ಹಿಡಿಂಬವಧ

ಹಿಡಿಂಬವಧ ವನದಲ್ಲಿ ಪಾಂಡವರು ಮಲಗಿರುವಾಗ, ಆ ವನದಿಂದ ಸ್ವಲ್ಪ ದೂರದಲ್ಲಿಯೇ ಒಂದು ಶಾಲವೃಕ್ಷದಲ್ಲಿ ಹಿಡಿಂಬ ಎಂಬ ಹೆಸರಿನ ರಾಕ್ಷಸನು ಮಲಗಿದ್ದನು. ಮಹಾವೀರ, ಮಹಾಬಲಿ, ವಿರೂಪರೂಪಿ, ಪಿಂಗಾಕ್ಷ, ಕರಾಲ, ಘೋರದರ್ಶನ ಕ್ರೂರನು ಮನುಷ್ಯರ ಮಾಂಸವನ್ನು ಭಕ್ಷಿಸುವವನಾಗಿದ್ದನು. ಹಸಿದ ಅವನು ಮಾಂಸವನ್ನು ಬಯಸುತ್ತಿದ್ದಾಗ ಅಲ್ಲಿರುವ ಅವರನ್ನು ನೋಡಿದನು. ಪುನಃ ಪುನಃ ಅವನ ಕಣ್ಣುಗಳು ಅವರೆಡೆಗೇ ತಿರುಗುತ್ತಿರಲು ಅವನು ತನ್ನ ಬೆರಳುಗಳನ್ನು ಮೇಲಕ್ಕೆ ಮಾಡಿ ಹೊಲಸಾದ ತನ್ನ ಕೂದಲುಗಳನ್ನು ಕೆರೆದು ಕೆದರಿ ತನ್ನ ಅಗಲ…

Continue reading

ಬಕವಧ

ಬಕವಧ ಮಹಾರಥಿ ಕುಂತೀಪುತ್ರರು ಏಕಚಕ್ರಕ್ಕೆ ಹೋಗಿ ಬ್ರಾಹ್ಮಣನ ಮನೆಯಲ್ಲಿ ಸ್ವಲ್ಪ ಸಮಯ ಉಳಿದರು. ಅವರೆಲ್ಲರೂ ಭಿಕ್ಷೆಬೇಡಲು ಹೋಗುತ್ತಿದ್ದಾಗ ರಮಣೀಯ ವಿವಿಧ ವನ, ರಾಜರ ದೇಶ ಮತ್ತು ನದೀ ಸರೋವರಗಳನ್ನು ಕಂಡರು. ತಮ್ಮ ಸುಗುಣಗಳಿಂದಾಗಿ ನಗರವಾಸಿಗಳಿಗೆ ಪ್ರಿಯದರ್ಶನರಾದರು. ಪ್ರತಿ ರಾತ್ರಿಯೂ ಅವರು ಭಿಕ್ಷವನ್ನು ಕುಂತಿಗೆ ತಂದು ಒಪ್ಪಿಸುತ್ತಿದ್ದರು. ಅದನ್ನು ಅವಳು ವಿಂಗಡಿಸಿದ ನಂತರ ಅವರವರ ಪಾಲುಗಳನ್ನು ಸೇವಿಸುತ್ತಿದ್ದರು: ಅರ್ಧವನ್ನು ತಾಯಿಯೂ ಸೇರಿ ಪರಂತಪ ವೀರರು ತಿನ್ನುತ್ತಿದ್ದರು. ಇನ್ನೊಂದು ಅರ್ಧ ಭಾಗವನ್ನೆಲ್ಲಾ ಮಹಾಬಲಿ…

Continue reading

ದ್ರೌಪದೀ ಸ್ವಯಂವರ-ವಿವಾಹ

ದ್ರೌಪದೀ ಸ್ವಯಂವರ-ವಿವಾಹ ದ್ರುಷ್ಟದ್ಯುಮ್ನ-ದ್ರೌಪದಿಯರ ಜನನ ವೃತ್ತಾಂತ ಬಕರಾಕ್ಷಸನನ್ನು ಕೊಂದ ಬಳಿಕ ಪಾಂಡವರು ಏಕಚಕ್ರನಗರದ ಆ ಬ್ರಾಹ್ಮಣನ ಮನೆಯಲ್ಲಿಯೇ ಶ್ರೇಷ್ಠ ಬ್ರಹ್ಮಾಧ್ಯಯನ ನಿರತರಾಗಿ ವಾಸಿಸುತ್ತಿದ್ದರು. ಕೆಲವು ದಿನಗಳ ನಂತರ ಸಂಶಿತವ್ರತ ಬ್ರಾಹ್ಮಣನೋರ್ವನು ಆಶ್ರಯ ಹುಡುಕಿಕೊಂಡು ಆ ಬ್ರಾಹ್ಮಣನ ಮನೆಗೆ ಬಂದನು. ಸದಾ ಸರ್ವ ಅತಿಥಿವ್ರತ ಆ ವಿದ್ವಾನ್ ವಿಪ್ರರ್ಷಭನು ಅವನನ್ನು ಆಹ್ವಾನಿಸಿ ಚೆನ್ನಾಗಿ ಸತ್ಕರಿಸಿ ಆಶ್ರಯವನ್ನಿತ್ತನು. ಆಗ ಕುಂತಿಯ ಸಹಿತ ನರರ್ಷಭ ಸರ್ವ ಪಾಂಡವರೂ ಕಥೆಗಳನ್ನು ಹೇಳುವುದರಲ್ಲಿ ಕುಶಲನಾಗಿದ್ದ ಆ ವಿಪ್ರನನ್ನು…

Continue reading

ಪಾಂಡವರಿಗೆ ರಾಜ್ಯಪ್ರಾಪ್ತಿ

ಪಾಂಡವರಿಗೆ ರಾಜ್ಯಪ್ರಾಪ್ತಿ ಕುರುಗಳಲ್ಲಿ ಪಾಂಡವರ ಕುರಿತಾದ ಸಮಾಲೋಚನೆ ವಿಮನಸ್ಕ ರಾಜ ದುರ್ಯೋಧನನು ಅಶ್ವತ್ಥಾಮ, ಮಾತುಲ, ಕರ್ಣ, ಕೃಪ ಮತ್ತು ತನ್ನ ಭ್ರಾತೃಗಳ ಸಹಿತ ದ್ರೌಪದಿಯು ಶ್ವೇತವಾಹನನ್ನು ವರಿಸಿದ್ದುದನ್ನು ಕಂಡು ವಿನಿವೃತನಾಗಿ ಹಿಂದಿರುಗಿದನು. ನಾಚಿಕೊಂಡ ದುಃಶಾಸನನು ಅವನಲ್ಲಿ ಪಿಸುಮಾತಿನಲ್ಲಿ ಹೇಳಿದನು: “ಬ್ರಾಹ್ಮಣನಾಗಿಲ್ಲದಿದ್ದರೆ ಎಂದೂ ಅವನು ದ್ರೌಪದಿಯನ್ನು ಪಡೆಯುತ್ತಿರಲಿಲ್ಲ. ರಾಜನ್! ಯಾರಿಗೂ ಅವನು ಧನಂಜಯನೆಂದು ಗೊತ್ತಾಗಲಿಲ್ಲ. ದೈವವೇ ಪರಮವಾದದ್ದು ಪೌರುಷವು ನಿರರ್ಥಕ ಎನ್ನುವುದು ನನ್ನ ಅಭಿಪ್ರಾಯ. ಪಾಂಡವರು ಇನ್ನೂ ಜೀವದಿಂದಿದ್ದಾರೆಂದರೆ ನಮ್ಮ ಪೌರುಷಕ್ಕೆ…

Continue reading

ಅರ್ಜುನವನವಾಸ

ಅರ್ಜುನವನವಾಸ ಇಂದ್ರಪ್ರಸ್ಥಕ್ಕೆ ನಾರದನ ಆಗಮನ ಧೃತರಾಷ್ಟ್ರನ ಅನುಜ್ಞೆಯಂತೆ ರಾಜ್ಯವನ್ನು ಹೊಂದಿದ ಆ ಪುರುಷವ್ಯಾಘ್ರ, ಪರಂತಪ ಪಾಂಡವರು ಕೃಷ್ಣೆಯೊಡನೆ ರಮಿಸಿದರು. ರಾಜ್ಯವನ್ನು ಪಡೆದ ಮಹಾತೇಜಸ್ವಿ ಸತ್ಯಸಂಧ ಯುಧಿಷ್ಠಿರನು ಭ್ರಾತೃಗಳೊಡನೆ ಪೃಥ್ವಿಯನ್ನು ಧರ್ಮದಿಂದ ಪಾಲಿಸತೊಡಗಿದನು. ಅರಿಗಳನ್ನು ಗೆದ್ದು ಮಹಾಪ್ರಾಜ್ಞ ಸತ್ಯಧರ್ಮಪರಾಯಣ ಪಾಂಡುನಂದನನು ಪರಮ ಸಂತಸವನ್ನು ಹೊಂದಿ ಬಾಳುತ್ತಿದ್ದನು. ಪುರುಷರ್ಷಭರು ಬೆಲೆಬಾಳುವ ರಾಜಾಸನಗಳಲ್ಲಿ ಕುಳಿತು ಸರ್ವ ಪೌರಕಾರ್ಯಗಳನ್ನೂ ಮಾಡುತ್ತಿದ್ದರು. ಒಮ್ಮೆ ಸರ್ವ ಮಹಾತ್ಮರೂ ಕುಳಿತಿರುವಾಗ ಅಲ್ಲಿಗೆ ದೇವರ್ಷಿ ನಾರದನು ಬಂದನು. ಯುಧಿಷ್ಠಿರನು ಅವನಿಗೆ ತನ್ನದೇ…

Continue reading

ಖಾಂಡವದಹನ

ಖಾಂಡವದಹನ ಬ್ರಾಹ್ಮಣ ರೂಪಿ ಅನಲನ ಆಗಮನ ರಾಜ ಧೃತರಾಷ್ಟ್ರ ಮತ್ತು ಶಾಂತನುವಿನ ಶಾಸನದಂತೆ ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಪಾಂಡವರು ಅನ್ಯ ನರಾಧಿಪರನ್ನು ಸದೆಬಡಿದರು. ಧರ್ಮರಾಜನ ಆಶ್ರಯದಲ್ಲಿ ಸರ್ವ ಜನರೂ ಪುಣ್ಯಲಕ್ಷಣ ಕರ್ಮಗಳ ದೇಹಗಳೊಳಗಿರುವ ಆತ್ಮಗಳಂತೆ ಸುಖವಾಗಿ ವಾಸಿಸುತ್ತಿದ್ದರು. ಭರತರ್ಷಭರು ಧರ್ಮ, ಅರ್ಥ, ಕಾಮ ಈ ಮೂರು ಬಂಧುಗಳನ್ನೂ ಆತ್ಮಸಮಾನ ಬಂಧುಗಳೆಂದು ತಿಳಿದು ಸಮವಾಗಿ ಬೆಳೆಸಿದರು. ಆ ಪಾರ್ಥಿವನು ಭೂಮಿಯ ಮೇಲೆ ಸಮ ಭಾಗಗಳಲ್ಲಿ ದೇಹ ತಳೆದ ಧರ್ಮ, ಅರ್ಥ, ಕಾಮಗಳಿಗೆ ನಾಲ್ಕನೆಯವನಂತೆ…

Continue reading

ಸಭಾಕ್ರಿಯ

ಸಭಾಕ್ರಿಯ ಮಯನಿಂದ ಸಭಾಭವನ ನಿರ್ಮಾಣ ಕಾರ್ಯಾರಂಭ ನಂತರ ಮಯನು ಅಂಜಲಿಬದ್ಧನಾಗಿ ಶ್ಲಾಘನೀಯ ಮಾತುಗಳಿಂದ ಪುನಃ ಪುನಃ ಪೂಜಿಸುತ್ತಾ ವಾಸುದೇವನ ಸನ್ನಿಧಿಯಲ್ಲಿ ಪಾರ್ಥನನ್ನು ಉದ್ದೇಶಿಸಿ ಹೇಳಿದನು: “ಕುಂತಿಪುತ್ರ! ಸಂಕೃದ್ಧ ಕೃಷ್ಣ ಮತ್ತು ಧಗಿಸಲು ಸಿದ್ಧ ಪಾವಕನಿಂದ ನನ್ನನ್ನು ರಕ್ಷಿಸಿದ್ದೀಯೆ. ನಿನಗಾಗಿ ನಾನು ಏನು ಮಾಡಲಿ? ಹೇಳು.” ಅರ್ಜುನನು ಹೇಳಿದನು: “ನೀನು ಸರ್ವವನ್ನೂ ಮಾಡಿದ್ದೀಯೆ! ಮಂಗಳವಾಗಲಿ! ಇನ್ನು ನೀನು ಹೋಗಬಹುದು. ನಮ್ಮ ಮೇಲೆ ನಿನ್ನ ಪ್ರೀತಿ ಯಾವಾಗಲೂ ಇರಲಿ. ನಿನ್ನ ಮೇಲೆಯೂ ನಮ್ಮ…

Continue reading

ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ; ಜರಾಸಂಧವಧೆ

ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ; ಜರಾಸಂಧವಧೆ ನಾರದ ಋಷಿಯ ಮಾತನ್ನು ಕೇಳಿ ಯುಧಿಷ್ಠಿರನು ನಿಟ್ಟುಸಿರೆಳೆದು, ರಾಜಸೂಯವನ್ನು ಹೇಗೆ ನೆರವೇರಿಸಬಹುದು ಎಂದು ಚಿಂತಿಸಿದನು ಮತ್ತು ಯಾವುದೇ ರೀತಿಯ ಸಾಂತ್ವನವನ್ನು ಪಡೆಯಲಿಲ್ಲ. ಮಹಾತ್ಮ ರಾಜರ್ಷಿಗಳ ಮಹಿಮೆಗಳನ್ನು ಕೇಳಿ ಮತ್ತು ಈ ಯಾಗಕರ್ಮದಿಂದ ಅವರಿಗೆ ಪುಣ್ಯಲೋಕ ಪ್ರಾಪ್ತಿಯಾದುದನ್ನು ನೋಡಿ, ಅದರಲ್ಲೂ ವಿಶೇಷವಾಗಿ ರಾಜರ್ಷಿ ಹರಿಶ್ಚಂದ್ರನು ಯಜಿಸಿದ ರಾಜಸೂಯ ಯಜ್ಞವನ್ನು ಕೈಗೊಳ್ಳಲು ಬಯಸಿದನು. ನಂತರ ಯುಧಿಷ್ಠಿರನು ಸಭಾಸದರೆಲ್ಲರನ್ನೂ ಅರ್ಚಿಸಿ, ತಿರುಗಿ ಅವರೆಲ್ಲರಿಂದ ಗೌರವವಿಸಲ್ಪಟ್ಟು, ಯಜ್ಞದ ಕುರಿತು…

Continue reading

ಪಾಂಡವ ದಿಗ್ವಿಜಯ

ಪಾಂಡವ ದಿಗ್ವಿಜಯ ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಮತ್ತು ಧ್ವಜಗಳನ್ನು ಪಡೆದ ಮಹೇಷುಧಿ ಪಾರ್ಥನು ಸಭೆಯಲ್ಲಿ ಯುಧಿಷ್ಠಿರನಿಗೆ ಹೇಳಿದನು:  “ರಾಜನ್! ಬಯಸಿದರೂ ಪಡೆಯಲು ದುಷ್ಕರವಾದ ಧನಸ್ಸು, ಅಸ್ತ್ರ, ಬಾಣ, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಗಳಿಸಿದ್ದೇನೆ. ಈಗ ನಮ್ಮ ಕೋಶವನ್ನು ವೃದ್ಧಿಗೊಳಿಸುವ ಕೃತ್ಯವನ್ನು ಮಾಡಬೇಕೆಂದು ನನ್ನ ಅಭಿಪ್ರಾಯ. ಎಲ್ಲ ರಾಜರುಗಳಿಂದ ಕರ-ಕಪ್ಪಗಳನ್ನು ತರುತ್ತೇನೆ. ಶುಭ ತಿಥಿ, ಮುಹೂರ್ತ ಮತ್ತು ನಕ್ಷತ್ರದಲ್ಲಿ ವಿಜಯಕ್ಕಾಗಿ ಧನರಾಜನಿಂದ ರಕ್ಷಿತ…

Continue reading

ರಾಜಸೂಯ; ಶಿಶುಪಾಲ ವಧೆ

ರಾಜಸೂಯ; ಶಿಶುಪಾಲ ವಧೆ ರಾಜಸೂಯ ದೀಕ್ಷೆ ಧರ್ಮರಾಜನ ರಕ್ಷಣೆ, ಸತ್ಯಪರಿಪಾಲನೆ, ಮತ್ತು ಶತ್ರುಗಳ ಮರ್ದನದಿಂದ ಪ್ರಜೆಗಳು ಸ್ವಕರ್ಮನಿರತರಾಗಿದ್ದರು. ಆ ಬಲಶಾಲಿಗಳ ಒಳ್ಳೆಯ ದಾನ ಧರ್ಮಗಳಿಂದೊಡಗೂಡಿದ ಅನುಶಾಸನದಿಂದ ಸಕಾಲದಲ್ಲಿ ಸಾಕಷ್ಟು ಮಳೆಸುರಿದು, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದವು. ಗೋರಕ್ಷಣೆ, ಕೃಷಿ, ವಾಣಿಜ್ಯ ಎಲ್ಲ ಉದ್ದಿಮೆಗಳೂ ಅಭಿವೃದ್ಧಿ ಹೊಂದಿದವು. ವಿಶೇಷವಾಗಿ ಇವೆಲ್ಲವೂ ರಾಜಕರ್ಮ ಎಂದು ಜನರು ತಿಳಿದುಕೊಂಡರು. ದಸ್ಯುಗಳಿಂದಾಗಲೀ, ವಂಚಕರಿಂದಾಗಲೀ, ರಾಜವಲ್ಲಭರಿಂದಾಗಲೀ ರಾಜನ ಕುರಿತು ಕೆಟ್ಟ ಮಾತು ಬರುತ್ತಿರಲಿಲ್ಲ. ಬರಗಾಲವಾಗಲೀ, ಅತಿವೃಷ್ಠಿಯಾಗಲೀ, ವ್ಯಾಧಿಗಳಾಗಲೀ,…

Continue reading