ಜನಕೋಽಪಖ್ಯಾನ

ಜನಕೋಽಪಖ್ಯಾನ ಅರ್ಜುನನು ರಾಜಾ ಜನಕ ಮತ್ತು ಅವನ ರಾಣಿಯ ದೃಷ್ಟಾಂತವನ್ನಿತ್ತು ಯುಧಿಷ್ಠಿರನು ಸಂನ್ಯಾಸಗ್ರಹಣ ಮಾಡುವುದನ್ನು ತಡೆಯುವ ಈ ಜನಕೋಪಖ್ಯಾನವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 18ರಲ್ಲಿ ಬರುತ್ತದೆ. *** ಹಿಂದೆ ವಿದೇಹರಾಜನು ಐಶ್ವರ್ಯ, ಮಕ್ಕಳು, ಮಿತ್ರರು, ವಿವಿಧ ರತ್ನಗಳು, ಮತ್ತು ಪಾವನ ಗೃಹಸ್ಥಾಶ್ರಮವನ್ನು ತ್ಯಜಿಸಿ ಜನಕನು ತಲೆಬೋಳಿಸಿಕೊಂಡು ಭಿಕ್ಷುವಾಗಲು ನಿಶ್ಚಯಿಸಿದನು. ಭಿಕ್ಷಾವೃತ್ತಿಯನ್ನು ಅವಲಂಬಿಸಿ ಒಂದು ಮುಷ್ಟಿ ಧಾನ್ಯದ ಹಿಟ್ಟನ್ನೇ ತಿನ್ನುತ್ತಿದ್ದ, ನಿರೀಹನಾಗಿದ್ದ, ಮತ್ಸರವನ್ನು ತೊರೆದಿದ್ದ ಅವನನ್ನು ಅವನ ಪ್ರಿಯ ಭಾರ್ಯೆಯು ನೋಡಿದಳು.…

Continue reading

ಅಶ್ಮ-ಜನಕ ಸಂವಾದ

ಅಶ್ಮ-ಜನಕ ಸಂವಾದ ಋಷಿ ಅಶ್ಮ ಮತ್ತು ಜನಕನ ಸಂವಾದದ ಮೂಲಕ ಪ್ರಾರಬ್ಧದ ಪ್ರಬಲತೆಯನ್ನು ವರ್ಣಿಸುತ್ತಾ ವ್ಯಾಸನು ಯುಧಿಷ್ಠಿರನಿಗೆ ತಿಳಿಯ ಹೇಳಿದ ಈ ವಿಷಯವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 28ರಲ್ಲಿ ಬರುತ್ತದೆ. *** ದುಃಖ-ಶೋಕಗಳಲ್ಲಿ ಮುಳುಗಿಹೋಗಿದ್ದ ವಿದೇಹ ದೇಶದ ನೃಪ ಜನಕನು ಪ್ರಾಜ್ಞ ಬ್ರಾಹ್ಮಣ ಅಶ್ಮನನ್ನು ಪ್ರಶ್ನಿಸಿದನು: “ಕುಟುಂಬದ ಮತ್ತು ಸಂಪತ್ತಿನ ವೃದ್ಧಿ-ವಿನಾಶಗಳುಂಟಾದಾಗ ಕಲ್ಯಾಣವುಂಟಾಗಲು ಮನುಷ್ಯನು ಏನು ಮಾಡಬೇಕು?” ಅಶ್ಮನು ಹೇಳಿದನು: “ಜನನದ ನಂತರ ಸತತವಾಗಿ ದುಃಖ-ಸುಖಗಳು ಮನುಷ್ಯನನ್ನು ಅನುಸರಿಸಿ ಬರುತ್ತಲೇ…

Continue reading

ಪ್ರಾಯಶ್ಚಿತ್ತಗಳು

ಪ್ರಾಯಶ್ಚಿತ್ತಗಳು ಯಾವ ಕರ್ಮಗಳನ್ನು ಮಾಡಿದರೆ ಅಥವಾ ಮಾಡದೇ ಇದ್ದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎನ್ನುವುದರ ಕುರಿತಾದ ಯುಧಿಷ್ಠಿರನ ಪ್ರಶ್ನೆಗೆ ವ್ಯಾಸನು ನೀಡಿದ ಈ ಪ್ರಾಯಶ್ಚಿತ್ತೋಪಾಖ್ಯಾನವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 35-36ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಯಾವಕರ್ಮಗಳನ್ನು ಮಾಡಿ ಮನುಷ್ಯನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಯಾವುದನ್ನು ಮಾಡುವುದರಿಂದ ಅವನಿಗೆ ಪಾಪದ ಬಿಡುಗಡೆಯಾಗುತ್ತದೆ? ಅದನ್ನು ನನಗೆ ಹೇಳು!” ವ್ಯಾಸನು ಹೇಳಿದನು: “ವಿಹಿತ ಕರ್ಮಗಳನ್ನು ಮಾಡದಿರುವವನೂ, ಪ್ರತಿಷಿದ್ಧ ಕರ್ಮಗಳನ್ನು ಮಾಡುವವನೂ, ಸುಳ್ಳಾಗಿ ನಡೆದುಕೊಳ್ಳುವವನೂ ಪ್ರಾಯಶ್ಚಿತ್ತವನ್ನು…

Continue reading

ಭಕ್ಷ್ಯ-ಅಭಕ್ಷ್ಯಗಳ ಮತ್ತು ದಾನಕ್ಕೆ ಪಾತ್ರ-ಅಪಾತ್ರರ ಕುರಿತು ಮನು ಮತ್ತು ಸಿದ್ಧರ ಸಂವಾದ

ಭಕ್ಷ್ಯ-ಅಭಕ್ಷ್ಯಗಳ ಮತ್ತು ದಾನಕ್ಕೆ ಪಾತ್ರ-ಅಪಾತ್ರರ ಕುರಿತು ಮನು ಮತ್ತು ಸಿದ್ಧರ ಸಂವಾದ ಸ್ವಾಯಂಭುವ ಮನುವುಹೇಳಿದ ಧರ್ಮದ ಸ್ವರೂಪ, ಪಾಪದ ಶುದ್ಧಿಗಾಗಿ ಪ್ರಾಯಶ್ಚಿತ್ತ, ಅಭಕ್ಷ್ಯ ವಸ್ತುಗಳ ವರ್ಣನೆ ಮತ್ತು ದಾನಕ್ಕೆ ಅಧಿಕಾರಿ-ಅನಧಿಕಾರಿಗಳನ್ನು ವಿವೇಚಿಸುವ ಈ ವ್ಯಾಸ-ಯುಧಿಷ್ಠಿರರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 37ರಲ್ಲಿ ಬರುತ್ತದೆ. *** ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಚಿಂತಿಸಿ ಆ ತಪೋಧನನನ್ನು ಪುನಃ ಪ್ರಶ್ನಿಸಿದನು: “ಪಿತಾಮಹ! ತಿನ್ನಬಹುದಾದುದು ಯಾವುದು? ತಿನ್ನಬಾರದವುಗಳು ಯಾವುವು? ಯಾವುದನ್ನು ದಾನಮಾಡಲು ಶ್ರೇಷ್ಠ? ದಾನಮಾಡಲು ಯಾರು…

Continue reading

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ -1

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ -1 ಯುಧಿಷ್ಠಿರನು ಕೇಳಲು ಭೀಷ್ಮನು ರಾಜಧರ್ಮವನ್ನು ವರ್ಣಿಸುತ್ತಾ ರಾಜನಿಗೆ ಪುರುಷಾರ್ಥ ಮತ್ತು ಸತ್ಯದ ಅವಶ್ಯಕತೆಗಳನ್ನು ಪ್ರತಿಪಾದಿಸುವ ಹಾಗೂ ರಾಜನ ಧರ್ಮಾನುಕೂಲ ಮತ್ತು ನೀತಿಪೂರ್ಣ ವ್ಯವಹಾರಗಳನ್ನು ವರ್ಣಿಸುವ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 56-57ರಲ್ಲಿ ಬರುತ್ತದೆ. *** ಹೃಷೀಕೇಶನಿಗೆ ನಮಸ್ಕರಿಸಿ, ಪಿತಾಮಹನಿಗೂ ಅಭಿವಾದನ ಮಾಡಿ, ಸರ್ವ ಗುರುಗಳ ಅನುಮತಿಯನ್ನೂ ಪಡೆದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸಿದನು: “ಪಾರ್ಥಿವ! ರಾಜನಿಗೆ ರಾಜ್ಯವೇ ಪರಮ ಧರ್ಮವೆಂದು ಧರ್ಮವನ್ನು ತಿಳಿದವರು ಹೇಳುತ್ತಾರೆ.…

Continue reading

ಸೂತ್ರಾಧ್ಯಾಯ

ಸೂತ್ರಾಧ್ಯಾಯ ಬ್ರಹ್ಮನ ನೀತಿಶಾಸ್ತ್ರವನ್ನು ವರ್ಣಿಸುವ ಮತ್ತು ರಾಜಾ ಪೃಥುವಿನ ಚರಿತ್ರೆಯನ್ನೊಳಗೊಂಡ ಈ ಭೀಷ್ಮ-ಯುಧಿಷ್ಠಿರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 59ರಲ್ಲಿ ಬರುತ್ತದೆ. *** ಅನಂತರ ಬೆಳಗಾಗುತ್ತಲೇ ಎದ್ದು ಪೂರ್ವಾಹ್ಣಿಕಕ್ರಿಯೆಗಳನ್ನು ಮಾಡಿ ಪಾಂಡವ-ಯಾದವರು ನಗರಾಕಾರದ ರಥಗಳಲ್ಲಿ ಕುಳಿತು ಹೊರಟರು. ಕುರುಕ್ಷೇತ್ರವನ್ನು ತಲುಪಿ ಅನಘ ಭೀಷ್ಮನ ಬಳಿಸಾರಿ ರಥಿಗಳಲ್ಲಿ ಶ್ರೇಷ್ಠ ಗಾಂಗೇಯನನ್ನು “ರಾತ್ರಿಯು ಸುಖವಾಗಿತ್ತೇ?” ಎಂದು ಪ್ರಶ್ನಿಸಿದರು. ವ್ಯಾಸಾದಿ ಋಷಿಗಳಿಗೆ ನಮಸ್ಕರಿಸಿ, ಅವರೆಲ್ಲರಿಂದಲೂ ಅಭಿನಂದಿತರಾಗಿ ಭೀಷ್ಮನ ಸುತ್ತಲೂ ಕುಳಿತುಕೊಂಡರು. ಆಗ ಮಹಾತೇಜಸ್ವೀ ರಾಜಾ…

Continue reading

ವರ್ಣಾಶ್ರಮಧರ್ಮಕಥನ

ವರ್ಣಾಶ್ರಮಧರ್ಮಕಥನ ವರ್ಣಾಶ್ರಮ ಧರ್ಮಗಳನ್ನು ವರ್ಣಿಸುವ ಮತ್ತು ಅವುಗಳಲ್ಲಿ ರಾಜಧರ್ಮದ ಮಹತ್ತ್ವವನ್ನು ಪ್ರತಿಪಾದಿಸುವ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮ ಪರ್ವದಲ್ಲಿ ಅಧ್ಯಾಯ 60-63ರಲ್ಲಿ ಬರುತ್ತದೆ. *** ವರ್ಣಧರ್ಮ ಅನಂತರ ಯುಧಿಷ್ಠಿರನು ಪಿತಾಮಹ ಗಾಂಗೇಯನಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿ ಪುನಃ ಪ್ರಶ್ನಿಸಿದನು:  “ಸರ್ವವರ್ಣದವರಿಗೂ ಇರುವ ಧರ್ಮವ್ಯಾವುದು? ಚಾತುರ್ವರ್ಣ್ಯದ ಪ್ರತಿಯೊಂದು ವರ್ಣದವರಿಗೂ ಇರುವ ಧರ್ಮವ್ಯಾವುದು? ಈ ನಾಲ್ಕೂ ವರ್ಣದವರಲ್ಲಿ ನಾಲ್ಕು ಆಶ್ರಮಗಳ ಧರ್ಮಗಳ್ಯಾವುವು? ರಾಜಧರ್ಮಗಳು ಯಾವುವು? ಭರತರ್ಷಭ! ಯಾವುದರಿಂದ ರಾಷ್ಟ್ರವು ವೃದ್ಧಿಯಾಗುತ್ತದೆ? ಯಾವುದರಿಂದ…

Continue reading

ಇಂದ್ರ-ಮಾಂಧಾತ ಸಂವಾದ

ಇಂದ್ರ-ಮಾಂಧಾತ ಸಂವಾದ ರಾಜಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಇಂದ್ರರೂಪೀ ವಿಷ್ಣು ಮತ್ತು ಮಾಂಧಾತರ ಈ ಸಂವಾದವನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ. ಇದು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 64-65ರಲ್ಲಿ ಬರುತ್ತದೆ. *** ಭೀಷ್ಮನು ಹೇಳಿದನು: “ಪಾಂಡವ! ನಾಲ್ಕು ಆಶ್ರಮಧರ್ಮಗಳೂ, ಜಾತಿಧರ್ಮಗಳೂ, ಲೋಕಪಾಲಧರ್ಮಗಳೂ ಕ್ಷಾತ್ರಧರ್ಮದಲ್ಲಿಯೇ ಪ್ರತಿಷ್ಠಿತಗೊಂಡಿವೆ. ಭರತಸತ್ತಮ! ಈ ಎಲ್ಲ ಧರ್ಮಗಳೂ ಕ್ಷಾತ್ರಧರ್ಮವನ್ನವಲಂಬಿಸಿವೆ. ಕ್ಷಾತ್ರಧರ್ಮವು ಅವ್ಯವಸ್ಥಿತವಾದರೆ ಜೀವಲೋಕಗಳು ನಿರಾಶೆಗೊಳ್ಳುತ್ತವೆ. ಆಶ್ರಮವಾಸಿಗಳ ಧರ್ಮಗಳು ಅಪ್ರತ್ಯಕ್ಷವಾಗಿವೆ ಮತ್ತು ಅವುಗಳಿಗೆ ಬಹುದ್ವಾರಗಳಿವೆ. ಆಗಮಗಳೇ ಅವುಗಳ ಶಾಶ್ವತ ಭಾವಗಳನ್ನು ರೂಪಿಸುತ್ತವೆ.…

Continue reading

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 2

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 2 ರಾಜಧರ್ಮವನ್ನು ಪಾಲಿಸುವುದರಿಂದ ನಾಲ್ಕೂ ಆಶ್ರಮಗಳ ಫಲಗಳು ದೊರಯುತ್ತವೆ ಎಂದು ಪ್ರತಿಪಾದಿಸುವ ಈ ಭೀಷ್ಮ-ಯುಧಿಷ್ಠಿರರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 66ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಹಿಂದೆ ನೀನು ಹೇಳಿದ ನಾಲ್ಕು ಮಾನವಾಶ್ರಮಗಳ ಕುರಿತು ನಾನು ಕೇಳಿದೆ. ಈಗ ನನಗೆ ಅವುಗಳ ವ್ಯಾಖ್ಯಾನಗಳನ್ನು ಹೇಳು. ನಾನು ಕೇಳುತ್ತಿದ್ದೇನೆ.” ಭೀಷ್ಮನು ಹೇಳಿದನು: “ಯುಧಿಷ್ಠಿರ! ಮಹಾಬಾಹೋ! ಸಾಧುಸಮ್ಮತವಾದ ಈ ಧರ್ಮಗಳು ನನಗೆ ಹೇಗೆ…

Continue reading

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 3

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 3 ರಾಷ್ಟ್ರದ ರಕ್ಷೆ ಮತ್ತು ಉನ್ನತಿಗಾಗಿ ರಾಜನ ಅವಶ್ಯಕತೆಯನ್ನು ಪ್ರತಿಪಾದಿಸುವ ಹಾಗೂ ಬ್ರಹ್ಮನ ಆದೇಶದಂತೆ ಮನುವು ರಾಜನಾದುದರ ಕಥೆಯನ್ನೊಳಗೊಂಡ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 67ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ನಾಲ್ಕು ಆಶ್ರಮಗಳ ಕುರಿತೂ ಮತ್ತು ನಾಲ್ಕು ವರ್ಣಗಳ ಕುರಿತೂ ನೀನು ಹೇಳಿದ್ದೀಯೆ. ಈಗ ರಾಷ್ಟ್ರದ ಮುಖ್ಯ ಕರ್ತವ್ಯವೇನೆಂದು ನನಗೆ ಹೇಳು.” ಭೀಷ್ಮನು ಹೇಳಿದನು: “ರಾಜನನ್ನು ಅಭಿಷೇಕಿಸುವುದೇ ರಾಷ್ಟ್ರದ…

Continue reading