Aranyaka Parva: Chapter 276

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೬

ಯುಧಿಷ್ಠಿರನಲ್ಲಿ ಸ್ವಲ್ಪವೂ ದೋಷವಿಲ್ಲವೆಂದು ವೀರ ಸಹೋದರರ ಸಹಾಯವಿರುವಾಗ ಚಿಂತಿಸಬೇಕಾಗೆಲ್ಲವೆಂದು ಮಾರ್ಕಂಡೇಯನು ಹೇಳಿದುದು (೧-೧೩).

03276001 ಮಾರ್ಕಂಡೇಯ ಉವಾಚ|

03276001a ಏವಮೇತನ್ಮಹಾಬಾಹೋ ರಾಮೇಣಾಮಿತತೇಜಸಾ|

03276001c ಪ್ರಾಪ್ತಂ ವ್ಯಸನಮತ್ಯುಗ್ರಂ ವನವಾಸಕೃತಂ ಪುರಾ||

ಮಾರ್ಕಂಡೇಯನು ಹೇಳಿದನು: “ಮಹಾಬಾಹೋ! ಹೀಗೆ ಹಿಂದೆ ಅಮಿತತೇಜಸ ರಾಮನು ಅತ್ಯುಗ್ರ ವ್ಯಸನವನ್ನು ಹೊಂದಿ ವನವಾಸವನ್ನು ಮಾಡಿದನು.

03276002a ಮಾ ಶುಚಃ ಪುರುಷವ್ಯಾಘ್ರ ಕ್ಷತ್ರಿಯೋಽಸಿ ಪರಂತಪ|

03276002c ಬಾಹುವೀರ್ಯಾಶ್ರಯೇ ಮಾರ್ಗೇ ವರ್ತಸೇ ದೀಪ್ತನಿರ್ಣಯೇ||

ಪುರುಷವ್ಯಾಘ್ರ! ಪರಂತಪ! ಶೋಕಿಸಬೇಡ! ಕ್ಷತ್ರಿಯನಾಗಿದ್ದೀಯೆ! ಬಾಹುವೀರ್ಯವನ್ನು ಆಶ್ರಯಿಸಿ ಉರಿಯುತ್ತಿರುವ ನಿರ್ಣಾಯಕ ಮಾರ್ಗದಲ್ಲಿ ನಡೆಯುತ್ತಿರುವೆ.

03276003a ನ ಹಿ ತೇ ವೃಜಿನಂ ಕಿಂ ಚಿದ್ದೃಶ್ಯತೇ ಪರಮಣ್ವಪಿ|

03276003c ಅಸ್ಮಿನ್ಮಾರ್ಗೇ ವಿಷೀದೇಯುಃ ಸೇಂದ್ರಾ ಅಪಿ ಸುರಾಸುರಾಃ||

ನಿನ್ನಲ್ಲಿ ಏನೂ, ಪರಮಾಣುವಿನ ಮಾತ್ರದಷ್ಟೂ, ದೋಷವಿಲ್ಲ. ಸುರಾಸುರರೊಂದಿಗೆ ಇಂದ್ರನೂ ಕೂಡ ಈ ಮಾರ್ಗದಲ್ಲಿ ಹಿಂಜರಿಯುತ್ತಾನೆ.

03276004a ಸಂಹತ್ಯ ನಿಹತೋ ವೃತ್ರೋ ಮರುದ್ಭಿರ್ವಜ್ರಪಾಣಿನಾ|

03276004c ನಮುಚಿಶ್ಚೈವ ದುರ್ಧರ್ಷೋ ದೀರ್ಘಜಿಹ್ವಾ ಚ ರಾಕ್ಷಸೀ||

ವಜ್ರಪಾಣಿಯು ಮರುತ್ತರೊಂದೊಡಗೂಡಿ ವೃತ್ರನನ್ನು, ದುರ್ಧರ್ಷ ನಮುಚಿಯನ್ನೂ, ರಾಕ್ಷಸಿ ದೀರ್ಘಜಿಹ್ವೆಯನ್ನೂ ಸಂಹರಿಸಿದನು.

03276005a ಸಹಾಯವತಿ ಸರ್ವಾರ್ಥಾಃ ಸಂತಿಷ್ಠಂತೀಹ ಸರ್ವಶಃ|

03276005c ಕಿಂ ನು ತಸ್ಯಾಜಿತಂ ಸಂಖ್ಯೇ ಭ್ರಾತಾ ಯಸ್ಯ ಧನಂಜಯಃ||

ಸಹಾಯವಿದ್ದವನಿಗೆ ಒಳ್ಳೆಯದೆಲ್ಲವೂ ಆಗುತ್ತದೆ. ಧನಂಜಯನನ್ನು ಸಹೋದರನನ್ನಾಗಿ ಪಡೆದಿರುವವನಿಗೆ ಯುದ್ಧದಲ್ಲಿ ಜಯಿಸದೇ ಇರುವುದಾದರೂ ಏನಿದೆ?

03276006a ಅಯಂ ಚ ಬಲಿನಾಂ ಶ್ರೇಷ್ಠೋ ಭೀಮೋ ಭೀಮಪರಾಕ್ರಮಃ|

03276006c ಯುವಾನೌ ಚ ಮಹೇಷ್ವಾಸೌ ಯಮೌ ಮಾದ್ರವತೀಸುತೌ|

03276006e ಏಭಿಃ ಸಹಾಯೈಃ ಕಸ್ಮಾತ್ತ್ವಂ ವಿಷೀದಸಿ ಪರಂತಪ||

ಪರಂತಪ! ಈ ಭೀಮಪರಾಕ್ರಮಿ ಭೀಮನು ಬಲಿಗಳಲ್ಲಿಯೇ ಶ್ರೇಷ್ಠನು. ಮಾದ್ರವತೀ ಸುತರೀರ್ವರು ಯಮಳರು ಯುವಕರು ಮತ್ತು ಮಹೇಷ್ವಾಸರು. ಇವರ ಸಹಾಯವಿರುವಾಗ ನೀನು ಏಕೆ ವಿಷಾದಿಸತ್ತಿರುವೆ?

03276007a ಯ ಇಮೇ ವಜ್ರಿಣಃ ಸೇನಾಂ ಜಯೇಯುಃ ಸಮರುದ್ಗಣಾಂ|

03276007c ತ್ವಮಪ್ಯೇಭಿರ್ಮಹೇಷ್ವಾಸೈಃ ಸಹಾಯೈರ್ದೇವರೂಪಿಭಿಃ|

03276007e ವಿಜೇಷ್ಯಸಿ ರಣೇ ಸರ್ವಾನಮಿತ್ರಾನ್ಭರತರ್ಷಭ||

ಭರತರ್ಷಭ! ಮರುದ್ಗಣಗಳೊಂದಿಗೆ ಇಂದ್ರನ ಸೇನೆಯನ್ನೂ ಜಯಿಸಬಲ್ಲ ಈ ಮಹೇಷ್ವಾಸ ದೇವರೂಪಿಗಳನ್ನು ಸಹಾಯಕರನ್ನಾಗಿ ಪಡೆದ ನೀನು ರಣದಲ್ಲಿ ಅಮಿತ್ರರೆಲ್ಲರನ್ನೂ ಜಯಿಸುತ್ತೀಯೆ.

03276008a ಇತಶ್ಚ ತ್ವಮಿಮಾಂ ಪಶ್ಯ ಸೈಂಧವೇನ ದುರಾತ್ಮನಾ|

03276008c ಬಲಿನಾ ವೀರ್ಯಮತ್ತೇನ ಹೃತಾಮೇಭಿರ್ಮಹಾತ್ಮಭಿಃ||

03276009a ಆನೀತಾಂ ದ್ರೌಪದೀಂ ಕೃಷ್ಣಾಂ ಕೃತ್ವಾ ಕರ್ಮ ಸುದುಷ್ಕರಂ|

03276009c ಜಯದ್ರಥಂ ಚ ರಾಜಾನಂ ವಿಜಿತಂ ವಶಮಾಗತಂ||

ಬಲಶಾಲಿಯಾದ, ವೀರ್ಯದಿಂದ ಮತ್ತನಾಗಿದ್ದ ದುರಾತ್ಮ ಸೈಂಧವನಿಂದ ಅಪಹೃತಳಾಗಿದ್ದ ಈ ದ್ರೌಪದಿ ಕೃಷ್ಣೆಯನ್ನಾದರೂ ನೀನು ನೋಡು. ಆದರೆ ಮಹಾತ್ಮರು ಸುದುಷ್ಕರ ಕಾರ್ಯವನ್ನೆಸಗಿ ರಾಜ ಜಯದ್ರಥನನ್ನು ಸೋಲಿಸಿ ವಶಪಡಿಸಿಕೊಂಡರು.

03276010a ಅಸಹಾಯೇನ ರಾಮೇಣ ವೈದೇಹೀ ಪುನರಾಹೃತಾ|

03276010c ಹತ್ವಾ ಸಂಖ್ಯೇ ದಶಗ್ರೀವಂ ರಾಕ್ಷಸಂ ಭೀಮವಿಕ್ರಮಂ||

ಅಸಹಾಯಕನಾದ ರಾಮನು ಭೀಮವಿಕ್ರಮಿ ರಾಕ್ಷಸ ದಶಗ್ರೀವನನ್ನು ಯುದ್ಧದಲ್ಲಿ ಕೊಂದೇ ವೈದೇಹಿಯನ್ನು ಪುನಃ ಪಡೆದನು.

03276011a ಯಸ್ಯ ಶಾಖಾಮೃಗಾ ಮಿತ್ರಾ ಋಕ್ಷಾಃ ಕಾಲಮುಖಾಸ್ತಥಾ|

03276011c ಜಾತ್ಯಂತರಗತಾ ರಾಜನ್ನೇತದ್ಬುದ್ಧ್ಯಾನುಚಿಂತಯ||

ಅವನಿಗೆ ಬೇರೆಯೇ ಜಾತಿಯ ಕಪಿಗಳು, ಕಪ್ಪು ಮುಖದ ಕರಡಿಗಳು ಮಿತ್ರರಾಗಿದ್ದರು. ರಾಜನ್! ಇದರ ಕುರಿತಾದರೂ ಬುದ್ಧಿಯಿಂದ ಚಿಂತಿಸು.

03276012a ತಸ್ಮಾತ್ತ್ವಂ ಕುರುಶಾರ್ದೂಲ ಮಾ ಶುಚೋ ಭರತರ್ಷಭ|

03276012c ತ್ವದ್ವಿಧಾ ಹಿ ಮಹಾತ್ಮಾನೋ ನ ಶೋಚಂತಿ ಪರಂತಪ||

ಕುರುಶಾರ್ದೂಲ! ಭರತರ್ಷಭ! ಆದುದರಿಂದ ನೀನು ಶೋಕಿಸಬಾರದು. ಪರಂತಪ! ನಿನ್ನಂಥಹ ಮಹಾತ್ಮರು ಶೋಕಿಸುವುದಿಲ್ಲ.””

03276013 ವೈಶಂಪಾಯನ ಉವಾಚ|

03276013a ಏವಮಾಶ್ವಾಸಿತೋ ರಾಜಾ ಮಾರ್ಕಂಡೇಯೇನ ಧೀಮತಾ|

03276013c ತ್ಯಕ್ತ್ವಾ ದುಃಖಮದೀನಾತ್ಮಾ ಪುನರೇವೇದಮಬ್ರವೀತ್||

ವೈಶಂಪಾಯನನು ಹೇಳಿದನು: “ಧೀಮತ ಮಾರ್ಕಂಡೇಯನಿಂದ ಹೀಗೆ ಆಶ್ವಾಸನೆಯನ್ನು ಪಡೆದ ರಾಜನು ದುಃಖವನ್ನು ತೊರೆದು ಪುನಃ ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಯುಧಿಷ್ಠಿರಾಶ್ವಾಸನೇ ಷಟ್‌ಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಯುಧಿಷ್ಠಿರಾಶ್ವಾಸನದಲ್ಲಿ ಇನ್ನೂರಾಎಪ್ಪತ್ತಾರನೆಯ ಅಧ್ಯಾಯವು.

Image result for indian motifs lilies

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.