Aranyaka Parva: Chapter 274

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೪

ರಾವಣ ವಧೆ

ರಾಮ-ರಾವಣರ ಘೋರ ಯುದ್ಧವು ನಡೆಯುತ್ತಿರುವಾಗ ಇಂದ್ರನು ಕಳುಹಿಸಿದ ರಥವನ್ನು ರಾಮನು ಏರಿದುದು (೧-೧೭). ಬ್ರಹ್ಮಾಸ್ತ್ರವನ್ನುಪಯೋಗಿಸಿ ರಾಮನು ರಾವಣನನ್ನು ವಧಿಸಿದುದು (೧೮-೩೧).

03274001 ಮಾರ್ಕಂಡೇಯ ಉವಾಚ|

03274001a ತತಃ ಕ್ರುದ್ಧೋ ದಶಗ್ರೀವಃ ಪ್ರಿಯೇ ಪುತ್ರೇ ನಿಪಾತಿತೇ|

03274001c ನಿರ್ಯಯೌ ರಥಮಾಸ್ಥಾಯ ಹೇಮರತ್ನವಿಭೂಷಿತಂ||

ಮಾರ್ಕಂಡೇಯನು ಹೇಳಿದನು: “ಪ್ರಿಯ ಪುತ್ರನು ಸಂಹರಿಸಲ್ಪಟ್ಟಾಗ ಕೃದ್ಧನಾದ ದಶಗ್ರೀವನು ಹೇಮರತ್ನ ವಿಭೂಷಿತ ರಥದಲ್ಲಿ  ನಿಂತು ಹೊರಟನು.

03274002a ಸಂವೃತೋ ರಾಕ್ಷಸೈರ್ಘೋರೈರ್ವಿವಿಧಾಯುಧಪಾಣಿಭಿಃ|

03274002c ಅಭಿದುದ್ರಾವ ರಾಮಂ ಸ ಪೋಥಯನ್ ಹರಿಯೂಥಪಾನ್||

ವಿವಿಧ ಆಯುಧಗಳನ್ನು ಹಿಡಿದ ಘೋರ ರಾಕ್ಷಸರಿಂದ ಸಂವೃತನಾಗಿ  ಕಪಿಸೇನೆಯ ಮುಖಂಡರನ್ನು ಪುಡಿಮಾಡುತ್ತಾ ರಾಮನ ಮೇಲೆ ಎರಗಿದನು.

03274003a ತಮಾದ್ರವಂತಂ ಸಂಕ್ರುದ್ಧಂ ಮೈಂದನೀಲನಲಾಂಗದಾಃ|

03274003c ಹನೂಮಾಂ ಜಾಂಬವಾಂಶ್ಚೈವ ಸಸೈನ್ಯಾಃ ಪರ್ಯವಾರಯನ್||

ಸಂಕೃದ್ಧನಾಗಿ ವೇಗವಾಗಿ ಮುಂದುವರೆಯುತ್ತಿದ್ದ ಅವನನ್ನು ಮೈಂದ, ನೀಲ, ಅಂಗದ, ಹನೂಮಾನ್, ಮತ್ತು ಜಾಂಬವನು ತಮ್ಮ ಸೇನೆಗಳೊಂದಿಗೆ ತಡೆದರು.

03274004a ತೇ ದಶಗ್ರೀವಸೈನ್ಯಂ ತದೃಕ್ಷವಾನರಯೂಥಪಾಃ|

03274004c ದ್ರುಮೈರ್ವಿಧ್ವಂಸಯಾಂ ಚಕ್ರುರ್ದಶಗ್ರೀವಸ್ಯ ಪಶ್ಯತಃ||

ಕರಡಿ-ವಾನರರ ಸೇನೆಗಳ ಮುಖಂಡರು ಆ ದಶಗ್ರೀವನ ಸೈನ್ಯವನ್ನು ದಶಗ್ರೀವನು ನೋಡುತ್ತಿದ್ದಂತೆಯೇ ವೃಕ್ಷಗಳಿಂದ ಧ್ವಂಸಮಾಡಿದರು.

03274005a ತತಃ ಸ್ವಸೈನ್ಯಮಾಲೋಕ್ಯ ವಧ್ಯಮಾನಮರಾತಿಭಿಃ|

03274005c ಮಾಯಾವೀ ವ್ಯದಧಾನ್ಮಾಯಾಂ ರಾವಣೋ ರಾಕ್ಷಸೇಶ್ವರಃ||

ಆಗ ತನ್ನ ಸೇನೆಯನ್ನು ಶತ್ರುಗಳು ವಧಿಸುತ್ತಿರುವುದನ್ನು ನೋಡಿ ಮಾಯಾವೀ ರಾಕ್ಷಸೇಶ್ವರ ರಾವಣನು ಮಾಯಾ ಯುದ್ಧವನ್ನು ಪ್ರದರ್ಶಿಸಿದನು.

03274006a ತಸ್ಯ ದೇಹಾದ್ವಿನಿಷ್ಕ್ರಾಂತಾಃ ಶತಶೋಽಥ ಸಹಸ್ರಶಃ|

03274006c ರಾಕ್ಷಸಾಃ ಪ್ರತ್ಯದೃಶ್ಯಂತ ಶರಶಕ್ತ್ಯೃಷ್ಟಿಪಾಣಯಃ||

ಅವನ ದೇಹದಿಂದ ನೂರಾರು ಸಹಸ್ರಾರು ರಾಕ್ಷಸರು ಶರ, ಶಕ್ತಿ ಮತ್ತು ಈಟಿಗಳನ್ನು ಹಿಡಿದು ಹೊರಬರುವುದು ಕಂಡುಬಂದಿತು.

03274007a ತಾನ್ರಾಮೋ ಜಘ್ನಿವಾನ್ಸರ್ವಾನ್ದಿವ್ಯೇನಾಸ್ತ್ರೇಣ ರಾಕ್ಷಸಾನ್|

03274007c ಅಥ ಭೂಯೋಽಪಿ ಮಾಯಾಂ ಸ ವ್ಯದಧಾದ್ರಾಕ್ಷಸಾಧಿಪಃ||

ಆ ರಾಕ್ಷಸರೆಲ್ಲರನ್ನೂ ರಾಮನು ದಿವ್ಯಾಸ್ತ್ರಗಳಿಂದ ಸಾಯಿಸಿದನು. ಆಗ ರಾಕ್ಷಸನು ಮತ್ತೊಮ್ಮೆ ಮಾಯಾಯುದ್ಧವನ್ನು ಮಾಡಿದನು.

03274008a ಕೃತ್ವಾ ರಾಮಸ್ಯ ರೂಪಾಣಿ ಲಕ್ಷ್ಮಣಸ್ಯ ಚ ಭಾರತ|

03274008c ಅಭಿದುದ್ರಾವ ರಾಮಂ ಚ ಲಕ್ಷ್ಮಣಂ ಚ ದಶಾನನಃ||

ಭಾರತ! ರಾಮನ ಮತ್ತು ಲಕ್ಷ್ಮಣನ ರೂಪಗಳನ್ನು ರಚಿಸಿ ದಶಾನನನು ರಾಮ-ಲಕ್ಷ್ಮಣರ ಮೇಲೆ ಎರಗಿದನು.

03274009a ತತಸ್ತೇ ರಾಮಮರ್ಚಂತೋ ಲಕ್ಷ್ಮಣಂ ಚ ಕ್ಷಪಾಚರಾಃ|

03274009c ಅಭಿಪೇತುಸ್ತದಾ ರಾಜನ್ಪ್ರಗೃಹೀತೋಚ್ಚಕಾರ್ಮುಕಾಃ||

ಆಗ ರಾಮ-ಲಕ್ಷ್ಮಣರ ಬಳಿಸಾರಿ ನಿಶಾಚರರು ಎತ್ತರವಾಗಿದ್ದ ಧನುಸ್ಸುಗಳನ್ನು ಹಿಡಿದು ಆಕ್ರಮಣ ಮಾಡಿದರು.

03274010a ತಾಂ ದೃಷ್ಟ್ವಾ ರಾಕ್ಷಸೇಂದ್ರಸ್ಯ ಮಾಯಾಮಿಕ್ಷ್ವಾಕುನಂದನಃ|

03274010c ಉವಾಚ ರಾಮಂ ಸೌಮಿತ್ರಿರಸಂಭ್ರಾಂತೋ ಬೃಹದ್ವಚಃ||

ರಾಕ್ಷಸೇಂದ್ರನ ಆ ಮಾಯೆಯನ್ನು ನೋಡಿ ಇಕ್ಷ್ವಾಕುನಂದನ ಸೌಮಿತ್ರಿಯು ಸಂಭ್ರಾಂತನಾಗದೇ ರಾಮನಿಗೆ ಈ ಮಹಾ ಮಾತನ್ನಾಡಿದನು:

03274011a ಜಹೀಮಾನ್ರಾಕ್ಷಸಾನ್ಪಾಪಾನಾತ್ಮನಃ ಪ್ರತಿರೂಪಕಾನ್|

03274011c ಜಘಾನ ರಾಮಸ್ತಾಂಶ್ಚಾನ್ಯಾನಾತ್ಮನಃ ಪ್ರತಿರೂಪಕಾನ್||

“ನಿನ್ನ ಪ್ರತಿರೂಪರಾದ ಪಾಪಿ ರಾಕ್ಷಸರನ್ನು ಕೊಲ್ಲು!” ಆಗ ರಾಮನು ತನ್ನ ಪ್ರತಿರೂಪರಾದ ರಾಕ್ಷಸರನ್ನು ಕೊಂದನು.

03274012a ತತೋ ಹರ್ಯಶ್ವಯುಕ್ತೇನ ರಥೇನಾದಿತ್ಯವರ್ಚಸಾ|

03274012c ಉಪತಸ್ಥೇ ರಣೇ ರಾಮಂ ಮಾತಲಿಃ ಶಕ್ರಸಾರಥಿಃ||

ಆಗ ಹರ್ಯಶ್ವಗಳನ್ನು ಕಟ್ಟಿದ ಆದಿತ್ಯವರ್ಚಸ ರಥದೊಂದಿಗೆ ಶಕ್ರಸಾರಥಿ ಮಾತಲಿಯು ರಣದಲ್ಲಿರುವ ರಾಮನಲ್ಲಿಗೆ ಆಗಮಿಸಿದನು.

03274013 ಮಾತಲಿರುವಾಚ|

03274013a ಅಯಂ ಹರ್ಯಶ್ವಯುಗ್ಜೈತ್ರೋ ಮಘೋನಃ ಸ್ಯಂದನೋತ್ತಮಃ|

03274013c ಅನೇನ ಶಕ್ರಃ ಕಾಕುತ್ಸ್ಥ ಸಮರೇ ದೈತ್ಯದಾನವಾನ್|

03274013e ಶತಶಃ ಪುರುಷವ್ಯಾಘ್ರ ರಥೋದಾರೇಣ ಜಘ್ನಿವಾನ್||

ಮಾತಲಿಯು ಹೇಳಿದನು: “ಕಾಕುತ್ಸ್ಥ! ಪುರುಷವ್ಯಾಘ್ರ! ಇದು ಹರ್ಯಶ್ವಗಳನ್ನು ಕಟ್ಟಿದ ಜೈತ್ರ ಎನ್ನುವ ಮಘೋನನ ಉತ್ತಮ ರಥ. ಈ ರಥದಲ್ಲಿ ಶಕ್ರನು ಸಮರದಲ್ಲಿ ನೂರಾರು ದೈತ್ಯ ದಾನವರನ್ನು ಸಂಹರಿಸಿದ್ದಾನೆ.

03274014a ತದನೇನ ನರವ್ಯಾಘ್ರ ಮಯಾ ಯತ್ತೇನ ಸಂಯುಗೇ|

03274014c ಸ್ಯಂದನೇನ ಜಹಿ ಕ್ಷಿಪ್ರಂ ರಾವಣಂ ಮಾ ಚಿರಂ ಕೃಥಾಃ||

ನರವ್ಯಾಘ್ರ! ಕ್ಷಿಪ್ರವಾಗಿ ನಾನು ಸಹಾಯಕನಾಗಿರುವ ಈ ರಥವನ್ನೇರಿ ರಾವಣನನ್ನು ಕೊಲ್ಲು. ತಡಮಾಡಬೇಡ!”

03274015a ಇತ್ಯುಕ್ತೋ ರಾಘವಸ್ತಥ್ಯಂ ವಚೋಽಶಂಕತ ಮಾತಲೇಃ|

03274015c ಮಾಯೇಯಂ ರಾಕ್ಷಸಸ್ಯೇತಿ ತಮುವಾಚ ವಿಭೀಷಣಃ||

ಇದನ್ನು ಕೇಳಿದ ರಾಘವನು ಮಾತಲಿಯ ಮiತುಗಳನ್ನು ಸುಳ್ಳೆಂದು ಇದು ರಾಕ್ಷಸನ ಮಾಯೆಯೆಂದು ತಿಳಿಯಲು ವಿಭೀಷಣನು ಅವನಿಗೆ ಹೇಳಿದನು:

03274016a ನೇಯಂ ಮಾಯಾ ನರವ್ಯಾಘ್ರ ರಾವಣಸ್ಯ ದುರಾತ್ಮನಃ|

03274016c ತದಾತಿಷ್ಠ ರಥಂ ಶೀಘ್ರಮಿಮಮೈಂದ್ರಂ ಮಹಾದ್ಯುತೇ||

“ನರವ್ಯಾಘ್ರ! ಇದು ದುರಾತ್ಮ ರಾವಣನ ಮಾಯೆಯಲ್ಲ. ಮಹಾದ್ಯುತೇ! ಶೀಘ್ರವಾಗಿ ಇಂದ್ರನ ಈ ರಥವನ್ನು ಏರು.”

03274017a ತತಃ ಪ್ರಹೃಷ್ಟಃ ಕಾಕುತ್ಸ್ಥಸ್ತಥೇತ್ಯುಕ್ತ್ವಾ ವಿಭೀಷಣಂ|

03274017c ರಥೇನಾಭಿಪಪಾತಾಶು ದಶಗ್ರೀವಂ ರುಷಾನ್ವಿತಃ||

ಆಗ ಕಾಕುತ್ಸ್ಥನು ಸಂತೋಷದಿಂದ ಹಾಗೆಯೇ ಮಾಡುತ್ತೇನೆ ಎಂದು ವಿಭೀಷಣನಿಗೆ ಹೇಳಿ ರೋಷದಿಂದ ರಥದಲ್ಲಿ ದಶಗ್ರೀವನ ಕಡೆ ಬೇಗನೇ ಮುಂದುವರೆದನು.

03274018a ಹಾಹಾಕೃತಾನಿ ಭೂತಾನಿ ರಾವಣೇ ಸಮಭಿದ್ರುತೇ|

03274018c ಸಿಂಹನಾದಾಃ ಸಪಟಹಾ ದಿವಿ ದಿವ್ಯಾಶ್ಚ ನಾನದನ್||

ರಾವಣನಿಂದ ಸದೆಬಡಿಯಲ್ಪಟ್ಟ ಭೂತಗಳು ಹಾಹಾಕಾರ ಮಾಡುತ್ತಿರಲು ದಿವಿಯಲ್ಲಿ ನಗಾರಿಯ ಹೊಡೆತದೊಂದಿಗೆ ಸಿಂಹನಾದಗಳು ಕೇಳಿಬಂದವು.

03274019a ಸ ರಾಮಾಯ ಮಹಾಘೋರಂ ವಿಸಸರ್ಜ ನಿಶಾಚರಃ|

03274019c ಶೂಲಮಿಂದ್ರಾಶನಿಪ್ರಖ್ಯಂ ಬ್ರಹ್ಮದಂಡಮಿವೋದ್ಯತಂ||

ಆ ನಿಶಾಚರನು ರಾಮನ ಮೇಲೆ ಮಹಾಘೋರವಾದ, ಮೇಲೆತ್ತಿ ಹಿಡಿದ ಬ್ರಹ್ಮದಂಡದಂತಿರುವ, ಮೊನೆಗಳುಳ್ಳ ಇಂದ್ರನ ವಜ್ರವನ್ನು ಬಿಟ್ಟನು.

03274020a ತಚ್ಚೂಲಮಂತರಾ ರಾಮಶ್ಚಿಚ್ಚೇದ ನಿಶಿತೈಃ ಶರೈಃ|

03274020c ತದ್ದೃಷ್ಟ್ವಾ ದುಷ್ಕರಂ ಕರ್ಮ ರಾವಣಂ ಭಯಮಾವಿಶತ್||

ಆ ಶೂಲವನ್ನು ಮಧ್ಯದಲ್ಲಿಯೇ ರಾಮನು ಹರಿತ ಬಾಣಗಳಿಂದ ತುಂಡರಿಸಿದನು. ಆ ದುಷ್ಕರ ಕರ್ಮವನ್ನು ನೋಡಿದ ರಾವಣನಲ್ಲಿ ಭಯವು ಆವೇಶಗೊಂಡಿತು.

03274021a ತತಃ ಕ್ರುದ್ಧಃ ಸಸರ್ಜಾಶು ದಶಗ್ರೀವಃ ಶಿತಾಂ ಶರಾನ್|

03274021c ಸಹಸ್ರಾಯುತಶೋ ರಾಮೇ ಶಸ್ತ್ರಾಣಿ ವಿವಿಧಾನಿ ಚ||

03274022a ತತೋ ಭುಶುಂಡೀಃ ಶೂಲಾಂಶ್ಚ ಮುಸಲಾನಿ ಪರಶ್ವಧಾನ್|

03274022c ಶಕ್ತೀಶ್ಚ ವಿವಿಧಾಕಾರಾಃ ಶತಘ್ನೀಶ್ಚ ಶಿತಕ್ಷುರಾಃ||

ಆಗ ಕೃದ್ಧನಾದ ದಶಗ್ರೀವನು ರಾಮನ ಮೇಲೆ ಹರಿತ ಬಾಣಗಳನ್ನು ಸಹಸ್ರಾರು ಸಂಖ್ಯೆಗಳಲ್ಲಿ ಮತ್ತು ವಿವಿಧ ಶಸ್ತ್ರಗಳನ್ನು ಭುಶುಂಡಿ, ಶೂಲ, ಮುಸಲ, ಪರಶು, ವಿವಿಧಾಕರದ ಶಕ್ತಿಗಳನ್ನು, ಮತ್ತು ನೂರಾರು ಹರಿತ ಖಡ್ಗಗಳನ್ನು - ಬಿಸುಟನು.

03274023a ತಾಂ ಮಾಯಾಂ ವಿಕೃತಾಂ ದೃಷ್ಟ್ವಾ ದಶಗ್ರೀವಸ್ಯ ರಕ್ಷಸಃ|

03274023c ಭಯಾತ್ಪ್ರದುದ್ರುವುಃ ಸರ್ವೇ ವಾನರಾಃ ಸರ್ವತೋದಿಶಂ||

ರಾಕ್ಷಸ ದಶಗ್ರೀವನ ಆ ವಿಕೃತ ಮಾಯೆಯನ್ನು ನೋಡಿ ಭಯದಿಂದ ಸರ್ವ ವಾನರರೂ ಎಲ್ಲದಿಕ್ಕುಗಳಿಗೂ ಓಡಿಹೋದರು.

03274024a ತತಃ ಸುಪತ್ರಂ ಸುಮುಖಂ ಹೇಮಪುಂಖಂ ಶರೋತ್ತಮಂ|

03274024c ತೂಣಾದಾದಾಯ ಕಾಕುತ್ಸ್ಥೋ ಬ್ರಹ್ಮಾಸ್ತ್ರೇಣ ಯುಯೋಜ ಹ||

ಆಗ ಕಾಕುತ್ಸ್ಥನು ಉತ್ತಮ ಪಂಖಗಳನ್ನುಳ್ಳ, ಉತ್ತಮ ಮುಖವುಳ್ಳ, ಬಂಗಾರದ ರೆಕ್ಕೆಗಳನ್ನುಳ್ಳ ಉತ್ತಮ ಶರವನ್ನು ಬತ್ತಳಿಕೆಯಿಂದ ತೆಗೆದು ಅದನ್ನು ಬ್ರಹ್ಮಾಸ್ತ್ರದಿಂದ ಮಂತ್ರಿಸಿದನು.

03274025a ತಂ ಬಾಣವರ್ಯಂ ರಾಮೇಣ ಬ್ರಹ್ಮಾಸ್ತ್ರೇಣಾಭಿಮಂತ್ರಿತಂ|

03274025c ಜಹೃಷುರ್ದೇವಗಂಧರ್ವಾ ದೃಷ್ಟ್ವಾ ಶಕ್ರಪುರೋಗಮಾಃ||

ಆ ಶ್ರೇಷ್ಠ ಬಾಣವನ್ನು ರಾಮನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿದುದನ್ನು ನೋಡಿ, ಶಕ್ರನ ನೇತೃತ್ವದಲ್ಲಿ ದೇವ-ಗಂಧರ್ವರು ಹರ್ಷಿತರಾದರು.

03274026a ಅಲ್ಪಾವಶೇಷಮಾಯುಶ್ಚ ತತೋಽಮನ್ಯಂತ ರಕ್ಷಸಃ|

03274026c ಬ್ರಹ್ಮಾಸ್ತ್ರೋದೀರಣಾಚ್ಚತ್ರೋರ್ದೇವಗಂಧರ್ವಕಿನ್ನರಾಃ||

ಬ್ರಹ್ಮಾಸ್ತ್ರವನ್ನು ಬಳಸಿದುದರಿಂದ ಆ ರಾಕ್ಷಸ ಶತ್ರುವಿನ ಆಯುಸ್ಸು ಸ್ವಲ್ಪಮಾತ್ರವೇ ಇದೆ ಎಂದು ದೇವ- ಗಂಧರ್ವ-ಕಿನ್ನರರು ಅಂದುಕೊಂಡರು.

03274027a ತತಃ ಸಸರ್ಜ ತಂ ರಾಮಃ ಶರಮಪ್ರತಿಮೌಜಸಂ|

03274027c ರಾವಣಾಂತಕರಂ ಘೋರಂ ಬ್ರಹ್ಮದಂಡಮಿವೋದ್ಯತಂ||

ಎತ್ತಿಹಿಡಿದ ಬ್ರಹದಂಡದಂತಿರುವ ಆ ಅಪ್ರತಿಮ ಓಜಸ್ಸಿನ ಘೋರ ಶರವನ್ನು ರಾವಣನನ್ನು ಮುಗಿಸಲು ರಾಮನು ಬಿಟ್ಟನು.

03274028a ಸ ತೇನ ರಾಕ್ಷಸಶ್ರೇಷ್ಠಃ ಸರಥಃ ಸಾಶ್ವಸಾರಥಿಃ|

03274028c ಪ್ರಜಜ್ವಾಲ ಮಹಾಜ್ವಾಲೇನಾಗ್ನಿನಾಭಿಪರಿಷ್ಕೃತಃ||

ಅಗ್ನಿಯ ಮಹಾಜ್ವಾಲೆಯಂತೆ ಉರಿಯುತ್ತಿದ್ದ ಅದು ರಾಕ್ಷಸಶ್ರೇಷ್ಠನನ್ನು, ರಥ ಮತ್ತು ಸಾರಥಿಗಳೊಂದಿಗೆ ಸುಟ್ಟುಹಾಕಿತು.

03274029a ತತಃ ಪ್ರಹೃಷ್ಟಾಸ್ತ್ರಿದಶಾಃ ಸಗಂಧರ್ವಾಃ ಸಚಾರಣಾಃ|

03274029c ನಿಹತಂ ರಾವಣಂ ದೃಷ್ಟ್ವಾ ರಾಮೇಣಾಕ್ಲಿಷ್ಟಕರ್ಮಣಾ||

ಅಕ್ಲಿಷ್ಟಕರ್ಮಿ ರಾಮನಿಂದ ರಾವಣನು ಹತನಾದುದನ್ನು ನೋಡಿ ಗಂಧರ್ವ-ಚಾರಣರೊಂದಿಗೆ ತ್ರಿದಶರು ಹರ್ಷಿತರಾದರು.

03274030a ತತ್ಯಜುಸ್ತಂ ಮಹಾಭಾಗಂ ಪಂಚ ಭೂತಾನಿ ರಾವಣಂ|

03274030c ಭ್ರಂಶಿತಃ ಸರ್ವಲೋಕೇಷು ಸ ಹಿ ಬ್ರಹ್ಮಾಸ್ತ್ರತೇಜಸಾ||

ಬ್ರಹ್ಮಾಸ್ತ್ರದ ತೇಜಸ್ಸಿನಿಂದ ಸರ್ವಲೋಕಗಳಿಂದಲೂ ಭ್ರಂಶಿತನಾದ ಆ ಮಹಾಭಾಗ ರಾವಣನಿಂದ ಪಂಚಭೂತಗಳು ಹೊರಬಿದ್ದವು.

03274031a ಶರೀರಧಾತವೋ ಹ್ಯಸ್ಯ ಮಾಂಸಂ ರುಧಿರಮೇವ ಚ|

03274031c ನೇಶುರ್ಬ್ರಹ್ಮಾಸ್ತ್ರನಿರ್ದಗ್ಧಾ ನ ಚ ಭಸ್ಮಾಪ್ಯದೃಶ್ಯತ||

ಅವನ ಶರೀರದ ಧಾತುಗಳು, ಮಾಂಸ, ರುಧಿರಗಳು ಬ್ರಹ್ಮಾಸ್ತ್ರದಿಂದ ಸುಟ್ಟು, ಭಸ್ವವೂ ಉಳಿಯದಂತೆ ಮಾಯವಾದವು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾವಣವಧೇ ಚತುಃಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾವಣವಧೆಯಲ್ಲಿ ಇನ್ನೂರಾಎಪ್ಪತ್ನಾಲ್ಕನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.