Anushasana Parva: Chapter 151

ಅನುಶಾಸನ ಪರ್ವ: ದಾನಧರ್ಮ ಪರ್ವ

೧೫೧

ವಂಶಾನುಕೀರ್ತನ

ನಿತ್ಯಸ್ಮರಣೀಯರಾದ ದೇವತಾ-ನದೀ-ಪರ್ವತ-ಋಷಿ-ರಾಜರ ನಾಮಸಂಕೀರ್ತನೆಯ ಮಹಿಮೆ (೧-೫೧).

[1]13151001 ಯುಧಿಷ್ಠಿರ ಉವಾಚ|

13151001a ಕಿಂ ಶ್ರೇಯಃ ಪುರುಷಸ್ಯೇಹ ಕಿಂ ಕುರ್ವನ್ಸುಖಮೇಧತೇ|

13151001c ವಿಪಾಪ್ಮಾ ಚ ಭವೇತ್ಕೇನ ಕಿಂ ವಾ ಕಲ್ಮಷನಾಶನಮ್||

ಯುಧಿಷ್ಠಿರನು ಹೇಳಿದನು: “ಶ್ರೇಯವಾದದ್ದು ಯಾವುದು? ಇಲ್ಲಿ ಪುರುಶ್ಃಅನು ಏನನ್ನು ಮಾಡಿ ಸುಖವನ್ನು ಹೊಂದುತ್ತಾನೆ? ಯಾವುದರಿಂದ ಅವನ ಪಾಪವು ದೂರವಾಗುತ್ತದೆ? ಯಾವುದು ಪಾಪವನ್ನು ನಾಶಗೊಳಿಸುತ್ತದೆ?”

[2]13151002 ಭೀಷ್ಮ ಉವಾಚ|

13151002a ಅಯಂ ದೈವತವಂಶೋ ವೈ ಋಷಿವಂಶಸಮನ್ವಿತಃ|

13151002c ದ್ವಿಸಂಧ್ಯಂ ಪಠಿತಃ ಪುತ್ರ ಕಲ್ಮಷಾಪಹರಃ ಪರಃ||

ಭೀಷ್ಮನು ಹೇಳಿದನು: “ಪುತ್ರ! ಎರಡು ಸಂಧ್ಯಾಕಾಲಗಳಲ್ಲಿ ದೇವವಂಶ ಮತ್ತು ಋಷಿವಂಶಗಳ ಪಠನ ಮಾಡುವುದರಿಂದ ಘೋರ ಪಾಪಗಳೂ ನಾಶಗೊಳ್ಳುತ್ತವೆ.

[3]13151003a ದೇವಾಸುರಗುರುರ್ದೇವಃ ಸರ್ವಭೂತನಮಸ್ಕೃತಃ|

13151003c ಅಚಿಂತ್ಯೋಽಥಾಪ್ಯನಿರ್ದೇಶ್ಯಃ ಸರ್ವಪ್ರಾಣೋ ಹ್ಯಯೋನಿಜಃ||

13151004a ಪಿತಾಮಹೋ ಜಗನ್ನಾಥಃ ಸಾವಿತ್ರೀ ಬ್ರಹ್ಮಣಃ ಸತೀ|

13151004c ವೇದಭೂರಥ ಕರ್ತಾ ಚ ವಿಷ್ಣುರ್ನಾರಾಯಣಃ ಪ್ರಭುಃ||

13151005a ಉಮಾಪತಿರ್ವಿರೂಪಾಕ್ಷಃ ಸ್ಕಂದಃ ಸೇನಾಪತಿಸ್ತಥಾ|

13151005c ವಿಶಾಖೋ ಹುತಭುಗ್ವಾಯುಶ್ಚಂದ್ರಾದಿತ್ಯೌ ಪ್ರಭಾಕರೌ||

13151006a ಶಕ್ರಃ ಶಚೀಪತಿರ್ದೇವೋ ಯಮೋ ಧೂಮೋರ್ಣಯಾ ಸಹ|

13151006c ವರುಣಃ ಸಹ ಗೌರ್ಯಾ ಚ ಸಹ ಋದ್ಧ್ಯಾ ಧನೇಶ್ವರಃ||

13151007a ಸೌಮ್ಯಾ ಗೌಃ ಸುರಭಿರ್ದೇವೀ ವಿಶ್ರವಾಶ್ಚ ಮಹಾನೃಷಿಃ|

13151007c ಷಟ್ಕಾಲ[4] ಸಾಗರೋ ಗಂಗಾ ಸ್ರವಂತ್ಯೋಽಥ ಮರುದ್ಗಣಾಃ||

13151008a ವಾಲಖಿಲ್ಯಾಸ್ತಪಃಸಿದ್ಧಾಃ ಕೃಷ್ಣದ್ವೈಪಾಯನಸ್ತಥಾ|

13151008c ನಾರದಃ ಪರ್ವತಶ್ಚೈವ ವಿಶ್ವಾವಸುರ್ಹಹಾಹುಹೂಃ||

13151009a ತುಂಬರುಶ್ಚಿತ್ರಸೇನಶ್ಚ ದೇವದೂತಶ್ಚ ವಿಶ್ರುತಃ|

13151009c ದೇವಕನ್ಯಾ ಮಹಾಭಾಗಾ ದಿವ್ಯಾಶ್ಚಾಪ್ಸರಸಾಂ ಗಣಾಃ||

13151010a ಉರ್ವಶೀ ಮೇನಕಾ ರಂಭಾ ಮಿಶ್ರಕೇಶೀ ಅಲಂಬುಷಾ|

13151010c ವಿಶ್ವಾಚೀ ಚ ಘೃತಾಚೀ ಚ ಪಂಚಚೂಡಾ ತಿಲೋತ್ತಮಾ||

13151011a ಆದಿತ್ಯಾ ವಸವೋ ರುದ್ರಾಃ ಸಾಶ್ವಿನಃ ಪಿತರೋಽಪಿ ಚ|

13151011c ಧರ್ಮಃ ಸತ್ಯಂ ತಪೋ ದೀಕ್ಷಾ ವ್ಯವಸಾಯಃ ಪಿತಾಮಹಃ||

13151012a ಶರ್ವರ್ಯೋ ದಿವಸಾಶ್ಚೈವ ಮಾರೀಚಃ ಕಶ್ಯಪಸ್ತಥಾ|

13151012c ಶುಕ್ರೋ ಬೃಹಸ್ಪತಿರ್ಭೌಮೋ ಬುಧೋ ರಾಹುಃ ಶನೈಶ್ಚರಃ||

13151013a ನಕ್ಷತ್ರಾಣ್ಯೃತವಶ್ಚೈವ ಮಾಸಾಃ ಸಂಧ್ಯಾಃ ಸವತ್ಸರಾಃ|

13151013c ವೈನತೇಯಾಃ ಸಮುದ್ರಾಶ್ಚ ಕದ್ರುಜಾಃ ಪನ್ನಗಾಸ್ತಥಾ||

13151014a ಶತದ್ರೂಶ್ಚ ವಿಪಾಶಾ ಚ ಚಂದ್ರಭಾಗಾ ಸರಸ್ವತೀ|

13151014c ಸಿಂಧುಶ್ಚ ದೇವಿಕಾ ಚೈವ ಪುಷ್ಕರಂ ತೀರ್ಥಮೇವ ಚ||

13151015a ಗಂಗಾ ಮಹಾನದೀ ಚೈವ ಕಪಿಲಾ ನರ್ಮದಾ ತಥಾ|

13151015c ಕಂಪುನಾ ಚ ವಿಶಲ್ಯಾ ಚ ಕರತೋಯಾಂಬುವಾಹಿನೀ||

13151016a ಸರಯೂರ್ಗಂಡಕೀ ಚೈವ ಲೋಹಿತ್ಯಶ್ಚ ಮಹಾನದಃ|

13151016c ತಾಮ್ರಾರುಣಾ ವೇತ್ರವತೀ ಪರ್ಣಾಶಾ ಗೌತಮೀ ತಥಾ||

13151017a ಗೋದಾವರೀ ಚ ವೇಣ್ಣಾ ಚ ಕೃಷ್ಣವೇಣಾ ತಥಾದ್ರಿಜಾ|

13151017c ದೃಷದ್ವತೀ ಚ ಕಾವೇರೀ ವಂಕ್ಷುರ್ಮಂದಾಕಿನೀ ತಥಾ||

13151018a ಪ್ರಯಾಗಂ ಚ ಪ್ರಭಾಸಂ ಚ ಪುಣ್ಯಂ ನೈಮಿಷಮೇವ ಚ|

13151018c ತಚ್ಚ ವಿಶ್ವೇಶ್ವರಸ್ಥಾನಂ ಯತ್ರ ತದ್ವಿಮಲಂ ಸರಃ||

13151019a ಪುಣ್ಯತೀರ್ಥೈಶ್ಚ ಕಲಿಲಂ ಕುರುಕ್ಷೇತ್ರಂ ಪ್ರಕೀರ್ತಿತಮ್|

13151019c ಸಿಂಧೂತ್ತಮಂ ತಪೋದಾನಂ ಜಂಬೂಮಾರ್ಗಮಥಾಪಿ ಚ||

13151020a ಹಿರಣ್ವತೀ ವಿತಸ್ತಾ ಚ ತಥೈವೇಕ್ಷುಮತೀ ನದೀ|

13151020c ವೇದಸ್ಮೃತಿರ್ವೈದಸಿನೀ ಮಲವಾಸಾಶ್ಚ ನದ್ಯಪಿ||

13151021a ಭೂಮಿಭಾಗಾಸ್ತಥಾ ಪುಣ್ಯಾ ಗಂಗಾದ್ವಾರಮಥಾಪಿ ಚ|

13151021c ಋಷಿಕುಲ್ಯಾಸ್ತಥಾ ಮೇಧ್ಯಾ ನದೀ ಚಿತ್ರಪಥಾ ತಥಾ||

13151022a ಕೌಶಿಕೀ ಯಮುನಾ ಸೀತಾ ತಥಾ ಚರ್ಮಣ್ವತೀ ನದೀ|

13151022c ನದೀ ಭೀಮರಥೀ ಚೈವ ಬಾಹುದಾ ಚ ಮಹಾನದೀ||

13151022E ಮಹೇಂದ್ರವಾಣೀ ತ್ರಿದಿವಾ ನೀಲಿಕಾ ಚ ಸರಸ್ವತೀ|

13151023a ನಂದಾ ಚಾಪರನಂದಾ ಚ ತಥಾ ತೀರ್ಥಂ ಮಹಾಹ್ರದಮ್||

13151023c ಗಯಾಥ ಫಲ್ಗುತೀರ್ಥಂ ಚ ಧರ್ಮಾರಣ್ಯಂ ಸುರೈರ್ವೃತಮ್|

13151024a ತಥಾ ದೇವನದೀ ಪುಣ್ಯಾ ಸರಶ್ಚ ಬ್ರಹ್ಮನಿರ್ಮಿತಮ್||

13151024c ಪುಣ್ಯಂ ತ್ರಿಲೋಕವಿಖ್ಯಾತಂ ಸರ್ವಪಾಪಹರಂ ಶಿವಮ್|

13151025a ಹಿಮವಾನ್ಪರ್ವತಶ್ಚೈವ ದಿವ್ಯೌಷಧಿಸಮನ್ವಿತಃ||

13151025c ವಿಂಧ್ಯೋ ಧಾತುವಿಚಿತ್ರಾಂಗಸ್ತೀರ್ಥವಾನೌಷಧಾನ್ವಿತಃ|

13151026a ಮೇರುರ್ಮಹೇಂದ್ರೋ ಮಲಯಃ ಶ್ವೇತಶ್ಚ ರಜತಾಚಿತಃ||

13151026c ಶೃಂಗವಾನ್ಮಂದರೋ ನೀಲೋ ನಿಷಧೋ ದರ್ದುರಸ್ತಥಾ|

13151027a ಚಿತ್ರಕೂಟೋಽಂಜನಾಭಶ್ಚ ಪರ್ವತೋ ಗಂಧಮಾದನಃ||

13151027c ಪುಣ್ಯಃ ಸೋಮಗಿರಿಶ್ಚೈವ ತಥೈವಾನ್ಯೇ ಮಹೀಧರಾಃ|

13151027E ದಿಶಶ್ಚ ವಿದಿಶಶ್ಚೈವ ಕ್ಷಿತಿಃ ಸರ್ವೇ ಮಹೀರುಹಾಃ||

13151028a ವಿಶ್ವೇದೇವಾ ನಭಶ್ಚೈವ ನಕ್ಷತ್ರಾಣಿ ಗ್ರಹಾಸ್ತಥಾ|

13151028c ಪಾಂತು ವಃ ಸತತಂ ದೇವಾಃ ಕೀರ್ತಿತಾಕೀರ್ತಿತಾ ಮಯಾ||

ಸರ್ವಭೂತನಮಸ್ಕೃತ ದೇವಾಸುರಗುರು ಅಚಿಂತ್ಯ ಅನಿರ್ದೇಶ್ಯ ಪ್ರಣವಸ್ವರೂಪ ಮತ್ತು ಅಯೋನಿಜ ಜಗದೀಶ್ವರ ಪಿತಾಮಹ ಭಗವಾನ್ ಬ್ರಹ್ಮ, ಅವನ ಪತ್ನಿ ಸತೀ ಸಾವಿತ್ರೀ ದೇವೀ, ವೇದಗಳ ಉತ್ಪತ್ತಿಸ್ತಾನ ಜಗತ್ಕರ್ತಾ ಭಗವಾನ್ ನಾರಾಯಣ, ಮೂರುಕಣ್ಣುಗಳ ಉಮಾಪತಿ ಮಹಾದೇವ, ದೇವಸೇನಾಪತಿ ಸ್ಕಂದ, ವಿಶಾಖ, ಅಗ್ನಿ, ವಾಯು, ಪ್ರಭೆಯನ್ನುಂಟುಮಾಡುವ ಚಂದ್ರ-ಸೂರ್ಯರು, ಶಚೀಪತಿ ಇಂದ್ರ, ಯಮರಾಜ, ಅವನ ಪತ್ನಿ ಧೂಮೋರ್ಣೇ, ಗೌರೀಸಮೇತ ವರುಣ, ಋದ್ಧಿಎಂಬ ಪತ್ನಿಯೊಡನೆ ಕುಬೇರ, ಸೌಮ್ಯಭಾವದ ಗೋಮಾತೆ ಸುರಭೀ, ಮಹರ್ಷಿ ವಿಶ್ರವಸ, ಷಟ್ಕಾಲ, ಸಾಗರ, ಗಂಗೆ ಮೊದಲಾದ ನದಿಗಳು, ಮರುದ್ಗಣಗಳು, ತಪಸ್ಸಿದ್ಧ ವಾಲಖಿಲ್ಯರು, ಕೃಷ್ಣದ್ವೈಪಾಯನ ವ್ಯಾಸ, ನಾರದ-ಪರ್ವತರು, ವಿಶ್ವಾವಸು, ಹಾಹಾ-ಹೂಹೂ, ತುಂಬುರು-ಚಿತ್ರಸೇನ, ವಿಖ್ಯಾತ ದೇವದೂತ, ಮಹಾಸೌಭಾಗ್ಯಶಾಲೀ ದೇವಕನ್ಯೆಯರು, ಊರ್ವಶೀ, ಮೇನಕೆ, ರಂಭೆ, ಮಿಶ್ರಕೇಶೀ, ಅಲಂಬುಷಾ, ವಿಶ್ವಾಚೀ, ಘೃತಾಚೀ, ಪಂಚಚೂಡ, ತಿಲೋತ್ತಮೆ, ದ್ವಾದಶಾದಿತ್ಯರು, ಅಷ್ಟವಸುಗಳು, ಏಕಾದಶರುದ್ರರು, ಅಶ್ವಿನೀ ಕುಮಾರರು, ಪಿತೃಗಳು, ಧರ್ಮದೇವತೆ, ಶಾಸ್ತ್ರಜ್ಞಾನಾದಿ ದೇವತೆಗಳು, ತಪಸ್ಸು-ದೀಕ್ಷಾ-ವ್ಯವಸಾಯಗಳು, ಪಿತಾಮಹ, ಹಗಲು-ರಾತ್ರಿಗಳು, ಮರೀಚಿಯ ಮಗ ಕಶ್ಯಪ, ಶುಕ್ರ-ಬೃಹಸ್ಪತಿ-ಮಂಗಳ-ಬುಧ-ರಾಹು-ಶನೈಶ್ಚರ, ನಕ್ಷತ್ರ-ಋತು-ಮಾಸ-ಪಕ್ಷ-ಸಂವತ್ಸರಗಳು, ವಿನತೆಯ ಮಗ ಗರುಡ, ಸಮುದ್ರ, ಕದ್ರುವಿನ ಮಕ್ಕಳಾದ ಸರ್ಪಗಳು, ಶತದ್ರು-ವಿಪಾಶಾ-ಚಂದ್ರಭಾಗಾ-ಸರಸ್ವತೀ-ಸಿಂಧು-ದೇವಿಕಾ ನದಿಗಳು, ಪ್ರಭಾಸ-ಪುಷ್ಕರ ತೀರ್ಥಗಳು, ಗಂಗಾ-ಮಹಾನದೀ-ವೇಣಾ-ಕಾವೇರೀ-ನರ್ಮದಾ-ಕುಲಂಪುನಾ-ವಿಶಾಲಾ-ಕರತೋಯಾ-ಅಂಬುವಾಹಿನೀ-ಸರಯೂ-ಗಂಡಕಿ-ಕೆಂಪುನೀರಿನ ಮಹಾನದ ಶೋಣಭದ್ರ-ತಾಮ್ರಾ-ಅರುಣಾ-ವೇತ್ರವತೀ-ಪರ್ಣಾಶಾ-ಗೌತಮೀ-ಗೋದಾವರೀ-ವೇಣ್ಯಾ-ಕೃಷ್ಣವೇಣೀ-ಅದ್ರಿಜಾ-ದೃಷಧ್ವತೀ-ಕಾವೇರೀ-ಚಕ್ರು-ಮಂದಾಕಿನೀ ಮೊದಲಾದ ನದಿಗಳು, ಪ್ರಯಾಗ-ಪ್ರಭಾಸ-ಪುಣ್ಯಮಯ ನೈಮಿಷಾರಣ್ಯ, ವಿಶ್ವೇಶ್ವರನ ಸ್ಥಾನ ವಿಮಲ ಸರೋವರ, ಸ್ವಚ್ಛನೀರಿರುವ ಪುಣ್ಯತೀರ್ಥ ಕುರುಕ್ಷೇತ್ರ, ಉತ್ತಮ ಸಮುದ್ರ, ತಪೋದಾನ, ಜಂಬೂಮಾರ್ಗ -ಇವೇ ಮೊದಲಾದ ಪವಿತ್ರಸ್ಥಳಗಳು, ಹಿರಣ್ವತೀ-ವಿತಸ್ರಾ-ಪ್ಲಕ್ಷವತೀ-ವೇದಸ್ಮೃತಿ-ವೇದವತೀ-ಮಾಲವಾ-ಅಶ್ವವತೀ ಮೊದಲಾದ ಪುಣ್ಯನದಿಗಳು, ಪವಿತ್ರ ಭೂಭಾಗ ಗಂಗಾದ್ವಾರ, ಋಷಿತೀರ್ಥಗಳು, ಪವಿತ್ರ ಸಮುದ್ರಗಾಮೀ ನದಿಗಳು, ಪುಣ್ಯಸಲಿಲಯುಕ್ತ ಚರ್ಮಣ್ವತೀ-ಕೌಶಿಕೀ-ಯಮುನಾ-ಭೀಮರಥೀ-ಮಹಾನದೀ-ಬಾಹುದಾ-ಮಹೇಂದ್ರವಾಣೀ-ತ್ರಿದಿವಾ-ನೀಲಿಕಾ-ಸರಸ್ವತೀ-ನಂದಾ-ಅಪರನಂದಾ ಮೊದಲಾದ ಪುಣ್ಯ ನದಿಗಳು, ತೀರ್ಥಭೂತ ಮಹಾಹ್ರದ, ಗಯಾ, ಫಲ್ಗುತೀರ್ಥ, ದೇವತಾಯುಕ್ತ ಧರ್ಮಾರಣ್ಯ, ಪವಿತ್ರ ದೇವನದೀ, ಮೂರು ಲೋಕಗಳಲ್ಲಿ ವಿಖ್ಯಾತ ಪವಿತ್ರ ಸರ್ವಪಾಪ ನಾಶಕ ಕಲ್ಯಾಣಮಯ ಬ್ರಹ್ಮನಿರ್ಮಿತ ಸರೋವರ ಪುಷ್ಕರತೀರ್ಥ, ದಿವ್ಯೌಷಧಿಗಳಿಂದ ಕೂಡಿರುವ ಹಿಮವತ್ಪರ್ವತ, ನಾನಾ ಪ್ರಕಾರದ ಧಾತುಗಳು, ತೀರ್ಥಗಳು ಮತ್ತು ಔಷಧಗಳಿಂದ ಸುಶೋಭಿತವಾದ ವಿಂಧ್ಯ ಪರ್ವತ, ಮೇರು-ಮಹೇಂದ್ರ-ಮಲಯ-ಬೆಳ್ಳಿಯಿಂದ ಕೂಡಿರುವ ಶ್ವೇತಪರ್ವತ-ಶೃಂಗವಂತ-ಮಂದರ-ನೀಲ-ನಿಷಧ-ದುರ್ದರ-ಚಿತ್ರಕೂಟ-ಅಜನಾಭ-ಗಂಧಮಾದನ-ಪವಿತ್ರ ಸೋಮಗಿರಿ ಇವೇ ಮೊದಲಾದ ಪರ್ವತಕ್ಷೇತ್ರಗಳು, ದಿಕ್ಕುಗಳು, ಉಪದಿಕ್ಕುಗಳು, ಭೂಮಿ, ವೃಕ್ಷಗಳು, ವಿಶ್ವೇದೇವತೆಗಳು, ಆಕಾಶ-ನಕ್ಷತ್ರ-ಗ್ರಹಹಣಗಳು, ಇಲ್ಲಿ ಕೀರ್ತಿತವಾಗಿರುವ ಮತ್ತು ಕೀರ್ತಿತವಾಗದಿರುವ ದೇವ-ಗಂಧರ್ವ-ನದೀ-ಪರ್ವತಕ್ಷೇತ್ರಾದಿಗಳು ನಮ್ಮನ್ನು ಸದಾ ರಕ್ಷಿಸಲಿ.

13151029a ಕೀರ್ತಯಾನೋ ನರೋ ಹ್ಯೇತಾನ್ಮುಚ್ಯತೇ ಸರ್ವಕಿಲ್ಬಿಷೈಃ|

13151029c ಸ್ತುವಂಶ್ಚ ಪ್ರತಿನಂದಂಶ್ಚ ಮುಚ್ಯತೇ ಸರ್ವತೋ ಭಯಾತ್||

13151029e ಸರ್ವಸಂಕರಪಾಪೇಭ್ಯೋ ದೇವತಾಸ್ತವನಂದಕಃ|

ಇವರ ಕೀರ್ತನೆ ಮಾಡುವ ನರನು ಸರ್ವಕಿಲ್ಬಿಷಗಳಿಂದ ಮುಕ್ತನಾಗುತ್ತಾನೆ. ಇವರನ್ನು ಸ್ತುತಿಸುವ ಮತ್ತು ನಮಸ್ಕರಿಸುವವನು ಎಲ್ಲ ರೀತಿಯ ಭಯಗಳಿಂದಲೂ ಮುಕ್ತನಾಗುತ್ತಾನೆ. ದೇವತೆಗಳನ್ನು ಸ್ತುತಿಸಿ ನಮಸ್ಕರಿಸುವವನು ಸರ್ವಸಂಕರಪಾಪಗಳಿಂದಲೂ ಮುಕ್ತನಾಗುತ್ತಾನೆ.

13151030a ದೇವತಾನಂತರಂ ವಿಪ್ರಾಂಸ್ತಪಃಸಿದ್ಧಾಂಸ್ತಪೋಧಿಕಾನ್||

13151030c ಕೀರ್ತಿತಾನ್ಕೀರ್ತಯಿಷ್ಯಾಮಿ ಸರ್ವಪಾಪಪ್ರಮೋಚನಾನ್|

ದೇವತೆಗಳ ನಂತರ ತಪಃಸಿದ್ಧ ತಪೋಧಿಕ ವಿಪ್ರರ ಕೀರ್ತನೆ ಮಾಡಬೇಕು. ಸರ್ವಪಾಪಪ್ರಮೋಚನ ಕೀರ್ತಿತರ ಹೆಸರುಗಳನ್ನು ಹೇಳುತ್ತೇನೆ:

13151031a ಯವಕ್ರೀತೋಽಥ ರೈಭ್ಯಶ್ಚ ಕಕ್ಷೀವಾನೌಶಿಜಸ್ತಥಾ||

13151031c ಭೃಗ್ವಂಗಿರಾಸ್ತಥಾ ಕಣ್ವೋ ಮೇಧಾತಿಥಿರಥ ಪ್ರಭುಃ|

13151031e ಬರ್ಹೀ ಚ ಗುಣಸಂಪನ್ನಃ ಪ್ರಾಚೀಂ ದಿಶಮುಪಾಶ್ರಿತಾಃ||

ಪೂರ್ವದಿಕ್ಕನ್ನು ಆಶ್ರಯಿಸಿರುವ ಯವಕ್ರೀತ, ರೈಭ್ಯ, ಕಕ್ಷೀವಾನ, ಔಶಿಷ, ಭೃಗು, ಅಂಗಿರಸ, ಕಣ್ವ, ಪ್ರಭು ಮೇಧಾತಿಥಿ, ಗುಣಸಂಪನ್ನ ಬರ್ಹೀ.

13151032a ಭದ್ರಾಂ ದಿಶಂ ಮಹಾಭಾಗಾ ಉಲ್ಮುಚುಃ ಪ್ರಮುಚುಸ್ತಥಾ|

13151032c ಮುಮುಚುಶ್ಚ ಮಹಾಭಾಗಃ ಸ್ವಸ್ತ್ಯಾತ್ರೇಯಶ್ಚ ವೀರ್ಯವಾನ್||

13151033a ಮಿತ್ರಾವರುಣಯೋಃ ಪುತ್ರಸ್ತಥಾಗಸ್ತ್ಯಃ ಪ್ರತಾಪವಾನ್|

13151033c ದೃಢಾಯುಶ್ಚೋರ್ಧ್ವಬಾಹುಶ್ಚ ವಿಶ್ರುತಾವೃಷಿಸತ್ತಮೌ||

ಉಲ್ಮುಚ, ಪ್ರಮುಚ, ಮುಮುಚ, ಶಕ್ಥಿಶಾಲೀ ಸ್ವಸ್ತ್ಯಾತ್ರೇಯ, ಮಿತ್ರಾವರುಣರ ಮಗ ಪ್ರತಾಪವಾನ್ ಅಗಸ್ತ್ಯ, ವಿಶ್ರುತ ಋಷಿಸತ್ತಮರಾದ ದೃಢಾಯು ಮತ್ತು ಊರ್ಧ್ವಬಾಹು – ಈ ಮಹಾಭಾಗರು ದಕ್ಷಿಣದಿಕ್ಕನ್ನು ಆಶ್ರಯಿಸಿದ್ದಾರೆ.

13151034a ಪಶ್ಚಿಮಾಂ ದಿಶಮಾಶ್ರಿತ್ಯ ಯ ಏಧಂತೇ ನಿಬೋಧ ತಾನ್|

13151034c ಉಷದ್ಗುಃ[5] ಸಹ ಸೋದರ್ಯೈಃ ಪರಿವ್ಯಾಧಶ್ಚ ವೀರ್ಯವಾನ್||

13151035a ಋಷಿರ್ದೀರ್ಘತಮಾಶ್ಚೈವ ಗೌತಮಃ ಕಶ್ಯಪಸ್ತಥಾ|

13151035c ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ|

13151035e ಅತ್ರೇಃ ಪುತ್ರಶ್ಚ ಧರ್ಮಾತ್ಮಾ ತಥಾ ಸಾರಸ್ವತಃ ಪ್ರಭುಃ||

ಪಶ್ಚಿಮ ದಿಕ್ಕನ್ನು ಆಶ್ರಯಿಸಿ ವೃದ್ಧಿಹೊಂದಿದವರ ಕುರಿತು ಕೇಳು: ಸಹೋದರರೊಂದಿಗೆ ಉಷದ್ಗು, ವೀರ್ಯವಾನ್ ಪರಿವ್ಯಾಧ, ಋಷಿ ದೀರ್ಘತಮ, ಗೌತಮ, ಕಶ್ಯಪ, ಏಕತ, ದ್ವಿತ, ತ್ರಿತ ಮಹರ್ಷಿಗಳು, ಅತ್ರಿಯ ಧರ್ಮಾತ್ಮ ಪುತ್ರ ದುರ್ವಾಸ ಮತ್ತು ಪ್ರಭು ಸಾರಸ್ವತ.

13151036a ಉತ್ತರಾಂ ದಿಶಮಾಶ್ರಿತ್ಯ ಯ ಏಧಂತೇ ನಿಬೋಧ ತಾನ್|

13151036c ಅತ್ರಿರ್ವಸಿಷ್ಠಃ ಶಕ್ತಿಶ್ಚ ಪಾರಾಶರ್ಯಶ್ಚ ವೀರ್ಯವಾನ್||

13151037a ವಿಶ್ವಾಮಿತ್ರೋ ಭರದ್ವಾಜೋ ಜಮದಗ್ನಿಸ್ತಥೈವ ಚ|

13151037c ಋಚೀಕಪೌತ್ರೋ ರಾಮಶ್ಚ ಋಷಿರೌದ್ದಾಲಕಿಸ್ತಥಾ||

13151038a ಶ್ವೇತಕೇತುಃ ಕೋಹಲಶ್ಚ ವಿಪುಲೋ ದೇವಲಸ್ತಥಾ|

13151038c ದೇವಶರ್ಮಾ ಚ ಧೌಮ್ಯಶ್ಚ ಹಸ್ತಿಕಾಶ್ಯಪ ಏವ ಚ||

13151039a ಲೋಮಶೋ ನಾಚಿಕೇತಶ್ಚ ಲೋಮಹರ್ಷಣ ಏವ ಚ|

13151039c ಋಷಿರುಗ್ರಶ್ರವಾಶ್ಚೈವ ಭಾರ್ಗವಶ್ಚ್ಯವನಸ್ತಥಾ||

ಉತ್ತರ ದಿಕ್ಕನ್ನು ಆಶ್ರಯಿಸಿ ವೃದ್ಧಿಹೊಂದಿದವರ ಕುರಿತು ಕೇಳು: ಅತ್ರಿ, ವಸಿಷ್ಠ, ಶಕ್ತಿ, ಪರಾಶರನ ಮಗ ವೀರ್ಯವಾನ್ ಕೃಷ್ಣದ್ವೈಪಾಯನ, ವಿಶ್ವಾಮಿತ್ರ, ಭರದ್ವಾಜ, ಜಮದಗ್ನಿ, ಋಚೀಕನ ಮೊಮ್ಮಗ ಪರಶುರಾಮ, ಋಷಿ ಉದ್ದಲಕನ ಮಗ ಶ್ವೇತಕೇತು, ಕೋಹಲ, ವಿಪುಲ, ದೇವಲ, ದೇವಶರ್ಮಾ, ಧೌಮ್ಯ, ಹಸ್ತಿಕಾಶ್ಯಪ, ಲೋಮಶ, ನಾಚಿಕೇತ, ಲೋಮಹರ್ಷಣ, ಋಷಿ ಉಗ್ರಶ್ರವಾ ಮತ್ತು ಭಾರ್ಗವ ಚ್ಯವನ.

13151040a ಏಷ ವೈ ಸಮವಾಯಸ್ತೇ ಋಷಿದೇವಸಮನ್ವಿತಃ|

13151040c ಆದ್ಯಃ ಪ್ರಕೀರ್ತಿತೋ ರಾಜನ್ಸರ್ವಪಾಪಪ್ರಮೋಚನಃ||

ಈ ಋಷಿಗಳು ಮತ್ತು ದೇವತೆಗಳು ಒಂದೇ ದರ್ಜೆಯವರು ಮತ್ತು ಆದ್ಯರು. ರಾಜನ್! ಇವರ ಕೀರ್ತನೆಯಿಂದ ಸರ್ವಪಾಪಗಳಿಂದಲೂ ಮೋಚನೆಯುಂಟಾಗುತ್ತದೆ.

13151041a ನೃಗೋ ಯಯಾತಿರ್ನಹುಷೋ ಯದುಃ ಪೂರುಶ್ಚ ವೀರ್ಯವಾನ್|

13151041c ಧುಂಧುಮಾರೋ ದಿಲೀಪಶ್ಚ ಸಗರಶ್ಚ ಪ್ರತಾಪವಾನ್||

13151042a ಕೃಶಾಶ್ವೋ ಯೌವನಾಶ್ವಶ್ಚ ಚಿತ್ರಾಶ್ವಃ ಸತ್ಯವಾಂಸ್ತಥಾ|

13151042c ದುಃಷಂತೋ ಭರತಶ್ಚೈವ ಚಕ್ರವರ್ತೀ ಮಹಾಯಶಾಃ||

13151043a ಯವನೋ[6] ಜನಕಶ್ಚೈವ ತಥಾ ದೃಢರಥೋ[7] ನೃಪಃ|

13151043c ರಘುರ್ನರವರಶ್ಚೈವ ತಥಾ ದಶರಥೋ ನೃಪಃ||

13151044a ರಾಮೋ ರಾಕ್ಷಸಹಾ ವೀರಃ ಶಶಬಿಂದುರ್ಭಗೀರಥಃ|

13151044c ಹರಿಶ್ಚಂದ್ರೋ ಮರುತ್ತಶ್ಚ ಜಹ್ನುರ್ಜಾಹ್ನವಿಸೇವಿತಾ||

13151045a ಮಹೋದಯೋ ಹ್ಯಲರ್ಕಶ್ಚ ಐಲಶ್ಚೈವ ನರಾಧಿಪಃ|

13151045c ಕರಂಧಮೋ ನರಶ್ರೇಷ್ಠಃ ಕಧ್ಮೋರಶ್ಚ ನರಾಧಿಪಃ||

13151046a ದಕ್ಷೋಽಂಬರೀಷಃ ಕುಕುರೋ ರವತಶ್ಚ ಮಹಾಯಶಾಃ|

13151046c ಮುಚುಕುಂದಶ್ಚ ರಾಜರ್ಷಿರ್ಮಿತ್ರಭಾನುಃ ಪ್ರಿಯಂಕರಃ||

13151047a ತ್ರಸದಸ್ಯುಸ್ತಥಾ ರಾಜಾ ಶ್ವೇತೋ ರಾಜರ್ಷಿಸತ್ತಮಃ|

13151047c ಮಹಾಭಿಷಶ್ಚ ವಿಖ್ಯಾತೋ ನಿಮಿರಾಜಸ್ತಥಾಷ್ಟಕಃ||

13151048a ಆಯುಃ ಕ್ಷುಪಶ್ಚ ರಾಜರ್ಷಿಃ ಕಕ್ಷೇಯುಶ್ಚ ನರಾಧಿಪಃ|

13151048c ಶಿಬಿರೌಶೀನರಶ್ಚೈವ ಗಯಶ್ಚೈವ ನರಾಧಿಪಃ||

13151049a ಪ್ರತರ್ದನೋ ದಿವೋದಾಸಃ ಸೌದಾಸಃ ಕೋಸಲೇಶ್ವರಃ|

13151049c ಐಲೋ ನಲಶ್ಚ ರಾಜರ್ಷಿರ್ಮನುಶ್ಚೈವ ಪ್ರಜಾಪತಿಃ||

13151050a ಹವಿಧ್ರಶ್ಚ ಪೃಷಧ್ರಶ್ಚ ಪ್ರತೀಪಃ ಶಂತನುಸ್ತಥಾ|

[8]13151050c ಕಕ್ಷಸೇನಶ್ಚ ರಾಜರ್ಷಿರ್ಯೇ ಚಾನ್ಯೇ ನಾನುಕೀರ್ತಿತಾಃ||

ನೃಗ, ಯಯಾತಿ, ನಹುಷ, ಯದು, ವೀರ್ಯವಾನ್ ಪೂರು, ಧುಂಧುಮಾರ, ದಿಲೀಪ, ಪ್ರತಾಪವಾನ್ ಸಗರ, ಕೃಶಾಶ್ವ, ಯೌವನಾಶ್ವ, ಚಿತ್ರಾಶ್ವ, ಸತ್ಯವಾನ್, ದುಃಷಂತ, ಮಹಾಯಶಸ್ವೀ ಚಕ್ರವರ್ತೀ ಭರತ, ಯವನ, ಜನಕ, ನೃಪ ದೃಢರಥ, ನರವರ ರಘು, ನೃಪ ದಶರಥ, ರಾಕ್ಷಸಹಾ ವೀರ ರಾಮ, ಶಶಬಿಂದು, ಭಗೀರಥ, ಹರಿಶ್ಚಂದ್ರ, ಮರುತ, ಜಾಹ್ನವೀ ಸೇವಿತ ಜಹ್ನು, ಮಹೋದಯ ಅಲರ್ಕ, ನರಾಧಿಪ ಐಲ, ನರಶ್ರೇಷ್ಠ ಕರಂಧಮ, ನರಾಧಿಪ ಕಧ್ಮೋರ, ದಕ್ಷ ಅಂಬರೀಶ, ಮಹಾಯಶಸ್ವೀ ಕುಕುರ ಮತ್ತು ರವತ, ರಾಜರ್ಷಿ ಮುಚುಕುಂದ, ಮಿತ್ರಭಾನು, ಪ್ರಿಯಂಕರ, ರಾಜಾ ತ್ರಸದಸ್ಯು, ರಾಜರ್ಷಿಸತ್ತಮ ಶ್ವೇತ, ವಿಖ್ಯಾತ ಮಹಾಭಿಷ, ನಿಮಿರಾಜ, ಅಷ್ಟಕ, ಆಯು, ರಾಜರ್ಷಿ ಕ್ಷುಪ, ನರಾಧಿಪ ಕಕ್ಷೇಯು, ಔಶೀನರ ಶಿಬಿ, ನರಾಧಿಪ ಗಯ, ಪ್ರತರ್ದನ, ದಿವೋದಾಸ, ಕೋಸಲೇಶ್ವರ ಸೌದಾಸ, ಐಲ, ರಾಜರ್ಷಿ ನಲ, ಪ್ರಜಾಪತಿ ಮನು, ಹವಿಧ್ರ, ಪೃಷದ್ರ, ಪ್ರತೀಪ, ಶಂತನು, ಕಕ್ಷಸೇನ, ಮೊದಲಾದ ರಾಜರ್ಷಿಗಳು ಮತ್ತು ಇಲ್ಲಿ ಹೇಳಿರದ ಅನ್ಯರು.

[9]13151051a ಮಾ ವಿಘ್ನಂ ಮಾ ಚ ಮೇ ಪಾಪಂ ಮಾ ಚ ಮೇ ಪರಿಪಂಥಿನಃ|

13151051c ಧ್ರುವೋ ಜಯೋ ಮೇ ನಿತ್ಯಂ ಸ್ಯಾತ್ಪರತ್ರ ಚ ಪರಾ ಗತಿಃ||

ಈ ಮಹಾತ್ಮರನ್ನು ಸ್ಮರಿಸುವುದರಿಂದ ನನ್ನ ಕಾರ್ಯಗಳಲ್ಲಿ ವಿಘ್ನವುಂಟಾಗದಿರಲಿ. ಪಾಪವುಂಟಾಗದಿರಲಿ. ಶತ್ರುಗಳಿಲ್ಲದಿರಲಿ. ನನಗೆ ಅನುದಿನವೂ ಶಾಶ್ವತ ವಿಜಯವು ಲಭಿಸಲಿ. ಪರಲೋಕದಲ್ಲಿಯೂ ನನಗೆ ಸದ್ಗತಿಯುಂಟಾಗಲಿ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಂಶಾನುಕೀರ್ತನಂ ನಾಮ ಏಕಪಂಚಾಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಂಶಾನುಕೀರ್ತನ ಎನ್ನುವ ನೂರಾಐವತ್ತೊಂದನೇ ಅಧ್ಯಾಯವು.

 

[1] ಗೋರಖಪುರ ಸಂಪುಟದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ವೈಶಂಪಾಯನ ಉವಾಚ| ಶರತಲ್ಪಗತಂ ಭೀಷ್ಮಂ ಪಾಂಡವೋಽಥ ಕುರೂದ್ವಹಃ| ಯುಧಿಷ್ಠಿರೋ ಹಿತಂ ಪ್ರೇಪ್ಸುರಪೃಚ್ಛತ್ಕಲ್ಮಷಾಪಹಮ್||

[2] ಗೋರಖಪುರ ಸಂಪುಟದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ವೈಶಂಪಾಯನ ಉವಾಚ| ತಸ್ಮೈ ಶುಶ್ರೂಷಮಾಣಾಯ ಭೂಯಃ ಶಾಂತನವಸ್ತದಾ| ದೈವಂ ವಂಶಂ ಯಥಾನ್ಯಾಯಮಾಚಷ್ಟ ಪುರುಷರ್ಷಭ||

[3] ಗೋರಖಪುರ ಸಂಪುಟದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಯದಹ್ನಾ ಕುರುತೇ ಪಾಪಮಿಂದ್ರಿಯೈಃ ಪುರುಷಶ್ಚರನ್| ಬುದ್ಧಿಪೂರ್ವಮಬುದ್ಧಿರ್ವಾ ರಾತ್ರೌ ಯಚ್ಚಾಪಿ ಸಂಧ್ಯಯೋಃ|| ಮುಚ್ಯತೇ ಸರ್ವಪಾಪೇಭ್ಯಃ ಕೀರ್ತ್ಯಯನ್ವೈ ಶುಚಿಃ ಸದಾ| ನಾಂದೋ ನ ಬದಿರಃ ಕಾಲೇ ಕುರುತೇ ಸ್ವಸ್ತಿಮಾನ್ಸದಾ|| ತಿರ್ಯಗ್ಯೋನಿ ನ ಗಚ್ಛೇಚ್ಚ ನರಕಂ ಸಂಕರಾಣಿ ಚ| ನ ಚ ದುಃಖಭಯಂ ತಸ್ಯ ಮರಣೇ ಸ ನ ಮುಹ್ಯತಿ||

[4] ಸಂಕಲ್ಪಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಉಷಂಗು ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಪವನೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ದೃಷ್ಟರಥಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಜಃ ಪ್ರಾಚೀನಬರ್ಹಿಷ್ಚ ತಥೇಕ್ಷ್ವಾಕುರ್ಮಹಾಯಶಾಃ| ಅನರಣ್ಯೋ ನರಪತಿರ್ಜಾನುಜಂಘಸ್ತಥೈವ ಚ||

[9] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಕಲ್ಯಮುತ್ಥಾಯ ಯೋ ನಿತ್ಯಂ ಸಂಧ್ಯೇದ್ವೇಽಸ್ತಮೋದಯೇ| ಪಥೇಚ್ಛುಚಿರನಾವೃತ್ತಃ ಸ ಧರ್ಮಫಲಭಾಗ್ಯವೇತ್||

Comments are closed.