Shanti Parva: Chapter 248

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೮

ಮೃತ್ಯುವಿನ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ; ಬ್ರಹ್ಮನ ರೋಷಾಗ್ನಿಯಿಂದ ಸಮಸ್ತ ಪ್ರಾಣಿಗಳ ಸಂಹಾರ (1-21).

12248001 ಯುಧಿಷ್ಠಿರ ಉವಾಚ|

12248001a ಯ ಇಮೇ ಪೃಥಿವೀಪಾಲಾಃ ಶೇರತೇ ಪೃಥಿವೀತಲೇ|

12248001c ಪೃತನಾಮಧ್ಯ ಏತೇ ಹಿ ಗತಸತ್ತ್ವಾ ಮಹಾಬಲಾಃ||

ಯುಧಿಷ್ಠಿರನು ಹೇಳಿದನು: “ಮಹಾಬಲರಾದ ಪೃಥಿವೀಪಾಲರು ಈ ಸೇನಾಮಧ್ಯದಲ್ಲಿ ಭೂಮಿಯಮೇಲೆ ಹತರಾಗಿ ಮಲಗಿದ್ದಾರೆ.

12248002a ಏಕೈಕಶೋ ಭೀಮಬಲಾ ನಾಗಾಯುತಬಲಾಸ್ತಥಾ|

12248002c ಏತೇ ಹಿ ನಿಹತಾಃ ಸಂಖ್ಯೇ ತುಲ್ಯತೇಜೋಬಲೈರ್ನರೈಃ||

ಒಬ್ಬೊಬ್ಬರೂ ಭೀಮಬಲರಾಗಿದ್ದರು. ಸಾವಿರ ಆನೆಗಳ ಬಲವುಳ್ಳವರಾಗಿದ್ದರು. ಇವರು ತಮ್ಮಂತೆಯೇ ತೇಜೋಬಲವಿದ್ದ ನರರಿಂದ ಹತರಾದರು.

12248003a ನೈಷಾಂ ಪಶ್ಯಾಮಿ ಹಂತಾರಂ ಪ್ರಾಣಿನಾಂ ಸಂಯುಗೇ ಪುರಾ|

12248003c ವಿಕ್ರಮೇಣೋಪಸಂಪನ್ನಾಸ್ತೇಜೋಬಲಸಮನ್ವಿತಾಃ||

ವಿಕ್ರಮಸಂಪನ್ನರಾಗಿದ್ದ ಮತ್ತು ತೇಜೋಬಲಸಮನ್ವಿತರಾಗಿದ್ದ ಇವರನ್ನು ಯುದ್ಧದಲ್ಲಿ ಕೊಲ್ಲುವ ಜೀವಿಗಳನ್ನೇ ಈ ಹಿಂದೆ ನೋಡಿರಲಿಲ್ಲ.

12248004a ಅಥ ಚೇಮೇ ಮಹಾಪ್ರಾಜ್ಞ ಶೇರತೇ ಹಿ ಗತಾಸವಃ|

12248004c ಮೃತಾ ಇತಿ ಚ ಶಬ್ದೋಽಯಂ ವರ್ತತ್ಯೇಷು ಗತಾಸುಷು||

ಮಹಾಪ್ರಾಜ್ಞ! ಅಂಥವರು ಈಗ ಪ್ರಾಣಹೋಗಿ ಮಲಗಿದ್ದಾರೆ. ಪ್ರಾಣಹೋದವರಿಗೆ ಮೃತರಾದರು ಎಂಬ ಶಬ್ದವನ್ನು ಬಳಸುವ ರೂಢಿಯಿದೆ.

12248005a ಇಮೇ ಮೃತಾ ನೃಪತಯಃ ಪ್ರಾಯಶೋ ಭೀಮವಿಕ್ರಮಾಃ|

12248005c ತತ್ರ ಮೇ ಸಂಶಯೋ ಜಾತಃ ಕುತಃ ಸಂಜ್ಞಾ ಮೃತಾ ಇತಿ||

ಪ್ರಾಯಶಃ ಭೀಮವಿಕ್ರಮಿಗಳಾಗಿದ್ದ ಈ ನೃಪತಿಗಳೂ ಮೃತರಾದರು ಎನ್ನುತ್ತೇವೆ. ಆದರೆ ನನಗೆ ಈ ವಿಷಯದಲ್ಲಿ ಒಂದು ಸಂಶಯವುಂಟಾಗಿದೆ. ಮೃತ ಎನ್ನುವ ಶಬ್ದವು ಹೇಗೆ ಬಂದಿತು?

12248006a ಕಸ್ಯ ಮೃತ್ಯುಃ ಕುತೋ ಮೃತ್ಯುಃ ಕೇನ ಮೃತ್ಯುರಿಹ ಪ್ರಜಾಃ|

12248006c ಹರತ್ಯಮರಸಂಕಾಶ ತನ್ಮೇ ಬ್ರೂಹಿ ಪಿತಾಮಹ||

ಪಿತಾಮಹ! ಈ ಮೃತ್ಯುವು ಯಾರದ್ದು? ಎಲ್ಲಿಯದು? ಯಾವ ಕಾರಣದಿಂದ ಈ ಮೃತ್ಯುವು ಪ್ರಜೆಗಳ ಪ್ರಾಣಗಳನ್ನು ಅಪಹರಿಸುತ್ತದೆ? ಇದನ್ನು ನನಗೆ ಹೇಳು.”

12248007 ಭೀಷ್ಮ ಉವಾಚ|

12248007a ಪುರಾ ಕೃತಯುಗೇ ತಾತ ರಾಜಾಸೀದವಿಕಂಪಕಃ|

12248007c ಸ ಶತ್ರುವಶಮಾಪನ್ನಃ ಸಂಗ್ರಾಮೇ ಕ್ಷೀಣವಾಹನಃ||

ಭೀಷ್ಮನು ಹೇಳಿದನು: “ಮಗೂ! ಹಿಂದೆ ಕೃತಯುಗದಲ್ಲಿ ವಿಕಂಪಕನೆಂಬ ರಾಜನಿದ್ದನು. ಸಂಗ್ರಾಮದಲ್ಲಿ ಅವನು ರಥವನ್ನು ಕಳೆದುಕೊಂಡು ಶತ್ರುವಶನಾದನು.

12248008a ತತ್ರ ಪುತ್ರೋ ಹರಿರ್ನಾಮ ನಾರಾಯಣಸಮೋ ಬಲೇ|

12248008c ಸ ಶತ್ರುಭಿರ್ಹತಃ ಸಂಖ್ಯೇ ಸಬಲಃ ಸಪದಾನುಗಃ||

ಅವನಿಗೆ ಹರಿ ಎಂಬ ಹೆಸರಿನ, ನಾರಾಯಣನ ಸಮನಾದ ಬಲಶಾಲಿಯಾಗಿದ್ದ ಮಗನಿದ್ದನು. ಅವನು ಯುದ್ಧದಲ್ಲಿ ತನ್ನ ಸೇನೆ ಮತ್ತು ಅನುಯಾಯಿಗಳೊಂದಿಗೆ ಶತ್ರುಗಳಿಂದ ಹತನಾದನು.

12248009a ಸ ರಾಜಾ ಶತ್ರುವಶಗಃ ಪುತ್ರಶೋಕಸಮನ್ವಿತಃ|

12248009c ಯದೃಚ್ಚಯಾಶಾಂತಿಪರೋ ದದರ್ಶ ಭುವಿ ನಾರದಮ್||

ಶತ್ರುವಿನ ವಶನಾಗಿದ್ದ ಮತ್ತು ಪುತ್ರಶೋಕಸಮನ್ವಿತನಾದ್ದ ಅವನು ಪರಮ ಶಾಂತಿಯನ್ನು ಬಯಸಿ ಭುವಿಯಲ್ಲಿ ನಾರದನ್ನು ಕಂಡನು.

12248010a ಸ ತಸ್ಮೈ ಸರ್ವಮಾಚಷ್ಟ ಯಥಾ ವೃತ್ತಂ ಜನೇಶ್ವರಃ|

12248010c ಶತ್ರುಭಿರ್ಗ್ರಹಣಂ ಸಂಖ್ಯೇ ಪುತ್ರಸ್ಯ ಮರಣಂ ತಥಾ||

ಜನೇಶ್ವರನು ಅವನಿಗೆ ಯುದ್ಧದಲ್ಲಿ ತಾನು ಶತ್ರುವಿನ ಬಂಧಿಯಾದುದು ಮತ್ತು ಪುತ್ರನ ಮರಳ ಎಲ್ಲವನ್ನೂ ಹೇಗೆ ನಡೆಯಿತೋ ಹಾಗೆ ಹೇಳಿದನು.

12248011a ತಸ್ಯ ತದ್ವಚನಂ ಶ್ರುತ್ವಾ ನಾರದೋಽಥ ತಪೋಧನಃ|

12248011c ಆಖ್ಯಾನಮಿದಮಾಚಷ್ಟ ಪುತ್ರಶೋಕಾಪಹಂ ತದಾ||

ಅವನ ಆ ಮಾತನ್ನು ಕೇಳಿ ತಪೋಧನ ನಾರದನು ಅವನಿಗೆ ಪುತ್ರಶೋಕವನ್ನು ಹೋಗಲಾಡಿಸುವ ಈ ಆಖ್ಯಾನವನ್ನು ಹೇಳಿದನು.

12248012a ರಾಜನ್ ಶೃಣು ಸಮಾಖ್ಯಾನಮದ್ಯೇದಂ ಬಹುವಿಸ್ತರಮ್|

12248012c ಯಥಾ ವೃತ್ತಂ ಶ್ರುತಂ ಚೈವ ಮಯಾಪಿ ವಸುಧಾಧಿಪ||

“ರಾಜನ್! ವಸುಧಾಧಿಪ! ಬಹುವಿಸ್ತಾರವಾದ ಈ ಸಮಾಖ್ಯಾನವನ್ನು ಅದು ಹೇಗೆ ನಡೆಯಿತೋ ಮತ್ತು ನಾನು ಹೇಗೆ ಕೇಳಿದ್ದೆನೋ ಹಾಗೆ ಕೇಳು.

12248013a ಪ್ರಜಾಃ ಸೃಷ್ಟ್ವಾ ಮಹಾತೇಜಾಃ ಪ್ರಜಾಸರ್ಗೇ ಪಿತಾಮಹಃ|

12248013c ಅತೀವ ವೃದ್ಧಾ ಬಹುಲಾ ನಾಮೃಷ್ಯತ ಪುನಃ ಪ್ರಜಾಃ||

ಮಹಾತೇಜಸ್ವೀ ಪಿತಾಮಹನು ಪ್ರಜಾಸೃಷ್ಟಿಯ ಸಮಯದಲ್ಲಿ ಅನೇಕ ಪ್ರಜೆಗಳನ್ನು ಸೃಷ್ಟಿಸಿದನು. ಅವರು ಅತೀವ ವೃದ್ಧರಾದರೂ ಸಾಯಲಿಲ್ಲ ಮತ್ತು ಪುನಃ ಹೆಚ್ಚು ಪ್ರಜೆಗಳನ್ನು ಹುಟ್ಟಿಸಿದರು.

12248014a ನ ಹ್ಯಂತರಮಭೂತ್ಕಿಂ ಚಿತ್ಕ್ವ ಚಿಜ್ಜಂತುಭಿರಚ್ಯುತ|

12248014c ನಿರುಚ್ಚ್ವಾಸಮಿವೋನ್ನದ್ಧಂ ತ್ರೈಲೋಕ್ಯಮಭವನ್ನೃಪ||

ನೃಪ! ಅಚ್ಯುತ! ಪ್ರಾಣಿಗಳಿಲ್ಲದೇ ಇರುವ ಕಿಂಚಿತ್ತು ಜಾಗವೂ ಇರಲಿಲ್ಲ. ಮೂರುಲೋಕಗಳೂ ಜೀವಿಗಳಿಂದ ತುಂಬಿಹೋದವು ಮತ್ತು ಅವುಗಳಿಗೆ ಉಸಿರಾಡಲೂ ಆಗುತ್ತಿರಲಿಲ್ಲ.

12248015a ತಸ್ಯ ಚಿಂತಾ ಸಮುತ್ಪನ್ನಾ ಸಂಹಾರಂ ಪ್ರತಿ ಭೂಪತೇ|

12248015c ಚಿಂತಯನ್ನಾಧ್ಯಗಚ್ಚಚ್ಚ ಸಂಹಾರೇ ಹೇತುಕಾರಣಮ್||

ಭೂಪತೇ! ಅವರನ್ನು ಹೇಗೆ ಸಂಹರಿಸಬೇಕು ಎಂಬ ಚಿಂತೆಯು ಅವನಲ್ಲಿ ಹುಟ್ಟಿಕೊಂಡಿತು. ಅದರ ಕುರಿತು ಯೋಚಿಸಿದರೂ, ಸಂಹಾರಕ್ಕೆ ಕಾರಣವ್ಯಾವುದನ್ನೂ ನಿರ್ಧರಿಸಲಾಗಲಿಲ್ಲ.

12248016a ತಸ್ಯ ರೋಷಾನ್ಮಹಾರಾಜ ಖೇಭ್ಯೋಽಗ್ನಿರುದತಿಷ್ಠತ|

12248016c ತೇನ ಸರ್ವಾ ದಿಶೋ ರಾಜನ್ದದಾಹ ಸ ಪಿತಾಮಹಃ||

ಮಹಾರಾಜ! ಅವನ ರೋಷದಿಂದಾಗಿ ದೇಹದಿಂದ ಒಂದು ಅಗ್ನಿಯು ಹೊರಹೊಮ್ಮಿತು. ರಾಜನ್! ಅದರಿಂದ ಪಿತಾಮಹನು ಸರ್ವ ದಿಕ್ಕುಗಳನ್ನೂ ದಹಿಸತೊಡಗಿದನು.

12248017a ತತೋ ದಿವಂ ಭುವಂ ಖಂ ಚ ಜಗಚ್ಚ ಸಚರಾಚರಮ್|

12248017c ದದಾಹ ಪಾವಕೋ ರಾಜನ್ ಭಗವತ್ಕೋಪಸಂಭವಃ||

ರಾಜನ್! ಭಗವಂತನ ಕೋಪದಿಂದ ಹುಟ್ಟಿದ್ದ ಆ ಅಗ್ನಿಯು ಸ್ವರ್ಗ, ಭೂಮಿ, ಆಕಾಶ, ಮತ್ತು ಸಚರಾಚರ ಜಗತ್ತನ್ನೂ ಸುಟ್ಟುಹಾಕಿತು.

12248018a ತತ್ರಾದಹ್ಯಂತ ಭೂತಾನಿ ಜಂಗಮಾನಿ ಧ್ರುವಾಣಿ ಚ|

12248018c ಮಹತಾ ಕೋಪವೇಗೇನ ಕುಪಿತೇ ಪ್ರಪಿತಾಮಹೇ||

ಪ್ರಪಿತಾಮಹನ ಆ ಮಹಾ ಕೋಪದ ವೇಗದಿಂದ ನಿಶ್ಚಯವಾಗಿಯೂ ಭೂತಗಳು ಜಂಗಮಗಳು ಸುಟ್ಟುಹೋದವು.

12248019a ತತೋ ಹರಿಜಟಃ ಸ್ಥಾಣುರ್ವೇದಾಧ್ವರಪತಿಃ ಶಿವಃ|

12248019c ಜಗಾದ ಶರಣಂ ದೇವೋ ಬ್ರಹ್ಮಾಣಂ ಪರವೀರಹಾ||

ಆಗ ಹರಿಜಟ ಸ್ಥಾಣು ವೇದಾಧ್ವರಪತಿ ಪರವೀರಹ ದೇವ ಶಿವನು ಬ್ರಹ್ಮನ ಶರಣು ಹೋದನು.

12248020a ತಸ್ಮಿನ್ನಭಿಗತೇ ಸ್ಥಾಣೌ ಪ್ರಜಾನಾಂ ಹಿತಕಾಮ್ಯಯಾ|

12248020c ಅಬ್ರವೀದ್ವರದೋ ದೇವೋ ಜ್ವಲನ್ನಿವ ತದಾ ಶಿವಮ್||

ಪ್ರಜೆಗಳ ಹಿತವನ್ನು ಬಯಸಿ ಬಂದಿದ್ದ ಸ್ಥಾಣು ಶಿವನಿಗೆ ಪ್ರಜ್ವಲಿಸುತ್ತಿದ್ದ ವರದ ದೇವ ಬ್ರಹ್ಮನು ಹೇಳಿದನು:

12248021a ಕರವಾಣ್ಯದ್ಯ ಕಂ ಕಾಮಂ ವರಾರ್ಹೋಽಸಿ ಮತೋ ಮಮ|

12248021c ಕರ್ತಾ ಹ್ಯಸ್ಮಿ ಪ್ರಿಯಂ ಶಂಭೋ ತವ ಯದ್ಧೃದಿ ವರ್ತತೇ||

“ನೀನು ವರಕ್ಕೆ ಅರ್ಹನು ಎಂದು ನನಗನ್ನಿಸುತ್ತದೆ. ನಿನ್ನ ಬಯಕೆಯೇನು? ಅದನ್ನು ಇಂದು ಪೂರೈಸುತ್ತೇನೆ. ಶಂಭೋ! ನಾನು ಕರ್ತ. ನಾನು ನಿನ್ನ ವೃದ್ಧಿಯುಂಟಾಗುವಂತೆ ಮಾಡುತ್ತೇನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮೃತ್ಯುಪ್ರಜಾಪತಿಸಂವಾದೋಪಕ್ರಮೇ ಅಷ್ಟಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮೃತ್ಯುಪ್ರಜಾಪತಿಸಂವಾದೋಪಕ್ರಮ ಎನ್ನುವ ಇನ್ನೂರಾನಲ್ವತ್ತೆಂಟನೇ ಅಧ್ಯಾಯವು.

Comments are closed.