Shanti Parva: Chapter 134

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೪

12134001 ಭೀಷ್ಮ ಉವಾಚ|

12134001a ಅತ್ರ ಗಾಥಾ ಬ್ರಹ್ಮಗೀತಾಃ ಕೀರ್ತಯಂತಿ ಪುರಾವಿದಃ|

12134001c ಯೇನ ಮಾರ್ಗೇಣ ರಾಜಾನಃ ಕೋಶಂ ಸಂಜನಯಂತಿ ಚ||

ಭೀಷ್ಮನು ಹೇಳಿದನು: “ರಾಜನು ಯಾವ ಮಾರ್ಗದಿಂದ ಕೋಶವನ್ನು ತುಂಬಿಸಿಕೊಳ್ಳಬೇಕು ಎಣ್ಣುವುದರ ಕುರಿತು ಹಿಂದಿನದನ್ನು ತಿಳಿದವರು ಈ ಬ್ರಹ್ಮಗೀತೆಯ ಕೀರ್ತನೆಯನ್ನು ಮಾಡುತ್ತಾರೆ.

12134002a ನ ಧನಂ ಯಜ್ಞಶೀಲಾನಾಂ ಹಾರ್ಯಂ ದೇವಸ್ವಮೇವ ತತ್|

12134002c ದಸ್ಯೂನಾಂ ನಿಷ್ಕ್ರಿಯಾಣಾಂ ಚ ಕ್ಷತ್ರಿಯೋ ಹರ್ತುಮರ್ಹತಿ||

ಯಜ್ಞಶೀಲರ ಧನವನ್ನು ಅಪಹರಿಸಬಾರದು. ದೇವರ ಸ್ವತ್ತನ್ನೂ ಅಪಹರಿಸಬಾರದು. ಕ್ಷತ್ರಿಯನಾದವನು ದಸ್ಯುಗಳ ಮತ್ತು ವರ್ಣಾಶ್ರಮ ಯುಕ್ತ ಕರ್ಮಗಳನ್ನು ಮಾಡದೇ ಇರುವವರ ಧನವನ್ನು ಅಪಹರಿಸಬಹುದು.

12134003a ಇಮಾಃ ಪ್ರಜಾಃ ಕ್ಷತ್ರಿಯಾಣಾಂ ರಕ್ಷ್ಯಾಶ್ಚಾದ್ಯಾಶ್ಚ[1] ಭಾರತ|

12134003c ಧನಂ ಹಿ ಕ್ಷತ್ರಿಯಸ್ಯೇಹ ದ್ವಿತೀಯಸ್ಯ ನ ವಿದ್ಯತೇ||

ಭಾರತ! ಕ್ಷತ್ರಿಯರು ರಕ್ಷಿಸಬೇಕೆಂದೇ ಈ ಪ್ರಜೆಗಳಿದ್ದಾರೆ. ಇವರೇ ಕ್ಷತ್ರಿಯರಿಗೆ ಸೇರಿದ ಧನ. ಬೇರೆ ಯಾರಿಗೂ ಅವರು ಸೇರಿಲ್ಲ.

12134004a ತದಸ್ಯ ಸ್ಯಾದ್ಬಲಾರ್ಥಂ ವಾ ಧನಂ ಯಜ್ಞಾರ್ಥಮೇವ ವಾ|

12134004c ಅಭೋಗ್ಯಾ ಹ್ಯೋಷಧೀಶ್ಚಿತ್ತ್ವಾ ಭೋಗ್ಯಾ ಏವ ಪಚಂತ್ಯುತ||

ಆದರೆ ತನ್ನದೇ ಆಗಿರುವ ಧನವನ್ನು ರಾಜನು ಸೈನ್ಯದ ಸಂಗ್ರಹಕ್ಕಾಗಿಯಾಗಲೀ ಯಜ್ಞಮಾಡುವುದಕ್ಕಾಗಲೀ ಉಪಯೋಗಿಸಿಕೊಳ್ಳಬೇಕು. ಭತ್ತ-ಗೋಧಿ ಮೊದಲಾದ ಹುಲ್ಲಿನ ಪೈರುಗಳಲ್ಲಿ ತಿನ್ನಲು ಯೋಗ್ಯವಲ್ಲದವುಗಳನ್ನು ಬಿಟ್ಟು ಭೋಗ್ಯವಾದ ಧಾನ್ಯಗಳನ್ನೇ ಬಳಸಬೇಕು.

12134005a ಯೋ ವೈ ನ ದೇವಾನ್ನ ಪಿತೃನ್ನ ಮರ್ತ್ಯಾನ್ ಹವಿಷಾರ್ಚತಿ|

12134005c ಆನಂತಿಕಾಂ ತಾಂ ಧನಿತಾಮಾಹುರ್ವೇದವಿದೋ ಜನಾಃ||

ದೇವತೆಗಳನ್ನು, ಪಿತೃಗಳನ್ನು ಮತ್ತು ಅತಿಥಿಗಳನ್ನು ತೃಪ್ತಿಗೊಳಿಸದೇ ಇರುವವನಲ್ಲಿರುವ ಧನವು ವ್ಯರ್ಥವಾದುದೆಂದು ವೇದವಿದರು ಹೇಳುತ್ತಾರೆ.

12134006a ಹರೇತ್ತದ್ದ್ರವಿಣಂ ರಾಜನ್ ಧಾರ್ಮಿಕಃ ಪೃಥಿವೀಪತಿಃ|

12134006c ನ ಹಿ ತತ್ ಪ್ರೀಣಯೇಲ್ಲೋಕಾನ್ನ ಕೋಶಂ ತದ್ವಿಧಂ ನೃಪಃ||

ರಾಜನ್! ಧಾರ್ಮಿಕ ಪೃಥಿವೀಪತಿಯು ಅಂಥಹ ವ್ಯರ್ಥವದ ಧನವನ್ನು ಕಸಿದುಕೊಂಡು ಅದರ ಮೂಲಕ ಪ್ರಜೆಗಳಿಗೆ ಅನುಕೂಲಗಳನ್ನು ಮಾಡಿಕೊಟ್ಟು ಪ್ರೀತಗೊಳಿಸಬೇಕು. ತನ್ನ ಕೋಶವನ್ನು ತುಂಬಿಸಿಕೊಳ್ಳುವುದಕ್ಕೆ ರಾಜನು ಇವನ್ನು ಬಳಸಬಾರದು.

12134007a ಅಸಾಧುಭ್ಯೋ ನಿರಾದಾಯ ಸಾಧುಭ್ಯೋ ಯಃ ಪ್ರಯಚ್ಚತಿ|

12134007c ಆತ್ಮಾನಂ ಸಂಕ್ರಮಂ ಕೃತ್ವಾ ಮನ್ಯೇ[2] ಧರ್ಮವಿದೇವ ಸಃ||

ತನ್ನನ್ನೇ ಸೇತುವನ್ನಾಗಿಸಿಕೊಂಡು ದುಷ್ಟರಿಂದ ಧನವನ್ನು ತೆಗೆದುಕೊಂಡು ಸತ್ಪುರುಷರಿಗೆ ನೀಡುವ ರಾಜನು ಸಂಪೂರ್ಣಧರ್ಮವನ್ನು ತಿಳಿದವನಾಗಿರುತ್ತಾನೆ.

[3]12134008a ಔದ್ಭಿಜ್ಜಾ ಜಂತವಃ ಕೇ ಚಿದ್ಯುಕ್ತವಾಚೋ ಯಥಾ ತಥಾ[4]|

12134008c ಅನಿಷ್ಟತಃ ಸಂಭವಂತಿ ತಥಾಯಜ್ಞಃ ಪ್ರತಾಯತೇ[5]||

ತರು-ಗುಲ್ಮಾದಿಗಳು ಮತ್ತು ಕೆಲವು ಜಂತುಗಳು ತಾವಾಗಿಯೇ ಹುಟ್ಟಿಕೊಳ್ಳುವಂತೆ ಯಜ್ಞಕ್ಕೆ ಅನಿಷ್ಟ ಜನರು ತಾವಾಗಿಯೇ ಹುಟ್ಟಿಕೊಳ್ಳುತ್ತಾರೆ.

12134009a ಯಥೈವ ದಂಶಮಶಕಂ ಯಥಾ ಚಾಂಡಪಿಪೀಲಿಕಮ್|

12134009c ಸೈವ ವೃತ್ತಿರಯಜ್ಞೇಷು ತಥಾ ಧರ್ಮೋ ವಿಧೀಯತೇ||

ನೊಣ ಮೊದಲಾದ ಕೀಟಗಳು ಮತ್ತು ಇರುವೆಗಳೊಡನೆ ಹೇಗೋ ಹಾಗೆ ಯಜ್ಞವಿರೋಧಿಗಳ ಕುರಿತೂ ನಡೆದುಕೊಳ್ಳಬೇಕು ಎಂದು ಧರ್ಮಶಾಸನವಿದೆ.

12134010a ಯಥಾ ಹ್ಯಕಸ್ಮಾದ್ಭವತಿ ಭೂಮೌ ಪಾಂಸುತೃಣೋಲಪಮ್[6]|

12134010c ತಥೈವೇಹ ಭವೇದ್ಧರ್ಮಃ ಸೂಕ್ಷ್ಮಃ ಸೂಕ್ಷ್ಮತರೋಽಪಿ ಚ||

ಅಕಸ್ಮಾತ್ತಾಗಿ ಭೂಮಿಯ ಮೇಲಾಗುವ ಧೂಳು ಅಥವಾ ಹುಲ್ಲಿನಂತೆ   ಧರ್ಮವೂ ಕೂಡ ಸೂಕ್ಷ್ಮಕ್ಕಿಂತಲೂ ಅತಿ ಸೂಕ್ಷ್ಮವಾಗಿದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಚತುಸ್ತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ  ನೂರಾಮೂವತ್ನಾಲ್ಕನೇ ಅಧ್ಯಾಯವು.

[1] ರಾಜ್ಯಭೋಗಾಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಕೃತ್ಸ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ತಥಾ ತಥಾ ಜಯೇಲ್ಲೋಕಾನ್ಯುಕ್ತ್ಯಾ ಹೈವ ಯಥಾ ಯಥಾ|

[4] ಉದ್ಭಿಜ್ಜಾ ಜಂತವೋ ಯದ್ವಚ್ಛುಕ್ಲಜೀವಾ ಯಥಾ ಯಥಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಅನಿಮಿತ್ತಾತ್ಸಂಭವಂತಿ ತಥಾ ಯಜ್ಞಃ ಪ್ರಜಾಯತೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಪಾಂಸುವಿಲೋಲಿತಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.