ಭೃಗು-ಭರದ್ವಾಜ ಸಂವಾದ

ಭೃಗು-ಭರದ್ವಾಜ ಸಂವಾದ ಭೃಗು ಮತ್ತು ಭರದ್ವಾಜರ ಸಂವಾದದಲ್ಲಿ ಜಗತ್ತಿನ ಉತ್ಪತ್ತಿ ಮತ್ತು ವಿಭಿನ್ನ ತತ್ತ್ವಗಳ ವರ್ಣನೆಯಿರುವ ಈ ಭೃಗು ಮತ್ತು ಭರದ್ವಾಜರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 175-186ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಸಂಪೂರ್ಣ ಸ್ಥಾವರ-ಜಂಗಮ ಜಗತ್ತಿನ ಉತ್ಪತ್ತಿ ಯಾವುದರಿಂದ ಆಯಿತು? ಪ್ರಲಯಕಾಲದಲ್ಲಿ ಇದು ಯಾವುದರಲ್ಲಿ ಲೀನವಾಗುತ್ತದೆ? ಇದನ್ನು ನನಗೆ ಹೇಳು. ಸಮುದ್ರ, ಗಗನ, ಪರ್ವತ, ಮೇಘ,…

Continue reading

ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ ಸಾಂಖ್ಯಯೋಗವನ್ನು ವಿಸ್ತರಿಸುವ ಈ ಯಾಜ್ಞವಲ್ಕ್ಯ-ಜನಕರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ ೨೯೮-೩೦೭ ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಯಾವುದು ಧರ್ಮಾಧರ್ಮಗಳಿಂದಲೂ, ಸರ್ವ ಸಂಶಯಗಳಿಂದಲೂ, ಜನ್ಮ-ಮೃತ್ಯುಗಳಿಂದಲೂ, ಪುಣ್ಯ-ಪಾಪಗಳಿಂದಲೂ ವಿಮುಕ್ತವಾಗಿರುವುದೋ ಮತ್ತು ಯಾವುದು ನಿತ್ಯವೂ, ಅಭಯವೂ, ಮಂಗಳವೂ, ಅಕ್ಷರವೂ, ಅವ್ಯಯವೂ, ಪವಿತ್ರವೂ, ಕ್ಲೇಶರಹಿತವೂ ಆಗಿರುವುದೋ ಆ ಪರಮತತ್ತ್ವದ ಕುರಿತು ನನಗೆ ಹೇಳಬೇಕು.” ಭೀಷ್ಮನು ಹೇಳಿದನು: “ಭಾರತ!…

Continue reading

ಗೌತಮೀ-ಲುಬ್ಧಕ-ವ್ಯಾಲ-ಮೃತ್ಯು-ಕಾಲ ಸಂವಾದ

ಗೌತಮೀ-ಲುಬ್ಧಕ-ವ್ಯಾಲ-ಮೃತ್ಯು-ಕಾಲ ಸಂವಾದ ಕರ್ಮವೇ ಮನುಷ್ಯನ ಮೃತ್ಯುವಿಗೆ ಕಾರಣವೆಂದು ಸೂಚಿಸುವ ಈ ಸಂವಾದವು ಅನುಶಾಸನ ಪರ್ವದ ದಾನಧರ್ಮದ ಪರ್ವದ ಅಧ್ಯಾಯ 1ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಸೂಕ್ಷ್ಮವಾದ ಶಾಂತಿಯ ಕುರಿತು ಬಹುವಿಧಾಕಾರವಾಗಿ ಹೇಳಿದ್ದೀಯೆ. ಆದರೆ ಇದನ್ನು ಮಾಡಿಯೂ ನನ್ನ ಹೃದಯಕ್ಕೆ ಶಾಂತಿಯು ಇಲ್ಲವಾಗಿದೆ. ಅನಘ! ಇದರ ಸಲುವಾಗಿ ನೀನು ಬಹುವಿಧವಾಗಿ ಶಾಂತಿಯ ಕುರಿತು ಹೇಳಿರುವೆ. ಬಹುವಿಧಗಳಿಂದ ಶಾಂತಿಯನ್ನು ಪಡೆಯಬಹುದಾದರೂ ತಾನೇ ಮಾಡಿದ ಕರ್ಮಗಳಿಂದ…

Continue reading

ದೈವ-ಪುರುಷಕಾರ ಬಲಾಬಲ: ವಸಿಷ್ಠ-ಬ್ರಹ್ಮರ ಸಂವಾದ

ದೈವ-ಪುರುಷಕಾರ ಬಲಾಬಲ: ವಸಿಷ್ಠ-ಬ್ರಹ್ಮರ ಸಂವಾದ ದೈವ ಮತ್ತು ಮನುಷ್ಯ ಪ್ರಯತ್ನಗಳಲ್ಲಿ ಯಾವುದು ಶ್ರೇಷ್ಠ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ವಸಿಷ್ಠ-ಬ್ರಹ್ಮರ ಸಂವಾದವನ್ನು ಉದಾಹರಿಸಿ ಎರಡೂ ಪರಸ್ಪರ ಅವಲಂಬಿಸಿವೆ ಎನ್ನುತ್ತಾನೆ. ಇದು ಅನುಶಾನಸಪರ್ವದ ದಾನಧರ್ಮಪರ್ವದ ಅಧ್ಯಾಯ 6ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ದೈವಾನುಕೂಲ ಮತ್ತು ಪುರುಷಪ್ರಯತ್ನ ಇವೆರಡರಲ್ಲಿ ಯಾವುದು ಶ್ರೇಷ್ಠತರವಾದುದು?” ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದರ ಕುರಿತು ಪುರಾತನ ಇತಿಹಾಸವಾಗಿರುವ ವಸಿಷ್ಠ ಮತ್ತು ಬ್ರಹ್ಮರ ಸಂವಾದವನ್ನು…

Continue reading

ಕರ್ಮಫಲಿಕೋಪಾಖ್ಯಾನ

ಕರ್ಮಫಲಿಕೋಪಾಖ್ಯಾನ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭಕರ್ಮಗಳ ಫಲಗಳ ಕುರಿತು ಹೇಳಿದ ಈ ಸಂವಾದವು ಅನುಶಾಸನ ಪರ್ವದ ದಾನಧರ್ಮ ಪರ್ವದ ಅಧ್ಯಾಯ 7ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾತ್ಮರಲ್ಲಿ ಶ್ರೇಷ್ಠ! ಕೇಳುತ್ತಿರುವ ನನಗೆ ಶುಭ ಕರ್ಮಗಳ ಸಮಸ್ತ ಫಲಗಳ ಕುರಿತೂ ಹೇಳು.” ಭೀಷ್ಮನು ಹೇಳಿದನು: “ಯುಧಿಷ್ಠಿರ! ಮರಣಾನಂತರ ಬಹಳ ಕಾಲದಿಂದಲೂ ಅಪೇಕ್ಷಿಸುವ ಯಾವ ಗತಿಯು ದೊರೆಯುತ್ತದೆ ಎನ್ನುವುದು ಋಷಿಗಳಿಗೂ ರಹಸ್ಯವಾದುದು. ಅದನ್ನು ಕೇಳು. ಯಾವ ಯಾವ ಶರೀರದಿಂದ ಯಾವ…

Continue reading