ಶಕ್ರದೇವ

ಶಕ್ರದೇವ

ಕಲಿಂಗ ದೇಶದ ರಾಜಕುಮಾರ. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫). ಆ ಯುದ್ಧದ ವರ್ಣನೆಯು ಈ ರೀತಿಯಿದೆ:

ಕಲಿಂಗಸ್ತು ಮಹೇಷ್ವಾಸಃ ಪುತ್ರಶ್ಚಾಸ್ಯ ಮಹಾರಥಃ|

ಶಕ್ರದೇವ ಇತಿ ಖ್ಯಾತೋ ಜಘ್ನತುಃ ಪಾಂಡವಂ ಶರೈಃ||

ತತೋ ಭೀಮೋ ಮಹಾಬಾಹುರ್ವಿಧುನ್ವನ್ರುಚಿರಂ ಧನುಃ|

ಯೋಧಯಾಮಾಸ ಕಾಲಿಂಗಾನ್ಸ್ವಬಾಹುಬಲಮಾಶ್ರಿತಃ||

ಶಕ್ರದೇವಸ್ತು ಸಮರೇ ವಿಸೃಜನ್ಸಾಯಕಾನ್ಬಹೂನ್|

ಅಶ್ವಾಂ ಜಘಾನ ಸಮರೇ ಭೀಮಸೇನಸ್ಯ ಸಾಯಕೈಃ|

ವವರ್ಷ ಶರವರ್ಷಾಣಿ ತಪಾಂತೇ ಜಲದೋ ಯಥಾ||

ಹತಾಶ್ವೇ ತು ರಥೇ ತಿಷ್ಠನ್ಭೀಮಸೇನೋ ಮಹಾಬಲಃ|

ಶಕ್ರದೇವಾಯ ಚಿಕ್ಷೇಪ ಸರ್ವಶೈಕ್ಯಾಯಸೀಂ ಗದಾಂ||

ಸ ತಯಾ ನಿಹತೋ ರಾಜನ್ಕಲಿಂಗಸ್ಯ ಸುತೋ ರಥಾತ್|

ಸಧ್ವಜಃ ಸಹ ಸೂತೇನ ಜಗಾಮ ಧರಣೀತಲಂ||

ಶಕ್ರದೇವನೆಂದು ಖ್ಯಾತನಾದ ಕಲಿಂಗನ ಮಗ ಮಹಾರಥ ಮಹೇಷ್ವಾಸನು ಪಾಂಡವನನ್ನು ಶರಗಳಿಂದ ಹೊಡೆದನು. ಆಗ ಮಹಾಬಾಹು ಭೀಮನು ಸುಂದರ ಧನುಸ್ಸನ್ನು ಠೇಂಕರಿಸಿ ಸ್ವಬಾಹುಬಲವನ್ನು ಆಶ್ರಯಿಸಿ ಕಲಿಂಗರೊಂದಿಗೆ ಯುದ್ಧಮಾಡಿದನು. ಶಕ್ರದೇವನು ಸಮರದಲ್ಲಿ ಅನೇಕ ಸಾಯಕಗಳನ್ನು ಬಿಟ್ಟು ಭೀಮಸೇನನ ಕುದುರೆಗಳನ್ನು ಕೊಂದನು ಮತ್ತು ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ಸಮರದಲ್ಲಿ ಸಾಯಕಗಳ ಶರವರ್ಷಗಳನ್ನು ಸುರಿಸಿದನು. ಕುದುರೆಗಳು ಸತ್ತರೂ ರಥದ ಮೇಲೆ ನಿಂತು ಮಹಾಬಲ ಭೀಮಸೇನನು ಲೋಹಮಯ ಗದೆಯನ್ನು ಶಕ್ತಿಯನ್ನೆಲ್ಲ ಉಪಯೋಗಿಸಿ ಶಕ್ರದೇವನ ಮೇಲೆ ಎಸೆದನು. ರಾಜನ್! ಕಲಿಂಗನ ಮಗನು ಅವನಿಂದ ಹತನಾಗಿ ಧ್ವಜ-ಸೂತರೊಂದಿಗೆ ರಥದಿಂದ ಧರಣೀತಲಕ್ಕೆ ಬಿದ್ದನು.

Comments are closed.