ಲೋಮಹರ್ಷಣ

ಲೋಮಹರ್ಷಣ ಲೋಮಹರ್ಷಣನು ಮಹರ್ಷಿ ವ್ಯಾಸನ ಶಿಷ್ಯರಲ್ಲಿ ಒಬ್ಬನು. ಸೂತನಾದ ಇವನು ವ್ಯಾಸನಿಂದ ಅನೇಕ ಪುರಾಣಗಳನ್ನು ಉಪದೇಶವಾಗಿ ಪಡೆದುಕೊಂಡನು. ಅವನು ಪುರಾಣಗಳನ್ನು ಹೇಳುತ್ತಿದ್ದಾಗ ಕೇಳುವವರ ಮೈನವಿರೇಳುತ್ತಿದ್ದುದರಿಂದ ಅವನಿಗೆ ಲೋಮಹರ್ಷಣನೆಂಬ ಹೆಸರು ಬಂದಿತು. ಲೋಮಹರ್ಷಣನ ಮಗ ಉಗ್ರಶ್ರವನು ವ್ಯಾಸನ ಮಹಾಭಾರತ ಕಥೆಯನ್ನು ಶೌನಕಾದಿ ಮುನಿಗಳಿಗೆ ನೈಮಿಷಾರಣ್ಯದಲ್ಲಿ ಹೇಳಿದನು.

Continue reading

ಶೌನಕ

ಶೌನಕ ಶೌನಕನು ಭಾರ್ಗವ ವಂಶದ ಓರ್ವ ಋಷಿಯು.  ಮಹರ್ಷಿ ಭೃಗುವು ಪುಲೋಮೆಯಲ್ಲಿ ಚ್ಯವನನನ್ನು ಪಡೆದನು. ಭಾರ್ಗವ ಚ್ಯವನನು ಸುಕನ್ಯೆಯಿಂದ ಪ್ರಮತಿ ಎನ್ನುವ ಸುತನನ್ನು ಪಡೆದನು. ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು. ಶುನಕನ ಮಗನೇ ಶೌನಕ. ಶೌನಕನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದಾಗ ಸೂತ ಪೌರಾಣಿಕ ಉಗ್ರಶ್ರವನು ವ್ಯಾಸನ ಮಹಾಭಾರತವನ್ನು ಹೇಳಿದನು.  

Continue reading

ಗಣಪತಿ

ಗಣಪತಿ ಮಹಾಭಾರತದಲ್ಲಿ ಶ್ರೀ ಮಹಾಗಣಪತಿಯ ನೇರ ಪಾತ್ರವಿಲ್ಲದಿದ್ದರೂ, ಮಹಾಭಾರತದ ಕರ್ತೃ ವ್ಯಾಸನಿಗೆ ಕೃತಿಯನ್ನು ಬರೆಯಲು ಗಣಪತಿ ಹೇರಂಬನು ಸಹಾಯಮಾಡಿದನು ಎನ್ನುವ ಪ್ರತೀತಿಯಿದೆ. ಈ ಪ್ರಕರಣವು ಪುಣೆಯ ಮಹಾಭಾರತದ ವಿಶೇಷ ಸಂಪುಟದಲ್ಲಿ ಸೇರಿರದದೇ ಇದ್ದರೂ, ಹಲವಾರು ದಕ್ಷಿಣ ಪ್ರತಿಗಳಲ್ಲಿ ಇದು ಕಂಡುಬರುತ್ತದೆ. 

Continue reading