Drona Parva: Chapter 73

ದ್ರೋಣ ಪರ್ವ: ಜಯದ್ರಥವಧ ಪರ್ವ

೭೩

ದ್ರೋಣ-ಸಾತ್ಯಕಿಯರ ಯುದ್ಧ (೧-೫೩)

07073001 ಧೃತರಾಷ್ಟ್ರ ಉವಾಚ|

07073001a ಬಾಣೇ ತಸ್ಮಿನ್ನಿಕೃತ್ತೇ ತು ಧೃಷ್ಟದ್ಯುಮ್ನೇ ಚ ಮೋಕ್ಷಿತೇ|

07073001c ತೇನ ವೃಷ್ಣಿಪ್ರವೀರೇಣ ಯುಯುಧಾನೇನ ಸಂಜಯ||

07073002a ಅಮರ್ಷಿತೋ ಮಹೇಷ್ವಾಸಃ ಸರ್ವಶಸ್ತ್ರಭೃತಾಂ ವರಃ|

07073002c ನರವ್ಯಾಘ್ರಃ ಶಿನೇಃ ಪೌತ್ರೇ ದ್ರೋಣಃ ಕಿಮಕರೋದ್ಯುಧಿ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಆ ಬಾಣವನ್ನು ಕತ್ತರಿಸಿ ವೃಷ್ಣಿಪ್ರವೀರ ಯುಯುಧಾನನು ಧೃಷ್ಟದ್ಯುಮ್ನನನ್ನು ಬಿಡುಗಡೆಗೊಳಿಸಲು ಕೋಪಗೊಂಡ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಮಹೇಷ್ವಾಸ ನರವ್ಯಾಘ್ರ ದ್ರೋಣನು ಶಿನಿಯ ಮೊಮ್ಮಗನೊಂದಿಗೆ ಯುದ್ಧದಲ್ಲಿ ಏನು ಮಾಡಿದನು?”

07073003 ಸಂಜಯ ಉವಾಚ|

07073003a ಸಂಪ್ರದ್ರುತಃ ಕ್ರೋಧವಿಷೋ ವ್ಯಾದಿತಾಸ್ಯಶರಾಸನಃ|

07073003c ತೀಕ್ಷ್ಣಧಾರೇಷುದಶನಃ ಶಿತನಾರಾಚದಂಷ್ಟ್ರವಾನ್||

07073004a ಸಂರಂಭಾಮರ್ಷತಾಮ್ರಾಕ್ಷೋ ಮಹಾಹಿರಿವ ನಿಃಶ್ವಸನ್|

07073004c ನರವೀರಪ್ರಮುದಿತೈಃ ಶೋಣೈರಶ್ವೈರ್ಮಹಾಜವೈಃ||

07073005a ಉತ್ಪತದ್ಭಿರಿವಾಕಾಶಂ ಕ್ರಮದ್ಭಿರಿವ ಸರ್ವತಃ|

07073005c ರುಕ್ಮಪುಂಖಾಂ ಶರಾನಸ್ಯನ್ಯುಯುಧಾನಮುಪಾದ್ರವತ್||

ಸಂಜಯನು ಹೇಳಿದನು: “ಆಗ ಕ್ರೋಧವೇ ವಿಷವಾಗುಳ್ಳ, ಧನುಸ್ಸೇ ತೆರೆದ ಬಾಯಿಯಂತಿರುವ, ತೀಕ್ಷ್ಣ ಬಾಣಗಳೇ ಹಲ್ಲುಗಳಾಗುಳ್ಳ, ನಿಶಿತ ನಾರಾಚಗಳೇ ದವಡೆಗಳಾಗುಳ್ಳ, ಕೋಪ-ಅಸಹನೆಗಳಿಂದ ಕಣ್ಣು ಕೆಂಪಾಗಿರುವ ಆ ನರವೀರನು ಮಹಾ ಹೆಬ್ಬಾವಿನಂತೆ ನಿಟ್ಟುಸಿರು ಬಿಡುತ್ತಾ ಪರ್ವತಗಳನ್ನೂ ದಾಟಿ ಆಕಾಶದಲ್ಲಿ ಹಾರಿಹೋಗಬಲ್ಲ ಮಹಾವೇಗವುಳ್ಳ ಕೆಂಪು ಕುದುರೆಗಳೊಂದಿಗೆ ಮುದಿತನಾಗಿ ಎಲ್ಲ ಕಡೆ ರುಕ್ಮಪುಂಖ ಶರಗಳನ್ನು ಪ್ರಯೋಗಿಸುತ್ತಾ ಯುಯುಧಾನನನ್ನು ಆಕ್ರಮಣಿಸಿದನು.

07073006a ಶರಪಾತಮಹಾವರ್ಷಂ ರಥಘೋಷಬಲಾಹಕಂ|

07073006c ಕಾರ್ಮುಕಾಕರ್ಷವಿಕ್ಷಿಪ್ತಂ ನಾರಾಚಬಹುವಿದ್ಯುತಂ||

07073007a ಶಕ್ತಿಖಡ್ಗಾಶನಿಧರಂ ಕ್ರೋಧವೇಗಸಮುತ್ಥಿತಂ|

07073007c ದ್ರೋಣಮೇಘಮನಾವಾರ್ಯಂ ಹಯಮಾರುತಚೋದಿತಂ||

ಶರಗಳ ಪತನವೇ ಮಹಾಮಳೆಯಂತಿದ್ದ, ರಥಘೋಷವೇ ಗುಡುಗಿನಂತಿರುವ, ಬಿಲ್ಲಿನ ಟೇಂಕಾರವೇ ಸಿಡುಲಿನಂತಿರುವ, ಅನೇಕ ನಾರಾಚಗಳೇ ಮಿಂಚಿನಂತಿರುವ, ಶಕ್ತಿ-ಖಡ್ಗಗಳೇ ಮಿಂಚಿನ ಮಾಲೆಗಳಂತಿರುವ, ಕ್ರೋಧವೆಂಬ ವೇಗದಿಂದ ಹುಟ್ಟಿದ, ಕುದುರೆಗಳೆಂಬ ಗಾಳಿಯಿಂದ ಪ್ರಚೋದಿಸಲ್ಪಟ್ಟ ದ್ರೋಣನೆಂಬ ಮಹಾಮೇಘವನ್ನು ತಡೆಯಲಾಗುತ್ತಿರಲಿಲ್ಲ.

07073008a ದೃಷ್ಟ್ವೈವಾಭಿಪತಂತಂ ತಂ ಶೂರಃ ಪರಪುರಂಜಯಃ|

07073008c ಉವಾಚ ಸೂತಂ ಶೈನೇಯಃ ಪ್ರಹಸನ್ಯುದ್ಧದುರ್ಮದಃ||

ಅವನು ಹೀಗೆ ಮೇಲೇರಿ ಬರುತ್ತಿರುವುದನ್ನು ನೋಡಿ ಶೂರ ಪರಪುರಂಜಯ ಯುದ್ಧದುರ್ಮದ ಶೈನೇಯನು ಜೋರಾಗಿ ನಕ್ಕು ಸೂತನಿಗೆ ಹೇಳಿದನು:

07073009a ಏತಂ ವೈ ಬ್ರಾಹ್ಮಣಂ ಕ್ರೂರಂ ಸ್ವಕರ್ಮಣ್ಯನವಸ್ಥಿತಂ|

07073009c ಆಶ್ರಯಂ ಧಾರ್ತರಾಷ್ಟ್ರಸ್ಯ ರಾಜ್ಞೋ ದುಃಖಭಯಾವಹಂ||

07073010a ಶೀಘ್ರಂ ಪ್ರಜವಿತೈರಶ್ವೈಃ ಪ್ರತ್ಯುದ್ಯಾಹಿ ಪ್ರಹೃಷ್ಟವತ್|

07073010c ಆಚಾರ್ಯಂ ರಾಜಪುತ್ರಾಣಾಂ ಸತತಂ ಶೂರಮಾನಿನಂ||

“ಈತನು ತನ್ನ ಕರ್ಮಗಳನ್ನು ಬಿಟ್ಟಿರುವ ಕ್ರೂರ ಬ್ರಾಹ್ಮಣನಲ್ಲವೇ? ದುಃಖ-ಭಯಗಳಿಂದ ರಾಜ ಧಾರ್ತರಾಷ್ಟ್ರನ ಆಶ್ರಯದಲ್ಲಿರುವ, ರಾಜಪುತ್ರರ ಆಚಾರ್ಯ, ಸತತವೂ ತಾನೇ ಶೂರನೆಂದು ತಿಳಿದುಕೊಂಡಿರುವ ಅವನ ಬಳಿ ಶೀಘ್ರವಾದ ಕುದುರೆಗಳನ್ನು ಸಂತೋಷದಿಂದ ಕೊಂಡೊಯ್ಯಿ!”

07073011a ತತೋ ರಜತಸಂಕಾಶಾ ಮಾಧವಸ್ಯ ಹಯೋತ್ತಮಾಃ|

07073011c ದ್ರೋಣಸ್ಯಾಭಿಮುಖಾಃ ಶೀಘ್ರಮಗಚ್ಚನ್ವಾತರಂಹಸಃ||

ಆಗ ಬೆಳ್ಳಿಯ ಬಣ್ಣದ, ಗಾಳಿಯ ವೇಗವುಳ್ಳ, ಮಾಧವನ ಉತ್ತಮ ಕುದುರೆಗಳನ್ನು ದ್ರೋಣನ ಎದುರಿಗೆ ಶೀಘ್ರವಾಗಿ ಕೊಂಡೊಯ್ದನು.

07073012a ಇಷುಜಾಲಾವೃತಂ ಘೋರಮಂಧಕಾರಮನಂತರಂ|

07073012c ಅನಾಧೃಷ್ಯಮಿವಾನ್ಯೇಷಾಂ ಶೂರಾಣಾಮಭವತ್ತದಾ||

ಬಾಣಗಳ ಜಾಲಗಳಿಂದ ಆವೃತವಾಗಿ ಘೋರ ಅಂಧಕಾರವು ಕವಿಯಲು ಇನ್ನೊಬ್ಬರಿಗೆ ಕಾಣದಂತೆ ಆ ಶೂರರ ಯುದ್ಧವು ನಡೆಯಿತು.

07073013a ತತಃ ಶೀಘ್ರಾಸ್ತ್ರವಿದುಷೋರ್ದ್ರೋಣಸಾತ್ವತಯೋಸ್ತದಾ|

07073013c ನಾಂತರಂ ಶರವೃಷ್ಟೀನಾಂ ದೃಶ್ಯತೇ ನರಸಿಂಹಯೋಃ||

ಆಗ ಅಸ್ತ್ರವಿದರಾದ ನರಸಿಂಹರಾದ ದ್ರೋಣ-ಸಾತ್ವತರು ಸುರಿಸುತ್ತಿದ್ದ ಶರವೃಷ್ಟಿಗಳಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ.

07073014a ಇಷೂಣಾಂ ಸನ್ನಿಪಾತೇನ ಶಬ್ದೋ ಧಾರಾಭಿಘಾತಜಃ|

07073014c ಶುಶ್ರುವೇ ಶಕ್ರಮುಕ್ತಾನಾಮಶನೀನಾಮಿವ ಸ್ವನಃ||

ಮಳೆಯ ನೀರು ಬೀಳುವಂತೆ ಬಾಣಗಳು ಬೀಳುವ ಶಬ್ಧವು ಶಕ್ರನು ಬಿಡುಗಡೆ ಮಾಡಿದ ಮಿಂಚಿನ ಶಬ್ಧದಂತೆ ಕೇಳುತ್ತಿತ್ತು.

07073015a ನಾರಾಚೈರತಿವಿದ್ಧಾನಾಂ ಶರಾಣಾಂ ರೂಪಮಾಬಭೌ|

07073015c ಆಶೀವಿಷವಿದಷ್ಟಾನಾಂ ಸರ್ಪಾಣಾಮಿವ ಭಾರತ||

ಭಾರತ! ನಾರಾಚಗಳೇ ಬಹುವಾಗಿದ್ದ ಶರಗಳ ರೂಪವು ಸರ್ಪಗಳ ವಿಷದ ಹಲ್ಲುಗಳಂತಿದ್ದವು.

07073016a ತಯೋರ್ಜ್ಯಾತಲನಿರ್ಘೋಷೋ ವ್ಯಶ್ರೂಯತ ಸುದಾರುಣಃ|

07073016c ಅಜಸ್ರಂ ಶೈಲಶೃಂಗಾಣಾಂ ವಜ್ರೇಣಾಹನ್ಯತಾಮಿವ||

ಅವರ ಧನುಸ್ಸಿನ ಸುದಾರುಣ ಟೇಂಕಾರ ಶಬ್ಧವು ವಜ್ರದಿಂದ ಹೊಡೆಯಲ್ಪಟ್ಟ ಶೈಲಶೃಂಗಗಳಲ್ಲಿ ಉಂಟಾಗುವ ಶಬ್ಧಕ್ಕೆ ಸಮನಾಗಿತ್ತು.

07073017a ಉಭಯೋಸ್ತೌ ರಥೌ ರಾಜಂಸ್ತೇ ಚಾಶ್ವಾಸ್ತೌ ಚ ಸಾರಥೀ|

07073017c ರುಕ್ಮಪುಂಖೈಃ ಶರೈಶ್ಚನ್ನಾಶ್ಚಿತ್ರರೂಪಾ ಬಭುಸ್ತದಾ||

ರಾಜನ್! ಇಬ್ಬರ ರಥಗಳೂ, ಕುದುರೆಗಳೂ ಮತ್ತು ಸಾರಥಿಯರೂ ಅವರು ಬಿಡುತ್ತಿದ್ದ ರುಕ್ಮಪುಂಖದ ಶರಗಳಿಂದ ಹೊಡೆಯಲ್ಪಟ್ಟು ವಿಚಿತ್ರರೂಪವನ್ನು ತಾಳಿದ್ದವು.

07073018a ನಿರ್ಮಲಾನಾಮಜಿಹ್ಮಾನಾಂ ನಾರಾಚಾನಾಂ ವಿಶಾಂ ಪತೇ|

07073018c ನಿರ್ಮುಕ್ತಾಶೀವಿಷಾಭಾನಾಂ ಸಂಪಾತೋಽಭೂತ್ಸುದಾರುಣಃ||

ಪೊರೆಕಳಚಿದ ಸರ್ಪಗಳಂತೆ ನಿರ್ಮಲವಾಗಿದ್ದ ಮತ್ತು ನೇರವಾಗಿ ಹೋಗುವ ನಾರಾಚಗಳ ಪರಸ್ಪರ ಸಂಘರ್ಷವು ಮಹಾ ಭಯಂಕರವಾಗಿತ್ತು.

07073019a ಉಭಯೋಃ ಪತಿತೇ ಚತ್ರೇ ತಥೈವ ಪತಿತೌ ಧ್ವಜೌ|

07073019c ಉಭೌ ರುಧಿರಸಿಕ್ತಾಂಗಾವುಭೌ ಚ ವಿಜಯೈಷಿಣೌ||

ಇಬ್ಬರೂ ವಿಜಯಾಕಾಂಕ್ಷಿಗಳ ಚತ್ರಗಳು ಬಿದ್ದವು, ಧ್ವಜಗಳೂ ಬಿದ್ದವು. ಇಬ್ಬರ ಅಂಗಾಂಗಗಳೂ ರಕ್ತದಿಂದ ತೋಯ್ದುಹೋಗಿದ್ದವು.

07073020a ಸ್ರವದ್ಭಿಃ ಶೋಣಿತಂ ಗಾತ್ರೈಃ ಪ್ರಸ್ರುತಾವಿವ ವಾರಣೌ|

07073020c ಅನ್ಯೋನ್ಯಮಭಿವಿಧ್ಯೇತಾಂ ಜೀವಿತಾಂತಕರೈಃ ಶರೈಃ||

ಜೀವವನ್ನು ಅಂತ್ಯಗೊಳಿಸಬಲ್ಲ ಶರಗಳಿಂದ ಅನ್ಯೋನ್ಯರನ್ನು ಹೊಡೆಯುತ್ತಿದ್ದ ಅವರ ದೇಹಗಳಿಂದ ಆನೆಗಳಿಂದ ಸುರಿಯುವ ಮದೋದಕದಂತೆ ರಕ್ತವು ಸುರಿಯುತ್ತಿತ್ತು.

07073021a ಗರ್ಜಿತೋತ್ಕ್ರುಷ್ಟಸನ್ನಾದಾಃ ಶಂಖದುಂದುಭಿನಿಸ್ವನಾಃ|

07073021c ಉಪಾರಮನ್ಮಹಾರಾಜ ವ್ಯಾಜಹಾರ ನ ಕಶ್ಚನ||

ಮಹಾರಾಜ! ಗರ್ಜನ, ಕೂಗುಗಳೂ ಶಂಖದುಂದುಭಿಗಳ ನಿಸ್ವನವೂ ನಿಂತಿತು. ಯಾರೂ ಶಬ್ಧವನ್ನು ಮಾಡಲಿಲ್ಲ.

07073022a ತೂಷ್ಣೀಂಭೂತಾನ್ಯನೀಕಾನಿ ಯೋಧಾ ಯುದ್ಧಾದುಪಾರಮನ್|

07073022c ದದೃಶೇ ದ್ವೈರಥಂ ತಾಭ್ಯಾಂ ಜಾತಕೌತೂಹಲೋ ಜನಃ||

ಸೇನೆಗಳು ಮತ್ತು ಯೋಧರು ಯುದ್ಧವನ್ನು ನಿಲ್ಲಿಸಿ ಸುಮ್ಮನಾದರು.  ಕುತೂಹಲದಿಂದ ಜನರು ಅವರಿಬ್ಬರ ದ್ವೈರಥಯುದ್ಧವನ್ನು ನೋಡತೊಡಗಿದರು.

07073023a ರಥಿನೋ ಹಸ್ತಿಯಂತಾರೋ ಹಯಾರೋಹಾಃ ಪದಾತಯಃ|

07073023c ಅವೈಕ್ಷಂತಾಚಲೈರ್ನೇತ್ರೈಃ ಪರಿವಾರ್ಯ ರಥರ್ಷಭೌ||

ರಥಿಗಳು, ಗಜಾರೋಹಿಗಳು, ಅಶ್ವಾರೋಹಿಗಳು ಮತ್ತು ಪದಾತಿಗಳು ಆ ಇಬ್ಬರು ರಥರ್ಷಭರನ್ನೂ ಸುತ್ತುವರೆದು ಎವೆಯಿಕ್ಕದೇ ನೋಡುತ್ತಿದ್ದರು.

07073024a ಹಸ್ತ್ಯನೀಕಾನ್ಯತಿಷ್ಠಂತ ತಥಾನೀಕಾನಿ ವಾಜಿನಾಂ|

07073024c ತಥೈವ ರಥವಾಹಿನ್ಯಃ ಪ್ರತಿವ್ಯೂಹ್ಯ ವ್ಯವಸ್ಥಿತಾಃ||

ಗಜಸೇನೆಗಳೂ ಹಾಗೆಯೇ ಅಶ್ವಸೇಸೆಗಳೂ ತಟಸ್ಥವಾದವು. ಹಾಗೆಯೇ ರಥವಾಹಿನಿಗಳೂ ಇನ್ನೊಂದು ವ್ಯೂಹವಾಗಿ ವ್ಯವಸ್ಥಿತಗೊಂಡವು.

07073025a ಮುಕ್ತಾವಿದ್ರುಮಚಿತ್ರೈಶ್ಚ ಮಣಿಕಾಂಚನಭೂಷಿತೈಃ|

07073025c ಧ್ವಜೈರಾಭರಣೈಶ್ಚಿತ್ರೈಃ ಕವಚೈಶ್ಚ ಹಿರಣ್ಮಯೈಃ||

07073026a ವೈಜಯಂತೀಪತಾಕಾಭಿಃ ಪರಿಸ್ತೋಮಾಂಗಕಂಬಲೈಃ|

07073026c ವಿಮಲೈರ್ನಿಶಿತೈಃ ಶಸ್ತ್ರೈರ್ಹಯಾನಾಂ ಚ ಪ್ರಕೀರ್ಣಕೈಃ||

07073027a ಜಾತರೂಪಮಯೀಭಿಶ್ಚ ರಾಜತೀಭಿಶ್ಚ ಮೂರ್ಧಸು|

07073027c ಗಜಾನಾಂ ಕುಂಭಮಾಲಾಭಿರ್ದಂತವೇಷ್ಟೈಶ್ಚ ಭಾರತ||

07073028a ಸಬಲಾಕಾಃ ಸಖದ್ಯೋತಾಃ ಸೈರಾವತಶತಃರದಾಃ|

07073028c ಅದೃಶ್ಯಂತೋಷ್ಣಪರ್ಯಾಯೇ ಮೇಘಾನಾಮಿವ ವಾಗುರಾಃ||

ಭಾರತ! ಮುಕ್ತಾವಿದ್ರುಮಚಿತ್ರಗಳಿಂದ, ಮಣಿಕಾಂಚನಭೂಷಣಗಳಿಂದ, ಬಣ್ಣಬಣ್ಣದ ಧ್ವಜ-ಆಭರಣಗಳಿಂದ, ಬಂಗಾರದ ಕವಚಗಳಿಂದ, ವೈಜಯಂತೀ ಪತಾಕೆಗಳಿಂದ, ಪರಿಸ್ತೋಮಗಳಿಗೆ ಹಾಸಿದ ಕಂಬಳಿಗಳಿಂದ, ಹೊಳೆಯುತ್ತಿದ್ದ ನಿಶಿತ ಶಸ್ತ್ರಗಳಿಂದ, ಕುದುರೆಗಳ ನೆತ್ತಿಯ ಮೇಲೆ ಕಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಪ್ರಕೀರ್ಣಗಳಿಂದ, ಆನೆಗಳ ಕುಂಭಮಾಲೆಗಳಿಂದ, ದಂತಾಭರಣಗಳಿಂದ ಕೂಡಿದ ಸೇನೆಗಳು ಬೇಸಗೆಯ ಕೊನೆಯಲ್ಲಿ ಬಲಾಕ ಪಕ್ಷಿಗಳ ಮತ್ತು ಮಿಂಚಿನ ಹುಳುಗಳಿಂದ ಕೂಡಿದ ಮೇಘಗಳ ಸಾಲುಗಳಂತೆ ಕಾಣುತ್ತಿದ್ದವು.

07073029a ಅಪಶ್ಯನ್ನಸ್ಮದೀಯಾಶ್ಚ ತೇ ಚ ಯೌಧಿಷ್ಠಿರಾಃ ಸ್ಥಿತಾಃ|

07073029c ತದ್ಯುದ್ಧಂ ಯುಯುಧಾನಸ್ಯ ದ್ರೋಣಸ್ಯ ಚ ಮಹಾತ್ಮನಃ||

07073030a ವಿಮಾನಾಗ್ರಗತಾ ದೇವಾ ಬ್ರಹ್ಮಶಕ್ರಪುರೋಗಮಾಃ|

07073030c ಸಿದ್ಧಚಾರಣಸಂಘಾಶ್ಚ ವಿದ್ಯಾಧರಮಹೋರಗಾಃ||

ಮಹಾತ್ಮ ದ್ರೋಣನ ಮತ್ತು ಯುಯುಧಾನನ ಯುದ್ಧವನ್ನು ನೋಡಲು ನಮ್ಮವರು ಮತ್ತು ಯುಧಿಷ್ಠಿರನ ಕಡೆಯವರು ಮತ್ತು ವಿಮಾನಗಳಲ್ಲಿ ಬ್ರಹ್ಮ-ಶಕ್ರರ ನಾಯಕತ್ವದಲ್ಲಿ ದೇವತೆಗಳು, ಸಿದ್ಧ-ಚಾರಣ ಸಮೂಹಗಳು ಮತ್ತು ವಿದ್ಯಾಧರರು, ಮಹಾ ನಾಗಗಳು ನಿಂತರು.

07073031a ಗತಪ್ರತ್ಯಾಗತಾಕ್ಷೇಪೈಶ್ಚಿತ್ರೈಃ ಶಸ್ತ್ರವಿಘಾತಿಭಿಃ|

07073031c ವಿವಿಧೈರ್ವಿಸ್ಮಯಂ ಜಗ್ಮುಸ್ತಯೋಃ ಪುರುಷಸಿಂಹಯೋಃ||

ಆ ಪುರುಷಸಿಂಹರ ಮುಂದೆ ಹೋಗುವ ಹಿಂದೆಬರುವ ವಿವಿಧ ರೀತಿಗಳನ್ನೂ, ವಿಚಿತ್ರವಾಗಿ ಬಾಣಗಳನ್ನು ಪ್ರಯೋಗಿಸುವುದನ್ನೂ, ಶಸ್ತ್ರಗಳಿಂದ ಗಾಯಗೊಳಿಸುತ್ತಿರುವುದನ್ನೂ ನೋಡಿ ವಿಸ್ಮಯವುಂಟಾಯಿತು.

07073032a ಹಸ್ತಲಾಘವಮಸ್ತ್ರೇಷು ದರ್ಶಯಂತೌ ಮಹಾಬಲೌ|

07073032c ಅನ್ಯೋನ್ಯಂ ಸಮವಿಧ್ಯೇತಾಂ ಶರೈಸ್ತೌ ದ್ರೋಣಸಾತ್ಯಕೀ||

ಆ ಮಹಾಬಲಶಾಲಿಗಳಾದ ದ್ರೋಣ-ಸಾತ್ಯಕಿಯರು ತಮ್ಮ ಕೈಚಳಕವನ್ನು ಪ್ರದರ್ಶಿಸುತ್ತಾ ಅನ್ಯೋನ್ಯರನ್ನು ಶರಗಳಿಂದ ಹೊಡೆದರು.

07073033a ತತೋ ದ್ರೋಣಸ್ಯ ದಾಶಾರ್ಹಃ ಶರಾಂಶ್ಚಿಚ್ಚೇದ ಸಂಯುಗೇ|

07073033c ಪತ್ರಿಭಿಃ ಸುದೃಢೈರಾಶು ಧನುಶ್ಚೈವ ಮಹಾದ್ಯುತೇ||

ಆಗ ಮಹಾದ್ಯುತಿ ದಾಶಾರ್ಹನು ಸಂಯುಗದಲ್ಲಿ ಸುದೃಢ ಪತ್ರಿಗಳಿಂದ ದ್ರೋಣನ ಶರಗಳನ್ನೂ ಧನುಸ್ಸನ್ನೂ ಕತ್ತರಿಸಿದನು.

07073034a ನಿಮೇಷಾಂತರಮಾತ್ರೇಣ ಭಾರದ್ವಾಜೋಽಪರಂ ಧನುಃ|

07073034c ಸಜ್ಯಂ ಚಕಾರ ತಚ್ಚಾಶು ಚಿಚ್ಚೇದಾಸ್ಯ ಸ ಸಾತ್ಯಕಿಃ||

ನಿಮಿಷಮಾತ್ರದಲ್ಲಿ ಭಾರದ್ವಾಜನು ಇನ್ನೊಂದು ಧನುಸ್ಸನ್ನು ಸಿದ್ಧಗೊಳಿಸಲು ಸಾತ್ಯಕಿಯು ಅದನ್ನೂ ತುಂಡರಿಸಿದನು.

07073035a ತತಸ್ತ್ವರನ್ಪುನರ್ದ್ರೋಣೋ ಧನುರ್ಹಸ್ತೋ ವ್ಯತಿಷ್ಠತ|

07073035c ಸಜ್ಯಂ ಸಜ್ಯಂ ಪುನಶ್ಚಾಸ್ಯ ಚಿಚ್ಚೇದ ನಿಶಿತೈಃ ಶರೈಃ||

ಆಗ ಪುನಃ ತ್ವರೆಮಾಡಿ ದ್ರೋಣನು ಧನುಸ್ಸನ್ನು ಕೈಗೆತ್ತಿಕೊಂಡು ಸಜ್ಜುಗೊಳಿಸಲು, ಪುನಃ ಅದನ್ನು ನಿಶಿತ ಶರಗಳಿಂದ ತುಂಡುಮಾಡುತ್ತಿದ್ದನು.

07073036a ತತೋಽಸ್ಯ ಸಂಯುಗೇ ದ್ರೋಣೋ ದೃಷ್ಟ್ವಾ ಕರ್ಮಾತಿಮಾನುಷಂ|

07073036c ಯುಯುಧಾನಸ್ಯ ರಾಜೇಂದ್ರ ಮನಸೇದಮಚಿಂತಯತ್||

ರಾಜೇಂದ್ರ! ಸಂಯುಗದಲ್ಲಿ ಯುಯುಧಾನನ ಅತಿಮಾನುಷ ಕರ್ಮವನ್ನು ನೋಡಿ ದ್ರೋಣನು ಮನಸ್ಸಿನಲ್ಲಿಯೇ ಚಿಂತಿಸಿದನು:

07073037a ಏತದಸ್ತ್ರಬಲಂ ರಾಮೇ ಕಾರ್ತವೀರ್ಯೇ ಧನಂಜಯೇ|

07073037c ಭೀಷ್ಮೇ ಚ ಪುರುಷವ್ಯಾಘ್ರೇ ಯದಿದಂ ಸಾತ್ವತಾಂ ವರೇ||

“ಪುರುಷವ್ಯಾಘ್ರರಾದ ರಾಮ, ಕಾರ್ತವೀರ್ಯ, ಧನಂಜಯ ಮತ್ತು ಭೀಷ್ಮರಲ್ಲಿರುವ ಅಸ್ತ್ರಬಲವು ಈ ಸಾತ್ವತಶ್ರೇಷ್ಠನಲ್ಲಿಯೂ ಇದೆ.”

07073038a ತಂ ಚಾಸ್ಯ ಮನಸಾ ದ್ರೋಣಃ ಪೂಜಯಾಮಾಸ ವಿಕ್ರಮಂ|

07073038c ಲಾಘವಂ ವಾಸವಸ್ಯೇವ ಸಂಪ್ರೇಕ್ಷ್ಯ ದ್ವಿಜಸತ್ತಮಃ||

ವಾಸವನದಂತಿದ ಅವನ ಹಸ್ತ ಚಳಕ ಮತ್ತು ವಿಕ್ರಮವನ್ನು ನೋಡಿ ದ್ವಿಜಸತ್ತಮ ದ್ರೋಣನು ಮನಸ್ಸಿನಲ್ಲಿಯೇ ಗೌರವಿಸಿದನು.

07073039a ತುತೋಷಾಸ್ತ್ರವಿದಾಂ ಶ್ರೇಷ್ಠಸ್ತಥಾ ದೇವಾಃ ಸವಾಸವಾಃ|

07073039c ನ ತಾಮಾಲಕ್ಷಯಾಮಾಸುರ್ಲಘುತಾಂ ಶೀಘ್ರಕಾರಿಣಃ||

07073040a ದೇವಾಶ್ಚ ಯುಯುಧಾನಸ್ಯ ಗಂಧರ್ವಾಶ್ಚ ವಿಶಾಂ ಪತೇ|

07073040c ಸಿದ್ಧಚಾರಣಸಂಘಾಶ್ಚ ವಿದುರ್ದ್ರೋಣಸ್ಯ ಕರ್ಮ ತತ್||

ವಾಸವನೊಂದಿಗೆ ದೇವತೆಗಳೂ ಆ ಅಸ್ತ್ರವಿದನ ಶ್ರೇಷ್ಠತೆಯಿಂದ ತೃಪ್ತರಾದರು. ವಿಶಾಂಪತೇ! ಆ ಶೀಘ್ರಕಾರಿ ಯುಯುಧಾನನ ಹಸ್ತ ಲಘುತ್ವವನ್ನು ಈ ಮೊದಲು ದೇವ-ಗಂಧರ್ವ-ಸಿದ್ಧ-ಚಾರಣ ಸಂಘಗಳು ನೋಡಿರಲಿಲ್ಲ. ಅವರಿಗೆ ದ್ರೋಣನ ಪರಾಕ್ರಮವು ತಿಳಿದಿತ್ತು.

07073041a ತತೋಽನ್ಯದ್ಧನುರಾದಾಯ ದ್ರೋಣಃ ಕ್ಷತ್ರಿಯಮರ್ದನಃ|

07073041c ಅಸ್ತ್ರೈರಸ್ತ್ರವಿದಾಂ ಶ್ರೇಷ್ಠೋ ಯೋಧಯಾಮಾಸ ಭಾರತ||

ಭಾರತ! ಆಗ ಅಸ್ತ್ರವಿದರಲ್ಲಿ ಶ್ರೇಷ್ಠನಾದ ಕ್ಷತ್ರಿಯಮರ್ದನ ದ್ರೋಣನು ಅಸ್ತ್ರಗಳಿಂದ ಯುದ್ಧಮಾಡತೊಡಗಿದನು.

07073042a ತಸ್ಯಾಸ್ತ್ರಾಣ್ಯಸ್ತ್ರಮಾಯಾಭಿಃ ಪ್ರತಿಹನ್ಯ ಸ ಸಾತ್ಯಕಿಃ|

07073042c ಜಘಾನ ನಿಶಿತೈರ್ಬಾಣೈಸ್ತದದ್ಭುತಮಿವಾಭವತ್||

ಅವನ ಅಸ್ತ್ರಗಳನ್ನು ಅಸ್ತ್ರಗಳಿಂದ ಉತ್ತರಿಸಿ ಆ ಸಾತ್ಯಕಿಯು ನಿಶಿತ ಬಾಣಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.

07073043a ತಸ್ಯಾತಿಮಾನುಷಂ ಕರ್ಮ ದೃಷ್ಟ್ವಾನ್ಯೈರಸಮಂ ರಣೇ|

07073043c ಯುಕ್ತಂ ಯೋಗೇನ ಯೋಗಜ್ಞಾಸ್ತಾವಕಾಃ ಸಮಪೂಜಯನ್||

ರಣದಲ್ಲಿ ಅವನ ಆ ಅತಿಮಾನುಷಕರ್ಮವನ್ನು ನೋಡಿ ನಿನ್ನವರಲ್ಲಿದ್ದ ಯೋಗದಿಂದ ಯುಕ್ತರಾದ ಯೋಗಜ್ಞರು ಗೌರವಿಸಿದರು.

07073044a ಯದಸ್ತ್ರಮಸ್ಯತಿ ದ್ರೋಣಸ್ತದೇವಾಸ್ಯತಿ ಸಾತ್ಯಕಿಃ|

07073044c ತಮಾಚಾರ್ಯೋಽಪ್ಯಸಂಭ್ರಾಂತೋಽಯೋಧಯಚ್ಚತ್ರುತಾಪನಃ||

ದ್ರೋಣನು ಯಾವ ಅಸ್ತ್ರವನ್ನು ಪ್ರಯೋಗಿಸುತ್ತಿದ್ದನೋ ಅದೇ ಅಸ್ತ್ರವನ್ನು ಸಾತ್ಯಕಿಯೂ ಬಳಸುತ್ತಿದ್ದನು. ಅದರಿಂದ ಶತ್ರುತಾಪನ ಆಚಾರ್ಯನು ಸಂಭ್ರಾಂತನಾಗಿ ಯುದ್ಧಮಾಡಿದನು.

07073045a ತತಃ ಕ್ರುದ್ಧೋ ಮಹಾರಾಜ ಧನುರ್ವೇದಸ್ಯ ಪಾರಗಃ|

07073045c ವಧಾಯ ಯುಯುಧಾನಸ್ಯ ದಿವ್ಯಮಸ್ತ್ರಮುದೈರಯತ್||

ಮಹಾರಾಜ! ಆಗ ಆ ಧನುರ್ವೇದದ ಪಾರಂಗತನು ಕ್ರುದ್ಧನಾಗಿ ಯುಯುಧಾನನ ವಧೆಗಾಗಿ ದಿವ್ಯ ಅಸ್ತ್ರವನ್ನು ಪ್ರಕಟಿಸಿದನು.

07073046a ತದಾಗ್ನೇಯಂ ಮಹಾಘೋರಂ ರಿಪುಘ್ನಮುಪಲಕ್ಷ್ಯ ಸಃ|

07073046c ಅಸ್ತ್ರಂ ದಿವ್ಯಂ ಮಹೇಷ್ವಾಸೋ ವಾರುಣಂ ಸಮುದೈರಯತ್||

ಆಗ ಆ ಮಹಾಘೋರವಾದ, ಶತ್ರುವನ್ನು ಕೊಲ್ಲಬಲ್ಲ ಆಗ್ನೇಯಾಸ್ತ್ರವನ್ನು ನೋಡಿ ಮಹೇಷ್ವಾಸ ಸಾತ್ಯಕಿಯು ದಿವ್ಯವಾದ ವರುಣಾಸ್ತ್ರವನ್ನು ಪ್ರಕಟಿಸಿದನು.

07073047a ಹಾಹಾಕಾರೋ ಮಹಾನಾಸೀದ್ದೃಷ್ಟ್ವಾ ದಿವ್ಯಾಸ್ತ್ರಧಾರಿಣೌ|

07073047c ನ ವಿಚೇರುಸ್ತದಾಕಾಶೇ ಭೂತಾನ್ಯಾಕಾಶಗಾನ್ಯಪಿ||

ಆ ದಿವ್ಯಾಸ್ತ್ರಗಳನ್ನು ಧರಿಸಿದುದನ್ನು ನೋಡಿ ಮಹಾ ಹಾಹಾಕಾರವುಂಟಾಯಿತು. ಆಕಾಶದಲ್ಲಿ ಯಾವುವೂ, ಆಕಾಶಗಳಲ್ಲಿ ಸಂಚರಿಸುವವರೂ, ಸಂಚರಿಸುತ್ತಿರಲಿಲ್ಲ.

07073048a ಅಸ್ತ್ರೇ ತೇ ವಾರುಣಾಗ್ನೇಯೇ ತಾಭ್ಯಾಂ ಬಾಣಸಮಾಹಿತೇ|

07073048c ನ ತಾವದಭಿಷಜ್ಯೇತೇ ವ್ಯಾವರ್ತದಥ ಭಾಸ್ಕರಃ||

ಆ ವಾರುಣ ಮತ್ತು ಆಗ್ನೇಯಾಸ್ತ್ರಗಳ ಬಾಣಗಳು ಒಂದುಗೂಡಿದಾಗ ಅವು ನಿಷ್ಫಲಗೊಂಡವು. ಆಗ ಭಾಸ್ಕರನೂ ಇಳಿಮುಖನಾದನು.

07073049a ತತೋ ಯುಧಿಷ್ಠಿರೋ ರಾಜಾ ಭೀಮಸೇನಶ್ಚ ಪಾಂಡವಃ|

07073049c ನಕುಲಃ ಸಹದೇವಶ್ಚ ಪರ್ಯರಕ್ಷಂತ ಸಾತ್ಯಕಿಂ||

ಆಗ ರಾಜಾ ಯುಧಿಷ್ಠಿರ, ಪಾಂಡವ ಭೀಮಸೇನ, ನಕುಲ ಸಹದೇವರು ಸಾತ್ಯಕಿಯನ್ನು ಸುತ್ತುವರೆದು ರಕ್ಷಿಸಿದರು.

07073050a ಧೃಷ್ಟದ್ಯುಮ್ನಮುಖೈಃ ಸಾರ್ಧಂ ವಿರಾಟಶ್ಚ ಸಕೇಕಯಃ|

07073050c ಮತ್ಸ್ಯಾಃ ಶಾಲ್ವೇಯಸೇನಾಶ್ಚ ದ್ರೋಣಮಾಜಗ್ಮುರಂಜಸಾ||

ಧೃಷ್ಟದ್ಯುಮ್ನ ಮುಖ್ಯರೊಂದಿಗೆ ವಿರಾಟನೂ, ಜೊತೆಯಲ್ಲಿ ಕೇಕಯನೂ, ಮತ್ಸ್ಯರೂ, ಶಾಲ್ವೇಯ ಸೇನೆಗಳೂ ದ್ರೋಣನ ಕಡೆ ವೇಗವಾಗಿ ಮುಂದುವರಿದರು.

07073051a ದುಃಶಾಸನಂ ಪುರಸ್ಕೃತ್ಯ ರಾಜಪುತ್ರಾಃ ಸಹಸ್ರಶಃ|

07073051c ದ್ರೋಣಮಭ್ಯುಪಪದ್ಯಂತ ಸಪತ್ನೈಃ ಪರಿವಾರಿತಂ||

ದುಃಶಾಸನನನ್ನು ಮುಂದಿರಿಸಿಕೊಂಡು ಸಹಸ್ರ ರಾಜಪುತ್ರರು ದ್ರೋಣನ ಬಳಿ ಧಾವಿಸಿ ಬಂದು ತಮ್ಮವರಿಂದ ಸುತ್ತುವರೆದರು.

07073052a ತತೋ ಯುದ್ಧಮಭೂದ್ರಾಜಂಸ್ತವ ತೇಷಾಂ ಚ ಧನ್ವಿನಾಂ|

07073052c ರಜಸಾ ಸಂವೃತೇ ಲೋಕೇ ಶರಜಾಲಸಮಾವೃತೇ||

ರಾಜನ್! ಆಗ ನಿನ್ನ ಮತ್ತು ಅವರ ಧನ್ವಿಗಳ ನಡುವೆ ಯುದ್ಧವು ನಡೆಯಿತು. ಶರಜಾಲಗಳಿಂದ ಮೇಲೆದ್ದ ಧೂಳು ಲೋಕಗಳನ್ನು ಆವರಿಸಿತು.

07073053a ಸರ್ವಮಾವಿಗ್ನಮಭವನ್ನ ಪ್ರಾಜ್ಞಾಯತ ಕಿಂ ಚನ|

07073053c ಸೈನ್ಯೇನ ರಜಸಾ ಧ್ವಸ್ತೇ ನಿರ್ಮರ್ಯಾದಮವರ್ತತ||

ಧೂಳಿನಿಂದ ಎಲ್ಲವೂ ಮುಚ್ಚಿಹೋಗಿ ಏನೂ ತಿಳಿಯದಂತಾಯಿತು. ಸೇನೆಗಳು ಮರ್ಯಾದೆಯನ್ನು ಕಳೆದುಕೊಂಡು ಯುದ್ಧವು ನಡೆಯಿತು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣಸಾತ್ಯಕಿಯುದ್ಧೇ ತ್ರಿಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣಸಾತ್ಯಕಿಯುದ್ಧ ಎನ್ನುವ ಎಪ್ಪತ್ಮೂರನೇ ಅಧ್ಯಾಯವು.

Image result for flowers against white background

Comments are closed.