ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು

ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ವಿಶ್ರಾಂತಿಪಡೆಯುತ್ತಿದ್ದ ಬ್ರಹ್ಮರ್ಷಿಗಳ ಮಧ್ಯೆ ಲೋಮಹರ್ಷಣನ ಮಗ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು. ಅವನು ಆಶ್ರಮವನ್ನು ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು. ಪರಸ್ಪರರನ್ನು ಅಭಿವಂದಿಸಿ, ಎಲ್ಲರೂ ಕುಳಿತುಕೊಂಡ ನಂತರ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ “ಸೌತಿ! ನೀನು ಎಲ್ಲಿಂದ ಬರುತ್ತಿರುವೆ?” ಎಂದು…

Continue reading

ಜನಮೇಜಯನ ಸರ್ಪಸತ್ರದಲ್ಲಿ ವೈಶಂಪಾಯನನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು

ಜನಮೇಜಯನ ಸರ್ಪಸತ್ರದಲ್ಲಿ ವೈಶಂಪಾಯನನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು ಸರ್ವಭಕ್ಷಕನಾಗೆಂದು ಅಗ್ನಿಗೆ ಭೃಗುಋಷಿಯ ಶಾಪ ಭೃಗುವಿಗೆ ಪುಲೋಮ ಎಂಬ ವಿಖ್ಯಾತ ಪ್ರಿಯ ಭಾರ್ಯೆಯಿದ್ದಳು. ಅವಳಲ್ಲಿ ಭೃಗುವಿನ ವೀರ್ಯಸಮುದ್ಭವ ಗರ್ಭವು ಬೆಳೆಯುತ್ತಿತ್ತು. ಧರ್ಮಪತ್ನಿ, ಯಶಸ್ವಿನಿ, ಸಮಶೀಲೆ, ಪುಲೋಮೆಯು ಗರ್ಭಿಣಿಯಾಗಿದ್ದಾಗ ಒಮ್ಮೆ ಧರ್ಮಭೃತ ಶ್ರೇಷ್ಠ ಭೃಗುವು ಸ್ನಾನಕ್ಕೆಂದು ಹೋದಾಗ ಅವನ ಆಶ್ರಮಕ್ಕೆ ರಾಕ್ಷಸ ಪುಲೋಮನು ಆಗಮಿಸಿದನು. ಆಶ್ರಮವನ್ನು ಪ್ರವೇಶಿಸಿ, ಅಲ್ಲಿ ಭೃಗುವಿನ ಅನಿಂದಿತ ಭಾರ್ಯೆಯನ್ನು ನೋಡಿ ಇಚ್ಛೆಯಿಂದ ಸಮಾವಿಷ್ಠನಾಗಿ ವಿವೇಕವೆಲ್ಲವನ್ನೂ ಕಳೆದುಕೊಂಡನು. ಚಾರುದರ್ಶಿಣಿ ಪುಲೋಮಳು…

Continue reading

ಅಂಶಾವತರಣ

ಅಂಶಾವತರಣ ಹಿಂದೆ ಜಾಮದಗ್ನಿಯು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಪರ್ವತೋತ್ತಮ ಮಹೇಂದ್ರದ ಮೇಲೆ ತಪಸ್ಸು ಮಾಡುತ್ತಿದ್ದನು. ಭಾರ್ಗವನಿಂದ ಲೋಕಗಳಲ್ಲಿ ಕ್ಷತ್ರಿಯರೇ ಇಲ್ಲದಂತಾದಾಗ ಕ್ಷಾತ್ರಿಣಿಯರು ಬ್ರಾಹ್ಮಣರಲ್ಲಿ ಗರ್ಭವನ್ನು ಬೇಡಿದರು. ಆಗ ಸಂಶಿತವ್ರತ ಬ್ರಾಹ್ಮಣರು ಋತುಮತಿಯರಾಗಿದ್ದಾಗ ಮಾತ್ರ ಸಂಭೋಗ ಮಾಡಿದರು. ಕಾಮಕ್ಕಾಗಿ ಎಂದೂ ಕೂಡಲಿಲ್ಲ. ಈ ರೀತಿಯ ಸಂಬಂಧದಿಂದ ಕ್ಷಾತ್ರಿಣಿಯರು ಸಹಸ್ರಾರು ಸಂಖ್ಯೆಯಲ್ಲಿ ಗರ್ಭಧರಿಸಿದರು ಮತ್ತು ಕ್ಷತ್ರಿಯ ವೀರಸಮನ್ವಿತ ಕುಮಾರ ಕುಮಾರಿಯರಿಗೆ ಜನ್ಮವಿತ್ತು ಪುನಃ ಕ್ಷತ್ರಿಯರ ಅಭಿವೃದ್ದಿಯಾಯಿತು. ಈ ರೀತಿ ಸುತಪಸ್ವಿ…

Continue reading

ವಂಶಾವಳಿ

ವಂಶಾವಳಿ ಆದಿ ವಂಶಾವಳಿ ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು. ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ದಕ್ಷಕನ್ಯೆಯರು. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ ಪುತ್ರ ಪೌತ್ರರಾದರು. ಹನ್ನೆರಡು ಭುವನೇಶ್ವರ…

Continue reading

ಶಂತನು-ಗಂಗೆ-ಭೀಷ್ಮ-ಸತ್ಯವತಿ

ಶಂತನು-ಗಂಗೆ-ಭೀಷ್ಮ-ಸತ್ಯವತಿ ವಸು ಉಪರಿಚರ ಒಂದು ಕಾಲದಲ್ಲಿ ಬೇಟೆಯಾಡುವುದರಲ್ಲಿ ಆಸಕ್ತಿಯನ್ನಿಟ್ಟಿದ್ದ ಧರ್ಮನಿತ್ಯ, ಸತ್ಯವ್ರತ, ಮಹೀಪತಿ, ಉಪರಿಚರ ಎಂಬ ಹೆಸರಿನ ರಾಜನಿದ್ದನು. ಆ ಪೌರವನಂದನ ಮಹೀಪತಿಯು ಇಂದ್ರನ ಉಪದೇಶದಂತೆ ರಮ್ಯ ಸಂಪದ್ಭರಿತ ಚೇದಿರಾಜ್ಯವನ್ನು ತನ್ನದಾಗಿಸಿಕೊಂಡನು. ಶಸ್ತ್ರಗಳನ್ನು ಪರಿತ್ಯಜಿಸಿ ಆಶ್ರಮದಲ್ಲಿ ವಾಸಿಸುತ್ತಾ ತಪೋನಿರತನಾಗಿರಲು ಆ ಮಹೀಪತಿಯ ಬಳಿ ಸಾಕ್ಷಾತ್ ದೇವ ವಜ್ರಿಯೇ ಸ್ವಯಂ ಬಂದನು. ತನ್ನ ತಪಸ್ಸಿನ ಮೂಲಕ ರಾಜನು ಇಂದ್ರತ್ವಕ್ಕೆ ಅರ್ಹನಾಗಬಲ್ಲನೆಂದು ಚಿಂತಿಸಿ ಅವನು ನೃಪನಿಗೆ ತಪಸ್ಸನ್ನು ತೊರೆಯಲು ಸಲಹೆಯನ್ನಿತ್ತನು: “ಪೃಥ್ವೀಪತೇ! ಪೃಥ್ವಿಯಲ್ಲಿ…

Continue reading

ಚಿತ್ರಾಂಗದ-ವಿಚಿತ್ರವೀರ್ಯ

ಚಿತ್ರಾಂಗದ-ವಿಚಿತ್ರವೀರ್ಯ ವಿವಾಹಕಾರ್ಯಗಳು ಮುಗಿದ ನಂತರ ನೃಪ ಶಂತನು ರಾಜನು ಆ ರೂಪಸಂಪನ್ನ ಕನ್ಯೆಯೊಂದಿಗೆ ಕೂಡಿ ತನ್ನ ಮನೆಯಲ್ಲಿ ವಾಸಿಸತೊಡಗಿದನು. ಶಂತನುವಿಗೆ ಸತ್ಯವತಿಯು ವೀರತೆಯಲ್ಲಿ ಮನುಷ್ಯರೆಲ್ಲರನ್ನೂ ಮೀರಿದ ಚಿತ್ರಾಂಗದ ಎನ್ನುವ ಧೀಮಂತ ವೀರ ಪುತ್ರನಿಗೆ ಜನ್ಮವಿತ್ತಳು. ನಂತರ ಪುನಃ ಆ ಮಹೇಷ್ವಾಸ ಪ್ರಭುವು ಸತ್ಯವತಿಯಲ್ಲಿ ವಿಚಿತ್ರವೀರ್ಯನೆನ್ನುವ ವೀರ್ಯವಂತ ರಾಜಪುತ್ರನನ್ನು ಪಡೆದನು. ಅವರು ಯೌವನವನ್ನು ಹೊಂದುವುದರೊಳಗೇ ಆ ಧೀಮಾನ್ ರಾಜ ಶಂತನುವು ಕಾಲಧರ್ಮಕ್ಕೊಳಗಾದನು. ಶಂತನುವು ಸ್ವರ್ಗವಾಸಿಯಾದ ನಂತರ ಭೀಷ್ಮನು, ಸತ್ಯವತಿಯ ಇಚ್ಛೆಯಂತೆ, ಅರಿಂದಮ…

Continue reading

ಧೃತರಾಷ್ಟ್ರ-ಪಾಂಡು-ವಿದುರರ ಜನನ, ವಿವಾಹ

ಧೃತರಾಷ್ಟ್ರ-ಪಾಂಡು-ವಿದುರರ ಜನನ, ವಿವಾಹ ಕುರುವಂಶಾಭಿವೃದ್ಧಿಯ ಕುರಿತು ಸತ್ಯವತಿ-ಭೀಷ್ಮರ ಸಂವಾದ ಮೊಮ್ಮಕ್ಕಳನ್ನು ಬೇಡುತ್ತಿದ್ದ ದೀನ, ಕೃಪಣ ಸತ್ಯವತಿಯು ತನ್ನ ಸೊಸೆಯರನ್ನು ಕೂಡಿ ಮಗನ ಕರ್ಮಗಳನ್ನು ನೆರವೇರಿಸಿದಳು. ಧರ್ಮ, ಪಿತೃವಂಶ ಮತ್ತು ಮಾತೃವಂಶಗಳ ಕುರಿತು ಯೋಚಿಸಿದ ಆ ಮಾನಿನಿಯು ಮಹಾಭಾಗ ಗಾಂಗೇಯನಿಗೆ ಹೇಳಿದಳು: “ಧರ್ಮನಿತ್ಯ ಶಂತನು ಮತ್ತು ಯಶಸ್ವಿ ಕೌರವ್ಯನ ಪಿಂಡ, ಕೀರ್ತಿ ಮತ್ತು ಸಂತಾನವು ನಿನ್ನನ್ನವಲಂಬಿಸಿದೆ. ಶುಭಕರ್ಮವನ್ನು ಮಾಡುವುದರಿಂದ ಸ್ವರ್ಗೋಪಗಮನವು ಎಷ್ಟು ಖಂಡಿತವೋ, ಸತ್ಯದಿಂದ ದೀರ್ಘಾಯುಸ್ಸು ಎಷ್ಟು ಖಂಡಿತವೋ ಅಷ್ಟೇ ನಿನ್ನಿಂದ…

Continue reading

ಕೌರವ-ಪಾಂಡವರ ಜನನ; ಬಾಲ್ಯ

ಕೌರವ-ಪಾಂಡವರ ಜನನ; ಬಾಲ್ಯ ದುರ್ಯೋಧನಾದಿ ಕೌರವರ ಜನನ ನಂತರ ಗಾಂಧಾರಿಯಲ್ಲಿ ಧೃತರಾಷ್ಟ್ರನ ನೂರು ಪುತ್ರರು ಮತ್ತು ನೂರಾ ಒಂದನೆಯವನು ವೈಶ್ಯೆಯೊಬ್ಬಳಲ್ಲಿ ಜನಿಸಿದರು. ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರಲ್ಲಿ ಕುಲಸಂತಾನಾರ್ಥವಾಗಿ ದೇವತೆಗಳಿಂದ ಐವರು ಮಹಾರಥಿ ಪುತ್ರರು ಜನಿಸಿದರು. ಒಮ್ಮೆ ಹಸಿದು ಬಳಲಿ ಬಂದಿದ್ದ ದ್ವೈಪಾಯನನನ್ನು ಗಾಂಧಾರಿಯು ತೃಪ್ತಿಗೊಳಿಸಿದಳು. ವ್ಯಾಸನು ಅವಳಿಗೆ ವರವನ್ನಿತ್ತನು. ಅವಳು ತನಗಾಗಿ ತನ್ನ ಪತಿ ಸಮಾನ ನೂರು ಪುತ್ರರನ್ನು ಕೇಳಿದಳು. ಸ್ವಲ್ಪ ಸಮಯದ ನಂತರ ಅವಳು ಧೃತರಾಷ್ಟ್ರನಿಂದ ಗರ್ಭವತಿಯಾದಳು.…

Continue reading

ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ

ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ ಕೃಪ ಶಾರದ್ವತ ಮಹರ್ಷಿ ಗೌತಮನಿಗೆ ಶರದ್ವತ ಎನ್ನುವ ಹೆಸರಿನ ಮಗನಿದ್ದನು. ಆ ಮಗನು ಶರಗಳನ್ನು ಪಡೆದೇ ಹುಟ್ಟಿದ್ದನು. ಆ ಪರಂತಪನಿಗೆ ಧನುರ್ವೇದದಲ್ಲಿ ಎಷ್ಟು ಬುದ್ದಿಯಿತ್ತೋ ಅಷ್ಟು ಬುದ್ದಿ ವೇದಾಧ್ಯಯನದಲ್ಲಿ ಇರಲಿಲ್ಲ. ಬ್ರಹ್ಮವಾದಿಗಳು ಹೇಗೆ ತಪಸ್ಸಿನಿಂದ ಪರಿಶ್ರಮಿಸಿ ವೇದಗಳನ್ನು ಪಡೆಯುತ್ತಾರೋ ಹಾಗೆ ಅವನೂ ಕೂಡ ತಪಸ್ಸಿನಿಂದಲೇ ಸರ್ವ ಅಸ್ತ್ರಗಳನ್ನೂ ಪಡೆದನು. ಶರದ್ವತನ ವಿಪುಲ ತಪಸ್ಸು ಮತ್ತು ಧನುರ್ವೇದ ಪಾಂಡಿತ್ಯವು ದೇವರಾಜನನ್ನು ಸಾಕಷ್ಟು ಕಾಡಿತು.…

Continue reading

ಅರಗಿನ ಮನೆ

ಅರಗಿನ ಮನೆ ಭೀಮಸೇನನ ಅಧಿಕ ಶಕ್ತಿಯನ್ನೂ ಧನಂಜಯನ ಕೃತವಿದ್ಯೆಯನ್ನೂ ನೋಡಿದ ದುರ್ಮತಿ ದುರ್ಯೋಧನನು ಪರಿತಪಿಸಿದನು. ವೈಕರ್ತನ ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಉಪಾಯಗಳನ್ನು ಹೂಡಿದರು. ಆದರೆ ಆ ಅರಿಂದಮ ಪಾಂಡವರು ಅವೆಲ್ಲವನ್ನೂ ಮೊದಲೇ ತಿಳಿದುಕೊಂಡಿದ್ದರೂ ವಿದುರನ ಸಲಹೆಯಂತೆ ಅವನ್ನು ಸಹಿಸಿಕೊಂಡು ಬಹಿರಂಗಗೊಳಿಸದೇ ಇದ್ದರು. ಪಾಂಡುಸುತರು ಸುಗುಣಗಳಿಂದ ಬೆಳೆಯುತ್ತಿರುವುದನ್ನು ನೋಡಿದ ಪೌರರು ಚೌಕಗಳಲ್ಲಿ ಸೇರಿದಾಗಲೆಲ್ಲೆಲ್ಲಾ ಅವರ ಕುರಿತೇ ಮಾತನಾಡುತ್ತಿದ್ದರು. “ಮೊದಲು ಪ್ರಜ್ಞಾಚಕ್ಷು ಜನೇಶ್ವರ ಧೃತರಾಷ್ಟ್ರನಿಗೆ ಕುರುಡನಾಗಿದ್ದಾನೆಂದು ರಾಜ್ಯವು…

Continue reading