ಹರಿವಂಶ: ಹರಿವಂಶ ಪರ್ವ
Contents
Toggle೭
ಮನ್ವಂತರವರ್ಣನಮ್
19007001 ಜನಮೇಜಯ ಉವಾಚ|
19007001a ಮನ್ವಂತರಾಣಿ ಸರ್ವಾಣಿ ವಿಸ್ತರೇಣ ತಪೋಧನ |
19007001c ತೇಷಾಂ ಸೃಷ್ಟಿಂ ವಿಸೃಷ್ಟಿಂ ಚ ವೈಶಂಪಾಯನ ಕೀರ್ತಯ ||
ಜನಮೇಜಯನು ಹೇಳಿದನು: “ತಪೋಧನ! ವೈಶಂಪಾಯನ! ಎಲ್ಲ ಮನ್ವಂತರಗಳು, ಅವುಗಳ ಸೃಷ್ಟಿ ಮತ್ತು ಲಯಗಳ ಕುರಿತು ವಿಸ್ತಾರವಾಗಿ ವರ್ಣಿಸು!
19007002a ಯಾವಂತೋ ಮನವಶ್ಚೈವ ಯಾವಂತಂ ಕಾಲಮೇವ ಚ |
19007002c ಮನ್ವಂತರಂ ತಥಾ ಬ್ರಹ್ಮಂಶ್ರೋತುಮಿಚ್ಛಾಮಿ ತತ್ತ್ವತಃ ||
ಬ್ರಹ್ಮನ್! ಎಷ್ಟು ಮನ್ವಂತರಗಳು ಮತ್ತು ಮನುಗಳು ಎಷ್ಟು ಕಾಲದ ಪರ್ಯಂತ ಇರುತ್ತಾರೆ ಎನ್ನುವುದನ್ನು ತತ್ತ್ವತಃ ಕೇಳಲು ಬಯಸುತ್ತೇನೆ.”
19007003 ವೈಶಂಪಾಯನ ಊವಾಚ|
19007003a ನ ಶಕ್ಯೋ ವಿಸ್ತರಸ್ತಾತ ವಕ್ತುಂ ವರ್ಷಶತೈರಪಿ |
19007003c ಮನ್ವಂತರಾಣಾಂ ಕೌರವ್ಯ ಸಂಕ್ಷೇಪಂ ತ್ವೇವ ಮೇ ಶೃಣು ||
ವೈಶಂಪಾಯನನು ಹೇಳಿದನು: “ತಾತ! ಕೌರವ್ಯ! ಮನ್ವಂತರಗಳ ಕುರಿತು ವಿಸ್ತಾರವಾಗಿ ಹೇಳಲು ನೂರು ವರ್ಷಗಳೂ ಸಾಲದು. ಅವುಗಳ ಕುರಿತು ಸಂಕ್ಷೇಪವಾಗಿ ನನ್ನಿಂದ ಕೇಳು.
19007004a ಸ್ವಾಯಂಭುವೋ ಮನುಸ್ತಾತ ಮನುಃ ಸ್ವಾರೋಚಿಷಸ್ತಥಾ |
19007004c ಉತ್ತಮಸ್ತಾಮಸಶ್ಚೈವ ರೈವತಶ್ಚಾಕ್ಷುಷಸ್ತಥಾ ||
ತಾತ! ಸ್ವಾಯಂಭುವ ಮನು, ಸ್ವಾರೋಚಿಷ ಮನು, ಉತ್ತಮ ಮನು, ತಾಮಸ ಮನು, ರೈವತ ಮನು ಮತ್ತು ನಂತರ ಚಾಕ್ಷುಷ ಮನು.
19007005a ವೈವಸ್ವತಸ್ಯ ಕೌರವ್ಯ ಸಾಂಪ್ರತೋ ಮನುರುಚ್ಯತೇ |
19007005c ಸಾವರ್ಣಿಶ್ಚ ಮನುಸ್ತಾತ ಭೌತ್ಯೋ ರೌಚ್ಯಸ್ತಥೈವ ಚ ||
19007006a ತಥೈವ ಮೇರುಸಾವರ್ಣಾಶ್ಚತ್ವಾರೋ ಮನವಃ ಸ್ಮೃತಾಃ |
19007006c ಅತೀತಾ ವರ್ತಮಾನಾಶ್ಚ ತಥೈವಾನಾಗತಾಶ್ಚ ಯೇ ||
ಕೌರವ್ಯ! ವರ್ತಮಾನದಲ್ಲಿ ವೈವಸ್ವತನು ಮನುವೆಂದು ಹೇಳುತ್ತಾರೆ. ತಾತ! ಸಾವರ್ಣಿ ಮನು, ಭೌತ್ಯ ಮನು, ರೌಚ್ಯಮನು ಮತ್ತು ನಾಲ್ವರು ಮೇರು ಸಾವರ್ಣರು[1] ಮನುಗಳೆಂದು ತಿಳಿಯಲ್ಪಟ್ಟಿದ್ದಾರೆ. ಇವರು ಆಗಿ ಹೋದ, ವರ್ತಮಾನ ಮತ್ತು ಮುಂದೆ ಬರುವ ಮನುಗಳಾಗಿರುತ್ತಾರೆ.
19007007a ಕೀರ್ತಿತಾ ಮನವಸ್ತಾತ ಮಯೈತೇ ತು ಯಥಾಶ್ರುತಮ್ |
19007007c ಋಷೀಂಸ್ತೇಷಾಂ ಪ್ರವಕ್ಷ್ಯಾಮಿ ಪುತ್ರಾಂದೇವಗಣಾಂಸ್ತಥಾ ||
ತಾತ! ನಾನು ಕೇಳಿದಂತೆ ಈ ಮನುಗಳ ಹೆಸರುಗಳನ್ನು ಹೇಳಿದ್ದೇನೆ. ಈಗ ಅವರ ಋಷಿಗಳು, ಪುತ್ರರು ಮತ್ತು ದೇವಗಣಗಳ ಕುರಿತು ಹೇಳುತ್ತೇನೆ.
19007008a ಮರೀಚಿರತ್ರಿರ್ಭಗವಾನಂಗಿರಾಃ ಪುಲಹಃ ಕ್ರತುಃ |
19007008c ಪುಲಸ್ತ್ಯಶ್ಚ ವಸಿಷ್ಠಶ್ಚ ಸಪ್ತೈತೇ ಬ್ರಹ್ಮಣಃ ಸುತಾಃ ||
19007009a ಉತ್ತರಸ್ಯಾಂ ದಿಶಿ ತಥಾ ರಾಜನ್ಸಪ್ತರ್ಷಯೋಽಪರೇ |
19007009c ದೇವಾಶ್ಚ ಶಾಂತರಜಸಸ್ತಥಾ ಪ್ರಕೃತಯಃ ಪರೇ |
19007009e ಯಾಮಾ ನಾಮ ತಥಾ ದೇವಾ ಆಸನ್ಸ್ವಾಯಂಭುವೇಽಂತರೇ||
ರಾಜನ್! ಸ್ವಾಯಂಭುವ ಮನ್ವಂತರದಲ್ಲಿ ಬೇರೆಯೇ ಸಪ್ತರ್ಷಿಗಳಿದ್ದರು: ಮರೀಚಿ, ಅತ್ರಿ, ಭಗವಾನ್ ಅಂಗಿರಾ, ಪುಲಹ, ಕ್ರತು, ಪುಲಸ್ತ್ಯ ಮತ್ತು ವಸಿಷ್ಠ ಈ ಏಳು ಬ್ರಹ್ಮನ ಸುತರು ಉತ್ತರ ದಿಕ್ಕಿನಲ್ಲಿ ವಾಸಿಸುತ್ತಿದ್ದರು. ಆ ಮನ್ವಂತರದಲ್ಲಿ ಶಾಂತರಜಾ, ಪ್ರಕೃತಿ ಮತ್ತು ಯಾಮಾ ಎಂಬ ಹೆಸರಿನ ದೇವತೆಗಳು ಪೂಜಿಸಲ್ಪಡುತ್ತಿದ್ದರು.
19007010a ಅಗ್ನೀಧ್ರಶ್ಚಾಗ್ನಿಬಾಹುಶ್ಚ ಮೇಧಾ ಮೇಧಾತಿಥಿರ್ವಸುಃ |
19007010c ಜ್ಯೋತಿಷ್ಮಾಂದ್ಯುತಿಮಾನ್ಹವ್ಯಃ ಸವನಃ ಪುತ್ರ ಏವ ಚ ||
19007011a ಮನೋಃ ಸ್ವಾಯಂಭುವಸ್ಯೈತೇ ದಶ ಪುತ್ರಾ ಮಹೌಜಸಃ |
19007011c ಏತತ್ತೇ ಪ್ರಥಮಂ ರಾಜನ್ಮನ್ವಂತರಮುದಾಹೃತಮ್ ||
ಸ್ವಾಯಂಭುವ ಮನುವಿಗೆ ಹತ್ತು ಮಹೌಜಸ ಪುತ್ರರಿದ್ದರು: ಅಗ್ನೀಧ್ರ, ಅಗ್ನಿಬಾಹು, ಮೇಧಾ, ಮೇಧಾತಿಥಿ, ವಸು, ಜ್ಯೋತಿಷ್ಮಾನ್, ದ್ಯುತಿಮಾನ್, ಹವ್ಯ, ಸವನ ಮತ್ತು ಪುತ್ರ. ರಾಜನ್! ಹೀಗೆ ಮೊದಲನೆಯ ಮನ್ವಂತರದ ಕುರಿತು ಹೇಳಿಯಾಯಿತು.
19007012a ಔರ್ವೋ ವಸಿಷ್ಠಪುತ್ರಶ್ಚ ಸ್ತಂಭಃ ಕಾಶ್ಯಪ ಏವ ಚ |
19007012c ಪ್ರಾಣೋ ಬೃಹಸ್ಪತಿಶ್ಚೈವ ದತ್ತೋ ನಿಶ್ಚ್ಯವನಸ್ತಥಾ ||
19007013a ಏತೇ ಮಹರ್ಷಯಸ್ತಾತ ವಾಯುಪ್ರೋಕ್ತಾ ಮಹಾವ್ರತಾಃ |
19007013c ದೇವಾಶ್ಚ ತುಷಿತಾ ನಾಮ ಸ್ಮೃತಾಃ ಸ್ವಾರೋಚಿಷೇಽಂತರೇ||
ತಾತ! ಸ್ವಾರೋಚಿಷ ಮನ್ವಂತರದಲ್ಲಿ ವಸಿಷ್ಠನ ಮಗ ಔರ್ವ, ಸ್ತಂಭ, ಕಾಶ್ಯಪ, ಪ್ರಾಣ, ಬೃಹಸ್ಪತಿ, ದತ್ತ ಮತ್ತು ನಿಶ್ಚ್ಯವನರು ಮಹಾವ್ರತ ಮಹರ್ಷಿಗಳೆಂದು ವಾಯುವು ಹೇಳಿದ್ದಾನೆ. ಆ ಮನ್ವಂತರದ ದೇವತೆಯ ಹೆಸರು ತುಷಿತಾ ಎಂದು ಹೇಳಲಾಗಿದೆ.
19007014a ಹವಿರ್ಧ್ರಃ ಸುಕೃತಿರ್ಜ್ಯೋತಿರಾಪೋಮೂರ್ತಿರಯಸ್ಮಯಃ |
19007014c ಪ್ರತಿಥಶ್ಚ ನಭಸ್ಯಶ್ಚ ನಭ ಊರ್ಜಸ್ತಥೈವ ಚ ||
19007015a ಸ್ವಾರೋಚಿಷಸ್ಯ ಪುತ್ರಾಸ್ತೇ ಮನೋಸ್ತಾತ ಮಹಾತ್ಮನಃ |
19007015c ಕೀರ್ತಿತಾಃ ಪೃಥಿವೀಪಾಲ ಮಹಾವೀರ್ಯಪರಾಕ್ರಮಾಃ ||
ತಾತ! ಪೃಥಿವೀಪಾಲ! ಹವಿರ್ಧ, ಸುಕೃತಿ, ಜ್ಯೋತಿ, ಆಪ, ಮೂರ್ತಿ, ಅಯಸ್ಮಯ, ಪ್ರತಿಥ, ನಭಸ, ನಭ, ಊರ್ಜಸ ಈ ಮಹಾತ್ಮರು ಸ್ವಾರೋಚಿಷ ಮನುವಿನ ಮಹಾವೀರ್ಯಪರಾಕ್ರಮೀ ಪುತ್ರರೆಂದು ಹೇಳಿದ್ದಾರೆ.
19007016a ದ್ವಿತೀಯಮೇತತ್ಕಥಿತಂ ತವ ಮನ್ವಂತರಂ ಮಯಾ |
19007016c ಇದಂ ತೃತೀಯಂ ವಕ್ಷ್ಯಾಮಿ ತನ್ನಿಬೋಧ ನರಾಧಿಪ ||
ಎರಡನೆಯ ಮನ್ವಂತರದ ಕುರಿತು ನಾನು ಹೇಳಿಯಾಯಿತು. ನರಾಧಿಪ! ಇನ್ನು ಮೂರನೆಯದರ ಕುರಿತು ಹೇಳುತ್ತೇನೆ. ಕೇಳು.
19007017a ವಸಿಷ್ಠಪುತ್ರಾಃ ಸಪ್ತಾಸನ್ವಾಸಿಷ್ಠಾ ಇತಿ ವಿಶ್ರುತಾಃ |
19007017c ಹಿರಣ್ಯಗರ್ಭಸ್ಯ ಸುತಾ ಊರ್ಜ್ಜಾ ನಾಮ ಸುತೇಜಸಃ ||
19007018a ಋಷಯೋಽತ್ರ ಮಯಾ ಪ್ರೋಕ್ತಾಃ ಕೀರ್ತ್ಯಮಾನಾನ್ನಿಬೋಧ ಮೇ |
19007018c ಔತ್ತಮೇಯಾನ್ಮಹಾರಾಜ ದಶ ಪುತ್ರಾನ್ಮನೋರಮಾನ್ ||
19007019a ಇಷ ಊರ್ಜಸ್ತನೂಜಶ್ಚ ಮಧುರ್ಮಾಧವ ಏವ ಚ |
19007019c ಶುಚಿಃ ಶುಕ್ರಃ ಸಹಶ್ಚೈವ ನಭಸ್ಯೋ ನಭ ಏವ ಚ ||
ಮಹಾರಾಜ! ಉತ್ತಮ ಮನ್ವಂತರದಲ್ಲಿ ವಾಸಿಷ್ಠರೆಂದು ವಿಶ್ರುತರಾದ ಏಳು ವಸಿಷ್ಠಪುತ್ರರು ಋಷಿಗಳಾಗಿದ್ದರು. ಅವರು ಮೊದಲು ಹಿರಣ್ಯಗರ್ಭನ ಮಹಾತೇಜಸ್ವೀ ಊರ್ಜ್ವಾ ಎಂಬ ಹೆಸರಿನ ಮಕ್ಕಳಾಗಿದ್ದರು. ಈಗ ಉತ್ತಮ ಮನುವಿನ ಹತ್ತು ಮನೋರಮ ಪುತ್ರರ ಕುರಿತು ಹೇಳುತ್ತೇನೆ: ಇಷ, ಊರ್ಜ, ತನೂಜ, ಮಧು, ಮಾಧವ, ಶುಚಿ, ಶುಕ್ರ, ಸಹಶ, ನಭಸ ಮತ್ತು ನಭ.
19007020a ಭಾನವಸ್ತತ್ರ ದೇವಾಶ್ಚ ಮನ್ವಂತರಮುದಾಹೃತಮ್ |
19007020c ಮನ್ವಂತರಂ ಚತುರ್ಥಂ ತೇ ಕಥಯಿಷ್ಯಾಮಿ ತಚ್ಛೃಣು ||
ಆ ಮನ್ವಂತರದಲ್ಲಿ ಭಾನುವು ದೇವತೆಯಾಗಿದ್ದನು. ಈಗ ನಾಲ್ಕನೆಯ ಮನ್ವಂತರದ ಕುರಿತು ಹೇಳುತ್ತೇನೆ. ಕೇಳು.
19007021a ಕಾವ್ಯಃ ಪೃಥುಸ್ತಥೈವಾಗ್ನಿರ್ಜನ್ಯುರ್ಧಾತಾ ಚ ಭಾರತ |
19007021c ಕಪೀವಾನಕಪೀವಾಂಶ್ಚ ತತ್ರ ಸಪ್ತರ್ಷಯೋಽಪರೇ ||
ಭಾರತ! ನಾಲ್ಕನೆಯ ತಾಮಸ ಮನ್ವಂತರದಲ್ಲಿ ಕಾವ್ಯ, ಪೃಥು, ಅಗ್ನಿ, ಜನ್ಯು, ಧಾತಾ, ಕಪೀವಾನ ಮತ್ತು ಅಕಪೀವಾನ ಇವರು ಸಪ್ತರ್ಷಿಗಳಾಗಿದ್ದರು.
19007022a ಪುರಾಣೇ ಕಥಿತಾಸ್ತಾತ ಪುತ್ರಾಃ ಪೌತ್ರಾಶ್ಚ ಭಾರತ |
19007022c ಸತ್ಯಾ ದೇವಗಣಾಶ್ಚೈವ ತಾಮಸಸ್ಯಾಂತರೇ ಮನೋಃ ||
ಭಾರತ! ತಾತ! ಪುರಾಣಗಳಲ್ಲಿ ಇವರ ಪುತ್ರ-ಪೌತ್ರರ ಕುರಿತಾದ ವರ್ಣನೆಯಿದೆ. ತಾಮಸ ಮನುವಿನ ಕಾಲದಲ್ಲಿ ಸತ್ಯಾ ಎಂಬ ದೇವಗಣವು ಪೂಜಿಸಲ್ಪಡುತ್ತಿತ್ತು.
19007023a ಪುತ್ರಾಂಶ್ಚೈವ ಪ್ರವಕ್ಷ್ಯಾಮಿ ತಾಮಸಸ್ಯ ಮನೋರ್ನೃಪ |
19007023c ದ್ಯುತಿಸ್ತಪಸ್ಯಃ ಸುತಪಾಸ್ತಪೋಮೂಲಸ್ತಪೋಧನಃ ||
19007024a ತಪೋರತಿರಕಲ್ಮಾಷಸ್ತನ್ವೀ ಧನ್ವೀ ಪರಂತಪಃ |
19007024c ತಾಮಸಸ್ಯ ಮನೋರೇತೇ ದಶ ಪುತ್ರಾ ಮಹಾಬಲಾಃ ||
ನೃಪ! ಈಗ ನಾನು ತಾಮಸ ಮನುವಿನ ಪುತ್ರರ ಕುರಿತು ಹೇಳುತ್ತೇನೆ. ದ್ಯುತಿ, ತಪಸ್ಯ, ಸುತಪಾ, ತಪೋಮೂಲ, ತಪೋಧನ, ತಪೋರತಿ, ಕಲ್ಮಾಷ, ತನ್ವೀ, ಧರ್ಮೀ ಮತ್ತು ಪರಂತಪ ಈ ಮಹಾಬಲರು ತಾಮಸ ಮನುವಿನ ಹತ್ತು ಮಕ್ಕಳು.
19007025a ವಾಯುಪ್ರೋಕ್ತಾ ಮಹಾರಾಜ ಪಂಚಮಂ ತದನಂತರಮ್ |
19007025c ವೇದಬಾಹುರ್ಯದುಧ್ರಶ್ಚ ಮುನಿರ್ವೇದಶಿರಾಸ್ತಥಾ ||
19007026a ಹಿರಣ್ಯರೋಮಾ ಪರ್ಜನ್ಯ ಊರ್ಧ್ವಬಾಹುಶ್ಚ ಸೋಮಜಃ |
19007026c ಸತ್ಯನೇತ್ರಸ್ತಥಾತ್ರೇಯ ಏತೇ ಸಪ್ತರ್ಷಯೋಽಪರೇ ||
ಮಹಾರಾಜ! ವಾಯುವು ಹೇಳಿದಂತೆ ಐದನೆಯ ಮನ್ವಂತರದಲ್ಲಿ ವೇದಬಾಹು, ಯದುಧ್ರ, ವೇದಶಿರಾ ಮುನಿ, ಹಿರಣ್ಯರೋಮಾ, ಪರ್ಜನ್ಯ, ಸೋಮನ ಮಗ ಊರ್ಧ್ವಬಾಹು ಮತ್ತು ಅತ್ರಿಯ ಮಗ ಸತ್ಯನೇತ್ರ ಇವರು ಸಪ್ತರ್ಷಿಗಳಾಗಿದ್ದರು.
19007027a ದೇವಾಶ್ಚ ಭೂತರಜಸಸ್ತಥಾ ಪ್ರಕೃತಯೋಽಪರೇ |
19007027c ಪಾರಿಪ್ಲವಶ್ಚ ರೈಭ್ಯಶ್ಚ ಮನೋರಂತರಮುಚ್ಯತೇ ||
ಆ ಮನ್ವಂತರದಲ್ಲಿ ಭೂತರಜಸ, ಪೃಕೃತಿ, ಪಾರಿಪ್ಲವ ಮತ್ತು ರೈಭ್ಯರು ದೇವತೆಗಳಾಗಿದ್ದರು ಎಂದು ಹೇಳುತ್ತಾರೆ.
19007028a ಅಥ ಪುತ್ರಾನಿಮಾಂಸ್ತಸ್ಯ ನಿಬೋಧ ಗದತೋ ಮಮ |
19007028c ಧೃತಿಮಾನವ್ಯಯೋ ಯುಕ್ತಸ್ತತ್ತ್ವದರ್ಶೀ ನಿರುತ್ಸುಕಃ ||
19007029a ಅರಣ್ಯಶ್ಚ ಪ್ರಕಾಶಶ್ಚ ನಿರ್ಮೋಹಃ ಸತ್ಯವಾಕ್ಕವಿಃ |
19007029c ರೈವತಸ್ಯ ಮನೋಃ ಪುತ್ರಾಃ ಪಂಚಮಂ ಚೈತದಂತರಮ್ ||
ಐದನೆಯ ಮನ್ವಂತರದಲ್ಲಿ ಮನುವಾಗಿದ್ದ ರೈವತನ ಪುತ್ರರ ಕುರಿತು ನಾನು ಹೇಳುವುದನ್ನು ಕೇಳು: ಧೃತಿಮಾನ, ಅವ್ಯಯ, ಯುಕ್ತ, ತತ್ತ್ವದರ್ಶಿ, ನಿರುತ್ಸುಕ, ಅರಣ್ಯ, ಪ್ರಕಾಶ, ನಿರ್ಮೋಹ, ಸತ್ಯವಾಕ್ ಮತ್ತು ಕವಿ.
19007030a ಷಷ್ಠಂ ತೇ ಸಂಪ್ರವಕ್ಷ್ಯಾಮಿ ತನ್ನಿಬೋಧ ನರಾಧಿಪ |
19007030c ಭೃಗುರ್ನಭೋ ವಿವಸ್ವಾಂಶ್ಚ ಸುಧಾಮಾ ವಿರಜಾಸ್ತಥಾ ||
19007031a ಅತಿನಾಮಾ ಸಹಿಷ್ಣುಶ್ಚ ಸಪ್ತೈತೇ ವೈ ಮಹರ್ಷಯಃ |
19007031c ಚಾಕ್ಷುಷಸ್ಯಾಂತರೇ ತಾತ ಮನೋರ್ದೇವಾನಿಮಾಂಶೃಣು ||
ನರಾಧಿಪ! ಆರನೆಯದಾದ ಚಾಕ್ಷುಷ ಮನ್ವಂತರದ ಕುರಿತು ಹೇಳುತ್ತೇನೆ. ಕೇಳು. ಭೃಗು, ನಭ, ವಿವಸ್ವಾನ್, ಸುಧಾಮಾ, ವಿರಜಾ, ಅತಿನಾಮಾ, ಮತ್ತು ಸಹಿಷ್ಣು ಇವರುಗಳು ಆ ಮನ್ವಂತರದ ಸಪ್ತಮಹರ್ಷಿಗಳು. ಆ ಸಮಯದ ದೇವತೆಗಳ ಕುರಿತು ಕೇಳು.
19007032a ಆದ್ಯಾಃ ಪ್ರಭೂತಾ ಋಭವಃ ಪೃಥಗ್ಭಾವಾ ದಿವೌಕಸಃ |
19007032c ಲೇಖಾಶ್ಚ ನಾಮ ರಾಜೇಂದ್ರ ಪಂಚ ದೇವಗಣಾಃ ಸ್ಮೃತಾಃ |
19007032e ಋಷೇರಂಗಿರಸಃ ಪುತ್ರಾಃ ಮಹಾತ್ಮಾನೋ ಮಹೌಜಸಃ ||
19007033a ನಾಡ್ವಲೇಯಾ ಮಹಾರಾಜ ದಶ ಪುತ್ರಾಶ್ಚ ವಿಶ್ರುತಾಃ |
19007033c ಊರುಪ್ರಭೄತಯೋ ರಾಜನ್ಷಷ್ಠಂ ಮನ್ವಂತರಂ ಸ್ಮೃತಮ್ ||
ರಾಜೇಂದ್ರ! ಆದ್ಯ, ಪ್ರಭೂತ, ಋಭು, ಭಾವಾ, ಮತ್ತು ಲೇಖಾ ಎನ್ನುವ ಐದು ಪಂಚ ದೇವಗಣಗಳನ್ನು ಹೇಳುತ್ತಾರೆ. ಅವರು ಸ್ವರ್ಗದಲ್ಲಿ ವಾಸಿಸುತ್ತಿದ್ದರು. ಆ ಮಹಾತ್ಮ ಮಹೌಜಸರು ಋಷಿ ಅಂಗಿರಸನ ಪುತ್ರರಾಗಿದ್ದರು. ಅವರ ತಾಯಿ ನಡ್ವಲಾ. ಮಹಾರಾಜ! ರಾಜನ್! ಊರುವೇ ಮೊದಲಾದ ಹತ್ತು ಮಕ್ಕಳು ಆರನೆಯ ಮನು ಚಾಕ್ಷುಷನ ಮಕ್ಕಳೆಂದು ವಿಶ್ರುತರಾಗಿದ್ದರು.
19007034a ಅತ್ರಿರ್ವಸಿಷ್ಠೋ ಭಗವಾನ್ಕಶ್ಯಪಶ್ಚ ಮಹಾನೃಷಿಃ |
19007034c ಗೌತಮೋಽಥ ಭರದ್ವಾಜೋ ವಿಶ್ವಾಮಿತ್ರಸ್ತಥೈವ ಚ ||
19007035a ತಥೈವ ಪುತ್ರೋ ಭಗವಾನೃಚೀಕಸ್ಯ ಮಹಾತ್ಮನಃ |
19007035c ಸಪ್ತಮೋ ಜಮದಗ್ನಿಶ್ಚ ಋಷಯಃ ಸಾಂಪ್ರತಂ ದಿವಿ ||
ಏಳನೆಯ ಈ ವೈವಸ್ವತ ಮನ್ವಂತರದಲ್ಲಿ ಅತ್ರಿ, ವಸಿಷ್ಠ, ಭಗವಾನ್ ಕಶ್ಯಪ ಮಹಾನೃಷಿ, ಗೌತಮ, ಭರದ್ವಾಜ, ವಿಶ್ವಾಮಿತ್ರ ಮತ್ತು ಭಗವಾನ್ ಮಹಾತ್ಮ ಋಚೀಕನ ಪುತ್ರ ಜಮದಗ್ನಿ ಈ ಸಪ್ತ ಋಷಿಗಳು ದಿವಿಯಲ್ಲಿ ನೆಲೆಸಿದ್ದಾರೆ.
19007036a ಸಾಧ್ಯಾ ರುದ್ರಾಶ್ಚ ವಿಶ್ವೇ ಚ ಮರುತೋ ವಸವಸ್ತಥಾ |
19007036c ಆದಿತ್ಯಾಶ್ಚಾಶ್ವಿನೌ ಚೈವ ದೇವೌ ವೈವಸ್ವತೌ ಸ್ಮೃತೌ ||
19007037a ಮನೋರ್ವೈವಸ್ವತಸ್ಯೈತೇ ವರ್ತಂತೇ ಸಾಂಪ್ರತೇಽಂತರೇ |
19007037c ಇಕ್ಷ್ವಾಕುಪ್ರಮುಖಾಶ್ಚೈವ ದಶ ಪುತ್ರಾ ಮಹಾತ್ಮನಃ ||
ನಡೆಯುತ್ತಿರುವ ಈ ವೈವಸ್ವತ ಮನ್ವಂತರದಲ್ಲಿ ಸಾಧ್ಯರು, ರುದ್ರರು, ವಿಶ್ವೇದೇವರು, ಮರುತ್ತರು, ವಸುಗಳು, ಆದಿತ್ಯರು, ಮತ್ತು ವಿವಸ್ವತನ ಮಕ್ಕಳು ಅಶ್ವಿನಿಯರಿಬ್ಬರು ದೇವತೆಗಳೆಂದು ಹೇಳುತ್ತಾರೆ. ಮಹಾತ್ಮ ವೈವಸ್ವತನಿಗೆ ಇಕ್ಷ್ವಾಕುವೇ ಮೊದಲಾದ ಹತ್ತು ಪುತ್ರರಿದ್ದಾರೆ.
19007038a ಏತೇಷಾಂ ಕೀರ್ತಿತಾನಾಂ ತು ಮಹರ್ಷೀಣಾಂ ಮಹೌಜಸಾಮ್|
19007038c ರಾಜಪುತ್ರಾಶ್ಚ ಪೌತ್ರಾಶ್ಚ ದಿಕ್ಷು ಸರ್ವಾಸು ಭಾರತ ||
ಈ ಮಹೌಜಸ ಮಹರ್ಷಿಗಳ ರಾಜಪುತ್ರರು ಮತ್ತು ಪೌತ್ರರ ಕೀರ್ತಿಗಳು ಸರ್ವ ದಿಕ್ಕುಗಳಲ್ಲಿಯೂ ಹರಡಿವೆ.
19007039a ಮನ್ವಂತರೇಷು ಸರ್ವೇಷು ಪ್ರಾಗ್ದಿಶಃ ಸಪ್ತಸಪ್ತಕಾಃ |
19007039c ಸ್ಥಿತಾ ಲೋಕವ್ಯವಸ್ಥಾರ್ಥಂ ಲೋಕಸಂರಕ್ಷಣಾಯ ಚ ||
ಎಲ್ಲ ಮನ್ವಂತರಗಳಲ್ಲಿಯೂ ಹಿಂದೆ ಹೇಳಿದ ನಲವತ್ತೊಂಭತ್ತು ಋಷಿಗಳು ಲೋಕವನ್ನು ವ್ಯವಸ್ಥೆಯಲ್ಲಿಡಲೂ ಮತ್ತು ಲೋಕ ಸಂರಕ್ಷಣೆಗೂ ನೆಲೆಸಿರುತ್ತಾರೆ.
19007040a ಮನ್ವಂತರೇ ವ್ಯತಿಕ್ರಾಂತೇ ಚತ್ವಾರಃ ಸಪ್ತಕಾ ಗಣಾಃ |
19007040c ಕೃತ್ವಾ ಕರ್ಮ ದಿವಂ ಯಾಂತಿ ಬ್ರಹ್ಮಲೋಕಮನಾಮಯಮ್||
ಪ್ರತಿ ಮನ್ವಂತರವು ಮುಗಿಯಲು ಅವರಲ್ಲಿ ಇಪ್ಪತ್ತೆಂಟು ಋಷಿಗಳು ತಮ್ಮ ಕರ್ಮಗಳನ್ನು ಪೂರೈಸಿ ಸ್ವರ್ಗವನ್ನು ಸೇರಿ ಅನಾಯಮ ಬ್ರಹ್ಮಲೋಕವನ್ನು ಪಡೆಯುತ್ತಾರೆ.
19007041a ತತೋಽನ್ಯೇ ತಪಸಾ ಯುಕ್ತಾಃ ಸ್ಥಾನಮಾಪೂರಯಂತ್ಯುತ |
19007041c ಅತೀತಾ ವರ್ತಮಾನಾಶ್ಚ ಕ್ರಮೇಣೈತೇನ ಭಾರತ ||
ಭಾರತ! ಮನ್ವಂತರದ ಅಂತ್ಯದಲ್ಲಿ ಇತರ ಋಷಿಗಳು ತಪೋಬಲದಿಂದ ಅವರ ಪದವನ್ನು ಪಡೆದು ಸ್ಥಾನಗಳನ್ನು ಪೂರೈಸುತ್ತಾರೆ.
19007042a ಏತಾನ್ಯುಕ್ತಾನಿ ಕೌರವ್ಯ ಸಪ್ತಾತೀತಾನಿ ಭಾರತ |
19007042c ಮನ್ವಂತರಾಣಿ ಷಟ್ಚಾಪಿ ನಿಬೋಧಾನಾಗತಾನಿ ಮೇ ||
ಭಾರತ! ಕೌರವ್ಯ! ಹೀಗೆ ಕಳೆದು ಹೋಗಿರುವ ಆರನ್ನು ಸೇರಿ ಏಳು ಮನ್ವಂತರಗಳ ಕುರಿತು ಹೇಳಿಯಾಯಿತು. ಈಗ ಮುಂದೆ ಬರುವ ಮನ್ವಂತರಗಳ ಕುರಿತು ಕೇಳು.
19007043a ಸಾವರ್ಣಾ ಮನವಸ್ತಾತ ಪಂಚ ತಾಂಶ್ಚ ನಿಬೋಧ ಮೇ |
19007043c ಏಕೋ ವೈವಸ್ವತಸ್ತೇಷಾಂ ಚತ್ವಾರಸ್ತು ಪ್ರಜಾಪತೇಃ ||
19007044a ಪರಮೇಷ್ಠಿಸುತಾಸ್ತಾತ ಮೇರುಸಾವರ್ಣತಾಂಗತಾಃ |
19007044c ದಕ್ಷಸ್ಯೈತೇ ಹಿ ದೌಹಿತ್ರಾಃ ಪ್ರಿಯಾಯಾಸ್ತನಯಾ ನೃಪ |
19007044e ಮಹಾಂತಸ್ತಪಸಾ ಯುಕ್ತಾ ಮೇರುಪೃಷ್ಠೇ ಮಹೌಜಸಃ ||
ತಾತ! ಸಾವರ್ಣ ಮನುಗಳು ಐವರು. ಅವರ ಕುರಿತು ನನ್ನಿಂದ ಕೇಳು. ಅವರಲ್ಲಿ ಓರ್ವನು ವಿವಸ್ವತ ಸೂರ್ಯನ ಪುತ್ರನು. ಉಳಿದ ನಾಲ್ವರು ಪ್ರಜಾಪತಿ ಪರಮೇಷ್ಠಿಯ ಸುತರು. ಅವರು ದಕ್ಷನ ಮಗಳು ಪ್ರಿಯೆಯ ಪುತ್ರರು. ಆ ಮಹೌಜಸರು ಮೇರುಪರ್ವತದ ಮೇಲೆ ಮಹಾ ತಪಸ್ಸನ್ನು ಗೈಯುತ್ತಿರುವುದರಿಂದ ಅವರು ಮೇರುಸಾವರ್ಣಿಯರಾದರು.
19007045a ರುಚೇಃ ಪ್ರಜಾಪತೇಃ ಪುತ್ರೋ ರೌಚ್ಯೋ ನಾಮ ಮನುಃ ಸ್ಮೃತಃ|
19007045c ಭೂತ್ಯಾಂ ಚೋತ್ಪಾದಿತೋ ದೇವ್ಯಾಂ ಭೌತ್ಯೋ ನಾಮ ರುಚೇಃ ಸುತಃ ||
ಪ್ರಜಾಪತಿ ರುಚಿಯ ಪುತ್ರನನ್ನು ರೌಚ್ಯ ಮನುವೆಂದು ಹೇಳುತ್ತಾರೆ. ದೇವಿ ಭೂತಿಯಲ್ಲಿ ಹುಟ್ಟಿದ ರುಚಿಯ ಸುತನನ್ನು ಭೌತ್ಯ ಎಂದು ಕರೆಯುತ್ತಾರೆ.
19007046a ಅನಾಗತಾಶ್ಚ ಸಪ್ತೈತೇ ಸ್ಮೃತಾ ದಿವಿ ಮಹರ್ಷಯಃ |
19007046c ಮನೋರಂತರಮಾಸಾದ್ಯ ಸಾವರ್ಣಸ್ಯ ಹ ತಾಂಶೃಣು ||
ಬರುವ ಸಾವರ್ಣಿ ಮನ್ವಂತರದಲ್ಲಿ ದಿವಿಯಲ್ಲಿ ಕಾಣುವ ಸಪ್ತರ್ಷಿಗಳ ಕುರಿತು ಕೇಳು.
19007047a ರಾಮೋ ವ್ಯಾಸಸ್ತಥಾತ್ರೇಯೋ ದೀಪ್ತಿಮಾನಿತಿ ವಿಶ್ರುತಃ |
19007047c ಭಾರದ್ವಾಜಸ್ತಥಾ ದ್ರೌಣೀರಶ್ವತ್ಥಾಮಾ ಮಹಾದ್ಯುತಿಃ ||
19007048a ಗೌತಮಸ್ಯಾತ್ಮಜಶ್ಚೈವ ಶರದ್ವಾನ್ ಗೌತಮಃ ಕೃಪಃ |
19007048c ಕೌಶಿಕೋ ಗಾಲವಶ್ಚೈವ ರುರುಃ ಕಾಶ್ಯಪ ಏವ ಚ ||
19007049a ಏತೇ ಸಪ್ತ ಮಹಾತ್ಮಾನೋ ಭವಿಷ್ಯಾ ಮುನಿಸತ್ತಮಾಃ |
19007049c ಬ್ರಹ್ಮಣಃ ಸದೃಶಾಶ್ಚೈತೇ ಧನ್ಯಾಃ ಸಪ್ತರ್ಷಯಃ ಸ್ಮೃತಾಃ ||
ಪರಶುರಾಮ, ವ್ಯಾಸ, ದೀಪ್ತಿಮಾನನೆಂದು ವಿಶ್ರುತನಾದ ಅತ್ರಿಯ ಮಗ, ಭರದ್ವಾಜನ ವಂಶದಲ್ಲಿ ಹುಟ್ಟಿದ ದ್ರೌಣಿ ಮಹಾದ್ಯುತಿ ಅಶ್ವತ್ಥಾಮಾ, ಗೌತಮನ ಮಗ ಶರದ್ವತನ ಮಗ ಗೌತಮಿ ಕೃಪ, ಕೌಶಿಕ ಗಾಲವ ಮತ್ತು ಕಾಶ್ಯಪ ರುರು – ಈ ಮಹಾತ್ಮಾ ಮುನಿಸತ್ತಮರು ಭವಿಷ್ಯದ ಸಪ್ತರ್ಷಿಗಳು. ಬ್ರಹ್ಮನ ಸಮಾನರಾಗಿರುವ ಇವರು ಧನ್ಯ ಸಪ್ತರ್ಷಿಗಳೆಂದು ತಿಳಿಯಲ್ಪಟ್ಟಿದ್ದಾರೆ.
19007050a ಅಭಿಜಾತ್ಯಾಚ ತಪಸಾ ಮಂತ್ರವ್ಯಾಕರಣೈಸ್ತಥಾ |
19007050c ಬ್ರಹ್ಮಲೋಕಪ್ರತಿಷ್ಠಾಸ್ತು ಸ್ಮೃತಾಃ ಸಪ್ತರ್ಷಯೋಽಮಲಾಃ ||
ಈ ಅಮಲ ಸಪ್ತರ್ಷಿಗಳು ಜನ್ಮ, ತಪ, ಮಂತ್ರ ಮತ್ತು ವ್ಯಾಕರಣಗಳ ಪ್ರಭಾವದಿಂದ ಬ್ರಹ್ಮಲೋಕದಲ್ಲಿದ್ದಾರೆ.
19007051a ಭೂತಭವ್ಯಭವಜ್ಜ್ಞಾನಂ ಬುದ್ಧ್ವಾ ಚೈವ ತು ಯೈಃ ಸ್ವಯಮ್|
19007051c ತಪಸಾ ವೈ ಪ್ರಸಿದ್ಧಾ ಯೇ ಸಂಗತಾಃ ಪ್ರವಿಚಿಂತಕಾಃ ||
ಈ ಋಷಿಗಳು ತಮ್ಮದೇ ತಪಸ್ಸಿನ ಪ್ರಭಾವದಿಂದ ಭೂತ-ಭವ್ಯ-ಭವಿಷ್ಯಗಳ ಜ್ಞಾನವನ್ನು ಪಡೆದು ಪರಸ್ಪರರೊಡನೆ ಪರಮಾತ್ಮ ತತ್ತ್ವದ ಚಿಂತನೆ ಮಾಡುತ್ತಿರುತ್ತಾರೆ.
19007052a ಮಂತ್ರವ್ಯಾಕರಣಾದ್ಯೈಶ್ಚ ಐಶ್ವರ್ಯಾತ್ಸರ್ವಶಶ್ಚ ಯೇ |
19007052c ಏತಾನ್ಭಾರ್ಯಾಂದ್ವಿಜೋ ಜ್ಞಾತ್ವಾ ನೈಷ್ಠಿಕಾನಿ ಚ ನಾಮ ಚ||
ಇವರೆಲ್ಲರೂ ಮಂತ್ರ-ವ್ಯಾಕರಣಾದಿಗಳು ಮತ್ತು ಐಶ್ವರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ದ್ವಿಜರು ಇವರ ಹೆಸರುಗಳು ಮತ್ತು ನೈಷ್ಠಿಕಗಳನ್ನು ತಿಳಿದು ಶುಭವನ್ನು ಪಡೆಯುತ್ತಾರೆ.
19007053a ಸಪ್ತೈತೇ ಸಪ್ತಭಿಶ್ಚೈವ ಗುಣೈಃ ಸಪ್ತರ್ಷಯಃ ಸ್ಮೃತಾಃ |
19007053c ದೀರ್ಘಾಯುಷೋ ಮಂತ್ರಕೃತ ಈಶ್ವರಾ ದೀರ್ಘಚಕ್ಷುಷಃ ||
ಈ ಏಳು ಮಂದಿ ತಮ್ಮ ಏಳು ಗುಣಗಳಿಂದ ಸಪ್ತರ್ಷಿಗಳೆಂದು ಕರೆಯಲ್ಪಟ್ಟಿದ್ದಾರೆ. ಇವರು ದೀರ್ಘಾಯುಗಳು. ಮಂತ್ರಕೃತರು. ಈಶ್ವರರು ಮತ್ತು ದೀರ್ಘದರ್ಶಿಗಳು.
19007054a ಬುದ್ಧ್ಯಾ ಪ್ರತ್ಯಕ್ಷಧರ್ಮಾಣೋ ಗೋತ್ರಪ್ರಾವರ್ತಕಾಸ್ತಥಾ |
19007054c ಕೃತಾದಿಷು ಯುಗಾಖ್ಯೇಷು ಸರ್ವೇಷ್ವೇವ ಪುನಃ ಪುನಃ ||
19007055a ಪ್ರಾವರ್ತಯಂತಿ ತೇ ವರ್ಣಾನಾಶ್ರಮಾಂಶ್ಚೈವ ಸರ್ವಶಃ |
19007055c ಸಪ್ತರ್ಷಯೋ ಮಹಾಭಾಗಾಃಸತ್ಯಧರ್ಮಪರಾಯಣಾಃ ||
ಧರ್ಮಗಳನ್ನು ಪ್ರತ್ಯಕ್ಷ ತಿಳಿದುಕೊಂಡಿರುವ ಇವರು ಗೋತ್ರಪ್ರವರ್ತಕರೂ ಆಗಿದ್ದಾರೆ. ಕೃತಾದಿ ಪ್ರತಿಯೊಂದು ಯುಗದಲ್ಲಿಯೂ ಸತ್ಯಧರ್ಮ ಪರಾಯಣರಾದ ಈ ಮಹಾಭಾಗ ಸಪ್ತರ್ಷಿಗಳು ಪುನಃ ಪುನಃ ವರ್ಣಗಳ ಮತ್ತು ಆಶ್ರಮಗಳ ಧರ್ಮಗಳನ್ನು ಎಲ್ಲಕಡೆ ನಡೆಸಿಕೊಂಡು ಬರುತ್ತಾರೆ.
19007056a ತೇಷಾಂಚೈವಾನ್ವಯೋತ್ಪನ್ನಾಃ ಜಾಯಂತೀಹ ಪುನಃ ಪುನಃ |
19007056c ಮಂತ್ರಬ್ರಾಹ್ಮಣಕರ್ತಾರೋ ಧರ್ಮೇ ಪ್ರಶಿಥಿಲೇ ತಥಾ ||
ಧರ್ಮವು ಶಿಥಿಲವಾದಾಗಲೆಲ್ಲಾ ಇವರ ಕುಲದಲ್ಲೇ ಉತ್ಪನ್ನರಾದವರು ಪುನಃ ಪುನಃ ಜನ್ಮತಾಳಿ ಮಂತ್ರ-ಬ್ರಾಹ್ಮಣರನ್ನು ಪುನಃಸ್ಥಾಪಿಸುತ್ತಾರೆ.
19007057a ಯಸ್ಮಾಚ್ಚ ವರದಾಃ ಸಪ್ತ ಪರೇಭ್ಯಶ್ಚಾಪರಾಃ ಸ್ಮೃತಾಃ |
19007057c ತಸ್ಮಾನ್ನ ಕಾಲೋ ನ ವಯಃ ಪ್ರಮಾಣಮೃಷಿಭಾವನೇ ||
ವರಗಳನ್ನು ನೀಡುವ ಮತ್ತು ಇತರರು ಸ್ಮರಿಸಿಕೊಳ್ಳುವ ಈ ಸಪ್ತರ್ಷಿಗಳ ಕಾಲ-ವಯಸ್ಸುಗಳ ಪರಿಣಾಮಗಳನ್ನು ಯೋಚಿಸಲೂ ಸಾಧ್ಯವಿಲ್ಲ.
19007058a ಏಷ ಸಪ್ತರ್ಷಿಕೋದ್ದೇಶೋ ವ್ಯಾಖ್ಯಾತಸ್ತೇ ಮಯಾ ನೃಪ |
19007058c ಸಾವರ್ಣಸ್ಯ ಮನೋಃ ಪುತ್ರಾನ್ಭವಿಷ್ಯಾಂಶೃಣು ಸತ್ತಮ ||
ನೃಪ! ಸತ್ತಮ! ಈ ಸಪ್ತರ್ಷಿಗಳ ಕುರಿತು ನಿನಗೆ ಹೇಳಿದ್ದೇನೆ. ಈಗ ಸಾವರ್ಣ ಮನುವಿಗೆ ಮುಂದಾಗುವ ಮಕ್ಕಳ ಕುರಿತು ಕೇಳು.
19007059a ವರೀಯಾಂಶ್ಚಾವರೀಯಾಂಶ್ಚ ಸಂಮತೋ ಧೃತಿಮಾನ್ವಸುಃ |
19007059c ಚರಿಷ್ಣುರಪ್ಯಧೃಷ್ಣುಶ್ಚ ವಾಜಃ ಸುಮತಿರೇವ ಚ |
19007059e ಸಾವರ್ಣಸ್ಯ ಮನೋಃ ಪುತ್ರಾಃ ಭವಿಷ್ಯಾ ದಶ ಭಾರತ ||
ಭಾರತ! ವರೀಯಾನ್, ಅವರೀಯಾನ್, ಸಂಮತ, ಧೃತಿಮಾನ್, ವಸು, ಚರಿಷ್ಣು, ಅಧೃಷ್ಣು, ವಾಜ, ಸುಮತಿ ಮತ್ತು ಇನ್ನೊಬ್ಬನು – ಇವರು ಸಾವರ್ಣ ಮನುವಿಗೆ ಭವಿಷ್ಯದಲ್ಲಾಗುವ ಹತ್ತು ಮಕ್ಕಳು.
19007060a ಪ್ರಥಮೇ ಮೇರುಸಾವರ್ಣಃ ಪ್ರವಕ್ಷ್ಯಾಮಿ ಮುನೀಂಶೃಣು |
19007060c ಮೇಧಾತಿಥಿಸ್ತು ಪೌಲಸ್ತ್ಯೋ ವಸುಃ ಕಾಶ್ಯಪ ಏವ ಚ ||
19007061a ಜ್ಯೋತಿಷ್ಮಾನ್ಭಾರ್ಗವಶ್ಚೈವ ದ್ಯುತಿಮಾನಂಗಿರಾಸ್ತಥಾ |
19007061c ಸಾವನಶ್ಚೈವ ವಾಸಿಷ್ಠ ಆತ್ರೇಯೋ ಹವ್ಯವಾಹನಃ ||
19007062a ಪೌಲಹಃ ಸಪ್ತ ಇತ್ಯೇತೇ ಮುನಯೋ ರೋಹಿತೇಽಂತರೇ |
19007062c ದೇವತಾನಾಂ ಗಣಾಸ್ತತ್ರ ತ್ರಯ ಏವ ನರಾಧಿಪ ||
ಮೊದಲು ಮೇರುಸಾವರ್ಣಿಯ ಸಮಕಾಲೀನ ಮುನಿಗಳ ಕುರಿತು ಹೇಳುತ್ತೇನೆ. ಕೇಳು. ಪೌಲಸ್ತ್ಯ ಮೇಧಾತಿಥಿ, ಕಾಶ್ಯಪ ವಸು, ಭಾರ್ಗವ ಜ್ಯೋತಿಷ್ಮಾನ್, ಆಂಗಿರಸ ದ್ಯುತಿಮಾನ್, ವಾಸಿಷ್ಠ ಸಾವನ, ಆತ್ರೇಯ ಹವ್ಯವಾಹನ, ಮತ್ತು ಪೌಲಹ ಇವರು ರೋಹಿತ[2] ಮನ್ವಂತರದಲ್ಲಿರುವ ಸಪ್ತರ್ಷಿಗಳು. ನರಾಧಿಪ! ಆ ಮನ್ವಂತರದಲ್ಲಿ ಮೂರು ದೇವತಾಗಣಗಳಿರುತ್ತವೆ.
19007063a ದಕ್ಷಪುತ್ರಸ್ಯ ಪುತ್ರಾಸ್ತೇ ರೋಹಿತಸ್ಯ ಪ್ರಜಾಪತೇಃ |
19007063c ಮನೋಃ ಪುತ್ರೋ ಧೃಷ್ಟಕೇತುಃ ಪಂಚಹೋತ್ರೋ ನಿರಾಕೃತಿಃ||
19007064a ಪೃಥುಃಶ್ರವಾ ಭೂರಿಧಾಮಾ ಋಚೀಕೋಷ್ಟಹತೋ ಗಯಃ |
19007064c ಪ್ರಥಮಸ್ಯ ತು ಸಾವರ್ಣೇರ್ನವ ಪುತ್ರಾ ಮಹೌಜಸಃ ||
ಪ್ರಜಾಪತಿ ದಕ್ಷಪುತ್ರ ರೋಹಿತ ಮನುವಿನ ಪುತ್ರರು ಧೃಷ್ಟಕೇತು, ಪಂಚಹೋತ್ರ, ನಿರಾಕೃತಿ, ಪೃಥು, ಶ್ರವ, ಭೂರಿಧಾಮಾ, ಋಚೀಕ, ಅಷ್ಟಹತ, ಮತ್ತು ಗಯ. ಈ ಮಹೌಜಸರು ಪ್ರಥಮ ಸಾವರ್ಣಿಯಲ್ಲಿ ಹುಟ್ಟುವ ಒಂಭತ್ತು ಮಕ್ಕಳು.
19007065a ದಶಮೇ ತ್ವಥ ಪರ್ಯಾಯೇ ದ್ವಿತೀಯಸ್ಯಾಂತರೇ ಮನೋಃ
19007065c ಹವಿಷ್ಮಾನ್ಪೌಲಹಶ್ಚೈವ ಸುಕೃತಿಶ್ಚೈವ ಭಾರ್ಗವಃ ||
19007066a ಅಪೋಮೂರ್ತಿಸ್ತಥಾತ್ರೇಯೋ ವಾಸಿಷ್ಠಶ್ಚಾಷ್ಟಮಃ ಸ್ಮೃತಃ |
19007066c ಪೌಲಸ್ತ್ಯಃ ಪ್ರಮಿತಿಶ್ಚೈವ ನಭೋಗಶ್ಚೈವ ಕಾಶ್ಯಪಃ |
19007066e ಅಂಗಿರಾ ನಭಸಃ ಸತ್ಯಃ ಸಪ್ತೈತೇ ಪರಮರ್ಷಯಃ ||
ಹತ್ತನೆಯ ಮನ್ವಂತರ ಅಥವಾ ಎರಡನೇ ದಕ್ಷಸಾವರ್ಣಿ ಮನುವಿನ ಸಮಯದಲ್ಲಿ ಪೌಲಹ ಹವಿಷ್ಮಾನ್, ಭಾರ್ಗವ ಸುಕೃತಿ, ಆತ್ರೇಯ ಅಪೋಮೂರ್ತಿ, ವಾಷಿಷ್ಠ ಅಷ್ಟಮ, ಪೌಲಸ್ತ್ಯ ಪ್ರಮಿತಿ, ಕಾಶ್ಯಪ ನಭೋಗ ಮತ್ತು ಅಂಗಿರಾ ನಭಸನ ಮಗ ಸತ್ಯ – ಈ ಏಳು ಮಂದಿ ಪರಮ ಋಷಿಗಳಾಗುತ್ತಾರೆ.
19007067a ದೇವತಾನಾಂ ಗಣೌ ದ್ವೌ ತೌ ಋಷಿಮಂತ್ರಾಶ್ಚ ಯೇ ಸ್ಮೃತಾಃ|
19007067c ಮನೋಃ ಸುತೋತ್ತಮೌಜಾಶ್ಚ ನಿಕುಷಂಜಶ್ಚ ವೀರ್ಯವಾನ್||
19007068a ಶತಾನೀಕೋ ನಿರಾಮಿತ್ರೋ ವೃಷಸೇನೋ ಜಯದ್ರಥಃ |
19007068c ಭೂರಿದ್ಯುಮ್ನಃ ಸುವರ್ಚಾಶ್ಚ ದಶ ತ್ವೇತೇ ಮನೋಃ ಸುತಾಃ ||
ಆ ಮನ್ವಂತರದಲ್ಲಿ ದೇವತೆಗಳ ಎರಡು ಗಣಗಳಿರುತ್ತವೆ ಮತ್ತು ಋಷಿಮಂತ್ರದ ಮೂಲಕ ಯಾವದೇವತೆಯನ್ನೂ ಆಹ್ವಾನಿಸಬಹುದೆಂದು ಹೇಳುತ್ತಾರೆ. ಮನುಸುತ, ಉತ್ತಮೌಜ, ನಿಕುಷಂಜ, ವೀರ್ಯವಾನ್, ಶತಾನೀಕ, ನಿರಾಮಿತ್ರ, ವೃಷಸೇನ, ಜಯದ್ರಥ, ಭೂರಿದ್ಯುಮ್ನ ಮತ್ತು ಸುವರ್ಚ – ಇವರು ಆ ಮನುವಿಗಾಗುವ ಹತ್ತು ಮಕ್ಕಳು.
19007069a ಏಕಾದಶೇಽಥ ಪರ್ಯಾಯೇ ತೄತೀಯಸ್ಯಾಂತರೇ ಮನೋಃ |
19007069c ತಸ್ಯ ಸಪ್ತ ಋಷೀಂಶ್ಚಾಪಿ ಕೀರ್ತ್ಯಮಾನಾನ್ನಿಬೋಧ ಮೇ ||
ಈಗ ಹನ್ನೊಂದನೆಯ ಅಥವಾ ಮೂರನೆಯ ಸಾವರ್ಣಿ ಮನ್ವಂತರದಲ್ಲಿ ಆಗುವ ಸಪ್ತರ್ಷಿಗಳ ಕುರಿತು ಹೇಳುತ್ತೇನೆ. ಕೇಳು.
19007070a ಹವಿಷ್ಮಾನ್ಕಾಶ್ಯಪಶ್ಚಾಪಿ ಹವಿಷ್ಮಾನ್ಯಶ್ಚ ಭಾರ್ಗವಃ |
19007070c ತರುಣಶ್ಚ ತಥಾತ್ರೇಯೋ ವಾಸಿಷ್ಠಸ್ತ್ವನಘಸ್ತಥಾ ||
19007071a ಅಂಗಿರಾಶ್ಚೋದಧಿಷ್ಣ್ಯಶ್ಚ ಪೌಲಸ್ತ್ಯೋ ನಿಶ್ಚರಸ್ತಥಾ |
19007071c ಪುಲಹಶ್ಚಾಗ್ನಿತೇಜಾಶ್ಚ ಭಾವ್ಯಾಃ ಸಪ್ತ ಮಹರ್ಷಯಃ ||
ಕಾಶ್ಯಪ ಹವಿಷ್ಮಾನ್, ಭಾರ್ಗವ ಹವಿಷ್ಮಾನ್, ಆತ್ರೇಯ ತರುಣ, ವಾಸಿಷ್ಠ ಅನಘ, ಅಂಗಿರಾ ಚೋದಧಿಷ್ಣ, ಪೌಲಸ್ತ್ಯ ನಿಶ್ಚರ ಮತ್ತು ಪುಲಹ ಅಗ್ನಿತೇಜ ಇವರುಗಳು ಮುಂದಾಗುವ ಸಪ್ತರ್ಷಿಗಳು.
19007072a ಬ್ರಹ್ಮಣಸ್ತು ಸುತಾ ದೇವಾ ಗಣಾಸ್ತೇಷಾಂ ತ್ರಯಃ ಸ್ಮೃತಾಃ |
19007072c ಸಂವರ್ತಕಃ ಸುಶರ್ಮಾ ಚ ದೇವಾನೀಕಃ ಪುರೂಡ್ವಹಃ ||
19007073a ಕ್ಷೇಮಧನ್ವಾ ದೃಢಾಯುಶ್ಚ ಆದರ್ಶಃ ಪಂಡಕೋ ಮನುಃ |
19007073c ಸಾವರ್ಣಸ್ಯ ತು ಪುತ್ರಾ ವೈ ತೃತೀಯಸ್ಯ ನವ ಸ್ಮೃತಾಃ ||
ಇವರೆಲ್ಲರೂ ಬ್ರಹ್ಮನ ಮಾನಸ ಪುತ್ರರು. ಆ ಮನ್ವಂತರದಲ್ಲಿ ಮೂರು ದೇವಗಣಗಳಿರುತ್ತವೆಯೆಂದಿದೆ. ಸಂವರ್ತಕ, ಸುಶರ್ಮಾ, ದೇವಾನೀಕ, ಪುರೂಡ್ವಹ, ಕ್ಷೇಮಧನ್ವಾ, ದೃಢಾಯು, ಆದರ್ಶ, ಪಂಡಕ ಮತ್ತು ಮನು ಇವರು ಮೂರನೇ ಸಾವರ್ಣಿಗಾಗುವ ಒಂಭತ್ತು ಮಕ್ಕಳು.
19007074a ಚತುರ್ಥಸ್ಯ ತು ಸಾವರ್ಣೇರೃಷೀನ್ಸಪ್ತ ನಿಬೋಧ ಮೇ |
19007074c ದ್ಯುತಿರ್ವಸಿಷ್ಠಪುತ್ರಶ್ಚ ಆತ್ರೇಯಃ ಸುತಪಾಸ್ತಥಾ ||
19007075a ಅಂಗಿರಾಸ್ತಪಸೋ ಮೂರ್ತಿಸ್ತಪಸ್ವೀ ಕಾಶ್ಯಪಸ್ತಥಾ |
19007075c ತಪೋಶನಶ್ಚ ಪೌಲಸ್ತ್ಯಃ ಪೌಲಹಶ್ಚ ತಪೋ ರವಿಃ ||
19007076a ಭಾರ್ಗವಃ ಸಪ್ತಮಸ್ತೇಷಾಂ ವಿಜ್ಞೇಯಸ್ತು ತಪೋ ಧೃತಿಃ |
19007076c ಪಂಚ ದೇವಗಣಾಃ ಪ್ರೋಕ್ತಾ ಮಾನಸಾ ಬ್ರಹ್ಮಣಶ್ಚ ತೇ ||
ನಾಲ್ಕನೇ ಸಾವರ್ಣಿಯ ಮನ್ವಂತರದಲ್ಲಾಗುವ ಸಪ್ತರ್ಷಿಗಳ ಕುರಿತು ಕೇಳು. ವಸಿಷ್ಠಪುತ್ರ ದ್ಯುತಿ, ಆತ್ರೇಯ ಸುತಪಾ, ಅಂಗಿರ ತಪೋಮೂರ್ತಿ, ಕಾಶ್ಯಪ ತಪಸ್ವಿ, ಪೌಲಸ್ತ್ಯ ತಪೋಶನ, ಪೌಲಹ ತಪೋರವಿ ಮತ್ತು ಭಾರ್ಗವ ತಪೋಧೃತಿ – ಇವರು ಆ ಸಪ್ತರ್ಷಿಗಳು. ಆಗ ಐದು ದೇವಗಣಗಳಿರುತ್ತವೆ. ಇವರೆಲ್ಲರೂ ಬ್ರಹ್ಮನ ಮಾನಸಪುತ್ರರಾಗುತ್ತಾರೆ ಎಂದು ಹೇಳುತ್ತಾರೆ.
19007077a ದೇವವಾಯುರದೂರಶ್ಚ ದೇವಶ್ರೇಷ್ಠೋ ವಿದೂರಥಃ |
19007077c ಮಿತ್ರವಾನ್ಮಿತ್ರದೇವಶ್ಚ ಮಿತ್ರಸೇನಶ್ಚ ಮಿತ್ರಕೃತ್ |
19007077e ಮಿತ್ರಬಾಹುಃ ಸುವರ್ಚಾಶ್ಚ ದ್ವಾದಶಸ್ಯ ಮನೋಃ ಸುತಾಃ ||
ದೇವವಾಯು, ಅದೂರ, ದೇವಶ್ರೇಷ್ಠ, ವಿದೂರಥ, ಮಿತ್ರವಾನ್, ಮಿತ್ರದೇವ, ಮಿತ್ರಸೇನ, ಮಿತ್ರಕೃತ್, ಮಿತ್ರಬಾಹು, ಮತ್ತು ಸುವರ್ಚ ಇವರು ಹನ್ನೆರಡನೇ ಮನುವಿನ ಪುತ್ರರಾಗುತ್ತಾರೆ.
19007078a ತ್ರಯೋದಶೇ ಚ ಪರ್ಯಾಯೇ ಭಾವ್ಯೇ ಮನ್ವಂತರೇ ಮನೋಃ|
19007078c ಅಂಗಿರಾಶ್ಚೈವ ಧೃತಿಮಾನ್ಪೌಲಸ್ತ್ಯೋ ಹವ್ಯಪಸ್ತು ಯಃ ||
19007079a ಪೌಲಹಸ್ತತ್ತ್ವದರ್ಶೀ ಚ ಭಾರ್ಗವಶ್ಚ ನಿರುತ್ಸುಕಃ |
19007079c ನಿಷ್ಪ್ರಕಂಪಸ್ತಥಾತ್ರೇಯೋ ನಿರ್ಮೋಹಃ ಕಾಶ್ಯಪಸ್ತಥಾ ||
19007080a ಸುತಪಾಶ್ಚೈವ ವಾಸಿಷ್ಠಃ ಸಪ್ತೈತೇ ತು ಮಹರ್ಷಯಃ |
19007080c ತ್ರಯ ಏವ ಗಣಾಃ ಪ್ರೋಕ್ತಾ ದೇವತಾನಾಂ ಸ್ವಯಂಭುವಾ ||
ಬರುವ ಹದಿಮೂರನೇ ಮನ್ವಂತರದಲ್ಲಿ ಆಂಗಿರ ಧೃತಿಮಾನ್, ಪೌಲಸ್ತ್ಯ ಹವ್ಯಪಸ್ತು, ಪೌಲಹ ತತ್ತ್ವದರ್ಶೀ, ಭಾರ್ಗವ ನಿರುತ್ಸುಕ, ಆತ್ರೇಯ ನಿಷ್ಪ್ರಕಂಪ, ಕಾಶ್ಯಪ ನಿರ್ಮೋಹ ಮತ್ತು ವಾಸಿಷ್ಠ ಸುತಪಾ ಇವರು ಸಪ್ತ ಮಹರ್ಷಿಗಳಾಗುತ್ತಾರೆ. ಆಗ ಮೂರು ದೇವತಾಗಣಗಳಿರುತ್ತಾರೆ ಎಂದು ಸ್ವಯಂಭುವು ಹೇಳಿದ್ದಾನೆ.
19007081a ತ್ರಯೋದಶಸ್ಯ ಪುತ್ರಾಸ್ತೇ ವಿಜ್ಞೇಯಾಸ್ತು ರುಚೇಃ ಸುತಾಃ |
19007081c ಚಿತ್ರಸೇನೋ ವಿಚಿತ್ರಶ್ಚ ನಯೋ ಧರ್ಮಭೃತೋ ಧೃತಃ ||
19007082a ಸುನೇತ್ರಃ ಕ್ಷತ್ರವೃದ್ಧಿಶ್ಚ ಸುತಪಾ ನಿರ್ಭಯೋ ದೃಢಃ |
19007082c ರೌಚ್ಯಸ್ಯೈತೇ ಮನೋಃ ಪುತ್ರಾಃ ಅಂತರೇ ತು ತ್ರಯೋದಶೇ ||
ಹದಿಮೂರನೇ ಮನು ರುಚಿಯ ಮಕ್ಕಳ ಕುರಿತು ತಿಳಿದುಕೋ. ಚಿತ್ರಸೇನ, ವಿಚಿತ್ರ, ನಯ, ಧರ್ಮಭೃತ, ಧೃತ, ಸುನೇತ್ರ, ಕ್ಷತ್ರವೃದ್ಧಿ, ಸುತಪಾ, ನಿರ್ಭಯ, ದೃಢ – ಇವರು ಹದಿಮೂರನೆಯ ಮನ್ವಂತರದಲ್ಲಿ ರುಚಿ ಮನುವಿನ ಮಕ್ಕಳಾಗುತ್ತಾರೆ.
19007083a ಚತುರ್ದಶೇಽಥ ಪರ್ಯಾಯೇ ಭೌತ್ಯಸ್ಯೈವಾಂತರೇ ಮನೋಃ|
19007083c ಭಾರ್ಗವೋ ಹ್ಯತಿಬಾಹುಶ್ಚ ಶುಚಿರಾಂಗಿರಸಸ್ತಥಾ ||
19007084a ಯುಕ್ತಶ್ಚೈವ ತಥಾತ್ರೇಯಃ ಶುಕ್ರೋ ವಾಸಿಷ್ಠ ಏವ ಚ |
19007084c ಅಜಿತಃ ಪೌಲಹಶ್ಚೈವ ಅಂತ್ಯಾಃ ಸಪ್ತರ್ಷಯಶ್ಚ ತೇ ||
ಹದಿನಾಲ್ಕನೇ ಭೌತ್ಯ ಮನ್ವಂತರದಲ್ಲಿ ಭಾರ್ಗವ ಅತಿಬಾಹು, ಆಂಗಿರ ಶುಚಿ, ಆಂಗಿರ ಯುಕ್ತ, ಆತ್ರೇಯ ಯುಕ್ತ, ಆತ್ರೇಯ ಶುಕ್ರ, ವಾಸಿಷ್ಠ ಶುಕ್ರ, ಮತ್ತು ಪೌಲಹ ಅಜಿತ – ಇವರು ಅಂತಿಮ ಸಪ್ತರ್ಷಿಗಳಾಗುತ್ತಾರೆ.
19007085a ಏತೇಷಾಂ ಕಲ್ಯ ಉತ್ಥಾಯ ಕೀರ್ತನಾತ್ಸುಖಮೇಧತೇ |
19007085c ಯಶಶ್ಚಾಪ್ನೋತಿ ಸುಮಹದಾಯುಷ್ಮಾಂಶ್ಚ ಭವೇನ್ನರಃ ||
19007086a ಅತೀತಾನಾಗತಾನಾಂ ವೈ ಮಹರ್ಷೀಣಾಂಸದಾ ನರಃ |
19007086c ದೇವತಾನಾಂ ಗಣಾಃ ಪ್ರೋಕ್ತಾಃ ಪಂಚ ವೈ ಭರತರ್ಷಭ ||
ಬೆಳಿಗ್ಗೆ ಎದ್ದು ಈ ಹಿಂದೆ ಆಗಿಹೋದ ಮತ್ತು ಮುಂದೆ ಆಗಲಿರುವ ಮಹರ್ಷಿಗಳ ಕೀರ್ತನೆಯನ್ನು ಸದಾ ಮಾಡುವುದರಿಂದ ಮನುಷ್ಯನು ಸುಖವನ್ನು ಪಡೆಯುತ್ತಾನೆ. ಯಶಸ್ಸನ್ನು ಹೊಂದುತ್ತಾನೆ. ಮತ್ತು ಮಹಾ ಆಯುಷ್ಮಂತನಾಗುತ್ತಾನೆ. ಭರತರ್ಷಭ! ಆ ಮನ್ವಂತರದಲ್ಲಿ ದೇವತಾಗಣಗಳು ಐದು ಎಂದು ಹೇಳುತ್ತಾರೆ.
19007087a ತರಂಗಭೀರುರ್ವಪ್ರಶ್ಚ ತರಸ್ವಾನುಗ್ರ ಏವ ಚ |
19007087c ಅಭಿಮಾನೀ ಪ್ರವೀಣಶ್ಚ ಜಿಷ್ಣುಃ ಸಂಕ್ರಂದನಸ್ತಥಾ ||
19007088a ತೇಜಸ್ವೀ ಸಬಲಶ್ಚೈವ ಭೌತ್ಯಸ್ಯೈತೇ ಮನೋಃ ಸುತಾಃ |
19007088c ಭೌತ್ಯಸ್ಯೈವಾಧಿಕಾರೇ ತು ಪೂರ್ಣಂ ಕಲ್ಪಸ್ತು ಪೂರ್ಯತೇ ||
ತರಂಗಭೀರು, ವಪ್ರ, ತರಸ್ವಾನ್, ಉಗ್ರ, ಅಭಿಮಾನಿ, ಪ್ರವೀಣ, ಜಿಷ್ಣು, ಸಂಕ್ರಂದನ, ತೇಜಸ್ವೀ, ಮತ್ತು ಸಬಲ ಇವರು ಭೌತ್ಯ ಮನುವಿನ ಮಕ್ಕಳು. ಭ್ಯೌತ್ಯನ ಅಧಿಕಾರವು ಪೂರ್ಣವಾದಾಗ ಕಲ್ಪವೂ ಪೂರ್ಣವಾಗುತ್ತದೆ.
19007089a ಇತ್ಯೇತೇ ನಾಮತೋಽತೀತಾಃ ಮನವಃ ಕೀರ್ತಿತಾ ಮಯಾ |
19007089c ತೈರಿಯಂ ಪೄಥಿವೀ ತಾತ ಸಮುದ್ರಾಂತಾ ಸಪತ್ತನಾ ||
19007090a ಪೂರ್ಣಂ ಯುಗಸಹಸ್ರಂ ತು ಪರಿಪಾಲ್ಯಾ ನರಾಧಿಪ |
19007090c ಪ್ರಜಾಭಿಶ್ಚೈವ ತಪಸಾ ಸಂಹಾರಸ್ತೇಷು ನಿತ್ಯಶಃ ||
ಹೀಗೆ ನಾನು ಕಳೆದುಹೋದ ಮತ್ತು ಮುಂದೆ ಬರಲಿರುವ ಮನ್ವಂತರಗಳ ಹೆಸರುಗಳನ್ನು ಹೇಳಿರುತ್ತೇನೆ. ತಾತ! ನರಾಧಿಪ! ಇವರುಗಳು ಪ್ರತಿಯೊಬ್ಬರೂ ತಮ್ಮ ತಪಸ್ಸಿನ ಮೂಲಕ ಸಹಸ್ರ ಯುಗಗಳು ಪೂರ್ಣವಾಗುವವರೆಗೆ ಪಟ್ಟಣಗಳೊಂದಿಗೆ ಸಮುದ್ರದ ಪರ್ಯಂತದವರೆಗಿನ ಈ ಪೃಥ್ವಿಯನ್ನು ಮತ್ತು ಪ್ರಜೆಗಳನ್ನು ಪಾಲಿಸುತ್ತಾರೆ. ನಿತ್ಯವೂ ಸಂಹಾರಮಾಡುತ್ತಾರೆ ಕೂಡ.”
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಮನ್ವಂತರವರ್ಣನಂ ಸಪ್ತಮೋಽಧ್ಯಾಯಃ|
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಮನ್ವಂತರವರ್ಣನ ಎನ್ನುವ ಏಳನೆಯ ಅಧ್ಯಾಯವು.
[1] ಬ್ರಹ್ಮಸಾವರ್ಣಿ, ರುದ್ರಸಾವರ್ಣಿ, ಮೇರುಸಾವರ್ಣಿ ಮತ್ತು ದಕ್ಷಸಾವರ್ಣಿ – ಈ ನಾಲ್ವರೂ ಮೇರುಸಾವರ್ಣಿ ಮನುಗಳು. ಇವರು ಮೇರು ಪರ್ವತದ ಮೇಲೆ ತಪಸ್ಸನ್ನಾಚರಿಸುತ್ತಿದ್ದಾರೆ.
[2] ಮೇರು ಸಾವರ್ಣಿಯ ಇನ್ನೊಂದು ಹೆಸರು ರೋಹಿತ.