Shanti Parva: Chapter 201

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೧

ದಿಕ್ಪಾಲಕೀರ್ತನ

ಬ್ರಹ್ಮಪುತ್ರ ಮರೀಚಿ ಮೊದಲಾದ ಪ್ರಜಾಪತಿಗಳ ವಂಶವರ್ಣನೆ; ಪ್ರತ್ಯೇಕ ದಿಕ್ಕುಗಳಲ್ಲಿ ವಾಸಿಸುವ ಋಷಿಗಳ ಕೀರ್ತನೆ (೧-೩೫).

12201001 ಯುಧಿಷ್ಠಿರ ಉವಾಚ|

12201001a ಕೇ ಪೂರ್ವಮಾಸನ್ಪತಯಃ ಪ್ರಜಾನಾಂ ಭರತರ್ಷಭ|

12201001c ಕೇ ಚರ್ಷಯೋ ಮಹಾಭಾಗಾ ದಿಕ್ಷು ಪ್ರತ್ಯೇಕಶಃ ಸ್ಮೃತಾಃ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಹಿಂದೆ ಯಾರು ಪ್ರಜಾಪತಿಗಳಾಗಿದ್ದರು? ಪ್ರತ್ಯೇಕ ದಿಕ್ಕುಗಳಲ್ಲಿ ಯಾವ ಮಹಾಭಾಗ ಋಷಿಗಳು ವಾಸಿಸುತ್ತಾರೆಂದಿದೆ?”

12201002 ಭೀಷ್ಮ ಉವಾಚ|

12201002a ಶ್ರೂಯತಾಂ ಭರತಶ್ರೇಷ್ಠ ಯನ್ಮಾ ತ್ವಂ ಪರಿಪೃಚ್ಚಸಿ|

12201002c ಪ್ರಜಾನಾಂ ಪತಯೋ ಯೇ ಸ್ಮ ದಿಕ್ಷು ಪ್ರತ್ಯೇಕಶಃ ಸ್ಮೃತಾಃ||

ಭೀಷ್ಮನು ಹೇಳಿದನು: “ಭರತಶ್ರೇಷ್ಠ! ನೀನು ಕೇಳಿದ ಪ್ರಜಾಪತಿಗಳ ಮತ್ತು ಪ್ರತ್ಯೇಕ ದಿಕ್ಕುಗಳ ಕುರಿತು ನನ್ನನ್ನು ಕೇಳು.

12201003a ಏಕಃ ಸ್ವಯಂಭೂರ್ಭಗವಾನಾದ್ಯೋ ಬ್ರಹ್ಮಾ ಸನಾತನಃ|

12201003c ಬ್ರಹ್ಮಣಃ ಸಪ್ತ ಪುತ್ರಾ ವೈ ಮಹಾತ್ಮಾನಃ ಸ್ವಯಂಭುವಃ||

12201004a ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ|

12201004c ವಸಿಷ್ಠಶ್ಚ ಮಹಾಭಾಗಃ ಸದೃಶಾ ವೈ ಸ್ವಯಂಭುವಾ||

ಅನಾದಿ ಸನಾತನ ಭಗವಾನ್ ಬ್ರಹ್ಮನೊಬ್ಬನೇ ಸ್ವಯಂಭುವು. ಸ್ವಯಂಭುವಿಗೆ ಏಳು ಮಹಾತ್ಮ ಪುತ್ರರಾದರು: ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ. ಈ ಮಹಾಭಾಗರು ಸ್ವಯಂಭುವಿನ ಸದೃಶರಾಗಿದ್ದರು.

12201005a ಸಪ್ತ ಬ್ರಹ್ಮಾಣ ಇತ್ಯೇಷ ಪುರಾಣೇ ನಿಶ್ಚಯೋ ಗತಃ|

12201005c ಅತ ಊರ್ಧ್ವಂ ಪ್ರವಕ್ಷ್ಯಾಮಿ ಸರ್ವಾನೇವ ಪ್ರಜಾಪತೀನ್||

ಇವರು ಸಪ್ತಬ್ರಾಹ್ಮಣರು ಎಂದು ಪುರಾಣಗಳಲ್ಲಿ ನಿಶ್ಚಿತರಾಗಿದ್ದಾರೆ. ಇನ್ನು ಮುಂದೆ ಸರ್ವ ಪ್ರಜಾಪತಿಗಳ ಕುರಿತು ಹೇಳುತ್ತೇನೆ.

12201006a ಅತ್ರಿವಂಶಸಮುತ್ಪನ್ನೋ ಬ್ರಹ್ಮಯೋನಿಃ ಸನಾತನಃ|

12201006c ಪ್ರಾಚೀನಬರ್ಹಿರ್ಭಗವಾಂಸ್ತಸ್ಮಾತ್ ಪ್ರಾಚೇತಸೋ ದಶ||

ಭಗವಾನ್ ಪ್ರಾಚೀನಬರ್ಹಿಯು ಅತ್ರಿವಂಶಸಮುತ್ಪನ್ನನು. ಬ್ರಹ್ಮಯೋನಿಯು ಮತ್ತು ಸನಾತನನು. ಅವನಿಂದ ಹತ್ತು ಪ್ರಾಚೇತಸರಾದರು.

12201007a ದಶಾನಾಂ ತನಯಸ್ತ್ವೇಕೋ ದಕ್ಷೋ ನಾಮ ಪ್ರಜಾಪತಿಃ|

12201007c ತಸ್ಯ ದ್ವೇ ನಾಮನೀ ಲೋಕೇ ದಕ್ಷಃ ಕ ಇತಿ ಚೋಚ್ಯತೇ||

ಆ ಹತ್ತು ಪ್ರಾಚೇತಸರ ಓರ್ವ ಮಗನು ದಕ್ಷ ಎಂಬ ಹೆಸರಿನ ಪ್ರಜಾಪತಿಯು. ಲೋಕದಲ್ಲಿ ಅವನಿಗೆ ದಕ್ಷ ಮತ್ತು ಕ ಎಂಬ ಎರಡು ಹೆಸರುಗಳಿವೆಯೆಂದು ಹೇಳುತ್ತಾರೆ.

12201008a ಮರೀಚೇಃ ಕಶ್ಯಪಃ ಪುತ್ರಸ್ತಸ್ಯ ದ್ವೇ ನಾಮನೀ ಶ್ರುತೇ|

12201008c ಅರಿಷ್ಟನೇಮಿರಿತ್ಯೇಕಂ ಕಶ್ಯಪೇತ್ಯಪರಂ ವಿದುಃ||

ಮರೀಚಿಯ ಪುತ್ರ ಕಶ್ಯಪನಿಗೂ ಎರಡು ಹೆಸರುಗಳಿವೆಯೆಂದು ಕೇಳಿದ್ದೇವೆ: ಅರಿಷ್ಟನೇಮಿ ಎಂಬುದು ಒಂದು ಮತ್ತು ಕಶ್ಯಪ ಎನ್ನುವುದು ಇನ್ನೊಂದು ಹೆಸರು.

12201009a ಅಂಗಶ್ಚೈವೌರಸಃ ಶ್ರೀಮಾನ್ರಾಜಾ ಭೌಮಶ್ಚ ವೀರ್ಯವಾನ್[1]|

12201009c ಸಹಸ್ರಂ ಯಶ್ಚ ದಿವ್ಯಾನಾಂ ಯುಗಾನಾಂ ಪರ್ಯುಪಾಸಿತಾ||

ಅಂಗಿರಸನ ಔರಸ ಪುತ್ರನು ಶ್ರೀಮಾನ್ ವೀರ್ಯವಾನ್ ರಾಜ ಭೌಮನು. ಅವನು ಸಹಸ್ರ ದಿವ್ಯಯುಗಪರ್ಯಂತ ಭಗವಂತನನ್ನು ಉಪಾಸಿಸಿದನು.

12201010a ಅರ್ಯಮಾ ಚೈವ ಭಗವಾನ್ಯೇ ಚಾನ್ಯೇ ತನಯಾ ವಿಭೋ|

12201010c ಏತೇ ಪ್ರದೇಶಾಃ ಕಥಿತಾ ಭುವನಾನಾಂ ಪ್ರಭಾವನಾಃ||

ವಿಭೋ! ಭಗವಾನ್ ಆರ್ಯಮನು ಮತ್ತು ಅವನ ಮಕ್ಕಳು ಶಾಸಕರೆಂದೂ ಭುವನಗಳ ಸೃಷ್ಟಿಕರ್ತರೆಂದೂ ಇದೆ.

12201011a ಶಶಬಿಂದೋಶ್ಚ ಭಾರ್ಯಾಣಾಂ ಸಹಸ್ರಾಣಿ ದಶಾಚ್ಯುತ|

12201011c ಏಕೈಕಸ್ಯಾಂ ಸಹಸ್ರಂ ತು ತನಯಾನಾಮಭೂತ್ತದಾ||

12201012a ಏವಂ ಶತಸಹಸ್ರಾಣಾಂ ಶತಂ ತಸ್ಯ ಮಹಾತ್ಮನಃ|

12201012c ಪುತ್ರಾಣಾಂ ನ ಚ ತೇ ಕಂ ಚಿದಿಚ್ಚಂತ್ಯನ್ಯಂ ಪ್ರಜಾಪತಿಮ್||

ಅಚ್ಯುತ! ಭಗವಾನ್ ಆರ್ಯಮನ ಪುತ್ರರಲ್ಲೊಬ್ಬನಾದ ಶಶಬಿಂದುವಿಗೆ ಹತ್ತುಸಾವಿರ ಭಾರ್ಯೆಯರಿದ್ದರು. ಒಬ್ಬೊಬ್ಬಳು ಭಾರ್ಯೆಯರಲ್ಲಿಯ ಶಶಬಿಂದುವು ಸಾವಿರ ಸಾವಿರ ಮಕ್ಕಳನ್ನು ಪಡೆದುಕೊಂಡನು. ಹೀಗೆ ಮಹಾತ್ಮಾ ಶಶಬಿಂದು ಒಬ್ಬನಿಗೇ ಮಕ್ಕಳು ಹುಟ್ಟಿದರು. ಆದುದರಿಂದ ಅವರು ಬೇರೆ ಪ್ರಜಾಪತಿಯನ್ನೂ ಅಪೇಕ್ಷಿಸಲಿಲ್ಲ.

12201013a ಪ್ರಜಾಮಾಚಕ್ಷತೇ ವಿಪ್ರಾಃ ಪೌರಾಣೀಂ ಶಾಶಬಿಂದವೀಮ್|

12201013c ಸ ವೃಷ್ಣಿವಂಶಪ್ರಭವೋ ಮಹಾನ್ವಂಶಃ ಪ್ರಜಾಪತೇಃ||

ವಿಪ್ರರು ಪುರಾಣಪುರುಷ ಶಶಬಿಂದುವೇ ಪ್ರಜಾಪತಿಯೆಂದು ನೋಡುತ್ತಾರೆ. ಆ ಪ್ರಜಾಪತಿಯ ಮಹಾವಂಶದಲ್ಲಿಯೇ ವೃಷ್ಣಿವಂಶವೂ ಪ್ರಾರಂಭವಾಯಿತು.

12201014a ಏತೇ ಪ್ರಜಾನಾಂ ಪತಯಃ ಸಮುದ್ದಿಷ್ಟಾ ಯಶಸ್ವಿನಃ|

12201014c ಅತಃ ಪರಂ ಪ್ರವಕ್ಷ್ಯಾಮಿ ದೇವಾಂಸ್ತ್ರಿಭುವನೇಶ್ವರಾನ್||

ಈ ಪ್ರಜಾಪತಿಗಳು ಯಶೋವಂತರೆಂದು ಹೇಳುತ್ತಾರೆ. ಇನ್ನು ಮುಂದೆ ತ್ರಿಭುವನೇಶ್ವರ ದೇವತೆಗಳ ಕುರಿತು ಹೇಳುತ್ತೇನೆ.

12201015a ಭಗೋಽಂಶಶ್ಚಾರ್ಯಮಾ ಚೈವ ಮಿತ್ರೋಽಥ ವರುಣಸ್ತಥಾ|

12201015c ಸವಿತಾ ಚೈವ ಧಾತಾ ಚ ವಿವಸ್ವಾಂಶ್ಚ ಮಹಾಬಲಃ||

12201016a ಪೂಷಾ ತ್ವಷ್ಟಾ ತಥೈವೇಂದ್ರೋ ದ್ವಾದಶೋ ವಿಷ್ಣುರುಚ್ಯತೇ|

12201016c ತ ಏತೇ ದ್ವಾದಶಾದಿತ್ಯಾಃ ಕಶ್ಯಪಸ್ಯಾತ್ಮಸಂಭವಾಃ||

ಭಗ, ಅಂಶ, ಆರ್ಯಮ, ಮಿತ್ರ, ವರುಣ, ಸವಿತಾ, ಧಾತಾ, ಮಹಾಬಲ ವಿವಸ್ವಾನ್, ಪೂಷಾ, ತ್ವಷ್ಟಾ, ಮತ್ತು ಇಂದ್ರ ಹಾಗೂ ಹನ್ನೆರಡನೆಯವನು ವಿಷ್ಣು ಎನ್ನುತ್ತಾರೆ. ಈ ದ್ವಾದಶಾದಿತ್ಯರು ಕಶ್ಯಪನ ಆತ್ಮಸಂಭವರು.

12201017a ನಾಸತ್ಯಶ್ಚೈವ ದಸ್ರಶ್ಚ ಸ್ಮೃತೌ ದ್ವಾವಶ್ವಿನಾವಪಿ|

12201017c ಮಾರ್ತಾಂಡಸ್ಯಾತ್ಮಜಾವೇತಾವಷ್ಟಮಸ್ಯ ಪ್ರಜಾಪತೇಃ||

ನಾಸತ್ಯ ಮತ್ತು ದರ್ಸ ಎಂಬ ಇಬ್ಬರು ಅಶ್ವಿನಿಯರೆಂಬುವವರು ಅಷ್ಟಮ ಪ್ರಜಾಪತಿ ಮಾರ್ತಾಂಡನ ಮಕ್ಕಳು.

[2]12201018a ತ್ವಷ್ಟುಶ್ಚೈವಾತ್ಮಜಃ ಶ್ರೀಮಾನ್ವಿಶ್ವರೂಪೋ ಮಹಾಯಶಾಃ|

12201018c ಅಜೈಕಪಾದಹಿರ್ಬುಧ್ನ್ಯೋ ವಿರೂಪಾಕ್ಷೋಽಥ ರೈವತಃ||

12201019a ಹರಶ್ಚ ಬಹುರೂಪಶ್ಚ ತ್ರ್ಯಂಬಕಶ್ಚ ಸುರೇಶ್ವರಃ|

12201019c ಸಾವಿತ್ರಶ್ಚ ಜಯಂತಶ್ಚ ಪಿನಾಕೀ ಚಾಪರಾಜಿತಃ|

12201019e ಪೂರ್ವಮೇವ ಮಹಾಭಾಗಾ ವಸವೋಽಷ್ಟೌ ಪ್ರಕೀರ್ತಿತಾಃ||

ಮಹಾಯಶಸ್ವೀ ಶ್ರೀಮಾನ್ ವಿಶ್ವರೂಪನು ತ್ವಷ್ಟುವಿನ ಮಗನು. ಅಜೈಕಪಾದ, ಅಹಿರ್ಬುಧ್ನ, ವಿರೂಪಾಕ್ಷ, ರೈವತ, ಹರ, ಬಹುರೂಪ, ತ್ರ್ಯಂಬಕ, ಸುರೇಶ್ವರ, ಸಾವಿತ್ರ, ಜಯಂತ, ಮತ್ತು ಅಪರಾಜಿತ ಪಿನಾಕೀ ಇವರು ಏಕಾದಶ ರುದ್ರರು. ಇವರಲ್ಲದೇ ಅಷ್ಟವಸುಗಳ[3] ಕುರಿತೂ ಹೇಳಿದ್ದಾರೆ.

12201020a ಏತ ಏವಂವಿಧಾ ದೇವಾ ಮನೋರೇವ ಪ್ರಜಾಪತೇಃ|

12201020c ತೇ ಚ ಪೂರ್ವೇ ಸುರಾಶ್ಚೇತಿ ದ್ವಿವಿಧಾಃ ಪಿತರಃ ಸ್ಮೃತಾಃ||

ಹೀಗೆ ದೇವತೆಗಳೆಲ್ಲರೂ ಪ್ರಜಾಪತಿಯ ಮಾನಸಪುತ್ರರು. ವಸು-ರುದ್ರ-ಆದಿತ್ಯರು ದೇವತೆಗಳೆಂದೂ ಪಿತೃರೂಪರೆಂದೂ ಕರೆಯಲ್ಪಡುತ್ತಾರೆ.

12201021a ಶೀಲರೂಪರತಾಸ್ತ್ವನ್ಯೇ ತಥಾನ್ಯೇ[4] ಸಿದ್ಧಸಾಧ್ಯಯೋಃ|

12201021c ಋಭವೋ ಮರುತಶ್ಚೈವ ದೇವಾನಾಂ ಚೋದಿತಾ ಗಣಾಃ||

ಇವರಲ್ಲಿ ಅನ್ಯರು ಶೀಲರೂಪರತರು. ಅನ್ಯರು ಸಿದ್ಧಸಾಧ್ಯರು. ಋಭುಗಳೂ ಮರುತರೂ ದೇವಗಣಗಳೆಂದು ಹೇಳಿದ್ದಾರೆ.

12201022a ಏವಮೇತೇ ಸಮಾಮ್ನಾತಾ ವಿಶ್ವೇದೇವಾಸ್ತಥಾಶ್ವಿನೌ|

12201022c ಆದಿತ್ಯಾಃ ಕ್ಷತ್ರಿಯಾಸ್ತೇಷಾಂ ವಿಶಸ್ತು ಮರುತಸ್ತಥಾ||

ಹಾಗೆಯೇ ವಿಶ್ವೇದೇವರು ಮತ್ತು ಅಶ್ವಿನಿಯರು ದೇವಗಣಕ್ಕೆ ಸೇರಿದ್ದಾರೆ. ದೇವಗಣಗಳಲ್ಲಿ ಆದಿತ್ಯರು ಕ್ಷತ್ರಿಯರು ಮತ್ತು ಮರುತ್ತರು ವೈಶ್ಯರು.

12201023a ಅಶ್ವಿನೌ ತು ಮತೌ ಶೂದ್ರೌ ತಪಸ್ಯುಗ್ರೇ ಸಮಾಹಿತೌ|

12201023c ಸ್ಮೃತಾಸ್ತ್ವಂಗಿರಸೋ ದೇವಾ ಬ್ರಾಹ್ಮಣಾ ಇತಿ ನಿಶ್ಚಯಃ|

12201023e ಇತ್ಯೇತತ್ಸರ್ವದೇವಾನಾಂ ಚಾತುರ್ವರ್ಣ್ಯಂ ಪ್ರಕೀರ್ತಿತಮ್||

ಉಗ್ರತಪಸ್ಸಿನಲ್ಲಿ ನಿರತರಾದ ಅಶ್ವಿನಿಯರು ಶೂದ್ರರೆಂಬ ಮತವಿದೆ. ಅಂಗಿರಸನ ಗೋತ್ರದ ದೇವತೆಗಳೆಲ್ಲರೂ ಬ್ರಾಹ್ಮಣರೆಂಬ ನಿಶ್ಚಯವಿದೆ. ಹೀಗೆ ಎಲ್ಲ ದೇವತೆಗಳಿಗೂ ಕೂಡ ಚಾತುರ್ವಣ್ಯವನ್ನು ಹೇಳಿದ್ದಾರೆ.

12201024a ಏತಾನ್ವೈ ಪ್ರಾತರುತ್ಥಾಯ ದೇವಾನ್ಯಸ್ತು ಪ್ರಕೀರ್ತಯೇತ್|

12201024c ಸ್ವಜಾದನ್ಯಕೃತಾಚ್ಚೈವ ಸರ್ವಪಾಪಾತ್ಪ್ರಮುಚ್ಯತೇ||

ಬೆಳಿಗ್ಗೆ ಎದ್ದು ಈ ದೇವತೆಗಳ ಕೀರ್ತನೆಮಾಡುವವನು ತಾನು ಮಾಡಿದ ಮತ್ತು ಇತರರ ಸಂಸರ್ಗದಿಂದುಂಟಾದ ಪಾಪಗಳೆಲ್ಲವನ್ನೂ ತೊಳೆದುಕೊಳ್ಳುತ್ತಾನೆ.

12201025a ಯವಕ್ರೀತೋಽಥ ರೈಭ್ಯಶ್ಚ ಅರ್ವಾವಸುಪರಾವಸೂ|

12201025c ಔಶಿಜಶ್ಚೈವ ಕಕ್ಷೀವಾನ್ನಲಶ್ಚಾಂಗಿರಸಃ ಸುತಾಃ||

ಯವಕ್ರೀತ, ರೈಭ್ಯ, ಅರ್ವಾವಸು, ಪರಾವಸು, ಔಷಿಜ ಮತ್ತು ಕಕ್ಷೀವಾನರು ಅಂಗಿರಸನ ಪುತ್ರರು.

12201026a ಋಷೇರ್ಮೇಧಾತಿಥೇಃ ಪುತ್ರಃ ಕಣ್ವೋ ಬರ್ಹಿಷದಸ್ತಥಾ|

12201026c ತ್ರೈಲೋಕ್ಯಭಾವನಾಸ್ತಾತ ಪ್ರಾಚ್ಯಾಂ ಸಪ್ತರ್ಷಯಸ್ತಥಾ||

ಅಯ್ಯಾ! ಋಷಿ ಮೇಧಾತಿಥಿಯ ಪುತ್ರರು ಕಣ್ವ, ಬರ್ಹಿಷ ಮತ್ತು ಮೂರುಲೋಕಗಳನ್ನೂ ಸೃಷ್ಟಿಸಬಲ್ಲ ಪೂರ್ವದಿಕ್ಕಿನಲ್ಲಿರುವ ಸಪ್ತರ್ಷಿಗಳು.

12201027a ಉನ್ಮುಚೋ ವಿಮುಚಶ್ಚೈವ ಸ್ವಸ್ತ್ಯಾತ್ರೇಯಶ್ಚ ವೀರ್ಯವಾನ್|

12201027c ಪ್ರಮುಚಶ್ಚೇಧ್ಮವಾಹಶ್ಚ ಭಗವಾಂಶ್ಚ ದೃಢವ್ರತಃ||

12201028a ಮಿತ್ರಾವರುಣಯೋಃ ಪುತ್ರಸ್ತಥಾಗಸ್ತ್ಯಃ ಪ್ರತಾಪವಾನ್|

12201028c ಏತೇ ಬ್ರಹ್ಮರ್ಷಯೋ ನಿತ್ಯಮಾಶ್ರಿತಾ ದಕ್ಷಿಣಾಂ ದಿಶಮ್||

ಉನ್ಮುಚ, ವಿಮುಚ, ವೀರ್ಯವಾನ್ ಸ್ವಸ್ತ್ಯಾತ್ರೇಯ, ಪ್ರಮುಚ, ಇಧ್ಮವಾಹ, ದೃಢವ್ರತ ಪ್ರತಾಪವಾನ್ ಮಿತ್ರಾವರುಣರ ಪುತ್ರ ಭಗವಾನ್ ಅಗಸ್ತ್ಯ – ಈ ಬ್ರಹ್ಮರ್ಷಿಗಳು ನಿತ್ಯವೂ ದಕ್ಷಿಣ ದಿಕ್ಕನ್ನು ಆಶ್ರಯಿಸಿರುತ್ತಾರೆ.

12201029a ರುಷದ್ಗುಃ[5] ಕವಷೋ ಧೌಮ್ಯಃ ಪರಿವ್ಯಾಧಶ್ಚ ವೀರ್ಯವಾನ್|

12201029c ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ||

12201030a ಅತ್ರೇಃ ಪುತ್ರಶ್ಚ ಭಗವಾಂಸ್ತಥಾ ಸಾರಸ್ವತಃ ಪ್ರಭುಃ|

12201030c ಏತೇ ನವ[6] ಮಹಾತ್ಮಾನಃ ಪಶ್ಚಿಮಾಮಾಶ್ರಿತಾ ದಿಶಮ್||

ರುಷದ್ಗು, ಕವಷ, ಧೌಮ್ಯ, ವೀರ್ಯವಾನ್ ಪರಿವ್ಯಾಧ, ಏಕತ, ದ್ವಿತ, ತ್ರಿತ ಮಹರ್ಷಿಗಳು, ಅತ್ರಿಯ ಪುತ್ರ ಮತ್ತು ಭಗವಾನ್ ಪ್ರಭು ಸಾರಸ್ವತ ಈ ಒಂಭತ್ತು ಮಹಾತ್ಮರು ಪಶ್ಚಿಮ ದಿಕ್ಕನ್ನು ಆಶ್ರಯಿಸಿರುತ್ತಾರೆ.

12201031a ಆತ್ರೇಯಶ್ಚ ವಸಿಷ್ಠಶ್ಚ ಕಶ್ಯಪಶ್ಚ ಮಹಾನೃಷಿಃ|

12201031c ಗೌತಮಃ ಸಭರದ್ವಾಜೋ ವಿಶ್ವಾಮಿತ್ರೋಽಥ ಕೌಶಿಕಃ||

12201032a ತಥೈವ ಪುತ್ರೋ ಭಗವಾನೃಚೀಕಸ್ಯ ಮಹಾತ್ಮನಃ|

12201032c ಜಮದಗ್ನಿಶ್ಚ ಸಪ್ತೈತೇ ಉದೀಚೀಂ ದಿಶಮಾಶ್ರಿತಾಃ||

ಅತ್ರೇಯ, ವಸಿಷ್ಠ, ಮಹಾನೃಷಿ ಕಶ್ಯಪ, ಗೌತಮ, ಭರದ್ವಾಜ, ವಿಶ್ವಾಮಿತ್ರ ಕೌಶಿಕ, ಹಾಗೂ ಭಗವನ್ ಋಚೀಕನ ಪುತ್ರ ಮಹಾತ್ಮ ಜಮದಗ್ನಿ ಈ ಏಳು ಋಷಿಗಳು ಉತ್ತರ ದಿಕ್ಕನ್ನು ಆಶ್ರಯಿಸಿರುತ್ತಾರೆ.

12201033a ಏತೇ ಪ್ರತಿದಿಶಂ ಸರ್ವೇ ಕೀರ್ತಿತಾಸ್ತಿಗ್ಮತೇಜಸಃ|

12201033c ಸಾಕ್ಷಿಭೂತಾ ಮಹಾತ್ಮಾನೋ ಭುವನಾನಾಂ ಪ್ರಭಾವನಾಃ||

ಪ್ರತಿದಿಕ್ಕಿನಲ್ಲಿರುವ ಇವರೆಲ್ಲರೂ ತಿಗ್ಮತೇಜಸರೆಂದು ಹೇಳಿದ್ದಾರೆ. ಭುವನಗಳನ್ನು ಸೃಷ್ಟಿಸಬಲ್ಲ ಈ ಮಹಾತ್ಮರು ಎಲ್ಲವಕ್ಕೂ ಸಾಕ್ಷೀಭೂತರು.

12201034a ಏವಮೇತೇ ಮಹಾತ್ಮಾನಃ ಸ್ಥಿತಾಃ ಪ್ರತ್ಯೇಕಶೋ ದಿಶಃ|

12201034c ಏತೇಷಾಂ ಕೀರ್ತನಂ ಕೃತ್ವಾ ಸರ್ವಪಾಪೈಃ ಪ್ರಮುಚ್ಯತೇ||

ಪ್ರತ್ಯೇಕ ದಿಕ್ಕುಗಳಲ್ಲಿರುವ ಈ ಮಹಾತ್ಮರ ಕೀರ್ತನೆಯನ್ನು ಮಾಡಿದರೆ ಸರ್ವಪಾಪಗಳಿಂದಲೂ ಮುಕ್ತನಾಗುತ್ತಾನೆ.

12201035a ಯಸ್ಯಾಂ ಯಸ್ಯಾಂ ದಿಶಿ ಹ್ಯೇತೇ ತಾಂ ದಿಶಂ ಶರಣಂ ಗತಃ|

12201035c ಮುಚ್ಯತೇ ಸರ್ವಪಾಪೇಭ್ಯಃ ಸ್ವಸ್ತಿಮಾಂಶ್ಚ ಗೃಹಾನ್ವ್ರಜೇತ್||

ಯಾವುದೇ ದಿಕ್ಕಿನಲ್ಲಿ ಪ್ರಯಾಣಿಸುವಾಗ ಆ ದಿಕ್ಕಿನಲ್ಲಿರುವ ಋಷಿಗಳಿಗೆ ಶರಣು ಹೋದರೆ ಅವನು ಸರ್ವಪಾಪಗಳಿಂದಲೂ ಮುಕ್ತನಾಗಿ ಕುಶಲನಾಗಿಯೇ ಮನೆಗೆ ಹಿಂದಿರುಗುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ದಿಶಾಸ್ವಸ್ತಿಕಂ ನಾಮ ಏಕಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ದಿಶಾಸ್ವಸ್ತಿಕ ಎನ್ನುವ ಇನ್ನೂರಾಒಂದನೇ ಅಧ್ಯಾಯವು.

[1] ಅತ್ರೈಶ್ಚೈವೌರಸಃ ಶ್ರೀಮಾನ್ರಾಜಾ ಸೋಮಶ್ಚ ವೀರ್ಯವಾನ್| (ಭಾರತ ದರ್ಶನ/ಗೀತಾ ಪ್ರೆಸ್).

[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತೇ ಚ ಪೂರ್ವಂ ಸುರಾಶ್ಚೇತಿ ದ್ವಿವಿಧಾಃ ಪಿತರಃ ಸ್ಮೃತಾಃ| (ಭಾರತ ದರ್ಶನ/ಗೀತಾ ಪ್ರೆಸ್).

[3] ಧರೋ ಧ್ರುವಶ್ಚ ಸೋಮಶ್ಚ ಅಹಶ್ಚೈವಾನಿಲೋಽನಲಃ| ಪ್ರತ್ಯೂಷಶ್ಚ ಪ್ರಭಾಸಶ್ಚ ವಸವೋಷ್ಟಾಇತಿಸ್ಮೃತಾಃ|| (ಭಾರತ ದರ್ಶನ).

[4] ಶೀಲಯೌವನತಸ್ತ್ವನ್ಯಸ್ತಥಾನ್ಯಃ (ಭಾರತ ದರ್ಶನ/ಗೀತಾ ಪ್ರೆಸ್).

[5] ಉಷಂಗುಃ (ಗೀತಾ ಪ್ರೆಸ್).

[6] ಚೈವ (ಗೀತಾ ಪ್ರೆಸ್).

Comments are closed.