ಲೋಮಹರ್ಷಣ

ಲೋಮಹರ್ಷಣ ಲೋಮಹರ್ಷಣನು ಮಹರ್ಷಿ ವ್ಯಾಸನ ಶಿಷ್ಯರಲ್ಲಿ ಒಬ್ಬನು. ಸೂತನಾದ ಇವನು ವ್ಯಾಸನಿಂದ ಅನೇಕ ಪುರಾಣಗಳನ್ನು ಉಪದೇಶವಾಗಿ ಪಡೆದುಕೊಂಡನು. ಅವನು ಪುರಾಣಗಳನ್ನು ಹೇಳುತ್ತಿದ್ದಾಗ ಕೇಳುವವರ ಮೈನವಿರೇಳುತ್ತಿದ್ದುದರಿಂದ ಅವನಿಗೆ ಲೋಮಹರ್ಷಣನೆಂಬ ಹೆಸರು ಬಂದಿತು. ಲೋಮಹರ್ಷಣನ ಮಗ ಉಗ್ರಶ್ರವನು ವ್ಯಾಸನ ಮಹಾಭಾರತ ಕಥೆಯನ್ನು ಶೌನಕಾದಿ ಮುನಿಗಳಿಗೆ ನೈಮಿಷಾರಣ್ಯದಲ್ಲಿ ಹೇಳಿದನು.

Continue reading