Anushasana Parva: Chapter 153

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ: ಭೀಷ್ಮಸ್ವರ್ಗಾರೋಹಣ ಪರ್ವ

೧೫೩

ಭೀಷ್ಮಸ್ವರ್ಗಾನುಜ್ಞಾ

13153001 ವೈಶಂಪಾಯನ ಉವಾಚ|

13153001a ತತಃ ಕುಂತೀಸುತೋ ರಾಜಾ ಪೌರಜಾನಪದಂ ಜನಮ್|

13153001c ಪೂಜಯಿತ್ವಾ ಯಥಾನ್ಯಾಯಮನುಜಜ್ಞೇ ಗೃಹಾನ್ ಪ್ರತಿ||

ವೈಶಂಪಾಯನನು ಹೇಳಿದನು: “ಅನಂತರ ರಾಜಾ ಕುಂತೀಸುತನು ಪೌರ-ಜಾನಪದ ಜನರನ್ನು ಯಥಾನ್ಯಾಯವಾಗಿ ಪೂಜಿಸಿ ತಮ್ಮ ತಮ್ಮ ಮನೆಗಳಿಗೆ ಹೋಗಲು ಅನುಮತಿಯನ್ನಿತ್ತನು.

13153002a ಸಾಂತ್ವಯಾಮಾಸ ನಾರೀಶ್ಚ ಹತವೀರಾ ಹತೇಶ್ವರಾಃ|

13153002c ವಿಪುಲೈರರ್ಥದಾನೈಶ್ಚ ತದಾ ಪಾಂಡುಸುತೋ ನೃಪಃ||

ಆಗ ಪಾಂಡುಸುತ ನೃಪನು ವೀರರನ್ನು ಕಳೆದುಕೊಂಡಿದ್ದ ಮತ್ತು ಪತಿಯಂದಿರನ್ನು ಕಳೆದುಕೊಂಡಿದ್ದ ನಾರೀಗಣಗಳಿಗೆ ಅಪಾರ ಐಶ್ವರ್ಯವನ್ನು ದಾನಮಾಡಿ ಸಂತವಿಸಿದನು.

13153003a ಸೋಽಭಿಷಿಕ್ತೋ ಮಹಾಪ್ರಾಜ್ಞಃ ಪ್ರಾಪ್ಯ ರಾಜ್ಯಂ ಯುಧಿಷ್ಠಿರಃ|

13153003c ಅವಸ್ಥಾಪ್ಯ ನರಶ್ರೇಷ್ಠಃ ಸರ್ವಾಃ ಸ್ವಪ್ರಕೃತೀಸ್ತದಾ||

13153004a ದ್ವಿಜೇಭ್ಯೋ ಬಲಮುಖ್ಯೇಭ್ಯೋ ನೈಗಮೇಭ್ಯಶ್ಚ ಸರ್ವಶಃ|

13153004c ಪ್ರತಿಗೃಹ್ಯಾಶಿಷೋ ಮುಖ್ಯಾಸ್ತದಾ ಧರ್ಮಭೃತಾಂ ವರಃ||

ಅಭಿಷಿಕ್ತನಾಗಿ ರಾಜ್ಯವನ್ನು ಪಡೆದ ಮಹಾಪ್ರಾಜ್ಞ ನರಶ್ರೇಷ್ಠ ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿಗಣಗಳನ್ನೂ ಅವರವರ ಸ್ಥಾನಗಳಲ್ಲಿ ನಿಯೋಜಿಸಿ ಶಕ್ತಿಯುತ ದ್ವಿಜ ಮುಖ್ಯರಿಂದ ಶ್ರೇಷ್ಠ ಆಶೀರ್ವಾದಗಳನ್ನು ಪಡೆದನು.

13153005a ಉಷಿತ್ವಾ ಶರ್ವರೀಃ ಶ್ರೀಮಾನ್ಪಂಚಾಶನ್ನಗರೋತ್ತಮೇ|

13153005c ಸಮಯಂ ಕೌರವಾಗ್ರ್ಯಸ್ಯ ಸಸ್ಮಾರ ಪುರುಷರ್ಷಭಃ||

ಶ್ರೀಮಾನ್ ಪುರುಷರ್ಷಭನು ಆ ಉತ್ತಮ ನಗರದಲ್ಲಿ ಐವತ್ತು ರಾತ್ರಿಗಳನ್ನು ಕಳೆದು ಅನಂತರ ಕೌರವಾಗ್ರ್ಯ ಭೀಷ್ಮನನ್ನು ಸ್ಮರಿಸಿದನು.

13153006a ಸ ನಿರ್ಯಯೌ ಗಜಪುರಾದ್ಯಾಜಕೈಃ ಪರಿವಾರಿತಃ|

13153006c ದೃಷ್ಟ್ವಾ ನಿವೃತ್ತಮಾದಿತ್ಯಂ ಪ್ರವೃತ್ತಂ ಚೋತ್ತರಾಯಣಮ್||

ಆದಿತ್ಯನು ಹಿಂದಿರುಗಿ ಉತ್ತರಾಯಣದ ಕಡೆ ಹೋಗುತ್ತಿರುವುದನ್ನು ನೋಡಿ ಅವನು ಯಾಜಕರಿಂದ ಪರಿವಾರಿತನಾಗಿ ಗಜಪುರದಿಂದ ಹೊರಟನು.

13153007a ಘೃತಂ ಮಾಲ್ಯಂ ಚ ಗಂಧಾಂಶ್ಚ ಕ್ಷೌಮಾಣಿ ಚ ಯುಧಿಷ್ಠಿರಃ|

13153007c ಚಂದನಾಗರುಮುಖ್ಯಾನಿ ತಥಾ ಕಾಲಾಗರೂಣಿ ಚ||

13153008a ಪ್ರಸ್ಥಾಪ್ಯ ಪೂರ್ವಂ ಕೌಂತೇಯೋ ಭೀಷ್ಮಸಂಸಾಧನಾಯ ವೈ|

13153008c ಮಾಲ್ಯಾನಿ ಚ ಮಹಾರ್ಹಾಣಿ ರತ್ನಾನಿ ವಿವಿಧಾನಿ ಚ||

ಇದಕ್ಕೆ ಮೊದಲೇ ಕೌಂತೇಯ ಯುಧಿಷ್ಠಿರನು ಭೀಷ್ಮನ ಸಂಸಾಧನೆಗಾಗಿ ತುಪ್ಪ, ಮಾಲೆ, ಗಂಧ, ಪಟ್ಟವಸ್ತ್ರಗಳು, ಚಂದನ-ಅಗರು -ಕಪ್ಪು ಅಗರು ಮೊದಲಾದವುಗಳು, ಮತ್ತು ಮಹಾಬೆಲೆಬಾಳುವ ವಿವಿದ ರತ್ನಗಳನ್ನೂ ಮಾಲೆಗಳನ್ನೂ ಕಳುಹಿಸಿದ್ದನು.

13153009a ಧೃತರಾಷ್ಟ್ರಂ ಪುರಸ್ಕೃತ್ಯ ಗಾಂಧಾರೀಂ ಚ ಯಶಸ್ವಿನೀಮ್|

13153009c ಮಾತರಂ ಚ ಪೃಥಾಂ ಧೀಮಾನ್ಭ್ರಾತೄಂಶ್ಚ ಪುರುಷರ್ಷಭಃ||

13153010a ಜನಾರ್ದನೇನಾನುಗತೋ ವಿದುರೇಣ ಚ ಧೀಮತಾ|

13153010c ಯುಯುತ್ಸುನಾ ಚ ಕೌರವ್ಯೋ ಯುಯುಧಾನೇನ ಚಾಭಿಭೋ||

13153011a ಮಹತಾ ರಾಜಭೋಗ್ಯೇನ ಪರಿಬರ್ಹೇಣ ಸಂವೃತಃ|

13153011c ಸ್ತೂಯಮಾನೋ ಮಹಾರಾಜ ಭೀಷ್ಮಸ್ಯಾಗ್ನೀನನುವ್ರಜನ್||

ಮಹಾರಾಜ! ಆ ಧೀಮಾನ್ ಪುರುಷರ್ಷಭನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಯಶಸ್ವಿನೀ ಗಾಂಧಾರೀ, ತಾಯಿ ಪೃಥೆ, ಸಹೋದರರು, ಜನಾರ್ದನನನ್ನು ಅನುಸರಿಸಿದ ಧೀಮಂತ ವಿದುರ, ಕೌರವ್ಯ ಯುಯುತ್ಸು, ಯುಯುಧಾನ, ಮತ್ತು ಮಹಾ ರಾಜಭೋಗ್ಯ ವಸ್ತುಗಳಿಂದ ಕೂಡಿಕೊಂಡು ಸ್ತುತಿಸಲ್ಪಡುತ್ತಾ  ಭೀಷ್ಮನ ಮೂರು ಅಗ್ನಿಗಳನ್ನೂ ಅನುಸರಿಸುತ್ತಾ ಭೀಷ್ಮನಿದ್ದೆಡೆಗೆ ಹೊರಟನು.

13153012a ನಿಶ್ಚಕ್ರಾಮ ಪುರಾತ್ತಸ್ಮಾದ್ಯಥಾ ದೇವಪತಿಸ್ತಥಾ|

13153012c ಆಸಸಾದ ಕುರುಕ್ಷೇತ್ರೇ ತತಃ ಶಾಂತನವಂ ನೃಪಮ್||

ದೇವಪತಿಯಂತೆ ಪುರದಿಂದ ಹೊರಟು ಅವನು ಕುರುಕ್ಷೇತ್ರದಲ್ಲಿದ್ದ ನೃಪ ಶಾಂತನವನನ್ನು ತಲುಪಿದನು.  

13153013a ಉಪಾಸ್ಯಮಾನಂ ವ್ಯಾಸೇನ ಪಾರಾಶರ್ಯೇಣ ಧೀಮತಾ|

13153013c ನಾರದೇನ ಚ ರಾಜರ್ಷೇ ದೇವಲೇನಾಸಿತೇನ ಚ||

13153014a ಹತಶಿಷ್ಟೈರ್ನೃಪೈಶ್ಚಾನ್ಯೈರ್ನಾನಾದೇಶಸಮಾಗತೈಃ|

13153014c ರಕ್ಷಿಭಿಶ್ಚ ಮಹಾತ್ಮಾನಂ ರಕ್ಷ್ಯಮಾಣಂ ಸಮಂತತಃ||

13153015a ಶಯಾನಂ ವೀರಶಯನೇ ದದರ್ಶ ನೃಪತಿಸ್ತತಃ|

ರಾಜರ್ಷೇ! ಧೀಮಂತ ಪಾರಶರ್ಯ ವ್ಯಾಸ, ನಾರದ ಮತ್ತು ದೇವಲ-ಅಸಿತರು ಹತ್ತಿರದಲ್ಲಿದ್ದ, ನಾನಾ ದೇಶಗಳಿಂದ ಬಂದು ಹತರಾಗದೇ ಉಳಿದಿದ್ದ ನೃಪರಿಂದ ಎಲ್ಲಕಡೆಗಳಿಂದ ರಕ್ಷಣೆಗೊಳಗಾಗಿದ್ದ, ವೀರಶಯನದಲ್ಲಿ ಮಲಗಿದ್ದ ಭೀಷ್ಮನನ್ನು ನೃಪತಿಯು ಕಂಡನು.

13153015c ತತೋ ರಥಾದವಾರೋಹದ್ಭ್ರಾತೃಭಿಃ ಸಹ ಧರ್ಮರಾಟ್||

13153016a ಅಭಿವಾದ್ಯಾಥ ಕೌಂತೇಯಃ ಪಿತಾಮಹಮರಿಂದಮಮ್|

13153016c ದ್ವೈಪಾಯನಾದೀನ್ವಿಪ್ರಾಂಶ್ಚ ತೈಶ್ಚ ಪ್ರತ್ಯಭಿನಂದಿತಃ||

ಆಗ ಸಹೋದರರೊಡನೆ ಕೌಂತೇಯ ಧರ್ಮರಾಜನು ರಥದಿಂದ ಇಳಿದು ಅರಿಂದಮ ಪಿತಾಮಹನನನ್ನೂ ದ್ವೈಪಾಯನನೇ ಮೊದಲಾದ ವಿಪ್ರರನ್ನೂ ನಮಸ್ಕರಿಸಿದನು. ಅವರೂ ಕೂಡ ಅವನನ್ನು ಪ್ರತಿನಂದಿಸಿದರು.

13153017a ಋತ್ವಿಗ್ಭಿರ್ಬ್ರಹ್ಮಕಲ್ಪೈಶ್ಚ ಭ್ರಾತೃಭಿಶ್ಚ ಸಹಾಚ್ಯುತಃ|

13153017c ಆಸಾದ್ಯ ಶರತಲ್ಪಸ್ಥಮೃಷಿಭಿಃ ಪರಿವಾರಿತಮ್||

ಬ್ರಹ್ಮಕಲ್ಪ ಋತ್ವಿಜರು ಮತ್ತು ಸಹೋದರರನ್ನೊಡಗೂಡಿ ಆ ಅಚ್ಯುತನು ಋಷಿಗಳಿಂದ ಸುತ್ತುವರೆಯಲ್ಪಟ್ಟು ಶರತಲ್ಪದಮೇಲಿದ್ದ ಭೀಷ್ಮನನ್ನು ಸಮೀಪಿಸಿದನು.

13153018a ಅಬ್ರವೀದ್ಭರತಶ್ರೇಷ್ಠಂ ಧರ್ಮರಾಜೋ ಯುಧಿಷ್ಠಿರಃ|

13153018c ಭ್ರಾತೃಭಿಃ ಸಹ ಕೌರವ್ಯ ಶಯಾನಂ ನಿಮ್ನಗಾಸುತಮ್||

ಕೌರವ್ಯ! ಆಗ ಧರ್ಮರಾಜ ಯುಧಿಷ್ಠಿರನು ಸಹೋದರರೊಂದಿಗೆ ಮಲಗಿದ್ದ ನದೀಸುತ ಭರತಶ್ರೇಷ್ಠನಿಗೆ ಹೇಳಿದನು:

13153019a ಯುಧಿಷ್ಠಿರೋಽಹಂ ನೃಪತೇ ನಮಸ್ತೇ ಜಾಹ್ನವೀಸುತ|

13153019c ಶೃಣೋಷಿ ಚೇನ್ಮಹಾಬಾಹೋ ಬ್ರೂಹಿ ಕಿಂ ಕರವಾಣಿ ತೇ||

“ನೃಪತೇ! ಜಾಹ್ನವೀಸುತ! ಮಹಾಬಾಹೋ! ನಾನು ಯುಧಿಷ್ಠಿರ! ನಿನಗೆ ನಮಸ್ಕರಿಸುತ್ತಿದ್ದೇನೆ. ನಿನಗೆ ಕೇಳಿಸುತ್ತಿದೆ ತಾನೇ? ನಾನು ನಿನಗೆ ಏನು ಮಾಡಬಹುದೆನ್ನುವುದನ್ನು ಹೇಳು!

13153020a ಪ್ರಾಪ್ತೋಽಸ್ಮಿ ಸಮಯೇ ರಾಜನ್ನಗ್ನೀನಾದಾಯ ತೇ ವಿಭೋ|

13153020c ಆಚಾರ್ಯಾ ಬ್ರಾಹ್ಮಣಾಶ್ಚೈವ ಋತ್ವಿಜೋ ಭ್ರಾತರಶ್ಚ ಮೇ||

ರಾಜನ್! ವಿಭೋ! ನೀನು ಹೇಳಿದ ಸಮಯಕ್ಕೆ ಸರಿಯಾಗಿ ನಿನ್ನ ಅಗ್ನಿಗಳನ್ನೂ, ಆಚಾರ್ಯ-ಬ್ರಾಹ್ಮಣರನ್ನೂ, ಋತ್ವಿಜರನ್ನೂ ಮತ್ತು ನನ್ನ ಸಹೋದರರನ್ನೂ ಕರೆದುಕೊಂಡು ಬಂದಿದ್ದೇನೆ.

13153021a ಪುತ್ರಶ್ಚ ತೇ ಮಹಾತೇಜಾ ಧೃತರಾಷ್ಟ್ರೋ ಜನೇಶ್ವರಃ|

13153021c ಉಪಸ್ಥಿತಃ ಸಹಾಮಾತ್ಯೋ ವಾಸುದೇವಶ್ಚ ವೀರ್ಯವಾನ್||

ಮಹಾತೇಜಸ್ವಿಯೇ! ನಿನ್ನ ಪುತ್ರ ಜನೇಶ್ವರ ಧೃತರಾಷ್ಟ್ರನು ತನ್ನ ಅಮಾತ್ಯರೊಂದಿಗೆ ಮತ್ತು ವೀರ್ಯವಾನ್ ವಾಸುದೇವನೂ ಕೂಡ ಇಲ್ಲಿ ಉಪಸ್ಥಿತರಿದ್ದಾರೆ.

13153022a ಹತಶಿಷ್ಟಾಶ್ಚ ರಾಜಾನಃ ಸರ್ವೇ ಚ ಕುರುಜಾಂಗಲಾಃ|

13153022c ತಾನ್ ಪಶ್ಯ ಕುರುಶಾರ್ದೂಲ ಸಮುನ್ಮೀಲಯ ಲೋಚನೇ||

ಕುರುಜಾಂಗಲದಲ್ಲಿ ಅಳಿದುಳಿದ ರಾಜರೆಲ್ಲರೂ ಬಂದಿದ್ದಾರೆ. ಕುರುಶಾರ್ದೂಲ! ಕಣ್ಣುಗಳನ್ನು ತೆರೆದು ಇವರನ್ನು ನೋಡು!

13153023a ಯಚ್ಚೇಹ ಕಿಂ ಚಿತ್ಕರ್ತವ್ಯಂ ತತ್ಸರ್ವಂ ಪ್ರಾಪಿತಂ ಮಯಾ|

13153023c ಯಥೋಕ್ತಂ ಭವತಾ ಕಾಲೇ ಸರ್ವಮೇವ ಚ ತತ್ಕೃತಮ್||

ಆಗ ನೀನು ಹೇಳಿದುದೆಲ್ಲವನ್ನೂ ಮಾಡಿದ್ದೇನೆ. ಏನು ಮಾಡಬೇಕೆಂದು ನೀನು ಬಯಸಿದ್ದೆಯೋ ಅವೆಲ್ಲವನ್ನೂ ನಾನು ಸಂಗ್ರಹಿಸಿಕೊಂಡು ಬಂದಿದ್ದೇನೆ."

13153024a ಏವಮುಕ್ತಸ್ತು ಗಾಂಗೇಯಃ ಕುಂತೀಪುತ್ರೇಣ ಧೀಮತಾ|

13153024c ದದರ್ಶ ಭಾರತಾನ್ಸರ್ವಾನ್ಸ್ಥಿತಾನ್ಸಂಪರಿವಾರ್ಯ ತಮ್||

ಧೀಮಂತ ಕುಂತೀಪುತ್ರನು ಹೀಗೆ ಹೇಳಲು ಗಾಂಗೇಯನು ತನ್ನನ್ನು ಸುತ್ತುವರೆದು ನಿಂತಿದ್ದ ಎಲ್ಲ ಭಾರತರನ್ನೂ ನೋಡಿದನು.

13153025a ತತಶ್ಚಲವಲಿರ್ಭೀಷ್ಮಃ ಪ್ರಗೃಹ್ಯ ವಿಪುಲಂ ಭುಜಮ್|

13153025c ಓಘಮೇಘಸ್ವನೋ ವಾಗ್ಮೀ ಕಾಲೇ ವಚನಮಬ್ರವೀತ್||

ಆಗ ವಾಗ್ಮೀ ಭೀಷ್ಮನು ತನ್ನ ವಿಪುಲ ಭುಜವನ್ನು ಮೇಲೆತ್ತಿ ಗಂಭೀರ ಮೇಘಧ್ವನಿಯಲ್ಲಿ ಕಾಲಕ್ಕೆ ತಕ್ಕುದಾದ ಈ ಮಾತನ್ನಾಡಿದನು:

13153026a ದಿಷ್ಟ್ಯಾ ಪ್ರಾಪ್ತೋಽಸಿ ಕೌಂತೇಯ ಸಹಾಮಾತ್ಯೋ ಯುಧಿಷ್ಠಿರ|

13153026c ಪರಿವೃತ್ತೋ ಹಿ ಭಗವಾನ್ಸಹಸ್ರಾಂಶುರ್ದಿವಾಕರಃ||

“ಕೌಂತೇಯ! ಯುಧಿಷ್ಠಿರ! ಒಳ್ಳೆಯದಾಯಿತು! ಭಗವಾನ್ ಸಹಸ್ರಾಂಶು ದಿವಾಕರನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತಿರುಗಿರುವಾಗ ಅಮಾತ್ಯರೊಂದಿಗೆ ನೀನು ಇಲ್ಲಿಗೆ ಬಂದಿರುವೆ!

13153027a ಅಷ್ಟಪಂಚಾಶತಂ ರಾತ್ರ್ಯಃ ಶಯಾನಸ್ಯಾದ್ಯ ಮೇ ಗತಾಃ|

13153027c ಶರೇಷು ನಿಶಿತಾಗ್ರೇಷು ಯಥಾ ವರ್ಷಶತಂ ತಥಾ||

ನಾನು ಈ ಶಯನವನ್ನು ಪಡೆದು ಇಂದಿಗೆ ನೂರಾಐವತ್ತೆಂಟು ರಾತ್ರಿಗಳು ಕಳೆದುಹೋದವು. ನಿಶಿತಾಗ್ರ ಈ ಶರಗಳ ಮೇಲೆ ಮಲಗಿರುವುದರಿಂದ ಅದು ನೂರು ವರ್ಷಗಳಂತೆ ತೋರುತ್ತಿವೆ.

13153028a ಮಾಘೋಽಯಂ ಸಮನುಪ್ರಾಪ್ತೋ ಮಾಸಃ ಪುಣ್ಯೋ ಯುಧಿಷ್ಠಿರ|

13153028c ತ್ರಿಭಾಗಶೇಷಃ ಪಕ್ಷೋಽಯಂ ಶುಕ್ಲೋ ಭವಿತುಮರ್ಹತಿ||

ಯುಧಿಷ್ಠಿರ! ಪುಣ್ಯ ಮಾಘಮಾಸವು ಪ್ರಾರಂಭವಾಗಿದೆ. ಈ ಮಾಸದಲ್ಲಿ ಮೂರು ಭಾಗಗಳು ಉಳಿದಿವೆಯಾದ್ದರಿಂದ ಇದು ಶುಕ್ಲಪಕ್ಷವೇ ಆಗಿರಬೇಕು.”

13153029a ಏವಮುಕ್ತ್ವಾ ತು ಗಾಂಗೇಯೋ ಧರ್ಮಪುತ್ರಂ ಯುಧಿಷ್ಠಿರಮ್|

13153029c ಧೃತರಾಷ್ಟ್ರಮಥಾಮಂತ್ರ್ಯ ಕಾಲೇ ವಚನಮಬ್ರವೀತ್||

ಧರ್ಮಪುತ್ರ ಯುಧಿಷ್ಠಿರನಿಗೆ ಹೀಗೆ ಹೇಳಿ ಗಾಂಗೇಯನು ಧೃತರಾಷ್ಟ್ರನನ್ನು ಕರೆದು ಕಾಲಕ್ಕೆ ತಕ್ಕುದಾದ ಈ ಮಾತನ್ನಾಡಿದನು:

13153030a ರಾಜನ್ವಿದಿತಧರ್ಮೋಽಸಿ ಸುನಿರ್ಣೀತಾರ್ಥಸಂಶಯಃ|

13153030c ಬಹುಶ್ರುತಾ ಹಿ ತೇ ವಿಪ್ರಾ ಬಹವಃ ಪರ್ಯುಪಾಸಿತಾಃ||

“ರಾಜನ್! ಧರ್ಮಗಳನ್ನು ತಿಳಿದುಕೊಂಡಿದ್ದೀಯೆ. ಅರ್ಥಶಾಸ್ತ್ರದ ಸಂಶಯಗಳನ್ನು ಚೆನ್ನಾಗಿ ನಿರ್ಣಯಿಸಿಕೊಂಡಿರುವೆ. ಅನೇಕ ಶಾಸ್ತ್ರಗಳನ್ನು ತಿಳಿದಿರುವ ಅನೇಕ ವಿಪ್ರರನ್ನು ನೀನು ಸೇವೆಗೈದಿರುವೆ.

13153031a ವೇದಶಾಸ್ತ್ರಾಣಿ ಸರ್ವಾಣಿ ಧರ್ಮಾಂಶ್ಚ ಮನುಜೇಶ್ವರ|

13153031c ವೇದಾಂಶ್ಚ ಚತುರಃ ಸಾಂಗಾನ್ನಿಖಿಲೇನಾವಬುಧ್ಯಸೇ||

ಮನುಜೇಶ್ವರ! ವೇದಶಾಸ್ತ್ರಗಳೆಲ್ಲವನ್ನೂ, ಧರ್ಮಗಳನ್ನೂ, ನಾಲ್ಕು ವೇದಗಳನ್ನೂ, ಅವುಗಳ ಅಂಗಗಳೆಲ್ಲವನ್ನೂ ನೀನು ಅರ್ಥಮಾಡಿಕೊಂಡಿರುವೆ.

13153032a ನ ಶೋಚಿತವ್ಯಂ ಕೌರವ್ಯ ಭವಿತವ್ಯಂ ಹಿ ತತ್ತಥಾ|

13153032c ಶ್ರುತಂ ದೇವರಹಸ್ಯಂ ತೇ ಕೃಷ್ಣದ್ವೈಪಾಯನಾದಪಿ||

ಕೌರವ್ಯ! ಶೋಕಿಸಬಾರದು! ಹೇಗೆ ಆಗಬೇಕಿತ್ತೋ ಅದು ಹಾಗೆಯೇ ಆಗಿಹೋಯಿತು! ಕೃಷ್ಣದ್ವೈಪಾಯನನಿಂದ ನೀನು ದೇವರಹಸ್ಯವನ್ನೂ ಕೇಳಿದ್ದೀಯೆ.

13153033a ಯಥಾ ಪಾಂಡೋಃ ಸುತಾ ರಾಜಂಸ್ತಥೈವ ತವ ಧರ್ಮತಃ|

13153033c ತಾನ್ಪಾಲಯ ಸ್ಥಿತೋ ಧರ್ಮೇ ಗುರುಶುಶ್ರೂಷಣೇ ರತಾನ್||

ರಾಜನ್! ಇವರು ಹೇಗೆ ಪಾಂಡುವಿನ ಮಕ್ಕಳೋ ಧರ್ಮತಃ ಅವರು ನಿನ್ನ ಮಕ್ಕಳೂ ಕೂಡ. ಗುರುಶುಶ್ರೂಷಣೆಯಲ್ಲಿಯೇ ನಿರತರಾಗಿರುವ ಅವರನ್ನು ಧರ್ಮದಲ್ಲಿದ್ದುಕೊಂಡು ಪಾಲಿಸು!

13153034a ಧರ್ಮರಾಜೋ ಹಿ ಶುದ್ಧಾತ್ಮಾ ನಿದೇಶೇ ಸ್ಥಾಸ್ಯತೇ ತವ|

13153034c ಆನೃಶಂಸ್ಯಪರಂ ಹ್ಯೇನಂ ಜಾನಾಮಿ ಗುರುವತ್ಸಲಮ್||

ನಿನ್ನ ನಿರ್ದೇಶನದಲ್ಲಿಯೇ ನಡೆದುಕೊಳ್ಳುವ ಈ ಧರ್ಮರಾಜನು ಶುದ್ಧಾತ್ಮ. ಇವನು ಕ್ರೂರನಲ್ಲ. ಗುರುವತ್ಸಲನು ಎಂದು ನಾನು ತಿಳಿದುಕೊಂಡಿದ್ದೇನೆ.

13153035a ತವ ಪುತ್ರಾ ದುರಾತ್ಮಾನಃ ಕ್ರೋಧಲೋಭಪರಾಯಣಾಃ|

13153035c ಈರ್ಷ್ಯಾಭಿಭೂತಾ ದುರ್ವೃತ್ತಾಸ್ತಾನ್ನ ಶೋಚಿತುಮರ್ಹಸಿ||

ನಿನ್ನ ಪುತ್ರರು ದುರಾತ್ಮರೂ, ಕ್ರೋಧ-ಲೋಭ ಪರಾಯಣರೂ, ಅಸೂಯಾಪರರೂ ಆಗಿದ್ದರು. ದುರ್ವೃತ್ತರಾದ ಅವರ ಕುರಿತು ಶೋಕಿಸಬಾರದು.””

13153036 ವೈಶಂಪಾಯನ ಉವಾಚ|

13153036a ಏತಾವದುಕ್ತ್ವಾ ವಚನಂ ಧೃತರಾಷ್ಟ್ರಂ ಮನೀಷಿಣಮ್|

13153036c ವಾಸುದೇವಂ ಮಹಾಬಾಹುಮಭ್ಯಭಾಷತ ಕೌರವಃ||

ವೈಶಂಪಾಯನನು ಹೇಳಿದನು: “ಮನೀಷಿಣಿ ಧೃತರಾಷ್ಟ್ರನಿಗೆ ಹೀಗೆ ಹೇಳಿ ಕೌರವ ಭೀಷ್ಮನು ಮಹಾಬಾಹು ವಾಸುದೇವನಿಗೆ ಹೇಳಿದನು:

13153037a ಭಗವನ್ದೇವದೇವೇಶ ಸುರಾಸುರನಮಸ್ಕೃತ|

13153037c ತ್ರಿವಿಕ್ರಮ ನಮಸ್ತೇಽಸ್ತು ಶಂಖಚಕ್ರಗದಾಧರ||

“ಭಗವನ್! ದೇವದೇವೇಶ! ಸುರಾಸುರನಮಸ್ಕೃತ! ತ್ರಿವಿಕ್ರಮ! ಶಂಖಚಕ್ರಗದಾಧರ! ನಿನಗೆ ನಮಸ್ಕಾರ!

13153038a ಅನುಜಾನೀಹಿ ಮಾಂ ಕೃಷ್ಣ ವೈಕುಂಠ ಪುರುಷೋತ್ತಮ|

13153038c ರಕ್ಷ್ಯಾಶ್ಚ ತೇ ಪಾಂಡವೇಯಾ ಭವಾನ್ ಹ್ಯೇಷಾಂ ಪರಾಯಣಮ್||

ವೈಕುಂಠ! ಪುರುಷೋತ್ತಮ! ನನಗೆ ಅನುಜ್ಞೆಯನ್ನು ನೀಡು! ನೀನು ಪಾಂಡವರನ್ನು ರಕ್ಷಿಸಬೇಕು. ನೀನೇ ಇವರ ಪರಾಯಣನು.

13153039a ಉಕ್ತವಾನಸ್ಮಿ ದುರ್ಬುದ್ಧಿಂ ಮಂದಂ ದುರ್ಯೋಧನಂ ಪುರಾ|

13153039c ಯತಃ ಕೃಷ್ಣಸ್ತತೋ ಧರ್ಮೋ ಯತೋ ಧರ್ಮಸ್ತತೋ ಜಯಃ||

“ಎಲ್ಲಿ ಕೃಷ್ಣನಿರುವನೋ ಅಲ್ಲಿ ಧರ್ಮ ಮತ್ತು ಎಲ್ಲಿ ಧರ್ಮವಿರುವುದೋ ಅಲ್ಲಿ ಜಯ” ಎಂದು ಹಿಂದೆ ನಾನು ದುರ್ಬುದ್ಧಿ ಮಂದಬುದ್ಧಿ ದುರ್ಯೋಧನನಿಗೆ ಹೇಳಿದ್ದೆ.

13153040a ವಾಸುದೇವೇನ ತೀರ್ಥೇನ ಪುತ್ರ ಸಂಶಾಮ್ಯ ಪಾಂಡವೈಃ|

13153040c ಸಂಧಾನಸ್ಯ ಪರಃ ಕಾಲಸ್ತವೇತಿ ಚ ಪುನಃ ಪುನಃ||

“ಪುತ್ರ! ವಾಸುದೇವನ ಸಹಾಯದಿಂದ ಪಾಂಡವರೊಡನೆ ಸಂಧಿಮಾಡಿಕೋ. ಇದೇ ಸಂಧಾನಕ್ಕೆ ಪರಮ ಸಮಯ!” ಎಂದು ಪುನಃ ಪುನಃ ಹೇಳಿದ್ದೆ.

13153041a ನ ಚ ಮೇ ತದ್ವಚೋ ಮೂಢಃ ಕೃತವಾನ್ಸ ಸುಮಂದಧೀಃ|

13153041c ಘಾತಯಿತ್ವೇಹ ಪೃಥಿವೀಂ ತತಃ ಸ ನಿಧನಂ ಗತಃ||

ಆ ಮೂಢ ಅತಿ ಮಂದಬುದ್ಧಿಯು ನನ್ನ ಮಾತಿನಂತೆ ಮಾಡಲಿಲ್ಲ. ಈಗ ಈ ಪೃಥ್ವಿಯನ್ನು ನಾಶಗೊಳಿಸಿ ತಾನೂ ನಿಧನಹೊಂದಿದನು.

13153042a ತ್ವಾಂ ಚ ಜಾನಾಮ್ಯಹಂ ವೀರ ಪುರಾಣಮೃಷಿಸತ್ತಮಮ್|

13153042c ನರೇಣ ಸಹಿತಂ ದೇವಂ ಬದರ್ಯಾಂ ಸುಚಿರೋಷಿತಮ್||

ವೀರ! ನೀನು ನರನ ಸಹಿತ ಬದರಿಯಲ್ಲಿ ಬಹುಕಾಲ ವಾಸಿಸುತ್ತಿದ್ದ ಪುರಾಣ ಋಷಿಸತ್ತಮನೆಂದು ತಿಳಿದಿದ್ದೇನೆ.

13153043a ತಥಾ ಮೇ ನಾರದಃ ಪ್ರಾಹ ವ್ಯಾಸಶ್ಚ ಸುಮಹಾತಪಾಃ|

13153043c ನರನಾರಾಯಣಾವೇತೌ ಸಂಭೂತೌ ಮನುಜೇಷ್ವಿತಿ||

ಆ ಮಹಾತಪಸ್ವಿಗಳಾದ ನರ-ನಾರಾಯಣರು ಮನುಷ್ಯರಾಗಿ ಹುಟ್ಟಿದ್ದಾರೆ ಎಂದು ನನಗೆ ನಾರದ ಮತ್ತು ವ್ಯಾಸರು ಹೇಳಿದ್ದರು.”

13153044 ವಾಸುದೇವ ಉವಾಚ|

13153044a ಅನುಜಾನಾಮಿ ಭೀಷ್ಮ ತ್ವಾಂ ವಸೂನಾಪ್ನುಹಿ ಪಾರ್ಥಿವ|

13153044c ನ ತೇಽಸ್ತಿ ವೃಜಿನಂ ಕಿಂ ಚಿನ್ಮಯಾ ದೃಷ್ಟಂ ಮಹಾದ್ಯುತೇ||

ವಾಸುದೇವನು ಹೇಳಿದನು: “ಭೀಷ್ಮ! ನಿನಗೆ ಅನುಮತಿಯನ್ನು ನೀಡುತ್ತಿದ್ದೇನೆ. ಪಾರ್ಥಿವ! ನೀನು ವಸುಗಳನ್ನು ಸೇರುವೆ. ಮಹಾದ್ಯುತೇ! ನಿನಗೆ ಯಾವರೀತಿಯೂ ಪಾಪವೂ ಇಲ್ಲ ಎಂದು ನಾನು ಕಂಡಿದ್ದೇನೆ.

13153045a ಪಿತೃಭಕ್ತೋಽಸಿ ರಾಜರ್ಷೇ ಮಾರ್ಕಂಡೇಯ ಇವಾಪರಃ|

13153045c ತೇನ ಮೃತ್ಯುಸ್ತವ ವಶೇ ಸ್ಥಿತೋ ಭೃತ್ಯ ಇವಾನತಃ||

ರಾಜರ್ಷೇ! ನೀನು ಮಾರ್ಕಂಡೇಯನಂತೆ ಪಿತೃಭಕ್ತನಾಗಿರುವೆ. ಆದುದರಿಂದಲೇ ಮೃತ್ಯುವು ಸೇವಕನಂತೆ ನಿನ್ನ ವಶದಲ್ಲಿದೆ.””

13153046 ವೈಶಂಪಾಯನ ಉವಾಚ|

13153046a ಏವಮುಕ್ತಸ್ತು ಗಾಂಗೇಯಃ ಪಾಂಡವಾನಿದಮಬ್ರವೀತ್|

13153046c ಧೃತರಾಷ್ಟ್ರಮುಖಾಂಶ್ಚಾಪಿ ಸರ್ವಾನ್ಸಸುಹೃದಸ್ತಥಾ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಗಾಂಗೇಯನು ಪಾಂಡವರಿಗೆ, ಧೃತರಾಷ್ಟ್ರ ಮುಖ್ಯರಿಗೆ ಮತ್ತು ಅಲ್ಲಿದ್ದ ಎಲ್ಲ ಸುಹೃದಯರಿಗೆ ಹೇಳಿದನು:

13153047a ಪ್ರಾಣಾನುತ್ಸ್ರಷ್ಟುಮಿಚ್ಚಾಮಿ ತನ್ಮಾನುಜ್ಞಾತುಮರ್ಹಥ|

13153047c ಸತ್ಯೇ ಪ್ರಯತಿತವ್ಯಂ ವಃ ಸತ್ಯಂ ಹಿ ಪರಮಂ ಬಲಮ್||

“ನಾನೀಗ ಪ್ರಾಣಪರಿತ್ಯಾಗಮಾಡಲು ಬಯಸಿದ್ದೇನೆ. ನನಗೆ ಅನುಜ್ಞೆಯನ್ನು ನೀಡಬೇಕು. ನೀವು ಸತ್ಯವಂತರಾಗಿರಲು ಪ್ರಯತ್ನಿಸಬೇಕು. ಏಕೆಂದರೆ ಸತ್ಯವೇ ಪರಮ ಬಲ.

13153048a ಆನೃಶಂಸ್ಯಪರೈರ್ಭಾವ್ಯಂ ಸದೈವ ನಿಯತಾತ್ಮಭಿಃ|

13153048c ಬ್ರಹ್ಮಣ್ಯೈರ್ಧರ್ಮಶೀಲೈಶ್ಚ ತಪೋನೀತ್ಯೈಶ್ಚ ಭಾರತ||

ಇತರರ ಕುರಿತು ದಯಾವಂತರಾಗಿರಬೇಕು. ಸದೈವ ನಿಯತೇಂದ್ರಿಯರಾಗಿರಬೇಕು. ಬ್ರಹ್ಮಣ್ಯರೂ, ಧರ್ಮಶೀಲರೂ, ತಪೋನೀತರೂ ಆಗಿರಬೇಕು.”

13153049a ಇತ್ಯುಕ್ತ್ವಾ ಸುಹೃದಃ ಸರ್ವಾನ್ಸಂಪರಿಷ್ವಜ್ಯ ಚೈವ ಹ|

13153049c ಪುನರೇವಾಬ್ರವೀದ್ಧೀಮಾನ್ಯುಧಿಷ್ಠಿರಮಿದಂ ವಚಃ||

ಹೀಗೆ ಹೇಳಿ ಎಲ್ಲ ಸುಹೃದಯರನ್ನೂ ಆಲಂಗಿಸಿ ಆ ಧೀಮಂತನು ಪುನಃ ಯುಧಿಷ್ಠಿರನಿಗೆ ಈ ಮಾತನ್ನಾಡಿದನು.

13153050a ಬ್ರಾಹ್ಮಣಾಶ್ಚೈವ ತೇ ನಿತ್ಯಂ ಪ್ರಾಜ್ಞಾಶ್ಚೈವ ವಿಶೇಷತಃ|

13153050c ಆಚಾರ್ಯಾ ಋತ್ವಿಜಶ್ಚೈವ ಪೂಜನೀಯಾ ನರಾಧಿಪ||

“ನರಾಧಿಪ! ಬ್ರಾಹ್ಮಣರನ್ನು ಅದರಲ್ಲೂ ವಿಶೇಷವಾಗಿ ಪ್ರಾಜ್ಞ ಆಚಾರ್ಯರನ್ನು ಮತ್ತು ಋತ್ವಿಜರನ್ನು ನೀನು ನಿತ್ಯವೂ ಪೂಜಿಸಬೇಕು!””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ಭೀಷ್ಮಸ್ವರ್ಗಾರೋಹಣಪರ್ವಣಿ ದಾನಧರ್ಮೇ ತ್ರಿಪಂಚಾಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ಭೀಷ್ಮಸ್ವರ್ಗಾರೋಹಣಪರ್ವದಲ್ಲಿ ದಾನಧರ್ಮ ಎನ್ನುವ ನೂರಾಐವತ್ಮೂರನೇ ಅಧ್ಯಾಯವು.

Comments are closed.