ಕಪಾಲಮೋಚನ ತೀರ್ಥ ಮಹಾತ್ಮೆ

Related imageಹಿಂದೆ ಮಹಾತ್ಮ ರಾಘವನು ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ಅಲ್ಲಿ ರಾಕ್ಷಸರನ್ನು ಸಂಹರಿಸಿದನು. ಜನಸ್ಥಾನದಲ್ಲಿ ದುರಾತ್ಮ ರಾಕ್ಷಸನ ಶಿರವನ್ನು ಕ್ಷುರದ ಶಿತಧಾರೆಯಿಂದ ಕತ್ತರಿಸಲ್ಪಡಲು ಅದು ಮಹಾವನದಲ್ಲಿ ಬಿದ್ದಿತು. ದೈವಯೋಗದಿಂದ ಅದು ಅಲ್ಲಿ ಸಂಚರಿಸುತ್ತಿದ್ದ ಮಹೋದರನ ಮೊಣಕಾಲನ್ನು ಸೀಳಿ ಅಲ್ಲಿಯೇ ಅಂಟಿಕೊಂಡಿತು. ಅದು ಅವನಿಗೆ ಅಂಟಿಕೊಂಡಿದ್ದುದರಿಂದ ಬ್ರಾಹ್ಮಣ ಮಹಾಪ್ರಾಜ್ಞನು ತೀರ್ಥ-ದೇವಾಲಯಗಳಿಗೆ ಹೋಗಲು ಅಸಮರ್ಥನಾದನು. ಕೀವು ಹರಿದು ವೇದನೆಯಿಂದ ಆರ್ತನಾಗಿದ್ದ ಮಹಾಮುನಿಯು ಭೂಮಿಯ ಸರ್ವತೀರ್ಥಗಳಿಗೆ ಹೋದನು. ಮಹಾತಪಸ್ವಿಯು ಸರ್ವ ನದಿ-ಸಮುದ್ರಗಳಿಗೆ ಹೋಗಿ ಅಲ್ಲಿ ಸರ್ವ ಭಾವಿತಾತ್ಮ ಋಷಿಗಳಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದನು. ಸರ್ವತೀರ್ಥಗಳಲ್ಲಿ ಮುಳುಗಿದರೂ ಅವನಿಗೆ ಶಿರದಿಂದ ಮೋಕ್ಷವು ದೊರಕಲಿಲ್ಲ. ಆಗ ವಿಪ್ರೇಂದ್ರನು ಮುನಿಗಳ ಮಹಾ ವಚನವನ್ನು ಕೇಳಿದನು: “ಸರಸ್ವತೀ ತೀರದಲ್ಲಿ ಔಶನಸವೆಂಬ ಪ್ರಖ್ಯಾತ ಶ್ರೇಷ್ಠ ತೀರ್ಥವಿದೆ. ಅನುತ್ತಮ ಸಿದ್ಧಕ್ಷೇತ್ರದಲ್ಲಿ ಎಲ್ಲ ಪಾಪಗಳೂ ಪ್ರಶಮನಗೊಳ್ಳುತ್ತವೆ.”

ಆಗ ದ್ವಿಜನು ಔಶಸನ ತೀರ್ಥಕ್ಕೆ ಹೋಗಿ ಔಶಸನ ತೀರ್ಥದಲ್ಲಿ ಸ್ನಾನಮಾಡುತ್ತಿರಲು ಶಿರವು ಅವನ ಕಾಲನ್ನು ಬಿಟ್ಟು ನೀರಿನೊಳಗೆ ಬಿದ್ದಿತು. ಪೂತಾತ್ಮನೂ ಕಲ್ಮಷಗಳನ್ನು ಕಳೆದುಕೊಂಡವನೂ, ಶಿರದಿಂದ ಮುಕ್ತನಾದವನೂ ಆದ ಕೃತಕೃತ್ಯ ಮಹೋದರನು ಪ್ರೀತನಾಗಿ ತನ್ನ ಆಶ್ರಮಕ್ಕೆ ಮರಳಿದನು. ತನ್ನ ಪುಣ್ಯ ಆಶ್ರಮಕ್ಕೆ ಹೋಗಿ ಮುಕ್ತನಾದ ಮಹಾತಪಸ್ವಿ ವಿಪ್ರನು ನಡೆದುದೆಲ್ಲವನ್ನೂ ಅಲ್ಲಿದ್ದ ಭಾವಿತಾತ್ಮ ಋಷಿಗಳಿಗೆ ಹೇಳಿದನು. ಅವನ ಮಾತನ್ನು ಕೇಳಿ ಅಲ್ಲಿ ಸೇರಿದ್ದ ಮುನಿಗಳು ತೀರ್ಥಕ್ಕೆ ಕಪಾಲಮೋಚನ ಎಂಬ ಹೆಸರಿನ್ನಿತ್ತರು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *