Aranyaka Parva: Chapter 272

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೨

ಇಂದ್ರಜಿತು ಕಾಳಗ

ರಾವಣನ ಮಗ ಇಂದ್ರಜಿತುವಿನೊಡನೆ ಲಕ್ಷ್ಮಣ ಮತ್ತು ಅಂಗದರ ಯುದ್ಧ; ಇಂದ್ರಜಿತುವು ಅಂತರ್ಧಾನನಾದುದು (೧-೧೯). ರಾಮ- ಲಕ್ಷ್ಮಣರನ್ನು ಇಂದ್ರಜಿತುವು ಹೊಡೆದು ಕೆಳಗುರುಳಿಸಿದುದು (೨೦-೨೬).

03272001 ಮಾರ್ಕಂಡೇಯ ಉವಾಚ|

03272001a ತತಃ ಶ್ರುತ್ವಾ ಹತಂ ಸಂಖ್ಯೇ ಕುಂಭಕರ್ಣಂ ಸಹಾನುಗಂ|

03272001c ಪ್ರಹಸ್ತಂ ಚ ಮಹೇಷ್ವಾಸಂ ಧೂಮ್ರಾಕ್ಷಂ ಚಾತಿತೇಜಸಂ||

03272002a ಪುತ್ರಮಿಂದ್ರಜಿತಂ ಶೂರಂ ರಾವಣಃ ಪ್ರತ್ಯಭಾಷತ|

03272002c ಜಹಿ ರಾಮಮಮಿತ್ರಘ್ನ ಸುಗ್ರೀವಂ ಚ ಸಲಕ್ಷ್ಮಣಂ||

ಮಾರ್ಕಂಡೇಯನು ಹೇಳಿದನು: “ಆಗ ಅನುಯಾಯಿಗಳಾದ ಮಹೇಷ್ವಾಸ ಪ್ರಹಸ್ತ ಮತ್ತು ಅತಿತೇಜಸ ಧೂಮ್ರಾಕ್ಷರೊಂದಿಗೆ ಕುಂಭಕರ್ಣನು ರಣದಲ್ಲಿ ಹತನಾದುದನ್ನು ಕೇಳಿ ರಾವಣನು ಶೂರ, ಪುತ್ರ ಇಂದ್ರಜಿತುವಿಗೆ ಹೇಳಿದನು: “ಅಮಿತ್ರಘ್ನ! ಸುಗ್ರೀವ-ಸೌಮಿತ್ರಿಯರೊಂದಿಗೆ ರಾಮನನ್ನು ಕೊಲ್ಲು!

03272003a ತ್ವಯಾ ಹಿ ಮಮ ಸತ್ಪುತ್ರ ಯಶೋ ದೀಪ್ತಮುಪಾರ್ಜಿತಂ|

03272003c ಜಿತ್ವಾ ವಜ್ರಧರಂ ಸಂಖ್ಯೇ ಸಹಸ್ರಾಕ್ಷಂ ಶಚೀಪತಿಂ||

ಶಚೀಪತಿ ಸಹಸ್ರಾಕ್ಷ ವಜ್ರಧರನನ್ನು ರಣದಲ್ಲಿ ಗೆದ್ದು ಬೆಳಗುವ ಯಶಸ್ಸನ್ನು ಗಳಿಸಿರುವ ನೀನೇ ನನ್ನ ಸತ್ಪುತ್ರ!

03272004a ಅಂತರ್ಹಿತಃ ಪ್ರಕಾಶೋ ವಾ ದಿವ್ಯೈರ್ದತ್ತವರೈಃ ಶರೈಃ|

03272004c ಜಹಿ ಶತ್ರೂನಮಿತ್ರಘ್ನ ಮಮ ಶಸ್ತ್ರಭೃತಾಂ ವರ||

ಅಮಿತ್ರಘ್ನ! ಶಸ್ತ್ರಭೃತರಲ್ಲಿ ಶ್ರೇಷ್ಠ! ಅದೃಶ್ಯನಾಗಿ ಅಥವಾ ದೃಶ್ಯನಾಗಿ ಪಡೆದಿರುವ ದಿವ್ಯವಾದ ಶ್ರೇಷ್ಠ ಶರಗಳಿಂದ ನನ್ನ ಶತ್ರುಗಳನ್ನು ಕೊಲ್ಲು.

03272005a ರಾಮಲಕ್ಷ್ಮಣಸುಗ್ರೀವಾಃ ಶರಸ್ಪರ್ಶಂ ನ ತೇಽನಘ|

03272005c ಸಮರ್ಥಾಃ ಪ್ರತಿಸಂಸೋಢುಂ ಕುತಸ್ತದನುಯಾಯಿನಃ||

ಅನಘ! ರಾಮ, ಲಕ್ಷ್ಮಣ, ಸುಗ್ರೀವರು ನಿನ್ನ ಬಾಣಗಳ ಸ್ಪರ್ಷವನ್ನು ಸಹಿಸಲು ಅಸಮರ್ಥರು. ಇನ್ನು ಅವರ ಅನುಯಾಯಿಗಳನ್ನು ಬಿಡು!

03272006a ಅಕೃತಾ ಯಾ ಪ್ರಹಸ್ತೇನ ಕುಂಭಕರ್ಣೇನ ಚಾನಘ|

03272006c ಖರಸ್ಯಾಪಚಿತಿಃ ಸಂಖ್ಯೇ ತಾಂ ಗಚ್ಚಸ್ವ ಮಹಾಭುಜ||

ಅನಘ! ಮಹಾಭುಜ! ಪ್ರಹಸ್ತ-ಕುಂಭಕರ್ಣರು ಮಾಡಲಿಕ್ಕಾಗದೇ ಇದ್ದ ಖರನ ಪ್ರತೀಕಾರವನ್ನು ರಣದಲ್ಲಿ ನೀನೇ ಪೂರೈಸಬೇಕು. ಹೋಗು!

03272007a ತ್ವಮದ್ಯ ನಿಶಿತೈರ್ಬಾಣೈರ್ಹತ್ವಾ ಶತ್ರೂನ್ಸಸೈನಿಕಾನ್|

03272007c ಪ್ರತಿನಂದಯ ಮಾಂ ಪುತ್ರ ಪುರಾ ಬದ್ಧ್ವೇವ ವಾಸವಂ||

ಹಿಂದೆ ವಾಸವನನ್ನು ಸೆರೆಹಿಡಿದಂತೆ ಇಂದು ನೀನು ಹರಿತ ಬಾಣಗಳಿಂದ ಸೈನಿಕರೊಂದಿಗೆ ಶತ್ರುಗಳನ್ನು ಕೊಂದು ನನ್ನನ್ನು ಸಂತೋಷಗೊಳಿಸು.”

03272008a ಇತ್ಯುಕ್ತಃ ಸ ತಥೇತ್ಯುಕ್ತ್ವಾ ರಥಮಾಸ್ಥಾಯ ದಂಶಿತಃ|

03272008c ಪ್ರಯಯಾವಿಂದ್ರಜಿದ್ರಾಜಂಸ್ತೂರ್ಣಮಾಯೋಧನಂ ಪ್ರತಿ||

ರಾಜನ್! ಈ ಮಾತುಗಳಿಗೆ ಹಾಗೆಯೇ ಆಗಲೆಂದು ಹೇಳಿ ಇಂದ್ರಜಿತುವು ಸಂಪೂರ್ಣಕವಚಗಳನ್ನು ಧರಿಸಿ, ರಥವನ್ನೇರಿ, ರಣರಂಗದೆಡೆಗೆ ಹೊರಟನು.

03272009a ತತ್ರ ವಿಶ್ರಾವ್ಯ ವಿಸ್ಪಷ್ಟಂ ನಾಮ ರಾಕ್ಷಸಪುಂಗವಃ|

03272009c ಆಹ್ವಯಾಮಾಸ ಸಮರೇ ಲಕ್ಷ್ಮಣಂ ಶುಭಲಕ್ಷಣಂ||

ಅಲ್ಲಿ ಆ ರಾಕ್ಷಸ ಪುಂಗವನು ತನ್ನ ಹೆಸರನ್ನು ಜೋರಾಗಿ ಗರ್ಜಿಸಿ ಸಮರದಲ್ಲಿ ಶುಭಲಕ್ಷಣ ಲಕ್ಷ್ಮಣನನ್ನು ಆಹ್ವಾನಿಸಿದನು.

03272010a ತಂ ಲಕ್ಷ್ಮಣೋಽಪ್ಯಭ್ಯಧಾವತ್ಪ್ರಗೃಹ್ಯ ಸಶರಂ ಧನುಃ|

03272010c ತ್ರಾಸಯಂಸ್ತಲಘೋಷೇಣ ಸಿಂಹಃ ಕ್ಷುದ್ರಮೃಗಂ ಯಥಾ||

ಲಕ್ಷ್ಮಣನು ಶರದೊಂದಿಗೆ ಧನುವನ್ನು ಹಿಡಿದು ಚಪ್ಪಾಳೆಯ ಘೋಷದೊಂದಿಗೆ ಕ್ಷುದ್ರಮೃಗವನ್ನು ಸಿಂಹವು ಬೆದರಿಸುವಂತೆ ಓಡಿಬಂದನು.

03272011a ತಯೋಃ ಸಮಭವದ್ಯುದ್ಧಂ ಸುಮಹಜ್ಜಯಗೃದ್ಧಿನೋಃ|

03272011c ದಿವ್ಯಾಸ್ತ್ರವಿದುಷೋಸ್ತೀವ್ರಮನ್ಯೋನ್ಯಸ್ಪರ್ಧಿನೋಸ್ತದಾ||

ವಿಜಯಾಕಾಂಕ್ಷಿಗಳಾಗಿದ್ದ, ದಿವ್ಯಾಸ್ತ್ರಕೋವಿದರಾಗಿದ್ದ, ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದ ಅವರಿಬ್ಬರ ನಡುವೆ ಮಹಾ ಯುದ್ಧವು ನಡೆಯಿತು.

03272012a ರಾವಣಿಸ್ತು ಯದಾ ನೈನಂ ವಿಶೇಷಯತಿ ಸಾಯಕೈಃ|

03272012c ತತೋ ಗುರುತರಂ ಯತ್ನಮಾತಿಷ್ಠದ್ಬಲಿನಾಂ ವರಃ||

ತನ್ನ ಬಾಣಗಳ ಯುದ್ಧವು ಏನೂ ವಿಶೇಷವಾಗಿಲ್ಲವೆಂದಾಗ ಬಲಿಗಳಲ್ಲಿ ಶ್ರೇಷ್ಠ ರಾವಣಿಯು ಇನ್ನೂ ಗುರುತರ ಪ್ರಯತ್ನವನ್ನು ಮಾಡಿದನು.

03272013a ತತ ಏನಂ ಮಹಾವೇಗೈರರ್ದಯಾಮಾಸ ತೋಮರೈಃ|

03272013c ತಾನಾಗತಾನ್ಸ ಚಿಚ್ಚೇದ ಸೌಮಿತ್ರಿರ್ನಿಶಿತೈಃ ಶರೈಃ|

ಅವನು ಮಹಾವೇಗದ ತೋಮರಗಳಿಂದ ಅವನನ್ನು ಹೊಡೆದನು. ಆದರೆ ಸೌಮಿತ್ರಿಯು ಬರುತ್ತಿರುವವುಗಳನ್ನು ನಿಶಿತ ಶರಗಳಿಂದ ಕತ್ತರಿಸಿದನು.

03272013e ತೇ ನಿಕೃತ್ತಾಃ ಶರೈಸ್ತೀಕ್ಷ್ಣೈರ್ನ್ಯಪತನ್ವಸುಧಾತಲೇ||

03272014a ತಮಂಗದೋ ವಾಲಿಸುತಃ ಶ್ರೀಮಾನುದ್ಯಮ್ಯ ಪಾದಪಂ|

03272014c ಅಭಿದ್ರುತ್ಯ ಮಹಾವೇಗಸ್ತಾಡಯಾಮಾಸ ಮೂರ್ಧನಿ||

ಹರಿತ ಶರಗಳಿಂದ ತುಂಡರಿಸಲ್ಪಟ್ಟು ಅವು ಭೂಮಿಯ ಮೇಲೆ ಬಿದ್ದವು. ಆಗ ವಾಲಿಸುತ ಶ್ರೀಮಾನ್ ಅಂಗದನು ವೃಕ್ಷವನ್ನು ಕಿತ್ತು ಹಿಡಿದು ಓಡಿ ಬಂದು ಮಹಾವೇಗದಲ್ಲಿ ಅವನ ನೆತ್ತಿಯಮೇಲೆ ಹೊಡೆದನು.

03272015a ತಸ್ಯೇಂದ್ರಜಿದಸಂಭ್ರಾಂತಃ ಪ್ರಾಸೇನೋರಸಿ ವೀರ್ಯವಾನ್|

03272015c ಪ್ರಹರ್ತುಮೈಚ್ಚತ್ತಂ ಚಾಸ್ಯ ಪ್ರಾಸಂ ಚಿಚ್ಚೇದ ಲಕ್ಷ್ಮಣಃ||

ಸಂಭ್ರಾಂತನಾಗದೇ ವೀರ್ಯವಂತ ಇಂದ್ರಜಿತುವು ಪ್ರಾಸವೊಂದನ್ನು ಅವನ ಎದೆಗೆ ಎಸೆಯಲು, ಲಕ್ಷ್ಮಣನು ಆ ಪ್ರಾಸವನ್ನೂ ಕೂಡ ತುಂಡರಿಸಿದನು.

03272016a ತಮಭ್ಯಾಶಗತಂ ವೀರಮಂಗದಂ ರಾವಣಾತ್ಮಜಃ|

03272016c ಗದಯಾತಾಡಯತ್ಸವ್ಯೇ ಪಾರ್ಶ್ವೇ ವಾನರಪುಂಗವಂ||

ಸಮೀಪಕ್ಕೆ ಬಂದಿದ್ದ ವೀರ ವಾನರಪುಂಗವ ಅಂಗದನ ಎಡಕ್ಕೆ ರಾವಣಾತ್ಮಜನು ಗದೆಯಿಂದ ಹೊಡೆದನು.

03272017a ತಮಚಿಂತ್ಯ ಪ್ರಹಾರಂ ಸ ಬಲವಾನ್ವಾಲಿನಃ ಸುತಃ|

03272017c ಸಸರ್ಜೇಂದ್ರಜಿತಃ ಕ್ರೋಧಾಚ್ಚಾಲಸ್ಕಂಧಮಮಿತ್ರಜಿತ್||

ಆದರೆ ಬಲವಾನ್ ವಾಲಿಸುತನು ಆ ಪ್ರಹಾರಕ್ಕೆ ಮನಗೊಡಲಿಲ್ಲ. ಆ ಅಮಿತ್ರಜಿತುವು ಕ್ರೋಧದಿಂದ ಶಾಲವೃಕ್ಷದ ಕಾಂಡವನ್ನು ಇಂದ್ರಜಿತುವಿನೆಡೆಗೆ ಎಸೆದನು.

03272018a ಸೋಽಂಗದೇನ ರುಷೋತ್ಸೃಷ್ಟೋ ವಧಾಯೇಂದ್ರಜಿತಸ್ತರುಃ|

03272018c ಜಘಾನೇಂದ್ರಜಿತಃ ಪಾರ್ಥ ರಥಂ ಸಾಶ್ವಂ ಸಸಾರಥಿಂ||

ಪಾರ್ಥ! ಇಂದ್ರಜಿತುವನ್ನು ಕೊಲ್ಲಲು ಕ್ರೋಧದಿಂದ ಅಂಗದನು ಬಿಸುಟ ಆ ವೃಕ್ಷವು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಇಂದ್ರಜಿತುವಿನ ರಥವನ್ನು ಧ್ವಂಸಮಾಡಿತು.

03272019a ತತೋ ಹತಾಶ್ವಾತ್ಪ್ರಸ್ಕಂದ್ಯ ರಥಾತ್ಸ ಹತಸಾರಥಿಃ|

03272019c ತತ್ರೈವಾಂತರ್ದಧೇ ರಾಜನ್ಮಾಯಯಾ ರಾವಣಾತ್ಮಜಃ||

ರಾಜನ್! ಅಶ್ವ-ಸಾರಥಿಗಳು ಹತರಾಗಲು ರಾವಣಾತ್ಮಜನು ಮಾಯೆಯಿಂದ ಆ ರಥದಿಂದ ಅಲ್ಲಿಯೇ ಅಂತರ್ಧಾನನಾದನು.

03272020a ಅಂತರ್ಹಿತಂ ವಿದಿತ್ವಾ ತಂ ಬಹುಮಾಯಂ ಚ ರಾಕ್ಷಸಂ|

03272020c ರಾಮಸ್ತಂ ದೇಶಮಾಗಮ್ಯ ತತ್ಸೈನ್ಯಂ ಪರ್ಯರಕ್ಷತ||

ಆ ಬಹುಮಾಯಿ ರಾಕ್ಷಸನು ಅಂತರ್ಧಾನನಾದುದನ್ನು ತಿಳಿದ ರಾಮನು ಅಲ್ಲಿಗೆ ಬಂದು ಆ ಸೇನೆಯನ್ನು ರಕ್ಷಿಸಿದನು.

03272021a ಸ ರಾಮಮುದ್ದಿಶ್ಯ ಶರೈಸ್ತತೋ ದತ್ತವರೈಸ್ತದಾ|

03272021c ವಿವ್ಯಾಧ ಸರ್ವಗಾತ್ರೇಷು ಲಕ್ಷ್ಮಣಂ ಚ ಮಹಾರಥಂ||

ಆಗ ವರದಿಂದ ಪಡೆದ ಶರಗಳಿಂದ ಅವನು ರಾಮ ಮತ್ತು ಮಹಾರಥಿ ಲಕ್ಷ್ಮಣರ ಅಂಗಾಂಗಗಳಿಗೆ ಗುರಿಯಿಟ್ಟು ಹೊಡೆದನು.

03272022a ತಮದೃಶ್ಯಂ ಶರೈಃ ಶೂರೌ ಮಾಯಯಾಂತರ್ಹಿತಂ ತದಾ|

03272022c ಯೋಧಯಾಮಾಸತುರುಭೌ ರಾವಣಿಂ ರಾಮಲಕ್ಷ್ಮಣೌ||

ಮಾಯೆಯಿಂದ ಅಂತರ್ಧಾನನಾಗಿ ಅದೃಶ್ಯನಾಗಿ ಹೋರಾಡುತ್ತಿರುವ ರಾವಣಿಯನ್ನು ಶೂರರಾದ ರಾಮ-ಲಕ್ಷ್ಮಣರು ಶರಗಳಿಂದ ಹೋರಾಡಿದರು.

03272023a ಸ ರುಷಾ ಸರ್ವಗಾತ್ರೇಷು ತಯೋಃ ಪುರುಷಸಿಂಹಯೋಃ|

03272023c ವ್ಯಸೃಜತ್ಸಾಯಕಾನ್ಭೂಯಃ ಶತಶೋಽಥ ಸಹಸ್ರಶಃ||

ಅವನು ರೋಷದಿಂದ ಆ ಪುರುಷಸಿಂಹರ ಎಲ್ಲ ಅಂಗಾಂಗಗಳ ಮೇಲೂ ನೂರಾರು ಸಹಸ್ರಾರು ಬಾಣಗಳಿಂದ ಹೊಡೆದನು.

03272024a ತಮದೃಶ್ಯಂ ವಿಚಿನ್ವಂತಃ ಸೃಜಂತಮನಿಶಂ ಶರಾನ್|

03272024c ಹರಯೋ ವಿವಿಶುರ್ವ್ಯೋಮ ಪ್ರಗೃಹ್ಯ ಮಹತೀಃ ಶಿಲಾಃ||

ಬಿಡುವಿಲ್ಲದೇ ಬಾಣಗಳನ್ನು ಬಿಡುತ್ತಿದ್ದ ಅದೃಶ್ಯನಾದ ಅವನನ್ನು ಹುಡುಕುತ್ತಾ ಕಪಿಗಳು ಮಹಾಶಿಲೆಗಳನ್ನು ಹಿಡಿದು ಆಕಾಶವನ್ನೇರಿದರು.

03272025a ತಾಂಶ್ಚ ತೌ ಚಾಪ್ಯದೃಶ್ಯಃ ಸ ಶರೈರ್ವಿವ್ಯಾಧ ರಾಕ್ಷಸಃ|

03272025c ಸ ಭೃಶಂ ತಾಡಯನ್ವೀರೋ ರಾವಣಿರ್ಮಾಯಯಾವೃತಃ||

ಆದರೆ ಅದೃಶ್ಯನಾಗಿದ್ದ ಆ ವೀರ ರಾವಣಿ ರಾಕ್ಷಸನು ಮಾಯೆಯಿಂದ ಅವರನ್ನು ಆವರಿಸಿ ಬಾಣಗಳಿಂದ ಹೊಡೆದುರುಳಿಸಿದನು.

03272026a ತೌ ಶರೈರಾಚಿತೌ ವೀರೌ ಭ್ರಾತರೌ ರಾಮಲಕ್ಷ್ಮಣೌ|

03272026c ಪೇತತುರ್ಗಗನಾದ್ಭೂಮಿಂ ಸೂರ್ಯಾಚಂದ್ರಮಸಾವಿವ||

ಆ ಶರಗಳಿಂದ ಮುಚ್ಚಲ್ಪಟ್ಟ ವೀರ ಸಹೋದರ ರಾಮಲಕ್ಷ್ಮಣರು ಸೂರ್ಯ ಚಂದ್ರರಂತೆ ಗಗನದಿಂದ ಭೂಮಿಯ ಮೇಲೆ ಬಿದ್ದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಇಂದ್ರಜಿದ್ಯುದ್ದೇ ದ್ವಿಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಇಂದ್ರಜಿತು ಯುದ್ಧದಲ್ಲಿ ಇನ್ನೂರಾಎಪ್ಪತ್ತೆರಡನೆಯ ಅಧ್ಯಾಯವು.

Image result for indian motifs lilies

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.