Aranyaka Parva: Chapter 135

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೩೫

ರೈಭ್ಯ-ಯವಕ್ರೀತ

ರೈಭ್ಯ ಮತ್ತು ಯವಕ್ರೀತನ ಕಥೆಯನ್ನು ಲೋಮಶನು ಪ್ರಾರಂಭಿಸಿದುದು (೧-೧೧). ಭರದ್ವಾಜ-ರೈಭ್ಯರ ಗೆಳೆತನ; ಅರಾವಸು-ಪರಾವಸುವೆನ್ನುವ ಇಬ್ಬರು ರೈಭ್ಯನ ಮಕ್ಕಳು; ಭರದ್ವಾಜನ ಮಗ ಯವಕ್ರಿ (೧೨-೧೩). ತನ್ನ ತಂದೆಯನ್ನು ಬಿಟ್ಟು ರೈಭ್ಯ ಮತ್ತು ಅವನ ಮಕ್ಕಳನ್ನು ಜನರು ಗೌರವಿಸುವುದನ್ನು ನೋಡಿ ಅಸೂಯೆಗೊಂಡ ಯವಕ್ರಿಯು ವೇದವನ್ನು ನೇರವಾಗಿ ತಿಳಿದುಕೊಳ್ಳಲು ಘೋರ ತಪಸ್ಸನ್ನಾಚರಿಸುವುದು (೧೪-೧೬). ಇಂದ್ರನು ಅವನ ತಪಸ್ಸನ್ನು ನಿಲ್ಲಿಸಲು ಪ್ರಯತ್ನಿಸುವುದು (೧೭-೪೦). ತಂದೆ ಮತ್ತು ಮಗನಿಗೆ ವೇದಗಳು ಪ್ರಕಟಿತವಾಗುವಂತೆ ಇಂದ್ರನು ಯವಕ್ರಿಗೆ ವರವನ್ನು ನೀಡುವುದು (೪೧-೪೨).

03135001 ಲೋಮಶ ಉವಾಚ|

03135001a ಏಷಾ ಮಧುವಿಲಾ ರಾಜನ್ಸಮಂಗಾ ಸಂಪ್ರಕಾಶತೇ|

03135001c ಏತತ್ಕರ್ದಮಿಲಂ ನಾಮ ಭರತಸ್ಯಾಭಿಷೇಚನಂ||

ಲೋಮಶನು ಹೇಳಿದನು: “ರಾಜನ್! ಇಲ್ಲಿ ಕಾಣುತ್ತಿರುವುದು ಮಧುವಿಲ ಸಂಗಮ. ಭಾರತ! ಇದು ಕರ್ದಮಿಲ ಎಂಬ ಹೆಸರಿನ ಸ್ನಾನಘಟ್ಟ.

03135002a ಅಲಕ್ಷ್ಮ್ಯಾ ಕಿಲ ಸಂಯುಕ್ತೋ ವೃತ್ರಂ ಹತ್ವಾ ಶಚೀಪತಿಃ|

03135002c ಆಪ್ಲುತಃ ಸರ್ವಪಾಪೇಭ್ಯಃ ಸಮಂಗಾಯಾಂ ವ್ಯಮುಚ್ಯತ||

ವೃತ್ರನನ್ನು ಸಂಹರಿಸಿದ ಶಚೀಪತಿಯು ಅಲಕ್ಷ್ಮಿಯನ್ನು ಪಡೆದಾಗ ಸಮಂಗದಲ್ಲಿ ಸ್ನಾನಮಾಡಿ ಸರ್ವ ಪಾಪಗಳಿಂದ ಬಿಡುಗಡೆ ಹೊಂದಿದನು.

03135003a ಏತದ್ವಿನಶನಂ ಕುಕ್ಷೌ ಮೈನಾಕಸ್ಯ ನರರ್ಷಭ|

03135003c ಅದಿತಿರ್ಯತ್ರ ಪುತ್ರಾರ್ಥಂ ತದನ್ನಮಪಚತ್ಪುರಾ||

ನರರ್ಷಭ! ಇಲ್ಲಿಯೇ ಮೈನಾಕ ಪರ್ವತವು ಭೂಮಿಯ ಕುಕ್ಷದಲ್ಲಿ ಮರೆಯಾಯಿತು ಮತ್ತು ಮಕ್ಕಳನ್ನು ಪಡೆಯಲು ಅದಿತಿಯು ಹಿಂದೆ ಇಲ್ಲಿ ಅಡುಗೆ ಮಾಡಿದಳು.

03135004a ಏನಂ ಪರ್ವತರಾಜಾನಮಾರುಹ್ಯ ಪುರುಷರ್ಷಭ|

03135004c ಅಯಶಸ್ಯಾಮಸಂಶಬ್ಧ್ಯಾಮಲಕ್ಷ್ಮೀಂ ವ್ಯಪನೋತ್ಸ್ಯಥ||

ಪುರುಷರ್ಷಭ! ಈ ಪರ್ವತರಾಜನನ್ನು ಏರಿ ಕೂಡಲೇ ಅಯಶಸ್ಕರ, ಅವಾಚನೀಯ ಅಲಕ್ಷ್ಮಿಯನ್ನು ದೂರವಿಡಬಹುದು.

03135005a ಏತೇ ಕನಖಲಾ ರಾಜನೃಷೀಣಾಂ ದಯಿತಾ ನಗಾಃ|

03135005c ಏಷಾ ಪ್ರಕಾಶತೇ ಗಂಗಾ ಯುಧಿಷ್ಠಿರ ಮಹಾನದೀ||

ರಾಜನ್! ಇವುಗಳು ಋಷಿಗಳಿಗೆ ಪ್ರಿಯವಾದ ಕನಖಲ ಪರ್ವತಗಳು. ಯುಧಿಷ್ಠಿರ! ಇಲ್ಲಿ ಮಹಾನದಿ ಗಂಗೆಯು ಕಾಣುತ್ತಾಳೆ. 

03135006a ಸನತ್ಕುಮಾರೋ ಭಗವಾನತ್ರ ಸಿದ್ಧಿಮಗಾತ್ಪರಾಂ|

03135006c ಆಜಮೀಢಾವಗಾಹ್ಯೈನಾಂ ಸರ್ವಪಾಪೈಃ ಪ್ರಮೋಕ್ಷ್ಯಸೇ||

ಇಲ್ಲಿ ಭಗವಾನ್ ಸನತ್ಕುಮಾರನು ಪರಮ ಸಿದ್ಧಿಯನ್ನು ಹೊಂದಿದನು. ಅಜಮೀಡ! ಇಲ್ಲಿ ಸ್ನಾನಮಾಡುವುದರಿಂದ ನೀನು ಸರ್ವಪಾಪಗಳಿಂದ ಮುಕ್ತನಾಗುತ್ತೀಯೆ.

03135007a ಅಪಾಂ ಹ್ರದಂ ಚ ಪುಣ್ಯಾಖ್ಯಂ ಭೃಗುತುಂಗಂ ಚ ಪರ್ವತಂ|

03135007c ತೂಷ್ಣೀಂ ಗಂಗಾಂ ಚ ಕೌಂತೇಯ ಸಾಮಾತ್ಯಃ ಸಮುಪಸ್ಪೃಶ||

ಕೌಂತೇಯ! ಪುಣ್ಯಾ ಎನ್ನುವ ಈ ನೀರಿನ ಸರೋವರ, ಭೃಗುತುಂಗ ಪರ್ವತ ಮತ್ತು ಗಂಗೆಯ ನೀರನ್ನು ಅಮಾತ್ಯರೊಂದಿಗೆ ಮುಟ್ಟು.

03135008a ಆಶ್ರಮಃ ಸ್ಥೂಲಶಿರಸೋ ರಮಣೀಯಃ ಪ್ರಕಾಶತೇ|

03135008c ಅತ್ರ ಮಾನಂ ಚ ಕೌಂತೇಯ ಕ್ರೋಧಂ ಚೈವ ವಿವರ್ಜಯ||

ಕೌಂತೇಯ! ಅಲ್ಲಿ ಕಾಣಿಸುವುದು ಸ್ಥೂಲಶಿರಸುವಿನ ರಮಣೀಯ ಆಶ್ರಮ. ಇಲ್ಲಿ ಅಹಂಕಾರ ಮತ್ತು ಸಿಟ್ಟನ್ನು ಬಿಟ್ಟುಬಿಡು.

03135009a ಏಷ ರೈಭ್ಯಾಶ್ರಮಃ ಶ್ರೀಮಾನ್ಪಾಂಡವೇಯ ಪ್ರಕಾಶತೇ|

03135009c ಭಾರದ್ವಾಜೋ ಯತ್ರ ಕವಿರ್ಯವಕ್ರೀತೋ ವ್ಯನಶ್ಯತ||

ಪಾಂಡವೇಯ! ಇಲ್ಲಿ ಕಾಣಿಸುವುದು ಶ್ರೀಮಾನ್ ರೈಭ್ಯನ ಆಶ್ರಮ. ಇಲ್ಲಿ ಭಾರದ್ವಾಜ ಕವಿ ಯವಕ್ರೀತನು ನಾಶಹೊಂದಿದನು.”

03135010 ಯುಧಿಷ್ಠಿರ ಉವಾಚ|

03135010a ಕಥಮ್ಯುಕ್ತೋಽಽಭವದೃಷಿರ್ಭರದ್ವಾಜಃ ಪ್ರತಾಪವಾನ್|

03135010c ಕಿಮರ್ಥಂ ಚ ಯವಕ್ರೀತ ಋಷಿಪುತ್ರೋ ವ್ಯನಶ್ಯತ||

ಯುಧಿಷ್ಠಿರನು ಹೇಳಿದನು: “ಪ್ರತಾಪವಾನ್ ಋಷಿ ಭರದ್ವಾಜನು ಯಾವ ಗುಣಗಳನ್ನು ಹೊಂದಿದ್ದನು ಮತ್ತು ಋಷಿಪುತ್ರ ಯವಕ್ರೀತನು ಯಾವ ಕಾರಣಕ್ಕಾಗಿ ನಾಶಹೊಂದಿದನು?

03135011a ಏತತ್ಸರ್ವಂ ಯಥಾವೃತ್ತಂ ಶ್ರೋತುಮಿಚ್ಚಾಮಿ ಲೋಮಶ|

03135011c ಕರ್ಮಭಿರ್ದೇವಕಲ್ಪಾನಾಂ ಕೀರ್ತ್ಯಮಾನೈರ್ಭೃಶಂ ರಮೇ||

ಲೋಮಶ! ಇವೆಲ್ಲವನ್ನೂ ನಡೆದಂತೆ ಕೇಳ ಬಯಸುತ್ತೇನೆ. ದೇವತೆಗಳಂತಿರುವವರ ಕರ್ಮಗಳ ಕೀರ್ತನೆಯನ್ನು ಕೇಳಲು ನನಗೆ ಸಂತೋಷವಾಗುತ್ತದೆ.”

03135012 ಲೋಮಶ ಉವಾಚ|

03135012a ಭರದ್ವಾಜಶ್ಚ ರೈಭ್ಯಶ್ಚ ಸಖಾಯೌ ಸಂಬಭೂವತುಃ|

03135012c ತಾವೂಷತುರಿಹಾತ್ಯಂತಂ ಪ್ರೀಯಮಾಣೌ ವನಾಂತರೇ||

ಲೋಮಶನು ಹೇಳಿದನು: “ಭರದ್ವಾಜ ಮತ್ತು ರೈಭ್ಯರಿಬ್ಬರೂ ಸ್ನೇಹಿತರಾಗಿದ್ದರು. ಪರಸ್ಪರರನ್ನು ಪ್ರೀತಿಸಿ ಅವರು ಈ ವನಾಂತರದಲ್ಲಿ ಒಟ್ಟಿಗೇ ವಾಸಿಸುತ್ತಿದ್ದರು.

03135013a ರೈಭ್ಯಸ್ಯ ತು ಸುತಾವಾಸ್ತಾಮರ್ವಾವಸುಪರಾವಸೂ|

03135013c ಆಸೀದ್ಯವಕ್ರೀಃ ಪುತ್ರಸ್ತು ಭರದ್ವಾಜಸ್ಯ ಭಾರತ||

ರೈಭ್ಯನಿಗೆ ಅರಾವಸು ಮತ್ತು ಪರಾವಸು ಎಂಬ ಇಬ್ಬರು ಮಕ್ಕಳಿದ್ದರು. ಭಾರತ! ಭರದ್ವಾಜನಿಗೆ ಯವಕ್ರೀ ಎನ್ನುವ ಮಗನಿದ್ದನು.

03135014a ರೈಭ್ಯೋ ವಿದ್ವಾನ್ಸಹಾಪತ್ಯಸ್ತಪಸ್ವೀ ಚೇತರೋಽಭವತ್|

03135014c ತಯೋಶ್ಚಾಪ್ಯತುಲಾ ಪ್ರೀತಿರ್ಬಾಲ್ಯಾತ್ಪ್ರಭೃತಿ ಭಾರತ||

ರೈಭ್ಯ ಮತ್ತು ಅವನ ಮಕ್ಕಳು ವಿದ್ವಾಂಸರಾಗಿದ್ದರು ಮತ್ತು ಇನ್ನೊಬ್ಬನು ತಪಸ್ವಿಯಾಗಿದ್ದನು. ಭಾರತ! ಆದರೂ ಬಾಲ್ಯದಿಂದಲೂ ಬೆಳೆದಿದ್ದ ಅವರ ಪ್ರೀತಿಯು ಅತುಲ್ಯವಾಗಿತ್ತು.

03135015a ಯವಕ್ರೀಃ ಪಿತರಂ ದೃಷ್ಟ್ವಾ ತಪಸ್ವಿನಮಸತ್ಕೃತಂ|

03135015c ದೃಷ್ಟ್ವಾ ಚ ಸತ್ಕೃತಂ ವಿಪ್ರೈ ರೈಭ್ಯಂ ಪುತ್ರೈಃ ಸಹಾನಘ||

ಅನಘ! ತಪಸ್ವಿಯಾದ ತನ್ನ ತಂದೆಯನ್ನು ವಿಪ್ರರು ಪುರಸ್ಕರಿಸಲಿಲ್ಲ ಮತ್ತು ರೈಭ್ಯ ಮತ್ತು ಅವನ ಮಕ್ಕಳನ್ನು ಸತ್ಕರಿಸುತ್ತಿದ್ದರು ಎನ್ನುವುದನ್ನು ಯವಕ್ರಿಯು ನೋಡಿದನು.

03135016a ಪರ್ಯತಪ್ಯತ ತೇಜಸ್ವೀ ಮನ್ಯುನಾಭಿಪರಿಪ್ಲುತಃ|

03135016c ತಪಸ್ತೇಪೇ ತತೋ ಘೋರಂ ವೇದಜ್ಞಾನಾಯ ಪಾಂಡವ||

ಪಾಂಡವ! ಆ ತೇಜಸ್ವಿಯು ಪರಿತಪಿಸಿದನು ಮತ್ತು ಕೋಪಕ್ಕೆ ಸಿಲುಕಿ ವೇದವನ್ನು ತಿಳಿದುಕೊಳ್ಳಲು ಘೋರವಾದ ತಪಸ್ಸನ್ನು ತಪಿಸಿದನು.

03135017a ಸುಸಮಿದ್ಧೇ ಮಹತ್ಯಗ್ನೌ ಶರೀರಮುಪತಾಪಯನ್|

03135017c ಜನಯಾಮಾಸ ಸಂತಾಪಮಿಂದ್ರಸ್ಯ ಸುಮಹಾತಪಾಃ||

03135018a ತತ ಇಂದ್ರೋ ಯವಕ್ರೀತಮುಪಗಮ್ಯ ಯುಧಿಷ್ಠಿರ|

03135018c ಅಬ್ರವೀತ್ಕಸ್ಯ ಹೇತೋಸ್ತ್ವಮಾಸ್ಥಿತಸ್ತಪ ಉತ್ತಮಂ||

ಚೆನ್ನಾಗಿ ಸಮಿತ್ತುಗಳಿರುವ ಮಹಾ ಅಗ್ನಿಯಲ್ಲಿ ತನ್ನ ಶರೀರವನ್ನು ಸುಡುತ್ತಿದ್ದನು. ಇಂದ್ರನು ಆ ಮಹಾತಪಸ್ಸಿನ ಕುರಿತು ತಿಳಿದು ಸಂತಾಪಗೊಂಡನು. ಯುಧಿಷ್ಠಿರ! ಆಗ ಇಂದ್ರನು ಯವಕ್ರೀತನ ಬಳಿಬಂದು “ಯಾವ ಕಾರಣಕ್ಕಾಗಿ ನೀನು ಈ ಉತ್ತಮ ತಪಸ್ಸನ್ನು ತಪಿಸುತ್ತಿದ್ದೀಯೆ?” ಎಂದು ಕೇಳಿದನು.

03135019 ಯವಕ್ರೀರುವಾಚ|

03135019a ದ್ವಿಜಾನಾಮನಧೀತಾ ವೈ ವೇದಾಃ ಸುರಗಣಾರ್ಚಿತ|

03135019c ಪ್ರತಿಭಾಂತ್ವಿತಿ ತಪ್ಯೇಽಹಮಿದಂ ಪರಮಕಂ ತಪಃ||

ಯವಕ್ರಿಯು ಹೇಳಿದನು: “ಸುರಗಣಾರ್ಚಿತ! ದ್ವಿಜರು ಕಲಿತು ಪಡೆಯುವ ವೇದಗಳು ನನಗೆ ಕಾಣಿಸಿಕೊಳ್ಳಲಿ ಎಂದು ನಾನು ಈ ಪರಮ ತಪಸ್ಸನ್ನು ತಪಿಸುತ್ತಿದ್ದೇನೆ.

03135020a ಸ್ವಾಧ್ಯಾಯಾರ್ಥೇ ಸಮಾರಂಭೋ ಮಮಾಯಂ ಪಾಕಶಾಸನ|

03135020c ತಪಸಾ ಜ್ಞಾತುಮಿಚ್ಚಾಮಿ ಸರ್ವಜ್ಞಾನಾನಿ ಕೌಶಿಕ||

ಪಾಕಶಾಸನ! ಕೌಶಿಕ! ಸ್ವಾಧ್ಯಾಯಕ್ಕಾಗಿ ನಾನು ಇದನ್ನು ಕೈಗೊಂಡಿದ್ದೇನೆ. ಈ ತಪಸ್ಸಿನಿಂದ ಸರ್ವ ಜ್ಞಾನಗಳನ್ನು ತಿಳಿಯ ಬಯಸುತ್ತೇನೆ.

03135021a ಕಾಲೇನ ಮಹತಾ ವೇದಾಃ ಶಕ್ಯಾ ಗುರುಮುಖಾದ್ವಿಭೋ|

03135021c ಪ್ರಾಪ್ತುಂ ತಸ್ಮಾದಯಂ ಯತ್ನಃ ಪರಮೋ ಮೇ ಸಮಾಸ್ಥಿತಃ||

ವಿಭೋ! ಗುರುಮುಖದಿಂದ ವೇದವನ್ನು ಪಡೆಯಲು ಬಹಳಷ್ಟು ಸಮಯ ಬೇಕಾಗುತ್ತದೆ. ಆದುದರಿಂದ ಅದನ್ನು ಈಗಲೇ ಪಡೆಯಲು ಈ ಪರಮ ಯತ್ನದಲ್ಲಿ ತೊಡಗಿದ್ದೇನೆ.”

03135022 ಇಂದ್ರ ಉವಾಚ|

03135022a ಅಮಾರ್ಗ ಏಷ ವಿಪ್ರರ್ಷೇ ಯೇನ ತ್ವಂ ಯಾತುಮಿಚ್ಚಸಿ|

03135022c ಕಿಂ ವಿಘಾತೇನ ತೇ ವಿಪ್ರ ಗಚ್ಚಾಧೀಹಿ ಗುರೋರ್ಮುಖಾತ್||

ಇಂದ್ರನು ಹೇಳಿದನು: “ವಿಪ್ರರ್ಷೇ! ನೀನು ಹೋಗಲು ಇಚ್ಛಿಸುವ ಮಾರ್ಗವು ಸರಿಯಾದ ಮಾರ್ಗವಲ್ಲ! ವಿಪ್ರ! ಈ ವಿಧಾನವು ನಿನ್ನ ಕಾರ್ಯಕ್ಕೆ ಬರುವುದಿಲ್ಲ. ಹೋಗು! ಗುರುಮುಖದಿಂದ ತಿಳಿದುಕೊ!””

03135023 ಲೋಮಶ ಉವಾಚ|

03135023a ಏವಮುಕ್ತ್ವಾ ಗತಃ ಶಕ್ರೋ ಯವಕ್ರೀರಪಿ ಭಾರತ|

03135023c ಭೂಯ ಏವಾಕರೋದ್ಯತ್ನಂ ತಪಸ್ಯಮಿತವಿಕ್ರಮ||

ಲೋಮಶನು ಹೇಳಿದನು: “ಭಾರತ! ಹೀಗೆ ಹೇಳಿ ಇಂದ್ರನು ಹೊರಟುಹೋದನು. ಅಮಿತವಿಕ್ರಮಿ ಯವಕ್ರಿಯಾದರೋ ತನ್ನ ತಪಸ್ಸಿನ ಪ್ರಯತ್ನವನ್ನು ಮುಂದುವರಿಸಿದನು.

03135024a ಘೋರೇಣ ತಪಸಾ ರಾಜಂಸ್ತಪ್ಯಮಾನೋ ಮಹಾತಪಾಃ|

03135024c ಸಂತಾಪಯಾಮಾಸ ಭೃಶಂ ದೇವೇಂದ್ರಮಿತಿ ನಃ ಶ್ರುತಂ||

ರಾಜನ್! ಆ ಮಹಾತಪಸ್ವಿಯ ಘೋರ ತಪಸ್ಸಿನ ಉರಿಯಿಂದ ದೇವೇಂದ್ರನು ತುಂಬಾ ಕಷ್ಟಕ್ಕೊಳಗಾದನು ಎಂದು ಕೇಳಿದ್ದೇವೆ.

03135025a ತಂ ತಥಾ ತಪ್ಯಮಾನಂ ತು ತಪಸ್ತೀವ್ರಂ ಮಹಾಮುನಿಂ|

03135025c ಉಪೇತ್ಯ ಬಲಭಿದ್ದೇವೋ ವಾರಯಾಮಾಸ ವೈ ಪುನಃ||

ಪುನಃ ಮತ್ತೊಮ್ಮೆ ಇಂದ್ರನು ತೀವ್ರವಾದ ತಪಸ್ಸಿನಿಂದ ಸುಡುತ್ತಿರುವ ಆ ಮಹಾಮುನಿಯ ಬಳಿಬಂದು ಅವನನ್ನು ತಡೆದನು.

03135026a ಅಶಕ್ಯೋಽರ್ಥಃ ಸಮಾರಬ್ಧೋ ನೈತದ್ಬುದ್ಧಿಕೃತಂ ತವ|

03135026c ಪ್ರತಿಭಾಸ್ಯಂತಿ ವೈ ವೇದಾಸ್ತವ ಚೈವ ಪಿತುಶ್ಚ ತೇ||

“ನೀನು ಗುರಿಯನ್ನು ತಲುಪಲು ಅಶಕ್ಯ. ನಿನ್ನ ಮತ್ತು ನಿನ್ನ ತಂದೆಗೆ ವೇದಗಳು ತಾವಾಗಿಯೇ ಪ್ರಕಟವಾಗಬೇಕು ಎನ್ನುವ ನಿನ್ನ ಯೋಚನೆಯೂ ಸರಿಯಲ್ಲ.”

03135027 ಯವಕ್ರೀರುವಾಚ|

03135027a ನ ಚೈತದೇವಂ ಕ್ರಿಯತೇ ದೇವರಾಜ ಮಮೇಪ್ಸಿತಂ|

03135027c ಮಹತಾ ನಿಯಮೇನಾಹಂ ತಪ್ಸ್ಯೇ ಘೋರತರಂ ತಪಃ||

ಯವಕ್ರಿಯು ಹೇಳಿದನು: “ದೇವರಾಜ! ಈ ರೀತಿಯಲ್ಲಿ ನನ್ನ ಆಸೆಯನ್ನು ಪೂರೈಸಿಕೊಳ್ಳಲಾಗದಿದ್ದರೆ ಮಹಾ ನಿಯಮಗಳೊಂದಿಗೆ ಇನ್ನೂ ಘೋರತರ ತಪಸ್ಸನ್ನು ತಪಿಸುತ್ತೇನೆ.

03135028a ಸಮಿದ್ಧೇಽಗ್ನಾವುಪಕೃತ್ಯಾಂಗಮಂಗಂ|

         ಹೋಷ್ಯಾಮಿ ವಾ ಮಘವಂಸ್ತನ್ನಿಬೋಧ|

03135028c ಯದ್ಯೇತದೇವಂ ನ ಕರೋಷಿ ಕಾಮಂ|

         ಮಮೇಪ್ಸಿತಂ ದೇವರಾಜೇಹ ಸರ್ವಂ||

ದೇವರಾಜ! ಮಘವತ್! ಕೇಳು! ಇಂದು ನಾನು ಬಯಸಿದುದೆಲ್ಲವನ್ನೂ ಮಾಡಲು ನಿನಗೆ ಇಷ್ಟವಿದಿದ್ದರೆ ಉರಿಯುತ್ತಿರುವ ಅಗ್ನಿಯಲ್ಲಿ ನನ್ನ ದೇಹದ ಒಂದೊಂದು ಅಂಗವನ್ನೂ ಆಹುತಿಯನ್ನಾಗಿ ನೀಡುತ್ತೇನೆ.””

03135029 ಲೋಮಶ ಉವಾಚ|

03135029a ನಿಶ್ಚಯಂ ತಮಭಿಜ್ಞಾಯ ಮುನೇಸ್ತಸ್ಯ ಮಹಾತ್ಮನಃ|

03135029c ಪ್ರತಿವಾರಣಹೇತ್ವರ್ಥಂ ಬುದ್ಧ್ಯಾ ಸಂಚಿಂತ್ಯ ಬುದ್ಧಿಮಾನ್||

ಲೋಮಶನು ಹೇಳಿದನು: “ಮಹಾತ್ಮ ಮುನಿಯ ನಿರ್ಧಾರವು ಅದೆಂದು ತಿಳಿದ ಆ ಬುದ್ಧಿವಂತನು ಅವನನ್ನು ತಡೆಯುವ ಉಪಾಯದ ಕುರಿತು ಮನಸ್ಸಿನಲ್ಲಿಯೇ ಚಿಂತಿಸಿದನು.

03135030a ತತ ಇಂದ್ರೋಽಕರೋದ್ರೂಪಂ ಬ್ರಾಹ್ಮಣಸ್ಯ ತಪಸ್ವಿನಃ|

03135030c ಅನೇಕಶತವರ್ಷಸ್ಯ ದುರ್ಬಲಸ್ಯ ಸಯಕ್ಷ್ಮಣಃ||

ಆಗ ಇಂದ್ರನು ಅನೇಕ ನೂರುವರ್ಷಗಳ ದುರ್ಬಲನೂ ಕೃಶನಾಗಿಯೂ ಆದ ತಪಸ್ವಿ ಬ್ರಾಹ್ಮಣನ ರೂಪವನ್ನು ತಳೆದನು.

03135031a ಯವಕ್ರೀತಸ್ಯ ಯತ್ತೀರ್ಥಮುಚಿತಂ ಶೌಚಕರ್ಮಣಿ|

03135031c ಭಾಗೀರಥ್ಯಾಂ ತತ್ರ ಸೇತುಂ ವಾಲುಕಾಭಿಶ್ಚಕಾರ ಸಃ||

ಯವಕ್ರೀತನು ತನ್ನ ಶೌಚಕರ್ಮಗಳಿಗೆ ಹೋಗುತ್ತಿದ್ದ ಭಾಗೀರಥಿಯ ತೀರ್ಥಕ್ಕೆ ಹೋಗಿ ಅಲ್ಲಿ ಮರಳಿನ ರಾಶಿಯಿಂದ ಸೇತುವನ್ನು ಕಟ್ಟ ತೊಡಗಿದನು.

03135032a ಯದಾಸ್ಯ ವದತೋ ವಾಕ್ಯಂ ನ ಸ ಚಕ್ರೇ ದ್ವಿಜೋತ್ತಮಃ|

03135032c ವಾಲುಕಾಭಿಸ್ತತಃ ಶಕ್ರೋ ಗಂಗಾಂ ಸಮಭಿಪೂರಯನ್||

03135033a ವಾಲುಕಾಮುಷ್ಟಿಮನಿಶಂ ಭಾಗೀರಥ್ಯಾಂ ವ್ಯಸರ್ಜಯತ್|

03135033c ಸೇತುಮಭ್ಯಾರಭಚ್ಛಕ್ರೋ ಯವಕ್ರೀತಂ ನಿದರ್ಶಯನ್||

ಆ ದ್ವಿಜೋತ್ತಮನು ತಾನು ಹೇಳಿದ ಮಾತಿನಂತೆ ನಡೆದುಕೊಳ್ಳದೇ ಇದ್ದಾಗ ಯವಕ್ರಿಗೆ ಪಾಠಕಲಿಸಲು ಇಂದ್ರನು ಒಂದೊಂದೇ ಮುಷ್ಟಿ ಮರಳನ್ನು ಭಾಗೀರಥಿಯಲ್ಲಿ ಹಾಕುತ್ತಾ ಗಂಗೆಯನ್ನು ಮರಳಿನಿಂದ ತುಂಬಿ ಸೇತುವೆ ಕಟ್ಟಲು ಪ್ರಾರಂಭಿಸಿದನು.

03135034a ತಂ ದದರ್ಶ ಯವಕ್ರೀಸ್ತು ಯತ್ನವಂತಂ ನಿಬಂಧನೇ|

03135034c ಪ್ರಹಸಂಶ್ಚಾಬ್ರವೀದ್ವಾಕ್ಯಮಿದಂ ಸ ಮುನಿಪುಂಗವಃ||

ಸೇತುವೆ ಕಟ್ಟಲು ಪ್ರಯತ್ನಿಸುತ್ತಿದ್ದ ಅವನನ್ನು ನೋಡಿದ ಆ ಪುನಿಪುಂಗವ ಯವಕ್ರಿಯು ದೊಡ್ಡದಾಗಿ ನಕ್ಕು ಈ ಮಾತುಗಳನ್ನಾಡಿದನು:

03135035a ಕಿಮಿದಂ ವರ್ತತೇ ಬ್ರಹ್ಮನ್ಕಿಂ ಚ ತೇ ಹ ಚಿಕೀರ್ಷಿತಂ|

03135035c ಅತೀವ ಹಿ ಮಹಾನ್ಯತ್ನಃ ಕ್ರಿಯತೇಽಯಂ ನಿರರ್ಥಕಃ||

“ಬ್ರಾಹ್ಮಣ! ಇದೇನು ನಡೆಯುತ್ತಿದೆ? ಏನು ಮಾಡಲು ಪ್ರಯತ್ನಿಸುತ್ತಿದ್ದೀಯೆ? ನೀನು ಮಾಡುತ್ತಿರುವ ಈ ಮಹಾ ಪ್ರಯತ್ನವು ನಿರರ್ಥಕ!”

03135036 ಇಂದ್ರ ಉವಾಚ|

03135036a ಬಂಧಿಷ್ಯೇ ಸೇತುನಾ ಗಂಗಾಂ ಸುಖಃ ಪಂಥಾ ಭವಿಷ್ಯತಿ|

03135036c ಕ್ಲಿಶ್ಯತೇ ಹಿ ಜನಸ್ತಾತ ತರಮಾಣಃ ಪುನಃ ಪುನಃ||

ಇಂದ್ರನು ಹೇಳಿದನು: “ಗಂಗೆಗೆ ಸೇತುವೆಯನ್ನು ಕಟ್ಟಿದರೆ ದಾಟಲು ಸುಲಭವಾಗುತ್ತದೆ. ತಾತ! ಪುನಃ ಪುನಃ ಹೋಗಿ ಬರುವ ಜನರಿಗೆ ಕಷ್ಟವಾಗುತ್ತಿದೆ.”

03135037 ಯವಕ್ರೀರುವಾಚ|

03135037a ನಾಯಂ ಶಕ್ಯಸ್ತ್ವಯಾ ಬದ್ಧುಂ ಮಹಾನೋಘಃ ಕಥಂ ಚನ|

03135037c ಅಶಕ್ಯಾದ್ವಿನಿವರ್ತಸ್ವ ಶಕ್ಯಮರ್ಥಂ ಸಮಾರಭ||

ಯವಕ್ರಿಯು ಹೇಳಿದನು: “ಅತಿಪ್ರವಾಹದಿಂದ ಹರಿಯುತ್ತಿರುವ ಇದಕ್ಕೆ ಸೇತುವೆಯನ್ನು ಕಟ್ಟಲು ಸಾಧ್ಯವಿಲ್ಲ. ಅಶಕ್ಯವಾಗಿರುವುದನ್ನು ಮಾಡುವುದನ್ನು ಬಿಟ್ಟು ಶಕ್ಯವಾದುದನ್ನು ಪ್ರಯತ್ನಿಸು.”

03135038 ಇಂದ್ರ ಉವಾಚ|

03135038a ಯಥೈವ ಭವತಾ ಚೇದಂ ತಪೋ ವೇದಾರ್ಥಮುದ್ಯತಂ|

03135038c ಅಶಕ್ಯಂ ತದ್ವದಸ್ಮಾಭಿರಯಂ ಭಾರಃ ಸಮುದ್ಯತಃ||

ಇಂದ್ರನು ಹೇಳಿದನು: “ನೀನು ಹೇಗೆ ವೇದಗಳಿಗಾಗಿ ಅಶಕ್ಯವಾದ ತಪಸ್ಸಿನಲ್ಲಿ ತೊಡಗಿದ್ದೀಯೋ ಹಾಗೆ ನಾನೂ ಕೂಡ ಈ ಅಶಕ್ಯವಾದುದನ್ನು ಮಾಡುವ ಭಾರವನ್ನು ಹೊತ್ತಿದ್ದೇನೆ.”

03135039 ಯವಕ್ರೀರುವಾಚ|

03135039a ಯಥಾ ತವ ನಿರರ್ಥೋಽಯಮಾರಂಭಸ್ತ್ರಿದಶೇಶ್ವರ|

03135039c ತಥಾ ಯದಿ ಮಮಾಪೀದಂ ಮನ್ಯಸೇ ಪಾಕಶಾಸನ||

03135040a ಕ್ರಿಯತಾಂ ಯದ್ಭವೇಚ್ಛಕ್ಯಂ ಮಯಾ ಸುರಗಣೇಶ್ವರ|

03135040c ವರಾಂಶ್ಚ ಮೇ ಪ್ರಯಚ್ಚಾನ್ಯಾನ್ಯೈರನ್ಯಾನ್ಭವಿತಾಸ್ಮ್ಯತಿ||

ಯವಕ್ರಿಯು ಹೇಳಿದನು: “ತ್ರಿದಶೇಶ್ವರ! ಪಾಕಶಾಸನ! ಸುರಗಣೇಶ್ವರ! ನನ್ನ ಪ್ರಯತ್ನವು ನಿನ್ನ ಈ ಪ್ರಯತ್ನದಂತೆ ನಿರರ್ಥಕವೆಂದು ನೀನು ಯೋಚಿಸುವೆಯಾದರೆ, ಶಕ್ಯವಾದ ಏನನ್ನು ನಾನು ಮಾಡಬೇಕು?””

03135041 ಲೋಮಶ ಉವಾಚ|

03135041a ತಸ್ಮೈ ಪ್ರಾದಾದ್ವರಾನಿಂದ್ರ ಉಕ್ತವಾನ್ಯಾನ್ಮಹಾತಪಾಃ|

03135041c ಪ್ರತಿಭಾಸ್ಯಂತಿ ತೇ ವೇದಾಃ ಪಿತ್ರಾ ಸಹ ಯಥೇಪ್ಸಿತಾಃ||

03135042a ಯಚ್ಚಾನ್ಯತ್ಕಾಂಕ್ಷಸೇ ಕಾಮಂ ಯವಕ್ರೀರ್ಗಮ್ಯತಾಮಿತಿ|

03135042c ಸ ಲಬ್ಧಕಾಮಃ ಪಿತರಮುಪೇತ್ಯಾಥ ತತೋಽಬ್ರವೀತ್||

ಲೋಮಶನು ಹೇಳಿದನು: “ಇಂದ್ರನು ಆ ಮಹಾತಪಸ್ವಿಗೆ ಕೇಳಿದ ವರಗಳನ್ನು ಕೊಟ್ಟನು - “ನಿನಗೂ ಮತ್ತು ನಿನ್ನ ತಂದೆಗೂ ನೀನು ಬಯಸಿದಂತೆ ವೇದಗಳು ಪ್ರಕಟಿತವಾಗುತ್ತವೆ. ಮತ್ತು ನೀನು ಏನೆನ್ನೆಲ್ಲಾ ಬಯಸಿದ್ದೀಯೋ ಅವುಗಳನ್ನೂ ಪಡೆಯುತ್ತೀಯೆ. ಯವಕ್ರಿ! ಈಗ ಹೋಗು!” ಬಯಸಿದ್ದುದನ್ನು ಪಡೆದ ಅವನು ತನ್ನ ತಂದೆಗೆ ಹೋಗಿ ಹೇಳಿದನು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಪಂಚಸ್ತ್ರಿಂಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತೈದನೆಯ ಅಧ್ಯಾಯವು.

Related image

Comments are closed.