ ಸಂಗ್ರಾಮವು ಪುನಃ ಪ್ರಾರಂಭವಾಯಿತು.

03271027a ಶತಶೋ ನೈರೃತಾನ್ವನ್ಯಾ ಜಘ್ನುರ್ವನ್ಯಾಂಶ್ಚ ನೈರೃತಾಃ|

03271027c ನೈರೃತಾಸ್ತತ್ರ ವಧ್ಯಂತೇ ಪ್ರಾಯಶೋ ನ ತು ವಾನರಾಃ||

ಆ ವನವಾಸಿಗಳು ನೂರಾರು ಸಂಖ್ಯೆಗಳಲ್ಲಿ ರಾಕ್ಷಸರನ್ನು ಕೊಂದರು, ರಾಕ್ಷಸರೂ ವನವಾಸಿಗಳನ್ನು ಕೊಂದರು. ಆದರೆ ಅಲ್ಲಿ ಸತ್ತ ರಾಕ್ಷಸರ ಸಂಖ್ಯೆ ವಾನರರಕ್ಕಿಂತಲೂ ಪ್ರಾಯಶಃ ಅಧಿಕವಾಗಿತ್ತು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಕುಂಭಕರ್ಣಾದಿವಧೇ ಏಕಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಕುಂಭಕರ್ಣಾದಿವಧೆಯಲ್ಲಿ ಇನ್ನೂರಾಎಪ್ಪತ್ತೊಂದನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.