ಪರೀಕ್ಷಿತ

ಪರೀಕ್ಷಿತ ಪರೀಕ್ಷಿತನು ಪಾಂಡವ ಅರ್ಜುನನ ಮಗ ಅಭಿಮನ್ಯುವಿಗೆ ಉತ್ತರೆಯಲ್ಲಿ ಹುಟ್ಟಿದ ಮಗನು.  ಪಾಂಡವರು ಅಶ್ವಮೇಧ ಯಜ್ಞಕ್ಕಾಗಿ ಮರುತ್ತನ ನಿಧಿಯನ್ನು ಪಡೆಯಲು ಹಿಮಾಲಯಕ್ಕೆ ಹೋಗಿದ್ದಾಗ ಮತ್ತು ಅಶ್ವಮೇಧಕ್ಕೆಂದು ಕೃಷ್ಣನು ಇತರ ವೃಷ್ಣಿವೀರರೊಂದಿಗೆ ಹಸ್ತಿನಾಪುರಕ್ಕೆ ಬಂದಿದ್ದಾಗ ಪರಿಕ್ಷಿತನ ಜನ್ಮವಾಯಿತು. ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು. ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು. ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ…

Continue reading

ಪಾಂಡು

ಪಾಂಡು ಪಾಂಡುವು ವಿಚಿತ್ರವೀರ್ಯನ ಪತ್ನಿ ಅಂಬಾಲಿಕೆಯಲ್ಲಿ ವ್ಯಾಸನಿಂದ ಜನಿಸಿದನು. ಇವನ ಪತ್ನಿಯರು ಕುಂತಿ ಮತ್ತು ಮಾದ್ರಿ. ಋಷಿಯ ಶಾಪದಿಂದ ಇವನಿಗೆ ಮಕ್ಕಳಾಗದೇ ಇರಲು ಇವನು ಕುಂತಿಯಲ್ಲಿ ಧರ್ಮ, ವಾಯು, ಮತ್ತು ಇಂದ್ರರಿಂದ ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರೆಂಬ ಮೂರು ಮಕ್ಕಳನ್ನೂ ಮಾದ್ರಿಯಲ್ಲಿ ಅಶ್ವಿನೀ ದೇವತೆಗಳಿಂದ ನಕುಲ-ಸಹದೇವರೆಂಬ ಇಬ್ಬರು ಮಕ್ಕಳನ್ನೂ ಪಡೆದನು. ಮಕ್ಕಳು ಚಿಕ್ಕವರಾಗಿರುವಾಗಲೇ ಪಾಂಡುವು ಮರಣ ಹೊಂದಿದನು.

Continue reading

ಭಾನುಮಂತ

ಭಾನುಮಂತ ಕಲಿಂಗ ದೇಶದ ರಾಜಕುಮಾರ. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫0). ಆ ಯುದ್ಧದ ವರ್ಣನೆಯು ಈ ರೀತಿಯಿದೆ: ಭಾನುಮಂತಮಭಿಪ್ರೇಕ್ಷ್ಯ ಪ್ರಾದ್ರವತ್ಪುರುಷರ್ಷಭಃ|| ಭಾನುಮಾಂಸ್ತು ತತೋ ಭೀಮಂ ಶರವರ್ಷೇಣ ಚಾದಯನ್| ನನಾದ ಬಲವನ್ನಾದಂ ನಾದಯಾನೋ ನಭಸ್ತಲಂ|| ನ ತಂ ಸ ಮಮೃಷೇ ಭೀಮಃ ಸಿಂಹನಾದಂ ಮಹಾರಣೇ| ತತಃ ಸ್ವರೇಣ ಮಹತಾ ವಿನನಾದ ಮಹಾಸ್ವನಂ|| ತೇನ ಶಬ್ದೇನ ವಿತ್ರಸ್ತಾ ಕಲಿಂಗಾನಾಂ ವರೂಥಿನೀ| ನ ಭೀಮಂ ಸಮರೇ…

Continue reading

ಭೀಷ್ಮ

ಭೀಷ್ಮ ಕುರುರಾಜ ಶಂತನುವಿಗೆ ಗಂಗೆಯಲ್ಲಿ ಹುಟ್ಟಿದ ಭೀಷ್ಮನು ಮಹಾಭಾರತ ಕಥೆಯ ಮುಖ್ಯ ಪಾತ್ರಗಳಲ್ಲಿ ಓರ್ವನು. ಇವನ ಹೆಸರು ಮೊದಲು ದೇವವ್ರತನಂದಾಗಿತ್ತು. ನಂತರ ಸತ್ಯವತಿಯನ್ನು ತನ್ನ ತಂದೆಗಾಗಿ ತರಲು ತಾನು ಮಾಡಿದ ಘೋರ ಶಪಥದಿಂದಾಗಿ ಅವನು ಭೀಷ್ಮನೆಂದಾದನು.

Continue reading

ಲೋಮಹರ್ಷಣ

ಲೋಮಹರ್ಷಣ ಲೋಮಹರ್ಷಣನು ಮಹರ್ಷಿ ವ್ಯಾಸನ ಶಿಷ್ಯರಲ್ಲಿ ಒಬ್ಬನು. ಸೂತನಾದ ಇವನು ವ್ಯಾಸನಿಂದ ಅನೇಕ ಪುರಾಣಗಳನ್ನು ಉಪದೇಶವಾಗಿ ಪಡೆದುಕೊಂಡನು. ಅವನು ಪುರಾಣಗಳನ್ನು ಹೇಳುತ್ತಿದ್ದಾಗ ಕೇಳುವವರ ಮೈನವಿರೇಳುತ್ತಿದ್ದುದರಿಂದ ಅವನಿಗೆ ಲೋಮಹರ್ಷಣನೆಂಬ ಹೆಸರು ಬಂದಿತು. ಲೋಮಹರ್ಷಣನ ಮಗ ಉಗ್ರಶ್ರವನು ವ್ಯಾಸನ ಮಹಾಭಾರತ ಕಥೆಯನ್ನು ಶೌನಕಾದಿ ಮುನಿಗಳಿಗೆ ನೈಮಿಷಾರಣ್ಯದಲ್ಲಿ ಹೇಳಿದನು.

Continue reading

ವಿಚಿತ್ರವೀರ್ಯ

ವಿಚಿತ್ರವೀರ್ಯ ವಿಚಿತ್ರವೀರ್ಯನು ಕುರು ರಾಜ ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗನು. ಇವನ ಅಣ್ಣ ಚಿತ್ರಾಂಗದ. ಕಾಶೀರಾಜನ ಪುತ್ರಿಯರಾದ ಅಂಬಿಕಾ ಮತ್ತು ಅಂಬಾಲಿಕೆಯರನ್ನು ಮದುವೆಯಾದನು. ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಪಡೆಯದೆಯೇ ಯಕ್ಷ್ಮ ರೋಗದಿಂದ ಮೃತನಾದನು. ಧೃತರಾಷ್ಟ್ರ ಮತ್ತು ಪಾಂಡು ಇವರು ವಿಚಿತ್ರವೀರ್ಯನ ವಿಧವೆ ಪತ್ನಿಯರಲ್ಲಿ ವ್ಯಾಸನು ಹುಟ್ಟಿಸಿದ ಮಕ್ಕಳು.

Continue reading