ತ್ರಿತಾಖ್ಯಾನ

ತ್ರಿತಾಖ್ಯಾನ ಪೂರ್ವಯುಗದಲ್ಲಿ ಆದಿತ್ಯಸನ್ನಿಭರಾದ ಮೂವರು ಸಹೋದರ ಮುನಿಗಳಿದ್ದರು: ಏಕತ, ದ್ವಿತ ಮತ್ತು ತ್ರಿತ. ಅವರೆಲ್ಲರೂ ಪ್ರಜಾಪತಿಯ ಸಮನಾಗಿದ್ದರು ಮತ್ತು ಹಾಗೆಯೇ ಪ್ರಜಾವಂತರಾಗಿದ್ದರು. ತಪಸ್ಸಿನಿಂದಾಗಿ ಎಲ್ಲರೂ ಬ್ರಹ್ಮಲೋಕವನ್ನು ಗೆದ್ದ ಬ್ರಹ್ಮವಾದಿಗಳಾಗಿದ್ದರು. ಸದಾ ಧರ್ಮರತನಾಗಿದ್ದ ಅವರ ತಂದೆ ಗೌತಮನು ಅವರ ತಪಸ್ಸು-ನಿಯಮ-ದಮಗಳಿಂದ ಪ್ರೀತನಾಗಿದ್ದನು. ದೀರ್ಘಕಾಲದವರೆಗೆ ಅವರಿಗೆ ಪ್ರೀತಿಯನ್ನಿತ್ತು ಭಗವಾನ್ ಗೌತಮನು ತನಗೆ ಅನುರೂಪ ಸ್ಥಾನಕ್ಕೆ ಹೊರಟುಹೋದನು. ಅವನು ಸ್ವರ್ಗಕ್ಕೆ ಹೋಗಲು ಆ ಮಹಾತ್ಮನಿಂದ ಮೊದಲು ಯಜ್ಞಯಾಗಾದಿಗಳನ್ನು ನಡೆಸಿಕೊಳ್ಳುತ್ತಿದ್ದ ರಾಜರುಗಳು ಅವನ ಪುತ್ರರನ್ನು ಗೌರವಿಸತೊಡಗಿದರು.…

Continue reading

ಪ್ರಭಾಸಕ್ಷೇತ್ರ ಮಹಾತ್ಮೆ

ಪ್ರಭಾಸಕ್ಷೇತ್ರ ಮಹಾತ್ಮೆ ಪ್ರಭಾಸಕ್ಷೇತ್ರ ಮಹಾತ್ಮೆಯ ಈ ಕಥೆಯು ವ್ಯಾಸ ಮಹಾಭಾರತದ ಶಲ್ಯಪರ್ವದ ಸಾರಸ್ವತಪರ್ವ (ಅಧ್ಯಾಯ ೩೪) ದಲ್ಲಿ ಬರುತ್ತದೆ. ಬಲರಾಮನ ತೀರ್ಥಯಾತ್ರೆಯ ಕುರಿತು ಜನಮೇಜನು ಕೇಳಲು ವೈಶಂಪಾಯನನು ಈ ಕಥೆಯನ್ನು ಹೇಳಿದನು. ದಕ್ಷನಿಗೆ ಅನೇಕ ಕನ್ಯೆಯರಿದ್ದರು. ಅವರಲ್ಲಿ ಇಪ್ಪತ್ತೇಳು ಕನ್ಯೆಯರನ್ನು ದಕ್ಷನು ಸೋಮನಿಗೆ ಕೊಟ್ಟನು. ಗಣನೆಯ ಸಲುವಾಗಿ ಸೋಮನ ಆ ಶುಭಲಕ್ಷಣ ಪತ್ನಿಯರು ನಕ್ಷತ್ರಯೋಗನಿರತರಾಗಿದ್ದರು. ಆ ವಿಶಾಲಾಕ್ಷಿಯರೆಲ್ಲರೂ ಭುವಿಯಲ್ಲಿಯೇ ಅಪ್ರತಿಮ ರೂಪವುಳ್ಳವರಾಗಿದ್ದರು. ಅವರೆಲ್ಲರಲ್ಲಿ ರೋಹಿಣಿಯು ಅತ್ಯಂತ ರೂಪಸಂಪದೆಯಾಗಿದ್ದಳು. ಆದುದರಿಂದ ಭಗವಾನ್ ನಿಶಾಕರನು…

Continue reading

ಕುರುಕ್ಷೇತ್ರ ಮಹಾತ್ಮೆ

ಕುರುಕ್ಷೇತ್ರ ಮಹಾತ್ಮೆ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 52ರಲ್ಲಿ ಹೇಳುತ್ತಾನೆ. ಸನಾತನ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿಯೆಂದು ಕರೆಯುತ್ತಾರೆ. ಮಹಾವರಪ್ರದ ದಿವೌಕಸರೇ ಹಿಂದೆ ಇಲ್ಲಿ ಶ್ರೇಷ್ಠ ಸತ್ರಗಳನ್ನು ಯಾಜಿಸಿದ್ದರು. ಹಿಂದೆ ರಾಜರ್ಷಿಶ್ರೇಷ್ಠ ಧೀಮತ ಅಮಿತ ತೇಜಸ್ವಿ ಮಹಾತ್ಮ ಕುರುವು ಅನೇಕ ವರ್ಷಗಳು ಹೂಳುತ್ತಿದ್ದುದರಿಂದ ಈ ಪ್ರದೇಶವು ಕುರುಕ್ಷೇತ್ರವೆಂದು ಪ್ರಸಿದ್ಧವಾಯಿತು. ಹಿಂದೆ ಸತತವೂ ನಿಂತು ಉಳುತ್ತಿದ್ದ ಕುರುವನ್ನು ಶಕ್ರನು ತ್ರಿದಿವದಿಂದ ಬಂದು ಭೇಟಿಮಾಡಿ ಇದರ ಕಾರಣವನ್ನು ಕೇಳಿದ್ದನು:…

Continue reading

ವೃದ್ಧಕನ್ಯೆ

ವೃದ್ಧಕನ್ಯೆ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 51ರಲ್ಲಿ ಹೇಳುತ್ತಾನೆ. ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿರ್ಗಾಗ್ಯ ಎಂಬ ಋಷಿಯಿದ್ದನು. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ ಸುಂದರ ಹುಬ್ಬಿನ ಮಗಳೋರ್ವಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು. ಅವಳನ್ನು ನೋಡಿ ಮಹಾಯಶಸ್ವಿ ಕುಣಿರ್ಗಾಗ್ಯನು ಪರಮ ಪ್ರೀತನಾದನು. ದೇಹವನ್ನು ತ್ಯಜಿಸಿ ಅವನು ಸ್ವರ್ಗಕ್ಕೆ ತೆರಳಿದನು. ಸುಂದರ ಹುಬ್ಬಿನ, ಕಮಲದ ಎಸಳುಗಳಂತಹ ಕಣ್ಣುಗಳಿದ್ದ ಆ ಕಲ್ಯಾಣೀ ಅನಿಂದಿತೆಯು ಒಂದು ಆಶ್ರಮವನ್ನು ಮಾಡಿಕೊಂಡು…

Continue reading

ಕಾರ್ತಿಕೇಯನ ಜನ್ಮ

ಕಾರ್ತಿಕೇಯನ ಜನ್ಮ ಕಾರ್ತಿಕೇಯನ ಜನ್ಮದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೨೧೩-೨೨೧) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು. ಸ್ಕಂದನ ಈ ಜನ್ಮವನ್ನು ಸುಸಮಾಹಿತನಾಗಿ ಯಾರು ಓದುತ್ತಾರೋ ಅವರಿಗೆ ಇಲ್ಲಿ ಸಮೃದ್ಧಿಯೂ ಮತ್ತು ಇಲ್ಲಿಯ ನಂತರ ಸ್ಕಂದಲೋಕವೂ ದೊರೆಯುತ್ತದೆ. ಹಿಂದೆ ದೇವತೆಗಳು ಮತ್ತು ಅಸುರರು ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾಗಿದ್ದರು. ಮತ್ತು ಘೋರರೂಪೀ ದಾನವರು ಯಾವಾಗಲೂ ದೇವತೆಗಳನ್ನು…

Continue reading

ಧುಂಧುಮಾರ

ಧುಂಧುಮಾರ ರಾಜ ಕುವಲಾಶ್ವನು ದುಂಧುಮಾರನೆಂದು ಹೇಗಾದನು ಎನ್ನುವ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೯೨-೧೯೫) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು. ವಿಷ್ಣುವಿನ ಕೀರ್ತನೆಯಿರುವ, ಈ ಪುಣ್ಯಕಥೆಯನ್ನು ಕೇಳುವ ನರನು ಧರ್ಮಾತ್ಮನೂ ಪುತ್ರವಂತನೂ ಆಗುತ್ತಾನೆ. ಪರ್ವಗಳಲ್ಲಿ ಕೇಳುವವನು ಧೃತಿವಂತನೂ ಆಯುಷ್ಮಂತನೂ ಆಗುತ್ತಾನೆ. ವ್ಯಾಧಿಭಯ ಯಾವುದನ್ನೂ ಹೊಂದದೇ ವಿಗತಜ್ವರನಾಗುತ್ತಾನೆ. ಮಹರ್ಷಿಯೆಂದು ವಿಶ್ರುತನಾದ ಉತ್ತಂಕನು ರಮ್ಯವಾದ ಮರುಭೂಮಿಯಲ್ಲಿ ತನ್ನ ಆಶ್ರಮದಲ್ಲಿದ್ದನು.…

Continue reading

ಮಧು-ಕೈಟಭ ವಧೆ

ಮಧು-ಕೈಟಭ ವಧೆ ಮಧು-ಕೈಟಭರ ವಧೆಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೯೪) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು. ಘೋರವಾದ ಸಾಗರವೊಂದೇ ಇದ್ದಾಗ, ಸ್ಥಾವರಜಂಗಮಗಳು ಸರ್ವ ಭೂತಗಳು ನಷ್ಟವಾಗಿದ್ದಾಗ, ಸರ್ವಭೂತಗಳ ಪ್ರಭವ, ಶಾಶ್ವತ, ಪುರುಷ, ಅವ್ಯಯ, ಭಗವಾನ್ ವಿಷ್ಣುವು ಈ ನೀರಿನ ಹಾಸಿಗೆಯ ಮೇಲೆ ಏಕಾಂಗಿಯಾಗಿ, ಅಮಿತ ತೇಜಸ್ವಿ ನಾಗ ಶೇಷನ ಸುರಳಿಯಲ್ಲಿ ಮಲಗಿದ್ದನು. ಲೋಕಕರ್ತ,…

Continue reading

ಮಂಡೂಕ-ವಾಮದೇವ

ಮಂಡೂಕ-ವಾಮದೇವ ಮಂಡೂಕ-ವಾಮದೇವರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೯೦) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು. ಅಯೋಧ್ಯೆಯ ಇಕ್ಷ್ವಾಕುಕುಲೋತ್ಪನ್ನನಾದ ಪರಿಕ್ಷಿತ ಎಂಬ ಹೆಸರಿನ ರಾಜನು ಬೇಟೆಗೆ ಹೋದನು. ಅವನು ಒಂದು ಕುದುರೆಯ ಮೇಲೆ ಕುಳಿತು ಜಿಂಕೆಯೊಂದನ್ನು ಅರಸಲು ಜಿಂಕೆಯು ಅವನನ್ನು ಬಹುದೂರ ಕೊಂಡೊಯ್ಯಿತು. ದಾರಿಯಲ್ಲಿ ಅವನು ತುಂಬಾ ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ ಯಾವುದೋ ಒಂದು…

Continue reading

ತಾರ್ಕ್ಷ್ಯ ಅರಿಷ್ಟನೇಮಿ

ತಾರ್ಕ್ಷ್ಯ ಅರಿಷ್ಟನೇಮಿ ತಾರ್ಕ್ಷ್ಯ ಅರಿಷ್ಟನೇಮಿಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೮೨) ದಲ್ಲಿ ಬರುತ್ತದೆ. ಬ್ರಾಹ್ಮಣರ ಮಹತ್ವವೇನೆಂದು ಯುಧಿಷ್ಠಿರನು ಕೇಳಿದಾಗ ಋಷಿ ಮಾರ್ಕಂಡೇಯನು ಈ ಕಥೆಯನ್ನು ಅವನಿಗೆ ಕಾಮ್ಯಕ ವನದಲ್ಲಿ ಹೇಳಿದನು. ಹೈಹಯರ ಕುಲಕರ ಪರಪುರಂಜಯ ಕುಮಾರ ರೂಪಸಂಪನ್ನ ರಾಜನೊಬ್ಬನಿದ್ದನು. ಒಮ್ಮೆ ಅವನು ಬೇಟೆಗೆ ಹೋದನು. ಎತ್ತರಕ್ಕೆ ಬೆಳೆದಿದ್ದ ಹುಲ್ಲು ಮತ್ತು ಪೊದೆಗಳಿಂದ ಕೂಡಿದ್ದ ಆ ಅರಣ್ಯದಲ್ಲಿ ತಿರುಗುತ್ತಿರುವಾಗ ಹತ್ತಿರದಲ್ಲಿ ಕೃಷ್ಣಾಜಿನವನ್ನು ಮೇಲುಹೊದಿಗೆಯಾಗಿ…

Continue reading

ಅತ್ರಿ

ಅತ್ರಿ ಅತ್ರಿಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೮೩) ದಲ್ಲಿ ಬರುತ್ತದೆ. ಬ್ರಾಹ್ಮಣರ ಮಹತ್ವವೇನೆಂದು ಯುಧಿಷ್ಠಿರನು ಕೇಳಿದಾಗ ಋಷಿ ಮಾರ್ಕಂಡೇಯನು ಈ ಕಥೆಯನ್ನು ಅವನಿಗೆ ಕಾಮ್ಯಕ ವನದಲ್ಲಿ ಹೇಳಿದನು. ವೈನ್ಯ ಎಂಬ ಹೆಸರಿನ ರಾಜರ್ಷಿಯು ಅಶ್ವಮೇಧಯಾಗದ ದೀಕ್ಷೆಯಲ್ಲಿದ್ದನು. ಅಲ್ಲಿಗೆ ಅತ್ರಿಯು ವಿತ್ತವನ್ನು ಅರಸಿ ಹೋಗಲು ಬಯಸಿದನು. ಆದರೆ ಅವನು ವ್ಯಕ್ತಿಧರ್ಮದ ನಿದರ್ಶನದಂತೆ ಅಲ್ಲಿ ಹೋಗಲು ತನ್ನೊಂದಿಗೆ ತಾನೇ ಒಪ್ಪಿಕೊಳ್ಳಲಿಲ್ಲ. ಅದರ ಕುರಿತು ಯೋಚಿಸಿದ…

Continue reading