ಬೃಹಸ್ಪತಿ-ಕೌಸಲ್ಯ ಸಂವಾದ

ಬೃಹಸ್ಪತಿ-ಕೌಸಲ್ಯ ಸಂವಾದ ವಸುಮನ ಮತ್ತು ಬೃಹಸ್ಪತಿಯರ ಸಂವಾದದಲ್ಲಿ ರಾಜನಿಲ್ಲದಿದ್ದರೆ ಪ್ರಜೆಗಳಿಗಾಗುವ ಹಾನಿ ಮತ್ತು ರಾಜನಿದ್ದರೆ ಆಗುವ ಲಾಭಗಳನ್ನು ವರ್ಣಿಸುವ ವಸುಮನ ಮತ್ತು ಬೃಹಸ್ಪತಿಯರ ಸಂವಾದವನ್ನೊಳಗೊಂಡ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 68ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಮನುಷ್ಯರಿಗೆ ಅಧಿಪತಿಯಾದ ರಾಜನನ್ನು ವಿಪ್ರರು ದೇವನೆಂದು ಏಕೆ ಹೇಳುತ್ತಾರೆ? ಅದನ್ನು ನನಗೆ ಹೇಳು.” ಭೀಷ್ಮನು ಹೇಳಿದನು: “ಭಾರತ! ನೀನು ಕೇಳಿದುದಕ್ಕೆ ಸಂಬಂಧಿಸಿದಂತೆ ಬೃಹಸ್ಪತಿ-ವಸುಮನರ ಈ ಪುರಾತನ…

Continue reading

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 4

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 4 ದಂಡನೀತಿಯೊಂದಿಗೆ ರಾಜನ ಪ್ರಧಾನ ಕರ್ತವ್ಯಗಳು ಮತ್ತು ಲಕ್ಷಣಗಳನ್ನು ವರ್ಣಿಸುವ ಈ ಭೀಷ್ಮ-ಯುಧಿಷ್ಠಿರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 69-72ರಲ್ಲಿ ಬರುತ್ತದೆ. *** ರಾಜನ ಪ್ರಧಾನ ಕರ್ತವ್ಯಗಳು ಮತ್ತು ದಂಡನೀತಿಯ ಕಾರಣದಿಂದ ಯುಗಗಳ ನಿರ್ಮಾಣವಾದುದರ ವರ್ಣನೆ.   ಯುಧಿಷ್ಠಿರನು ಹೇಳಿದನು: “ರಾಜನ ಇನ್ನು ಉಳಿದ ಕಾರ್ಯಗಳ್ಯಾವುವು? ವಿಶೇಷವಾಗಿ ಅವನು ಜನಪದವನ್ನು ಹೇಗೆ ರಕ್ಷಿಸಬೇಕು? ಶತ್ರುಗಳಿಂದ ಹೇಗೆ ರಕ್ಷಣೆಯನ್ನು ಪಡೆಯಬೇಕು? ಭಾರತ! ಚಾರರನ್ನು ಹೇಗೆ ನಿಯೋಜಿಸಬೇಕು?…

Continue reading

ಪುರೂರವ-ಪವನಸಂವಾದ

ಪುರೂರವ-ಪವನಸಂವಾದ ಪುರೂರವ ಮತ್ತು ಪವನರ ಸಂವಾದದ ಮೂಲಕ ಭೀಷ್ಮನು ಯುಧಿಷ್ಠಿರನಿಗೆ ರಾಜಪುರೋಹಿತನ ಮಹತ್ವವನ್ನು ವಿವರಿಸಿದುದು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 73ರಲ್ಲಿ ಬರುತ್ತದೆ. *** ಭೀಷ್ಮನು ಹೇಳಿದನು: “ರಾಜನ್! ರಾಜನ ಸತ್ಕರ್ಮಗಳನ್ನು ರಕ್ಷಿಸುವುದು ಮತ್ತು ಅವನ ದುಷ್ಕರ್ಮಗಳನ್ನು ಕ್ಷೀಣಿಸುವುದೇ ರಾಜಪುರೋಹಿತನ ಕರ್ತವ್ಯ. ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಇಲನ ಮಗ ಪುರೂರವ ಮತ್ತು ವಾಯುವಿನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ. *** ಐಲನು ಹೇಳಿದನು: “ಬ್ರಾಹ್ಮಣರು ಎಲ್ಲಿಂದ ಹುಟ್ಟಿದರು? ಉಳಿದ ಮೂರು…

Continue reading

ಐಲ-ಕಶ್ಯಪಸಂವಾದ

ಐಲ-ಕಶ್ಯಪ ಸಂವಾದ ಬ್ರಾಹ್ಮಣ-ಕ್ಷತ್ರಿಯರ ಸಂಬಂಧದ ಕುರಿತಾದ ಈ ಐಲ-ಕಶ್ಯಪ ಸಂವಾದವನ್ನು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 74ರಲ್ಲಿ ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ. *** ಭೀಷ್ಮನು ಹೇಳಿದನು: “ಧರ್ಮ-ಅರ್ಥ ಇವೆರಡರ ಗತಿಯೂ ಅತ್ಯಂತ ಗಹನವಾದುದೆಂದು ತಿಳಿದು ರಾಜನಾದವನು ಬಹುಶ್ರುತ ವಿದ್ವಾಂಸನನ್ನು ರಾಜಪುರೋಹಿತನನ್ನಾಗಿ ಮಾಡಿಕೊಳ್ಳಬೇಕು. ರಾಜನ್! ರಾಜಪುರೋಹಿತನು ಧರ್ಮಾತ್ಮನೂ, ಧರ್ಮವಿದನೂ ಆಗಿರುವ ಮತ್ತು ರಾಜನೂ ಅದೇ ಗುಣಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಎಲ್ಲರೂ ಕುಶಲವಾಗಿಯೇ ಇರುತ್ತಾರೆ. ರಾಜ ಮತ್ತು ಪುರೋಹಿತ ಇಬ್ಬರೂ ಧರ್ಮನಿಷ್ಠರಾಗಿದ್ದುಕೊಂಡು ಯೋಗ-ಕ್ಷೇಮಗಳಲ್ಲಿ ಶ್ರದ್ಧಾವಂತರಾಗಿದ್ದರೆ…

Continue reading

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 5

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 5 ರಾಜನ ಕರ್ತ್ಯವ್ಯಗಳು ಮತ್ತು ರಾಜ್ಯದ ಮಹಿಮೆಯನ್ನು ವರ್ಣಿಸುವ ಈ ಭೀಷ್ಮ-ಯುಧಿಷ್ಠಿರರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 77-78ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹೀಪಾಲನು ಹೇಗೆ ನಡೆದುಕೊಂಡರೆ ಪ್ರಜೆಗಳ ವೃದ್ಧಿಯಾಗುತ್ತದೆ? ಮತ್ತು ಪುಣ್ಯ ಲೋಕಗಳನ್ನು ಜಯಿಸಬಲ್ಲ? ಇದನ್ನು ನನಗೆ ಹೇಳು.” ಭೀಷ್ಮನು ಹೇಳಿದನು: “ಭಾರತ! ರಾಜನಾದವನು ದಾನಶೀಲನೂ ಯಜ್ಞಶೀಲನೂ ಆಗಿರಬೇಕು. ಉಪವಾಸ ಮತ್ತು ತಪಃಶೀಲನಾಗಿ ಪ್ರಜೆಗಳ ಪಾಲನೆಯಲ್ಲಿಯೇ ನಿರತನಾಗಿರಬೇಕು. ಸರ್ವ ಪ್ರಜೆಗಳನ್ನು…

Continue reading

ಕೈಕೇಯ-ರಾಕ್ಷಸ ಸಂವಾದ

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 5 ಯಾರ ವಿತ್ತದ ಮೇಲೆ ರಾಜನ ಅಧಿಕಾರವಿರುತ್ತದೆ ಎನ್ನುವ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಹೇಳಿದ ಕೇಕಯರಾಜ-ರಾಕ್ಷಸ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 78ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಯಾರ ವಿತ್ತದ ಮೇಲೆ ರಾಜನ ಅಧಿಕಾರವಿರುತ್ತದೆ? ರಾಜನು ಯಾವ ವೃತ್ತಿಯನ್ನು ಅವಲಂಬಿಸಿರಬೇಕು? ಅದನ್ನು ನನಗೆ ಹೇಳು.” ಭೀಷ್ಮನು ಹೇಳಿದನು: “ಬ್ರಾಹ್ಮಣನಲ್ಲದವರೆಲ್ಲರ ವಿತ್ತದ ಸ್ವಾಮಿಯು ರಾಜನೆಂದು ವೇದಸಿದ್ಧಾಂತ. ತಮ್ಮ ಕರ್ಮಗಳಲ್ಲಿ ತೊಡಗಿರದೇ ಇದ್ದ…

Continue reading

ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ

ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ ಶೋಕಾಕುಲ ಚಿತ್ತದ ಶಾಂತಿಗಾಗಿ ರಾಜಾ ಸೇನಜಿತ್ ಮತ್ತು ಓರ್ವ ಬ್ರಾಹ್ಮಣನ ಸಂವಾದದಲ್ಲಿ ಉದಾಹರಿಸಿದ ಈ ಪಿಂಗಲಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 168ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಪಾರ್ಥಿವ! ಇದೂವರೆಗೆ ನೀನು ರಾಜಧರ್ಮವನ್ನು ಆಶ್ರಯಿಸಿದವರ ಶುಭ ಧರ್ಮಗಳ ಕುರಿತು ಹೇಳಿದೆ. ಈಗ ಆಶ್ರಮಿಗಳ ಶ್ರೇಷ್ಠ ಧರ್ಮದ ಕುರಿತು ಹೇಳಬೇಕು.” ಭೀಷ್ಮನು ಹೇಳಿದನು: “ಸರ್ವತ್ರ…

Continue reading

ಪಿತಾಪುತ್ರಸಂವಾದ

ಪಿತಾಪುತ್ರಸಂವಾದ ಕಲ್ಯಾಣವನ್ನು ಬಯಸುವವನು ಏನು ಮಾಡಬೇಕು ಎನ್ನುವುದರ ಕುರಿತು ಮಗನು ತಂದೆಗಿತ್ತ ಈ ಉಪದೇಶವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 169ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವಭೂತಗಳನ್ನೂ ಕ್ಷಯಗೊಳಿಸುವ ಈ ಕಾಲವು ಕಳೆಯುತ್ತಲೇ ಇರುತ್ತದೆ. ಹೀಗಿರುವಾಗ ಮನುಷ್ಯನು ಶ್ರೇಯಸ್ಸಿಗಾಗಿ ಏನನ್ನು ಮಾಡಬಹುದು? ಅದನ್ನು ನನಗೆ ಹೇಳು.” ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಈ ಒಂದು ಪುರಾತನ ಇತಿಹಾಸವಾದ ತಂದೆ-ಮಗನ…

Continue reading

ಶಮ್ಯಾಕ ಗೀತೆ

ಶಮ್ಯಾಕ ಗೀತೆ ತ್ಯಾಗದ ಮಹತ್ವವನ್ನು ತಿಳಿಸುವ ಈ ಶಮ್ಯಾಕಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 170ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನಿಕ ಮತ್ತು ನಿರ್ಧನಿಕ ಇಬ್ಬರೂ ಸ್ವತಂತ್ರತಾಪೂರ್ವಕ ವ್ಯವಹರಿಸಿದರೆ ಅವರಿಗೆ ಯಾವ ರೂಪದಲ್ಲಿ ಮತ್ತು ಹೇಗೆ ಸುಖದುಃಖಗಳುಂಟಾಗುತ್ತವೆ?” ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶಾಂತಿಯನ್ನು ಪಡೆದುಕೊಂಡು ವಿಮುಕ್ತನಾದ ಶಮ್ಯಾಕನ ಗೀತೆಯನ್ನು ಉದಾಹರಿಸುತ್ತಾರೆ. *** ಹಿಂದೊಮ್ಮೆ ಕುಪತ್ನಿ ಮತ್ತು…

Continue reading

ಮಂಕಿಗೀತೆ

ಮಂಕಿಗೀತೆ ಧನಾದಿಗಳ ತೃಷ್ಣೆಯೇ ದುಃಖ ಮತ್ತು ತೃಷ್ಣತ್ಯಾಗವೇ ಸುಖ ಎಂದು ಪ್ರತಿಪಾದಿಸುವ ಈ ಮಂಕಿಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 171ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಧನದಾಹಿಯು ವಿವಿಧ ಉದ್ಯೋಗಗಳಿಂದಲೂ ಬಯಸಿದಷ್ಟು ಧನವನ್ನು ಪಡೆಯಲಾಗದಿದ್ದರೆ ಏನು ಮಾಡುವುದರಿಂದ ಅವನಿಗೆ ಸುಖವುಂಟಾಗುತ್ತದೆ?” ಭೀಷ್ಮನು ಹೇಳಿದನು: “ಭಾರತ! ಸರ್ವರಲ್ಲಿಯೂ ಸಮಭಾವ, ಅನಾಯಾಸ, ಸತ್ಯವಾಕ್ಯ, ವೈರಾಗ್ಯ ಮತ್ತು ಕಾಮ್ಯಕರ್ಮಗಳಲ್ಲಿ ನಿರಾಸಕ್ತಿ – ಇವುಗಳಿರುವ ನರನೇ ಸುಖಿಯು.…

Continue reading