Aranyaka Parva: Chapter 132

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೩೨

ಅಷ್ಟಾವಕ್ರ

ಲೋಮಶನು ಅಷ್ಟಾವಕ್ರ ಚರಿತ್ರೆಯನ್ನು ಹೇಳಲು ಪ್ರಾರಂಭಿಸಿದುದು (೧-೫). ತಾಯಿ ಸುಜಾತಳ ಹೊಟ್ಟಿಯಲ್ಲಿರುವಾಗಲೇ ಉದ್ದಾಲಕನ ಅಳಿಯ ಕಹೋಡನ ಮಗನು ತಂದೆಯ ಅವಹೇಳನ ಮಾಡಿದುದರಿಂದ ಎಂಟು ಕಡೆ ವಕ್ರನಾಗಿ ಹುಟ್ಟು ಎಂದು ತಂದೆಯಿಂದ ಶಪಿಸಲ್ಪಟ್ಟು ಅಷ್ಟಾವಕ್ರನೆನಿಸಿಕೊಂಡಿದ್ದುದು (೬-೧೦). ಪತ್ನಿಯ ಬೇಡಿಕೆಯಂತೆ ವಿತ್ತವನ್ನರಸಿ ಹೋದ ಕಹೋಡನು ಜನಕನ ಆಸ್ಥಾನದಲ್ಲಿದ್ದ ವಾದವಿದು ಬಂದಿಯಿಂದ ಸೋತು ಸಮುದ್ರದಲ್ಲಿ ಮುಳುಗಿಸಲ್ಪಟ್ಟಿದುದು (೧೧-೧೩). ಈ ವಿಷಯವನ್ನು ಅಷ್ಟಾವಕ್ರನಿಂದ ಮುಚ್ಚಿಟ್ಟಿದುದು; ಅಷ್ಟಾವಕ್ರನು ಅಜ್ಜ ಉದ್ದಾಲಕನನ್ನೇ ತನ್ನ ತಂದೆಯೆಂದೂ, ತನ್ನ ವಯಸ್ಸಿನ ಸೋದರಮಾವ ಶ್ವೇತಕೇತುವನ್ನು ಸಹೋದರನೆಂದೂ ತಿಳಿದುಕೊಂಡು ನಡೆದುಕೊಂಡಿದುದು (೧೪-೧೫). ಹನ್ನೆರಡನೆಯ ವರ್ಷದಲ್ಲಿ ಸತ್ಯ ಸಂಗತಿಯನ್ನು ತಿಳಿದ ಅಷ್ಟಾವಕ್ರನು ಬಂದಿಯನ್ನು ಸೋಲಿಸಲು ಶ್ವೇತಕೇತುವಿನೊಡನೆ ಜನಕನ ಆಸ್ಥಾನಕ್ಕೆ ಹೋದುದು (೧೬-೨೦).

Image result for ashtavakra images03132001 ಲೋಮಶ ಉವಾಚ|

03132001a ಯಃ ಕಥ್ಯತೇ ಮಂತ್ರವಿದಗ್ರ್ಯಬುದ್ಧಿರ್|

         ಔದ್ದಾಲಕಿಃ ಶ್ವೇತಕೇತುಃ ಪೃಥಿವ್ಯಾಂ|

03132001c ತಸ್ಯಾಶ್ರಮಂ ಪಶ್ಯ ನರೇಂದ್ರ ಪುಣ್ಯಂ|

         ಸದಾಫಲೈರುಪಪನ್ನಂ ಮಹೀಜೈಃ||

ಲೋಮಶನು ಹೇಳಿದನು: “ನರೇಂದ್ರ! ಮಂತ್ರವಿದು ಬುದ್ಧಿವಂತ ಔದ್ದಾಲಕಿ ಶ್ವೇತಕೇತು ಎಂದು ಹೇಳುತ್ತಾರಲ್ಲ ಅವನ ಪುಣ್ಯ ಆಶ್ರಮವನ್ನು ನೋಡು. ಭೂಮಿಯಲ್ಲಿ ಬೆಳೆದ ವೃಕ್ಷಗಳು ಸದಾ ಹಣ್ಣುಗಳಿಂದ ತುಂಬಿವೆ.

03132002a ಸಾಕ್ಷಾದತ್ರ ಶ್ವೇತಕೇತುರ್ದದರ್ಶ|

         ಸರಸ್ವತೀಂ ಮಾನುಷದೇಹರೂಪಾಂ|

03132002c ವೇತ್ಸ್ಯಾಮಿ ವಾಣೀಮಿತಿ ಸಂಪ್ರವೃತ್ತಾಂ|

         ಸರಸ್ವತೀಂ ಶ್ವೇತಕೇತುರ್ಬಭಾಷೇ||

ಇಲ್ಲಿ ಶ್ವೇತಕೇತುವು ಮನುಷ್ಯದೇಹರೂಪಿಣಿ ಸಾಕ್ಷಾತ್ ಸರಸ್ವತಿಯನ್ನು ನೋಡಿದನು. ಇಲ್ಲಿದ್ದ ಸರಸ್ವತಿಯಲ್ಲಿ ಶ್ವೇತಕೇತುವು ವಾಣಿಯು ನನಗೆ ತಿಳಿಯುವಂತಾಗಲಿ ಎಂದು ಕೇಳಿಕೊಂಡನು.

03132003a ತಸ್ಮಿನ್ಕಾಲೇ ಬ್ರಹ್ಮವಿದಾಂ ವರಿಷ್ಠಾವ್|

         ಆಸ್ತಾಂ ತದಾ ಮಾತುಲಭಾಗಿನೇಯೌ|

03132003c ಅಷ್ಟಾವಕ್ರಶ್ಚೈವ ಕಹೋಡಸೂನುರ್|

         ಔದ್ದಾಲಕಿಃ ಶ್ವೇತಕೇತುಶ್ಚ ರಾಜನ್||

ರಾಜನ್! ಆ ಕಾಲದಲ್ಲಿ ಇವರಿಬ್ಬರು ಬ್ರಹ್ಮವಿದರಲ್ಲಿ ವರಿಷ್ಠರಾಗಿದ್ದರು - ಮಾವ ಅಳಿಯರಾದ ಕಹೋಡನ ಮಗ ಅಷ್ಟಾವಕ್ರ ಮತ್ತು ಉದ್ದಾಲಕನ ಮಗ ಶ್ವೇತಕೇತು.

03132004a ವಿದೇಹರಾಜಸ್ಯ ಮಹೀಪತೇಸ್ತೌ|

         ವಿಪ್ರಾವುಭೌ ಮಾತುಲಭಾಗಿನೇಯೌ|

03132004c ಪ್ರವಿಶ್ಯ ಯಜ್ಞಾಯತನಂ ವಿವಾದೇ|

         ಬಂದಿಂ ನಿಜಗ್ರಾಹತುರಪ್ರಮೇಯಂ||

ಅವರಿಬ್ಬರು ಮಾವ-ಅಳಿಯರಾದ ವಿಪ್ರರು ಮಹೀಪತಿ ವಿದೇಹರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ಅಪ್ರಮೇಯನಾದ ಬಂದಿಯನ್ನು ವಿವಾದದಲ್ಲಿ ಸೋಲಿಸಿದರು.”

03132005 ಯುಧಿಷ್ಠಿರ ಉವಾಚ|

03132005a ಕಥಂಪ್ರಭಾವಃ ಸ ಬಭೂವ ವಿಪ್ರಸ್|

         ತಥಾಯುಕ್ತಂ ಯೋ ನಿಜಗ್ರಾಹ ಬಂದಿಂ|

03132005c ಅಷ್ಟಾವಕ್ರಃ ಕೇನ ಚಾಸೌ ಬಭೂವ|

         ತತ್ಸರ್ವಂ ಮೇ ಲೋಮಶ ಶಂಸ ತತ್ತ್ವಂ||

ಯುಧಿಷ್ಠಿರನು ಹೇಳಿದನು: “ಲೋಮಶ! ಬಂದಿಯನ್ನು ಸೋಲಿಸಿದ ಆ ವಿಪ್ರನ ಪ್ರಭಾವವೇನಿತ್ತು? ಗುಣಗಳೇನಿದ್ದವು? ಅವನಿಗೆ ಅಷ್ಟಾವಕ್ರನೆಂಬ ಹೆಸರು ಏಕೆ ಬಂದಿತು? ಅವೆಲ್ಲವನ್ನು ನನಗೆ ಹೇಳು.”

03132006 ಲೋಮಶ ಉವಾಚ|

03132006a ಉದ್ದಾಲಕಸ್ಯ ನಿಯತಃ ಶಿಷ್ಯ ಏಕೋ|

         ನಾಮ್ನಾ ಕಹೋಡೇತಿ ಬಭೂವ ರಾಜನ್|

03132006c ಶುಶ್ರೂಷುರಾಚಾರ್ಯವಶಾನುವರ್ತೀ|

         ದೀರ್ಘಂ ಕಾಲಂ ಸೋಽಧ್ಯಯನಂ ಚಕಾರ||

ಲೋಮಶನು ಹೇಳಿದನು: “ರಾಜನ್! ಉದ್ದಾಲಕನಿಗೆ ಕಹೋಡ ಎನ್ನುವ ಓರ್ವ ನಿಯತನಾದ ಶಿಷ್ಯನಿದ್ದನು. ವಶಾನುವರ್ತಿಯಾದ ಅವನು ದೀರ್ಘಕಾಲದವರೆಗೆ ಆಚಾರ್ಯನ ಶುಶ್ರೂಷೆಯನ್ನು ಮಾಡಿ ಅಧ್ಯಯನ ನಿರತನಾಗಿದ್ದನು.

03132007a ತಂ ವೈ ವಿಪ್ರಾಃ ಪರ್ಯಭವಂಶ್ಚ ಶಿಷ್ಯಾಸ್|

         ತಂ ಚ ಜ್ಞಾತ್ವಾ ವಿಪ್ರಕಾರಂ ಗುರುಃ ಸಃ|

03132007c ತಸ್ಮೈ ಪ್ರಾದಾತ್ಸದ್ಯ ಏವ ಶ್ರುತಂ ಚ|

         ಭಾರ್ಯಾಂ ಚ ವೈ ದುಹಿತರಂ ಸ್ವಾಂ ಸುಜಾತಾಂ||

ಅವನ ಸುತ್ತಲೂ ಇನ್ನೂ ಅನೇಕ ವಿಪ್ರರಿದ್ದರೂ ಗುರುವು ಇವನಲ್ಲಿ ವಿಪ್ರನ ಚಿಹ್ನೆಯನ್ನು ಗುರುತಿಸಿ, ಅವನಿಗೆ ಆಗಲೇ ತಾನು ತಿಳಿದುದೆಲ್ಲವನ್ನೂ ಮತ್ತು ತನ್ನ ಮಗಳು ಸುಜಾತಳನ್ನು ಪತ್ನಿಯನ್ನಾಗಿಯೂ ನೀಡಿದನು.

03132008a ತಸ್ಯಾ ಗರ್ಭಃ ಸಮಭವದಗ್ನಿಕಲ್ಪಃ|

         ಸೋಽಧೀಯಾನಂ ಪಿತರಮಥಾಭ್ಯುವಾಚ|

03132008c ಸರ್ವಾಂ ರಾತ್ರಿಮಧ್ಯಯನಂ ಕರೋಷಿ|

         ನೇದಂ ಪಿತಃ ಸಮ್ಯಗಿವೋಪವರ್ತತೇ||

ಅವಳಿಗೆ ಅಗ್ನಿಸಮಾನವಾದ ಗರ್ಭವಾಯಿತು. ಅದು ಅಧ್ಯಯನ ಮಾಡುತ್ತಿರುವ ತನ್ನ ತಂದೆಗೆ ಹೇಳಿತು: “ತಂದೇ! ರಾತ್ರಿಯಿಡೀ ಅಧ್ಯಯನವನ್ನು ಮಾಡುತ್ತಿರುತ್ತೀಯೆ. ಆದರೂ ನಿನಗೆ ಸರಿಯಾಗಿ ಬರುತ್ತಿಲ್ಲ!”

03132009a ಉಪಾಲಬ್ಧಃ ಶಿಷ್ಯಮಧ್ಯೇ ಮಹರ್ಷಿಃ|

         ಸ ತಂ ಕೋಪಾದುದರಸ್ಥಂ ಶಶಾಪ|

03132009c ಯಸ್ಮಾತ್ಕುಕ್ಷೌ ವರ್ತಮಾನೋ ಬ್ರವೀಷಿ|

         ತಸ್ಮಾದ್ವಕ್ರೋ ಭವಿತಾಸ್ಯಷ್ಟಕೃತ್ವಃ||

ಶಿಷ್ಯರ ಮಧ್ಯದಲ್ಲಿ ಅಪಮಾನಿತಗೊಂಡ ಆ ಮಹರ್ಷಿಯು ಕೋಪದಿಂದ ಹೊಟ್ಟೆಯಲ್ಲಿದ್ದವನಿಗೆ ಶಾಪವನ್ನಿತ್ತನು - “ಹೊಟ್ಟೆಯಲ್ಲಿರುವಾಗಲೇ ಮಾತನಾಡಲು ತೊಡಗಿದ ನೀನು ಎಂಟು ಕಡೆಗಳಲ್ಲಿ ವಕ್ರನಾಗುತ್ತೀಯೆ!”

03132010a ಸ ವೈ ತಥಾ ವಕ್ರ ಏವಾಭ್ಯಜಾಯದ್|

         ಅಷ್ಟಾವಕ್ರಃ ಪ್ರಥಿತೋ ವೈ ಮಹರ್ಷಿಃ|

03132010c ತಸ್ಯಾಸೀದ್ವೈ ಮಾತುಲಃ ಶ್ವೇತಕೇತುಃ|

         ಸ ತೇನ ತುಲ್ಯೋ ವಯಸಾ ಬಭೂವ||

ಅವನು ಹಾಗೆಯೇ ವಕ್ರನಾಗಿ ಹುಟ್ಟಿದನು. ಆ ಮಹರ್ಷಿಯು ಅಷ್ಟಾವಕ್ರನೆಂದು ಪ್ರಥಿತನಾದನು. ಅವನ ಸೋದರ ಮಾವನು ಶ್ವೇತಕೇತು. ಅವರಿಬ್ಬರೂ ಒಂದೇ ವಯಸ್ಸಿನವರಾಗಿದ್ದರು.

03132011a ಸಂಪೀಡ್ಯಮಾನಾ ತು ತದಾ ಸುಜಾತಾ|

         ವಿವರ್ಧಮಾನೇನ ಸುತೇನ ಕುಕ್ಷೌ|

03132011c ಉವಾಚ ಭರ್ತಾರಮಿದಂ ರಹೋಗತಾ|

         ಪ್ರಸಾದ್ಯ ಹೀನಂ ವಸುನಾ ಧನಾರ್ಥಿನೀ||

ಹೊಟ್ಟೆಯಲ್ಲಿ ಮಗನು ಬೆಳೆಯುತ್ತಿರುವಾಗ ಸುಜಾತಳು ತುಂಬಾ ದುಃಖಿತಳಾಗಿದ್ದಳು. ಸಂಪತ್ತನ್ನು ಬಯಸಿದ ಅವಳು ಬಡವನಾದ ತನ್ನ ಪತಿಗೆ ನೋವಾಗದಂತೆ ಹೇಳಿದಳು:

03132012a ಕಥಂ ಕರಿಷ್ಯಾಮ್ಯಧನಾ ಮಹರ್ಷೇ|

         ಮಾಸಶ್ಚಾಯಂ ದಶಮೋ ವರ್ತತೇ ಮೇ|

03132012c ನ ಚಾಸ್ತಿ ತೇ ವಸು ಕಿಂ ಚಿತ್ಪ್ರಜಾತಾ|

         ಯೇನಾಹಮೇತಾಮಾಪದಂ ನಿಸ್ತರೇಯಂ||

“ಮಹರ್ಷೇ! ನಾವು ಸಂಪತ್ತಿಲ್ಲದೇ ಹೇಗೆ ಬದುಕೋಣ? ಇದು ನನ್ನ ಗರ್ಭದ ಹತ್ತನೆಯ ತಿಂಗಳು. ಮಗುವು ಹುಟ್ಟಿದ ನಂತರ ಬರುವ ಆಪತ್ತನ್ನು ನಿವಾರಿಸಿಕೊಳ್ಳಲು ನಿನ್ನಲ್ಲಿ ಏನೂ ಹಣವಿಲ್ಲವಲ್ಲ!”

03132013a ಉಕ್ತಸ್ತ್ವೇವಂ ಭಾರ್ಯಯಾ ವೈ ಕಹೋಡೋ|

         ವಿತ್ತಸ್ಯಾರ್ಥೇ ಜನಕಮಥಾಭ್ಯಗಚ್ಚತ್|

03132013c ಸ ವೈ ತದಾ ವಾದವಿದಾ ನಿಗೃಹ್ಯ|

         ನಿಮಜ್ಜಿತೋ ಬಂದಿನೇಹಾಪ್ಸು ವಿಪ್ರಃ||

ಹೆಂಡತಿಯು ಹೀಗೆ ಹೇಳಲು ಕಹೋಡನು ವಿತ್ತವನ್ನರಸಿ ಜನಕನಲ್ಲಿಗೆ ಹೋದನು. ಆದರೆ ಅಲ್ಲಿ ವಾದವಿದು ಬಂದಿಯು ಆ ವಿಪ್ರನನ್ನು ಸೋಲಿಸಿ ಸಮುದ್ರದಲ್ಲಿ ಮುಳುಗಿಸಿದನು.

03132014a ಉದ್ದಾಲಕಸ್ತಂ ತು ತದಾ ನಿಶಮ್ಯ|

         ಸೂತೇನ ವಾದೇಽಪ್ಸು ತಥಾ ನಿಮಜ್ಜಿತಂ|

03132014c ಉವಾಚ ತಾಂ ತತ್ರ ತತಃ ಸುಜಾತಾಂ|

         ಅಷ್ಟಾವಕ್ರೇ ಗೂಹಿತವ್ಯೋಽಯಮರ್ಥಃ||

ಕಹೋಡನು ಸೂತನಿಂದ ಸೋಲಿಸಲ್ಪಟ್ಟು ಸಮುದ್ರದಲ್ಲಿ ಮುಳುಗಿಸಲ್ಪಟ್ಟ ಎಂಬ ವಾರ್ತೆಯನ್ನು ಉದ್ದಾಲಕನು ಪಡೆದನು. ಆಗ ಅವನು ಅಲ್ಲಿಯೇ ಸುಜಾತಳಿಗೆ ಹೇಳಿದನು: “ಈ ಸಂಗತಿಯನ್ನು ಅಷ್ಟಾವಕ್ರನಿಂದ ಮುಚ್ಚಿಡಬೇಕು.”

03132015a ರರಕ್ಷ ಸಾ ಚಾಪ್ಯತಿ ತಂ ಸುಮಂತ್ರಂ|

         ಜಾತೋಽಪ್ಯೇವಂ ನ ಸ ಶುಶ್ರಾವ ವಿಪ್ರಃ|

03132015c ಉದ್ದಾಲಕಂ ಪಿತೃವಚ್ಚಾಪಿ ಮೇನೇ|

         ಅಷ್ಟಾವಕ್ರೋ ಭ್ರಾತೃವಚ್ಶ್ವೇತಕೇತುಂ||

ಅವಳಾದರೂ ಈ ವಿಷಯವನ್ನು ಗೌಪ್ಯವಾಗಿಯೇ ರಕ್ಷಿಸಿದಳು. ಹುಟ್ಟಿದ ನಂತರವೂ ಆ ವಿಪ್ರನು ಏನನ್ನೂ ಕೇಳಲಿಲ್ಲ. ಅಷ್ಟಾವಕ್ರನು ಉದ್ದಾಲಕನನ್ನೇ ತಂದೆಯೆಂದು ಮತ್ತು ಶ್ವೇತಕೇತುವನ್ನು ಸಹೋದರನೆಂದು ತಿಳಿದನು.

03132016a ತತೋ ವರ್ಷೇ ದ್ವಾದಶೇ ಶ್ವೇತಕೇತುರ್|

         ಅಷ್ಟಾವಕ್ರಂ ಪಿತುರಂಕೇ ನಿಸನ್ನಂ|

03132016c ಅಪಾಕರ್ಷದ್ಗೃಹ್ಯ ಪಾಣೌ ರುದಂತಂ|

         ನಾಯಂ ತವಾಂಕಃ ಪಿತುರಿತ್ಯುಕ್ತವಾಂಶ್ಚ||

ಹನ್ನೆರಡು ವರ್ಷಗಳಾದಾಗ ಅಷ್ಟಾವಕ್ರನು ತಂದೆಯ ತೊಡೆಯಮೇಲೆ ಕುಳಿತುಕೊಂಡಿದ್ದಾಗ ಶ್ವೇತಕೇತುವು ಅವನ ಕೈಗಳನ್ನು ಹಿಡಿದೆಳೆದು ಅಳುತ್ತಿರುವವನಿಗೆ “ಇದು ನಿನ್ನ ತಂದೆಯ ತೊಡೆಯಲ್ಲ!” ಎಂದನು.

03132017a ಯತ್ತೇನೋಕ್ತಂ ದುರುಕ್ತಂ ತತ್ತದಾನೀಂ|

         ಹೃದಿ ಸ್ಥಿತಂ ತಸ್ಯ ಸುದುಃಖಮಾಸೀತ್|

03132017c ಗೃಹಂ ಗತ್ವಾ ಮಾತರಂ ರೋದಮಾನಃ|

         ಪಪ್ರಚ್ಚೇದಂ ಕ್ವ ನು ತಾತೋ ಮಮೇತಿ||

ಕೆಟ್ಟದಾಗಿ ಹೇಳಲ್ಪಟ್ಟ ಆ ಮಾತು ಅವನ ಹೃದಯದಲ್ಲಿ ನೆಲೆಮಾಡಿತು ಮತ್ತು ಅವನು ಬಹಳ ದುಃಖಿತನಾದನು. ಮನೆಗೆ ಹೋಗಿ ಅಳುತ್ತಾ ತಾಯಿಯಲ್ಲಿ ಕೇಳಿದನು: “ನನ್ನ ತಂದೆ ಯಾರು?”

03132018a ತತಃ ಸುಜಾತಾ ಪರಮಾರ್ತರೂಪಾ|

         ಶಾಪಾದ್ಭೀತಾ ಸರ್ವಮೇವಾಚಚಕ್ಷೇ|

03132018c ತದ್ವೈ ತತ್ತ್ವಂ ಸರ್ವಮಾಜ್ಞಾಯ ಮಾತುರ್|

         ಇತ್ಯಬ್ರವೀಚ್ಛ್ವೇತಕೇತುಂ ಸ ವಿಪ್ರಃ||

ಆಗ ಸುಜಾತಳು ಪರಮ ದುಃಖಿತಳಾಗಿ ಅವನ ಶಾಪಕ್ಕೆ ಹೆದರಿ ಎಲ್ಲವನ್ನೂ ಅವನಿಗೆ ಹೇಳಿದಳು. ಅವನ ತಾಯಿಯಿಂದ ಸತ್ಯವೆಲ್ಲವನ್ನೂ ತಿಳಿದನಂತರ ಆ ಬ್ರಾಹ್ಮಣನು ಶ್ವೇತಕೇತುವಿಗೆ ಹೇಳಿದನು:

03132019a ಗಚ್ಚಾವ ಯಜ್ಞಂ ಜನಕಸ್ಯ ರಾಜ್ಞೋ|

         ಬಹ್ವಾಶ್ಚರ್ಯಃ ಶ್ರೂಯತೇ ತಸ್ಯ ಯಜ್ಞಃ|

03132019c ಶ್ರೋಷ್ಯಾವೋಽತ್ರ ಬ್ರಾಹ್ಮಣಾನಾಂ ವಿವಾದಂ|

         ಅನ್ನಂ ಚಾಗ್ರ್ಯಂ ತತ್ರ ಭೋಕ್ಷ್ಯಾವಹೇ ಚ|

03132019e ವಿಚಕ್ಷಣತ್ವಂ ಚ ಭವಿಷ್ಯತೇ ನೌ|

         ಶಿವಶ್ಚ ಸೌಮ್ಯಶ್ಚ ಹಿ ಬ್ರಹ್ಮಘೋಷಃ||

“ನಾವಿಬ್ಬರೂ ರಾಜ ಜನಕನ ಯಜ್ಞಕ್ಕೆ ಹೋಗೋಣ. ಅವನ ಯಜ್ಞವು ಬಹುದಾಶ್ಚರ್ಯವೆಂದು ಕೇಳಿದ್ದೇವೆ. ಅಲ್ಲಿ ಬ್ರಾಹ್ಮಣರ ವಿವಾದವನ್ನು ಕೇಳೋಣ. ಅಲ್ಲಿ ಉತ್ತಮ ಊಟವನ್ನು ಮಾಡೋಣ. ಬ್ರಹ್ಮಘೋಷವು ಮಂಗಳಕರ ಮತ್ತು ಸೌಮ್ಯ. ಇದರಿಂದ ನಮ್ಮ ತಿಳುವಳಿಕೆಯೂ ವೃದ್ಧಿಯಾಗುತ್ತದೆ.”

03132020a ತೌ ಜಗ್ಮತುರ್ಮಾತುಲಭಾಗಿನೇಯೌ|

         ಯಜ್ಞಂ ಸಮೃದ್ಧಂ ಜನಕಸ್ಯ ರಾಜ್ಞಃ|

03132020c ಅಷ್ಟಾವಕ್ರಃ ಪಥಿ ರಾಜ್ಞಾ ಸಮೇತ್ಯ|

         ಉತ್ಸಾರ್ಯಮಾಣೋ ವಾಕ್ಯಮಿದಂ ಜಗಾದ||

ಆ ಇಬ್ಬರು ಮಾವ-ಅಳಿಯಂದಿರು ರಾಜ ಜನಕನ ಸಮೃದ್ಧ ಯಜ್ಞಕ್ಕೆ ಹೋದರು. ದಾರಿಯಲ್ಲಿ ಅವರನ್ನು ತಡೆಗಟ್ಟಲು, ರಾಜನನ್ನು ಭೇಟಿಮಾಡಿ ಅಷ್ಟಾವಕ್ರನು ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯೇ ದ್ವಾಂತ್ರಿಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಷ್ಟಾವಕ್ರದಲ್ಲಿ ನೂರಾಮೂವತ್ತೆರಡನೆಯ ಅಧ್ಯಾಯವು.

Related image

Kannada translation of Tirthayatra Parva, by Chapter:
  1. ಪಾರ್ಥನಾರದಸಂವಾದ
  2. ಪುಲಸ್ತ್ಯತೀರ್ಥಯಾತ್ರಾ-೧
  3. ಪುಲಸ್ತ್ಯತೀರ್ಥಯಾತ್ರಾ-೨
  4. ಪುಲಸ್ತ್ಯತೀರ್ಥಯಾತ್ರಾ-೩
  5. ಧೌಮ್ಯತೀರ್ಥಯಾತ್ರಾ-೧
  6. ಧೌಮ್ಯತೀರ್ಥಯಾತ್ರಾ-೨
  7. ಧೌಮ್ಯತೀರ್ಥಯಾತ್ರಾ-೩
  8. ಧೌಮ್ಯತೀರ್ಥಯಾತ್ರಾ-೪
  9. ಧೌಮ್ಯತೀರ್ಥಯಾತ್ರಾ-೫
  10. ಲೋಮಶಸಂವಾದ-೧
  11. ಲೋಮಶಸಂವಾದ-೨
  12. ಲೋಮಶತೀರ್ಥಯಾತ್ರಾ
  13. ಲೋಮಶತೀರ್ಥಯಾತ್ರಾ
  14. ಲೋಮಶತೀರ್ಥಯಾತ್ರಾ
  15. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
  16. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
  17. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
  18. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
  19. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
  20. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
  21. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
  22. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
  23. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
  24. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
  25. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
  26. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
  27. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
  28. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
  29. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
  30. ಲೋಮಶತೀರ್ಥಯಾತ್ರಾ
  31. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
  32. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
  33. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
  34. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
  35. ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
  36. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
  37. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
  38. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
  39. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
  40. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
  41. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
  42. ಲೋಮಶತೀರ್ಥಯಾತ್ರಾ – ಸುಕನ್ಯಾ-೧
  43. ಲೋಮಶತೀರ್ಥಯಾತ್ರಾ – ಸುಕನ್ಯಾ-೨
  44. ಲೋಮಶತೀರ್ಥಯಾತ್ರಾ – ಸುಕನ್ಯಾ-೩
  45. ಲೋಮಶತೀರ್ಥಯಾತ್ರಾ – ಸುಕನ್ಯಾ-೪
  46. ಲೋಮಶತೀರ್ಥಯಾತ್ರಾ – ಸುಕನ್ಯಾ-೫
  47. ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
  48. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
  49. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
  50. ಲೋಮಶತೀರ್ಥಯಾತ್ರಾ
  51. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
  52. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
  53. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
  54. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
  55. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
  56. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
  57. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
  58. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
  59. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
  60. ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
  61. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
  62. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
  63. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
  64. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
  65. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
  66. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
  67. ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
  68. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
  69. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
  70. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
  71. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
  72. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
  73. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
  74. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪

Comments are closed.