ಸಂಜಯ

ಸಂಜಯ ಧೃತರಾಷ್ಟ್ರನ ಸೂತ ಮತ್ತು ಸ್ನೇಹಿತ; ಆಗಾಗ ಧೃತರಾಷ್ಟ್ರನಿಗೆ ಸಲಹೆಯನ್ನು ನೀಡಿದವ; ಧೃತರಾಷ್ಟ್ರನ ಅಪ್ಪಣೆಯಂತೆ ಕೌರವರ ರಾಯಭಾರಿಯಾಗಿ ಪಾಂಡವರಲ್ಲಿಗೆ ಹೋದವನು; ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದು, ಮಹಾಭಾರತ ಯುದ್ಧದಲ್ಲಿ ಭಾಗವಹಿಸಿ, ಧೃತರಾಷ್ಟ್ರನಿಗೆ ಹತ್ತನೇ ದಿನದ ರಾತ್ರಿ, ಹದಿನೈದನೇ ದಿನದ ರಾತ್ರಿ, ಹದಿನೇಳನೇ ದಿನದ ರಾತ್ರಿ ಮತ್ತು ಹತ್ತೊಂಭತ್ತನೇ ದಿನದ ಬೆಳಿಗ್ಗೆ ಆ ಹದಿನೆಂಟು ದಿನಗಳ ಮಹಾಭಾರತ ಯುದ್ಧವನ್ನು ನಾಲ್ಕು ಭಾಗಗಳಲ್ಲಿ ವರ್ಣಿಸಿದವನು; ಧೃತರಾಷ್ಟ್ರನನ್ನು ಅನುಸರಿಸಿ ವನಕ್ಕೆ ಹೋಗಿ, ಧೃತರಾಷ್ಟ್ರ-ಗಾಂಧಾರಿ-ಕುಂತಿಯರು ಕಾಡ್ಗಿಚ್ಚಿನಲ್ಲಿ…

Continue reading

ಸೃಷ್ಟಿ

ಸೃಷ್ಟಿ ಸೃಷ್ಟಿಯ ಬಗೆಗಳು ಮತ್ತು ಅವುಗಳ ವರ್ಣನೆ ಮ್ಬಹ್ರಾಭಾರತದಲ್ಲಿ ಬಂದಿರುವ ಸೃಷ್ಟಿಯ ವರ್ಣನೆ ಮತ್ತು ಇತರ ಪುರಾಣಗಳ ಪ್ರಕಾರ ಸೃಷ್ಟಿಯ ವರ್ಣನೆ

Continue reading

ಶುಕ

ಶುಕ ಶುಕನು ವ್ಯಾಸನ ಮಗ. ಮಹಾಭಾರತದ ರಚನೆಯಾದ ನಂತರ ಮೊಟ್ಟಮೊದಲನೆಯದಾಗಿ ವ್ಯಾಸನು ಅದನ್ನು ತನ್ನ ಮಗ ಶುಕನಿಗೆ ಉಪದೇಶಿಸಿದನು. ಶುಕನು ಮಹಾಭಾರತ ಕಥೆಯನ್ನು ಯಕ್ಷ-ಗಂಧರ್ವ-ರಾಕ್ಷಸರಿಗೆ ಹೇಳಿದನು.  

Continue reading

ಪಾಂಡು

ಪಾಂಡು ಪಾಂಡುವು ವಿಚಿತ್ರವೀರ್ಯನ ಪತ್ನಿ ಅಂಬಾಲಿಕೆಯಲ್ಲಿ ವ್ಯಾಸನಿಂದ ಜನಿಸಿದನು. ಇವನ ಪತ್ನಿಯರು ಕುಂತಿ ಮತ್ತು ಮಾದ್ರಿ. ಋಷಿಯ ಶಾಪದಿಂದ ಇವನಿಗೆ ಮಕ್ಕಳಾಗದೇ ಇರಲು ಇವನು ಕುಂತಿಯಲ್ಲಿ ಧರ್ಮ, ವಾಯು, ಮತ್ತು ಇಂದ್ರರಿಂದ ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರೆಂಬ ಮೂರು ಮಕ್ಕಳನ್ನೂ ಮಾದ್ರಿಯಲ್ಲಿ ಅಶ್ವಿನೀ ದೇವತೆಗಳಿಂದ ನಕುಲ-ಸಹದೇವರೆಂಬ ಇಬ್ಬರು ಮಕ್ಕಳನ್ನೂ ಪಡೆದನು. ಮಕ್ಕಳು ಚಿಕ್ಕವರಾಗಿರುವಾಗಲೇ ಪಾಂಡುವು ಮರಣ ಹೊಂದಿದನು.

Continue reading

ಧೃತರಾಷ್ಟ್ರ

ಧೃತರಾಷ್ಟ್ರ ಮಹಾಭಾರತದ ಮುಖ್ಯ ಪಾತ್ರಗಳಲ್ಲಿ ಒಬ್ಬನಾದ ಧೃತರಾಷ್ಟ್ರನು ವಿಚಿತ್ರವೀರ್ಯನ ಪತ್ನಿ ಅಂಬಿಕೆಯಲ್ಲಿ ವ್ಯಾಸನಿಂದ ಜನಿಸಿದವನು. ಇವನ ಪತ್ನಿ ಗಾಂಧಾರದೇಶದ ಸುಬಲನ ಪುತ್ರಿ ಗಾಂಧಾರೀ. ಗಾಂಧಾರಿಯಲ್ಲಿ ಇವನು ದುರ್ಯೋಧನ, ದುಃಶಾಸನರೇ ಮೊದಲಾದ ನೂರು ಗಂಡುಮಕ್ಕಳನ್ನೂ ದುಃಶಲೆಯೆನ್ನುವ ಓರ್ವ ಮಗಳನ್ನು ಪಡೆದನು. ಗಾಂಧಾರಿಯು ಗರ್ಭಿಣಿಯಾಗಿದ್ದಾಗ ಧೃತರಾಷ್ಟ್ರನು ವೈಶ್ಯೆಯೋರ್ವಳಲ್ಲಿ ಯುಯುತ್ಸು ಎಂಬ ಮಗನನ್ನೂ ಪಡೆದನು. My steps in understanding a character in Mahabharata Translate Mahabharata from the Sanskrit texts…

Continue reading

ವಿಚಿತ್ರವೀರ್ಯ

ವಿಚಿತ್ರವೀರ್ಯ ವಿಚಿತ್ರವೀರ್ಯನು ಕುರು ರಾಜ ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗನು. ಇವನ ಅಣ್ಣ ಚಿತ್ರಾಂಗದ. ಕಾಶೀರಾಜನ ಪುತ್ರಿಯರಾದ ಅಂಬಿಕಾ ಮತ್ತು ಅಂಬಾಲಿಕೆಯರನ್ನು ಮದುವೆಯಾದನು. ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಪಡೆಯದೆಯೇ ಯಕ್ಷ್ಮ ರೋಗದಿಂದ ಮೃತನಾದನು. ಧೃತರಾಷ್ಟ್ರ ಮತ್ತು ಪಾಂಡು ಇವರು ವಿಚಿತ್ರವೀರ್ಯನ ವಿಧವೆ ಪತ್ನಿಯರಲ್ಲಿ ವ್ಯಾಸನು ಹುಟ್ಟಿಸಿದ ಮಕ್ಕಳು.

Continue reading