Anushasana Parva: Chapter 150

ಅನುಶಾಸನ ಪರ್ವ: ದಾನಧರ್ಮ ಪರ್ವ

೧೫೦

ಧರ್ಮಸಂಶಯ

13150001 ಭೀಷ್ಮ ಉವಾಚ|

13150001a ಕಾರ್ಯತೇ ಯಚ್ಚ ಕ್ರಿಯತೇ ಸಚ್ಚಾಸಚ್ಚ ಕೃತಂ ತತಃ|

13150001c ತತ್ರಾಶ್ವಸೀತ ಸತ್ಕೃತ್ವಾ ಅಸತ್ಕೃತ್ವಾ ನ ವಿಶ್ವಸೇತ್||

ಭೀಷ್ಮನು ಹೇಳಿದನು: “ಸತ್ಕಾರ್ಯ ಅಥವಾ ಅಸತ್ಕಾರ್ಯವನ್ನು ಮಾಡಲಿ ಅಥವಾ ಮಾಡಿಸಲಿ, ಸತ್ಕೃತಿಯಿಂದ ಒಳ್ಳೆಯದಾಗುವುದೆಂಬ ವಿಶ್ವಾಸವನ್ನಿಟ್ಟುಕೊಳ್ಳಬೇಕು ಮತ್ತು ಕೆಟ್ಟ ಕೆಲಸದಿಂದ ಕೇಡಾಗುವುದಿಲ್ಲ ಎಂಬ ವಿಶ್ವಾಸವನ್ನಿಟ್ಟುಕೊಳ್ಳಬಾರದು.

13150002a ಕಾಲ ಏವಾತ್ರ ಕಾಲೇನ ನಿಗ್ರಹಾನುಗ್ರಹೌ ದದತ್|

13150002c ಬುದ್ಧಿಮಾವಿಶ್ಯ ಭೂತಾನಾಂ ಧರ್ಮಾರ್ಥೇಷು ಪ್ರವರ್ತತೇ||

ಸಮಯವು ಪ್ರಾಪ್ತವಾದಾಗ ಕಾಲವೇ ನಿಗ್ರಹ-ಅನುಗ್ರಹಳನ್ನು ನೀಡಿ ಜೀವಿಗಳ ಬುದ್ಧಿಯನ್ನು ಪ್ರವೇಶಿಸಿ ಧರ್ಮಾರ್ಥಸಾಧನೆಗಳಲ್ಲಿ ತೊಡಗಿಸುತ್ತದೆ.

13150003a ಯದಾ ತ್ವಸ್ಯ ಭವೇದ್ಬುದ್ಧಿರ್ಧರ್ಮ್ಯಾ ಚಾರ್ಥಪ್ರದರ್ಶಿನೀ|

13150003c ತದಾಶ್ವಸೀತ ಧರ್ಮಾತ್ಮಾದೃಢಬುದ್ಧಿರ್ನ ವಿಶ್ವಸೇತ್||

ಧರ್ಮಾರ್ಥಸಾರವಾದ ಬುದ್ಧಿಯಿರುವವನು ಧರ್ಮಾತ್ಮನೆಂದು ತೋರಿಸಿಕೊಡುತ್ತದೆ ಮತ್ತು ಅವನಲ್ಲಿ ವಿಶ್ವಾಸವನ್ನಿಡಬೇಕು. ದೃಢಬುದ್ಧಿಯಿಲ್ಲದಿರುವವನ ಮೇಲೆ ವಿಶ್ವಾಸವನ್ನಿಡಬಾರದು.

13150004a ಏತಾವನ್ಮಾತ್ರಮೇತದ್ಧಿ ಭೂತಾನಾಂ ಪ್ರಾಜ್ಞಲಕ್ಷಣಮ್|

13150004c ಕಾಲಯುಕ್ತೋಽಪ್ಯುಭಯವಿಚ್ಚೇಷಮರ್ಥಂ ಸಮಾಚರೇತ್||

ಇದೇ ಜೀವಿಗಳ ಪ್ರಾಜ್ಞಲಕ್ಷಣವೆಂದು ತಿಳಿ. ಕಾಲಯುಕ್ತನಾದವನು ಧರ್ಮ-ಅರ್ಥ ಎರಡಕ್ಕೂ ಯೋಗ್ಯವಾದ ರೀತಿಯಲ್ಲಿ ನಡೆದುಕೊಳ್ಳಬೇಕು.

13150005a ಯಥಾ ಹ್ಯುಪಸ್ಥಿತೈಶ್ವರ್ಯಾಃ ಪೂಜಯಂತೇ ನರಾ ನರಾನ್[1]|

13150005c ಏವಮೇವಾತ್ಮನಾತ್ಮಾನಂ ಪೂಜಯಂತೀಹ ಧಾರ್ಮಿಕಾಃ||

ಐಶ್ವರದಿಂದ ಕೂಡಿರುವವರ ನರರನ್ನು ನರರು ಪೂಜಿಸುವಂತೆ ಧಾರ್ಮಿಕರು ತಮ್ಮನ್ನು ತಾವೇ ಪೂಜಿಸಿಕೊಳ್ಳುತ್ತಾರೆ.

13150006a ನ ಹ್ಯಧರ್ಮತಯಾ ಧರ್ಮಂ ದದ್ಯಾತ್ಕಾಲಃ ಕಥಂ ಚನ|

13150006c ತಸ್ಮಾದ್ವಿಶುದ್ಧಮಾತ್ಮಾನಂ ಜಾನೀಯಾದ್ಧರ್ಮಚಾರಿಣಮ್||

ಕಾಲವು ಎಂದೂ ಅಧರ್ಮಿಗೆ ಧರ್ಮದ ಫಲವನ್ನು ಕೊಡುವುದಿಲ್ಲ. ಆದುದರಿಂದ ಧರ್ಮಚಾರಿಣಿಯು ವಿಶುದ್ಧಾತ್ಮನೆಂದು ತಿಳಿಯಬೇಕು.

13150007a ಸ್ಪ್ರಷ್ಟುಮಪ್ಯಸಮರ್ಥೋ ಹಿ ಜ್ವಲಂತಮಿವ ಪಾವಕಮ್|

13150007c ಅಧರ್ಮಃ ಸತತೋ ಧರ್ಮಂ ಕಾಲೇನ ಪರಿರಕ್ಷಿತಮ್||

ಏಕೆಂದರೆ ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಮತ್ತು ಸತತವೂ ಕಾಲನಿಂದ ಪರಿರಕ್ಷಿತವಾಗಿರುವ ಧರ್ಮವನ್ನು ಅಧರ್ಮವು ಮುಟ್ಟಲೂ ಕೂಡ ಅಸಮರ್ಥವಾಗುತ್ತದೆ.

13150008a ಕಾರ್ಯಾವೇತೌ ಹಿ ಕಾಲೇನ ಧರ್ಮೋ ಹಿ ವಿಜಯಾವಹಃ|

13150008c ತ್ರಯಾಣಾಮಪಿ ಲೋಕಾನಾಮಾಲೋಕಕರಣೋ[2] ಭವೇತ್||

ಕಾಲವು ಈ ಎರಡನ್ನೂ ಮಾಡುತ್ತದೆ. ಧರ್ಮವು ವಿಜಯಪ್ರದವಾದುದು. ಮೂರು ಲೋಕಗಳಲ್ಲಿಯೂ ಧರ್ಮವೇ ಬೆಳಕಾಗಿರುವುದು.

13150009a ತತ್ರ ಕಶ್ಚಿನ್ನಯೇತ್ ಪ್ರಾಜ್ಞೋ[3] ಗೃಹೀತ್ವೈವ ಕರೇ ನರಮ್|

13150009c ಉಹ್ಯಮಾನಃ ಸ ಧರ್ಮೇಣ ಧರ್ಮೇ ಬಹುಭಯಚ್ಚಲೇ[4]||

ಅಲ್ಲಿ ಯಾರಾದರೂ ಪ್ರಾಜ್ಞನು ಮನುಷ್ಯನನ್ನು ಕೈಹಿಡಿದು ಧರ್ಮಮಾರ್ಗಕ್ಕೆ ಕೊಂಡೊಯ್ಯಬಹುದು. ಅಧರ್ಮದಿಂದಾಗುವ ಭಯವನ್ನು ಊಹಿಸಿಕೊಂಡು ಅವನು ಧರ್ಮಮಾರ್ಗಕ್ಕೆ ಬರಬಹುದು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಧರ್ಮಪ್ರಶಂಸಾಯಾಂ ಪಂಚಾಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಧರ್ಮಪ್ರಶಂಸಾ ಎನ್ನುವ ನೂರಾಐವತ್ತನೇ ಅಧ್ಯಾಯವು.

 

[1] ಪ್ರಜಾಯಂತೇ ನ ರಾಜಸಾಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಲೋಕಾನಾಮಾಲೋಕಃ ಕಾರಣಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ನ ತು ಕಶ್ಚಿನ್ನಯೇತ್ಪ್ರಾಜ್ಞೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಉಚ್ಯಮಾನಸ್ತು ಧರ್ಮೇಣ ಧರ್ಮಲೋಕಭಯಚ್ಛಲೇ|| ಎಂಬ ಪಾಠಾಂತರವಿದೆ (ಭಾರತ ದರ್ಶನ). ಭಾರತ ದರ್ಶನದಲ್ಲಿ ಈ ಶ್ಲೋಕದ ನಂತರ ಈ ಅಧ್ಯಾಯದಲ್ಲಿ ೭ ಅಧಿಕ ಶ್ಲೋಕಗಳಿವೆ: ಶೂದ್ರೋಹಂ ನಾಧಿಕಾರೋ ಮೇ ಚಾತುರಾಶ್ರಮ್ಯಸೇವನೇ| ಇತಿ ವಿಜ್ಞಾನಮಪರೇ ನಾತ್ಮನ್ಯುಪದಧತ್ಯುತ||೧೦|| ಪಂಚಭೂತಶರೀರಣಾಂ ಸರ್ವೇಷಾಂ ಸದೃಶಾತ್ಮಾನಾಮ್||| |೧೧|| ಲೋಕಧರ್ಮೇ ಚ ಧರ್ಮೇ ಚ ವಿಶೇಷಕರಣಂ ಕೃತಮ್| ಯಥೈಕತ್ವಂ ಪುನರ್ಯಾಂತಿ ಪ್ರಾಣಿನಸ್ತತ್ರ ವಿಸ್ತರಃ||೧೨|| ಅಧ್ರುವೋ ಹಿ ಕಥಂ ಲೋಕಃ ಸ್ಮೃತೋ ಧರ್ಮಃ ಕಥಂ ಧ್ರುವಃ| ಯತ್ರಕಾ ಲೋ ಧ್ರುವಸ್ತಾತ ತತ್ರ ಧರ್ಮಃ ಸನಾತನಃ|| ೧೩|| ಸರ್ವೇಷಾಂ ತುಲ್ಯದೇಹಾನಾಂ ಸರ್ವೇಷಾಂ ಸದೃಶಾತ್ಮನಾಮ್| ಕಾಲೋ ಧರ್ಮೇಣ ಸಂಯುಕ್ತಃ ಶೇಷ ಏವ ಸ್ವಯಂ ಗುರುಃ|| ೧೪|| ಏವಂ ಸತಿ ನ ದೋಷೋಽಸ್ತಿ ಭೂತಾನಾಂ ಧರ್ಮಸೇವನೇ| ತಿರ್ಯಗ್ಯೋನಾವಪಿ ಸತಾಂ ಲೋಕ ಏವ ಮತೋ ಗುರುಃ||೧೫ ||

Comments are closed.