Shanti Parva: Chapter 153

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೩

ಅಜ್ಞಾನ ಮತ್ತು ಮೋಹಗಳ ಪರಸ್ಪರ ಕಾರಣ ಸಂಬಂಧದ ವರ್ಣನೆ (೧-೧೪).

12153001 ಯುಧಿಷ್ಠಿರ ಉವಾಚ|

12153001a ಅನರ್ಥಾನಾಮಧಿಷ್ಠಾನಮುಕ್ತೋ ಲೋಭಃ ಪಿತಾಮಹ|

12153001c ಅಜ್ಞಾನಮಪಿ ವೈ ತಾತ ಶ್ರೋತುಮಿಚ್ಚಾಮಿ ತತ್ತ್ವತಃ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಅನರ್ಥಗಳ ಮೂಲವು ಲೋಭವೆಂದು ನೀನು ಹೇಳಿದೆ. ಅಜ್ಜಾ! ಅಜ್ಞಾನದ ಕುರಿತೂ ತತ್ತ್ವತಃ ಕೇಳ ಬಯಸುತ್ತೇನೆ.”

12153002 ಭೀಷ್ಮ ಉವಾಚ|

12153002a ಕರೋತಿ ಪಾಪಂ ಯೋಽಜ್ಞಾನಾನ್ನಾತ್ಮನೋ ವೇತ್ತಿ ಚ ಕ್ಷಮಮ್[1]|

12153002c ಪ್ರದ್ವೇಷ್ಟಿ ಸಾಧುವೃತ್ತಾಂಶ್ಚ ಸ ಲೋಕಸ್ಯೈತಿ ವಾಚ್ಯತಾಮ್||

ಭೀಷ್ಮನು ಹೇಳಿದನು: “ಅಜ್ಞಾನದಿಂದ ಯಾರು ಪಾಪವನ್ನೆಸಗುತ್ತಾರೋ ಅವರು ತಮ್ಮನ್ನು ತಾವು ಮತ್ತು ತಮ್ಮ ಕ್ಷಮ್ಯತೆಯನ್ನು ತಿಳಿದುಕೊಂಡಿರುವುದಿಲ್ಲ. ಅವರು ಸಾಧುಜನರ ವರ್ತನೆಗಳನ್ನು ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ಲೋಕದಲ್ಲಿ ಜನರು ಅವರ ಕುರಿತು ನಿಂದನೀಯ ಮಾತುಗಳನ್ನಾಡುತ್ತಾರೆ.

12153003a ಅಜ್ಞಾನಾನ್ನಿರಯಂ ಯಾತಿ ತಥಾಜ್ಞಾನೇನ ದುರ್ಗತಿಮ್|

12153003c ಅಜ್ಞಾನಾತ್ ಕ್ಲೇಶಮಾಪ್ನೋತಿ ತಥಾಪತ್ಸು ನಿಮಜ್ಜತಿ||

ಅಜ್ಞಾನದಿಂದ ಜೀವವು ನರಕಕ್ಕೆ ಹೋಗುತ್ತದೆ. ಅಜ್ಞಾನದಿಂದ ದುರ್ಗತಿಯನ್ನು ಹೊಂದುತ್ತಾರೆ. ಅಜ್ಞಾನದಿಂದ ಕ್ಲೇಶಗಳಿಗೊಳಗಾಗುತ್ತಾರೆ. ಆಪತ್ತುಗಳಲ್ಲಿ ಮುಳುಗಿಬಿಡುತ್ತಾರೆ.”

12153004 ಯುಧಿಷ್ಠಿರ ಉವಾಚ|

12153004a ಅಜ್ಞಾನಸ್ಯ ಪ್ರವೃತ್ತಿಂ ಚ ಸ್ಥಾನಂ ವೃದ್ಧಿಂ ಕ್ಷಯೋದಯೌ|

12153004c ಮೂಲಂ ಯೋಗಂ ಗತಿಂ ಕಾಲಂ ಕಾರಣಂ ಹೇತುಮೇವ ಚ||

12153005a ಶ್ರೋತುಮಿಚ್ಚಾಮಿ ತತ್ತ್ವೇನ ಯಥಾವದಿಹ ಪಾರ್ಥಿವ|

12153005c ಅಜ್ಞಾನಪ್ರಭವಂ ಹೀದಂ ಯದ್ದುಃಖಮುಪಲಭ್ಯತೇ||

ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಅಜ್ಞಾನದ ಉತ್ಪತ್ತಿ, ಸ್ಥಿತಿ, ವೃದ್ಧಿ, ಕ್ಷಯ, ಉದಯ, ಮೂಲ, ಯೋಗ, ಗತಿ, ಕಾಲ, ಕಾರಣ ಮತ್ತು ಹೇತುಗಳನ್ನು ತತ್ತ್ವವತ್ತಾಗಿ ಕೇಳಬಯಸುತ್ತೇನೆ. ಉಪಲಬ್ಧವಾಗುವ ದುಃಖಗಳು ಅಜ್ಞಾನದಿಂದಲೇ ಹುಟ್ಟುತ್ತವೆ.”

12153006 ಭೀಷ್ಮ ಉವಾಚ|

12153006a ರಾಗೋ ದ್ವೇಷಸ್ತಥಾ ಮೋಹೋ ಹರ್ಷಃ ಶೋಕೋಽಭಿಮಾನಿತಾ|

12153006c ಕಾಮಃ ಕ್ರೋಧಶ್ಚ ದರ್ಪಶ್ಚ ತಂದ್ರೀರಾಲಸ್ಯಮೇವ ಚ||

12153007a ಇಚ್ಚಾ ದ್ವೇಷಸ್ತಥಾ ತಾಪಃ ಪರವೃದ್ಧ್ಯುಪತಾಪಿತಾ|

12153007c ಅಜ್ಞಾನಮೇತನ್ನಿರ್ದಿಷ್ಟಂ ಪಾಪಾನಾಂ ಚೈವ ಯಾಃ ಕ್ರಿಯಾಃ||

ಭೀಷ್ಮನು ಹೇಳಿದನು: “ರಾಗ, ದ್ವೇಷ, ಮೋಹ, ಹರ್ಷ, ಶೋಕ, ಅಭಿಮಾನ, ಕಾಮ, ಕ್ರೋಧ, ದರ್ಪ, ಆಯಾಸ, ಆಲಸ್ಯ, ಇಚ್ಛೆ, ವೈರ, ತಾಪ, ಇನ್ನೊಬ್ಬರ ಉನ್ನತಿಯನ್ನು ನೋಡಿ ಉರಿಯುವುದು ಮತ್ತು ಪಾಪಾಚಾರಗಳನ್ನೆಸಗುವುದು – ಇವೆಲ್ಲವುಗಳನ್ನೂ ಅಜ್ಞಾನವೆಂದೇ ಹೇಳಿದ್ದಾರೆ.

12153008a ಏತಯಾ ಯಾ ಪ್ರವೃತ್ತಿಶ್ಚ ವೃದ್ಧ್ಯಾದೀನ್ಯಾಂಶ್ಚ ಪೃಚ್ಚಸಿ|

12153008c ವಿಸ್ತರೇಣ ಮಹಾಬಾಹೋ ಶೃಣು ತಚ್ಚ ವಿಶಾಂ ಪತೇ||

ವಿಶಾಂಪತೇ! ಈ ಅಜ್ಞಾನದ ಉತ್ಪತ್ತಿ ಮತ್ತು ವೃದ್ಧಿ ಮೊದಲಾದವುಗಳ ಕುರಿತು ಕೇಳಿದ್ದೀಯೆ. ಮಹಾಬಾಹೋ! ಇವುಗಳನ್ನು ವಿಸ್ತಾರವಾಗಿ ಕೇಳು.

12153009a ಉಭಾವೇತೌ ಸಮಫಲೌ ಸಮದೋಷೌ ಚ ಭಾರತ|

12153009c ಅಜ್ಞಾನಂ ಚಾತಿಲೋಭಶ್ಚಾಪ್ಯೇಕಂ ಜಾನೀಹಿ ಪಾರ್ಥಿವ||

ಭಾರತ! ಪಾರ್ಥಿವ! ಅಜ್ಞಾನ ಮತ್ತು ಅತಿಲೋಭ – ಇವೆರಡೂ ಒಂದೇ ಎಂದು ತಿಳಿ. ಏಕೆಂದರೆ ಅವುಗಳ ಪರಿಣಾಮ ಮತ್ತು ದೋಷಗಳು ಒಂದೇ ಆಗಿವೆ.

12153010a ಲೋಭಪ್ರಭವಮಜ್ಞಾನಂ ವೃದ್ಧಂ ಭೂಯಃ ಪ್ರವರ್ಧತೇ|

12153010c ಸ್ಥಾನೇ ಸ್ಥಾನಂ ಕ್ಷಯೇ ಕ್ಷೈಣ್ಯಮುಪೈತಿ ವಿವಿಧಾಂ ಗತಿಮ್||

ಲೋಭದಿಂದಲೇ ಅಜ್ಞಾನವು ಪ್ರಕಟವಾಗುತ್ತದೆ. ಲೋಭವು ಹೆಚ್ಚಾಗುವುದರಿಂದ ಅಜ್ಞಾನವೂ ಹೆಚ್ಚಾಗುತ್ತದೆ. ಎಲ್ಲಿಯವರೆಗೆ ಲೋಭವಿರುವುದೋ ಅಲ್ಲಿಯವರಿಗೆ ಅಜ್ಞಾನವೂ ಇರುತ್ತದೆ ಮತ್ತು ಯಾವಾಗ ಲೋಭವು ಕ್ಷಯವಾಗುವುದೋ ಆಗ ಅಜ್ಞಾನವೂ ಕ್ಷೀಣವಾಗುತ್ತದೆ. ಅಜ್ಞಾನ ಮತ್ತು ಲೋಭಗಳ ಕಾರಣದಿಂದಲೇ ಜೀವಿಯು ನಾನಾ ಪ್ರಕಾರದ ಯೋನಿಗಳಲ್ಲಿ ಜನ್ಮತಾಳುತ್ತದೆ.

12153011a ಮೂಲಂ ಲೋಭಸ್ಯ ಮಹತಃ[2] ಕಾಲಾತ್ಮಗತಿರೇವ ಚ|

12153011c ಚಿನ್ನೇಽಚ್ಚಿನ್ನೇ ತಥಾ ಲೋಭೇ ಕಾರಣಂ ಕಾಲ ಏವ ಹಿ||

ಕಾಲಸ್ವರೂಪ ಅಜ್ಞಾನವೇ ಲೋಭದ ಮಹಾ ಮೂಲ. ಲೋಭವನ್ನು ತುಂಡು-ತುಂಡುಮಾಡುವ ಕಾರಣವೂ ಕಾಲವೇ.

12153012a ತಸ್ಯಾಜ್ಞಾನಾತ್ತು ಲೋಭೋ ಹಿ ಲೋಭಾದಜ್ಞಾನಮೇವ ಚ|

12153012c ಸರ್ವೇ ದೋಷಾಸ್ತಥಾ ಲೋಭಾತ್ತತಸ್ಮಾಲ್ಲೋಭಂ ವಿವರ್ಜಯೇತ್||

ಅಜ್ಞಾನದಿಂದ ಲೋಭವುಂಟಾಗುತ್ತದೆ ಮತ್ತು ಲೋಭದಿಂದ ಅಜ್ಞಾನವುಂಟಾಗುತ್ತದೆ. ಲೋಭದಿಂದಲೇ ಸರ್ವ ದೋಷಗಳೂ ಹುಟ್ಟಿಕೊಳ್ಳತ್ತವೆ. ಆದುದರಿಂದ ಲೋಭವನ್ನು ವರ್ಜಿಸಬೇಕು.

12153013a ಜನಕೋ ಯುವನಾಶ್ವಶ್ಚ ವೃಷಾದರ್ಭಿಃ ಪ್ರಸೇನಜಿತ್|

12153013c ಲೋಭಕ್ಷಯಾದ್ದಿವಂ ಪ್ರಾಪ್ತಾಸ್ತಥೈವಾನ್ಯೇ ಜನಾಧಿಪಾಃ||

ಜನಕ, ಯುವನಾಶ್ವ, ವೃಷಾದರ್ಭಿ, ಪ್ರಸೇನಜಿತ್ ಮತ್ತು ಅನ್ಯ ಜನಾಧಿಪರು ಲೋಭವನ್ನು ಕಳೆದುಕೊಂಡೇ ದಿವ್ಯಲೋಕಗಳನ್ನು ಪಡೆದುಕೊಂಡರು.

12153014a ಪ್ರತ್ಯಕ್ಷಂ ತು ಕುರುಶ್ರೇಷ್ಠ ತ್ಯಜ ಲೋಭಮಿಹಾತ್ಮನಾ|

12153014c ತ್ಯಕ್ತ್ವಾ ಲೋಭಂ ಸುಖಂ ಲೋಕೇ ಪ್ರೇತ್ಯ ಚಾನುಚರಿಷ್ಯಸಿ||

ಕುರುಶ್ರೇಷ್ಠ! ನೀನು ಈಗಲೇ ಪ್ರತ್ಯಕ್ಷವಾಗಿ ಕಾಣುವ ಈ ಲೋಭವನ್ನು ತೊರೆ. ಲೋಭವನ್ನು ತ್ಯಜಿಸಿ ಈ ಲೋಕದಲ್ಲಿ ಸುಖವನ್ನೂ ಮತ್ತು ಪರಲೋಕದಲ್ಲಿ ಆನಂದವನ್ನೂ ಪಡೆದುಕೊಳ್ಳುತ್ತೀಯೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಅಜ್ಞಾನಮಹಾತ್ಮ್ಯೇ ತ್ರ್ಯಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಅಜ್ಞಾನಮಹಾತ್ಮ್ಯೆ ಎನ್ನುವ ನೂರಾಐವತ್ಮೂರನೇ ಅಧ್ಯಾಯವು.

[1] ಕ್ಷಯಮ್ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಮೂಲಂ ಲೋಭಸ್ಯ ಮೋಹೋ ವೈ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.